HSR ಲೇಔಟ್‌ನಲ್ಲಿ ಬ್ಯೂಟಿ ಆ್ಯಂಡ್ ಬಿಯಾಂಡ್ ಶಾಪ್ ಉದ್ಘಾಟಿಸಿದ ದಕ್ಷಿಣ ಭಾರತದ ಖ್ಯಾತ ನಟಿ! - Vistara News

ಬ್ರಾಂಡ್ ಕಾರ್ನರ

HSR ಲೇಔಟ್‌ನಲ್ಲಿ ಬ್ಯೂಟಿ ಆ್ಯಂಡ್ ಬಿಯಾಂಡ್ ಶಾಪ್ ಉದ್ಘಾಟಿಸಿದ ದಕ್ಷಿಣ ಭಾರತದ ಖ್ಯಾತ ನಟಿ!

ʻಬ್ಯೂಟಿ ಆ್ಯಂಡ್ ಬಿಯಾಂಡ್ʼ ಹೊಸ ಶಾಪ್‌ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಆರಂಭಗೊಂಡಿದೆ. ನಟಿ ಧನ್ಯ ಬಾಲಕೃಷ್ಣ ಈ ಹೊಸ ಶಾಪ್‌ ಉದ್ಘಾಟಿಸಿದರು.

VISTARANEWS.COM


on

ಬ್ಯೂಟಿ ಅಂಡ್ ಬಿಯಾಂಡ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸೌಂದರ್ಯವರ್ಧಕ ಉತ್ಪನ್ನವಾದ ʻಬ್ಯೂಟಿ ಆ್ಯಂಡ್ ಬಿಯಾಂಡ್ʼ (Beauty and beyond) ಎರಡನೇ ಶಾಪ್ ಬೆಂಗಳೂರಿನ ಎಚ್‌ಎಸ್ಆರ್ ಲೇಔಟ್‌ನಲ್ಲಿ ಆರಂಭಗೊಂಡಿದ್ದು, ದಕ್ಷಿಣ ಭಾರತದ ಖ್ಯಾತ ನಟಿ ಧನ್ಯ ಬಾಲಕೃಷ್ಣ ಉದ್ಘಾಟಿಸಿದರು.

ಬ್ಯೂಟಿ ಅಂಡ್ ಬಿಯಾಂಡ್

ಮೇಕಪ್, ಸುಗಂಧ ದ್ರವ್ಯ, ಹೇರ್ ಕೇರ್, ಬಾಡಿಕೇರ್ ಹೀಗೆ ಸೌಂದರ್ಯ ಆರೈಕೆ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಈ ಕಂಪನಿ ಛಾಪುಮೂಡಿಸಿದೆ. ಹೈದರಾಬಾದ್‌ನಲ್ಲಿ ಮೊದಲು ಆರಂಭವಾದ ಈ ಶಾಪ್, ಆ ನಂತರ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ತನ್ನ ಹೊಸ ಶಾಖೆ ತೆರೆದಿತ್ತು. ಈಗ ಎಚ್ಎಸ್ಆರ್ ಲೇಔಟ್‌ನಲ್ಲಿ ಎರಡನೇ ಶಾಪ್‌ ಆರಂಭವಾಗಿದೆ.

ಇದನ್ನೂ ಓದಿ | Sita Ramam Film | ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಸಿನಿಮಾ ಹಿಂದಿಯಲ್ಲಿ ಬಿಡುಗಡೆ

ಈ ಬಗ್ಗೆ ಮಾತನಾಡಿದ ಧನ್ಯ ಬಾಲಕೃಷ್ಣ, ʻʻಎಲ್ಲ ಲಕ್ಷುರಿ ಬ್ರ್ಯಾಂಡ್‌ಗಳನ್ನು ಒಂದೇ ಕಡೆ ಕೊಂಡುಕೊಳ್ಳಬಹುದು. ಕೆ ಬ್ಯೂಟಿ, ರೆಬಲಾನ್ ಸೇರಿದಂತೆ ಸ್ವತಃ ಅವರ ಬ್ರ್ಯಾಂಡ್ ಉತ್ಪನ್ನಗಳೂ ಇಲ್ಲಿ ದೊರೆಯುತ್ತವೆ. ಈ ಶಾಖೆ ಯಶಸ್ಸು ಕಾಣಲಿ, ಮುಂದಿನ ದಿನಗಳಲ್ಲಿ ನೂರು ಸ್ಟೋರ್ಸ್‌ಗೆ ತಲುಪಲಿʼʼ ಎಂದು ಹಾರೈಸಿದರು.

