HD Kumaraswamy : ರಾಮ ಮಂದಿರ ರಾಜಕೀಯವಾದರೆ ಉಚಿತ ಗ್ಯಾರಂಟಿ ರಾಜಕೀಯ ಅಲ್ವಾ? ; HDK ಪ್ರಶ್ನೆ - Vistara News

ರಾಮ ಮಂದಿರ

HD Kumaraswamy : ರಾಮ ಮಂದಿರ ರಾಜಕೀಯವಾದರೆ ಉಚಿತ ಗ್ಯಾರಂಟಿ ರಾಜಕೀಯ ಅಲ್ವಾ? ; HDK ಪ್ರಶ್ನೆ

HD Kumaraswamy : ಅಯೋಧ್ಯೆ ವಿಚಾರದಲ್ಲಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಗ್ಯಾರಂಟಿಗಳ ವಿಷಯದಲ್ಲಿ ಮಾಡಿದ್ದೇನು? ರಾಜಕೀಯವೇ ಅಲ್ಲವೇ ಎಂದು ಕೇಳಿದ್ದಾರೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ.

VISTARANEWS.COM


on

HD Kumaraswamy Rama Mandir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ರಾಮ ಮಂದಿರ (Rama Mandir) ಕಟ್ಟಿದ್ದು ಜನರ ದೇಣಿಗೆಯ ಹಣದಿಂದ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಐದು ಗ್ಯಾರಂಟಿಗಳನ್ನು (Congress Guarantee) ಅನುಷ್ಠಾನಕ್ಕೆ ತಂದಿದ್ದು ಜನರ ತೆರಿಗೆ ಹಣದಿಂದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಅಯೋಧ್ಯೆ ವಿಚಾರದಲ್ಲಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಗ್ಯಾರಂಟಿಗಳ ವಿಷಯದಲ್ಲಿ ಮಾಡಿದ್ದೇನು? ರಾಜಕೀಯವನ್ನೇ ಮಾಡಿದರು, ಅಲ್ಲವೇ? ಎಂದರು.

ʻʻನಾನು ಕೂಡ ಹಿಂದೆ ಮಂದಿರಕ್ಕೆ ಹಣ ಸಂಗ್ರಹ ಮಾಡಿರುವ ಬಗ್ಗೆ ಲೆಕ್ಕ ಕೇಳಿದ್ದೇನೆ. ರಾಮನ ಬಗ್ಗೆ ನಂಬಿಕೆ ಇರಿಸಿಕೊಂಡಿರುವ ಕುಟುಂಬಗಳು ದೇಣಿಗೆ ಕೊಟ್ಟಿದ್ದಾರೆ. ಇವರು ರಾಜ್ಯದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಬೇಕಾದರೆ, ಅವುಗಳನ್ನು ಜಾರಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡಬಹುದಾ? ಅವರಿಗೂ ರಾಜ್ಯಕ್ಕೂ ಏನು ಸಂಬಂಧ? ಗ್ಯಾರಂಟಿಗಳ ಹಣ ಕಾಂಗ್ರೆಸ್ ಪಕ್ಷದ ಖಜಾನೆಯದ್ದಾ? ಅದು ಜನರ ತೆರಿಗೆ ಹಣ. ಜನರ ದುಡ್ಡಿನಲ್ಲಿ ಇವರು ರಾಜಕೀಯ ಮಾಡಬಹುದಾದರೆ, ಮೋದಿ ಅವರು ಮಾಡಬಾರದಾʼʼ ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಮೋದಿ ಮತ್ತೆ ಪ್ರಧಾನಿ ಆದರೆ ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಹತಾಶೆಯನ್ನು ಸೂಚಿಸುತ್ತದೆ. ಬಹುಶಃ ಖರ್ಗೆ ಅವರಿಗೆ ಕನಸಿನಲ್ಲಿ ಅಂಬೇಡ್ಕರ್ ಅವರು ಬಂದು ಹೇಳಿರಬೇಕು ಎಂದ ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.

ಇದನ್ನೂ ಓದಿ : Hanuman Flag : ನೀನೇ ಗಾಂಡು, ನೀನು Seedless: ಸಿ.ಟಿ ರವಿ, ಶಾಸಕ ನರೇಂದ್ರ ಸ್ವಾಮಿ ಮಧ್ಯೆ ಅವಾಚ್ಯ ವಾರ್‌

ತಾಕತ್ ಇದ್ದರೆ ಕಾಂತರಾಜು ವರದಿ ಸ್ವೀಕರಿಸಿ: ಸಿಎಂಗೆ ಸವಾಲ್‌

ಬೆಂಗಳೂರು: ಶೋಷಿತರ ಜಾಗೃತಿ ಸಮಾವೇಶ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈವರೆಗೆ ಮೀಸಲು ಸೌಲಭ್ಯವನ್ನು ಯಾರೆಲ್ಲಾ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ, ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಆಮೇಲೆ ಕಾಂತರಾಜು ವರದಿ, ಇನ್ನೊಂದು ವರದಿಯ ಬಗ್ಗೆ ಮಾತನಾಡಿ ಎಂದು ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದರು.

