Viral video | ಕಚ್ಚಾ ಬಾದಾಮ್‌ ಥರ ಭೋಪಾಲಿನ ನಮ್ಕೀನ್‌ ಸೆಲ್ಲರ್‌ ಹಾಡು ವೈರಲ್! - Vistara News

ಪ್ರಮುಖ ಸುದ್ದಿ

Viral video | ಕಚ್ಚಾ ಬಾದಾಮ್‌ ಥರ ಭೋಪಾಲಿನ ನಮ್ಕೀನ್‌ ಸೆಲ್ಲರ್‌ ಹಾಡು ವೈರಲ್!

ಕಚ್ಚಾ ಬಾದಾಮ್‌ ವ್ಯಕ್ತಿಯಂತೆಯೇ ಈ ವೃದ್ಧ ಮಾರಾಟಗಾರನೂ ಜನರನ್ನು ಸೆಳೆಯುವ ಸ್ವಂತ ಹಾಡಿನ ಮೂಲಕವೇ ಖಾರ ತಿಂಡಿ ಸೇಲ್‌ ಮಾಡುತ್ತಿದ್ದಾರೆ. ಇದೀಗ ಅವರ ವಿಡಿಯೋ ವೈರಲ್‌ ಆಗುತ್ತಿದೆ.

VISTARANEWS.COM


on

namkeen seller
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಯಿ ಮುಚ್ಚಿ ಕೂತವ ಎಂದೂ ಮಾರಾಟ ಮಾಡುವ ಕೆಲಸಕ್ಕೆ ಲಾಯಕ್ಕಿಲ್ಲ ಎಂಬ ಮಾತಿದೆ. ಅದು ಸತ್ಯ ಕೂಡಾ. ಓದಿ ವಿದ್ಯಾವಂತನಲ್ಲದಿದ್ದರೂ ಗ್ರಾಹಕರನ್ನು ತನ್ನತ್ತ ಸೆಳೆಯಲು ಮಾರಾಟದ ತಂತ್ರಗಳು ಗೊತ್ತಿದ್ದರೆ ಸಾಕು, ಎಂಥ ಜಾಗದಲ್ಲಿದ್ದರೂ ಆತ/ಕೆ ಹೊಟ್ಟೆ ಹೊರೆದುಕೊಳ್ಳುವುದಂತೂ ಸತ್ಯವೇ. ಬೆಡ್‌ಶೀಟು, ಡ್ರೆಸ್‌ ಮೆಟೀರಿಯಲ್, ಕತ್ತರಿ ಹರಿತ ಮಾಡುವವರು,ಥವಾ ಇನ್ಯಾವುದೋ ಮ್ಯಾಜಿಕ್‌ ಉಪಕರಣಗಳನ್ನು ಹಿಡಿದು ಮನೆಮನೆಗೆ ಮಾರಾಟ ಮಾಡಲು ಬರುವವರು ಮಾತಿನಿಂದ ಎದುರಿಗಿರುವ ಗ್ರಾಹಕರನ್ನು ಸೆಳೆಯಲು ಗೊತ್ತಿರಬೇಕು. ಇಲ್ಲದಿದ್ದರೆ ಬರಿಗೈಯೇ ಗತಿಯಾದೀತು!

ಪಶ್ಚಿಮ ಬಂಗಾಳದ ಹಳ್ಳಿ ಮೂಲೆಯೊಂದರಲ್ಲಿ ನೆಲಗಡಲೆ ಮಾರುವಾತನ ʻಕಚ್ಚಾ ಬಾದಾಮ್‌ʼ ಹಾಡು ಎಲ್ಲೆಡೆ ಸಂಚಲನ ಮೂಡಿಸಿ ಮತ್ತೊಂದು ಹಾಡಿನ ಹುಟ್ಟಿಗೆ ಪ್ರೇರಣೆ ನೀಡಿದಂತೆ ಇದೀಗ ಭೋಪಾಲ್‌ನ ಕುರುಕಲು ಮಾರಾಟಗಾರನ ಹಾಡೊಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿ ಎಲ್ಲರನ್ನು ಸೆಳೆಯುತ್ತಿದೆ.

