Bigg Boss OTT 2: ಕೇವಲ ಎರಡು ವಾರದಲ್ಲಿ 400 ಕೋಟಿ ನಿಮಿಷ ವೀಕ್ಷಣೆ ಕಂಡ ಬಿಗ್ ಬಾಸ್ ಒಟಿಟಿ! - Vistara News

ಬಿಗ್ ಬಾಸ್

Bigg Boss OTT 2: ಕೇವಲ ಎರಡು ವಾರದಲ್ಲಿ 400 ಕೋಟಿ ನಿಮಿಷ ವೀಕ್ಷಣೆ ಕಂಡ ಬಿಗ್ ಬಾಸ್ ಒಟಿಟಿ!

Bigg Boss OTT 2: ಸಲ್ಮಾನ್ ಖಾನ್‌ ವಾರಕ್ಕೆ ಎರಡು ಬಾರಿ, ವಾರಾಂತ್ಯದ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ವಾರವಿಡೀ ಸ್ಪರ್ಧಿಗಳ ನಡವಳಿಕೆಯ ಬಗ್ಗೆ ಮಾತನಾಡಲಿದ್ದಾರೆ.

VISTARANEWS.COM


on

400 crore minutes watchedBigg Boss OTT 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಸೀಸನ್‌ 2ಅನ್ನು (Bigg Boss OTT 2) ಇನ್ನೂ 15 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಇತ್ತೀಚಿನ ಸಂಚಿಕೆಯಲ್ಲಿ ಹೋಸ್ಟ್‌ ಸಲ್ಮಾನ್ ಖಾನ್‌ ಖಚಿತಪಡಿಸಿದ್ದಾರೆ. ಸಲ್ಮಾನ್ ಖಾನ್‌ ವಾರಕ್ಕೆ ಎರಡು ಬಾರಿ, ವಾರಾಂತ್ಯದ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ವಾರವಿಡೀ ಸ್ಪರ್ಧಿಗಳ ನಡವಳಿಕೆಯ ಬಗ್ಗೆ ಮಾತನಾಡಲಿದ್ದಾರೆ. ಅಷ್ಟೇ ಅಲ್ಲದೇ ಎರಡು ವಾರಗಳಲ್ಲಿ 400 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ ಎಂತಲೂ ಬಹಿರಂಗಪಡಿಸಿದ್ದಾರೆ.

ಬಿಗ್ ಬಾಸ್ OTT 2

ಜುಲೈ 8ರಂದು ಸಂಚಿಕೆಯಲ್ಲಿ, ಸಲ್ಮಾನ್ ಖಾನ್ ಅವರು ಸ್ಪರ್ಧಿಗಳ ಕುರಿತು ಮಾತನಾಡಿದರು. ಸ್ಫರ್ಧಿಗಳಿಗೆ ನಿಮ್ಮ ಸಂಪೂರ್ಣ ವೃತ್ತಿಜೀವನದಲ್ಲಿ ಪ್ರೇಕ್ಷಕರು ನೋಡುವುದಕ್ಕಿಂತ ಹೆಚ್ಚಿನ ಸಮಯವನ್ನು ಈ ಶೋನಲ್ಲಿ ನಿಮ್ಮನ್ನು ನೋಡುತ್ತಿದ್ದಾರೆ ಎಂದು ಹೇಳಿದರು. “ಆರು ವಾರಗಳು ಅಥವಾ ಎಂಟು ವಾರಗಳವರೆಗೆ ಶೋ ವಿಸ್ತರಿಸಬಹುದು. ಅದರರ್ಥ ಏನು? ಅಂದರೆ ಪ್ರದರ್ಶನಕ್ಕೆ ಎರಡು ವಾರಗಳ ವಿಸ್ತರಣೆ ಸಿಕ್ಕಿದೆ. ಅಂದರೆ ಜನರು ಶೋವನ್ನು ಪ್ರೀತಿಸುತ್ತಿದ್ದಾರೆ. ಕೇವಲ ಎರಡು ವಾರಗಳಲ್ಲಿ 400 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ. ನಿಸ್ಸಂಶಯವಾಗಿ, ಬಿಗ್ ಬಾಸ್ ಒಟಿಟಿ ಸೀಸನ್‌ 2ಅನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದರು.

