BBK SEASON 10: ನಮ್ರತಾ ಸಿಕ್ಸ್ತ್‌ ಸೆನ್ಸ್ ಪ್ರಕಾರ ಗೆಲ್ಲುವ ಸ್ಪರ್ಧಿ ಇವರು - Vistara News

ಬಿಗ್ ಬಾಸ್

BBK SEASON 10: ನಮ್ರತಾ ಸಿಕ್ಸ್ತ್‌ ಸೆನ್ಸ್ ಪ್ರಕಾರ ಗೆಲ್ಲುವ ಸ್ಪರ್ಧಿ ಇವರು

BBK SEASON 10: ಬಿಗ್‌ಬಾಸ್‌ ಹತ್ತನೇ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಈ ವಾರ ಮನೆಯಿಂದ ಹೊರ ಬಿದ್ದಿದ್ದಾರೆ. ಅವರು ತಮ್ಮ ಜರ್ನಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

VISTARANEWS.COM


on

namrutha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ಬಾಸ್‌ ಹತ್ತನೇ ಸೀಸನ್‌ನ (BBK SEASON 10) ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಈ ವಾರ ಮನೆಯಿಂದ ಹೊರ ಬಿದ್ದಿದ್ದಾರೆ. ‘ʼಬಿಗ್‌ಬಾಸ್‌ ಈ ಸೀಸನ್‌ನಲ್ಲಿ ನಿಮ್ಮ ಕೊಡುಗೆ ನಿಜಕ್ಕೂ ಮಹತ್ವದ್ದು. ನೀವು ಯಾರು ಎಂದು ನನಗೂ ತೋರಿಸಿಕೊಟ್ಟಿದ್ದೀರಿʼʼ ಎಂಬ ಮೆಚ್ಚುಗೆಯ ಮಾತನ್ನು ಕಿಚ್ಚ ಸುದೀಪ್‌ ಅವರಿಂದ ಕೇಳಿಸಿಕೊಂಡಿರುವ ನಮ್ರತಾ ಮನೆಯಿಂದ ಹೊರಗೆ ಬಂದ ಕೂಡಲೇ ತಮ್ಮ ಜರ್ನಿಯ ಬಗ್ಗೆ ಜಿಯೊ ಸಿನಿಮಾಗೆ ಸಂದರ್ಶನ ನೀಡಿದ್ದಾರೆ. ಅವರು ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಎಲಿಮಿನೇಷನ್ ಶಾಕ್!

ಹತ್ತೊಂಬತ್ತು ಜನರಲ್ಲಿ ಏಳನೇ ಸ್ಥಾನದವರೆಗೂ ಬಂದಿರುವುದು ಖಂಡಿತ ಸುಲಭವ ಸಂಗತಿ ಅಲ್ಲ. ಮೂರು ದಿನಗಳ ಹಿಂದೆ ಹಳೆಯ ಸ್ಪರ್ಧಿಗಳೆಲ್ಲ ಬಂದು ಒಂದು ಬಾಂಬ್ ಹಾಕಿದ್ದರು. ನಿಂಗೆ ಚಾನ್ಸ್ ಇಲ್ಲ ಅಂತ. ಆಗ ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರು ಮಾಡಿದೆ. ಆದರೆ ಈಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್‌. ಈ ನೂರಾ ಆರು ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ನನ್ನದು ನಿಜವಾಗಿಯೂ ಏರಿಳಿತದ ಪಯಣವಾಗಿತ್ತು. ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಹೋಗಿ, ಕೆಳಗೆ ಇಳಿದು ಮತ್ತೆ ಮೇಲೆ ಏರಿ ಹೋದ ಜರ್ನಿ ನಂದು ಎಂದು ನಮ್ರತಾ ಹೇಳಿದ್ದಾರೆ.

ಸ್ನೇಹಿತರ ಜತೆಗೆ ಮಾತನಾಡಿದ್ದು ನನಗೆ ತುಂಬ ಖುಷಿ ಕೊಟ್ಟಿತ್ತು. ಆದರೆ ಆ ಫ್ರೆಂಡ್‌ಶಿಪ್‌ನಲ್ಲಿ ಮಾತಾಡುತ್ತಿದ್ದಾಗ ಬೇರೆಯವರ ಬಗ್ಗೆ ಒಂದು ಒಪಿನಿಯನ್ ಕ್ರಿಯೇಟ್ ಆಗುತ್ತದೆ. ಅವರು ಕೆಟ್ಟವರು, ಅವರು ಒಳ್ಳೆಯವರು ಎಂದೆಲ್ಲ. ಆದರೆ ಹೋಗ್ತಾ ಹೋಗ್ತಾ ನಾನು ಮೈ ಚಳಿ ಬಿಟ್ಟು ಅವರ ಜತೆಗೆ ಸೇರಲು ಪ್ರಾರಂಭಿಸಿದಾಗ ಅವರು ನಾನು ಅಂದುಕೊಂಡಷ್ಟು ಕೆಟ್ಟವರಲ್ಲ ಅನಿಸಿತು. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಆದರೆ ಆಯಾ ಸಂದರ್ಭದಲ್ಲಿ ಕೆಟ್ಟವರ ಹಾಗೆ ಕಾಣಿಸುತ್ತಿರುತ್ತಾರೆ. ನಾನೂ ಅಂಥ ಕೆಲವು ಸಂದರ್ಭಗಳಲ್ಲಿ ಕೆಟ್ಟವಳಾಗಿರುತ್ತೇನೆ. ಬಿಗ್‌ಬಾಸ್‌ ಮನೆಯಲ್ಲಿ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಇವೆಲ್ಲ ಹೇಳುವ ಥರ, ಶಾಡೊ, ಇನ್‌ಪ್ಲ್ಯೂಯೆನ್ಸ್‌ ಎಲ್ಲ ಆಗಿಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಆರಂಭದಲ್ಲಿ ಗೇಮ್ ಆಡಲು, ಸ್ಟ್ರಾಟಜಿ ಮಾಡಲು ಗೊತ್ತಾಗುತ್ತಿರಲಿಲ್ಲ. ಆದರೆ ನಾನು ಕಲಿಯುತ್ತಾ ಬಂದೆ. ಕಲಿಯುವಷ್ಟರಲ್ಲಿ ಸ್ವಲ್ಪ ಸಮಯ ತಗುಲಿತು ಅಷ್ಟೆ. ನಂತರ ನಾನು ಆಟದಲ್ಲಿ ಇಳಿದೆ ಎಂದು ಅವರು ವಿವರಿಸಿದ್ದಾರೆ.