ಭೋಪಾಲದ ಬೀದಿಗಳಲ್ಲಿ ಮನೆಮನೆಗೆ ಬಗೆಬಗೆಯ ಖಾರಾ ಸೇವ್‌, ಮಿಕ್ಸ್ಚರುಗಳನ್ನು ತನ್ನ ಹಳೇ ಸ್ಕೂಟರಿನಲ್ಲಿ ಏರಿ ಕೊಂಡೊಯ್ದು ಮಾರಾಟ ಮಾಡುವ ಹಿರಿಯ ವ್ಯಾಪಾರಿಯೊಬ್ಬರು ತಮ್ಮದೇ ಹಾಡಿನ ಮೂಲಕ ಜನರು ಮನೆ ಬಾಗಿಲು ತೆರೆದು ಹೊರಬಂದು ಇಣುಕುವಂತೆ ಮಾಡಿದ್ದಾರೆ. ಇಣುಕಿದ ಮೇಲೆ ಆತನ ಹಾಡಿಗೆ ಮನಸೋ ಇಚ್ಛೆ ನಕ್ಕು ಒಮ್ಮೆ ಟ್ರೈ ನೋಡೋಣ ಎಂದು ಈತನ ಬಳಿ ಕೊಂಡುಕೊಂಡಿದ್ದಾರೆ ಕೂಡಾ. ಒಮ್ಮೆ ಕೊಂಡವರು ಇಷ್ಟವಾದರೆ ಮತ್ತೆ ಕೊಳ್ಳುತ್ತಾರೆ ಎಂಬುದು ನಿಜವೇ ಆದರೂ, ಮೊದಲು ಈತನ ಬಳಿ ಕೊಳ್ಳಬೇಕು ಎಂದು ಅನಿಸುವಂತೆ ಮಾಡುವುದೇ ವ್ಯಾಪಾರಿಯ ತಾಕತ್ತು. ಆ ನಿಟ್ಟಿನಲ್ಲಂತೂ ಈ ವ್ಯಾಪಾರಿಗೆ ೧೦೦ಕ್ಕೆ ೧೦೦ ಅಂಕ.

ಸುಮಾರು ೪೪ ಸೆಕೆಂಡುಗಳ ಈ ವಿಡಿಯೋ ತುಣುಕೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ತನ್ನ ಹಳೆಯ ಬಜಾಜ್‌ ಸ್ಕೂಟರಿನಲ್ಲಿ ಕೂತು ಮನೆಯೊಂದರ ಮುಂದೆ ಹಾಡು ಹಾಡುತ್ತಾ ಗ್ರಾಹಕರನ್ನು ಈತ ಸೆಳೆಯುತ್ತಾನೆ. ಈತನ ಹಾಡು, ʻನಮ್‌ ನಮ್‌ ನಮ್‌ ನಮ್‌ ನಮ್ಕೀನ್‌ ಕೇ ಪ್ಯಾಕೆಟ್‌ ಔರ್‌ ತೀ ತೀ ತೀ ತೀ ತೀಸ್‌ ರುಪಯೀ ಕೇʼ ಎಂದು ರಾಗವಾಗಿ ಪ್ರಾಸಬದ್ಧವಾಗಿ ಗಟ್ಟಿಯಾಗಿ ಹಾಡುವ ಈತನ ಹಾಡನ್ನು ಎಂಥವರಿಗಾದರೂ ಒಮ್ಮೆ ತಿರುಗಿ ನೋಡಬೇಕು ಎಂದು ಅನಿಸದೆ ಇರದು.‌

ಇದನ್ನೂ ಓದಿ | Viral Video | ಶಾರುಖ್‌ ಅಭಿನಯದ ಸಿನಿಮಾ ಹಾಡು ಹಾಡಿದ ಅಮೆರಿಕ ನೌಕಾಪಡೆ ಅಧಿಕಾರಿಗಳು, ನೀವೂ ಕೇಳಿ!

೪೪ ಸೆಕೆಂಡುಗಳ ಈ ವಿಡಿಯೋ ಟ್ವಿಟರಿನಲ್ಲಿ ಒಬ್ಬರು, ʻಭೋಪಾಲಿ ನಮ್ಕೀನ್‌ ವಾಲಾ! ಭೋಪಾಲಿನಲ್ಲಿ ಪ್ರತಿಭೆಗೆ ಕೊರತೆಯೇ ಇಲ್ಲʼ ಎಂಬ ಶೀರ್ಷಿಕೆಯಡಿ ಪೋಸ್ಟ್‌ ಮಾಡಿದ್ದಾರೆ. ಇದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಾವಿರಾರು ಮಂದಿ ಈತನ ಹಾಡನ್ನು, ರಾಗವನ್ನೂ ಮೆಚ್ಚಿಕೊಂಡಿದ್ದಾರೆ.

