ಟಾಲಿವುಡ್
Actor Nani: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್
ನಾನಿ ಹಾಗೂ ಕೀರ್ತಿ ಸುರೇಶ್ ಜೋಡಿಯಾಗಿರುವ ‘ದಸರಾ’ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 30ರಂದು ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ ಟೀಸರ್ ಝಲಕ್ ಮೂಲಕ ಪ್ರೇಕ್ಷಕರ ಮನ ಸೆಳೆಯಲು ಸಜ್ಜಾಗಿದೆ.
ಬೆಂಗಳೂರು: ನ್ಯಾಚುರಲ್ ಸ್ಟಾರ್ ನಾನಿ (Actor Nani) ಅಭಿನಯದ ಮೆಗಾ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ “ದಸರಾ’ ಟೀಸರ್ ಬಿಡುಗಡೆಗೆ ಒಂದೇ ದಿನ ಬಾಕಿ ಇದೆ. ಬಹು ನಿರೀಕ್ಷಿತ ಟೀಸರ್ ಬಿಡುಗಡೆಯನ್ನು ಸಿನಿ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಜನವರಿ 30 ಟೀಸರ್ ಬಿಡುಗಡೆಯ ವಿಶೇಷತೆಯನ್ನು ಚಿತ್ರತಂಡ ರಿವೀಲ್ ಮಾಡಿದ್ದು ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯ ಸ್ಟಾರ್ ನಟರು ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಮಾಸ್ ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡ ‘ದಸರಾ’ ಈಗಾಗಲೇ ಸಿನಿ ಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಾನಿ ಮಾಸ್ ಅವತಾರದಲ್ಲಿ ರಂಜಿಸಲು ರೆಡಿಯಾಗಿದ್ದು, ಮಾರ್ಚ್ 30ರಂದು ಬಿಡುಗಡೆಯಾಗುತ್ತಿರುವ ಚಿತ್ರದ ಟೀಸರ್ ಝಲಕ್ ನಾಳೆ ಬಿಡುಗಡೆಯಾಗುತ್ತಿದೆ. ಬಾಲಿವುಡ್ ನಟ ಶಾಹಿದ್ ಕಪೂರ್, ಧನುಷ್, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್ ಚಿತ್ರದ ಮ್ಯಾಸಿವ್ ಟೀಸರ್ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ವಿಶೇಷ ವಿಡಿಯೊ ಮುಖಾಂತರ ಹಂಚಿಕೊಂಡಿದೆ.
ಇದನ್ನೂ ಓದಿ: Vishnuvardhan: ಸ್ಮಾರಕ ಜಾಗದಲ್ಲಿಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ತೆರೆಯುವುದರ ಬಗ್ಗೆ ಪ್ರಸ್ತಾಪಿಸಿದ ಅನಿರುದ್ಧ
ನಾನಿ ಹಾಗೂ ಕೀರ್ತಿ ಸುರೇಶ್ ಜೋಡಿಯಾಗಿರುವ ‘ದಸರಾ’ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 30ರಂದು ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ ಟೀಸರ್ ಝಲಕ್ ಮೂಲಕ ಪ್ರೇಕ್ಷಕರ ಮನ ಸೆಳೆಯಲು ಸಜ್ಜಾಗಿದೆ.
ಇದನ್ನೂ ಓದಿ: TPL | ಟೆಲಿವಿಷನ್ ಪ್ರೀಮಿಯರ್ ಲೀಗ್ : ನಡೆಯಲಿದೆ ಮೂರು ದಿನಗಳ ಕಾಲ ಕಿರುತೆರೆ ಕಲಾವಿದರ ಕ್ರಿಕೆಟ್
ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.
South Cinema
Kajal Aggarwal: ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದೇಕೆ?
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ (Kajal Aggarwal) ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ನಟಿ ಕಾಜಲ್ ಅಗರ್ವಾಲ್ (Kajal Aggarwal) ಕೆಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಹೆಚ್ಚಾಗಿ ಸಕ್ಸೆಸ್ ಕಂಡದ್ದು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾರೆ.
