BBK SEASON 10: ಈ ವಾರ ಡ್ರೋನ್‌ ಪ್ರತಾಪ್‌ ಕಳಪೆ; ನಮ್ರತಾ ಕೊಟ್ಟ ಕಾರಣವೇ ಸರಿ ಅಂದ್ರು ನೆಟ್ಟಿಗರು! - Vistara News

ಬಿಗ್ ಬಾಸ್

BBK SEASON 10: ಈ ವಾರ ಡ್ರೋನ್‌ ಪ್ರತಾಪ್‌ ಕಳಪೆ; ನಮ್ರತಾ ಕೊಟ್ಟ ಕಾರಣವೇ ಸರಿ ಅಂದ್ರು ನೆಟ್ಟಿಗರು!

BBK SEASON 10: ವಾರದ ಕೊನೆಗೆ ಕಳಪೆ ಯಾರು, ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ.

VISTARANEWS.COM


on

BBK SEASON 10 drone Prathap kalape went in jail
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ವಾರ ಎಲ್ಲ ಟಾಸ್ಕ್‌ಗಳಲ್ಲಿಯೂ (BBK SEASON 10) ‘ಮಣ್ಣಿನ ಮಕ್ಕಳು’ ತಂಡ ಸೋತು ಸುಣ್ಣವಾಗಿದೆ. ಆ ತಂಡದ ನಾಯಕತ್ವವನ್ನು ವಹಿಸಿದ್ದ ಡ್ರೋಣ್ ಪ್ರತಾಪ್‌ ಜೈಲುಪಾಲಾಗಿದ್ದಾರೆ. ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಚಿತ್ರ ಜಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರುಗೊಂಡಿದೆ. ವಾರದ ಕೊನೆಗೆ ಕಳಪೆ ಯಾರು ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ.

‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ ಅವರಂತಹ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್‌ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ. ವರ್ತೂರು, ಸ್ನೇಹಿತ್‌ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ.

ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ. ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ. ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇದ್ದವು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ’ ಎಂದು ಹೇಳಿ ಪ್ರತಾಪ್‌ ಅವರು ಜೈಲಿನೊಳಗೆ ಹೋಗಿ ಕೂತಿದ್ದಾರೆ. ಹಾಗಾದರೆ ಈ ವಾರ ಉತ್ತಮ ಪಟ್ಟ ಯಾರಿಗೆ ಬಂದಿದೆ? ಕ್ಯಾಪ್ಟನ್ಸಿ ಓಟದಲ್ಲಿ ಯಾರು ಗೆದ್ದಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ತನಿಷಾ ಪರ ಆಡಿ ಬೆಸ್ಟಿ ವಿನಯ್‌ರನ್ನು ಹೊರಗಟ್ಟಿದ ನಮ್ರತಾ!

ಈ ವಾರ ಡ್ರೋನ್‌ ಪ್ರತಾಪ್‌ ಅವರು ಆಟದ ವಿಚಾರದಲ್ಲಿ ಮನೆಯವರ ಕೆಂಗಣ್ಣಿಗೆ ಗುರಿಯಾದರು. ಕಳೆದ ಸಂಚಿಕೆಯಲ್ಲಿ ತಾವು ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟದ ಸಮಯವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಳೆದ ವಾರ ಡ್ರೋನ್‌ ಅವರು ಅತಿ ಹೆಚ್ಚು ವೋಟ್‌ ಪಡೆದು ಸೇಫ್‌ ಆಗಿದ್ದರು. ಆದರೆ ಈ ವಾರ ಆಟದಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಂಡ್ಯ

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

Varthur Santhosh : ಹಳ್ಳಿಕಾರ್ ಒಡೆಯ ವಿವಾದ ಮತ್ತೆ ತಾರಕಕ್ಕೇರಿದೆ. ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ತಿರುಗಿ ಬಿದ್ದಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