ಈತನ ಮಾರಾಟದ ಕ್ರಿಯೇಟಿವ್‌ ತಂತ್ರಕ್ಕೆ ಫಿದಾ ಆಗಿರುವ ಕೆಲವರು ಈತನಿಗೆ ʻಸೇಲ್ಸ್‌ಮ್ಯಾನ್‌ ಆಫ್‌ ದಿ ಯೀಯರ್‌ʼ ಬಿರುದುಗಳನ್ನೂ ನೀಡಿದ್ದು, ಮಾರಾಟ ಹೇಗೆ ಮಾಡಬೇಕೆಂದು ಈತನ ಬಳಿ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದಿದ್ದಾರೆ. ಹಲವರು ಈತನ ಈ ಹಾಡು ಕೂಡಾ ಖಂಡಿತವಾಗಿಯೂ ಕಚಾ ಬಾದಾಮ್‌ ಹಾಡಿನ ಹಾಗೆ ಸಂಗೀತ ನಿರ್ದೇಶಕರೊಬ್ಬರ ಕೈಗೆ ಸಿಕ್ಕು ಆಲ್ಬಮ್‌ ರೂಪದಲ್ಲಿ ಹೊರಬರಲು ಹೇಳಿ ಮಾಡಿಸಿದಂತಿದೆ ಎಂದಿದ್ದಾರೆ ಕೂಡಾ. ಸಂಗೀತ ನಿರ್ದೇಶಕ ಯಶ್‌ರಾಜ್‌ ಮುಖಾಟೆ ಕೈಗೇನಾದರೂ ಈ ಹಾಡು ಸಿಕ್ಕರೆ ಖಂಡಿತವಾಗಿಯೂ ಕಚ್ಚಾ ಬಾದಾಮ್‌ ಹಾಡಿನಂತೆಯೇ ಇದರ ರೀಮಿಕ್ಸ್‌ ವರ್ಷನ್‌ ಹೊರಬಂದೀತು, ಅವರ ಕೈಗೆ ಆದಷ್ಟು ಬೇಗ ಸಿಗಲಿ ಎಂದು ಹಲವರು ಆಶಿಸಿದ್ದಾರೆ ಕೂಡಾ. ಬರೋಬ್ಬರಿ ಶುಲ್ಕಗಳನ್ನು ಪಡೆಯುವ ದೇಶದ ಬ್ಯುಸಿನೆಸ್‌ ಸ್ಕೂಲುಗಳಲ್ಲೇನಾದರೂ ಇಂಥ ಮಾರ್ಕೆಟಿಂಗ್‌ ತಂತ್ರಗಳನ್ನು ಕಲಿಸಲಿಕ್ಕಿಲ್ಲ ಎಂದೂ ಈತನ ಮಾರ್ಕೆಟಿಂಗ್‌ ತಂತ್ರಕ್ಕೆ ಬಹುಪರಾಕ್‌ ಕೂಗಿದ್ದಾರೆ.

ಇದನ್ನೂ ಓದಿ | Fan Fever: ಕಚ್ಚಾ ಬದಾಮ್‌ ಹಾಡಿದ ಭುವನ್‌ಗೆ ಅಭಿಮಾನಿಯಿಂದ ಐಫೋನ್‌ ಉಡುಗೊರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

BJP-JDS Padayatra: ವಾಲ್ಮೀಕಿ ನಿಗಮ ಅಕ್ರಮ, ಮುಡಾ ನಿವೇಶನ ಹಗರಣ, ಎಸ್‌ಸಿಎಸ್‌ಪಿ, ಟಿಎಸ್‌ಟಿ ಹಣ ಗ್ಯಾರಂಟಿಗಳಿಗೆ ಬಳಕೆ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ಮಾಡಲಿದ್ದೇವೆ. ಆ.3ರಂದು ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