ಕಾಂತರಾಜು ವರದಿ ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ, ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದುಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ಯಾಕೆ ಆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ. ಯಾರು ಅಡ್ಡ ಇದಾರೆ ನಿಮಗೆ. ತಾಕತ್ತು ಇದ್ದರೆ ಆ ಕಾಂತರಾಜು ವರದಿ ಸ್ವೀಕರಿಸಿ ಜಾರಿ ಮಾಡಿ ಎಂದು ಕುಮಾರಸ್ವಾಮಿ ಅವರು ಸಿಎಂಗೆ ನೇರ ಸವಾಲು ಹಾಕಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಮ ಮಂದಿರ

Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

Ayodhya Ram mandir: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

VISTARANEWS.COM


on

By

Ayodhya Ram mandir
Koo

ಅಯೋಧ್ಯೆ: ಭಗವಾನ್ ಶ್ರೀರಾಮನ (sriram) ಜನ್ಮ ಸ್ಥಳವಾದ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ರಾಮಲಲ್ಲಾನ (ramlalla) ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಪ್ರತಿನಿತ್ಯ ಸುಮಾರು ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ದೇವಾಲಯ ಉದ್ಘಾಟನೆಯಾದ ಬಳಿಕ ಈವರೆಗೆ ಸುಮಾರು 1.5 ಕೋಟಿ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Theertha Kshetra Trust) ಪ್ರಧಾನ ಕಾರ್ಯದರ್ಶಿ (Principal Secretary) ಚಂಪತ್ ರಾಯ್‌ (Champat Rai), ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ಇದನ್ನೂ ಓದಿ: Ram Mandir : ಇಲ್ಲಿದೆ ನೋಡಿ ಬಾಲ ರಾಮನ ಕಣ್ಣಿಗೆ ಜೀವಕಳೆ ನೀಡಿದ್ದ ಬಂಗಾರದ ಉಳಿ, ಬೆಳ್ಳಿ ಸುತ್ತಿಗೆಯ ಚಿತ್ರ


ಮುಂದಿನ ಕೆಲಸ?

ಜನ್ಮಭೂಮಿ ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸುವುದಾಗಿ ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಘೋಷಿಸಿದರು. ಇದನ್ನು ‘ಪರ್ಕೋಟಾ’ ಎಂದು ಕರೆಯಲಾಗುತ್ತದೆ. ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದ ದೇಗುಲದ ನೆಲ ಮಹಡಿ ಮಾತ್ರ ಪೂರ್ಣಗೊಂಡಿದ್ದು, ಮೊದಲ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ ಎಂದು ರಾಯ್‌ ಹೇಳಿದರು.

ಹಲವು ಸಣ್ಣ ದೇಗುಲಗಳು

ರಾಮ ಮಂದಿರದ ಆವರಣದಲ್ಲಿ ಶಿವನಿಂದ ಹಿಡಿದು ಹನುಮಾನ್ ಗಢಿವರೆಗೆ ಆರು ಸಣ್ಣಸಣ್ಣ ದೇವಾಲಯಗಳನ್ನು ನಿರ್ಮಿಸಬೇಕಿದೆ. ಒಮ್ಮೆ ಪೂರ್ಣಗೊಂಡ ಅನಂತರ, ರಾಮ ಮಂದಿರದ ಆವರಣವು ಏಕಕಾಲಕ್ಕೆ 25,000 ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ರಾಯ್‌ ತಿಳಿಸಿದರು.


ಪರ್ಕೋಟಾ ವಿಶೇಷತೆ ಏನು?

ದೇವಾಲಯದ ಸುತ್ತ ನಿರ್ಮಿಸಲಾಗುವ ಪರ್ಕೋಟಾ ಬಹುಪಯೋಗಿಯಾಗಿದ್ದು, ಅಲ್ಲಿ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ಶಂಕರ, ಸೂರ್ಯ, ಹನುಮಾನ್, ಮಾ ಅನ್ನಪೂರ್ಣ, ಮಹರ್ಷಿ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ ಮತ್ತು ಅಗಸ್ತ್ಯ ರ ದೇವಾಲಯವನ್ನು ಆವರಣದಲ್ಲಿ ನಿರ್ಮಿಸಲಾಗುತ್ತದೆ. ನಿಶಾದ್ ರಾಜ್, ಮಾ ಶಬರಿ, ಮಾ ಅಹಲ್ಯಾ ಮತ್ತು ಜಟಾಯು ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದರು.

ದೇವಾಲಯದ ಆವರಣದಲ್ಲಿರುವ 600 ಕ್ಕೂ ಹೆಚ್ಚು ಗಿಡಗಳನ್ನು ಸಂರಕ್ಷಿಸಲಾಗಿದೆ. ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕವೂ ದೇವಾಲಯ ಆವರಣದಲ್ಲಿ ಇದೆ. ಈ ದೇವಾಲಯವು ಸ್ವತಃ ಸ್ವತಂತ್ರವಾಗಿರುತ್ತದೆ ಮತ್ತು ಅಯೋಧ್ಯೆಯ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ದೇವಾಲಯದ ಅಗತ್ಯವನ್ನು ಪೂರೈಸಲು ಯಾವುದೇ ಸಮಸ್ಯೆ, ಇಲ್ಲ ಎಂದು ತಿಳಿಸಿದರು.

ರಾಮ ನವಮಿ ಆಚರಣೆ

ರಾಮ ಮಂದಿರದಲ್ಲಿ ಏಪ್ರಿಲ್ 17ರಂದು ಅತ್ಯಂತ ವೈಭವದಿಂದ ರಾಮನ ಜನ್ಮ ದಿನವನ್ನು ಆಚರಿಸಲಾಯಿತು. ಭವ್ಯವಾದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅನಂತರ ಮೊದಲ ಬಾರಿಗೆ ರಾಮನಿಗೆ ‘ಸೂರ್ಯ ತಿಲಕ’ ವನ್ನು ಇಡಲಾಯಿತು. ದೇವಾಲಯವು ಆಗ 19 ಗಂಟೆಗಳ ಕಾಲ ತೆರೆದಿತ್ತು. ಆಹಾರಕ್ರಮಕ್ಕೆ 56 ಖಾದ್ಯಗಳನ್ನು ನೀಡಲಾಯಿತು ಎಂದು ಮಾಹಿತಿ ನೀಡಿದರು.