VISTARANEWS.COM


on

By

Varthur Santhosh
Koo

ಮಂಡ್ಯ: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಸ್ಪರ್ಧಿಯಾಗಿ ಗಮನ ಸೆಳೆದಿದ್ದ ವರ್ತೂರಿನ ಕೃಷಿಕ ವರ್ತೂರು ಸಂತೋಷ್‌ ವಿರುದ್ಧ ಹಳ್ಳಿಕಾರ್‌ ಸಂರಕ್ಷಕರು ಸಿಡಿದೆದ್ದಿದ್ದಾರೆ. ವರ್ತೂರ್‌ ಸಂತೋಷ್‌‌ (Varthur Santhosh) ಬಿಗ್ ಬಾಸ್ ಮನೆಯಲ್ಲಿದ್ದಾಗ ಹಳ್ಳಿಕಾರ್ ಒಡೆಯ‌ ಬಿರುದು ವಿವಾದಕ್ಕೆ ಸೃಷ್ಟಿಯಾಗಿತ್ತು.

ಈ ಹಿಂದೆ ಹಳ್ಳಿಕಾರ್ ತಳಿ ಸಂರಕ್ಷಕರು ವರ್ತೂರು ಬೆಂಬಲಿಗರಿಗೆ ತಿಳುವಳಿಕೆ ಹೇಳಲು ಚರ್ಚಾಗೋಷ್ಠಿ ಏರ್ಪಡಿಸಿದ್ದರು. ಅಂದು ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ತಲಾತಲಾಂತರಿಂದ ಹಳ್ಳಿಕಾರ್ ತಳಿ ಸಂರಕ್ಷಕರ ನಡುವೆ ಜಟಾಪಟಿ ಶುರುವಾಗಿತ್ತು. ಈ ವಾಗ್ವಾದದಿಂದಾಗಿ ಕಾರ್ಯಕ್ರಮದ ಅರ್ಧದಲ್ಲೆ ಸಂತೋಷ್ ಬೆಂಬಲಿಗರನ್ನು ಪೊಲೀಸರು ಕಳುಹಿಸಿದ್ದರು. ನಂತರ ಬಿಗ್ ಬಾಸ್ ಮನೆಯಿಂದ ಹೊರ ಬಂದ ವರ್ತೂರ್‌ ಸಂತೋಷ್‌ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದರು. ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಸಂತೋಷ್‌ ಏಕವಚನದಲ್ಲಿ ಹರಿಹಾಯ್ದಿದ್ದರು.

ಇದನ್ನೂ ಓದಿ: Actor Darshan: ದೇಹ ಅಷ್ಟೇ ಅಲ್ಲ, ಮಾತೂ ತೂಕ ಇರ್ಬೇಕು; ದರ್ಶನ್‌ಗೆ ಉಮಾಪತಿ ತಿರುಗೇಟು!

ವರ್ತೂರ್ ಸಂತೋಷ್‌ ಮಾತಿಗೆ ಹಳ್ಳಿಕಾರ್ ಸಂರಕ್ಷಕರು ಮತ್ತೆ ಸಿಡಿದೆದ್ದಿದ್ದಾರೆ. ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ಳುವುದು, ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರಿಂದ ಹಳ್ಳಿಕಾರ್ ಸಂರಕ್ಷಣೆ ಮಾಡುತ್ತಿರುವ ರೈತರಿಗೂ ಹಾಗು ಅವರ ಭಾವನೆಗೂ ಧಕ್ಕೆಯಾಗಿದೆ ಎಂದು ಹಳ್ಳಿಕಾರ್‌ ಸಂರಕ್ಷಕರು ಕಿರಿಕಾರಿದ್ದಾರೆ.

