Asia cup 2022 | ಟಿ 20 ವಿಶ್ವಕಪ್‌ಗೂ ಮೊದಲು ಮತ್ತೊಂದು ಹೈವೋಲ್ಟೇಜ್‌ ಪಂದ್ಯ, ಆ.28ಕ್ಕೆ ಭಾರತ vs ಪಾಕಿಸ್ತಾನ ಮ್ಯಾಚ್ - Vistara News

ಕ್ರಿಕೆಟ್

Asia cup 2022 | ಟಿ 20 ವಿಶ್ವಕಪ್‌ಗೂ ಮೊದಲು ಮತ್ತೊಂದು ಹೈವೋಲ್ಟೇಜ್‌ ಪಂದ್ಯ, ಆ.28ಕ್ಕೆ ಭಾರತ vs ಪಾಕಿಸ್ತಾನ ಮ್ಯಾಚ್

ಏಷ್ಯಾ ಕಪ್‌ ಪಂದ್ಯಾವಳಿ ಆ.27ರಿಂದ ಸೆ.11ವರೆಗೆ ನಡೆಯಲಿದ್ದು, ಪಂದ್ಯಾವಳಿಯ ಎರಡನೇ ದಿನ ಗ್ರೂಪ್‌ ಎ ವಿಭಾಗದಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.

VISTARANEWS.COM


on

Asia cup 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಏಷ್ಯಾಕಪ್‌-2022 ಪಂದ್ಯಾವಳಿಯ (Asia cup 2022) ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ಟಿ20 ವಿಶ್ವಕಪ್‌ಗೂ ಮೊದಲೇ ಮತ್ತೊಂದು ಕುತೂಹಲಕಾರಿ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದೆ. ಏಷ್ಯಾಕಪ್‌ ಭಾಗವಾಗಿ ಎರಡು ತಂಡಗಳ ನಡುವೆ ದುಬೈ ವೇದಿಕೆಯಾಗಿ ಆ.28ರಂದು ಹೈವೋಲ್ಟೇಜ್‌ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿದೆ.

ಏಷ್ಯಾ ಕಪ್‌ ಪಂದ್ಯಾವಳಿ ಆ.27ರಿಂದ ಸೆ.11ವರೆಗೆ ನಡೆಯಲಿದ್ದು, ಪಂದ್ಯಾವಳಿಯ ಎರಡನೇ ದಿನ(ಆ.28) ಗ್ರೂಪ್‌ ಎ ವಿಭಾಗದಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಕಳೆದ ವರ್ಷ ಟಿ 20 ವಿಶ್ವ ಕಪ್‌ನಲ್ಲಿ ಪಾಕ್‌ ಎದುರಿನ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಈ ವರ್ಷ ಏಷ್ಯಾಕಪ್‌ ಅನ್ನು ಟ20 ಮಾದರಿಯಲ್ಲಿ ನಡೆಸಲು ಏಷಿಯನ್‌ ಕ್ರಿಕೆಟ್‌ ಕೌನ್ಸಿಲ್‌ ನಿರ್ಧರಿಸಿದೆ. ಮೊದಲಿಗೆ ಶ್ರೀಲಂಕಾ ವೇದಿಕೆಯಾಗಿ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಸಂಕ್ಷೋಭೆ ಹಿನ್ನೆಲೆಯಲ್ಲಿ ಏಷ್ಯಾಕಪ್‌ ವೇದಿಕೆಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ದುಬೈ, ಶಾರ್ಜಾ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಈ ಬಾರಿ ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಸೇರಿ ಏಷ್ಯಾ ಖಂಡದ ಮತ್ತೊಂದು ದೇಶ ಟೂರ್ನಿಯಲ್ಲಿ ಭಾಗವಹಿಸಲಿದೆ. 6ನೇ ತಂಡವನ್ನು ಕ್ವಾಲಿಫೈಯರ್‌ ಪಂದ್ಯದ ಮೂಲಕ ನಿರ್ಧರಿಸಲಾಗುತ್ತದೆ. ಆ.20ರಿಂದ ಕ್ವಾಲಿಫೈಯರ್‌ ಪಂದ್ಯಗಳು ನಡೆಯಲಿವೆ.

