BBK SEASON 10: ಈ ಸೀಸನ್‌ನ ಕೊನೆಯ ಉತ್ತಮ, ಕಳಪೆ ಪಟ್ಟ ಪಡೆದುಕೊಂಡವರು ಯಾರು? - Vistara News

ಬಿಗ್ ಬಾಸ್

BBK SEASON 10: ಈ ಸೀಸನ್‌ನ ಕೊನೆಯ ಉತ್ತಮ, ಕಳಪೆ ಪಟ್ಟ ಪಡೆದುಕೊಂಡವರು ಯಾರು?

BBK SEASON 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕೊನೆಯ ಉತ್ತಮ ಪಟ್ಟ ಡ್ರೋನ್‌ ಪ್ರತಾಪ್‌ಗೆ ಮತ್ತು ಕಳಪೆ ಪಟ್ಟ ತುಕಾಲಿ ಸಂತು ಅವರಿಗೆ ಲಭಿಸಿದೆ.

VISTARANEWS.COM


on

bigg boss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು:  ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಂಗೀತಾ ಶೃಂಗೇರಿ ಫಿನಾಲೆಗೆ ನೇರ ಟಿಕೆಟ್‌ ಪಡೆದುಕೊಂಡಿದ್ದಾರೆ. ಇನ್ನೂ ಯಾರೆಲ್ಲ ಅಂತಿಮ ಹಂತಕ್ಕೆ ಹೋಗಲಿದ್ದಾರೆ ಎನ್ನುವ ಕುತೂಹಲ ಕೆರಳಿದೆ. ಈ ಮಧ್ಯೆ ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ನ ಕೊನೆಯ ಉತ್ತಮ ಹಾಗೂ ಕಳಪೆ ಪ್ರಕ್ರಿಯೆಯೂ ನಡೆದಿದೆ.

ಯಾರಿಗೆ ಉತ್ತಮ, ಕಳಪೆ ಪಟ್ಟ?

ಈ ಬಾರಿ ಮನೆಯ ಸದಸ್ಯರ ಪೈಕಿ ಉತ್ತಮ ಪಟ್ಟ ಮುಡಿಗೇರಿಸಿಕೊಂಡವರು ಡ್ರೋನ್ ಪ್ರತಾಪ್. ಈ ವಾರವೆಲ್ಲ ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರತಾಪ್‌ ಪರವಾಗಿ ಮನೆಯ ಹಲವು ಸ್ಪರ್ಧಿಗಳು ಮತ ಚಲಾಯಿಸಿದರು. ಇನ್ನು ಬಿಗ್​ಬಾಸ್ ಕನ್ನಡ ಸೀಸನ್ 10ರ ಕಟ್ಟ ಕಡೆಯ ಕಳಪೆ ಪಟ್ಟ ಪ್ರಾಪ್ತಿಯಾಗಿದ್ದು ತುಕಾಲಿ ಸಂತು ಅವರಿಗೆ. ಹೆಚ್ಚಿನ ಸ್ಪರ್ಧಿಗಳು ತುಕಾಲಿ ಅವರನ್ನು ಕಳಪೆ ಎಂದು ಸೂಚಿಸಿದ್ದರಿಂದ ಅವರನ್ನು ಬಿಗ್‌ಬಾಸ್‌ ಮನೆಯ ಜೈಲಿಗೆ ಕಳುಹಿಸಲಾಯಿತು.