ಸಲ್ಮಾನ್‌ ಮಾತನಾಡಿ ʻʻʻಜನರು ಮತ್ತಷ್ಟು ನಿಮ್ಮನ್ನು ಪ್ರೀತಿಸಿಬೇಕೆಂದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ಕೆಲಸ ನೀವೆ ಮಾಡಬೇಕು, ಬೇರೆಯವರಲ್ಲʼʼ ಎಂದರು.

ಇದನ್ನೂ ಓದಿ: Bigg Boss OTT season 2: ʻಹಿಂದಿ ಬಿಗ್‌ ಬಾಸ್‌ ಒಟಿಟಿ 2ನೇʼ ಸೀಸನ್‌ ಹಾಸ್ಟ್‌ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌; ಪ್ರೊಮೊ ಇಲ್ಲಿದೆ!

ಸಿಗರೇಟ್‌ ಸೇದುತ್ತಲೇ ಬಿಗ್‌ಬಾಸ್‌ ಶೋ ನಡೆಸಿದ ಸಲ್ಮಾನ್‌ ಖಾನ್

ಬಿಗ್‌ ಬಾಸ್‌ ಒಟಿಟಿ 2 ಶೋನ ಶನಿವಾರದ ‘ವೀಕೆಂಡ್‌ ಕಾ ವಾರ್’‌ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್‌ ಖಾನ್‌ ಅವರು ವೇದಿಕೆ ಮೇಲೆ ಕೈಯಲ್ಲಿ ಸಿಗರೇಟ್‌ ಹಿಡಿದು ಮಾತನಾಡುತ್ತಿರುವ ಫೋಟೊ ಲಭ್ಯವಾಗಿದೆ. Redditಗೆ ಮೊದಲು ಫೋಟೊ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್‌ ಆಗಿದೆ. ದೇಶಾದ್ಯಂತ ಲಕ್ಷಾಂತರ ಜನರು ವೀಕ್ಷಿಸುವ ಶೋನಲ್ಲಿ ಸಲ್ಮಾನ್‌ ಖಾನ್‌ ಅವರು ಸಿಗರೇಟ್‌ ಹಿಡಿದು ಕಾಣಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

“ಕಳೆದ ವಾರವಷ್ಟೇ, ಟಿವಿ ಕಾರ್ಯಕ್ರಮದಲ್ಲಿ ಕಿಸ್‌ ಮಾಡುವುದು ನಮ್ಮ ಸಂಸ್ಕೃತಿಯ ವಿರುದ್ಧವಾಗಿದೆ ಎಂಬುದಾಗಿ ಸ್ಪರ್ಧಾಳುಗಳಿಗೆ ಸಲ್ಮಾನ್‌ ಖಾನ್‌ ಪಾಠ ಮಾಡಿದ್ದರು. ಈಗ ನೋಡಿದರೆ ಅವರೇ ಇಂತಹ ವರ್ತನೆ ತೋರಿದ್ದಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಸಲ್ಮಾನ್‌ ಖಾನ್‌ ಅವರದ್ದು ಹಿಪೋಕ್ರಸಿಯ ವರ್ತನೆ. ಅವರು ಯಾರಿಗೆ ಬೋಧನೆ ಮಾಡಿದ್ದಾರೋ, ಅವರ ಎದುರಾದರೂ ಸಭ್ಯವಾಗಿ ವರ್ತಿಸಬೇಕಿತ್ತು” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲ್ಮಾನ್‌ ಖಾನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

Sangeetha Sringeri: ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರು ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು.

VISTARANEWS.COM


on

Sangeetha Sringeri Wore Lioness Logo On Her Belt
Koo
ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ (Sangeetha Sringeri) ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಲವು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಅವರ ಡ್ರೆಸ್ ಹಾಗೂ ಬೆಲ್ಟ್ ಪ್ರಮುಖ ಹೈಲೈಟ್‌.

ಸಂಗೀತಾ ಶೃಂಗೇರಿ ಅವರ ಬೆಲ್ಟ್​ ಮೇಲೆ ಸಿಂಹಿಣಿಯ ಲೋಗೊ ಇದೆ. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರ ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು. ಹೀಗಾಗಿ ಈ ರೀತಿ ಪೋಸ್‌ ಕೊಟ್ಟಿದ್ದಾರೆ ಸಂಗೀತಾ. ʼ

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​. ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದರು.
Continue Reading

ಕಿರುತೆರೆ

Drone Prathap: ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

Drone Prathap: ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

VISTARANEWS.COM


on

Drone Prathap Special Gift For sangeetha sringeri Birthday
Koo

ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​.ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಗೀತಾ ಅವರು ಪ್ರತಾಪ್‌ ಅವರಿಗೆ ಆರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದಾರೆ. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Elvish Yadav: ಐಷಾರಾಮಿ ದುಬಾರಿ ಕಾರು ಖರೀದಿಸಿದ  ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌!