VISTARANEWS.COM


on

BJP-JDS Padayatra
Koo

ಬೆಂಗಳೂರು: ಬಿಜೆಪಿ-ಜೆಡಿಎಸ್ ಎರಡೂ ಪಕ್ಷದ ಮುಖಂಡರು ಸುದೀರ್ಘ ಚರ್ಚೆ ಮಾಡಿ ಆ.3ರಿಂದ 10ರವರೆಗೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ. ವಾಲ್ಮೀಕಿ ನಿಗಮ ಅಕ್ರಮ, ಮುಡಾ ನಿವೇಶನ ಹಗರಣ, ಎಸ್‌ಸಿಎಸ್‌ಪಿ, ಟಿಎಸ್‌ಟಿ ಹಣ ಗ್ಯಾರಂಟಿಗಳಿಗೆ ಬಳಕೆ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿನವರೆಗೂ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಮಾಡಲಿದ್ದೇವೆ. ಆ.3ರಂದು ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆ.10 ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಕೇಂದ್ರದ ನಾಯಕರು ಬರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಪಾದಯಾತ್ರೆ ಸಂಬಂಧ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿದ್ದಾರೆ. ಸಮನ್ವಯ ಸಭೆಗೂ ಮುನ್ನ ಬಿಜೆಪಿ ಪ್ರಮುಖರ ಸಭೆ ನಡೆದಿದ್ದು, ಸಭೆಯಲ್ಲಿ ಅತಿವೃಷ್ಟಿ ಬಗ್ಗೆ ಚರ್ಚೆಯಾಗಿದೆ. ಕಾರವಾರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹಲವು ಸಮಸ್ಯೆ ಉಂಟಾಗಿವೆ. ಹೀಗಾಗಿ ಪಾದಯಾತ್ರೆಗೂ ಮೊದಲು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬಿಜೆಪಿ ನಿಯೋಗ ರಚನೆ ಮಾಡಲಾಗಿದೆ.

ಇದನ್ನೂ ಓದಿ | Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಪಾದಯಾತ್ರೆ ಬಗ್ಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪ್ರತಿಕ್ರಿಯಿಸಿ, ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕಾಗಿದೆ. ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಹತ್ತಾರು ಸಾವಿರ ಜನ ಬರಲಿದ್ದಾರೆ. ಸಿಎಂ ರಾಜೀನಾಮೆ ಕೊಡುವವರೆಗೆ ವಿರಮಿಸಲ್ಲ. ಸಿಎಂಗೆ ಗೌರವ ಇದ್ದರೆ ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

ಬೆಂಗಳೂರು: ಸುದ್ದಿಗೋಷ್ಠಿ ನಡೆಸುವಾಗಲೇ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವ ಆಗಿರುವ ಘಟನೆ ಭಾನುವಾರ ನಡೆದಿದೆ. ಮುಡಾ ನಿವೇಶನ ಹಗರಣ ವಿರೋಧಿಸಿ ಆ.3ರಿಂದ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಜೆಡಿಎಸ್‌ ಕಚೇರಿಯಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಸಮನ್ವಯ ಸಭೆ ಏರ್ಪಡಿಸಲಾಗುತ್ತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ಮೂಗಿನಿಂದ ರಕ್ತಸ್ರಾವವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮೂಗಿನಿಂದ ರಕ್ತಸ್ರಾವವಾಗಿದೆ. ಈ ವೇಳೆ ಬಟ್ಟೆಯಿಂದ ಮೂಗನ್ನು ಎಚ್‌ಡಿಕೆ ಒರೆಸಿಕೊಂಡರು. ಅದರೂ ರಕ್ತಸ್ರಾವ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾದ ಹಿನ್ನೆಲೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ಮೂಗಿನಿಂದ ರಕ್ತಸ್ರಾವ ಹಿನ್ನೆಲೆಯಲ್ಲಿ ಬಿಳಿ ಶರ್ಟ್ ರಕ್ತಮಯವಾಗಿದೆ.

ಇದನ್ನೂ ಓದಿ | Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

ಈ ಬಗ್ಗೆ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಎರಡನೇ ಬಾರಿ ಈ ರೀತಿ ಆಗುತ್ತಿದೆ. ರಕ್ತ ಹೆಪ್ಪುಗಟ್ಟಬಾರದು ಎಂದು ಥಿನ್ನರ್‌ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಬಿಪಿ ನಾರ್ಮಲ್‌ ಇದೆ, ನಿತ್ಯ ಶುಗರ್‌ ಲೆವೆಲ್‌ ಚೆಕ್‌ ಮಾಡಿಕೊಳ್ಳುತ್ತಿದ್ದರು. ಪ್ರವಾಸ ಹೆಚ್ಚಾಗಿ ಓವರ್‌ ಹೀಟ್‌ನಿಂದ ರಕ್ತಸ್ರಾವ ಆಗಿರಬಹುದು ಎಂದು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Manu Bhaker : 2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ರ್ಯಾಲಿ ಫೈರ್ ಪಿಸ್ತೂಲ್ ಶೂಟರ್ ವಿಜಯ್ ಕುಮಾರ್ ಮತ್ತು 10 ಮೀಟರ್ ಏರ್ ರೈಫಲ್ ನಲ್ಲಿ ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ನಾರಂಗ್ ಇದೀಗ ಪ್ಯಾರಿಸ್ ತಂಡದ ಚೆಫ್ ಡಿ ಮಿಷನ್ ಆಗಿದ್ದಾರೆ.