ಉತ್ತಮ-ಕಳಪೆ ಸ್ಪರ್ಧಿಗಳ ತೀರ್ಮಾನವಾದ ಬಳಿಕ ಒಂದಷ್ಟು ನಾಟಕೀಯ ಸನ್ನಿವೇಶ ಸೃಷ್ಟಿಯಾಗಿತ್ತು. ಕಳಪೆಯಾಗಿ ಆಯ್ಕೆಯಾದ ತುಕಾಲಿ ಸಂತು, ʼʼಇದನ್ನು ನಾನು ಒಪ್ಪುವುದಿಲ್ಲ, ಕೆಲವೇ ನಿಮಿಷಗಳು ನಡೆಯುವ ಟಾಸ್ಕ್​ನ ಆಧಾರದಲ್ಲಿ ಕಳಪೆ ನೀಡುವುದು ಸರಿಯಾದ ಕ್ರಮವಲ್ಲ. ನನಗೆ ಇದು ಒಪ್ಪಿಗೆ ಇಲ್ಲ. ಆದರೆ ನಿಯಮದ ಪ್ರಕಾರ ಒಪ್ಪಲೇ ಬೇಕಿದೆ ಎಂಬ ಕಾರಣಕ್ಕೆ ನಾನು ಇದನ್ನು ತೆಗೆದುಕೊಳ್ಳುತ್ತಿದ್ದೇನೆʼʼ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದರು. ಅವರ ಪರವಾಗಿ ನಿಂತ ವರ್ತೂರು ಸಂತೋಷ್‌, ʼʼನಾನು ಜೈಲಿನ ಪಕ್ಕದಲ್ಲಿಯೇ ಇರುತ್ತೇನೆ. ಜೈಲು ಬಹಳ ಒಳ್ಳೆಯ ಸ್ಥಳ, ಇಲ್ಲಿಗೆ ಹೋಗಿ ಹೊರಗೆ ಬಂದವರು ಇತಿಹಾಸ ನಿರ್ಮಿಸುತ್ತಾರೆ. ಹೋಗಿ ಬಾ’ʼ ಎಂದು ಸಮಾಧಾನ ಮಾಡಿ ಅವರನ್ನು ಒಳಗೆ ಕಳಿಸಿದರು.

ಮೊದಲ ಬಾರಿ ಕಳಪೆ ಪಟ್ಟ

ಇನ್ನೊಂದು ವಿಶೇಷ ಎಂದರೆ ತುಕಾಲಿ ಸಂತು ಇದೇ ಮೊದಲ ಬಾರಿಗೆ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಇಷ್ಟು ದಿನ ಕಳಪೆ ಪಟ್ಟ ಪಡೆಯದೇ ವಿಶೇಷ ಸಾಧನೆ ಮಾಡಿದ್ದ ತುಕಾಲಿ ಸಂತು ಅವರ ಅದೃಷ್ಟ ಈ ವಾರ ಯಾಕೋ ಕೈ ಕೊಟ್ಟಿದೆ. ಕಾರ್ತಿಕ್‌, ಡ್ರೋನ್‌ ಪ್ರತಾಪ್‌ ಸೇರಿ ಬಹುತೇಕ ಸದಸ್ಯರ ʼಕಳಪೆʼ ಓಟು ವೋಟು ಸಂತುಗೆ ಕಡೆಯೇ ಇದ್ದವು.

ಇದನ್ನೂ ಓದಿ: BBK SEASON 10: ವಿನಯ್‌ ಮಾತಿಗೆ ನಮ್ರತಾ ಕಣ್ಣೀರು; ‘ನೀನೇ ಸಾಕಿದ ಗಿಣಿ’ ಎಂದು ತಿವಿದ ತುಕಾಲಿ!

ʻಟಿಕೆಟ್‌ ಟು ಫಿನಾಲೆʼ

ಬಿಗ್‌ಬಾಸ್‌ ಮನೆಯಲ್ಲಿ ಆರಂಭದಿಂದಲೂ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಸಂಗೀತಾ ಶೃಂಗೇರಿ ಈಗಾಗಲೇ ಫೈನಲ್‌ ಪ್ರವೇಶಿಸಿದ್ದಾರೆ. ʻಕ್ಯಾಪ್ಟನ್ಸಿ ಟಾಸ್ಕ್ʼ ಹಾಗೂ ʻಟಿಕೆಟ್​ ಟು ಫಿನಾಲೆʼ ಎರಡನ್ನೂ ಅವರು ಗೆದ್ದುಕೊಂಡಿದ್ದಾರೆ. ಈ ವಾರವೂ ಸಂಗೀತಾ ಕ್ಯಾಪ್ಟನ್‌ ಆಗಲಿದ್ದಾರೆ. ಸದ್ಯ ದೊಡ್ಮನೆಯಲ್ಲಿ ತುಕಾಲಿ ಸಂತು, ತನಿಷಾ ಕುಪ್ಪುಂಡ, ಕಾರ್ತಿಕ್‌ ಮಹೇಶ್‌, ವರ್ತೂರ್‌ ಸಂತೋಷ್‌, ನಮ್ರತಾ ಗೌಡ, ವಿನಯ್‌ ಗೌಡ, ಡ್ರೋನ್‌ ಪ್ರತಾಪ್‌ ಮತ್ತು ಸಂಗೀತಾ ಶೃಂಗೇರಿ ಇದ್ದಾರೆ. ಚಾಂಪಿಯನ್‌ ಪಟ್ಟ ಯಾರಿಗೆ ದೊರೆಯಲಿದೆ ಎನ್ನುವ ಕುರಿತು ಈಗಾಗಲೇ ಲೆಕ್ಕಾಚಾರ ಆರಂಭವಾಗಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bigg Boss Kannada : ಸ್ವರ್ಗ- ನರಕಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿಗಳು; ಬಿಗ್‌‌ ಬಾಸ್‌ ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್

