ಟಾಲಿವುಡ್
Actor Gopichand: ಟಾಲಿವುಡ್ ನಟ ಗೋಪಿಚಂದ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ ಎ.ಹರ್ಷ
ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ ಇದಾಗಿದ್ದು, .ಕೆ.ರಾಧಾಮೋಹನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ನಟ ಗೋಪಿಚಂದ್ (Actor Gopichand) ಅವರ 31 ಚಿತ್ರಕ್ಕೆ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಬೆಂಗಳೂರು: ‘ಭಜರಂಗಿ’, ‘ವಜ್ರಕಾಯ’, ‘ವೇದ’ ಸೂಪರ್ ಹಿಟ್ ಸಿನಿಮಾಗಳ ಖ್ಯಾತಿಯ ಎ.ಹರ್ಷ ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ ಸ್ಟಾರ್ ನಟ ಗೋಪಿಚಂದ್ (Actor Gopichand) ಅವರ 31 ಚಿತ್ರಕ್ಕೆ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಶನ್ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದ್ದು, ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್‌ನಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ ಇದಾಗಿದ್ದು, .ಕೆ.ರಾಧಾಮೋಹನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ಕೆ.ಕೆ.ರಾಧಾಮೋಹನ್ ಮಾತನಾಡಿ ʻʻಗೋಪಿಚಂದ್ ಹಾಗೂ ಎ.ಹರ್ಷ ಜತೆ ಸೇರಿ ಸಿನಿಮಾ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದು ನಮ್ಮ ನಿರ್ಮಾಣ ಸಂಸ್ಥೆಯ 14ನೇ ಸಿನಿಮಾ. ನಿರ್ದೇಶಕರು ಪವರ್ ಫುಲ್ ಸಬ್ಜೆಕ್ಟ್ ಇರುವ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಸಿಗಲಿದ್ದಾರೆ. ಇದೇ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆʼʼ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Rashmi Gautam: ಸಂಕಷ್ಟದಲ್ಲಿ ಟಾಲಿವುಡ್ ನಿರೂಪಕಿ, ನಟಿ ರಶ್ಮಿ ಗೌತಮ್!
ಸ್ವಾಮಿ.ಜೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ಸಿನಿಮಾದ ತಾರಾಬಳಗ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.
South Cinema
Salaar Movie: ಈ ವರ್ಷ ʻಸಲಾರ್ʼ ರಿಲೀಸ್ ಇಲ್ಲ; ಕಾರಣವೇನು?
Salaar Movie: ಶಾರುಖ್ ಖಾನ್ ಅವರ ʼಜವಾನ್ʼ ಸೆಪ್ಟೆಂಬರ್ 7ರಂದು ಬಿಡುಗಡೆಯಾಗುತ್ತಿದ್ದಂತೆ, ಹಲವರು ʼಸಲಾರ್ʼ ಮುಂದೂಡಿದ್ದು ಇದೇ ಕಾರಣಕ್ಕೆ ಎಂದು ಬರೆದುಕೊಂಡಿದ್ದರು. ಆದರೆ ಕಾರಣ ಬೇರೆಯೇ ಇದೆ.
ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಪ್ರಭಾಸ್ ನಟನೆಯ ‘ಸಲಾರ್’ (Salaar Movie) ಸಿನಿಮಾ ಸೆಪ್ಟೆಂಬರ್ 28ಕ್ಕೆ ರಿಲೀಸ್ (Release) ಆಗಲಿದೆ ಎಂದು ಈ ಹಿಂದೆ ಹೊಂಬಾಳೆ ಫಿಲ್ಮ್ಸ್ (salaar part 1 – ceasefire) ಘೋಷಣೆ ಮಾಡಿತ್ತು. ಆದರೆ, ಸಿನಿಮಾವನ್ನು ಈ ದಿನಾಂಕದಂದು ಬಿಡುಗಡೆ ಮಾಡಲು ಆಗುತ್ತಿಲ್ಲವೆಂದು ಅದು ಘೋಷಣೆ ಈಗಾಗಲೇ ಮಾಡಿದೆ. ಗುಣಮಟ್ಟದ ದೃಷ್ಟಿಯಿಂದ ʼಸಲಾರ್ʼ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ ಎಂದು ಟ್ವಿಟರ್ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿತ್ತು. ಟ್ರೇಡ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದಾರೆ.