ಇದೊಂದು ಸೋಲ್‌ಫುಲ್ ಜರ್ನಿ

ಬಿಗ್‌ಬಾಸ್‌ ಮನೆಯಲ್ಲಿ ಕಳೆದ ದಿನಗಳು ನನ್ನ ಪಾಲಿಗೆ ಸೋಲ್‌ಫುಲ್ ಜರ್ನಿ. ಇಲ್ಲಿ ಯಾರೂ ಕೆಟ್ಟವರಲ್ಲ. ಈ ಪ್ರಯಾಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ರಿಯಲ್ ಫ್ರೆಂಡ್‌ಶಿಪ್‌ ಮನೆಯೊಳಗಲ್ಲ, ಹೊರಗೇ ಮುಂದುರಿಯುತ್ತದೆ ಅಂದುಕೊಂಡಿದ್ದೇನೆ. ಎಲ್ಲರ ಜತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ. ನನ್ನ-ಸಂಗೀತಾ ನಡುವಿನ ಫ್ರೆಂಡ್‌ಶಿಪ್‌ ಅನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಸಿಸ್ಟರ್‌ಹುಡ್‌. ಅವರು ನನಗೆ ಸಹೋದರಿಯ ಹಾಗೆ. ನನಗೆ ಆ ಥರ ಬಾಂಡಿಂಗ್ ಆಗೋದು ಕಡಿಮೆ. ಆದರೆ ಇಲ್ಲಿ ಆಯ್ತು. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ. ಅಂಥ ಕ್ರಿಟಿಕ್ ಎಲ್ಲರ ಬದುಕಿನಲ್ಲಿಯೂ ಇರಬೇಕು ಅನಿಸುತ್ತದೆ ಎಂದು ನಮ್ರತಾ ತಿಳಿಸಿದ್ದಾರೆ.

ನನಗೆ ಅಣ್ಣ ಇಲ್ಲ ಎಂಬ ಕೊರಗು ಯಾವಾಗಲೂ ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಾಂಧ್ಯವವನ್ನು ಮುಂದುವರಿಸಿಕೊಳ್ಳಲು ಬಯಸುತ್ತೇನೆ. ಇಡೀ ಮನೆಯಲ್ಲಿ ನನಗೆ ಬಹುಬೇಗ ಮನಸ್ಸಿಗೆ ಹತ್ತಿರವಾದವನು ಪ್ರತಾಪ್. ಆವಾಗಾವಾಗ ವಿಯರ್ಡ್ ಆಗಿ ಆಡ್ತಾನೆ ನಿಜ. ಆದರೆ ಅವನು ಇರೋದೇ ಹಾಗೆ. ಅವನನ್ನು ಹಾಗೆಯೇ ಒಪ್ಪಿಕೊಂಡಿದ್ದೇನೆ ನಾನು. ಮೊದಲು ಅವನು ಒಪಿನಿಯನ್ ಹೇಳಬೇಕಾದರೆ, ಕಮೆಂಟ್ ಮಾಡುವುದನ್ನು ಕೇಳಿದಾಗ ಕೋಪ ಬರುತ್ತಿತ್ತು. ಏನೋ ಹೇಳಿದ್ದನ್ನು ಪರ್ಸನಲ್ ಆಗಿಟ್ಟುಕೊಂಡು ತುಂಬ ದಿನ ಸಾಧಿಸ್ತಿದ್ದ. ಆದರೆ ಈಗ, ಅವನೂ ಅದನ್ನೆಲ್ಲ ಬಿಟ್ಟು ತುಂಬ ಬದಲಾಗಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಅವನ ಅಪ್ಪ, ಅಮ್ಮ ಇಬ್ಬರೂ ಸಿಕ್ಕಾಪಟ್ಟೆ ಒಳ್ಳೆಯ ಜನ, ಮುಗ್ಧರು. ನಾನು ನೋಡಿದ ತಕ್ಷಣ ಪಟ್ ಅಂತ ಕನೆಕ್ಟ್ ಆದೆ. ಅವರಿಬ್ಬರ ಸೆಲ್ಫ್‌ಸೆಲ್ ಮಾತು ನೋಡಿ ಇಷ್ಟವಾಯ್ತು. ಅವನು ‘ʼನಾನು ನಿಮಗೆ ಸೀರೆ ಕೊಡಿಸ್ತೀನಿ ದೀ… ನಿಮಗೆ ಓಲೆ ಜುಮುಕಿ ಕೊಡಿಸ್ತೀನಿ’ʼ ಎಂದು ಹೇಳುತ್ತಿದ್ದ. ಅವರ ತಂದೆ ತಾಯಿ ಸೀರೆ ತಂದುಕೊಟ್ಟಿದ್ದು ನೋಡಿ ಬಹಳ ಎಮೋಷನಲ್ ಆಯ್ತು. ನಮ್ಮೋರು ಅಂತ ಅನಿಸಿತು. ಬೇಕೋ ಬೇಡವೋ ನಾನು ಯಾವಾಗಲೂ ಅವನ ದೀದಿ ಆಗಿಯೇ ಇರುತ್ತೇನೆ. ಅವನು ಯಾವಾಗಲೂ ನನ್ನ ಪುಟ್ಟ ತಮ್ಮನೇ ಎಂದು ನಮ್ರತಾ ಭಾವುಕರಾದರು.