ಬ್ಯೂಟಿ ಅಂಡ್ ಬಿಯಾಂಡ್

ಇದನ್ನೂ ಓದಿ | Stars Fashion | ಎಥ್ನಿಕ್ ಉಡುಪಿಗೆ ಸೈ ಎಂದ ಸಿನಿಮಾ ತಾರೆಯರು; ಸೀರೆ, ಕುರ್ತಾದಲ್ಲಿ ಮಿಂಚು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರ್ನಾಟಕ

MEIL Products: ಇಂಧನ ಸಪ್ತಾಹ; ಎಂಇಐಎಲ್‌ ಸಂಸ್ಥೆಯಿಂದ ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಅನಾವರಣ

MEIL Products: ಬೆಂಗಳೂರಿನಲ್ಲಿ ಆಯೋಜಿಸಿರುವ ಭಾರತ ಇಂಧನ ಸಪ್ತಾಹ -2023ರಲ್ಲಿ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಸಂಸ್ಥೆಯ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.

VISTARANEWS.COM


on

MEIL Products
Koo

ಬೆಂಗಳೂರು: ಭಾರತದ ಜಿ- 20 ಅಧ್ಯಕ್ಷತೆಯ ಮೊದಲ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಭಾರತ ಇಂಧನ ಸಪ್ತಾಹ -2023 (ಇಂಡಿಯಾ ಎನರ್ಜಿ ವೀಕ್)ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇದು ಇಂಧನ ಕ್ಷೇತ್ರದಲ್ಲಿನ ದೇಶಿಯ ಸಂಸ್ಥೆಗಳ ಸಾಧನೆಗಳ ಅನಾವರಣಕ್ಕೆ ವೇದಿಕೆ ಸೃಷ್ಟಿಸಿದೆ.

ಸಾರಿಗೆ, ಇಂಧನ, ಉತ್ಪಾದನಾ ಕ್ಷೇತ್ರ ಸೇರಿ ಹಲವು ರಂಗಗಳಲ್ಲಿ ಸಾಧನೆ ಮೆರೆಯುತ್ತಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) (MEIL Products), ದೇಶಿಯ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ತನ್ನ ಅಂಗ ಸಂಸ್ಥೆಗಳಾದ ಡ್ರಿಲ್ಮೆಕ್ ಎಸ್‌ಪಿಎ, ಪೆಟ್ರೆವೆನ್ ಎಸ್‌ಪಿಎ, ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ (ಎಂಸಿಜಿಡಿಪಿಎಲ್), ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಮತ್ತು ಐಕಾಮ್ ಟೆಲಿ ಲಿಮಿಟೆಡ್ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲಿ ಹೊಂದಿರುವ ಪಾಲುದಾರಿಕೆಯನ್ನು ಮುಂದಿರಿಸಿದೆ.

ಎಂಇಐಎಲ್‍ನ ಈ ಸಂಸ್ಥೆಗಳು ತೈಲ ಮತ್ತು ಅನಿಲ, ನಗರ ಅನಿಲ ವಿತರಣೆ, ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸೇರಿ ವಿವಿಧ ಇಂಧನ ಕ್ಷೇತ್ರಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದ್ದು, ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ, ಹೈಡ್ರೋಕಾರ್ಬನ್ ವಿಭಾಗದ ನಿರ್ದೇಶಕ ದೋರಯ್ಯ ಮತ್ತು ಇತರ ಉನ್ನತ ನಿರ್ವಹಣಾ ಸದಸ್ಯರು, ಈ ಭಾರತದ ಮೊದಲ ಇಂಧನ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಭಾಗವಹಿಸಿ ದೇಶ- ವಿದೇಶಗಳ ರಾಯಭಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್

ಒಲೆಕ್ಟ್ರಾ ತನ್ನ ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಅನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಈ ಟಿಪ್ಪರ್ ಒಮ್ಮೆ ಚಾರ್ಜ್‌ ಮಾಡಿದರೆ 250 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ ಮತ್ತು ಎರಡು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದು ಸ್ಟ್ಯಾಂಡರ್ಡ್ 16 ಕ್ಯೂಬಿಕ್ ಮೀಟರ್ ಲೋಡ್ ಬಾಡಿ ಹೊಂದಿದ್ದು, ವಿವಿಧ ವಿನ್ಯಾಸಗಳಲ್ಲಿ ಲಭ್ಯವಾಗಲಿದೆ. ಒಟ್ಟು ವಾಹನ ತೂಕ (ಜಿವಿಡಬ್ಲ್ಯೂ) 28,000 ಕೆಜಿ ಆಗಿದ್ದು, ಟಿಪ್ಪಿಂಗ್ ಕೋನ ಗರಿಷ್ಠ 46 ಡಿಗ್ರಿ, ಗರಿಷ್ಠ ಗ್ರೇಡೆಬಿಲಿಟಿ 25%, ಗರಿಷ್ಠ ಟಾರ್ಕ್ 2,400 ಎನ್ಎಂ ಮತ್ತು 6X4 ಆಕ್ಸಲ್ ಕಾನ್ಫಿಗರೇಶನ್ ಹೊಂದಿದೆ. ಇದು ಸಾರಿಗೆ ಉದ್ಯಮದ ಗೇಮ್ ಚೇಂಜರ್ ಆಗಲಿದೆ.