ರೈಸಿಂಗ್ ಇಂಡಿಯಾ ಶೋನಲ್ಲಿ ಮಾತನಾಡಿದ ಕಾಜಲ್, “ಹಿಂದಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಬಹಳಷ್ಟು ಜನರಿದ್ದಾರೆ. ಏಕೆಂದರೆ ಅದು ಹೆಚ್ಚು ರಾಷ್ಟ್ರವ್ಯಾಪಿ ಮಾನ್ಯತೆ ಪಡೆದ ಭಾಷೆಯಾಗಿದೆ. ಆದರೆ ದಕ್ಷಿಣ ಭಾರತ ಸಿನಿರಂಗ ತುಂಬ ಸ್ನೇಹಪರ ಉದ್ಯಮವಾಗಿದೆ. ಸ್ವೀಕಾರಾರ್ಹಯುತವಾದಂತಹ ಉದ್ಯಮ ಕೂಡ. ದಕ್ಷಿಣ ಭಾರತದ ಸಿನಿರಂಗದಲ್ಲಿ ಉನ್ನತ ಮಟ್ಟದ ತಂತ್ರಜ್ಞರು, ಅದ್ಭುತ ನಿರ್ದೇಶಕರು ಇದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ನಾಲ್ಕು ಭಾಷೆಗಳಲ್ಲಿಯೂ ಸೇರಿʼʼಎಂದಿದ್ದಾರೆ.
“ಹಿಂದಿ ನನ್ನ ಮಾತೃಭಾಷೆಯಾಗಿದೆ. ನಾವೆಲ್ಲ ಹಿಂದಿ ಸಿನಿಮಾ ನೋಡುತ್ತ ಬೆಳೆದಿದ್ದೇವೆ. ಆದರೆ ನಾನು ಇಕೋ ಸಿಸ್ಟಮ್‌ಗೆ ಆದ್ಯತೆ ನೀಡುತ್ತೇನೆ., ನೈತಿಕತೆ, ಮೌಲ್ಯಗಳು, ಶಿಸ್ತು ಇರುವುದು ದಕ್ಷಿಣ ಭಾರತದ ನಿನಿರಂಗದಲ್ಲಿ ಆದರೆ ಹಿಂದಿ ಚಿತ್ರರಂಗದಲ್ಲಿ ಇದೆಲ್ಲದರ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆʼʼಎಂದರು.
ʻʻನಾನು ಮುಂಬೈನಲ್ಲಿ ಹಿಂದಿ ಮಾತನಾಡುತ್ತ ಬೆಳೆದೆ. ಆದರೆ ನನಗೆ ಮನೆಯ ಭಾವನೆ ಬಂದಿದ್ದು ಹೈದರಾಬಾದ್ ಮತ್ತು ಚೆನ್ನೈನಲ್ಲಿ. ನಾನು ಬಾಂಬೆ ಹುಡುಗಿ. ಅಲ್ಲೆ ಹುಟಿ, ಬೆಳೆದೆ. ನಾನು ಹೈದರಾಬಾದ್ (ತೆಲುಗು) ಚಲನಚಿತ್ರೋದ್ಯಮದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನನ್ನ ಕೆಲಸದ ಮುಖ್ಯ ಭಾಗವೆಂದರೆ ತಮಿಳು ಮತ್ತು ತೆಲುಗು ಚಲನಚಿತ್ರಗಳು. ನಾನು ಕೆಲವು ಹಿಂದಿ ಚಿತ್ರಗಳನ್ನು ಮಾಡಿದ್ದೇನೆ ಆದರೆ ನನಗೆ, ಹೈದರಾಬಾದ್ ಮತ್ತು ಚೆನ್ನೈ ನನ್ನ ಮನೆ ಎಂಬ ಭಾವನೆ. ಅದು ಎಂದಿಗೂ ಹೋಗುವುದಿಲ್ಲʼʼ ಎಂದರು.