ತುಕಾಲಿಯೇ ಫೇಕ್

ನನಗೆ ಅಕ್ಷರಶಃ ಫೇಕ್ ಅನಿಸಿದ್ದು ತುಕಾಲಿ ಸಂತೋಷ್. ಅವರನ್ನು ಬಿಟ್ಟರೆ ಮತ್ತೆ ವಾಪಸ್ ಮನೆಯೊಳಗೆ ಬಂದಾಗ ಅನಿಸಿದ್ದು ಸ್ನೇಹಿತ್‌ ಕೂಡ ಫೇಕ್ ಎನಿಸಿತು. ನಾನು ಅವರ ಕಡೆಯಿಂದ ಸಾಕಷ್ಟು ಬೆಂಬಲ ನಿರೀಕ್ಷಿಸಿದ್ದೆ. ಆದರೆ ಅವರು ಬಂದು ನನ್ನ ತುಂಬ ಡಿಮೋಟಿವೇಟ್ ಮಾಡಿದ್ದು ಸ್ನೇಹಿತ್‌. ಇಡೀ ಮನೆಯಲ್ಲಿ ನಾನು ತುಂಬ ಜೆನ್ಯೂನ್ ಆಗಿದ್ದೆ. ಒಬ್ಬರನ್ನು ಬೈದರೂ ಉಗಿದರೂ, ಪ್ರೀತಿಸದರೂ ಹೃದಯದಿಂದ ಮಾಡ್ತಿದ್ದೆ. ನನ್ನ ಬಿಟ್ರೆ ವಿನಯ್. ಅವರಲ್ಲಿ ನನಗೆ ಯಾವತ್ತೂ ಕಲ್ಮಶ ಕಾಣಿಸಲಿಲ್ಲ. ಸಂಗೀತಾ ಕೂಡ. ಅವರನ್ನು ನಾನು ತುಂಬ ತಪ್ಪು ತಿಳ್ಕೊಂಡಿದ್ದೆ. ಅವರು ಏನನಿಸುತ್ತದೋ ಅದನ್ನೇ ಮಾತಾಡ್ತಾರೆ. ಹೇಗನಿಸ್ತಾರೋ ಹಾಗೇ ಇರ್ತಾರೆ. ಅವರೂ ಜೆನ್ಯೂನ್ ಅನಿಸುತ್ತಾರೆ ನನಗೆ. ಟಾಪ್‌ 3ನಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ. ನನಗೆ ವಿನಯ್ ವಿನ್ ಆಗ್ಬೇಕು ಅಂತ ಇದೆ. ಆದರೆ ಯಾಕೋ ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ ಸಂಗೀತಾ ವಿನ್ ಆಗ್ತಾರೆ ಅಂತ. ನನ್ನ ಪ್ರಕಾರ ಈ ಸೀಟಲ್ಲಿ ನನ್ನ ನಂತರ ಕಾರ್ತಿಕ್ ಮಹೇಶ್ ಕೂತಿರ್ತಾರೆ ಎಂದು ಊಹಿಸಿದ್ದಾರೆ.

ಜಿಯೊ ಸಿನಿಮಾ ಫನ್ ಫ್ರೈಡೆ

ಜಿಯೊ ಸಿನಿಮಾ ಫನ್ ಫ್ರೈಡೆಯ ಎಲ್ಲ ಟಾಸ್ಕ್‌ಗಳನ್ನೂ ನಾನು ಎಂಜಾಯ್ ಮಾಡಿದ್ದೇನೆ. ಅದರಲ್ಲಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಲೂನ್ ಒಡೆಯುವ ಟಾಸ್ಕ್‌ ಅನ್ನು ನಾನು ಸಖತ್ ಎಂಜಾಯ್ ಮಾಡಿದೆ. ಸಂತು-ಪಂತು ಆಟ ನೋಡಿ ಸಿಕ್ಕಾಪಟ್ಟೆ ನಕ್ಕಿದ್ದೇನೆ. ಫುಟ್‌ಬಾಲ್‌ ಆಟದಲ್ಲಿಯೂ ಖುಷಿಯಿಂದ ಭಾಗವಹಿಸಿದ್ದೆ. ಅದನ್ನು ಸ್ಮೈಲಿ ಬಾಲ್‌ನಲ್ಲಿ ಹೊಡೆದು ತಳ್ಳಬೇಕು. ಅಲ್ಲಿಯೂ ನಾನು ಸಖತ್ ಎಂಜಾಯ್ ಮಾಡಿದ್ದು ಸಂತು-ಪಂತು ಆಟ ನೋಡಿ.