ಈ ಸಂದರ್ಭದಲ್ಲಿ ಎಂಇಐಎಲ್‍ನ ಹೈಡ್ರೋಕಾರ್ಬನ್ ವಿಭಾಗದ ನಿರ್ದೇಶಕ ದೊರಯ್ಯ ಮಾತನಾಡಿ, ಇಂದಿನ ಇಂಧನ ಕ್ಷೇತ್ರವು ಸ್ಪರ್ಧಾತ್ಮಕ ಮತ್ತು ಸವಾಲಿನಿಂದ ಕೂಡಿದೆ. ಇಂದಿನ ಅಗತ್ಯಗಳನ್ನು ಪೂರೈಸಲು ಮತ್ತು 2070ರ ವೇಳೆಗೆ ಇಂಗಾಲ ಹೊರ ಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ಪ್ರಧಾನಿ ಮೋದಿಯವರ ಪ್ರತಿಜ್ಞೆ ಮತ್ತು ಅಮೃತ್ ಕಾಲ್ ಅವರ ದೃಷ್ಟಿಕೋನದ ಮೇಲೆ ಕೆಲಸ ಮಾಡಲು ಈ ಸಮ್ಮೇಳನವು ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ.

ಸಪ್ತಾಹದ ಪ್ರಮುಖ ಉದ್ದೇಶವಾದ ʼಬೆಳವಣಿಗೆ, ಸಹಯೋಗ, ಪರಿವರ್ತನೆʼಗೆ ಅನುಗುಣವಾಗಿ, ಎಂಇಐಎಲ್‍ ಕಂಪನಿಗಳು ಇಂಗಾಲದ ತೀವ್ರತೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸಿ ಕಾರ್ಯನಿರ್ವಹಿಸುತ್ತಿವೆ ಮತ್ತು ಭಾರತದ ದೀರ್ಘಕಾಲೀನ ಇಂಧನ ಭದ್ರತೆಯನ್ನು ಸುಸ್ಥಿರವಾಗಿ ಖಚಿತಪಡಿಸುವತ್ತ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ. ಭಾರತವು ಇಂಧನ ಪರಿವರ್ತನೆಯ ಶಕ್ತಿ ಕೇಂದ್ರದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದು, ಇದಕ್ಕೆ ಎಂಇಐಎಲ್ ತನ್ನ ಅಂಗ ಸಂಸ್ಥೆಗಳಾದ ಡ್ರಿಲ್ಮೆಕ್, ಪೆಟ್ರೆವೆನ್, ಒಲೆಕ್ಟ್ರಾ ಗ್ರೀನ್‍ಟೆಕ್, ಎಂಸಿಜಿಡಿಪಿಎಲ್ ಮತ್ತು ಐಕಾಮ್ ಮೂಲಕ ಕೊಡುಗೆ ನೀಡುತ್ತಿದೆ ಎಂದು ದೊರಯ್ಯ ಪ್ರತಿಪಾದಿಸಿದರು.

ಕಡಿಮೆ ಇಂಗಾಲದ ಆರ್ಥಿಕತೆಯಲ್ಲಿ ಎಂಇಐಎಲ್‌ನ ಪಾತ್ರವು ಹಿರಿದಾಗಿದ್ದು, ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ (ಎಂಸಿಜಿಡಿಪಿಎಲ್) ನಗರ ಅನಿಲ ವಿತರಣಾ ವ್ಯವಸ್ಥೆಯ ಮೂಲಕ 80 ಸಿಎನ್‍ಜಿ ಕೇಂದ್ರಗಳನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಸಿಜಿಡಿ ಕಂಪನಿಯಾಗಿದ್ದು, ದೃಢವಾದ ಮೂಲಸೌಕರ್ಯದ ಮೂಲಕ ಇಂಧನ ಸುರಕ್ಷತೆಯನ್ನು ಖಚಿತಪಡಿಸುತ್ತಿದೆ. ಇದು 22 ಭೌಗೋಳಿಕ ಪ್ರದೇಶಗಳಲ್ಲಿ ಹತ್ತು ಭಾರತೀಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ಭಾರತದ ಸುಮಾರು ಶೇ.10 ಪ್ರದೇಶ ಮತ್ತು ಅದರ ಜನಸಂಖ್ಯೆಯ ಸುಮಾರು ಶೇ.7 ಅನ್ನು ಒಳಗೊಂಡಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ಇದನ್ನೂ ಓದಿ | PLI Scheme: ಫಲ ನೀಡುತ್ತಿರುವ ಪಿಎಲ್‌ಐ ಯೋಜನೆ, 45,000 ಕೋಟಿ ರೂ. ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ: ನೀತಿ ಆಯೋಗ

ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್‍ನ ಎಲೆಕ್ಟ್ರಿಕ್ ಬಸ್‌ಗಳ ಸಮೂಹವು ಭಾರತದ 13 ರಾಜ್ಯಗಳಲ್ಲಿ ಸಂಚರಿಸುತ್ತಿದ್ದು, ಭಾರತದಾದ್ಯಂತ 90,000 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ, ಎಂಇಐಎಲ್ ಗುಜರಾತ್‍ನಲ್ಲಿ ಭಾರತದ ಮೊದಲ ಕಾಲುವೆ ಮೇಲಿನ ಸೌರ ಯೋಜನೆ ಸೇರಿ ಹಲವಾರು ಸೌರ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಇದು ನೀರನ್ನು ಬಾಷ್ಪೀಕರಣದಿಂದ (ಆವಿಯಾಗುವಿಕೆ) ಸಂರಕ್ಷಿಸುವ ವಿಶಿಷ್ಟ ಯೋಜನೆಯಾಗಿದೆ.

ಇಂಧನ ಕ್ಷೇತ್ರದಲ್ಲಿ ಬಲವಾದ ಉಪಸ್ಥಿತಿಯು ದೇಶದ ಇಂಧನ ಬೇಡಿಕೆಗಳನ್ನು ಪೂರೈಸಲು ಅನುವು ಮಾಡಿಕೊಡುವ ಮಹತ್ವದ ಕಂಪನಿಗಳಲ್ಲಿ ಎಂಇಐಎಲ್ ಒಂದಾಗಿದೆ. ಇದು ಭಾರತದಲ್ಲಿ ಶುದ್ಧ ಇಂಧನ ಪರಿವರ್ತನೆಯನ್ನು ತ್ವರಿತಗೊಳಿಸಲು ಉತ್ತಮ ಇಂಧನ ವ್ಯವಸ್ಥೆಯನ್ನು ರಚಿಸುವತ್ತ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಿದೆ.

Continue Reading

ಕರ್ನಾಟಕ

Starbucks-Samsung Opera House | ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ ನೂತನ ಶಾಖೆ ತೆರೆದ ಸ್ಟಾರ್‌ಬಕ್ಸ್‌

Starbucks-Samsung Opera House | ಬೆಂಗಳೂರಿನ ಬ್ರಿಗೇಡ್‌ ರಸ್ತೆಯ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ 70 ಆಸನ ಸಾಮರ್ಥ್ಯದ ಸ್ಟಾರ್‌ಬಕ್ಸ್‌ ಔಟ್‌ಲೆಟ್ ಅನ್ನು ಉದ್ಘಾಟಿಸಲಾಗಿದೆ.

VISTARANEWS.COM


on

Starbucks-Samsung Opera House
Koo

ಬೆಂಗಳೂರು: ಮೊಬೈಲ್‌ ಖರೀದಿಸಲು ಬ್ರಿಗೇಡ್‌ ರಸ್ತೆಯಲ್ಲಿರುವ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ತೆರಳುತ್ತಿದ್ದ ಗ್ರಾಹಕರಿಗೆ, ಇದೀಗ ಅಲ್ಲಿಯೇ ಕುಳಿತು ಕಾಫಿ ಸವಿಯಲು ಅವಕಾಶ ಸಿಕ್ಕಿದೆ. ಏಕೆಂದರೆ, ಓಪೆರಾ ಹೌಸ್‌ನಲ್ಲಿ “ಸ್ಟಾರ್‌ಬಕ್ಸ್‌” ಶಾಖೆಯನ್ನು (Starbucks-Samsung Opera House) ಹೊಸದಾಗಿ ತೆರೆಯಲಾಗಿದೆ.