ಸಲಾರ್ ಬಿಡುಗಡೆ ವಿಳಂಬ ಏಕೆ?
ಮನೋಬಾಲಾ ವಿಜಯಬಾಲನ್ ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, “ತಂಡವು ಅತ್ಯುನ್ನತ ಗುಣಮಟ್ಟವನ್ನು ಪೂರೈಸಲು ಕೆಲಸ ಮಾಡುತ್ತಿದೆ. ಅಸಾಧಾರಣ ಸಿನಿಮೀಯ ಅನುಭವವನ್ನು ನೀಡಲು ಬದ್ಧರಾಗಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.
ಹೊಂಬಾಳೆ ಹೇಳಿದ್ದೇನು?
ಸಿನಿಮಾ ಬಿಡುಗಡೆ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಹೊಂಬಾಳೆ, ‘ನಾವು ಅತ್ಯುತ್ತಮವಾದ ಸಿನಿಮಾವನ್ನು ಕೊಡಲು ಸಿದ್ಧವಾಗುತ್ತಿದ್ದೇವೆ. ಆದರೆ ನಾನಾ ಕಾರಣಗಳಿಂದಾಗಿ ಸೆ.28ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಹೇಳಿಕೊಂಡಿತ್ತು.
ಶಾರುಖ್ ಖಾನ್ ಅವರ ಜವಾನ್ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗುತ್ತಿದ್ದಂತೆ, ಹಲವರು ʼಸಲಾರ್ʼ ಮುಂದೂಡಿದ್ದು ಇದೇ ಕಾರಣ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Salaar Movie: ಸೆ. 28ಕ್ಕೆ ರಿಲೀಸ್ ಆಗುತ್ತಿಲ್ಲ ʻಸಲಾರ್ʼ; ಹೊಂಬಾಳೆ ಸಂಸ್ಥೆ ಹೇಳಿದ್ದೇನು?
As per trade, Pan India Star #Prabhas' #Salaar is not looking at a release date this year.#SalaarCeaseFire is aiming at 2024 release.
— Manobala Vijayabalan (@ManobalaV) September 21, 2023
The team is working tirelessly to meet the highest standards. They are making the final touches on the film and committed to delivering an… pic.twitter.com/UhxkiX45Tx
ʻಆದಿಪುರುಷ’ ಚಿತ್ರದ ಸೋಲಿನ ನಂತರ ಪ್ರಭಾಸ್ (Actor Prabhas) ತಮ್ಮ ಮುಂಬರುವ ಬಿಗ್-ಬಜೆಟ್ ಚಿತ್ರ ‘ಸಲಾರ್’ (Salaar Movie) ಮೇಲೆ ಭಾರಿ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಲಾರ್’ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು. ಸೂಪರ್ ಹಿಟ್ ಆಗಿದೆ. 100 ಮಿಲಿಯನ್‌ಗೂ ಅಧಿಕ ವ್ಯೂಸ್ ಸಾಧಿಸಿದೆ. ಆದರೂ ಕೂಡ ಟೀಸರ್ ಬಗ್ಗೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್ ಲುಕ್ ರಿವೀಲ್ ಮಾಡಿಲ್ಲ ಎಂದಿದ್ದರು. ಇನ್ನು ʼಸಲಾರ್ʼ ಸಿನಿಮಾದ ವಿತರಣೆಯ ಹಕ್ಕನ್ನು ಪ್ರತ್ಯಾಂಗೀರ್ ಸಿನಿಮಾಸ್ ಪಡೆದುಕೊಂಡಿದೆ.
ಬಹು ನಿರೀಕ್ಷೆಯ ʼಸಲಾರ್ʼ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಅವರು ನಾಯಕ ನಟಿಯಾಗಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್ ಸೇರಿ ಹಲವು ಪ್ರಮುಖರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣವಾಗಿದೆ ಎಂದೂ ವರದಿಯಾಗಿದೆ.
South Cinema
Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್ ನ್ಯೂಸ್!
Sai Pallavi: ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.
ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ 23ನೇ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi:) ಆಯ್ಕೆಯಾಗಿದ್ದಾರೆ. ʻಲವ್ ಸ್ಟೋರಿʼ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಕಾರ್ತಿಕೇಯ-2ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.
ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ಇತ್ತೀಚೆಗೆ ನಾಯಕ ಚೈತನ್ಯ ಹಾಗೂ ನಿರ್ದೇಶಕ ಚಂದು ಮೊಂಡೇಟಿ ಆಂಧ್ರಪ್ರದೇಶದ ಶ್ರೀಕಾಕುಳಂಗೆ ಭೇಟಿ ನೀಡಿ, ಮೀನುಗಾರರ ಕುಟುಂಬಗಳ ಜೊತೆ ಕಾಲಕಳೆದಿದ್ದರು. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಸದ್ಯ NC23 ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ.
ಚಂದೂ ಮೊಂಡೇಟಿ ಮಾತನಾಡಿ, “ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ 2018 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅವರು ಆರಂಭದಲ್ಲಿ ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಕಥೆಯನ್ನು ಹೇಳಿದರು. ಕಥೆ ಕೇಳಿದಾಗ ಎಕ್ಸೈಟ್ ಆದೆ. ನಾವು ಕಳೆದ 2 ವರ್ಷಗಳಿಂದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೀಗ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಚೆನ್ನಾಗಿ ಬಂದಿದೆ. ಚೈತನ್ಯ ಕಥೆಯಿಂದ ಸಂತಸಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಸಿನಿಮಾದ ಪ್ರಿ-ಪ್ರೊಡಕ್ಷನ್ ಆರಂಭಿಸಲು ನಾವು ಬಯಸಿದ್ದೇವೆʼʼ ಎಂದು ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: Naga Chaitanya: ನಟಿ ಶೋಭಿತಾ ಜತೆ ನಾಗ ಚೈತನ್ಯ ಡೇಟಿಂಗ್; 2ನೇ ಮದುವೆ ಫಿಕ್ಸ್?
ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಜೋಡಿಯ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿತ್ತು. ತೆರೆಮೇಲೆ ಮ್ಯಾಜಿಕ್ ಮಾಡಿದ್ದ ಈ ಜೋಡಿ ಮತ್ತೊಮ್ಮೆ ಕೈ ಜೋಡಿಸಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಶೀಘ್ರದಲ್ಲಿಯೇ ಅಪ್ ಡೇಟ್ ನೀಡಲಿದೆ ಚಿತ್ರತಂಡ.
South Cinema
Actor Navdeep: ಡ್ರಗ್ಸ್ ಕೇಸ್‌ನಲ್ಲಿ ಜನಪ್ರಿಯ ಟಾಲಿವುಡ್ ನಟ ನವದೀಪ್; ಪೊಲೀಸರಿಂದ ಶೋಧ!
Actor Navdeep: ನ್ಯಾಯಾಲಯವು ನಿಗದಿಪಡಿಸಿದ ಗಡುವು ಇಂದು ಕೊನೆಗೊಂಡಿದ್ದರಿಂದ, ಪೊಲೀಸರು ಅವರ ಮನೆಯ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಜನಪ್ರಿಯ ಟಾಲಿವುಡ್ ನಟ ನವದೀಪ್ ( Actor Navdeep) ಅವರು ಮಾದಾಪುರ ಡ್ರಗ್ ಕೇಸ್‌ನಲ್ಲಿ ( drugs from peddlers) 37ನೇ ಆರೋಪಿ ಆಗಿದ್ದಾರೆ. ಅವರ ವಿಚಾರಣೆಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ ನಟ (Navdeep is named Accused No. 37) ತನ್ನ ನಿವಾಸದಲ್ಲಿ ಇರಲಿಲ್ಲ. ತನಗೂ ಈ ಡ್ರಗ್ಸ್ ಕೇಸಿಗೂ ಸಂಬಂಧವೇ ಇಲ್ಲ ಎಂದು ಹೇಳಿಕೊಂಡು