ಇದನ್ನೂ ಓದಿ: BBK SEASON 10:  ಏರಿಳಿತದ ಹಾದಿಯಲ್ಲಿ ನಮ್ರತಾ ʻಬಿಗ್‌ಬಾಸ್ʼ ಪಯಣ

ಮೈಕ್ ಮಸಲ್ ಮೆಮರಿ ಆಗ್ಬಿಟ್ಟಿದೆ

ನಾನು ತುಂಬ ಮಿಸ್ ಮಾಡ್ಕೊಳ್ಳೋದು ಮೈಕ್ ಅನ್ನು. ಅದು ನನ್ನ ಮಸಲ್ ಮೆಮರಿ ಆಗ್ಬಿಟ್ಟಿದೆ. ಈಗಲೂ ನಾನು ಮೈಕ್ ಅಂತ ನೋಡ್ಕೋತಿರ್ತಿನಿ. ಬಿಗ್‌ಬಾಸ್ ಧ್ವನೀನ ಮಿಸ್ ಮಾಡ್ಕೋತೀನಿ. ಅವರ ಜತೆಗೆ ಫ್ಲರ್ಟ್ ಮಾಡಿದ್ದನ್ನು ಮಿಸ್ ಮಾಡ್ಕೋತೀನಿ. ಬೆಳಗ್ಗೆ ಸಾಂಗ್ಸ್‌ ಮಿಸ್ ಮಾಡ್ಕೋತೀನಿ. ಆ ಮನೆಯ ಒಂದೊಂದು ಮೂಲೆಯಲ್ಲಿ ಒಂದೊಂದು ಮೆಮರಿ ಇದೆ. ಅದನ್ನು ಕೇಳಿದ್ರೆ ಹೇಳೋಕೆ ಕಷ್ಟವಾಗತ್ತೆ. ಕೊನೆದಾಗಿ ನಾನು ಬಿಗ್‌ಬಾಸ್‌ಗೆ ಹೇಳಬೇಕು ʼʼಬಿಗ್‌ಬಾಸ್, ನಾನು ನಿಮ್ ಧ್ವನಿಗೆ ಬಿದ್ದೋಗಿದೀನಿ. ಫಿದಾ ಆಗಿದೀನಿ. ನೀವು ಹೇಗಿದೀರಾ ನೋಡ್ಬೇಕು. ಹ್ಯಾಪಿಯೆಸ್ಟ್ ವರ್ಷನ್ ಆಫ್ ನಮ್ರತಾ ಇದು. ನನ್ನನ್ನು ನಾನು ಪ್ರೀತಿಸಲು ಶುರು ಮಾಡಿದೀನಿ. ನೀವು ಕೊಟ್ಟ ಎಲ್ಲ ಟಾಸ್ಕ್‌ಗಳ ಪಾಠ ನನ್ನನ್ನು ಗಟ್ಟಿಗೊಳಿಸಿವೆ. ಇಲ್ಲಿ ಇಷ್ಟೊಂದು ಫೇಸ್ ಮಾಡಿದವಳು ಹೊರಗಡೆ ಏನು ಬೇಕಾದ್ರೂ ಫೇಸ್ ಮಾಡೋಕೆ ರೆಡಿ ಇದೀನಿ. ಥ್ಯಾಂಕ್ಯೂ ಸೋ ಮಚ್ ಬಿಗ್‌ಬಾಸ್!ʼʼ ಎಂದು ನಮ್ರತಾ ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Actress Siri: ನಾನೇನು ʻಮದುವೆʼಯ ವಿರೋಧಿ ಅಲ್ಲ, ವಿವಾಹ ಬೇಡ ಎಂದೂ ಅಂದುಕೊಂಡಿರಲಿಲ್ಲ ಎಂದ ಸಿರಿ!

Actress Siri: ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

VISTARANEWS.COM


on

Actress Siri Reaction about late marriage
Koo

ಬೆಂಗಳೂರು: `ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿರುವುದು ಗೊತ್ತೇ ಇದೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

ಸಿರಿ ಮಾತನಾಡಿ ʻʻಇಷ್ಟು ವರ್ಷ ನನಗೆ ಮದುವೆ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ನಮ್ಮ ತಾಯಿ ಬಿಟ್ಟರೆ ನಾನು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನನ್ನ ತಾಯಿಗೆ ಒಂದು ಮಾತು ಹೇಳುತ್ತ ಇದ್ದೆ. ನಿನ್ನ ಮಗಳು ಖುಷಿಯಾಗಿ ಇರಬೇಕು. ಅದೇ ಮುಖ್ಯ ಅಂದರೆ ನೋಡು ಅಂತಿದ್ದೆ. ಆದರೆ ಬಿಗ್‌ ಬಾಸ್‌ ಆದ ಬಳಿಕ ಆಗಬೇಕು ಎಂಬ ಮನಸ್ಸು ಬಂತು. ಆದರೆ ಒತ್ತಡ ಅಂತೇನಿಲ್ಲ. ಹೀಗೆ ಆಗಬೇಕು ಎಂದು ಅನ್ನಿಸಿತ್ತು. ಹೊರಗೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ಮಾಡಿದೆ. ಬಳಿಕ ಇವರನ್ನ ಮದುವೆ ಆಗಬಹುದು ಎಂದು ಅನ್ನಿಸಿದ ಮೇಲೆ ನಾನು ಮದುವೆಯಾದೆʼʼಎಂದರು.

ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿಲ್ಲ. ನನ್ನ ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದೇ ಇತ್ತು. ಮದುವೆ ವಿರುದ್ಧನೂ ಅಲ್ಲ ನಾನು. ನನ್ನ ಹಣೆಬರಹದಲ್ಲಿ ಈಗ ಬರ್ದಿದೆ. ಮನೆಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಈಗ ಆ ಕಾಲ ಕೂಡಿ ಬಂದಿದೆ. ಮದುವೆ ಬೇಗ ಆಗಿ ಏನಾದರೂ ಸಮಸ್ಯೆ ಮಾಡಿಕೊಳ್ಳುವುದಿಕ್ಕಿಂತ , ನಾನು ರೆಡಿ ಇದ್ದೀನಿ.. ಎಂದು ರೆಡಿ ಆದ ಮೇಲೆ ಮದುವೆ ಮದುವೆಯಾಗೋದು ಸರಿ. ಯಾರಿಗಾದರೂ ಇದು ದೊಡ್ಡ ನಿರ್ಧಾರ. ನನಗೆ ನನ್ನ ಪತಿ ಬದುಕು ಸೀರಿಯಲ್‌ ನಿಂದ ಪರಿಚಯ. ಇಬ್ಬರು ಸ್ನೇಹಿತರಾಗಿದ್ದೇವು. ಬಳಿಕ ಮತ್ತೆ ವರ್ಷಗಳ ನಂತರ ಟಚ್‌ನಲ್ಲಿ ಬಂದೆವು. ನಂತರ ಇಬ್ಬರು ಮದುವೆಯಾಗೋಣ ಎಂದು ನಿರ್ಧಾರ ಮಾಡಿದೆವು. ಈಗಲೂ ಫ್ರೆಂಡ್‌ ಜತಗೆ ಇದ್ದೇನೆ ಎಂದು ಅನ್ನಿಸುತ್ತೆ. ಇಬ್ಬರಲ್ಲೂ ಪ್ರಪೋಸ್‌ ಏನೂ ಆಗಿಲ್ಲ. ಮಾತುಕತೆ ಆಯ್ತು. ಹಾಗೇ ಮದುವೆ ಆದೆವುʼʼಎಂದರು.

ಇದನ್ನೂ ಓದಿ: Actress Siri: ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀವೆ; ಪತಿಯನ್ನು ಬಣ್ಣಿಸಿದ ಸಿರಿ!

ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್​ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

Continue Reading

ಬಿಗ್ ಬಾಸ್

Payal Malik: ಇನ್ನೊಬ್ಬಳ ಜತೆ ಹಾಯಾಗಿರಲಿ ಎಂದು ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್!

Payal Malik: ಇಬ್ಬರು ಪತ್ನಿಯರನ್ನು ಹೊಂದಿರುವ ಯೂಟ್ಯೂಬರ್ ಅರ್ಮಾನ್ ಮಲಿಕ್ ಬಿಗ್ ಬಾಸ್ OTT 3 ಸೀಸನ್ ನ ಸ್ಪರ್ಧಿ ಆಗಿದ್ದು. ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 3ರ ಮೊದಲ ವಾರವೇ ಪಾಯಲ್ ಎಲಿಮಿನೇಟ್ ಆಗಿದ್ದಾರೆ. ಈಗ ಅರ್ಮಾನ್ ತನ್ನ ಎರಡನೇ ಪತ್ನಿ ಕೃತಿಕಾ ಅವರೊಂದಿಗೆ ಶೋನಲ್ಲಿದ್ದಾರೆ.

VISTARANEWS.COM


on

Payal Malik declares she’s ready to divorce Armaan Malik
Koo

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ OTT 3 ನಿಂದ ಎಲಿಮಿನೇಟ್ ಆದ ವಾರಗಳ ನಂತರ, ಪಾಯಲ್ ಮಲಿಕ್ (Payal Malik ) ಪತಿ ಅರ್ಮಾನ್ ಮಲಿಕ್‌ಗೆ (Armaan Malik) ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಯೂಟ್ಯೂಬರ್ ಅರ್ಮಾನ್ ಮಲಿಕ್ ಬಿಗ್ ಬಾಸ್ OTT 3 ಸೀಸನ್ ನ ಸ್ಪರ್ಧಿ ಆಗಿದ್ದು. ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 3ರ ಮೊದಲ ವಾರವೇ ಪಾಯಲ್ ಎಲಿಮಿನೇಟ್ ಆಗಿದ್ದಾರೆ. ಈಗ ಅರ್ಮಾನ್ ತನ್ನ ಎರಡನೇ ಪತ್ನಿ ಕೃತಿಕಾ ಅವರೊಂದಿಗೆ ಶೋನಲ್ಲಿದ್ದಾರೆ. ‘ನಾನು ಈ ನಾಟಕ ಮತ್ತು ದ್ವೇಷದಿಂದ ಬೇಸತ್ತಿದ್ದೇನೆ. ನನ್ನ ಬಗ್ಗೆ ಇದ್ದಷ್ಟು ದಿನ ಚೆನ್ನಾಗಿಯೇ ಇದ್ದೆ. ಆದರೆ ಈಗ ಈ ದ್ವೇಷ ನನ್ನ ಮಕ್ಕಳಿಗೂ ತಲುಪುತ್ತಿದೆ. ಇದು ಕೀಳು ಮಟ್ಟದಾಗಿದೆ ಎಂದು ಪಾಯಲ್ ಹೇಳಿದ್ದಾರೆ. 