VISTARANEWS.COM


on

Manu Bhaker
Koo

ನವದೆಹಲಿ: ಒಲಿಂಪಿಕ್ಸ್ ಪದಕ ಗೆದ್ದ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ (Manu Bhaker) ಭಾನುವಾರ ಪಾತ್ರರಾಗಿದ್ದಾರೆ. ಪ್ಯಾರಿಸ್: ಪ್ಯಾರಿಸ್​ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದು ಭಾರತಕ್ಕೆ ಹಾಲಿ ಕ್ರೀಡಾಕೂಟದಲ್ಲಿ ಮೊದಲ ಪದಕವಾಗಿದೆ. ಹೀಗಾಗಿ ಭಾರತದ ಸಂಭ್ರಮ ಹೆಚ್ಚಾಗಿದೆ. ಇದೇ ವೇಳೆ ಪದಕ ಗೆದ್ದ ಖುಷಿಯಲ್ಲಿರುವ ಭಾಕರ್​ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಹೆಚ್ಚಾಗಿ ನೆನಪಿಸಿಕೊಂಡಿರುವುದು ಹಿಂದೂಗಳ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು. ಅದರಲ್ಲೂ ಅದಲ್ಲಿರುವ ಕರ್ಮಫಲ ಸಿದ್ಧಾಂತವನ್ನು.

2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ರ್ಯಾಲಿ ಫೈರ್ ಪಿಸ್ತೂಲ್ ಶೂಟರ್ ವಿಜಯ್ ಕುಮಾರ್ ಮತ್ತು 10 ಮೀಟರ್ ಏರ್ ರೈಫಲ್ ನಲ್ಲಿ ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ನಾರಂಗ್ ಇದೀಗ ಪ್ಯಾರಿಸ್ ತಂಡದ ಚೆಫ್ ಡಿ ಮಿಷನ್ ಆಗಿದ್ದಾರೆ.

ಇದು ಭಾರತಕ್ಕೆ ಅನಿವಾರ್ಯ ದೀರ್ಘಕಾಲದ ಪದಕವಾಗಿತ್ತು. ಸಾಧನೆಯ ಹಾದಿಯಲ್ಲಿ ನಾನು ಕೇವಲ ನೆಪವಷ್ಟೇ. ಭಾರತ ಇನ್ನೂ ಹೆಚ್ಚಿನ ಪದಕಗಳಿಗೆ ಅರ್ಹವಾಗಿದೆ. ನಾವು ಈ ಬಾರಿ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಭಾವನೆ ಅತಿವಾಸ್ತವಿಕವಾಗಿದೆ. ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಕೊನೆಯ ಶಾಟ್ ವರೆಗೂ ನಾನು ಎಲ್ಲಾ ಶಕ್ತಿಯೊಂದಿಗೆ ಹೋರಾಡುತ್ತಿದ್ದೆ ಎಂದು ಮನು ಹೇಳಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಫೈನಲ್​​ನ ಕೊನೇ ಕ್ಷಣದ ಹೋರಾಟದ ಬಗ್ಗೆ ಕೇಳಿದ್ದಕ್ಕೆ, . “ಪ್ರಾಮಾಣಿಕವಾಗಿ ನನಗೆ ನೆರವಾಗಿದ್ದು ಭಗವದ್ಗೀತೆ. ನಾನು ಬಹಳಷ್ಟು ಬಾರಿ ಓದಿದ್ದೇನೆ, ಆದ್ದರಿಂದ ನನ್ನ ಮನಸ್ಸಿನಲ್ಲಿ ಅದೇ ಇತ್ತು ‘ನೀವು ಏನನ್ನು ಮಾಡಬೇಕೋ ಅದನ್ನು ಮಾಡಿ, ಫಲವನ್ನು ನನಗೆ ಬಿಟ್ಟು ಬಿಡಿ ಎಂಬ ಸಾರ ನೆನಪಾಗುತ್ತಿತ್ತು. ವಿಧಿಯನ್ನು ನೀವು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಎಂಬುದು, ಇನ್ನು ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಹೇಳುವ “ನೀವು ಕರ್ಮದ ಮೇಲೆ ಗಮನವಿಡಿ. ಫಲಿತಾಂಶದ ಮೇಲೆ ಅಲ್ಲ, ಉವಾಚ ನನ್ನ ತಲೆಯಲ್ಲಿ ಓಡುತ್ತಿತ್ತು ಎಂದು ಮನು ಹೇಳಿದ್ದಾರೆ,