ಗೂಗಲ್‌ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಜರ್ವೇಷನ್ ಎಂದು ರಾಂಗ್ ಮೆಸೇಜ್ ನೀಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುತ್ತೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎಂದು ಬಿಂಬಿತವಾಗಬಹುದು. ಆದ್ದರಿಂದ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಎಲ್ಲಾ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಶೀಘ್ರ ಕಾನೂನು ಸಮರ ಸಾರುತ್ತೇವೆ. ಗೂಗಲ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿಪಟೇಲ್ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

Drone Prathap: ಬಿಗ್‌ಬಾಸ್‌ ವೇದಿಕೆಯಲ್ಲಿ ನುಡಿದಂತೆ ನಡೆದ ಡ್ರೋನ್‌ ಪ್ರತಾಪ್‌; ಅಭಿಮಾನಿಗಳಿಂದ ಮೆಚ್ಚುಗೆ

Drone Prathap: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ ತಮಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ದಾನ ಮಾಡಿದ್ದಾರೆ. ಆ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

VISTARANEWS.COM


on

prathap
Koo

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (Bigboss kannada season 10)ರ ಪ್ರಬಲ ಸ್ಪರ್ಧಿಯಾಗಿದ್ದ ಡ್ರೋನ್‌ ಪ್ರತಾಪ್‌ (Drone Prathap) ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ. ಸದ್ಯ ಅವರು ಅಭಿಮಾನಿಗಳ ಭೇಟಿ, ರಿಯಾಲಿಟಿ ಶೋ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಬಿಡುವಿಲ್ಲದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇಷ್ಟೆಲ್ಲ ಬ್ಯುಸಿಯ ಮಧ್ಯೆಯೂ ತಾವು ಕೊಟ್ಟ ಮಾತನ್ನು ಉಳಿಸಿಕೊಟ್ಟು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ ದಾನ ಮಾಡಿದ ಪ್ರತಾಪ್‌

ಬಿಗ್​ಬಾಸ್ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್, ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ, ಇನ್ನಿತರ ಉಡುಗೊರೆಗಳನ್ನು ಅರ್ಹರಿಗೆ ದಾನ ಮಾಡುವುದಾಗಿ ಹೇಳಿದ್ದರು. ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ರೂ. ಬಹುಮಾನದ ಜತೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್‌ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಈ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ʼʼಬಿಗ್‌ಬಾಸ್‌ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ… ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆವರೆಗೂ ಹೋಟಲ್‌ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್‌ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು. ಆದರೆ ಸ್ನೇಹಿತ ಮಾಡಿದ ಮೋಸದಿಂದ ಅವರ ಬೈಕನ್ನು ಬ್ಯಾಂಕ್ ನವರು ಸೀಜ್‌ ಮಾಡಿದ್ದರು. ಹಾಗಾಗಿ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಇವರಿಗೆ ನೀಡುತ್ತಿದ್ದೇನೆ. ಇದು ನನಗೆ ತುಂಬಾ ಖುಷಿ ತಂದಿದೆʼʼ ಎಂದು ಪ್ರತಾಪ್‌ ಬರೆದುಕೊಂಡಿದ್ದಾರೆ. ಜತೆಗೆ ಫೋಟೊವನ್ನೂ ಅಪ್‌ಲೋಡ್‌ ಮಾಡಿದ್ದಾರೆ. ತನಗೆ ಬಹುಮಾನವಾಗಿ ಬಂದ 10 ಲಕ್ಷ ರೂ. ಹಣವನ್ನು ಸಹ ತಾವು ಬಡವರಿಗೆ ದಾನ ನೀಡುವುದಾಗಿ ಡ್ರೋನ್ ಪ್ರತಾಪ್ ಘೋಷಣೆ ಮಾಡಿದ್ದರು. ಆದರೆ ಆ ಹಣವನ್ನು ಯಾರಿಗೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿಲ್ಲ.

ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು

ಡ್ರೋನ್‌ ಪ್ರತಾಪ್‌ ಅವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ʼʼತುಂಬಾ ಒಳ್ಳೆಯ ಕಾರ್ಯ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ, ನಿಮಗೆ ವೋಟ್‌ ಹಾಕಿದ್ದಕ್ಕೆ ಸಾರ್ಥಕವಾಯ್ತು, ಉತ್ತಮ ಕೆಲಸʼʼ ಎಂದೆಲ್ಲ ಕಮೆಂಟ್‌ ಮಾಡಿ ಬೆನ್ನು ತಟ್ಟಿದ್ದಾರೆ. ಬಿಗ್‌ಬಾಸ್‌ ಮನೆ ಒಳಗೆ ಉತ್ತಮ ಆಟ ಆಡುವ ಮೂಲಕ ಅಭಿಮಾನಿಗಳ ಮನಗೆದ್ದ ಅವರು ಇದೀಗ ಮನೆ ಹೊರಗೂ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Gicchi Gili Gili season 3: ಡ್ರೋನ್‌ ಪ್ರತಾಪ್‌ ಮೇಕಪ್ ನೋಡಿ ಬೆಚ್ಚಿಬಿದ್ದ ತುಕಾಲಿ; ಗಂಡನನ್ನು ಚಚ್ಚಿ ಕೆಡವಿದ ಮಾನಸಾ! 

ಡ್ರೋನ್‌ ಪ್ರತಾಪ್‌ ಇತ್ತೀಚೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೊಡ್ಮನೆಯಲ್ಲಿ ಸಿಂಪಲ್​ ಆಗಿ ಇರುತ್ತಿದ್ದ ಪ್ರತಾಪ್​ ಅವರು ಈಗ ಮೇಕಪ್​ ಹಚ್ಚಿಕೊಂಡು ಮಿಂಚಿದ್ದರು. ಶೋ ಆರಂಭದ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಭರ್ಜರಿ ಸ್ಟೆಪ್‌ ಹಾಕಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಿಗ್ ಬಾಸ್

Varthur Santhosh: ಹೇಳಿಕೆ ತಿರುಚಿ ತೇಜೋವಧೆ ಎಂದು ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR!

Varthur Santhosh: ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಚಾರ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾತನಾಡುತ್ತಿರುವವರ ಮೇಲೆ ಜಗ್ಗೇಶ್ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

VISTARANEWS.COM


on

Actor Jaggesh FIR against Tiger Claw Statement Issue
Koo

ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್‌ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ʻಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡʼ ಎಂದು ಹೇಳಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವರ್ತೂರ್‌ (Varthur Santhosh) ಕೂಡ ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದಾದ ಬಳಿಕ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಜಗ್ಗೇಶ್‌ ಕೂಡಲೇ ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದ್ದರು. ಆದರೀಗ ಆ ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಚಾರ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾತನಾಡುತ್ತಿರುವವರ ಮೇಲೆ ಜಗ್ಗೇಶ್ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಉತ್ತರ ವಿಭಾಗದ ಡಿಸಿಪಿಗೆ ಲಿಖಿತ ರೂಪದಲ್ಲಿ ನಟ ಜಗ್ಗೇಶ್ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜಗ್ಗೇಶ್‌ ದೂರಿನಲ್ಲಿ ʻʻರಂಗನಾಯಕ ಸಿನಿಮಾ ಕಾರ್ಯಕ್ರಮ ಇತ್ತು. ಹಿಂದೆ ಹುಲಿ ಉರುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ್ದ ಬಗ್ಗೆ ಹಾಗೂ ಯಾರೊ ಒಬ್ಬ ಕಿತ್ತೋದವನು (ಗ್ರಾಮೀಣ ಭಾಷೆ) ಸಿಕ್ಕಿದ ಕಾರಣ ಅಂದರೆ ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರ ಜತೆ ಮಾತನಾಡಿದ್ದೆ. ಆದರೆ ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧೆಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ” ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ʻʻಇತ್ತೀಚಿನ ದಿನಗಳಲ್ಲಿ ಹಲವರು ಪ್ರಚಾರಕ್ಕೆಂದು ಕಾಯುತ್ತಿರುತ್ತಾರೆ. ನಾನು ಯಾರ ಬಗ್ಗೆ ಆಗಲಿ, ಜಾತಿ ಬಗ್ಗೆ ಆಗಿ ಮಾತನಾಡಿಲ್ಲ. ನನ್ನ ವೈಯಕ್ತಿಕ ಅನುಭವವನ್ನು ಮಾಧ್ಯಮದ ಮುಂದೆ ಹೇಳಿದ್ದೇನೆ. ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆಯ ಬೆದರಿಕೆ ಮಾಡಿರುವ ಹೆಬ್ಬಗೋಡಿ ನಾರಾಯಣ ಸ್ವಾಮಿ ಹಾಗೂ ಆತನ ಮಾತು ಅನುಸರಿಸಿ ವಿಡಿಯೋ ಮಾಡಿದ ಮತ್ತೊಬ್ಬರ ಮೇಲೆ ಕ್ರಮ ಕಾನೂನು ಕ್ರಮಕ್ಕೆ ಒತ್ತಾಯ” ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Varthur Santhosh: ‘ಯಾವನೋ ಕಿತ್ತೋದ್‌ ನನ್ಮಗ’ ಹೇಳಿಕೆ; ಕ್ಷಮೆ ಕೇಳಿದ್ರೆ ಸರಿ ಎಂದು ಜಗ್ಗೇಶ್​ಗೆ ಎಚ್ಚರಿಕೆ!