70 ಸೀಟರ್ ಸ್ಟಾರ್‌ಬಕ್ಸ್‌ ಔಟ್‌ಲೆಟ್ ಅನ್ನು ಸ್ಯಾಮ್‌ಸಂಗ್‌ ಸೌತ್‌ವೆಸ್ಟ್‌ ಏಷ್ಯಾ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಜೊಂಗ್‌ಬಮ್‌ ಪಾರ್ಕ್‌ ಹಾಗೂ ಟಾಟಾ ಸ್ಟಾರ್‌ಬಕ್ಸ್‌ ಸಿಇಒ ಸುಶಾಂತ್‌ ದಾಶ್‌ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸ್ಯಾಮ್‌ಸಂಗ್‌ ಸಿಇಒ ಜೊಂಗ್‌ಬಮ್‌ ಪಾರ್ಕ್‌, ಸಾಮಾನ್ಯವಾಗಿ ಮೊಬೈಲ್‌ ಅಥವಾ ಇತರೆ ಗ್ಯಾಜೆಟ್ಸ್‌ ಖರೀದಿಸುವವರು ಅದರ ಫೀಚರ್‌ಗಳನ್ನು ನೋಡುತ್ತಾ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಒಂದೇ ಕಡೆ ಇದ್ದು ಆಯಾಸಗೊಂಡು ಹೊರಗಡೆ ತೆರಳಿ ಕಾಫಿ ಅಥವಾ ಇತರೆ ಸ್ನ್ಯಾಕ್ಸ್‌ ತಿನ್ನಲು ಹುಡುಕಾಟ ನಡೆಸುತ್ತಾರೆ. ಹೀಗಾಗಿ ಗ್ರಾಹಕರಿಗೆ ಈ ಶ್ರಮ ನೀಡಬಾರದು ಎಂಬ ಕಾರಣಕ್ಕೆ ಸ್ಯಾಮ್‌ಸಂಗ್‌ ಕಚೇರಿಯಲ್ಲಿಯೇ ಸ್ಟಾರ್‌ಬಕ್ಸ್‌ ಶಾಖೆ ತೆರೆಯಲಾಗಿದೆ. ಇಲ್ಲಿ ಎಲ್ಲ ಬಗೆಯ ಸ್ನ್ಯಾಕ್ಸ್‌ ದೊರೆಯಲಿದೆ. ಇದರಲ್ಲಿ ಪ್ರೀಮಿಯಂ ಗುಣಮಟ್ಟದ ಕಾಫಿ, ಪಾನೀಯಗಳು, ವಿಶಿಷ್ಟ ತಿನಿಸುಗಳು ಸಹ ಸೇರಿವೆ ಎಂದು ತಿಳಿಸಿದರು.

ಹೊಸ ತಲೆಮಾರಿನ ಗ್ರಾಹಕರು ಕಳೆದ ನಾಲ್ಕು ವರ್ಷಗಳಿಂದಲೂ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ಪ್ರೀತಿಯಿಂದ ಆಗಮಿಸಿದ್ದಾರೆ. ಈಗ, ಈ ಅನುಭವವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ. ಇದರಲ್ಲಿ ಕನೆಕ್ಟೆಡ್‌ ಲಿವಿಂಗ್ ಝೋನ್‌, ಗೇಮಿಂಗ್ ಅರೆನಾ, ಹೋಮ್ ಥಿಯೇಟರ್‌ ಝೋನ್‌ ಹಾಗೂ ಇತರೆ ಸೌಲಭ್ಯಗಳನ್ನೂ ಕಲ್ಪಿಸಿದ್ದೇವೆ. ಈ ಅನುಭವಕ್ಕೆ ಸ್ಟಾರ್‌ಬಕ್ಸ್‌ ಸ್ಟೋರ್ ಅನ್ನೂ ಸೇರಿಸಲು ನಮಗೆ ಖುಷಿಯಾಗುತ್ತಿದೆ. ಈ ಕಾಲದ ಯುವಕರಿಗೆ ಇರುವ ಎರಡು ಅತ್ಯಂತ ಉತ್ಸಾಹಕರ ಸಂಗತಿಗಳಾದ ತಂತ್ರಜ್ಞಾನ ಮತ್ತು ಕಾಫಿಯನ್ನು ನಾವು ಈ ಮೂಲಕ ಒಟ್ಟಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | ವಿಸ್ತಾರ Explainer | ಉಚಿತ ಕೊಡುಗೆಗಳು ಜನರಿಗೆ ಹಿತವೇ? ಅಭಿವೃದ್ಧಿಗೆ ಶಾಪವೇ? ಚುನಾವಣಾ ವರ್ಷದಲ್ಲಿ ಕಾವೇರಿದ ಚರ್ಚೆ

Continue Reading

ಕರ್ನಾಟಕ

BITM Silver jubilee | ಡಿ.17ರಂದು ಬಳ್ಳಾರಿಯಲ್ಲಿ ಬಿಐಟಿಎಂ ಸಂಸ್ಥೆಯ ರಜತ ಮಹೋತ್ಸವ

BITM Silver jubilee | ಬಿಐಟಿಎಂ ಎಂದೇ ಖ್ಯಾತಿ ಹೊಂದಿರುವ ʼಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ʼ 25 ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸುದೀರ್ಘ ಸೇವೆಯ ಮೈಲಿಗಲ್ಲಿನ ಸಂದರ್ಭದಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