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಿತು. ಮುಗಿದು ಹೋಗಿದ್ದು ಹೋಯಿತು. ನಾವು ವರ್ತಮಾನದ ಮೇಲೆ ಕೇಂದ್ರೀಕರಿಸೋಣ. ಈ ಪದಕವು ಯಾವಾಗಲೂ ತಂಡದ ಕೆಲಸವಾಗಿದೆ. ನಾನು ಅದನ್ನು ಮಾಡಲು ಒಂದು ನೆಪವಾಗಿದ್ದೆ ಎಂದು ಅವರು ಹೇಳಿದ್ಧಾರೆ.

Continue Reading

ಪ್ರಮುಖ ಸುದ್ದಿ

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

Womens Asia Cup : ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

VISTARANEWS.COM


on

Women's Asia Cup
Koo

ಪಲ್ಲೆಕೆಲೆ: ಫೈನಲ್ ಪಂದ್ಯದಲ್ಲಿ ವೈಫಲ್ಯ ಕಂಡ ಭಾರತ ಮಹಿಳೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದ್ದು, ಮಹಿಳೆಯರ ಏಷ್ಯಾ ಕಪ್​ (Womens Asia Cup) ಟ್ರೋಫಿ ಉಳಿಸಲು ವಿಫಲಗೊಂಡಿದೆ. ಕಳೆದ ಬಾರಿ ಭಾರತ ಚಾಂಪೊಯನ್ ಆಗಿತ್ತು, ಅಲ್ಲದೆ, ಈ ಬಾರಿಯೂ ತಂಡ ಉತ್ತಮವಾಗಿತ್ತು. ಆದರೆ, ಕಪ್ ಗೆಲ್ಲುವಲ್ಲಿ ಕೊನೇ ಕ್ಷಣದಲ್ಲಿ ಎಡವಿತು. ಇದೇ ವೇಳೆ ಚಾಮರಿ ಅಟ್ಟಪಟ್ಟು ನೇತೃತ್ವದ ಲಂಕಾ ವನಿತೆಯರು ಮೊದಲ ಬಾರಿಗೆ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಲಂಕಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಭಾರತ ತಂಡ ಹಾಲಿ ಆವೃತ್ತಿಯಲ್ಲೂ ಬಲಾಢ್ಯ ತಂಡವಾಗಿತ್ತು. ಈ ಹಿಂದಿನ ಎಂಟು ಆವೃತ್ತಿಗಳಲ್ಲಿ 7 ಟ್ರೋಫಿ ಗೆದ್ದಿತ್ತು. ಅಂತೆಯೇ 8ನೇ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅದಕ್ಕೆ ಲಂಕಾ ವನಿತೆಯರು ಅವಕಾಶ ಕೊಡಲಿಲ್ಲ. ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್​​ನಲ್ಲಿ ಪ್ರವೇಶಿಸಿದ್ದ ದ್ವೀಪರಾಷ್ಟ್ರ, ಕೊನೆಗೂ 6ನೇ ಪ್ರಯತ್ನದಲ್ಲಿ ಗೆಲುವಿನ ಕನಸು ನನಸಾಗಿಸಿಕೊಂಡಿದೆ.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಆರಂಭಿಕ ಹಿನ್ನಡೆ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಬೆಂಬಲವಾಗಿನಿಂತರು. ಹೀಗಾಗಿ ಎರಡನೇ ವಿಕೆಟ್​ಗೆ ಲಂಕಾ ತಂಡ 87 ರನ್ ಗಳಿಸಿತು. ಇದೇ ವೇಳೆ ಚಾಮರಿ ಅರ್ಧ ಶತಕ ಬಾರಿಸಿದರು.
43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 61 ರನ್ ಗಳಿಸಿದ್ದ ಚಾಮರಿ ಔಟಾದರೂ ಹರ್ಷಿತಾ ಗೆಲುವಿನ ಕಡೆಗೆ ಮುನ್ನುಗ್ಗಿದರು. ಹರ್ಮನ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ ಅರ್ಧಶತಕ ಪೂರೈಸಿದರು.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಮಂಧಾನ ಏಕಾಂಗಿ ಹೋರಾಟ

ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 44 ರನ್ ಬಂದರೂ ಶಫಾಲಿ ವರ್ಮಾ 16 ರನ್​ಗಳಿಗೆ ಆಟ ಮುಗಿಸಿದರು. ಫೈನಲ್​ಗೆ ಎಂಟ್ರಿ ಪಡೆದ ಉಮಾ ಚೆಟ್ರಿ 9 ರನ್​ಗೆ ನಿರ್ಗಮಿಸಿದರು. ಹರ್ಮನ್​ಪ್ರೀತ್​ ಕೌರ್​ (11) ಬೇಗನೆ ಔಟಾದ ಕಾರಣ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಬ್ರೇಕ್ ಬಿತ್ತು. ಸತತ ವಿಕೆಟ್​ ಪತನದ ಮಧ್ಯೆಯೂ ಮಂಧಾನ ಅರ್ಧಶತಕ ಸಿಡಿಸಿ ಆಸರೆಯಾದರು.

ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಲು ನೆರವಾದರು. ಜೆಮಿಮಾ ರೊಡ್ರಿಗಸ್ 29 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ ಅಬ್ಬರದ 30 ರನ್ ಕಲೆ ಹಾಕಿದರು. ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 1 ರನ್ ಗಳಿಸಿದರು.

Continue Reading

ಪ್ರಮುಖ ಸುದ್ದಿ

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

HD Kumaraswamy: ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾಗಿದೆ. ಈ ವೇಳೆ ಬಟ್ಟೆಯಿಂದ ಮೂಗನ್ನು ಒರೆಸಿಕೊಂಡರೂ ರಕ್ತಸ್ರಾವ ನಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಪುತ್ರ ನಿಖಿಲ್‌ ಕುಮಾರಸ್ವಾಮಿ ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು.

VISTARANEWS.COM


on

HD Kumaraswamy
Koo

ಬೆಂಗಳೂರು: ಸುದ್ದಿಗೋಷ್ಠಿ ನಡೆಸುವಾಗಲೇ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವ ಆಗಿರುವ ಘಟನೆ ಭಾನುವಾರ ನಡೆದಿದೆ. ಮುಡಾ ನಿವೇಶನ ಹಗರಣ ವಿರೋಧಿಸಿ ಆ.3ರಿಂದ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಜೆಡಿಎಸ್‌ ಕಚೇರಿಯಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಸಮನ್ವಯ ಸಭೆ ಏರ್ಪಡಿಸಲಾಗುತ್ತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ಮೂಗಿನಿಂದ ರಕ್ತಸ್ರಾವವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮೂಗಿನಿಂದ ರಕ್ತಸ್ರಾವವಾಗಿದೆ. ಈ ವೇಳೆ ಬಟ್ಟೆಯಿಂದ ಮೂಗನ್ನು ಎಚ್‌ಡಿಕೆ ಒರೆಸಿಕೊಂಡರು. ಅದರೂ ರಕ್ತಸ್ರಾವ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾದ ಹಿನ್ನೆಲೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ಮೂಗಿನಿಂದ ರಕ್ತಸ್ರಾವ ಹಿನ್ನೆಲೆಯಲ್ಲಿ ಬಿಳಿ ಶರ್ಟ್ ರಕ್ತಮಯವಾಗಿದೆ.

ಈ ಬಗ್ಗೆ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಎರಡನೇ ಬಾರಿ ಈ ರೀತಿ ಆಗುತ್ತಿದೆ. ರಕ್ತ ಹೆಪ್ಪುಗಟ್ಟಬಾರದು ಎಂದು ಥಿನ್ನರ್‌ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಬಿಪಿ ನಾರ್ಮಲ್‌ ಇದೆ, ನಿತ್ಯ ಶುಗರ್‌ ಲೆವೆಲ್‌ ಚೆಕ್‌ ಮಾಡಿಕೊಳ್ಳುತ್ತಿದ್ದರು. ಪ್ರವಾಸ ಹೆಚ್ಚಾಗಿ ಓವರ್‌ ಹೀಟ್‌ನಿಂದ ರಕ್ತಸ್ರಾವ ಆಗಿರಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