ಆಗಿದ್ದೇನು ?


ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್‌ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿ ʻʻನಾನು ಹುಲಿ ತರ ಬದುಕಬೇಕು ಎಂದು ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು”ಎಂದು ಹೇಳಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ತೂಕಕ್ಕೆ ತೂಕ ಸರಿ ಇರಬೇಕು

ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮಾತನಾಡಿʻʻಅವರು ದೊಡ್ಡವರು. ನಾನು ಏನು ಹೇಳುತ್ತೇನೆ ಅಂದರೆ ಕಾಲೈ ತಸ್ಮೈ ನಮಃ ಅಷ್ಟೆ. ಕೆಲವೊಂದಕ್ಕೆ ಉತ್ತರ ಕೊಟ್ಟರೆ, ಇನ್ನು ಕೆಲವೊಂದಕ್ಕೆ ಸುಮ್ಮನಿರಬೇಕು. ಸುದೀಪಣ್ಣ ಅವರು ಹೇಳಿದಾಗೆ, ಕೆಲವೊಂದು ಜಾಗದಲ್ಲಿ ಮಾತನಾಡಬೇಕು. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಎಂದು. ತೂಕದ ಜತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕುʼʼಎಂದಿದ್ದರು.

Continue Reading

ಬಿಗ್ ಬಾಸ್

Varthur Santhosh: ‘ಯಾವನೋ ಕಿತ್ತೋದ್‌ ನನ್ಮಗ’ ಹೇಳಿಕೆ; ಕ್ಷಮೆ ಕೇಳಿದ್ರೆ ಸರಿ ಎಂದು ಜಗ್ಗೇಶ್​ಗೆ ಎಚ್ಚರಿಕೆ!

Varthur Santhosh: ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಅವರು ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Vahnikula Kshatriya Community Leader Narayan Swamy Warns Jaggesh about Varthur Santhosh
Koo

ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರಿನ (Tiger Nail) ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆ ಪರಿಶೀಲನೆ ನಡೆಸಿತ್ತು. ಬಿಗ್‌ ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರ ಹುಲಿ ಉಗರು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್‌ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ʻಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡʼ ಎಂದು ಹೇಳಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವರ್ತೂರ್‌ ಕೂಡ ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻನಾನು ಏನು ಹೇಳ್ತೀನಿ ಅಂದ್ರೆ, ಕಾಲಾಯ ತಸ್ಮೈ ನಮಃ ಅಷ್ಟೆʼಎಂದು ಹೇಳಿದ್ದರು. ಇದೀಗ ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಅವರು ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಈ ಬಗ್ಗೆ ವಿಡಿಯೋ ಮಾಡಿ ಜಗ್ಗೇಶ್ ಕ್ಷಮೆಗೆ ಆಗ್ರಹಿಸಿದ್ದಾರೆ. ನಟ ಜಗ್ಗೇಶ್ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: Varthur Santhosh: ‘ಯಾವನೋ ಕಿತ್ತೋದ್‌ ನನ್ಮಗ”ಎಂದ ಜಗ್ಗೇಶ್‌ಗೆ ವರ್ತೂರ್‌ ಹೇಳಿದ್ದೇನು?