ಒಟ್ಟು ಆರು ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದು, ಗ್ರೂಪ್‌ ಎ ನಲ್ಲಿ ಭಾರತ್‌, ಪಾಕಿಸ್ತಾನ, ಕ್ವಾಲಿಫೈಯರ್‌ ಪಂದ್ಯದ ವಿಜೇತ ತಂಡ ಇವೆ. ಗ್ರೂಪ್‌ ಬಿ ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ತಂಡಗಳಿವೆ. ಮೊದಲು ಭಾರತ ಗ್ರೂಪ್‌ ಎ ವಿಭಾಗದ ಪಾಕಿಸ್ತಾನ, ಕ್ವಾಲಿಫೈಯರ್‌ ತಂಡದೊಂದಿಗೆ ಸೆಣಸಲಿದೆ. ಏಷ್ಯಾಕಪ್-2018 ನಲ್ಲಿ ಭಾರತ ಚಾಂಪಿಯನ್‌ ಆಗಿ ಮಿಂಚಿತ್ತು.

ಇನ್ನು ಇದೇ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್‌ 23ರಂದು ಮೆಲ್ಬೋರ್ನ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.

ಇದನ್ನೂ ಓದಿ | ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಗೆ ಕೋಟಿ ಕೋಟಿ ಲಾಭ ತಂದುಕೊಟ್ಟ ಭಾರತ ವಿಕೆಟ್‌ಕೀಪರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Team India : ಮುಂಬೈನಲ್ಲಿ ನಡೆದ ಭಾರತ ತಂಡದ ವಿಜಯೋತ್ಸವ ನೋಡಿದರೆ ರೋಮಾಂಚನ ಖಾತರಿ

Team India : ಸಮಾರಂಭದ ನಂತರ, ಆಟಗಾರರು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಸಹಿ ಮಾಡಿದ ಚೆಂಡುಗಳನ್ನು ವಿತರಿಸಿದರು ಮತ್ತು ಸೆಲ್ಫಿಗಳನ್ನು ತೆಗೆದುಕೊಂಡರು. ಇದು ಕ್ರಿಕೆಟ್​ನ ಅಪ್ಪಟ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡಿತು. ಮರೀನ್ ಡ್ರೈವ್​​ನಲ್ಲಿ ಪ್ರಾರಂಭವಾದ 20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.

VISTARANEWS.COM


on

Team India
Koo

ಬೆಂಗಳೂರು: ಟಿ 20 ವಿಶ್ವಕಪ್ 2024 ರಲ್ಲಿ (Team India) ಟೀಮ್ ಇಂಡಿಯಾದ ಟ್ರೋಫಿ ಗೆದ್ದ ಸಂಭ್ರಮವನ್ನು ಆಚರಿಸಲು ಕ್ರಿಕೆಟ್ ಅಭಿಮಾನಿಗಳು ಮುಂಬೈನಲ್ಲಿ ಜಮಾಯಿಸಿದ್ದರು. ಅಲ್ಲಿನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣವು ಗದ್ದಲ ಮತ್ತು ಉತ್ಸಾಹದಿಂದ ತುಂಬಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 125 ಕೋಟಿ ರೂ.ಗಳ ಬಹುಮಾನವು ದೊರೆಯಿತು. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರು ವೇದಿಕೆಯಲ್ಲಿದ್ದು, ಅದ್ಯಮ ಉತ್ಸಹದಲ್ಲಿದ್ದ ಪ್ರೇಕ್ಷಕರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಸಮಾರಂಭದ ನಂತರ, ಆಟಗಾರರು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಸಹಿ ಮಾಡಿದ ಚೆಂಡುಗಳನ್ನು ವಿತರಿಸಿದರು ಮತ್ತು ಸೆಲ್ಫಿಗಳನ್ನು ತೆಗೆದುಕೊಂಡರು. ಇದು ಕ್ರಿಕೆಟ್​ನ ಅಪ್ಪಟ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡಿತು. ಮರೀನ್ ಡ್ರೈವ್​​ನಲ್ಲಿ ಪ್ರಾರಂಭವಾದ 20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಅಭಿಮಾನಿಗಳ ಬೃಹತ್​​ ಸಂಖ್ಯೆಯು ಯಶಸ್ಸನ್ನು ಹೆಚ್ಚಿಸಿತು. ಅಪಾರ ಜನಸಂದಣಿಯಿಂದಾಗಿ ಟೀಮ್ ಇಂಡಿಯಾ ಬಸ್ ಬೀದಿಗಳಲ್ಲಿ ಸಂಚರಿಸಲು ಕಷ್ಟವಾಯಿತು. ಇದು ಭಾವನಾತ್ಮಕ ಮತ್ತು ಸಂಭ್ರಮದ ವಾತಾವರಣ ಉಂಟು ಮಾಡಿತು.