VISTARANEWS.COM


on

BITM Silver jubilee
ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌
Koo

ಬಳ್ಳಾರಿ: ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಮಾಲೀಕತ್ವದ ʼಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ʼ (ಬಿಐಟಿಎಂ) ಸಂಸ್ಥೆಯ ರಜತ ಮಹೋತ್ಸವವನ್ನು (BITM Silver jubilee) ಡಿಸೆಂಬರ್‌ 17ರಂದು ನಗರದ ಬಿಐಟಿಎಂ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಬಿಐಟಿಎಂ ರಜತ ಮಹೋತ್ಸವ ಬ್ಲಾಕ್‌ ಕಟ್ಟಡಕ್ಕೆ ಶಂಕುಸ್ಥಾಪನೆ
ಶನಿವಾರ ಬೆಳಗ್ಗೆ 10.30ಕ್ಕೆ ಬಿಐಟಿಎಂ ಕ್ಯಾಂಪಸ್‌ನಲ್ಲಿ ರಜತ ಮಹೋತ್ಸವ ಬ್ಲಾಕ್‌ (Silver Jubilee Block) ಕಟ್ಟಡ ಕಾಮಗಾರಿಗೆ ಮೈಂಡ್‌ಟ್ರೀ ಸಹ-ಸಂಸ್ಥಾಪಕ, ಮೇಳ ವೆಂಚರ್ಸ್ ವ್ಯವಸ್ಥಾಪಕ ಪಾಲುದಾರರಾದ ಎನ್‌.ಎಸ್.ಪಾರ್ಥಸಾರಥಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ. ವಿದ್ಯಾಶಂಕರ್ ಎಸ್. ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ವೇಳೆ ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಮಾಜಿ ಸಚಿವ ಅಲ್ಲುಂ ವೀರಭದ್ರಪ್ಪ, ಬಳ್ಳಾರಿಯ ತುಂಗಭದ್ರ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ಟಿಇಎಚ್‌ಆರ್‌ಡಿ) ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್, ಮ್ಯಾನೇಜಿಂಗ್ ಟ್ರಸ್ಟಿ ಯಶವಂತ ಭೂಪಾಲ್, ಟ್ರಸ್ಟಿ ಮತ್ತು ಗೌರವ ಕಾರ್ಯದರ್ಶಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಟ್ರಸ್ಟಿಗಳಾದ ಎಸ್.ಬಿ. ಅಶೋಕ್ ಭೂಪಾಲ್, ಟ್ರಸ್ಟಿ ಡಾ.ವಿ.ಜೆ. ಭರತ್, ಅಮರರಾಜ್ ಭೂಪಾಲ್, ಬಿಐಟಿಎಂ ಪ್ರಾಂಶುಪಾಲ ಡಾ.ಯಡವಳ್ಳಿ ಬಸವರಾಜ ಹಾಗೂ ಸಿಬ್ಬಂದಿ ಹಾಜರಿರಲಿದ್ದಾರೆ.

ರಜತ ಮಹೋತ್ಸವ ವೇದಿಕೆ ಕಾರ್ಯಕ್ರಮ
ಬೆಳಗ್ಗೆ ೧೧ ಗಂಟೆಗೆ ಬಿಐಟಿಎಂ ಸಭಾಂಗಣದಲ್ಲಿ ರಜತ ಮಹೋತ್ಸವ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು, ಟಿಇಎಚ್‌ಆರ್‌ಡಿ ಚೇರ್ಮನ್ ಡಾ.ಎಸ್.ಜೆ.ವಿ. ಮಹಿಪಾಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಂಡ್‌ಟ್ರೀ ಸಹ-ಸಂಸ್ಥಾಪಕ, ಮೇಳ ವೆಂಚರ್ಸ್ ವ್ಯವಸ್ಥಾಪಕ ಪಾಲುದಾರರಾದ ಎನ್‌.ಎಸ್.ಪಾರ್ಥಸಾರಥಿ, ವಿಟಿಯು ಕುಲಪತಿ ಡಾ. ವಿದ್ಯಾಶಂಕರ್ ಎಸ್. ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಮಾಜಿ ಸಚಿವ ಅಲ್ಲುಂ ವೀರಭದ್ರಪ್ಪ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ.