Bigg Boss Kannada : ಬಿಗ್‌ಬಾಸ್‌ ಸೀಸನ್‌ 11ರ ಸ್ವರ್ಗ- ನರಕದ ಆಟದಕ್ಕೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನಟ ದರ್ಶನ್‌ ಫಾಲೋವರ್ಸ್ ಇದ್ದು, ದರ್ಶನ್‌ ಬಗ್ಗೆ ಚರ್ಚೆಯಾಗುತ್ತಾ ಎಂಬ ಕುತೂಹಲ ಮೂಡಿದೆ.

VISTARANEWS.COM


on

By

Bigg Boss season 11 The real game starts today
Koo

ಬೆಂಗಳೂರು: ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಮತ್ತೆ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟಕ್ಕೆ ಸ್ಪರ್ಧಿಗಳು ನಿನ್ನೆ ಭಾನುವಾರ ಗ್ರಾಂಡ್ ಎಂಟ್ರಿ (bigg boss kannada season 11) ಕೊಟ್ಟಿದ್ದಾರೆ.

ದೊಡ್ಮನೆಯ ರಂಗಿನಾಟಕ್ಕೆ ಬಣ್ಣದ ಲೋಕದಿಂದ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೆ ಚಾಪು ಮೂಡಿಸಿ ಫೇಮಸ್‌ ಆಗಿರುವ ಕಂಟೆಸ್ಟೆಂಟ್ಸ್ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಕಿರುತೆರೆ ನಟಿ ಭವ್ಯಾ ಗೌಡ ಎಂಟ್ರಿ ಕೊಟ್ಟರೆ, ನಂತರ ಒಬ್ಬೊಬ್ಬರಾಗೆ ಕೆಲವರು ಸ್ವರ್ಗಕ್ಕೆ, ಮತ್ತೆ ಕೆಲವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮೈ ತುಂಬಾ ಚಿನ್ನವನ್ನು ಹಾಕಿಕೊಂಡ ಗೋಲ್ಡ್ ಸುರೇಶ್, ಫೇಸ್‌ಬುಕ್ ಲಾಯರ್ ಜಗದೀಶ್, ಹಿಂದುತ್ವವಾದಿ ಚೈತ್ರಾ ಕುಂದಾಪುರ, ಹೀಗೆ ಭಿನ್ನ-ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಬಿಗ್ ಬಾಸ್ 11ನೇ ಸೀಸನ್ ಮನೆಯೊಳಗೆ (bigg boss kannada season 11 grand opening) ಕಾಲ್ಟಿಟ್ಟಿದ್ದಾರೆ.

Bigg Boss season 11 The real game starts today
Bigg Boss season 11 The real game starts today

ಸ್ವರ್ಗ- ನರಕದ ಆಟಕ್ಕೆ ರೆಡಿಯಾದ ಕಂಟೆಸ್ಟೆಂಟ್ಸ್

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಮನೆಗಳನ್ನು ಮಾಡಲಾಗಿದೆ. ಬಿಗ್‌ ಮನೆಗೆ ಗ್ರ್ಯಾಂಡ್ ವೆಲ್ಕಮ್ ಪಡೆದುಕೊಂಡ ಹದಿನೇಳು ಸ್ಪರ್ಧಿಗಳಲ್ಲಿ ಒಬ್ಬೊಬ್ಬರಾಗೆ ಸ್ವರ್ಗ- ನರಕದ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗಕ್ಕೆ ಭವ್ಯ, ಯಮುನಾ, ಧನರಾಜ್, ಗೌತಮಿ, ಧರ್ಮ ಕೀರ್ತಿ, ಲಾಯರ್ ಜಗದೀಶ್, ತ್ರಿವಿಕ್ರಮ್, ಹಂಸ, ಐಶ್ವರ್ಯ ಹಾಗೂ ಉಗ್ರಂ ಮಂಜು ಎಂಟ್ರಿ ಕೊಟ್ಟಿದ್ದಾರೆ. ಇನ್ನು ನರಕಕ್ಕೆ ಅನುಷಾ ರೈ, ಶಿಶಿರ್, ಮಾನಸ, ಗೋಲ್ಡ್ ಶಶಿ, ಚೈತ್ರ, ಮೋಕ್ಷಿತ ಹಾಗು ರಂಜಿತ್ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗ ಹಾಗೂ ನರಕದ ಆಟಕ್ಕೆ ಕಂಟೆಸ್ಟೆಂಟ್ಸ್ ತುದಿಗಾಲಲ್ಲಿ ನಿಂತಿದ್ದು, 17 ಜನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ನಾಲ್ವರು ದರ್ಶನ್ ಆಪ್ತರಾಗಿರುವುದು (bigg boss kannada season 11 timings) ವಿಶೇಷ.