ಬಂದಿರುವ ನಟ ಸದ್ಯ ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ನ್ಯಾಯಾಲಯವು ನಿಗದಿಪಡಿಸಿದ ಗಡುವು ಇಂದು ಕೊನೆಗೊಂಡಿದ್ದರಿಂದ, ಪೊಲೀಸರು ಅವರ ಮನೆಯ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೀಪ್ ಅವರು ಮಾದಾಪುರ ಡ್ರಗ್ ಕೇಸ್‌ನಲ್ಲಿ 37ನೇ ಆರೋಪಿ ಆಗಿದ್ದಾರೆ. ಅವರ ವಿಚಾರಣೆಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಅವರ ಸುಳಿವು ಸಿಗುತ್ತಿಲ್ಲ. ಬಂಧಿತರಲ್ಲಿ ಮಾಜಿ ಸಂಸದ ಡಿ ವಿಠಲ್ ರಾವ್ ಅವರ ಪುತ್ರ ದೇವರಕೊಂಡ ಸುರೇಶ್ ರಾವ್, ಚಲನಚಿತ್ರ ನಿರ್ದೇಶಕ ಅನುಗು ಸುಶಾಂತ್ ರೆಡ್ಡಿ ಮತ್ತು ನೈಜೀರಿಯಾದ ಪೆಡ್ಲರ್‌ಗಳಾದ ಅಮೋಬಿ ಚುಕ್ವುಡಿ ಮೂನಾಗೊಲು (Chukwudi Muonagolu), ಇಗ್ಬಾವ್ರೆ ಮೈಕೆಲ್ ಮತ್ತು ಥಾಮಸ್ ಅನಗಾ (Thomas Anaga Kalu) ಕಾಲು ಕೂಡ ಇದ್ದಾರೆ.
ಇದನ್ನೂ ಓದಿ: Hostel Hudugaru Bekagiddare: ಕನ್ನಡದಲ್ಲಿ ಗೆದ್ದ ಹಾಸ್ಟೆಲ್ ಹುಡುಗ್ರು ಟಾಲಿವುಡ್‌ಗೆ ಎಂಟ್ರಿ!
Complaint filed in @dir_ed Minister @KTRBRS Role in Drugs case and send his sample’s for Drugs test.
— Judson Bakka Official (@zson_bakka) September 15, 2023
In the 2017 Tollywood drug case Navdeep along with 12 actors was given clean with the influence of KTR. Once again Navdeep absconding drugs case.@PTI_News @ANI @Manikrao_INC pic.twitter.com/uf0UVenmoC
ಈ ಪ್ರಕರಣದಲ್ಲಿ ನಟ ನವದೀಪ್ ಮತ್ತು ಚಿತ್ರ ನಿರ್ಮಾಪಕ ರವಿ ಉಪ್ಪಲಪಾಟಿ ತಲೆಮರೆಸಿಕೊಂಡಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದಾರೆ. ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ರೀತಿಯ ಪ್ರಕರಣ ಹೆಚ್ಚಾಗುತ್ತಿದೆ. ಸ್ವತಃ ಕೇರಳದ ಕಮಿಷ್ನರ್ ಪತ್ರಿಕಾಗೋಷ್ಠಿ ನಡೆಸಿ, ಶೂಟಿಂಗ್ ನಡೆಯುವ ಸ್ಥಳದಲ್ಲೇ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಕೆಲ ನಟರು ಶೂಟಿಂಗ್ ಸ್ಥಳದಲ್ಲೇ ಡ್ರಗ್ಸ್ ಸೇವಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆ ನಡೆದಿತ್ತು. ನವದೀಪ್ ಅವರು 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದಾರೆ. ಆ ಬಳಿಕ ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದರು.
South Cinema
Samantha Ruth Prabhu: ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ಫೋಟೊ ವೈರಲ್!
