Suicide Attempt | ಕಾಲೇಜಿನಲ್ಲಿ ತಾರತಮ್ಯ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ, ವಿಡಿಯೊ ವೈರಲ್‌ - Vistara News

ಕ್ರೈಂ

Suicide Attempt | ಕಾಲೇಜಿನಲ್ಲಿ ತಾರತಮ್ಯ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ, ವಿಡಿಯೊ ವೈರಲ್‌

ಮೈಸೂರಿನ (Suicide Cases) ಖಾಸಗಿ ಕಾಲೇಜು ವಿದ್ಯಾರ್ಥಿನಿ ಕಾಲೇಜಿನಲ್ಲಿ ಮಾಡುತ್ತಿರುವ ತಾರತಮ್ಯ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಸಿದ್ದಾರೆ. ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Suicide Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಕಾಲೇಜಿನಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ (Suicide Cases) ಯತ್ನಿಸಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ವಿಡಿಯೊ ಹರಿಬಿಟ್ಟು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಖಾಸಗಿ ಕಾಲೇಜು ವಿದ್ಯಾರ್ಥಿನಿ ಕಾಲೇಜಿನಲ್ಲಿ ತಾರತಮ್ಯ ಮಾಡುವ ವಿಚಾರಕ್ಕೆ ಮಾತ್ರೆ ಸೇವಿಸಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಡಿಯೊ ಮಾಡಿ ʻʻನಮ್ಮ ಕಾಲೇಜಿನಲ್ಲಿ ತುಂಬಾ ಸಮಸ್ಯೆ ಆಗುತ್ತಿದೆ. ನಾನು ಡಿಪ್ರೆಶನ್‌ಗೆ ಒಳಗಾಗುತ್ತಿದ್ದೇನೆ. ಕಾಲೇಜಿನಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ. ಹಾಜರಾತಿ ಕಡಿಮೆ ಎಂದು ಕಿರುಕುಳ‌ ನೀಡುತ್ತಿದ್ದಾರೆ. ಕಳೆದ ಬಾರಿ ಕೂಡ ಅದೇ ನೆಪವೊಡ್ಡಿ ಹಣ ಕಿತ್ತಿದ್ದರು. ದಂಡ ಎಂದು ಹಣ ಪಡೆದುಕೊಂಡು‌ ರಶೀದಿ ನೀಡಿರಲಿಲ್ಲ.ನನ್ನ ಪರಿಸ್ಥಿತಿಯನ್ನು ಯಾರೂ ಕೇಳುತ್ತಿಲ್ಲʼʼ ಎಂದು ಹೇಳಿದ್ದಾಳೆ. ಇದೀಗ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | Suicide Cases | ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

ಕತ್ತು ಕುಯ್ದುಕೊಂಡು ನರಳುತ್ತಿದ್ದ ವಿದ್ಯಾರ್ಥಿನಿಯರನು ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಚಿಕಿತ್ಸೆ ನೀಡಲಾಗುತ್ತಿದೆ. ಜಯಲಕ್ಷ್ಮಿಪುರಂ ಠಾಣಾ ಪೊಲೀಸರಿಂದ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಲೋ ಬಿಪಿ ಇದ್ದ ಕಾರಣ ಕೆಳಗೆ ಬಿದ್ದಾಗ ಏಟಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ವಿದ್ಯಾರ್ಥಿನಿ ನೀಡಿದ್ದಾರೆ ಎನ್ನಲಾಗಿದೆ. ಹಾಗೂ ಪೋಷಕರು ಕೂಡ ಪುತ್ರಿ ಚೆನ್ನಾಗಿದ್ದಾಳೆ ಎನ್ನುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Suicide Cases | 2021ರಲ್ಲಿ ದಾಖಲೆಯ 10,560 ಆತ್ಮಹತ್ಯೆ ಪ್ರಕರಣಗಳು, ಸಾವಿಗೆ ಕಾರಣ ಏನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Lokayukta Raid: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ, ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

VISTARANEWS.COM


on

Lokayukta Raid
Koo

ಮೈಸೂರು: ಆಹಾರ ಸರಬರಾಜು ಮಾಡಿದ ಬಿಲ್ ಪಾವತಿಸಲು 30 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಪಿರಿಯಾಪಟ್ಟಣ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದಿದ್ದಾರೆ.

ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ನಟೇಶ್ ಎಂಬುವರಿಗೆ ಆಹಾರ ಪೂರೈಕೆ ಮಾಡಿದ ಬಿಲ್ ಪಾವತಿಸಲು 30 ಸಾವಿರ ಲಂಚಕ್ಕೆ ವಿಜಯ್ ಕುಮಾರ್ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀರಿಗೆ ನಟೇಶ್‌ ದೂರು ನೀಡಿದ್ದರು.

ಮೊದಲೇ ನಡೆದಿದ್ದ ಮಾತುಕತೆಯಂತೆ ಎಫ್‌ಡಿಎ ವಿಜಯ್‌ ಕುಮಾರ್‌, ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ವಿ.ಕೃಷ್ಣಯ್ಯ ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್‌, ರೂಪಶ್ರೀ, ಲೋಕೇಶ್‌, ಸಿಬ್ಬಂದಿಯಾದ ಮೋಹನ್‌ ಗೌಡ, ವೀರಭದ್ರಸ್ವಾಮಿ, ಆಶಾ, ತ್ರಿವೇಣಿ, ಪುಷ್ಪಲತಾ, ದಿನೇಶ್‌, ಲೋಕೇಶ್‌, ಪೃಥ್ವೀಶ್‌, ಶೇಖರ್‌ ಇದ್ದರು.

ಇದನ್ನೂ ಓದಿ | Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

shoot out doddaballapur murder case

ದೊಡ್ಡಬಳ್ಳಾಪುರ: ಕೊಲೆ ಆರೋಪಿಯೊಬ್ಬನ (Murder Suspect) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Encounter) ಬಂಧಿಸಿದ್ದಾರೆ. ಹೇಮಂತ್‌ ಕುಮಾರ್‌ ಗೌಡ ಎಂಬ ಯುವಕನ ಕೊಲೆ (Murder Case) ಆರೋಪಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಮಿಟ್ಟೆ ಕಾಲಿಗೆ ಗುಂಡು ಹಾರಿಸಿ (Shoot out) ಬಂಧಿಸಲಾಗಿದೆ.

ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಬಳಿ ಘಟನೆ ನಡೆದಿದೆ. ರೌಡಿ‌ ಶೀಟರ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಮೇಲೆ ಈತ ಹಲ್ಲೆ‌ ನಡೆಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ಅವರಿಂದ ಫೈರಿಂಗ್ ನಡೆದಿದೆ.

ಈತ ಕೊಲೆ ಕೇಸ್‌ನ 2ನೇ ಆರೋಪಿಯಾಗಿದ್ದಾನೆ. ಮೇ 11ರಂದು ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗ ಹೇಮಂತ್ ಕುಮಾರ್ ಗೌಡ (27) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೇಮಂತ್ ಅವರನ್ನು ಅಟ್ಟಾಡಿಸಿ ಕೊಲೆ ಮಾಡಿ ಆರೋಪಿಗಳು ಕಾರಿನಲ್ಲಿ ಶವದ ಜೊತೆ ರೌಂಡ್ಸ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್​ ಮಿಟ್ಟೆ ಎಂಬಾತನನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ಸಾಫ್ಟ್‌ವೇರ್‌ ಎಂಜಿನಿಯರ್‌ ಪತ್ನಿಯ ಅನುಮಾನಾಸ್ಪದ ಸಾವು

ಬೆಂಗಳೂರು: ರಾಜಧಾನಿಯ (bengaluru crime) ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ (woman self harming) ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತರು ಸಾಫ್ಟ್‌ವೇರ್‌ ಎಂಜಿನಿಯರ್‌ (Software engineer) ಪತ್ನಿಯಾಗಿದ್ದು, ಇದೊಂದು ಅಸಹಜ ಸಾವು (UDR Case) ಎಂದು ಮೃತಳ ತವರಿನವರು ಶಂಕಿಸಿದ್ದಾರೆ.