ಮಾಧ್ಯಮದ ಮುಂದೆ ಬಂದು ಕ್ಷಮೆಯಾಚಿಸಬೇಕು.

“ಬಿಗ್‌ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಒಳ್ಳೆಯ ಮನುಷ್ಯ. ಸಣ್ಣ ಹುಡುಗನನ್ನು ಕೂಡ ಅಣ್ಣ ಎಂದು ಕರೆಯುವ ಒಳ್ಳೆ ಹೃದಯ, ಸ್ನೇಹಜೀವಿ. ಅಂತಹವರ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿದೆ. ಇದರಲ್ಲೇ ನೀನು ಎಲ್ಲರಿಗೂ ಯಾವ ರೀತಿ ಮರ್ಯಾದೆ ಕೊಡುತ್ತೀಯ ಎನ್ನುವುದು ಗೊತ್ತಾಗುತ್ತಿದೆ. ಕೂಡಲೇ ಮಾಧ್ಯಮದ ಮುಂದೆ ಬಂದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕಿ ಧರಣಿ ಕೂರುತ್ತೇವೆ” ಎಂದಿದ್ದಾರೆ.

ನೀನು ಯಾಕೆ ಕೋರ್ಟ್‌ ಮೊರೆ ಹೋದೆ ಹೇಳು

ʻʻಸಂತೋಷ್, ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದಾನೆ. ವಹ್ನಿಕುಲದಲ್ಲಿ ಹುಟ್ಟಿ ಬೆಳವಣಿಗೆ ಆಗುತ್ತಿದ್ದಾನೆ. ಅಂತಹ ಹುಡುಗನ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದೀಯ. ವಹ್ನಿಕುಲ ಕ್ಷತ್ರಿಯರ ಹುಡುಗ ಆತ. ಈಗ ಅವನು ಬೆಳವಣಿಗೆ ಆಗುತ್ತಿದ್ದಾನೆ ಎಂದು ಹೊಟ್ಟೆ ಕಿಚ್ಚಿನಿಂದ ಈ ರೀತಿಯ ಪದಗಳನ್ನು ಬಳಸುತ್ತಿದ್ದೀಯಾ? ಕ್ಷಮೆ ಕೇಳದಿದ್ದರೆ ವರ್ತೂರು ಸಂತೋಷ್ ಅಭಿಮಾನಿಗಳು ನಿನಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಆ ಪ್ರಕರಣ ನಡೆದಾಗ ನೀನು ಯಾಕೆ ಕೋರ್ಟ್‌ ಮೊರೆ ಹೋದೆ ಹೇಳು ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.ʼʼಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Varthur Santhosh: ವರ್ತೂರ್‌ ಸಂತೋಷ್‌ಗೆ ಸನ್ಮಾನ ಮಾಡಿದ ಪಿ ಎಸ್ ಐ ರಾತ್ರೋರಾತ್ರಿ ವರ್ಗಾವಣೆ!