ನಾಗರ ಶೈಲಿ

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ರಾಮ ಜನ್ಮಭೂಮಿ ಮಂದಿರವು ದೇವಾಲಯದ ಪಟ್ಟಣದಲ್ಲಿ 2.7 ಎಕರೆ ಭೂಮಿಯಲ್ಲಿ 380 ಅಡಿ ಉದ್ದ , 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಐದು ಮಂಟಪಗಳಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪಗಳು ಸೇರಿವೆ. ಕಂಬ ಮತ್ತು ಗೋಡೆಗಳ ಮೇಲೆ ಹಿಂದೂ ದೇವಾನುದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಒಳಗೊಂಡಿದೆ.

Continue Reading

Latest

Surya Tilak: ರಾಮಲಲ್ಲಾನಿಗೆ ಸೂರ್ಯ ತಿಲಕ; ಇದರ ಹಿಂದಿದೆ ವಿಜ್ಞಾನಿಗಳ ಕೈಚಳಕ

Surya Tilak: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾನಿಗೆ ಸೂರ್ಯ ತಿಲಕವನ್ನು ಇಂದು ಇಡಲಾಗಿದೆ. ಇದರ ಹಿಂದೆ ವಿಜ್ಞಾನಿಗಳ ಪರಿಶ್ರಮವಿದೆ. ರಾಮ ಮಂದಿರ ಮಾತ್ರವಲ್ಲ ದೇಶದ ಇನ್ನು ಹಲವು ದೇಗುಲಗಳಲ್ಲಿ ದೇವರಿಗೆ ಸೂರ್ಯಾಭಿಷೇಕವನ್ನು ನಡೆಸಲಾಗುತ್ತದೆ.

VISTARANEWS.COM


on

By

Surya Tilak
Koo

ಉತ್ತರಪ್ರದೇಶ: ಜನವರಿಯಲ್ಲಿ ಉದ್ಘಾಟನೆಯಾದ ಅಯೋಧ್ಯೆ (ayodhya) ರಾಮ ಮಂದಿರದಲ್ಲಿ (ram mandir) ಪ್ರತಿಷ್ಠಾಪನೆಯಾಗಿರುವ ರಾಮ ಲಲ್ಲಾನ (ram lalla) ಜನ್ಮದಿನದವಾದ ರಾಮನವಮಿ (ram navami) ಪ್ರಯುಕ್ತ ಬುಧವಾರ ಮಧ್ಯಾಹ್ನ ಸೂರ್ಯ ತಿಲಕವನ್ನು (Surya Tilak) ಇಡಲಾಗಿದೆ. ದೇಶದ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದರು. ಇಶ್ವಾಕು ಕುಲದ ಭಗವಾನ್ ಶ್ರೀರಾಮನು ಸೂರ್ಯ ದೇವನ ವಂಶಸ್ಥರೆಂದು ನಂಬಲಾಗುತ್ತದೆ. ರಾಮನವಮಿ ಪ್ರಯುಕ್ತ ಭಗವಾನ್ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ರಾಮ್ ಲಲ್ಲಾನಿಗೆ ಸೂರ್ಯ ತಿಲಕ ಅಥವಾ ಸೂರ್ಯ ಅಭಿಷೇಕವನ್ನು ನಡೆಸಲಾಯಿತು. ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಕೆಲವು ನಿಮಿಷಗಳ ಕಾಲ ಬೆಳಗಿತ್ತು.

ಸೂರ್ಯ ತಿಲಕವಿಟ್ಟದ್ದು ಹೇಗೆ ?

ರಾಮಲಲ್ಲಾನಿಗೆ ಸೂರ್ಯ ತಿಲಕವಿಡಲು ಐಐಟಿ-ರೂರ್ಕಿಯ ವಿಜ್ಞಾನಿಗಳ ವಿಶೇಷ ತಂತ್ರಜ್ಞಾನವನ್ನು ಬಳಸಿದ್ದಾರೆ. ನಿರ್ದಿಷ್ಟ ಸಮಯದಲ್ಲಿ ರಾಮ್ ಲಲ್ಲಾನ ಹಣೆಯ ಮೇಲೆ ಸೂರ್ಯನ ಕಿರಣಗಳನ್ನು ನಿಖರವಾಗಿ ಬೀಳಲು ಉತ್ತಮ ಗುಣಮಟ್ಟದ ಕನ್ನಡಿ ಮತ್ತು ಮಸೂರಗಳನ್ನು ಹೊಂದಿರುವ ಉಪಕರಣವನ್ನು ಬಳಸಲಾಗಿದೆ. ಈ ಉಪಕರಣವು ಪ್ರತಿಫಲಿತ ಕನ್ನಡಿಗಳು ಮತ್ತು ಲೆನ್ಸ್‌ಗಳೊಂದಿಗೆ ಗೇರ್‌ಬಾಕ್ಸ್ ಜೋಡಿಸಲಾಗಿದೆ. ದೇವಳದ ಶಿಕಾರದ ಬಳಿ ಮೂರನೇ ಮಹಡಿಯಿಂದ ಸೂರ್ಯನ ಕಿರಣಗಳನ್ನು ನಿರ್ದಿಷ್ಟ ಸಮಯದಲ್ಲಿ ‘ಗರ್ಭಗೃಹ’ ದೊಳಗೆ ಇದು ಪ್ರತಿಫಲಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