ಬಿಗ್ ಬಾಸ್ ಸೀಸನ್ 10 ಕಾಂಟ್ರವರ್ಸಿ ಮೂಲಕವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸೀಸನ್ 11 ಬಿಗ್ ಬಾಸ್ ವೀಕ್ಷಕರಿಗೆ ಬೆಟ್ಟದಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ ಅಂದರೆ ತಪ್ಪಾಗಲ್ಲ. ಹಲವು ಕಾಂಟ್ರವರ್ಸಿಗಳ ಮೂಲಕವೇ ಕಳೆದ ಸೀಸನ್ ಸ್ಪರ್ಧಿಗಳು ನೇಮ್ ಆ್ಯಂಡ್ ಫೇಮ್ ಗಿಟ್ಟಿಸಿಕೊಂಡಿದ್ದರು. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇನ್ನೆಷ್ಟು ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತೆ ಎಂದು ಬಿಗ್ ಬಾಸ್ ವೀಕ್ಷಕರು ಕಾಯ್ತಾ ಇದ್ದಾರೆ. ಇನ್ನು ದೊಡ್ಮನೆಯಲ್ಲಿರುವ ನಟ ದರ್ಶನ್‌ ಫಾಲೋವರ್ಸ್‌ನಿಂದ ಈ ಬಾರಿಯ ಬಿಗ್ ಬಾಸ್ ಸಖತ್ ಕಿಕ್ ಕೊಡಲಿದೆ ಎಂದು ಹೇಳಲಾಗುತ್ತಿದೆ.

ದೊಡ್ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್


ಹದಿನೇಳು ಸ್ಪರ್ಧಿಗಳಲ್ಲಿ ನಾಲ್ವರು ಕಂಟೆಸ್ಟೆಂಟ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದಾರೆ. ದರ್ಶನ್ ಅವರ ಹೆಸರನ್ನು ಹಗಲಿರುಳು ಜಪ ಮಾಡುವ ಈ ನಾಲ್ವರು, ಸುದೀಪ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ದೊಡ್ಮನೆಯಲ್ಲಿ ಹಿಂದೆಂದೂ ಈ ತರಹದ ಕಾಕತಾಳೀಯ ಆಗಿರಲಿಲ್ಲ. ಆದರೆ ಈ ಬಾರಿ ನಿಜವಾಗಿದೆ. ಆ ನಾಲ್ಕು ಜನ ಸ್ಪರ್ಧಿಗಳು ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಜಪ ಮಾಡಿದರೂ ಕೂಡ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಕೆಲವು ದರ್ಶನ್ ಆಪ್ತರು ವೇದಿಕೆ ಮೇಲೆ ದಚ್ಚು ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ನಾಲ್ವರಿಂದ ಬಿಗ್ ಬಾಸ್ ಮನೆಯಲ್ಲೂ ದರ್ಶನ್ ಬಗ್ಗೆ ಚರ್ಚೆಯಾಗುತ್ತಾ ಅಂತ ಬಿಗ್ ಬಾಸ್ ವೀಕ್ಷಕರಿಗೆ ಕುತೂಹಲ ಕ್ರಿಯೇಟ್ ಆಗಿದೆ.