ಮಂಜುನಾಥ ನಗರದ ಸಂಧ್ಯಾ ಮೃತ ಮಹಿಳೆ. ನೆನ್ನೆ ರಾತ್ರಿ ಘಟನೆ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಮೃತ ದೇಹ ಪತ್ತೆಯಾಗಿದೆ. ಇವರಿಗೆ ಮದುವೆಯಾಗಿ 5 ವರ್ಷ ಆಗಿತ್ತು. ನಾಲ್ಕು ವರ್ಷದ ಗಂಡು ಮಗುವೂ ಇತ್ತು. ಅಳಿಯ ಜಯಪ್ರಕಾಶ್‌ ಮೈತುಂಬಾ ಸಾಲ ಮಾಡಿ ಅದನ್ನು ತೀರಿಸಲು ಕಿರುಕುಳ ನೀಡುತ್ತಿದ್ದ. ನನ್ನ ಮಗಳಿಗೆ ಈ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ತಂದೆ ಆಪಾದಿಸಿದ್ದಾರೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Continue Reading

ರಾಮನಗರ

Drowned In water : ನಮಾಜ್‌ ಮುಗಿಸಿ ಈಜಲು ಹೋದ ಮೂವರು ನೀರುಪಾಲು; ಐವರು ಪ್ರಾಣಾಪಾಯದಿಂದ ಪಾರು

Drowned In water : ಹಾಸನದಲ್ಲಿ ಕೆರೆಯಲ್ಲಿ ಈಜಲು ಹೋದ ನಾಲ್ವರು ಬಾಲಕರು ನೀರುಪಾಲಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ರಾಮನಗರದಲ್ಲೂ ಈಜಲು ಹೋದ 8 ಮಂದಿ ಪೈಕಿ ಮೂವರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ.

VISTARANEWS.COM


on

By

Drowned in water
Koo

ರಾಮನಗರ: ಈಜಲು ಹೋಗಿ‌ದ್ದ ಮೂವರು (Drowned In water) ನೀರುಪಾಲಾಗಿದ್ದಾರೆ. ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ಘಟನೆ ನಡೆದಿದೆ. ಬಂಡೆಯ ಮೇಲಿನ ನೀರಿನ ಹೊಂಡದಲ್ಲಿ ಈಜಲು ಹೋದ ಶಾಬಾಜ್ (14), ಸುಲ್ತಾನ್ (13), ರಿಹಾನ್ ಖಾನ್ (16) ಮೃತಪಟ್ಟಿದ್ದಾರೆ.

ಶಾಬಾಜ್ ಹಾಗೂ ರಿಯಾನ್ ಖಾನ್ ಸಹೋದರರಾಗಿದ್ದು, ಮೃತರೆಲ್ಲರೂ ರಾಮನಗರ ಟೌನ್‌ನ ಸುಲ್ತಾನ್ ನಗರದವರು. ಒಟ್ಟು 8 ಯುವಕರ ತಂಡ ನಮಾಜ್ ಮುಗಿಸಿದ ಈಜಲು ಹೊಂಡಕ್ಕೆ ಇಳಿದಿದ್ದರು. ಈ ವೇಳೆ ಮೂವರು ನೀರುಪಾಲಾದರೆ, ಐವರು ಸಾವಿನ ದವಡೆಯಿಂದ ಬಚಾವ್‌ ಆಗಿದ್ದಾರೆ.

ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: KSRTC Bus : ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ

ಹಾಸನದಲ್ಲಿ ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಬಾಲಕರು (Drowned in water) ನೀರುಪಾಲಾಗಿದ್ದರು. ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು.

ಜೀವನ್ (13), ಸಾತ್ವಿಕ್ (11), ವಿಶ್ವ (12), ಪೃಥ್ವಿ (12) ಮೃತ ದುರ್ದೈವಿಗಳು. ಮೃತ ಮಕ್ಕಳು ಮುತ್ತಿಗೆ ಗ್ರಾಮದವರು. ಶಾಲೆಗೆ ರಜೆ ಇರುವುದರಿಂದ ಐವರು ಗೆಳೆಯರಲು ಈಜಲು ಹೊಳೆಗೆ ಹೋಗಿದ್ದರು. ಹೊಳೆಗೆ ಇಳಿದಾಗ ನೀರಿನಿಂದ ಹೊರಬರಲು ಆಗದೆ ನಾಲ್ವರು ನೀರುಪಾಲಾಗಿದ್ದರು. ಮತ್ತೊರ್ವ ಬದುಕುಳಿದಿದ್ದಾನೆ.