ಚಂದ್ರನ ಕ್ಯಾಲೆಂಡರ್ ಅನ್ನು ಆಧರಿಸಿ ಪ್ರತಿ ವರ್ಷ ರಾಮನವಮಿಯಂದು ಸೂರ್ಯನ ಕಿರಣಗಳು ರಾಮನ ಹಣೆಗೆ ತಿಲಕವಿಡಲು ಸಹಾಯವಾಗಳು ಗೇರ್‌ಬಾಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿರುವ ಆಪ್ಟಿಕಲ್ ಪಥ, ಪೈಪಿಂಗ್‌ ಮತ್ತು ಟಿಪ್-ಟಿಲ್ಟ್‌ ಗಳು ಸುಧೀರ್ಘ ಬಾಳಿಕೆ ಬರಲು ಮತ್ತು ಕಡಿಮೆ ನಿರ್ವಹಣೆಗಾಗಿ ಸ್ಪ್ರಿಂಗ್‌ಗಳಿಲ್ಲದೆ ವಿನ್ಯಾಸಗೊಳಿಸಲಾಗಿದೆ.


ಎರಡು ಬಾರಿ ಪ್ರಯೋಗ

ರಾಮಲಲ್ಲಾನಿಗೆ ಸೂರ್ಯಾಭಿಷೇಕ ನಡೆಸಲು ವಿಜ್ಞಾನಿಗಳು ಎರಡು ಬಾರಿ ಏಪ್ರಿಲ್ 8 ಮತ್ತು 13ರಂದು ಸೂರ್ಯ ತಿಲಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ಪ್ರಯೋಗ ನಡೆಸಿದ್ದರು.

ಯಾರ ಪರಿಶ್ರಮ ?

ರಾಮ ಮಂದಿರದಲ್ಲಿ ರಾಮಲಲ್ಲಾನಿಗೆ ಸೂರ್ಯ ತಿಲಕವಿಡಲು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ತಾಂತ್ರಿಕ ಬೆಂಬಲ ನೀಡಿದ್ದು, ಬೆಂಗಳೂರು ಮೂಲದ ಕಂಪೆನಿಯೊಂದು ಆಪ್ಟಿಕಾ ಮಸೂರ ಮತ್ತು ಹಿತ್ತಾಳೆ ಟ್ಯೂಬ್‌ ಗಳನ್ನು ಒದಗಿಸಿತ್ತು.

ಸಿಬಿಆರ್ ಐ ವಿಜ್ಞಾನಿ ಡಾ. ಪ್ರದೀಪ್ ಚೌಹಾಣ್ ಅವರು ನೀಡಿರುವ ಮಾಹಿತಿಯಂತೆ ಇದು ಸಂಪೂರ್ಣವಾಗಿ ಸೂರ್ಯನದ್ದೇ ಕಿರಣ. ಈ ಕಾರ್ಯವಿಧಾನದಲ್ಲಿ ಯಾವುದೇ ವಿದ್ಯುತ್ ಅಥವಾ ಬ್ಯಾಟರಿ ಅಥವಾ ಕಬ್ಬಿಣವನ್ನು ಬಳಸಲಾಗುವುದಿಲ್ಲ ಎಂದು ಹೇಳಿದ್ದರು.

ಸಾಂಪ್ರದಾಯಿಕ ಭಾರತೀಯ ಮಿಶ್ರಲೋಹವಾದ ಪಂಚಧಾತುವನ್ನು ಸೂರ್ಯ ತಿಲಕ ಉಪಕರಣದಲ್ಲಿಯೂ ಬಳಸಲಾಗಿದೆ. ಇಸ್ರೋದ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್ ನೀಡಿರುವ ಮಾಹಿತಿ ಪ್ರಕಾರ ಸೂರ್ಯನ ಕಿರಣಗಳು ರಾಮ್ ಲಲ್ಲಾನ ಹಣೆಯನ್ನು ಬೆಳಗಿಸುವುದನ್ನು ಆರ್ಕಿಯೋ ಆಸ್ಟ್ರೊನಮಿ, ಮೆಟಾನಿಕ್ ಸೈಕಲ್ ಮತ್ತು ಅನಾಲೆಮ್ಮಾ ಖಚಿತಪಡಿಸುತ್ತದೆ.

ಅನಾಲೆಮ್ಮವು ಎಂಟು ಅಂಕೆಯ ವಕ್ರರೇಖೆಯಾಗಿದ್ದು ಅದು ಭೂಮಿಯ ಓರೆ ಮತ್ತು ಕಕ್ಷೆಯ ಕಾರಣದಿಂದ ವರ್ಷಕ್ಕೆ ಸೂರ್ಯನ ಬದಲಾಗುತ್ತಿರುವ ಸ್ಥಾನವನ್ನು ಟ್ರ್ಯಾಕ್ ಮಾಡುತ್ತದೆ. ಮೆಟೋನಿಕ್ ಚಕ್ರವು ಸುಮಾರು 19 ವರ್ಷಗಳ ಅವಧಿಯಾಗಿದ್ದು ರಾಮ ನವಮಿಯ ದಿನಾಂಕ ಮತ್ತು ಅದು ಬೀಳುವ ‘ತಿಥಿ’ ಒಟ್ಟಿಗೆ ಬರುವುದನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಪುರೋಹಿತ್.