ಇದನ್ನೂ ಓದಿ: India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

“ಮುಂಬೈ ಎಂದಿಗೂ ನಿರಾಶೆ ಮಾಡುವುದಿಲ್ಲ.. ನಮಗೆ ಆದರದ ಸ್ವಾಗತ ದೊರೆಯಿತು. ತಂಡದ ಪರವಾಗಿ, ನಾವು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಾನು ತುಂಬಾ ಸಂತೋಷ ಮತ್ತು ನಿರಾಳನಾಗಿದ್ದೇನೆ ಎದು ರೋಹಿತ್​ ಶರ್ಮಾ ಹೇಳಿದರು. ಇದೇ ವೇಳೆ ಅವರು ಟಿ 20 ವಿಶ್ವಕಪ್​​ನ ಅಂತಿಮ ಓವರ್​ನಲ್ಲಿ ನಿರ್ಣಾಯಕ ಪ್ರದರ್ಶನಕ್ಕಾಗಿ ಭಾರತೀಯ ನಾಯಕ ತಮ್ಮ ಉಪನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಶ್ಲಾಘಿಸಿದರು. “ಕೊನೆಯ ಓವರ್ ಎಸೆದು ತಂಡವನ್ನು ಕಾಪಾಡಿದ ಹಾರ್ದಿಕ್ಗೆ ಹ್ಯಾಟ್ಸ್ ಆಫ್. ನಿಮಗೆ ಎಷ್ಟು ರನ್​ಗಳ ಅಗತ್ಯವಿದ್ದರೂ, ಆ ಓವರ್ ಎಸೆಯಲು ಯಾವಾಗಲೂ ತುಂಬಾ ಒತ್ತಡವಿರುತ್ತದೆ. ಅವರಿಗೆ ಹ್ಯಾಟ್ಸ್ ಆಫ್” ಎಂದು ನಾಯಕ ಹೇಳಿದರು. ಇದೇ ವೇಳೆ ಹಾರ್ದಿಕ್! ಹಾರ್ದಿಕ್!” ಜನಸಮೂಹದಿಂದ. ಪಾಂಡ್ಯ ಮುಗುಳ್ನಗೆ ಮತ್ತು ಅಲೆಯೊಂದಿಗೆ ಚಪ್ಪಾಳೆಯನ್ನು ಒಪ್ಪಿಕೊಂಡರು. ಭಾವಪರವಶರಾದ ಹಾರ್ದಿಕ್ ಎದ್ದು ನಿಂತು ಅಭಿಮಾನಿಗಳನ್ನು ಸ್ವಾಗತಿಸಿದರು. ಇದು ವಾಂಖೆಡೆಯಲ್ಲಿ ಭಾವನಾತ್ಮಕ ಮತ್ತು ಸಂಭ್ರಮದ ವಾತಾವರಣವನ್ನು ಹೆಚ್ಚಿಸಿತು.