ಮುಂದಿನ ನೂರು ದಿನಗಳವರೆಗೆ ದರ್ಶನ್ ವಿಚಾರ ಒಂಟಿ ಮನೆಯಲ್ಲಿ ಕೇಳಿ ಬಂದರೆ, ದರ್ಶನ್ ವಿಚಾರವನ್ನು ಸುದೀಪ್ ಗಮನಿಸಿ ವಾರಾಂತ್ಯದಲ್ಲಿ ಯಾವ ರೀತಿ ಮಾತನಾಡುತ್ತಾರೆ ಎಂಬುದು ಸದ್ಯ ಬಿಗ್ ಬಾಸ್ ವೀಕ್ಷಕರಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಿಗ್ ಬಾಸ್

Bigg Boss Kannada: ಲೀಕ್‌ ಆಯ್ತು ಬಿಗ್‌ ಬಾಸ್‌ ಪ್ರೋಮೊ ಶೂಟ್‌ ಫೋಟೊ; ನಿರೂಪಕನ ಫೇಸ್‌ ರಿವೀಲ್‌!

Bigg Boss Kannada: ಈ ಮುಂಚೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್‌ ಫೋಟೊಗಳು ವೈರಲ್‌ ಆಗಿವೆ.

VISTARANEWS.COM


on

Bigg Boss Kannada promo shoot leak sudeep anchor
Koo

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಮುಕ್ತಾಯವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಆಗೋದು ಗ್ಯಾರಂಟಿ ಆಗಿದೆ ಸದ್ದಿಲ್ಲದೇ ಪ್ರೋಮೊ ಚಿತ್ರೀಕರಣ ಮಾಡಲಾಗಿದೆ. ಮತ್ತೊಮ್ಮೆ ಸುದೀಪ್ ವೀಕೆಂಡ್‌ನಲ್ಲಿ ಮನೆ ಮನೆಯ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡ-11 ಮೊದಲ ಪ್ರೋಮೊ ಬಿಡುಗಡೆ ಆಗಲಿದೆ.

ಈ ಮುಂಚೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್‌ ಫೋಟೊಗಳು ವೈರಲ್‌ ಆಗಿವೆ.

ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊಗೆ ಸಂಬಂಧಿಸಿದಂತೆ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಸೀಸನ್‌ನಿಂದ ಸೀಸನ್‌ಗೆ ಸುದೀಪ್ ಸಂಭಾವನೆ ಕೂಡ ಹೆಚ್ಚಾಗಿದೆ. ಇನ್ನು ಕಿಚ್ಚ ಬಹಳ ಇಷ್ಟಪಟ್ಟು ಶೋ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 27 ಅಥವಾ ಅಕ್ಟೋಬರ್ 5ರಂದು ಬಿಗ್‌ಬಾಸ್ ಕನ್ನಡ-11 ಆರಂಭವಾಗಲಿದೆ. ಯೂಟ್ಯೂಬರ್ ವರ್ಷಾ ಕಾವೇರಿ, ಕಿರುತೆರೆ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸ, ನಟ ಸುನೀಲ್ ರಾವ್, ಮೋಕ್ಷಿತಾ ಪೈ, ದಿವ್ಯಾ ವಸಂತ ಹೀಗೆ ಹಲವರ ಹೆಸರುಗಳು ಈ ಬಾರಿ ದೊಡ್ಮನೆಗೆ ಹೋಗಲು ಕೇಳಿಬರುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್‌ ಬಾಸ್‌ ಆಫರ್‌ ಬಂದಿದ್ದು ನಿಜ ಎಂದ ನಟಿ ಜ್ಯೋತಿ ರೈ! ಆದರೆ…..

ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Continue Reading

ಬಿಗ್ ಬಾಸ್

Bigg boss Hindi: ಬಿಗ್ ಬಾಸ್ 18ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಯಾವಾಗಿಂದ ಶುರು? 

Bigg boss Hindi: ಇದೀಗ ಬಿಗ್ ಬಾಸ್ 18ನೇ ಆವೃತ್ತಿ ರಿಯಾಲಿಟಿ ಶೋವನ್ನು ನಟ ಸಲ್ಮಾನ್ ಖಾನ್ನ ಡೆಸಿಕೊಡಲಿದ್ದಾರೆ. ಜತೆಗೆ ಸ್ಪರ್ಧಿಗಳು ಯಾರೆಲ್ಲ ಎಂಬ ಸಂಭಾವ್ಯ ಪಟ್ಟಿ ಹೊರ ಬಿದ್ದಿದೆ.