ಹಲವು ದೇವಾಲಯಗಳಲ್ಲೂ ಇದೆ

ಗರ್ಭಗುಡಿಯ ದೇವರಿಗೆ ಸೂರ್ಯ ಅಭಿಷೇಕವನ್ನು ಕೇವಲ ರಾಮ ಮಂದಿರದಲ್ಲಿ ಮಾಡುತ್ತಿಲ್ಲ. ದೇಶದ ಹಲವಾರು ಜೈನ ಮತ್ತು ಹಿಂದೂ ದೇವಾಲಯಗಳಲ್ಲಿ ನಡೆಸಲಾಗುತ್ತದೆ.


ಕರ್ನಾಟಕದ ಬೆಂಗಳೂರಿನಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲೂ ಪ್ರತಿ ಮಕರ ಸಂಕ್ರಾಂತಿಯಂದು, ಸೂರ್ಯಕಿರಣಗಳು ನಂದಿಯ ಪ್ರತಿಮೆಯನ್ನು ಬೆಳಗಿ ಶಿವಲಿಂಗದ ಪಾದಗಳನ್ನು ಮುಟ್ಟಿ ಅಂತಿಮವಾಗಿ ಸಂಪೂರ್ಣ ಶಿವಲಿಂಗವನ್ನು ಆವರಿಸುತ್ತದೆ.

ತಮಿಳುನಾಡಿನಲ್ಲಿರುವ 11-12 ನೇ ಶತಮಾನದ ಸುರಿಯಾನಾರ್ ಕೋವಿಲ್ (ಸೂರ್ಯ) ದೇವಾಲಯದಲ್ಲಿ ಸೂರ್ಯನ ಬೆಳಕು ವರ್ಷದ ಕೆಲವು ಸಮಯ ದೇವಾಲಯದಲ್ಲಿರುವ ಸೂರ್ಯ, ಉಷಾದೇವಿ ಮತ್ತು ಪ್ರತ್ಯೂಷಾ ದೇವಿಯ ಬಿಂಬದ ಮೇಲೆ ಬೀಳುತ್ತದೆ.

ಮಧ್ಯಪ್ರದೇಶದ ಉನವ್ ಬಾಲಾಜಿ ಸೂರ್ಯ ದೇವಸ್ಥಾನದಲ್ಲಿ ದತಿಯಾದಲ್ಲಿ ಉತ್ಸವದ ವೇಳೆ ಮುಂಜಾನೆ ಸೂರ್ಯನ ಮೊದಲ ಕಿರಣಗಳು ನೇರವಾಗಿ ದೇವಾಲಯದ ಗರ್ಭಗುಡಿಯಲ್ಲಿರುವ ವಿಗ್ರಹದ ಮೇಲೆ ಬೀಳುತ್ತವೆ.

ಆಂಧ್ರಪ್ರದೇಶದ ನಾಗಲಾಪುರಂ ಜಿಲ್ಲೆಯಲ್ಲಿರುವ ವಿಷ್ಣುವಿನ ಮತ್ಸ್ಯ ಅವತಾರವನ್ನು ಪ್ರತಿಬಿಂಬಿಸುವ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ವರ್ಷದಲ್ಲಿ ಐದು ದಿನ ಸೂರ್ಯ ಪೂಜಾ ಮಹೋತ್ಸವವನ್ನು ಆಯೋಜಿಸುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ದೇವಾಲಯದೊಳಗಿನ ಗರ್ಭಗೃಹದಲ್ಲಿರುವ ಪ್ರಧಾನ ದೇವತೆಯ ಪಾದಗಳಿಂದ ಹೊಕ್ಕುಳವರೆಗೆ ಚಲಿಸುತ್ತದೆ.


ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರ್ಷದಲ್ಲಿ ಎರಡು ಬಾರಿ ಗರ್ಭಗೃಹವನ್ನು ಸೂರ್ಯನ ಕಿರಣಗಳು ನೇರವಾಗಿ ಗರುಡ ಮಂಟಪದ ಮೂಲಕ ಪ್ರವೇಶಿಸಿ ಮಹಾಲಕ್ಷ್ಮಿ ದೇವಿಯ ಪಾದಗಳ ಮೇಲೆ ಬೀಳುತ್ತವೆ. ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯನ ಸಂಪೂರ್ಣ ಬೆಳಕಿನಿಂದ ಇಡೀ ವಿಗ್ರಹವನ್ನು ಸ್ನಾನ ಮಾಡಿಸಲಾಗುತ್ತದೆ.

ಗುಜರಾತ್ ನಲ್ಲಿರುವ 11 ನೇ ಶತಮಾನದ ಮೊಧೇರಾ ಸೂರ್ಯ ದೇವಾಲಯದಲ್ಲಿ ವರ್ಷಕ್ಕೆ ಎರಡು ಬರಿ ಸೂರ್ಯಕಿರಣಗಳು ದೇವಾಲಯವನ್ನು ಪ್ರವೇಶಿಸಿ ಸೂರ್ಯ ದೇವರ ವಿಗ್ರಹದ ಮೇಲೆ ಬೀಳುತ್ತವೆ.