ವಿರಾಟ್ ಕೊಹ್ಲಿ ಕೂಡ ಪ್ರೇಕ್ಷಕರಿಗೆ ಹಾಗೂ ಸಹ ಆಟಗಾರರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ. “ರೋಹಿತ್ ಮತ್ತು ನಾನು ನಾವು ಇದನ್ನು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೇವೆ. ನಾವು ಯಾವಾಗಲೂ ವಿಶ್ವಕಪ್ ಗೆಲ್ಲಲು ಬಯಸಿದ್ದೆವು. ಟ್ರೋಫಿಯನ್ನು ವಾಂಖೆಡೆಗೆ ಮರಳಿ ತರುವುದು ಬಹಳ ವಿಶೇಷವಾದ ಭಾವನೆ. ನಾವು ಕಳೆದ 15 ವರ್ಷಗಳಿಂದ ಆಡುತ್ತಿದ್ದೇವೆ ಮತ್ತು ರೋಹಿತ್ ತುಂಬಾ ಭಾವುಕನಾಗಿರುವುದನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ಅವನು ಅಳುತ್ತಿದ್ದನು, ನಾನು ಅಳುತ್ತಿದ್ದೆ, ನಮ್ಮಿಬ್ಬರ ನಡುವಿನ ಆ ಅಪ್ಪುಗೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ಶ್ರೇಷ್ಠ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಶ್ಲಾಘಿಸಿದ ಕೊಹ್ಲಿ, “ಜಸ್ಪ್ರೀತ್ ಬುಮ್ರಾ ಇದೀಗ ವಿಶ್ವದ ಎಂಟನೇ ಅದ್ಭುತ ಎಂದು ಹೇಳಿದರು. ಮುಂಬೈನ ಪ್ರೇಕ್ಷಕರು ಬೌಲರ್​​ನ ಅಸಾಧಾರಣ ಕೊಡುಗೆಗಳನ್ನು ಸಂಭ್ರಮಿಸಿದರು.

ವಾಂಖೆಡೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅಪ್ರತಿಮ ಜೋಡಿ ಕೊಹ್ಲಿ ಮತ್ತು ರೋಹಿತ್ ಮೈದಾನದಲ್ಲಿ ನೃತ್ಯ ಮಾಡಿದರು. ಇದು ಅಭಿಮಾನಿಗಳ ಸಂತೋಷಕ್ಕೆ ಕಾರಣವಾಯಿತು. ವಿಜಯೋತ್ಸವದ ಮೆರವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಜಸ್ಪ್ರೀತ್ ಬುಮ್ರಾ, “ನಾನು ಇಂದು ನೋಡಿದ್ದನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಹೇಳಿದರು.

Continue Reading

ಪ್ರಮುಖ ಸುದ್ದಿ

India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

India’s open-bus parade: ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್​ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು. ಆ ಬಳಿಕ ಐತಿಹಾಸಿಕ ವಾಖೆಂಡೆ ಸ್ಟೇಡಿಯಮ್​ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

VISTARANEWS.COM


on

India's open-bus parade
Koo

ಮುಂಬೈ: ಟಿ20 ವಿಶ್ವ ಕಪ್​ ನಲ್ಲಿ ಚಾಂಪಿಯನ್​ ಪಟ್ಟ ಪಡೆದುಕೊಂಡ ಭಾರತ ಕ್ರಿಕೆಟ್ ತಂಡಕ್ಕೆ (Team India) ಮುಂಬಯಿನಲ್ಲಿ ಬಿಸಿಸಿಐ ಅದ್ಧೂರಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ತಂಡದ ಆಟಗಾರರನ್ನು ತುಂಬಿಕೊಂಡಿದ್ದ ತೆರೆದ ಬಸ್​ (India’s open-bus parade) ಸಂಜೆ 7 ಗಂಟೆಗೆ ಮರೀನ್ ಡ್ರೈವ್​ನಿಂದ ಆರಂಭಗೊಂಡು ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಸಾಗಿತು.

ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಐತಿಹಾಸಿಕ ವಿಜಯವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್​ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು. ಆ ಬಳಿಕ ಐತಿಹಾಸಿಕ ವಾಖೆಂಡೆ ಸ್ಟೇಡಿಯಮ್​ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ನಾಯಕ ರೋಹಿತ್ ಶರ್ಮಾ. ವಿರಾಟ್​ ಕೊಹ್ಲಿ ಮುಂದಾಳತ್ವದಲ್ಲಿ ತಂಡದ ಆಟಗಾರರು ಕುಣಿದು ಕುಪ್ಪಳಿಸಿದರು. ಬಳಿಕ ಅವರು ತಮ್ಮ ತಂಡದ ಆಟಗಾರರು ಹಾಗೂ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಸಂದರ್ಭದ ಚಿತ್ರಗಳು ಈ ಕೆಳಗಿವೆ.

ಇದನ್ನೂ ಓದಿ: Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Continue Reading

ಕ್ರಿಕೆಟ್

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Rohit Sharma : ದ್ರಾವಿಡ್ ಮತ್ತು ಕೊಹ್ಲಿ ತಮ್ಮ ಧ್ವನಿಯಲ್ಲಿ ಸಂಭ್ರಮಿಸುತ್ತಿದ್ದರು, ಅಭಿಮಾನಿಗಳು ಭಾರತದ ತಂಡದ ಬಸ್ ಸುತ್ತಲೂ ಜಮಾಯಿಸಿದ್ದರು. ಭಾರತವು ಗುರುವಾರವೇ ಸ್ವದೇಶಕ್ಕೆ ಮರಳಿತ್ತು. ನವದೆಹಲಿಯಲ್ಲಿ ಇಳಿದು ನಂತರ ಮುಂಬೈಗೆ ಹಾರಿತು. ಭಾರತವು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು ಮತ್ತು ನಂತರ ಅವರ ಆಚರಣೆಗಳಿಗಾಗಿ ಮುಂಬೈಗೆ ಹಾರಿತು.

VISTARANEWS.COM


on

Rohit Sharma
Koo

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್​ ವಿಜಯೋತ್ಸವ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ‘ಚಕ್ ದೇ ಇಂಡಿಯಾ’ ಹಾಡಿಗೆ ನೃತ್ಯ ಮಾಡಿದ್ದಾರೆ. ಮರೀನ್ ಡ್ರೈವ್​​ನಲ್ಲಿ ಓಪನ್-ಟಾಪ್ ಬಸ್ ವಿಜಯ ಮೆರವಣಿಗೆಯ ನಂತರ ಭಾರತ ತಂಡವು ರಾತ್ರಿ 9 ಗಂಟೆ ಸುಮಾರಿಗೆ ವಾಂಖೆಡೆ ಕ್ರೀಡಾಂಗಣ ತಲುಪಿತು. ವಾಂಖೆಡೆ ಕ್ರೀಡಾಂಗಣವನ್ನು ತಲುಪಿದ ನಂತರ, ಶರ್ಮಾ ವಿರಾಟ್ ಕೊಹ್ಲಿಯನ್ನು ತಮ್ಮೊಂದಿಗೆ ಸ್ಟ್ಯಾಂಡ್​ ಕಡೆಗೆ ಎಳೆದುಕೊಂಡು ಹೋದರು.