VISTARANEWS.COM


on

Bigg boss Hindi list of contestants
Koo

ಬೆಂಗಳೂರು: ಈ ವರ್ಷ, ನಟ ಅನಿಲ್ ಕಪೂರ್ ಅವರು ಸಲ್ಮಾನ್ ಖಾನ್ ಬದಲಿಗೆ ಬಿಗ್ ಬಾಸ್ ಹಿಂದಿ (Bigg boss Hindi) OTT ಯ (Bigg Boss OTT 3) ಮೂರನೇ ಸೀಸನ್‌ನ ನಿರೂಪಕರಾಗಿದ್ದರು. ಪ್ರೇಕ್ಷಕರ ಒಂದು ವರ್ಗ ಅನಿಲ್ ಕಪೂರ್ ಅವರ ನಿರೂಪಣಾ ಶೈಲಿಗೆ ಛೀಮಾರಿ ಹಾಕಿದೆ. ಬಿಗ್‌ ಬಾಸ್‌ ಸೀಸನ್‌ 18ನೇ ಆವೃತ್ತಿಗೆ ಸಲ್ಮಾನ್‌ ಅವರೇ ಹೋಸ್ಟ್‌ ಮಾಡಬೇಕು ಎಂದು ಪ್ರೇಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದರು. ಇದೀಗ ಬಿಗ್ ಬಾಸ್ 18ನೇ ಆವೃತ್ತಿ ರಿಯಾಲಿಟಿ ಶೋವನ್ನು ನಟ ಸಲ್ಮಾನ್ ಖಾನ್ನ ಡೆಸಿಕೊಡಲಿದ್ದಾರೆ. ಜತೆಗೆ ಸ್ಪರ್ಧಿಗಳು ಯಾರೆಲ್ಲ ಎಂಬ ಸಂಭಾವ್ಯ ಪಟ್ಟಿ ಹೊರ ಬಿದ್ದಿದೆ.

ಬಾಲಿವುಡ್ ನಟಿ ಇಶಾ ಕೋಪಿಕ್ಕರ್ 18ನೇ ಆವೃತ್ತಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.ಇಶಾ ಹೊರತಪಡಿಸಿದರೆ ಹಲವು ಹೆಸರು ಕೇಳಿಬರುತ್ತಿದೆ. ಈ ಪೈಕಿ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ನಟನೆಯಿಂದ ದೂರ ಉಳಿದಿರುವ ಸಮೀರಾ ರೆಡ್ಡಿ ಹೆಸರು ಮುಂಚೂಣಿಯಲ್ಲಿದೆ. ಹಿಂದಿ ಸೀರಿಯಲ್ ನಟ ಶೋಯಿಬ್ ಇಬ್ರಾಹಂ, ನಟಿ ಕಾಶಿಶ್ ಕಪೂರ್, ನಟ ಝ್ಯಾನ್ ಸೈಫಿ, ಪೂಜಾ ಶರ್ಮಾ, ಶೀಝಾನ್ ಖಾನ್, ದಲ್ಜಿತ್ ಕೌರ್ ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ. ಬಾಲಿವುಡ್ ಹಿರಿಯ ನಟಿ ರೇಖಾ ಈ ಬಾರಿಯಾ ಹಿಂದಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೆಲೆಬ್ರೆಟಿ ಚಾಯ್‌ವಾಲ ಡೋಲಿ ಚಾಯ್‌ವಾಲ ಈ ಬಾರಿಯ ಬಿಗ್ ಬಾಸ್‌ಗೆ ಆಹ್ವಾ ನೀಡಲಾಗಿದೆ ಎನ್ನಲಾಗುತ್ತಿದೆ. ಸಂಭಾವ್ಯ ಪಟ್ಟಿಯಲ್ಲಿ ಈ ಡೋಲಿ ಚಾಯ್‌ವಾಲ್ ಹೆಸರು ಮುಂಚೂಣಿಯಲ್ಲಿದೆ. ಸೋಶಿಯಲ್ ಮೀಡಿಯಾ ಸ್ಟಾರ್ ಫೈಸಲ್ ಶೇಕ್, ಫುಕ್ರಾ ಇನ್ಸಾನ್ ಯೂಟ್ಯೂಬರ್ ಅಭಿಷೇಕ್ ಮಲ್ಹನ್, ಟಿವಿ ನಟಿ ನುಸ್ರತ್ ಜಹಾನ್, ನಟಿ ದೀಪಿಕಾ ಆರ್ಯ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.ಕಾಮಿಡಿಯನ್ ಹರ್ಷಾ ಬೆನಿವಾಲ್, ಟಿವಿ ನಟಿ ಸುರ್ಭಿ ಜ್ಯೋತಿ, ನಟ ಕರನ್ ಪಟೇಲ್, ನಟ ಅಲೈಸ್ ಕೌಶಿಕ್ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ: Kundapura Kannada Habba: ನನ್ನ ಸಿನಿಮಾ ಕಥೆಗಳಿಗೆ ಊರು, ಯಕ್ಷಗಾನವೇ ಪ್ರೇರಣೆ; ರಿಷಬ್ ಶೆಟ್ಟಿ

ಹಿಂದಿಯ ಬಿಗ್ ಬಾಸ್ 17ನೇ (Bigg Boss 17)ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು,ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿತ್ತು.