ಸದನದಲ್ಲಿ ಉತ್ತರ ಕೊಡದೆ ಸಿಎಂ ಪಲಾಯನ

ಇಂದು ಬಿಜೆಪಿ-ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಕೇಂದ್ರ ಸಚಿವರು ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಭೆ ಮಾಡಿದ್ದೇವೆ. ರಾಜ್ಯದಲ್ಲಿ ಜನರನ್ನು ಸುಳ್ಳು ಮಾತಿನ ಮೂಲಕ ದಾರಿ ತಪ್ಪಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ತಿಂಗಳಿಂದಲೇ ಇವರ ಭ್ರಷ್ಟಾಚಾರ ಆರಂಭವಾಯಿತು. ವರ್ಗಾವಣೆ ವಿಚಾರದಿಂದ ಭ್ರಷ್ಟಾಚಾರ ಆರಭವಾಗಿದೆ. ಸದನದ ಕಲಾಪ ಎದುರಿಸಲಾಗದೆ ಮಾಧ್ಯಮದ ಮೂಲಕ ಹೇಳಿಕೆ ಪ್ರಾರಂಭ ಮಾಡಿದ್ದಾರೆ. ವಿಧಾನಸಭೆ ಅಷ್ಟು ವರ್ಷದ ಅನುಭವ ಇರುವ ಸಿಎಂ, ವಿಧಾನಸಭೆಯಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ ಘಟನೆ ಎಂದೂ ನಡೆದಿರಲಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು.

HD Kumaraswamy
HD Kumaraswamy

ವಿಧಾನಸಭೆ, ವಿಧಾನಪರಿಷತ್‌ನಲ್ಲಿ ದಾಖಲೆ ಸಹಿತ ವಾಲ್ಮೀಕಿ ಹಗರಣ ಕುರಿತು ಮಾಹಿತಿ ನೀಡಲಾಗಿದೆ. ಆದರೆ, SC, ST ಸಮುದಾಯಕ್ಕೆ ಯಾವುದೇ ಸರ್ಕಾರ ಕೊಡದ ಭರವಸೆ ಕೊಟ್ಟು, ಪರಿಶಿಷ್ಟರ ಹಣವನ್ನೇ ಲೂಟಿ ಹೊಡೆಯಲಾಗುತ್ತಿದೆ. ಅದರ ನಾಯಕತ್ವ ಸಿದ್ದರಾಮಯ್ಯ ವಹಿಸಿದ್ದಾರೆ . ಮೊದಲ ಬಾರಿಗೆ ಉತ್ತರ ಕೊಡುವ ನೈತಿಕತೆ ಕಳೆದುಕೊಂಡಿದ್ದಾರೆ. ಯಾರೋ ಬರೆದುಕೊಟ್ಟ ಭಾಷಣ ಓದಿದ್ದಾರೆ. ಸಿಎಂ ಪತ್ನಿ 14 ಸೈಟಿಗೆ ನಮ್ಮ ತಕರಾರು ಇಲ್ಲ. ಇನ್ನೂ 50 ಸೈಟು ಖರೀದಿ ಮಾಡಲಿ. ಅವರವರ ಸಾಮರ್ಥ್ಯದ ಆಸ್ತಿ ಹೊಂದಲು ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಆ ಜಮೀನು ಯಾರಿಗೆ ಸೇರಿದ್ದು ಅನ್ನೋದು ಪ್ರಶ್ನೆ.. ಅಂತಿಮ ಅಧಿಸೂಚನೆಯಲ್ಲಿ 3 ಲಕ್ಷ ಹಣವನ್ನು ಕೋರ್ಟಿನಲ್ಲಿ ಸಂದಾಯ ಮಾಡಿದ್ದಾರೆ ಎಂದು ಎಚ್‌ಡಿಕೆ ತಿಳಿಸಿದರು.

Continue Reading
Advertisement
BJP-JDS Padayatra
ಕರ್ನಾಟಕ7 mins ago

BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

Manu Bhaker
ಪ್ರಮುಖ ಸುದ್ದಿ15 mins ago

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Women's Asia Cup
ಪ್ರಮುಖ ಸುದ್ದಿ39 mins ago

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

karnataka weather Forecast
ಮಳೆ1 hour ago

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

HD Kumaraswamy
ಪ್ರಮುಖ ಸುದ್ದಿ1 hour ago

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Decline of Vultures
ಆರೋಗ್ಯ2 hours ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ2 hours ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sugar Vs Jaggery In Tea
ಆರೋಗ್ಯ2 hours ago

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Manu Bhaker
ಪ್ರಮುಖ ಸುದ್ದಿ3 hours ago

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ6 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ7 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