ದೀರ್ಘ ದಿನದ ನಂತರ ಭಾರತ ಗುರುವಾರ ಸಂಜೆ ವಾಂಖೆಡೆ ಕ್ರೀಡಾಂಗಣ ತಲುಪಿತು. ಭಾರತ ತಂಡದ ಆಟಗಾರರು ಮುಂಜಾನೆ ನವದೆಹಲಿಗೆ ಬಂದಿಳಿದರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಮೋದಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡರು. ಔಪಚಾರಿಕತೆಗಳ ನಂತರ, ಭಾರತೀಯ ತಂಡವು ವಿಸ್ತಾರಾ ಏರ್​ಲೈನ್ಸ್​ ವಿಮಾನದಲ್ಲಿ ಮುಂಬೈಗೆ. ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಾಟರ್ ಸೆಲ್ಯೂಟ್ ನೊಂದಿಗೆ ಆಟಗಾರರನ್ನು ಸ್ವಾಗತಿಸಲಾಯಿತು.

ಇದನ್ನೂ ಓದಿ: India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

ಮುಂಬೈನಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾದ ಕಾರಣ ತೆರೆದ ಬಸ್​​ನ ಮೆರವಣಿಗೆ ವಿಳಂಬವಾಯಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸೂರ್ಯಕುಮಾರ್ ಯಾದವ್ ಬಸ್​ನಲ್ಲಿ ಸಾಗುತ್ತಾ ಸಂಭ್ರಮಿಸಿದರು.

ದ್ರಾವಿಡ್ ಮತ್ತು ಕೊಹ್ಲಿ ತಮ್ಮ ಧ್ವನಿಯಲ್ಲಿ ಸಂಭ್ರಮಿಸುತ್ತಿದ್ದರು, ಅಭಿಮಾನಿಗಳು ಭಾರತದ ತಂಡದ ಬಸ್ ಸುತ್ತಲೂ ಜಮಾಯಿಸಿದ್ದರು. ಭಾರತವು ಗುರುವಾರವೇ ಸ್ವದೇಶಕ್ಕೆ ಮರಳಿತ್ತು. ನವದೆಹಲಿಯಲ್ಲಿ ಇಳಿದು ನಂತರ ಮುಂಬೈಗೆ ಹಾರಿತು. ಭಾರತವು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು ಮತ್ತು ನಂತರ ಅವರ ಆಚರಣೆಗಳಿಗಾಗಿ ಮುಂಬೈಗೆ ಹಾರಿತು.

ಭಾರತವು ಸಂಜೆ 7 ಗಂಟೆಗೆ ತಮ್ಮ ಸಮಾರಂಭವನ್ನು ಪ್ರಾರಂಭಿಸುವ ನಿರೀಕ್ಷೆಯಿತ್ತು, ಆದರೆ ತಂಡವನ್ನು ಸ್ವಾಗತಿಸಲು ಬಂದ ಅಭಿಮಾನಿಗಳ ಸಂಖ್ಯೆಯಿಂದಾಗಿ ತಂಡವು ಮರೀನ್ ಡ್ರೈವ್ ಅನ್ನು ದಾಟಲು ಬಹಳ ಸಮಯ ತೆಗೆದುಕೊಂಡಿತು

Continue Reading

ಪ್ರಮುಖ ಸುದ್ದಿ

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

India’s open-bus parade: ಭಾರತೀಯ ಆಟಗಾರರು ಅಭಿಮಾನಿಗಳೊಂದಿಗೆ ಗೆಲುವು ಆಚರಿಸಿದರು. ಆಟಗಾರರನ್ನು ಹೊತ್ತ ಓಪನ್-ಟಾಪ್ ಬಸ್ ಅಭಿಮಾನಿಗಳ ಸಮುದ್ರದ ಮೂಲಕ ಹಾದುಹೋಗುತ್ತಿದ್ದಂತೆ ಮರೀನ್ ಡ್ರೈವ್​ನಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯ ಸಮಯದಲ್ಲಿ, ಅನಿರೀಕ್ಷಿತ ಘಟನೆ ನಡೆಯಿತು.