Continue Reading

ಬಿಗ್ ಬಾಸ್

Isha Koppikar: ʻಸೂರ್ಯವಂಶʼ ಖ್ಯಾತಿಯ ನಟಿ ಬಿಗ್‌ ಬಾಸ್‌ಗೆ ಹೋಗೋದು ಫಿಕ್ಸ್‌!

Isha Koppikar:ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು.

VISTARANEWS.COM


on

Isha Koppikar Bigg Boss 18 Is Isha Koppikar a confirmed contestant
Koo

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಜತೆ ʻಸೂರ್ಯವಂಶʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮುಂಬೈ ನಟಿ ಇಶಾ ಕೊಪ್ಪಿಕರ್ (Isha Koppikar) ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಬ್ಬರು. ನಟಿ ಹಿಂದಿ ಚಿತ್ರರಂಗದಲ್ಲೂ ಹೆಸರು ಗಳಿಸಿದ್ದಾರೆ.  ಹಿಂದಿಯ ಬಿಗ್​ಬಾಸ್​ಗೆ ಮೊದಲ ಎಂಟ್ರಿಯಾಗಿ ಇಶಾ ಕೊಪ್ಪಿಕರ್​ ಹೆಸರು ಕನ್​ಫರ್ಮ್​ ಆಗಿದೆ. ಈ ಕುರಿತು ಖುದ್ದು ನಟಿ ಹೇಳಿದ್ದಾರೆ ಎನ್ನಲಾಗಿದೆ. 

ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಕನ್ನಡದಲ್ಲೂ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೂರ್ಯವಂಶ’,’ಹೂ ಅಂತಿಯಾ ಹೂಂ ಅಂತಿಯಾ’, ‘ಓ ನನ್ನ ನಲ್ಲೆ’, ‘ಲೂಟಿ’ ಹಾಗೂ ನಾಲ್ಕು ವರ್ಷಗಳ ಹಿಂದಷ್ಟೇ ತೆರೆಕಂಡಿರೋ ‘ಕವಚ’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅವರು ಹಿಂದಿಯ ಬಿಗ್​ಬಾಸ್​ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Isha Koppikar: ಖ್ಯಾತ ನಟ ನನಗೆ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದ ʻಸೂರ್ಯವಂಶʼ ನಟಿ!

ಇತ್ತೇಚೆಗೆ ನಟಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದರು. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಇಶಾ ಮಾತನಾಡಿ ʻʻಆಗೆಲ್ಲ ಮಿ ಟೂ ಭಿಯಾನ ಇರಲಿಲ್ಲ. ನನ್ನ ಕಾಲದಲ್ಲಿ ಅನೇಕ ನಟಿಯರು ಇಂಡಸ್ಟ್ರಿ ತೊರೆದರು. ಕೆಲವೇ ಕೆಲವರು ಇಂಡಸ್ಟ್ರಿಯಲ್ಲಿ ಇದ್ದರು. ಅದರಲ್ಲಿ ನಾನೂ ಒಬ್ಬಳು. ನಾನು 18 ವರ್ಷವನಿದ್ದಾಗ ನಟ ಕಾಸ್ಟಿಂಗ್ ಕೌಚ್‌ಗಾಗಿ ಸಂಪರ್ಕಿಸಿದರು. ಕೆಲಸ ಸಿಗಬೇಕಾದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಬೇಕು ಅಂತ ಹೇಳಿದ್ರು. ನೀವು ಯಾವ ಅರ್ಥದಲ್ಲಿ ‘ಫ್ರೆಂಡ್ಲಿ’ ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಮರು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ. ಇನ್ನೂ.. ಇದೊಂದೇ ಅಲ್ಲ. ಮತ್ತೊಮ್ಮೆ.. ಮತ್ತೊಬ್ಬ ಸ್ಟಾರ್‌ ನನಗೆ ಸಿಂಗಲ್ ಆಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದಿದ್ದಾರೆ. ಡ್ರೈವರ್ ಅಥವಾ ಬೇರೆ ಯಾರನ್ನೂ ಜತೆಗೆ ಕರೆದುಕೊಂಡು ಬರಬಾರದು ಎಂಬ ಷರತ್ತನ್ನೂ ಹಾಕಿದ್ದ ಎಂದಿರುವ ಇಶಾ ಕೊಪ್ಪಿಕರ್, ಆ ಕಾಲಕ್ಕೆ ಆತ ಹಿಂದಿ ಚಿತ್ರರಂಗದ ‘ಎ’ ದರ್ಜೆಯ ನಾಯಕನಾಗಿದ್ದ ಎಂದು ಕೂಡ ಹೇಳಿದ್ದಾರೆ. ನನ್ನ ಜೊತೆ ಚಿತ್ರರಂಗದ ಬಂದ ಹಲವಾರು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಕಾರಣಕ್ಕೆ ಚಿತ್ರರಂಗದಿಂದ ದೂರ ಸರೆದರು ಎಂದು ಹೇಳಿಕೊಂಡಿದ್ದರು.

ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಷೋ 18ನೇ ಸೀಸನ್​ ಬರುವ ಅಕ್ಟೋಬರ್​ 5ರಿಂದ ಶುರುವಾಗಲಿದೆ.

Continue Reading
Advertisement
Missing case
ದಕ್ಷಿಣ ಕನ್ನಡ5 ಗಂಟೆಗಳು ago

Missing case : ಮಾಜಿ ಶಾಸಕ‌ ಮೊಯ್ದೀನ್ ಬಾವಾರ ಸಹೋದರ ಮಿಸ್ಸಿಂಗ್‌; ಸೇತುವೆ ಬಳಿ ಡ್ಯಾಮೇಜ್‌ ಸ್ಥಿತಿಯಲ್ಲಿ ಕಾರು ಪತ್ತೆ

Drugs mafia
ಬೆಂಗಳೂರು7 ಗಂಟೆಗಳು ago

Drugs Mafia : ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ 626 ಮಾದಕ ವಸ್ತುಗಳ ಪಾರ್ಸಲ್‌ಗಳು ಪತ್ತೆ!

karnataka rain
ವಿಜಯನಗರ8 ಗಂಟೆಗಳು ago

Karnataka Rain : ವಿಜಯನಗರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಸಾವು

Murder case
ಮೈಸೂರು9 ಗಂಟೆಗಳು ago

Murder Case : ಮೈಸೂರಿನಲ್ಲಿ ಬಾವಿ ಪತ್ನಿಯನ್ನು ಕೊಂದು‌ ನೇಣು ಹಾಕಿದ ದುರುಳ!

Drowned in water
ಉತ್ತರ ಕನ್ನಡ9 ಗಂಟೆಗಳು ago

Drowned in Water : ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ತಮಿಳುನಾಡು ಮೂಲದ ವಿದ್ಯಾರ್ಥಿ ಬಲಿ

karnataka rain
ಮಳೆ10 ಗಂಟೆಗಳು ago

Karnataka Rain : ಸತತ ಮಳೆಗೆ ಮನೆಯ ಗೋಡೆ ಕುಸಿದು ವೃದ್ಧ ಸಾವು

murder case
ಚಿಕ್ಕೋಡಿ11 ಗಂಟೆಗಳು ago

Murder Case : ವಿಕೋಪಕ್ಕೆ ತಿರುಗಿದ ಅಣ್ಣ-ತಮ್ಮಂದಿರ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ

Lovers Death
ಕೋಲಾರ11 ಗಂಟೆಗಳು ago

Lovers Death : ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನ; ಅಪ್ರಾಪ್ತೆ ಸಾವು, ಹುಡುಗ ಗಂಭೀರ

Karnataka Rain
ಮಳೆ12 ಗಂಟೆಗಳು ago

karnataka Rain : ಬೆಂಗಳೂರಿನಲ್ಲಿ ಮಳೆ ಬಂದೋಯ್ತು, ಯಡವಟ್ಟು ಆಯ್ತು; ಜನರಿಗೆ ತಲೆ ಕೆಟ್ಟು ಹೋಯಿತು

Dina Bhvishya
ಭವಿಷ್ಯ13 ಗಂಟೆಗಳು ago

Dina Bhavishya : ಅತಿರೇಕದಲ್ಲಿ ಮಾತನಾಡುವ ಮುನ್ನ ಈ ರಾಶಿಯವರು ಯೋಚಿಸಿ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