“ನಾನು ಈ ನಾಟಕ ಮತ್ತು ದ್ವೇಷದಿಂದ ಬೇಸತ್ತಿದ್ದೇನೆ. ನಾನು ಟ್ರೋಲ್ ಆಗುವವರೆಗೂ ಅದು ಚೆನ್ನಾಗಿತ್ತು. ಆದರೆ ಈಗ ನನ್ನ ಮಕ್ಕಳೂ ಟ್ರೋಲ್ ಆಗುತ್ತಿದ್ದಾರೆ. ಇದೇ ಕಾರಣಕ್ಕೆ ಅರ್ಮಾನ್‌ನಿಂದ ಬೇರೆಯಾಗಲು ನಿರ್ಧರಿಸಿದ್ದೇನೆ. ಅವರು ಈಗ ಅವನು ಕೃತಿಕಾ ಜೊತೆ ಬದುಕಬಹುದು ಮತ್ತು ನಾನು ನನ್ನ ಮಕ್ಕಳನ್ನು ನೋಡಿಕೊಳ್ತೇನೆ” ಎಂದಿದ್ದಾರೆ.

“ಒಂದೋ ನಾವು ಮೂವರೂ ಬೇರ್ಪಡುತ್ತೇವೆ, ಅಥವಾ ನಮ್ಮಲ್ಲಿ ಇಬ್ಬರು ಬೇರ್ಪಡುತ್ತೇವೆ, ಅಥವಾ ನಾನು ದೂರ ಹೋಗುತ್ತೇನೆ. . ಹೊರಗೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ಏನಾಗುತ್ತಿದೆ ಎಂದು ನನಗೆ ತಿಳಿದಿದೆ, ನನ್ನ ಜೀವನದಲ್ಲಿ ನಾನು ಎಂದಿಗೂ ದ್ವೇಷ, ಟ್ರೋಲಿಂಗ್ ಮತ್ತು ನಿಂದನೆಗಳನ್ನು ಎದುರಿಸಿಲ್ಲ. ನನ್ನ ನಿರ್ಧಾರ ಧೃಢವಾಗಿದೆ. ನಾನು ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅರ್ಮಾನ್ ಮತ್ತು ಕೃತಿಕಾ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅದರ ಬಗ್ಗೆ ಚರ್ಚಿಸುತ್ತೇನೆ ಎಂದು ಪಾಯಲ್‌ ಹೇಳಿದ್ದಾರೆ.

ಇದನ್ನೂ ಓದಿ: Chiyaan Vikram: ʻKGFʼ ಅಸಲಿ ಕಥೆ ಹೇಳಲು ಬರ್ತಾ ಇದೆ ‘ತಂಗಲಾನ್’; ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್!

ಪಾಯಲ್ ಮತ್ತು ಆಕೆಯ ಆತ್ಮೀಯ ಸ್ನೇಹಿತೆ ಕೃತಿಕಾ ಅವರು ಅರ್ಮಾನ್ ಮಲಿಕ್ ಅವರನ್ನು ಮದುವೆಯಾಗಿದ್ದರು. : ಖ್ಯಾತ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ ಅವರು ಯುಟ್ಯೂಬ್‌ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ.

Continue Reading

ಬಿಗ್ ಬಾಸ್

Bigg Boss Kannada: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಯಾವಾಗಿನಿಂದ ಶುರು? ಸ್ಪರ್ಧಿಗಳು ಇವರೇನಾ?

Bigg Boss Kannada: ಕಳೆದ ಬಾರಿ ಕನ್ನಡ ಬಿಗ್‌ಬಾಸ್ ಶೋ ಒಟಿಟಿಯಲ್ಲಿ 24 ಗಂಟೆ ಪ್ರಸಾರವಾಗಿತ್ತು. ಈ ಬಾರಿ ಕೂಡ ಅದೇ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ.

VISTARANEWS.COM


on

Bigg Boss Kannada 11 Starting Date And Contestants List
Koo

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಶುರುವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಕನ್ನಡ ಬಿಗ್‌ಬಾಸ್ ಶೋ ಒಟಿಟಿಯಲ್ಲಿ 24 ಗಂಟೆ ಪ್ರಸಾರವಾಗಿತ್ತು. ಈ ಬಾರಿ ಕೂಡ ಅದೇ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಕಳೆದ ಸೀಸನ್‌ನಲ್ಲಿ ಹಾಸ್ಯನಟ ತುಕಾಲಿ ಸಂತು ಬಿಗ್‌ಬಾಸ್ ಮನೆಗೆ ಹೋಗಿದ್ದರು. ಈ ಬಾರಿ ಅವರ ಪತ್ನಿ ಮಾನಸ ಹೋಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಕಿರುತೆರೆ ನಡ ವರುಣ್ ಆರಾಧ್ಯ ಕೂಡ ಈ ಲಿಸ್ಟ್‌ನಲ್ಲಿರುವ ಸಾಧ್ಯತೆಯಿದೆ. ಇನ್ನು ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ನಟಿಯರಾದ ಭವ್ಯಾ ಗೌಡ, ಮೋಕ್ಷಿತಾ ಪೈ ಹೀಗೆ ಹಲವರ ಹೆಸರುಗಳು ಹರಿದಾಡುತ್ತಿದೆ.