VISTARANEWS.COM


on

India's open-bus parade
Koo

ಬೆಂಗಳೂರು: ಮಳೆಯಿಂದ ಆದ ಅಡಚಣೆ ಬಳಿಕ ಆರಂಭಗೊಂಡ ಟೀಮ್ ಇಂಡಿಯಾದ ವಿಶ್ವ ಕಪ್ ​ ವಿಜಯೋತ್ಸವ ಮುಂಬೈನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್ ತಲುಪಿತು. ಮೆರವಣಿಗೆಯು (India’s open-bus parade) ಸಂಜೆ ಮರೀನ್ ಡ್ರೈವ್​ನಿಂದ ಆರಂಭಗೊಂಡು ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಸಾಗಿತು. ಮೆರವಣಿಗೆಯನ್ನು ಸಂಜೆ 5 ಗಂಟೆಯಿಂದ ಪ್ರಾರಂಭಿಸಲು ಯೋಜಿಸಲಾಗಿದ್ದರೂ, ಎರಡು ಗಂಟೆಗಳಿಗಿಂತ ಹೆಚ್ಚು ವಿಳಂಬದ ನಂತರ ಬಸ್​ ಹೊರಟಿತು.

ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಐತಿಹಾಸಿಕ ವಿಜಯವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಆದಾಗ್ಯೂ ದೀರ್ಘ ವಿಳಂಬ ಅವರನ್ನು ನಿರಾಶೆಗೊಳಿಸಲಿಲ್ಲ. ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್​ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು.

ಸಂಜೆ 7:30 ರ ಸುಮಾರಿಗೆ ವಿಜಯೋತ್ಸವ ಮೆರವಣಿಗೆ ಪ್ರಾರಂಭವಾಯಿತು. ಭಾರತೀಯ ಆಟಗಾರರು ಅಭಿಮಾನಿಗಳೊಂದಿಗೆ ಗೆಲುವು ಆಚರಿಸಿದರು. ಆಟಗಾರರನ್ನು ಹೊತ್ತ ಓಪನ್-ಟಾಪ್ ಬಸ್ ಅಭಿಮಾನಿಗಳ ಸಮುದ್ರದ ಮೂಲಕ ಹಾದುಹೋಗುತ್ತಿದ್ದಂತೆ ಮರೀನ್ ಡ್ರೈವ್​ನಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯ ಸಮಯದಲ್ಲಿ, ಅನಿರೀಕ್ಷಿತ ಘಟನೆ ನಡೆಯಿತು.

ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಹೀರೋಗಳ ನೋಡಲು ತೀವ್ರವಾಗಿ ಪ್ರಯತ್ನಿಸುತ್ತಿರುವಾಗ, ಅಭಿಮಾನಿಯೊಬ್ಬರು ಮರ ಏರಿ ಆಟಗಾರರ ಹತ್ತಿರಕ್ಕೆ ಬರಲು ಯತ್ನಿಸಿದರು. ಇದು ನಿಜವಾಗಿಯೂ ಭದ್ರತೆಯ ವೈಫಲ್ಯವಾಗಿದೆ. ಆಟಗಾರರಿಗೆ ಏನಾದರೂ ಸಮಸ್ಯೆ ಆಗಿದ್ದರೆ ಮೆರವಣಿಗೆಯ ಖುಷಿ ಹಾಳಾಗುತ್ತಿತ್ತು.