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ
ಸಂಜೆ 4.30ಕ್ಕೆ ಬಿಐಟಿಎಂ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ನಂತರ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಛೇರಿ ಇರಲಿದ್ದು, ಸಂಜೆ 6 ಗಂಟೆಗೆ ಟ್ರಸ್ಟಿಗಳಿಗೆ ಸನ್ಮಾನ ಮಾಡಲಾಗುತ್ತದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು,
ಸಂಸದ ವೈ.ದೇವೇಂದ್ರಪ್ಪ, ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಿರಗುಪ್ಪ ಶಾಸಕ ಎಂ.ಎಸ್‌.ಸೋಮಲಿಂಗಪ್ಪ, ಎಂಎಲ್‌ಸಿ ವೈ.ಎಂ. ಸತೀಶ್, ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್, ಸಂಡೂರು ಶಾಸಕ ಇ.ತುಕಾರಾಂ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌, ಬಿಐಟಿಎಂ ಆಡಳಿತಾಧಿಕಾರಿ ಪಿ.ಅಮರೇಶಯ್ಯ, ಪ್ರಾಂಶುಪಾಲ ಡಾ.ಯಡವಳ್ಳಿ ಬಸವರಾಜ, ಉಪ ಪ್ರಾಂಶುಪಾಲ ಡಾ. ಬಿ.ಎಸ್. ಖೇಣೇದ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಏನಿದು ಜಿ 20? ಅಧ್ಯಕ್ಷತೆ ಜವಾಬ್ದಾರಿಯಿಂದ ಭಾರತಕ್ಕೆ ಏನು ಲಾಭ?

Continue Reading

ಬೆಳಗಾವಿ

ಬೆಳಗಾವಿಯಲ್ಲಿ ಟೆಕ್ನಿಕಾ ಇಂಡಸ್ಟ್ರೀಸ್‌ ಹೊಸ ಪ್ರೊಡಕ್ಷನ್ ಯೂನಿಟ್, ನೂತನ ಲೋಗೊ, ಪ್ರೀಮಿಯಂ ಸೀಲಿಂಗ್ ಫ್ಯಾನ್ ಲೋಕಾರ್ಪಣೆ

ಟೆಕ್ನಿಕಾ ಇಂಡಸ್ಟ್ರೀಸ್ ಹೊಸ ಲೋಗೊವನ್ನು ಶಾಸಕ ಅಭಯ್ ಪಾಟೀಲ್ ಅವರ ಸಹೋದರ ಶೀತಲ್ ಪಾಟೀಲ್, ಪಾಲಿಕೆ ಬಿಜೆಪಿ ಸದಸ್ಯೆ ಸಾರಿಕಾ ಪಾಟೀಲ್ ಟೆಕ್ನಿಕಾ ಪ್ರೀಮಿಯಂ ಸೀಲಿಂಗ್ ಫ್ಯಾನ್ ಅನ್ನು ಅನಾವರಣಗೊಳಿಸಿದರು‌.

VISTARANEWS.COM


on

ಟೆಕ್ನಿಕಾ
Koo

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸ್ಥಾಪನೆಗೊಂಡು ಹೋಮ್ ಅಪ್ಲೈಯನ್ಸಸ್ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟೆಕ್ನಿಕಾ ಇಂಡಸ್ಟ್ರೀಸ್ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಬೆಳಗಾವಿಯ ಸಂಭಾಜಿ ನಗರದಲ್ಲಿ ಹೊಸದಾದ ಪ್ರೊಡಕ್ಷನ್ ಯೂನಿಟ್, ಟೆಕ್ನಿಕಾ ಇಂಡಸ್ಟ್ರೀಸ್ ನೂತನ ಲೋಗೊ ಹಾಗೂ ಟೆಕ್ನಿಕಾ ಪ್ರೀಮಿಯಂ ಸೀಲಿಂಗ್ ಫ್ಯಾನ್ ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ಟೆಕ್ನಿಕಾ ಇಂಡಸ್ಟ್ರೀಸ್‌ನ ನೂತನ ಪ್ರೊಡಕ್ಷನ್ ಯೂನಿಟ್ ಉದ್ಘಾಟನೆ ಬಳಿಕ ಟೆಕ್ನಿಕಾ ಇಂಡಸ್ಟ್ರೀಸ್ ಹೊಸ ಲೋಗೋವನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರ ಸಹೋದರ ಶೀತಲ್ ಪಾಟೀಲ್ ಅನಾವರಣಗೊಳಿಸಿದರು. ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆ ಸಾರಿಕಾ ಪಾಟೀಲ್ ಟೆಕ್ನಿಕಾ ಪ್ರೀಮಿಯಂ ಸೀಲಿಂಗ್ ಫ್ಯಾನ್ ಅನ್ನು ಅನಾವರಣಗೊಳಿಸಿದರು‌.