Elvish Yadav: ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

VISTARANEWS.COM


on

Elvish Yadav
Koo

ಬೆಂಗಳೂರು: ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಹೊಂದಿದ್ದಾರೆ. ಬಿಗ್‌ ಬಾಸ್‌ (Bigg Boss OTT 2) ಮೂಲಕವೇ ಜನಪ್ರೀಯತೆ ಪಡೆದ ಎಲ್ವಿಶ್ ಯಾದವ್ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ . ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿಯಲ್ಲಿ ಇವೆ. ಇದೀಗ ಎಲ್ವಿಶ್‌ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮರ್ಸಿಡಿಸ್‌ ಗ್ವ್ಯಾಗನ್‌ G350 D (Mercedes G Wagon) ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂ. ಮರ್ಸಿಡಿಸ್‌ ಗ್ವ್ಯಾಗನ್‌ G350 D ಬಾಕ್ಸಿ ಸ್ಟೈಲಿಂಗ್‌ನಿಂದ ಕೂಡಿದೆ.

ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

ಏನಿದು ಪ್ರಕರಣ?

ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿತ್ತು. ನಂತರ ಎಲ್ವಿಶ್‌ಗೆ ಗೌತಮ್ ಬುದ್ ನಗರ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನೀಡಿತು. ಮಾರ್ಚ್ 17 ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆ ಬಳಿಕ ಗುರುಗ್ರಾಮ್ ನ್ಯಾಯಾಲಯದಿಂದ ಜಾಮೀನು ಪಡೆದರು. ಎರಡು ಜಾಮೀನು ಪಡೆದ ಬಳಿಕ ಇದೀಗ ರಿಲ್ಯಾಕ್ಸ್‌ ಆಗಿದ್ದಾರೆ ಎಲ್ವಿಶ್‌.

ಇದನ್ನೂ ಓದಿ: Elvish Yadav: ಎರಡು ಜಾಮೀನು ಪಡೆದ ಬಳಿಕ ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ ಟೆಂಪಲ್ ರನ್‌!

ಜಾಮೀನು ಪಡೆದ ನಂತರ, ಎಲ್ವಿಶ್ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದರು, “ಒಂದು ವಾರ ನಿಸ್ಸಂದೇಹವಾಗಿ ಕಳೆದುಹೋಯಿತು. ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು. ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ. ನನ್ನನ್ನು ಬೆಂಬಲಿಸಿದವರೆಲ್ಲರೂ ನನ್ನನ್ನು ಬೆಂಬಲಿಸಲಿಲ್ಲ, ನನ್ನ ಬಗ್ಗೆ ಕೆಟ್ಟದಾಗಿ ಹಾಗೂ ಚೆನ್ನಾಗಿ ಮಾತನಾಡಿದವರೆಲ್ಲರಿಗೂ, ಧನ್ಯವಾದಗಳು. ನಾನು ಎಲ್ಲರಿಗೂ ಧನ್ಯವಾದ ಮಾತ್ರ ಹೇಳಬಲ್ಲೆ. ನಾನು ನನ್ನ ಕೆಲಸಕ್ಕೆ ಮತ್ತೆ ಮರಳಿದ್ದೇನೆʼʼ ಎಂದು ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Tanisha Kuppanda: ತನಿಷಾಳ ಕನಸು ನನಸಾಗಿದೆ, ಹೊಸ ಬ್ಯುಸಿನೆಸ್‌ ಸಕ್ಸೆಸ್‌ ಆಗಲಿ ಎಂದು ಆಶಿಸಿದ ಕಾರ್ತಿಕ್‌!

Tanisha Kuppanda: ʻಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

VISTARANEWS.COM


on

Tanisha Kuppanda with karthik
Koo

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಅವರು ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್​ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಆದರೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.

ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

ಇದು ಮಾ. 29ರಂದು ಉದ್ಘಾಟನೆಯಾಗಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾಗೇ ಸೀಸನ್‌ 10ರ ವಿನ್ನರ್‌, ತನಿಷಾ ಅವರ ಬೆಸ್ಟ್‌ ಫ್ರೆಂಡ್‌ ಕಾರ್ತಿಕ್‌ ಮಹೇಶ್‌ ಸಹ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ!