ಹಲವು ಕಡೆ ಮರ ಹತ್ತಿದ ಅಭಿಮಾನಿಗಳು

ಬಸ್ ಮೆರವಣಿಗೆ ಮಾರ್ಗದ ಮೂಲಕ ಹಾದುಹೋಗುತ್ತಿದ್ದಂತೆ, ಅಭಿಮಾನಿಯೊಬ್ಬ ಕೊಂಬೆಯ ಮೇಲೆ ಮಲಗಿ ತನ್ನ ಫೋನ್​ನಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದನ್ನು ಕಂಡು ಬಂದಿದೆ. ಇದು ದೊಡ್ಡ ಭದ್ರತಾ ಲೋಪವಾಗಿತ್ತು ಆದರೆ ಅದೃಷ್ಟವಶಾತ್, ಅದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಏತನ್ಮಧ್ಯೆ, ಮೆರವಣಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಅಲ್ಲಿ ಬಿಸಿಸಿಐ ಅಭಿಮಾನಿಗಳನ್ನು ಸನ್ಮಾನಿಸಿತು. ಈ ಸಂದರ್ಭದಲ್ಲಿ ಬಿಸಿಸಿಐ 125 ಕೋಟಿ ರೂ.ಗಳ ಬಹುಮಾನ ಮೊತ್ತವನ್ನು ಭಾರತ ತಂಡಕ್ಕೆ ಹಸ್ತಾಂತರಿಸಲಿದೆ. ಇದಕ್ಕೂ ಮುನ್ನ ಭಾರತ ತಂಡ ನವದೆಹಲಿಗೆ ಬಂದಿಳಿದಿದ್ದು, ಅಭಿಮಾನಿಗಳಿಂದ ಭವ್ಯ ಸ್ವಾಗತ ಪಡೆಯಿತು.

ಇದನ್ನೂ ಓದಿ: Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮುಂಬೈಗೆ ತೆರಳುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಈ ಆಚರಣೆಯು ಭಾರತೀಯ ತಂಡಕ್ಕೆ ಸ್ಮರಣೀಯವಾಗಲಿದೆ.

ಕೇವಲ ಒಂದು ತಿಂಗಳ ಹಿಂದೆ, ಭಾರತವು ಟಿ 20 ವಿಶ್ವಕಪ್​​ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಜೂನ್ 5 ರಂದು, ಅವರು ತಮ್ಮ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿದ್ದರು ಫೈನಲ್​​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸಿತು, ಭಾರತವು ಎರಡು ಬಾರಿ ಟಿ 20 ವಿಶ್ವಕಪ್ ಗೆದ್ದ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಟ್ಟಾರೆಯಾಗಿ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಂತರ ಪಂದ್ಯಾವಳಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ಮೂರನೇ ತಂಡವಾಯಿತು.

Continue Reading
Advertisement
Team India
ಪ್ರಮುಖ ಸುದ್ದಿ1 hour ago

Team India : ಮುಂಬೈನಲ್ಲಿ ನಡೆದ ಭಾರತ ತಂಡದ ವಿಜಯೋತ್ಸವ ನೋಡಿದರೆ ರೋಮಾಂಚನ ಖಾತರಿ

Viral Video
ದೇಶ1 hour ago

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

A lorry collided with a bike Two persons died on the spot
ಕರ್ನಾಟಕ1 hour ago

Road Accident: ಬೈಕ್‌ಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು!

Drowned In Water A woman died while crossing the kalu sanka
ಕರ್ನಾಟಕ1 hour ago

Drowned In Water: ಕಾಲು ಸಂಕ ದಾಟುವಾಗ ನೀರಲ್ಲಿ ಕೊಚ್ಚಿ ಹೋದ ಮಹಿಳೆ!

Fans came from Japan to Hyderabad to watch Prabhas starrer Kalki 2898 AD
ಕರ್ನಾಟಕ1 hour ago

Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

India's open-bus parade
ಪ್ರಮುಖ ಸುದ್ದಿ2 hours ago

India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

Dr Jitendra Singh
ದೇಶ2 hours ago

2025ರ ವೇಳೆಗೆ ಬಾಹ್ಯಾಕಾಶ, ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್;‌ ಕೇಂದ್ರ ಸಚಿವ ಮಹತ್ವದ ಘೋಷಣೆ

Rohit Sharma
ಕ್ರಿಕೆಟ್2 hours ago

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Mukesh Ambani
ದೇಶ3 hours ago

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

India's open-bus parade
ಪ್ರಮುಖ ಸುದ್ದಿ3 hours ago

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ7 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ8 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ10 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ11 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ12 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ13 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ14 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