ಅಹಮದಾಬಾದ್‌ನ ಕೋಬಾ ಜೈನ ದೇವಾಲಯದಲ್ಲಿ ವಾರ್ಷಿಕವಾಗಿ ಸೂರ್ಯಾಭಿಷೇಕ ನಡೆಯುತ್ತದೆ. ವಾರ್ಷಿಕ ಸಮಾರಂಭದಲ್ಲಿ ಸೂರ್ಯಕಿರಣಗಳು ನೇರವಾಗಿ ಮಹಾವೀರಸ್ವಾಮಿಯ ಅಮೃತಶಿಲೆಯ ಪ್ರತಿಮೆಯ ಹಣೆಯ ಮೇಲೆ ಮೂರು ನಿಮಿಷಗಳ ಕಾಲ ಬೀಳುತ್ತವೆ.

ರಾಜಸ್ಥಾನದಲ್ಲಿ ಅರಾವಳಿಯಲ್ಲಿರುವ 15ನೇ ಶತಮಾನದ ರಣಕ್‌ಪುರ ದೇವಾಲಯದ ಗರ್ಭಗುಡಿಗೆ ಸೂರ್ಯನ ಬೆಳಕು ನೇರವಾಗಿ ಬರುವಂತೆ ಬಿಳಿ ಅಮೃತಶಿಲೆಗಳಿಂದ ವಿನ್ಯಾಸಗೊಳಿಸಲಾಗಿದೆ.


ಒಡಿಶಾದಲ್ಲಿರುವ 13 ನೇ ಶತಮಾನದ ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ಸೂರ್ಯೋದಯದ ವೇಳೆ ಸೂರ್ಯನ ಬೆಳಕು ದೇವಾಲಯಕ್ಕೆ ಸಂಪೂರ್ಣ ಸ್ನಾನ ಮಾಡಿಸುತ್ತದೆ. ದೇವಾಲಯದ ಮುಖ್ಯ ದ್ವಾರವನ್ನು ಸೂರ್ಯ ಕಿರಣಗಳು ಸ್ಪರ್ಶಿಸುತ್ತದೆ. ಅನಂತರ ಅದರ ವಿವಿಧ ದ್ವಾರಗಳ ಮೂಲಕ ಗರ್ಭಗೃಹದೊಳಗೆ ಪ್ರವೇಶಿಸುತ್ತದೆ.

Continue Reading

ಧಾರ್ಮಿಕ

Ram Navami: ನಾಳೆ ದೇಶಾದ್ಯಂತ ರಾಮ ನವಮಿ ಸಂಭ್ರಮ; ಈ ದಿನದ ಮಹತ್ವವೇನು ಗೊತ್ತೇ ?

Ram Navami: ಈಗ ಪ್ರತಿಯೊಬ್ಬರ ಮನದಲ್ಲೂ ರಾಮನಾಮ ಮೊಳಗುತ್ತಿದೆ. ಯಾಕೆಂದರೆ ರಾಮ ಜನ್ಮ ದಿನದ ಉತ್ಸವ ರಾಮ ನವಮಿ ಆಚರಣೆಗೆ ದೇಶವೇ ಸಜ್ಜಾಗಿದೆ. ದೇಶಾದ್ಯಂತ ಇರುವ ರಾಮ ಮಂದಿರಗಳು ಅಲಂಕಾರಗೊಂಡು ವೈಭವದಿಂದ ರಾಮನ ಹುಟ್ಟುಹಬ್ಬ ಆಚರಣೆಗೆ ಕಾಯುತ್ತಿದೆ.

VISTARANEWS.COM


on

By

Ram Navami
Koo

ಪ್ರತಿ ವರ್ಷದಂತೆ ಈ ಬಾರಿಯು ಭಗವಾನ್ ಶ್ರೀ ರಾಮನ (sriram) ಜನ್ಮ ದಿನವಾದ ರಾಮ ನವಮಿ (Ram Navami) ಮತ್ತೆ ಬಂದಿದೆ. ದೇಶಾದ್ಯಂತ ರಾಮ ನವಮಿ ಉತ್ಸವಕ್ಕೆ ರಾಮ ಭಕ್ತರು ಸಜ್ಜಾಗಿದ್ದಾರೆ. ರಾಮ ಮಂದಿರಗಳನ್ನೂ (ram mandir) ಸುಂದರವಾಗಿ ಅಲಂಕರಿಸಿ ಅತ್ಯಂತ ವೈಭವದಿಂದ ಉತ್ಸವವನ್ನು ಆಚರಿಸಲು ಸಿದ್ದತೆಗಳು ಭರದಿಂದ ಸಾಗುತ್ತಿದೆ.

ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

ರಾಮ ನವಮಿ ಆಚರಣೆ ಯಾವಾಗ?

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದಾನೆ. ಹೀಗಾಗಿ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಬರುವ ಏಪ್ರಿಲ್ 17 ಬುಧವಾರದಂದು ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Ram Mandir : ರಾಮನವಮಿಯಂದು ವಿತರಿಸಲು ಅಯೋಧ್ಯೆಗೆ 1,11,111 ಕೆ.ಜಿ ಲಡ್ಡು ಕಳುಹಿಸಿದ ರಾಮಭಕ್ತರು

ರಾಮ ನವಮಿ ದಿನ ಮಧ್ಯಾಹ್ನ ಗಂಟೆ 11.03 ರಿಂದ 1.38 ವಿಶೇಷವೆಂದು ಪರಿಗಣಿಸಲಾಗಿದೆ. ರಾಮ ನವಮಿ ತಿಥಿಯು ಏಪ್ರಿಲ್ 16ರಂದು ಬೆಳಗ್ಗೆ 1.23ಕ್ಕೆ ಪ್ರಾರಂಭವಾಗಿ ಏಪ್ರಿಲ್ 17ರಂದು ರಾತ್ರಿ 3.14 ಕ್ಕೆ ಮುಕ್ತಾಯವಾಗುತ್ತದೆ.


ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ.

ರಾಮ ನವಮಿ ಆಚರಣೆ ಏಕೆ ?

ಪ್ರಪಂಚದಾದ್ಯಂತದ ಹಿಂದೂಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ರಾಮ ನವಮಿಯು ಧರ್ಮ ಅಥವಾ ಸದಾಚಾರದ ನಿರಂತರ ಮೌಲ್ಯಗಳನ್ನು ಗೌರವಿಸುವ ಆಚರಣೆಯಾಗಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಇದು ಸೂಚಿಸುತ್ತದೆ. ಭಗವಾನ್ ರಾಮನ ಕರ್ತವ್ಯ, ಗೌರವ ಮತ್ತು ತ್ಯಾಗದ ಉದಾಹರಣೆಯು ಜನರಲ್ಲಿ ನೈತಿಕ ತತ್ತ್ವ ಗಳನ್ನು ಸಂರಕ್ಷಿಸಲು ಮತ್ತು ಸದ್ಗುಣಶೀಲ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.


ಹೇಗೆ ಆಚರಣೆ ?

ರಾಮ ನವಮಿಯನ್ನು ಭಾರತದಲ್ಲಿ ಜನರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಆಚರಿಸುತ್ತಾರೆ. ಭಗವಾನ್ ರಾಮನ ಸಣ್ಣ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸಲಾಗುತ್ತದೆ. ಮನೆ ಬಾಗಿಲಲ್ಲಿ ರಂಗೋಲಿಗಳನ್ನು ಬರೆಯಲಾಗುತ್ತದೆ. ಭಗವಾನ್ ರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪವಾಸ, ಮೆರವಣಿಗೆ, ಮಹಾಕಾವ್ಯ ರಾಮಾಯಣ ಪಠಿಸುವುದು ಮತ್ತು ಕೇಳುವುದು, ಹವನಗಳಂತ ವಿವಿಧ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ರಾಮ ನವಮಿಯು ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲ ಸಮುದಾಯಗಳು ಏಕತೆ ಮತ್ತು ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ.


ಅಯೋಧ್ಯೆಯತ್ತ ಎಲ್ಲರ ಚಿತ್ತ

ಉತ್ತರಪ್ರದೇಶದ ಅಯೋಧ್ಯೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ತಯಾರಿಗಳು ನಡೆದಿದ್ದು, ವಿಶ್ವದ ಗಮನ ಸೆಳೆದಿದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

Ram Navami 2024: ರಾಮ ನವಮಿಯನ್ನು ವಿಶೇಷವಾಗಿ ಆಚರಿಸುವ ಟಾಪ್‌ 5 ಸ್ಥಳಗಳಿವು

Ram Navami 2024: ರಾಮ ನವಮಿ ಎಂಬ ಹೆಸರು ಕೇಳುತ್ತಲೇ ಮನಸ್ಸಿನಲ್ಲಿ ಸಡಗರ ತುಂಬಿ ತುಳುಕುತ್ತದೆ. ಹಬ್ಬದ ತಯಾರಿ ಈಗಾಗಲೇ ಜೋರಾಗಿ ನಡೆದಿದೆ. ದೇಶದ ಕೆಲವು ಭಾಗಗಳಲ್ಲಿ ರಾಮ ನವಮಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಆ ಸ್ಥಳಗಳು ಯಾವುವು? ಅವುಗಳ ವಿಶೇಷತೆ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Rama Navami
Koo

ಬೆಂಗಳೂರು: ರಾಮ ನವಮಿಯನ್ನು (Rama Navami) ಶ್ರೀರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ರಾಜ ದಶರಥ ಮತ್ತು ರಾಣಿ ಕೌಸಲ್ಯ ದೇವಿಯ ಪುತ್ರನಾಗಿ ಶ್ರೀವಿಷ್ಣುವು ಶ್ರೀರಾಮನ ಅವತಾರದಲ್ಲಿ ದುಷ್ಟ ರಾವಣನನ್ನು ಸಂಹಾರ ಮಾಡಲು ಈ ದಿನ ಭೂಮಿಯ ಮೇಲೆ ಜನ್ಮ ತಾಳಿದನು ಎಂದು ನಂಬಲಾಗಿದೆ. ಹಾಗಾಗಿ ಏಪ್ರಿಲ್ 17ರಂದು ಭಾರತದಾದ್ಯಂತ ರಾಮನವಮಿಯನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಆದರೆ ದೇಶದ ಈ ಕೆಲವು ಸ್ಥಳಗಳಲ್ಲಿ ರಾಮನವಮಿಯನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಆ ಸ್ಥಳಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಅಯೋಧ್ಯೆ

ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದೆ. ಇಲ್ಲಿ ರಾಮ ನವಮಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಅಯೋಧ್ಯೆ ಧಾಮದಲ್ಲಿ ರಾಮನವಮಿ ಮೇಳವನ್ನು ನಡೆಸಲಾಗುತ್ತಿದ್ದು, ಇದು ಸುಮಾರು 25 ಲಕ್ಷ ಭಕ್ತರನ್ನು ಸೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಜೊತೆಗೆ ಹನುಮಾನ್ ಗಢಿ ಮತ್ತು ಕನಕ ಭವನದಂತಹ ಇತರ ದೇವಾಲಯಗಳಿಗೂ ನೀವು ಭೇಟಿ ನೀಡಬಹುದು. ರಾಮ ಮಂದಿರ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬಿಹಾರದ ಸೀತಾ ಮಢಿ