ಇದನ್ನೂ ಓದಿ: Bigg Boss Kannada OTT : ಬರ್ತಾ ಇದೆ ‘ಬಿಗ್ ಬಾಸ್ ಕನ್ನಡ’ ಒಟಿಟಿ ಸೀಸನ್? ಯಾವಾಗಿಂದ ಶುರು?

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಾರಿ ಯಾರು ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿ ಆಗಿತ್ತು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವರ್ತೂರು ಸಂತೋಷ್ ಅವರು ಒಂದಷ್ಟು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ತನಿಷಾ ಕುಪ್ಪಂಡ ಅವರು ಒಂದು ಸಮುದಾಯಕ್ಕೆ ಬೇಸರ ತರಿಸುವ ಮಾತಾಡಿದರು ಎಂಬ ದೂರು ಕೇಳಿ ಬಂತು.

Continue Reading

ಬಿಗ್ ಬಾಸ್

Bigg Boss OTT 3: ‘ಅತ್ತಿಗೆ, ನೋಡಲು ಬ್ಯೂಟಿಫುಲ್‌’ ಅಂದಿದ್ದೇ ತಡ ಕೆನ್ನೆಗೆ ಬಾರಿಸಿಯೇ ಬಿಟ್ಟ ಇಬ್ಬರು ಹೆಂಡತಿಯರ ಮುದ್ದಿನ ಗಂಡ!

Bigg Boss OTT 3: ಅರ್ಮಾನ್ ಮಲ್ಲಿಕ್ ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಮನೆಯಾಚೆ ಬಂದಿದ್ದಾರೆ. ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡಿದ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನ್ನ ಪತ್ನಿಯ ಸೌಂದರ್ಯದ ಬಗ್ಗೆ ಮಾತನಾಡಿದ್ದಕ್ಕೆ ಅರ್ಮಾನ್ ಅವರಿಗೆ ಸಿಟ್ಟು ಬಂದಿದೆ. ಹಾಗಾಗಿ ಅವರು ವಿಶಾಲ್ ಪಾಂಡೆ ಜತೆ ಜಗಳ ಮಾಡಿದ್ದಲ್ಲದೆ ಹೊಡೆದಿದ್ದಾರೆ. ಈ ವಿಚಾರವಾಗಿ ಬಾಲಿವುಡ್‌ನಲ್ಲಿ ಚರ್ಚೆ ನಡೆದಿದೆ. 

VISTARANEWS.COM


on

Bigg Boss OTT 3 Armaan Malik slaps Vishal Pandey in
Koo

ಬೆಂಗಳೂರು: ಬಿಗ್ ಬಾಸ್ OTT ಸೀಸನ್‌ನಲ್ಲಿ (Bigg Boss OTT 3) ಅರ್ಮಾನ್ ಮಲಿಕ್ (Arman Malik) ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಭಾಗವಹಿಸಿರುವುದು ಗೊತ್ತೇ ಇದೆ. ಇದೀಗ ಬಿಗ್‌ ಬಾಸ್‌ ಮನೆಯೊಳಗಿನ ಸ್ಪರ್ಧಿಗಳ ಡ್ರಾಮ ಮತ್ತೊಂದು ಹಂತವನ್ನು ತಲುಪಿದೆ. ಅರ್ಮಾನ್ ಮಲಿಕ್ ಪತ್ನಿ ಕೃತಿಕಾ ಮಲಿಕ್ ಬಗ್ಗೆ ವಿಶಾಲ್ ಪಾಂಡೆ ಮಾಡಿದ ಕಮೆಂಟ್‌ಗಾಗಿ ಕಪಾಳಮೋಕ್ಷ ಮಾಡಿದ್ದಾರೆ. ಇದು ಅನೇಕರ ಆಕ್ರೋಶಕ್ಕೆ ಗುರಿಯಾಗಿದೆ. ತನ್ನ ಪತ್ನಿಯ ಸೌಂದರ್ಯದ ಬಗ್ಗೆ ಮಾತನಾಡಿದ್ದಕ್ಕೆ ಅರ್ಮಾನ್ ಅವರಿಗೆ ಸಿಟ್ಟು ಬಂದಿದೆ. ಹಾಗಾಗಿ ಅವರು ವಿಶಾಲ್ ಪಾಂಡೆ ಜತೆ ಜಗಳ ಮಾಡಿದ್ದಲ್ಲದೆ ಹೊಡೆದಿದ್ದಾರೆ. ಈ ವಿಚಾರವಾಗಿ ಬಾಲಿವುಡ್‌ನಲ್ಲಿ ಚರ್ಚೆ ನಡೆದಿದೆ. 

ಅರ್ಮಾನ್ ಮಲ್ಲಿಕ್ ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಮನೆಯಾಚೆ ಬಂದಿದ್ದಾರೆ. ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡಿದ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನೇಕರು ಶೋನಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದಕ್ಕಾಗಿ ಅರ್ಮಾನ್ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಕೈ ಮಾಡುವವರು, ದೈಹಿಕವಾಗಿ ಹಲ್ಲೆ ಮಾಡುವವರು ದೊಡ್ಮನೆಯಿಂದ ಹೊರಗಡೆ ಹೋಗಬೇಕು. ಆದರೆ ಅರ್ಮಾನ್ ಇನ್ನೂ ಅಲ್ಲಿಯೇ ಇದ್ದಾರೆ.