Drowned in water 4 boys death

ಇದನ್ನೂ ಓದಿ: Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

ಈಜಲು ತೆರಳಿದ್ದ ಐವರು ಬಾಲಕರಲ್ಲಿ, ನಾಲ್ವರು‌ ಮುಳುಗಡೆ ಆಗುತ್ತಿದ್ದರು. ಇತ್ತ ಬದುಕುಳಿದ ಓರ್ವ ಬಾಲಕ ಓಡಿ ಹೋಗಿ ಸಮೀಪದಲ್ಲಿದ್ದವರಿಗೆ ಸುದ್ದಿ ತಿಳಿಸಿದ್ದ. ಆದರೆ ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಮುಳುಗಿದ್ದರು.

ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ನೀರಲ್ಲಿ ಕೊಚ್ಚಿ ಹೋಗಿದ್ದ ಮೃತದೇಹಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಶೋಧಕಾರ್ಯ ನಡೆಸಿ ಮೇಲೆತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Illegal Sand Mining: ಅಕ್ರಮ ಮರಳುಗಾರಿಕೆ: ಪೊಲೀಸರು, ಅಧಿಕಾರಿಗಳಿಗೆ ರಕ್ಷಣೆ ಕೊಡುವಂತೆ ಗ್ರಾಮಸ್ಥರ ಮನವಿ!

Illegal Sand Mining: ಮರಳು ಮಾಫಿಯಾದಿಂದ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಆದರೆ, ಅಕ್ರಮಕ್ಕೆ ಕಡಿವಾಣ ಹಾಕಲು ಪೊಲೀಸರು ಹಾಗೂ ಅಧಿಕಾರಿಗಳು ಹೆದರುತ್ತಿದ್ದು, ಅವರಿಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್‌ ಕಮೀಷನರ್‌ ಹಾಗೂ ಜಿಲ್ಲಾಧಿಕಾರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮಸ್ಥರು ಮನವಿ ಮಾಡಿದ್ದಾರೆ.

VISTARANEWS.COM


on

Illegal sand mining
Koo

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಸುತ್ತಮುತ್ತ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಳವಾಗಿದ್ದು, ಪ್ರಭಾವಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಮರಳು ಮಾಫಿಯಾಗೆ (Illegal Sand Mining) ಕಡಿವಾಣ ಹಾಕಲು ಹೆದರುತ್ತಿರುವ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕು ಎಂದು ಗ್ರಾಮಸ್ಥರು, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಅಕ್ರಮದ ಬಗ್ಗೆ ಸಾಕ್ಷಿ ಸಮೇತ ಕೋಣಾಜೆ ಪೊಲೀಸರು, ಎಸಿಪಿ ಧನ್ಯಾ ನಾಯಕ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದರೂ, ದಾಳಿ ಮಾಡಿಲ್ಲ. ಮರಳು ಮಾಫಿಯಾದಿಂದ ಗ್ರಾಮಸ್ಥರಿಗೆ ವಿವಿಧ ರೀತಿಯಲ್ಲಿ ತೊಂದರೆ ಆಗುತ್ತಿದೆ. ಆದರೆ, ಪ್ರಭಾವಿಗಳು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದರಿಂದ ದಾಳಿ ನಡೆಸಲು ಅಧಿಕಾರಿಗಳು ಹೆದರಿರುವ ಶಂಕೆ ವ್ಯಕ್ತವಾಗಿದ್ದರಿಂದ ಎಸಿಪಿ ಸೇರಿ ಕೋಣಾಜೆ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ರಕ್ಷಣೆ ಕೊಡಿ ಎಂದು ಗ್ರಾಮಸ್ಥರು ಕೋರಿದ್ದಾರೆ.