Samantha Ruth Prabhu: ನಾಗ ಚೈತನ್ಯ ಜತೆ ಬೇರ್ಪಟ್ಟ ಬಳಿಕ ಸಮಂತಾ ರುತ್ ಪ್ರಭು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಳೆಯ ಫೋಟೊಗಳನ್ನು ತೆಗೆದು ಹಾಕಿದ್ದರು. ಆದರೀಗ ಮಾಜಿ ದಂಪತಿ ಮತ್ತೆ ಒಂದಾಗಬಹುದು ಎಂದು ಕೆಲವರು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು: ಈಗಾಗಲೇ ಸಮಂತಾ-ನಾಗಚೈತನ್ಯ (Samantha Ruth Prabhu) ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾಗಿದೆ. ಕೆಲವು ದಿನಗಳ ಹಿಂದೆ ನಾಗಚೈತನ್ಯ ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂತಲೂ ವರದಿಯಾಗಿದೆ. ಆದರೀಗ ಸಮಂತಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಫೋಟೊ ಮತ್ತೆ ಕಾಣಿಸಲು ಆರಂಭಿಸಿದೆ. ನಾಗ ಚೈತನ್ಯ ಜತೆ ಬೇರ್ಪಟ್ಟ ಬಳಿಕ ಸಮಂತಾ ರುತ್ ಪ್ರಭು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಳೆಯ ಫೋಟೊಗಳನ್ನು ತೆಗೆದು ಹಾಕಿದ್ದರು. ಆದರೀಗ ಮಾಜಿ ದಂಪತಿ ಮತ್ತೆ ಒಂದಾಗಬಹುದು ಎಂದು ಕೆಲವರು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್ ಇಡುತ್ತಿದ್ದಂತೆ ಸಮಂತಾ ಅವರು ನಾಗ ಚೈತನ್ಯ ಅವರೊಂದಿಗಿನ ಬಹುತೇಕ ಎಲ್ಲಾ ಚಿತ್ರಗಳನ್ನು ತೆಗೆದುಹಾಕಿದ್ದರು. ಆದರೀಗ ಮದುವೆಯ ಫೋಟೊವೊಂದು ಏಕಾಏಕಿ ಖಾತೆಯಲ್ಲಿ ಕಾಣಿಸತೊಡಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬಹುತೇಕರು ʻʻಆದಷ್ಟು ಬೇಗ ಇಬ್ಬರೂ ಒಂದಾಗಿʼʼಎಂದು ಕಮೆಂಟ್ ಮಾಡಿದ್ದಾರೆ. ವರದಿಯ ಪ್ರಕಾರ ಈಗಾಗಲೇ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಮಂತಾ ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಗಳನ್ನು ಮರೆತು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಇದನ್ನೂ ಓದಿ: Samantha Ruth Prabhu: ನಿಜ ಜೀವನದಲ್ಲಿಯೂ ಒಂದಾಗಿ ಅಂದ್ರು ಫ್ಯಾನ್ಸ್; ಹೇಗಿತ್ತು ಸಮಂತಾ ʻಖುಷಿʼ?
ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಒಟ್ಟಿಗೆ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂದು ಈ ಮುಂಚೆಯೇ ಗಾಸಿಪ್‌ಗಳು ಹಬ್ಬಿತ್ತು. 1998ರಲ್ಲಿ ಕುಚ್ ಕುಚ್ ಹೋತಾ ಹೈನಲ್ಲಿ ಸಲ್ಮಾನ್ ಕಾಣಿಸಿಕೊಂಡ ನಂತರ ಬರೋಬ್ಬರಿ 25 ವರ್ಷಗಳ ಬಳಿಕ ಕರಣ್ ಜತೆ ಕೈ ಜೋಡಿಸುತ್ತಿದ್ದಾರೆ ಸಲ್ಮಾನ್. 2023ರ ನವೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಪ್ರಿ-ಪ್ರೊಡಕ್ಷನ್ ಕೆಲಸವು ಆಗಸ್ಟ್ 2023ರಿಂದ ಶುರುವಾಗಲಿದೆ ಎಂದೂ ವರದಿಯಾಗಿದೆ.
ಸಮಂತಾ ಇತ್ತೀಚೆಗೆ ವಿಜಯ್ ದೇವರಕೊಂಡ ಜತೆ ʼಖುಷಿʼ ಚಿತ್ರದಲ್ಲಿ ಕಾಣಿಸಿಕೊಂಡರು. ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಂಡಿತು. ಸಮಂತಾ ಅವರಿಗೆ ವಿಜಯ್ ದೇವರಕೊಂಡ ಅವರ ಜತೆ ಇದು ಎರಡನೇ ಸಿನಿಮಾವಾಗಿದೆ. ಈ ಹಿಂದೆ 2018ರಲ್ಲಿ ನಟಿ ವಿಜಯ್ ಅವರೊಂದಿಗೆ ‘ಮಹಾನಟಿ’ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ.
-
ಪ್ರಮುಖ ಸುದ್ದಿ24 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ15 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ21 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ5 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್18 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ17 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ16 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉಡುಪಿ14 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