ಸೀತಾ ಮಾತೆಯ ಜನ್ಮ ಸ್ಥಳವಾಗಿ ಪೂಜೆ ಮಾಡಲಾಗುತ್ತಿರುವ ಬಿಹಾರದ ಸೀತಾ ಮಢಿಯು ರಾಮಭಕ್ತರಿಗೆ ರಾಮ ನವಮಿಯನ್ನು ಆಚರಿಸಲು ಇರುವ ವಿಶೇಷ ಸ್ಥಳವಾಗಿದೆ. ಇಲ್ಲಿನ ಜಾನಕಿ ಮಂದಿರದಲ್ಲಿ ರಾಮನವಮಿಯನ್ನು ಬಹಳ ವಿಶೇಷವಾಗಿ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದಿನ ಮಂದಿರವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ.

ತೆಲಂಗಾಣದ ಭದ್ರಾಚಲಂ

‘ದಕ್ಷಿಣದ ಅಯೋಧ್ಯೆ’ ಎಂದು ಕರೆಯಲ್ಪಡುವ ತೆಲಂಗಾಣದ ಭದ್ರಾಚಲಂನಲ್ಲಿರುವ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ರಾಮನವಮಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿ ರಾಮ ನವಮಿಯನ್ನು ರಾಮನು ಸೀತಾಮಾತೆಯನ್ನು ವಿವಾಹವಾದ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ಈ ದಿನ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಹಾಗೆಯೇ ಸಂಪ್ರದಾಯದ ಭಾಗವಾಗಿ ದೈವಿಕ ದಂಪತಿಗಳಿಗೆ ವಸ್ತ್ರಗಳು ಮತ್ತು ಮುತ್ಯಾಲ ತಾಳಂಬ್ರಲು ನೀಡಲಾಗುತ್ತದೆ. ಈ ದಿನ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಪ್ರವಚನಗಳು ಮತ್ತು ದೇವತೆಗಳ ಭವ್ಯವಾದ ಮೆರವಣಿಗೆ ನಡೆಯುತ್ತದೆ.

ತಮಿಳುನಾಡಿನ ರಾಮೇಶ್ವರಂ

ರಾಮೇಶ್ವರಂನಲ್ಲಿ ರಾವಣನಿಂದ ಸೀತೆಯನ್ನು ರಕ್ಷಿಸಲು ರಾಮನು ಶ್ರೀಲಂಕಾವನ್ನು ತಲುಪಲು ಸೇತುವೆಯನ್ನು ನಿರ್ಮಿಸಿದನ್ನು ನಂಬಲಾಗಿದೆ. ಇಲ್ಲಿನ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ರಾವಣನನ್ನು ಕೊಂದ ಪಾಪ ವಿಮೋಚನೆಗಾಗಿ ರಾಮನು ಶಿವನನ್ನು ಪೂಜಿಸಿದ ಸ್ಥಳ ಎನ್ನಲಾಗುತ್ತದೆ.

ಇದನ್ನೂ ಓದಿ: Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

ತಮಿಳುನಾಡಿನ ಕೊಯಮತ್ತೂರು

ಇಲ್ಲಿನ ಅರುಲ್ಮಿಗು ಕೋದಂಡರಾಮರ ದೇವಸ್ಥಾನದಲ್ಲಿ ಬೆಳಗ್ಗೆ ಸೂರ್ಯದೇವನಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತ ರಾಮನವಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ಅಂದು ರಾಮಾಯಣ ಮತ್ತು ರಾಮಚರಿತಮಾನಸದಂತಹ ಪವಿತ್ರ ಗ್ರಂಥಗಳ ಪಠಣಗಳು, ಉತ್ಸವವನ್ನು ಒಳಗೊಂಡ ಮೆರವಣಿಗೆ ಇತ್ಯಾದಿ ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ. ಹಾಗೆಯೇ ಭಕ್ತರಿಗೆ ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ಧಾರಾಳವಾಗಿ ವಿತರಿಸಲಾಗುತ್ತದೆ.

Continue Reading
Advertisement
Viral News
ವೈರಲ್ ನ್ಯೂಸ್3 mins ago

Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

Yogi Adityanath
ದೇಶ23 mins ago

ನಾವೇನು ಫ್ರಿಡ್ಜ್‌ನಲ್ಲಿ ಇಡಲು ಅಣುಬಾಂಬ್‌ ತಯಾರಿಸಿಲ್ಲ; ಅಯ್ಯರ್‌ ‘ಪಾಕ್‌’ ಹೇಳಿಕೆಗೆ ಯೋಗಿ ಖಡಕ್‌ ಉತ್ತರ

Dolly Dhananjay Koti Movie Kannada First song will out
ಸ್ಯಾಂಡಲ್ ವುಡ್25 mins ago

Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

esim cyber safety column
ಅಂಕಣ44 mins ago

ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Nijjar Killing Case
ವಿದೇಶ56 mins ago

Nijjar Killing Case: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ; ನಾಲ್ಕನೇ ಆರೋಪಿ ಅರೆಸ್ಟ್‌

HD Revanna
ಪ್ರಮುಖ ಸುದ್ದಿ57 mins ago

HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

Maggi Tragedy
ದೇಶ2 hours ago

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Viral News
ವೈರಲ್ ನ್ಯೂಸ್2 hours ago

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Morning Tips
ಲೈಫ್‌ಸ್ಟೈಲ್3 hours ago

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

Karnataka Weather Forecast
ಮಳೆ3 hours ago

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು19 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