ಶಿಕಾರಿಗೆ ತೆರಳಿದ ಯುವಕನಿಗೆ ಗುಂಡು ತಗುಲಿ ಸಾವು, ಆಕಸ್ಮಿಕವೋ ಕೊಲೆಯೋ?

illegal hunting chikkamagaluru

ಚಿಕ್ಕಮಗಳೂರು: ಶಿಕಾರಿಗೆ (Illegal hunting) ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ (misfire) ಆದ ಪರಿಣಾಮ, ಯುವಕ ಸ್ಥಳದಲ್ಲೇ (crime news) ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ (Chikkamagaluru crime) ತಾಲೂಕಿನ ಉಲುವಾಗಿಲು ಗ್ರಾಮದ ಕಾಫಿ ತೋಟದಲ್ಲಿ ದುರ್ಘಟನೆ ನಡೆದಿದೆ.

ಕೆರೆಮಕ್ಕಿ ಗ್ರಾಮದ ಸಂಜು (33) ಸಾವಿಗೀಡಾದ ಯುವಕ. ಕಾಫಿ ತೋಟದ ಅಂಚಿನಲ್ಲಿರುವ ಕಾಡಿಗೆ ಅಕ್ರಮವಾಗಿ ಪ್ರಾಣಿ ಬೇಟೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಇದೇ ಥರ ಅಕ್ರಮ ಬೇಟೆಗೆ ಬಂದವರು ಯಾವುದೋ ಪ್ರಾಣಿ ಎಂದು ಭಾವಿಸಿ ಗುಂಡು ಹೊಡೆದಿದ್ದರಿಂದ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಅಪರಾಧದ ಆಯಾಮಗಳ ಕುರಿತು ಕೂಡ ತನಿಖೆ ನಡೆಯುತ್ತಿದೆ. ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಂಜಲಿ ಹಂತಕನ ಬಂಧನ, ಸಾರ್ವಜನಿಕರಿಂದ ಗೂಸಾ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ (Hubli news) ನೇಹಾ ಹಿರೇಮಠ (Neha Hiremath murder) ಕೊಲೆ ಮಾದರಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಎಂಬಾಕೆಯನ್ನು ಚುಚ್ಚಿ ಸಾಯಿಸಿದ (Anjali Murder Case) ಆರೋಪಿ ಗಿರೀಶ್‌ನನ್ನು ಬಂಧಿಸಲಾಗಿದೆ. ಈತ ಮೂರು ದಿನಗಳಿಂದ ತಲೆ ತಪ್ಪಿಸಿಕೊಂಡು (Abscond) ಪರಾರಿಯಾಗಿದ್ದ.

ಆರೋಪಿಯನ್ನು‌ ಬಂಧಿಸಿ ಹುಬ್ಬಳ್ಳಿಗೆ ಕರೆತರಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕೊಲೆಗಾರ ಗಿರೀಶ್‌ನನ್ನು ಸಾರ್ವಜನಿಕರು ಥಳಿಸಿದ್ದಾರೆ. ದಾವಣಗೆರೆಯಲ್ಲಿದ್ದ ಈತನನ್ನು ಬಂಧಿಸಲು ಪೊಲೀಸರು ತೆರಳಿದ್ದ ಸಂದರ್ಭ, ಸಾರ್ವಜನಿಕರು ರೊಚ್ಚಿಗೆದ್ದು ಹಂತಕ ಗಿರೀಶ್‌ನನ್ನು ಥಳಿಸಿದರು. ಗಾಯಗೊಂಡ ಗಿರೀಶ್‌ನನ್ನು ಪೊಲೀಸರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಏನಿದು ಘಟನೆ?

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಬುಧವಾರ ಮುಂಜಾನೆ ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದ.

Anjali Murder Case

ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್‌ ಈ ಕೃತ್ಯ ಎಸಗಿದ್ದ. ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.