ಇದನ್ನೂ ಓದಿ | Appu Namana | ರಕ್ತದಾನ, ಅನ್ನದಾನ ಮಾಡಿ ʻಪುನೀತʼರಾದ ಅಭಿಮಾನಿಗಳು

ಟೆಕ್ನಿಕಾ ಇಂಡಸ್ಟ್ರೀಸ್ ಬೆಳಗಾವಿ ಡಿಸ್ಟ್ರಿಬ್ಯೂಟರ್ ಚಂದ್ರಕಾಂತ ರಾಜಮಾನೆ ಮಾತನಾಡಿ, ನಾನು ಕಳೆದ ಐದು ವರ್ಷಗಳಿಂದ ಟೆಕ್ನಿಕಾ ಇಂಡಸ್ಟ್ರೀಸ್ ಡಿಸ್ಟ್ರಿಬ್ಯೂಟರ್‌ ಆಗಿದ್ದು, ಟೆಕ್ನಿಕಾ ದಕ್ಷಿಣ ಭಾರತದಲ್ಲಿ ಒಂದು ಬ್ರ್ಯಾಂಡ್ ಆಗಿ ಬೆಳೆದಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯೆ ಶೀತಲ್ ಪಾಟೀಲ್ ಮಾತನಾಡಿ, ಟೆಕ್ನಿಕಾ ಇಂಡಸ್ಟ್ರೀಸ್ ತಾನು ಬೆಳೆಯುವುದಷ್ಟೇ ಅಲ್ಲದೇ ಜನರಿಗೆ ಉದ್ಯೋಗವಕಾಶ ಕಲ್ಪಿಸುತ್ತಿದ್ದು, ನನ್ನ ವಾರ್ಡ್‌ನ 200 ಜನ ಈ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸಂಸ್ಥೆ ಇನ್ನು ಉತ್ತುಂಗಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಟೆಕ್ನಿಕಾ ಇಂಡಸ್ಟ್ರೀಸ್ ಮಾಲೀಕ ಪ್ರಶಾಂತ ಕುಲಕರ್ಣಿ ಮಾತನಾಡಿ, ಸೀಲಿಂಗ್ ಫ್ಯಾನ್ ಉತ್ಪಾದನೆಗೆ ಹೊಸ ಘಟಕ ಆರಂಭಿಸಿದ್ದೇವೆ. ಗ್ರಾಹಕರೇ ನನ್ನ ದೇವರು. ನನ್ನ ವಿತರಕರು, ಕರ್ನಾಟಕದ ಜನತೆ ಬೆಂಬಲದಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ನಾವು ಸ್ಟೆಬ್ಲೈಝರ್, ಸೀಲಿಂಗ್ ಫ್ಯಾನ್, ಮಿಕ್ಸರ್ ಗ್ರೈಂಡರ್, ನಾನ್‌ಸ್ಟಿಕ್ ತವಾ ಸೇರಿ ವಿವಿಧ ಬಗೆಯ ಹೋಮ್ ಅಪ್ಲೈಯನ್ಸಸ್ ಉತ್ಪಾದನೆ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಉತ್ಪನ್ನಗಳ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಟೆಕ್ನಿಕಾ ಇಂಡಸ್ಟ್ರೀಸ್ ಮಾಲೀಕ ಪವನ್ ಕುಲಕರ್ಣಿ ಮಾತನಾಡಿ, ಹಂತ ಹಂತವಾಗಿ ಟೆಕ್ನಿಕಾ ಇಂಡಸ್ಟ್ರೀಸ್ ಬೆಳೆದುಕೊಂಡು ಬಂದಿದೆ. ಉತ್ತಮ ಗುಣಮಟ್ಟ ಹಾಗೂ ಗ್ರಾಹಕರ ಸೇವೆಯೇ ನಮ್ಮ ಧ್ಯೇಯ. 200ಕ್ಕೂ ಹೆಚ್ಚು ಸಿಬ್ಬಂದಿ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಾಟರ್ ಗೀಝರ್, ವಾಟರ್ ಪಂಪ್ಸ್, ಗ್ಯಾಸ್ ಸ್ಟೋವ್ ಉತ್ಪಾದನೆ ಮಾಡುವ ಯೋಚನೆ ಇದೆ ಎಂದು ತಿಳಿಸಿದರು‌. ಟೆಕ್ನಿಕಾ ಇಂಡಸ್ಟ್ರೀಸ್ ಮಾಲೀಕ ಸೋಮೇಶ್ವರ ಕುಲಕರ್ಣಿ ಟೆಕ್ನಿಕಾ ಇಂಡಸ್ಟ್ರೀಸ್ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು‌.

ಇದನ್ನೂ ಓದಿ | ₹15 ಸಾವಿರದಲ್ಲಿ ಕಾಶಿ- ಅಯೋಧ್ಯೆ-ಪ್ರಯಾಗ ಯಾತ್ರೆ: ಸರ್ಕಾರದ ಯೋಜನೆಯ ಬುಕ್ಕಿಂಗ್‌ ಆರಂಭ

Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