ಮಾರಾ ಮಾರಿಯಾಗಿದ್ದೇಕೆ?

ಸ್ಪರ್ಧಿಗಳಾದ ಅರ್ಮಾನ್ ಮತ್ತು ವಿಶಾಲ್ ಇತ್ತೀಚೆಗೆ ಜಗಳವಾಡಿದರು. ವಿಶಾಲ್ “ಅರ್ಮಾನ್ ಅವರ ಪತ್ನಿ ಕೃತಿಕಾ ಮಲಿಕ್ ಅವರನ್ನು ಸುಂದರವಾಗಿ ಕಾಣುತ್ತಾರೆ” ಎಂದು ಹೇಳಿದಾಗ ಅಲ್ಲಿಂದ ಜಗಳ ಆರಂಭವಾಗಿದೆ.

ಲವಕೇಶ್ ಕಟಾರಿಯಾ ಜೊತೆ ಮಾತನಾಡುತ್ತಿರುವ ಸಮಯದಲ್ಲಿ ಅರ್ಮಾನ್‌ ಮಲಿಕ್‌ ಪತ್ನಿ ಕೃತಿಕಾ ಅವರ ಬಗ್ಗೆ ವಿಶಾಲ್ ಪಾಂಡೆ ಮಾತನಾಡಿದ್ದಾರೆ. ಅತ್ತಿಗೆ ಕೃತಿಕಾ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಈ ವಿಚಾರವನ್ನು ಪಾಯಲ್ ಪ್ರಸ್ತಾಪಿಸಿದ್ದಾರೆ. ಈ ವಿಷ್ಯ ಕಿವಿಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದ ಅರ್ಮಾನ್ ಮಲ್ಲಿಕ್, ಆರಂಭದಲ್ಲಿ ವಿಶಾಲ್ ಪಾಂಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಮೊದಲಿಂದ ಹೀಗೆ ನಾ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಇದಕ್ಕೆ ವಿಶಾಲ್‌ “ನಾನು ಆ ಅರ್ಥದಲ್ಲಿ ಹೇಳಿಲ್ಲ” ಎಂದಿದ್ದಾರೆ. ಇದರಿಂದ ಇನ್ನೂ ಕೆರಳಿದ ಅರ್ಮಾನ್ ಮಲ್ಲಿಕ್, ʻನೀನೇನು ಹೇಳಲೇ ಇಲ್ಲ, ನೀನು ಏನು ಅರಿಯದ ಮುಗ್ಧʼ ಎಂದಿದ್ದಾರೆ. ಆ ನಂತರ ಮಾತಿಗೆ ಮಾತು ಬೆಳೆದು ವಿಶಾಲ್ ಪಾಂಡೆ ಅವರ ಕಪಾಳಕ್ಕೆ ಅರ್ಮಾನ್ ಮಲ್ಲಿಕ್ ಬಾರಿಸಿದ್ದಾರೆ.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ನಡೆದ ಈ ಹೊಡೆದಾಟದ ಬಗ್ಗೆ ಬಾಲಿವುಡ್‌ನಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಬಿಗ್ ಬಾಸ್ ಸ್ಫರ್ಧಿಗಳು ಕೂಡ ಈ ಘಟನೆಯನ್ನೂ ಖಂಡಿಸಿದ್ದಾರೆ.

ʻಮದುವೆಯಾದವರನ್ನು ಸುಂದರವಾಗಿದ್ದಾಳೆ ಅಂತ ಹೇಳೋ ಹಾಗಿಲ್ಲವೇ? ದೈಹಿಕವಾಗಿ ಕೈ ಮಾಡಿದವರು ಹೊರಗಡೆ ಹೋಗಬೇಕು ಅಥವಾ ಎಲ್ಲರೂ ಎಲ್ಲರಿಗೂ ಹೊಡೆಯಬೇಕು” ಎಂದು ನಟ ಕುಶಾಲ್ ಟಂಡನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss OTT 3: ಬಿಗ್‌ ಬಾಸ್‌ ಒಟಿಟಿಯಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡ; ಗೋಳೋ ಎಂದು ಅತ್ತ ಮೊದಲ ಪತ್ನಿ!

ಇದೀಗ ವಿಶಾಲ್ ಸಹೋದರಿ ನೇಹಾ ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ “ನನ್ನ ಸಹೋದರ ಯಾವುದೇ ತಪ್ಪು ಮಾಡಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಅವರು ಯಾರನ್ನೂ ಅವಮಾನಿಸಿಲ್ಲ, ಅಥವಾ ಅವರು ಅನುಚಿತವಾಗಿ ಏನನ್ನೂ ಹೇಳಿಲ್ಲ. ಯಾವುದೇ ಕೆಟ್ಟ ಉದ್ದೇಶಗಳನ್ನು ಹೊಂದಿಲ್ಲ. ಅರ್ಮಾನ್ ತಪ್ಪಾಗಿ ಅರ್ಥೈಸಿಕೊಂಡರು. ನಾವು ವಿಶಾಲ್ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ನಾವು ಅವನನ್ನು ನಂಬುತ್ತೇವೆʼʼಎಂದು ಬರೆದುಕೊಂಡಿದ್ದಾರೆ.

Continue Reading
Advertisement
Chaluvadi Narayanaswamy
ಕರ್ನಾಟಕ45 mins ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ59 mins ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ1 hour ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ2 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು2 hours ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