ಯಾವನೋ ಕಿತ್ತೋದ್‌ ನನ್ಮಗ

ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್‌ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿ ʻʻನಾನು ಹುಲಿ ತರ ಬದುಕಬೇಕು ಎಂದು ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು”ಎಂದು ಹೇಳಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ತೂಕಕ್ಕೆ ತೂಕ ಸರಿ ಇರಬೇಕು

ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮಾತನಾಡಿʻʻಅವರು ದೊಡ್ಡವರು. ನಾನು ಏನು ಹೇಳುತ್ತೇನೆ ಅಂದರೆ ಕಾಲೈ ತಸ್ಮೈ ನಮಃ ಅಷ್ಟೆ. ಕೆಲವೊಂದಕ್ಕೆ ಉತ್ತರ ಕೊಟ್ಟರೆ, ಇನ್ನು ಕೆಲವೊಂದಕ್ಕೆ ಸುಮ್ಮನಿರಬೇಕು. ಸುದೀಪಣ್ಣ ಅವರು ಹೇಳಿದಾಗೆ, ಕೆಲವೊಂದು ಜಾಗದಲ್ಲಿ ಮಾತನಾಡಬೇಕು. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಎಂದು. ತೂಕದ ಜತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕುʼʼಎಂದಿದ್ದರು

Continue Reading
Advertisement
operation
ವೈರಲ್ ನ್ಯೂಸ್5 mins ago

Viral News: ವೈದ್ಯರ ಎಡವಟ್ಟು; ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಹರಣ ಚಿಕಿತ್ಸೆ ನಡೆಸಿದರು !

Illicit relationship mysore.webp
ಮೈಸೂರು12 mins ago

Illicit Relationship : ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಗೆ ಮನೆಯಿಂದ್ಲೇ ಹೊರಗಟ್ಟಿದ ಭೂಪ

Narendra Modi
ಪ್ರಮುಖ ಸುದ್ದಿ15 mins ago

Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

SRK Aamir Salman Come Together For Performance Anant Wedding
ಬಾಲಿವುಡ್36 mins ago

Anant Ambani: `ನಾಟು ನಾಟು’ಗೆ ಸಖತ್‌ ಸ್ಟೆಪ್ಸ್‌ ಹಾಕಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್‌!

Sangeeta Phoghat
ಕ್ರೀಡೆ1 hour ago

Sangeeta Phogat : ಯಜ್ವೇಂದ್ರ ಚಹಲ್​ ಎತ್ತಿ ಹೆಗಲ ಮೇಲೆ ಕೂರಿಸಿದ ಸಂಗೀತಾ ಫೋಗಟ್​​, ಇಲ್ಲಿದೆ ವಿಡಿಯೊ

rld
ದೇಶ1 hour ago

Jayant Chaudhary: ಐಎನ್​ಡಿಐಎ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ; ಎನ್‌ಡಿಎಗೆ ಸೇರ್ಪಡೆಯಾದ ಆರ್‌ಎಲ್‌ಡಿ

Actor Yash Fan Who Injured By Followers Car Police Complaint
ಸ್ಯಾಂಡಲ್ ವುಡ್1 hour ago

Actor Yash: ಯಶ್ ಬೆಂಗಾವಲು ವಾಹನ ಹರಿದು ಗಾಯಗೊಂಡಿದ್ದ ಯುವಕನಿಂದ ದೂರು

ginirama serial actress nayana nagaraj gets engaged to suhas shivanna
ಕಿರುತೆರೆ2 hours ago

Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ಖ್ಯಾತಿಯ ನಟಿ ನಯನ ನಾಗರಾಜ್

Rameshwarm Cafe
ಪ್ರಮುಖ ಸುದ್ದಿ2 hours ago

Blast in Bengaluru : ಬಾಂಬ್​ ಬ್ಲಾಸ್ಟ್​ ಆದ ರಾಮೇಶ್ವರಂ ಕೆಫೆ ಶಿವರಾತ್ರಿ ದಿನ ರೀ ಓಪನ್​

World Hearing Day
ಲೈಫ್‌ಸ್ಟೈಲ್2 hours ago

World Hearing Day 2024: ಇಂದು ವಿಶ್ವ ಶ್ರವಣ ದಿನ: ಈ ಜಗತ್ತಿನ 150 ಕೋಟಿ ಜನರಿಗೆ ಕಿವುಡತನ ಸಮಸ್ಯೆ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ5 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು17 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು21 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