ಸ್ನೇಹಿತನೂ ಕೊಲೆ ಆರೋಪಿ

ಹಂತಕ ಗಿರೀಶ್‌ನ‌ ಸ್ನೇಹಿತ ಕೂಡ ಕೊಲೆ ಆರೋಪಿ (Murder suspect) ಎಂಬುದು ಬಯಲಿಗೆ ಬಂದಿದೆ. ತನ್ನ ಸ್ನೇಹಿತನಿಂದಲೇ ಈತ ಪ್ರೇರಣೆ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಕೊಲೆ ಪ್ರಕರಣ ಒಂದರಲ್ಲಿ ಗಿರೀಶ್‌ನ ಸ್ನೇಹಿತ ಶಶಿ ಆರೆಸ್ಟ್ ಆಗಿದ್ದಾನೆ. ಶಶಿ ಮತ್ತು ಗಿರೀಶ್ ಇಬ್ಬರೂ ಸ್ನೇಹಿತರು.‌ ಎರಡು ದಿನಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಕೊಲೆ ನಡೆದಿದ್ದು, ಸದ್ದಾಂ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಶಿ ಜೈಲು ಪಾಲಾಗಿದ್ದಾನೆ.

ಇದನ್ನೂ ಓದಿ | Davanagere News: ದಾವಣಗೆರೆ ಸಮೀಪದ ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

ಶಶಿ ಈ ಕೊಲೆ ಮಾಡಿದ ಬಳಿಕ ಅದೇ ರೀತಿ ಅಂಜಲಿಯನ್ನು ಮುಗಿಸಲು ಗಿರೀಶ್‌ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತ ಮಾಡಿರುವ ಕೊಲೆಯಿಂದಲೇ ಪ್ರೇರಣೆ ಪಡೆದಿದ್ದ ಎಂದು ತರ್ಕಿಸಲಾಗಿದೆ. ಸ್ನೇಹಿತ ಕೊಲೆ ಮಾಡಿದ ಮೂರು ದಿನಗಳ ಬಳಿಕ ಗಿರೀಶನಿಂದ ಕೊಲೆ ಸಂಭವಿಸಿದೆ. ಇವರಿಬ್ಬರೂ‌ ಕೂಡಾ ಬೈಕ್ ಕಳ್ಳತನದ ಆರೋಪಿಗಳಾಗಿದ್ದಾರೆ.

Continue Reading

ದೇಶ

Bomb Blast: ಚೆಂಡೆಂದು ಭಾವಿಸಿ ಬಾಂಬ್‌ ಎತ್ತಿಕೊಂಡ ಮದರಸಾ ವಿದ್ಯಾರ್ಥಿ; ಸ್ಫೋಟಕ್ಕೆ ಮೌಲಾನಾ ಸಾವು

Bomb blast: ಮದರಸಾದ ಎದುರು ಬಿದ್ದಿದ್ದ ಚೆಂಡಿನಂತಹ ವಸ್ತುವನ್ನು ಚೆಂಡೆಂದು ಭಾವಿಸಿ ಆಲಂ ಮದರಸಾದೊಳಗೆ ಕೊಂಡೊಯ್ದಿದ್ದಾನೆ. ಮೌಲಾನಾ ಆ ವಸ್ತುವನ್ನು ನೋಡಿದ್ದರು. ಅವರು ಆಲಂನಿಂದ ಅದನ್ನು ತೆಗೆದುಕೊಂಡು ಅದನ್ನು ಬಾಂಬ್ ಎಂದು ಶಂಕಿಸಿ ಎಸೆದರು. ವಸ್ತು ಸ್ಫೋಟಗೊಂಡು ಇಬ್ಬರಿಗೂ ಗಾಯಗಳಾಗಿವೆ.  ಘಟನೆಯಲ್ಲಿ ಇಮಾಮುದ್ದೀನ್‌ ಮತ್ತು ಆಲಂ ಗಂಭೀರವಾಗಿ ಗಾಯಗೊಂಡಿದ್ದ ಇವರಿಬ್ಬರನ್ನೂ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು.

VISTARANEWS.COM


on

Bomb Blast
Koo

ಪಾಟ್ನಾ:ಲೋಕಸಭೆ ಚುನಾವಣೆ(Lok Sabha Election 2024)ಗೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿರುವಗಲೇ ಬಿಹಾರ(Bihar)ದಲ್ಲಿ ಬಾಂಬ್‌ ಸ್ಫೋಟ(Bomb blast)ಗೊಂಡಿದ್ದು, ಮೌಲಾನ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅಪ್ರಾಪ್ತ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸರನ್‌ ಜಿಲ್ಲೆಯ ಮದರಸಾವೊಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೌಲಾನ ಮೌಲಾನಾ ಇಮಾಮುದ್ದೀನ್ ಮತ್ತು ವಿದ್ಯಾರ್ಥಿ ನೂರ್ ಆಲಂ (15) ಗಾಯಗೊಂಡಿದ್ದರು. ಇವರಿಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಮಾಮುದ್ದೀನ್‌ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಘಟನೆ ವಿವರ:

ಬುಧವಾರ ತಡರಾತ್ರಿ ಸರನ್‌ನ ಓಲ್ಹಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದರಸಾದ ಎದುರು ಬಿದ್ದಿದ್ದ ಚೆಂಡಿನಂತಹ ವಸ್ತುವನ್ನು ಚೆಂಡೆಂದು ಭಾವಿಸಿ ಆಲಂ ಮದರಸಾದೊಳಗೆ ಕೊಂಡೊಯ್ದಿದ್ದಾನೆ. ಮೌಲಾನಾ ಆ ವಸ್ತುವನ್ನು ನೋಡಿದ್ದರು. ಅವರು ಆಲಂನಿಂದ ಅದನ್ನು ತೆಗೆದುಕೊಂಡು ಅದನ್ನು ಬಾಂಬ್ ಎಂದು ಶಂಕಿಸಿ ಎಸೆದರು. ವಸ್ತು ಸ್ಫೋಟಗೊಂಡು ಇಬ್ಬರಿಗೂ ಗಾಯಗಳಾಗಿವೆ.  ಘಟನೆಯಲ್ಲಿ ಇಮಾಮುದ್ದೀನ್‌ ಮತ್ತು ಆಲಂ ಗಂಭೀರವಾಗಿ ಗಾಯಗೊಂಡಿದ್ದ ಇವರಿಬ್ಬರನ್ನೂ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು.

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ. ನಾವು ಅವರ ವರದಿಯನ್ನು ಪಡೆದ ನಂತರ, ವಸ್ತುವು ಬಾಂಬ್ ಅಥವಾ ಪಟಾಕಿಯೇ ಎನ್ನುವುದನ್ನು ಖಚಿತವಾಗಿ ಹೇಳಬಹುದು ಎಂದು ಸರನ್ ಎಸ್ಪಿ ಗೌರವ್ ಮಂಗಳಾ ತಿಳಿಸಿದ್ದಾರೆ. ಇನ್ನು ಪ್ರಕರಣದ ವಿಚಾರ ರಾಜ್ಯದಲ್ಲಿ ಸುದ್ದಿಯಾಗುತ್ತಿದ್ದಂತೆ ಪೊಲೀಸರು ಪ್ರಕರಣವನ್ನು ಕೂಲಂಕಷ ತನಿಖೆ ಮಾಡಲು ನಿರ್ಧಾರ ಮಾಡಿದ್ದಾರೆ. ಶುಕ್ರವಾರದ ವೇಳೆ ಬ್ಲಾಸ್ಟ್‌ನಲ್ಲಿ ಗಾಯಗೊಂಡವರು ಇಬ್ಬರು ವ್ಯಕ್ತಿಗಳು ಎಂದು ತಿಳಿಸಲಾಗಿದೆ.  ಎಸ್ಪಿ ಗೌರವ್ ಮಂಗಳಾ ನೀಡಿರುವ ಮಾಹಿತಿಯ ಪ್ರಕಾರ, ಪ್ರಕರಣದ ನಡೆದ ಬಳಿಕ ಸ್ಥಳೀಯ ಜನರು ಸಾಕ್ಷ್ಯವನ್ನು ನಾಶ ಮಾಡಿದ್ದರಿಂದ ಇಲ್ಲಿ ಬ್ಲಾಸ್ಟ್‌ ಆದ ವಸ್ತು ಯಾವುದು ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Lok Sabha Election 2024: 272 ಸೀಟು ಗೆಲ್ಲದೇ ಹೋದರೆ ಬಿಜೆಪಿಯ ಪ್ಲ್ಯಾನ್ ಬಿ ಏನು? ಅಮಿತ್ ಶಾ ಉತ್ತರ ಹೀಗಿದೆ