ಇದನ್ನೂ ಓದಿ: Kajal Aggarwal: ಇಲ್ಲಿವೆ ಕಾಜಲ್ ಅಗರ್ವಾಲ್ ಲೇಟೆಸ್ಟ್ ಔಟ್‌ಫಿಟ್‌ಗಳು
ಕಾಜಲ್ ಮಾತನಾಡಿದ ಸಂದರ್ಶನದ ವಿಡಿಯೊ
ಕಾಜಲ್ 2007ರ ʻಲಕ್ಷ್ಮಿ ಕಲ್ಯಾಣಂʼ ಚಿತ್ರದ ಮೂಲಕ ತೆಲುಗು ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಮಗಧೀರ, ಆರ್ಯ-2 ನಂತಹ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಳು. ಹಿಂದಿಯಲ್ಲಿ, ಅಜಯ್ ದೇವಗನ್ ಜತೆಗೆ ರೋಹಿತ್ ಶೆಟ್ಟಿ ಅವರ ಸಿಂಗಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಖ್ಯಾತಿ ಗಳಿಸಿದರು. ಕಾಜಲ್ ಮುಂದೆ ಕಮಲ್ ಹಾಸನ್ ಜತೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
South Cinema
Actor Nani: ನಾನಿ ಅಭಿನಯದ `ದಸರಾ’ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಎಷ್ಟು?
ಮಾರ್ಚ್ 30ರಂದು ಸಿನಿಮಾ ಬಿಡುಗಡೆಯಾಗಿದ್ದು (Actor Nani), ಭಾರತಾದ್ಯಂತ ನಾನಿ ಅವರು ಪ್ರಚಾರ ಮಾಡಿದ್ದರು. ಟ್ರೇಡ್ ವರದಿಗಳ ಪ್ರಕಾರ, ಚಿತ್ರವು ತನ್ನ ಮೊದಲ ದಿನವೇ ಎಲ್ಲಾ ಭಾಷೆಗಳಲ್ಲಿ 17 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ತೆಲುಗು ಸ್ಟಾರ್ ನ್ಯಾಚುರಲ್ ನಾನಿ (Actor Nani) ಅವರ ದಸರಾ ಸಿನಿಮಾ ಮೊದಲ ದಿನವೇ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಭಾರತಾದ್ಯಂತ ಭಾರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಭಾರತದಲ್ಲಿ ಅಂದಾಜು 17 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಚಿತ್ರವು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ರಿವೇಂಜ್ ಡ್ರಾಮಾವನ್ನು ಶ್ರೀಕಾಂತ್ ಒಡೆಲಾ ಬರೆದು ನಿರ್ದೇಶಿಸಿದ್ದಾರೆ.
ಮಾರ್ಚ್ 30ರಂದು ಸಿನಿಮಾ ಬಿಡುಗಡೆಯಾಗಿದ್ದು, ಭಾರತಾದ್ಯಂತ ನಾನಿ ಅವರು ಪ್ರಚಾರ ಮಾಡಿದ್ದರು. ಟ್ರೇಡ್ ವರದಿಗಳ ಪ್ರಕಾರ, ಚಿತ್ರವು ತನ್ನ ಮೊದಲ ದಿನವೇ ಎಲ್ಲಾ ಭಾಷೆಗಳಲ್ಲಿ 17 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ದಸರಾ ತನ್ನ ಮೊದಲ ವಾರಾಂತ್ಯದಲ್ಲಿ ದಾಖಲೆಯ ಕಲೆಕ್ಷನ್‌ಗಳನ್ನು ದಾಖಲಿಸಲಿದೆಯಂತೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್‌ನಲ್ಲಿ ʻʻದಸರಾ ಅಮೆರಿಕದಲ್ಲಿ ನಾಲ್ಕನೇ ಸ್ಥಾನʼʼಎಂದು ಬರೆದುಕೊಂಡಿದ್ದಾರೆ.
ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Actor Nani: ʻದಸರಾʼ ಸಿನಿಮಾದಲ್ಲಿ ನಾನಿ ನಟನೆಗೆ ಭೇಷ್ ಎಂದ ಪ್ರೇಕ್ಷಕರು: ಟ್ವೀಟ್‌ನಲ್ಲಿ ಸಂತಸ ಹೊರ ಹಾಕಿದ ಸಿನಿಪ್ರಿಯರು!
ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.
South Cinema
Ponniyin Selvan: ‘ಪೊನ್ನಿಯನ್ ಸೆಲ್ವನ್-2’ ಟ್ರೈಲರ್ ಔಟ್
ಚೆನ್ನೈನಲ್ಲಿ (Ponniyin Selvan) ಮಾರ್ಚ್ 29ರಂದು ಸಂಜೆ ಅದ್ಧೂರಿಯಾಗಿ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.
ಬೆಂಗಳೂರು: ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ ಪೊನ್ನಿಯನ್ ಸೆಲ್ವನ್-2 (Ponniyin Selvan) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಸಂಜೆ ಅದ್ಧೂರಿಯಾಗಿ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ಟ್ರೈಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಯ, ಜಯಂರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯನ್ ಸೆಲ್ವನ್ ಕಾದಂಬರಿ ಆಧಾರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೊನ್ನಿಯನ್ ಸೆಲ್ವನ್ 500 ಕೋಟಿ ರೂ. ಬಾಚಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಯನ್ ಸೆಲ್ವನ್-2 ಸೀಕ್ವೆಲ್ ಟ್ರೈಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ.
ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ..ಅದ್ಧೂರಿ ಮೇಕಿಂಗ್, ಬೃಹತ್ ಸೆಟ್‌ಗಳು ಟ್ರೈಲರ್‌ನಲ್ಲಿ ಝಗಮಗಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ ಸಿನಿಮಾಕ್ಕಿದೆ.
ಇದನ್ನೂ ಓದಿ: Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?
`ಪೊನ್ನಿಯನ್ ಸೆಲ್ವನ್-2’ ಟ್ರೈಲರ್ ಔಟ್
ಟ್ರೈಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರುತ್ತಿದೆ. ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
South Cinema
Kajal Aggarwal: ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ ಕಾಜಲ್ ಅಗರ್ವಾಲ್
ನಟಿ ಕಾಜಲ್ ಅಗರ್ವಾಲ್ (Kajal Aggarwal) ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ. ಸುಂದರವಾದ ಹಸಿರು ಹೂವಿನ ಪ್ರಿಂಟೆಡ್ ಬಟ್ಟೆಗಳಿಂದ ಕಂಗೊಳಿಸಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ. ಸುಂದರವಾದ ಹಸಿರು ಹೂವಿನ ಪ್ರಿಂಟೆಡ್ ಬಟ್ಟೆಗಳಿಂದ ಕಂಗೊಳಿಸಿದ್ದಾರೆ.
ಕಾಜಲ್‌ನ ಬ್ರೇಲೆಟ್ ಮತ್ತು ಪ್ಯಾಂಟ್‌ಗಳು ಸೊಗಸಾದ ಕಪ್ಪು ಮತ್ತು ಬಿಳಿ ಪ್ರಿಂಟೆಡ್ ಒಳಗೊಂಡಿದೆ.
ಈ ಸರಳವಾದ ಉಡುಗೆಗೆ ಸೊಗಸಾದ ಕೇಶವಿನ್ಯಾಸ, ಮೇಕ್ಅಪ್ ಸಿಂಪಲ್ ಆಗಿ ಕಾಣುತ್ತಿದ್ದು, ಅವರ ಅಭಿಮಾನಿಗಳು ಕಮೆಂಟ್ ಮೂಲಕ ಸಂತಸ ಹೊರಹಾಕಿದ್ದಾರೆ.
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾದಲ್ಲಿ ನಟಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ.
ಕಾಜಲ್ ಅಗರ್ವಾಲ್ ಅವರು ಕೆಲವು ವರ್ಷಗಳ ಹಿಂದೆ ಗೌತಮ್ ಅವರನ್ನು ಮದುವೆ ಆದರು. ದಂಪತಿಗೆ ನೀಲ್ ಹೆಸರಿನ ಮಗು ಇದೆ.
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ20 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ11 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ13 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್