ಕಾರ್ತಿಕ್‌ ಮಹೇಶ್‌ ಈ ಬಗ್ಗೆ ಇನ್‌ಸ್ಟಾ ಪೋಸ್ಟ್‌ ಮಾಡಿ ʻʻಬಿಗ್ ಬಾಸ್ ಮನೆಯಲ್ಲಿ ತನಿಶಾ ತನ್ನ ಕನಸಿನ ಬಗ್ಗೆ ಬಹಳ ಉತ್ಸುಕಳಾಗಿ ಹೇಳುತ್ತಿದ್ದಾಗ ಆಲಿಸಿದ್ದೆ. ಇಂದು ಗೆಳತಿ ತನಿಷಾಳ ಕನಸು ನನಸಾಗಿದೆ. ನಿನ್ನ ಮುಂದಿನ ಎಲ್ಲಾ ಕೆಲಸಗಳು ಯಶಸ್ವಿಯಾಗಲಿ ಎಂದು ಪ್ರೀತಿಯಿಂದ ಆಶಿಸುವೆʼʼಎಂದು ಬರೆದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

Continue Reading
Advertisement
bhavani revanna SIT team
ಪ್ರಮುಖ ಸುದ್ದಿ14 mins ago

Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

Valmiki Corporation Scam
ಪ್ರಮುಖ ಸುದ್ದಿ17 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ ಫಿಕ್ಸ್; ನಾಗೇಂದ್ರ ವಿರುದ್ಧ ಕ್ರಮಕ್ಕೆ ಖರ್ಗೆ ಸೂಚನೆ

Assault Case
ಬೆಳಗಾವಿ43 mins ago

Assault Case : ಮಾರಾಮಾರಿಯಲ್ಲಿ ತಂದೆ ಕಿವಿ ಕಟ್‌; ಚಾಲಕ ಇಲ್ಲದ್ದಕ್ಕೆ ತಾನೇ ಆಂಬ್ಯುಲೆನ್ಸ್‌ ಓಡಿಸಿ ಆಸ್ಪತ್ರೆಗೆ ಕರೆತಂದ ಮಗ

Actor Jaggesh talk about body shame
ಸ್ಯಾಂಡಲ್ ವುಡ್1 hour ago

Actor Jaggesh: ಬಾಲ್ಯದಲ್ಲಿ ನನ್ನನ್ನು ಕರಿಯ ಎಂದು ಗೇಲಿ ಮಾಡುತ್ತಿದ್ದರು, ಆದರೆ ನಾನು…; ಜಗ್ಗೇಶ್‌ ಮನದ ಮಾತು

Modi Meditation
ದೇಶ1 hour ago

Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ

Cristiano Ronaldo
ಕ್ರೀಡೆ1 hour ago

Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

Chikkamagaluru Tragedy
ಚಿಕ್ಕಮಗಳೂರು1 hour ago

Chikkamagaluru Tragedy : ಬಾಯ್ಲರ್‌ ಶಾಖಕ್ಕೆ ಸುಟ್ಟು ಕರಕಲಾದ ಯುವಕ; ಸಿಲ್ವರ್ ಮರವೇರಿದಾಗ ಕರೆಂಟ್‌ ಶಾಕ್‌ಗೆ ಕಾರ್ಮಿಕ ಸಾವು

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮ ಅಕ್ರಮ ಕೇಸ್‌; 16 ಕಂಪನಿಗಳಿಗೆ 80 ಕೋಟಿ ವರ್ಗಾವಣೆ, ಯಾರಿಗೆ ಎಷ್ಟು ಹಣ?

rahul gandhi
ಪ್ರಮುಖ ಸುದ್ದಿ2 hours ago

Rahul Gandhi: ಬಿಜೆಪಿ ಮಾನನಷ್ಟ ಕೇಸ್‌ನಲ್ಲಿ ಸಿಎಂ, ಡಿಸಿಎಂಗೆ ಶರತ್ತುಬದ್ಧ ಜಾಮೀನು; ರಾಹುಲ್‌ ಗಾಂಧಿ ಮೇಲೆ ಕೋರ್ಟ್‌ ಗರಂ

Salman Khan Cops arrest 4 with alleged links to Bishnoi gang
ಬಾಲಿವುಡ್2 hours ago

Salman Khan: ಸಲ್ಮಾನ್ ಖಾನ್ ಕಾರಿನ ಮೇಲೆ ಗುಂಡಿನ ದಾಳಿಗೆ ಸಂಚು; ನಾಲ್ವರ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