ಮದರಸಾದಲ್ಲಿ ಸ್ಫೋಟದ ನಂತರ, ಎಫ್‌ಎಸ್‌ಎಲ್ ತಂಡ ತನಿಖೆ ಆರಂಭಿಸಿದೆ. ಸ್ಫೋಟದ ಹಿಂದಿನ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಸ್ಫೋಟದ ಹಿಂದೆ ಬಾಂಬ್ ಇದೆಯೇ ಅಥವಾ ಪಟಾಕಿಯಿಂದ ಸ್ಫೋಟ ಸಂಭವಿಸಿದೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯ ನಂತರ ಮದರಸಾದಲ್ಲಿ ಯಾರೂ ಪತ್ತೆಯಾಗಿಲ್ಲ. ಘಟನೆಗೂ ಮುನ್ನ ಮದರಸಾದಲ್ಲಿ 12 ಮಕ್ಕಳು ಓದುತ್ತಿದ್ದರು. ಘಟನೆಯ ನಂತರ ಸ್ಥಳವನ್ನು ತೊಳೆಯಲಾಗಿದೆ. ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಯತ್ನ ನಡೆದಿದೆ ಎಂಬ ಆರೋಪಗಳಿವೆ ಎನ್ನಲಾಗಿದೆ. ಸ್ಫೋಟದ ನಂತರ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಹಾರದ ಮದರಸಾಗಳು ಭಯೋತ್ಪಾದನೆಯ ಗೂಡು ಎಂಬುದನ್ನು ಚಾಪ್ರಾ ಘಟನೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಬಿಹಾರದ ಮದರಸಾಗಳು ಭಯೋತ್ಪಾದಕರ ತಾಣಗಳಾಗಿವೆ ಎಂದು ನಾವು ಮೊದಲೇ ಹೇಳಿದ್ದೆವು ಎಂದಿದ್ದಾರೆ.

Continue Reading
Advertisement
SubAir facility
ಕ್ರೀಡೆ43 seconds ago

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

Lokayukta Raid
ಕರ್ನಾಟಕ6 mins ago

Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Health Tips Kannada sleepy is good
ಆರೋಗ್ಯ8 mins ago

Health Tips Kannada: ಕೂತಲ್ಲೇ ತೂಕಡಿಸುತ್ತೀರಾ? ಇದು ಒಳ್ಳೆಯದು!

Jr NTR and Prashanth Neel get the title Dragon from Karan
ಬಾಲಿವುಡ್13 mins ago

Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

Narendra Modi
ದೇಶ24 mins ago

Narendra Modi: ನೆಹರು-ಗಾಂಧಿ ಕುಟುಂಬಸ್ಥರಿಂದ ಸಂವಿಧಾನಕ್ಕೆ ಧಕ್ಕೆ; ಪ್ರಧಾನಿ ಮೋದಿ ವಾಗ್ದಾಳಿ

ambulance-booking
ಆರೋಗ್ಯ26 mins ago

Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

SSLC Grace Marks 20 per cent grace marks CM Siddaramaiah slams education department
ಶಿಕ್ಷಣ33 mins ago

SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

Kannada New Movie powder Teaser Out
ಸ್ಯಾಂಡಲ್ ವುಡ್44 mins ago

Kannada New Movie: ಬಹು ನಿರೀಕ್ಷಿತ ʻಪೌಡರ್‌ʼ ಸಿನಿಮಾ ಟೀಸರ್‌ ಔಟ್‌!

Drowned in water
ರಾಮನಗರ45 mins ago

Drowned In water : ನಮಾಜ್‌ ಮುಗಿಸಿ ಈಜಲು ಹೋದ ಮೂವರು ನೀರುಪಾಲು; ಐವರು ಪ್ರಾಣಾಪಾಯದಿಂದ ಪಾರು

Illegal sand mining
ಕರ್ನಾಟಕ46 mins ago

Illegal Sand Mining: ಅಕ್ರಮ ಮರಳುಗಾರಿಕೆ: ಪೊಲೀಸರು, ಅಧಿಕಾರಿಗಳಿಗೆ ರಕ್ಷಣೆ ಕೊಡುವಂತೆ ಗ್ರಾಮಸ್ಥರ ಮನವಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ10 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