Actor Rajinikanth: `ಜೈಲರ್‌’ ಆ್ಯವರೇಜ್ ಸಿನಿಮಾ ಎಂದ ರಜನಿ; ಸಿನಿಮಾಗೆ ಸ್ವಲ್ಪ ಗೌರವ ಕೊಡಿ ಅಂದ್ರು ನೆಟ್ಟಿಗರು! Vistara News
Connect with us

South Cinema

Actor Rajinikanth: `ಜೈಲರ್‌’ ಆ್ಯವರೇಜ್ ಸಿನಿಮಾ ಎಂದ ರಜನಿ; ಸಿನಿಮಾಗೆ ಸ್ವಲ್ಪ ಗೌರವ ಕೊಡಿ ಅಂದ್ರು ನೆಟ್ಟಿಗರು!

Actor Rajinikanth: ಜೈಲರ್‌ ಚಿತ್ರದ ಬಗ್ಗೆ ರಜನಿ ಕಾಂತ್‌ ತಮ್ಮ ಮುಕ್ತ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. “ರೀ-ರೆಕಾರ್ಡಿಂಗ್ ಮಾಡುವ ಮೊದಲು ಸಿನಿಮಾ ಆ್ಯವರೇಜ್ ಆಗಿತ್ತು, ಯಾವಾಗ ಅನಿರುದ್ಧ ರವಿಚಂದರ್ ಸಂಗೀತ ಅದಕ್ಕೆ ಸೇರಿತೋ ಆಗ ಸಿನಿಮಾ ಬ್ಲಾಕ್‌ ಬಸ್ಟರ್‌ ಆಯಿತುʼʼ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Actor Rajinikanth
Koo

ಬೆಂಗಳೂರು: ಆಗಸ್ಟ್ 10ರಂದು ಬಿಡುಗಡೆಯಾದ ರಜನಿಕಾಂತ್ (Actor Rajinikanth) ಅವರ ಜೈಲರ್ ಸಿನಿಮಾ, ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿದೆ. ಹಲವು ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಇತ್ತೀಚೆಗೆ, ಜೈಲರ್ ಚಿತ್ರತಂಡ ಸಕ್ಸಸ್‌ ಮೀಟ್‌ನಲ್ಲಿ ಚಿತ್ರದ ಯಶಸ್ಸನ್ನು ಆಚರಿಸಿತು. ಈ ವೇಳೆ ಚಿತ್ರದ ಕುರಿತು ಹಲವು ವಿಚಾರಗಳನ್ನು ರಜನಿ ಹಂಚಿಕೊಂಡರು ‘ರೀ-ರೆಕಾರ್ಡಿಂಗ್ ಮಾಡುವ ಮೊದಲು ಸಿನಿಮಾ ಆ್ಯವರೇಜ್ ಆಗಿತ್ತು. ಯಾವಾಗ ಅನಿರುದ್ಧ ರವಿಚಂದರ್ ಸಂಗೀತ ಅದಕ್ಕೆ ಸೇರಿತ್ತೋ ಆಗ ಸಿನಿಮಾ ಬ್ಲಾಕ್‌ ಬಸ್ಟರ್‌ ಆಯಿತುʼʼ ಎಂದು ಹೇಳಿಕೊಂಡಿದ್ದಾರೆ. ಇದೀಗ ರಜನಿ ಅವರ ಮಾತಿಗೆ ಪರ ಹಾಗೂ ವಿರೋಧ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗುತ್ತಿದೆ.

ಸಂಗೀತದಿಂದ ಮಾತ್ರ ಚಲನಚಿತ್ರ ಯಶಸ್ವಿಯಾಗಲು ಸಾಧ್ಯವಿಲ್ಲ

ರಜನಿ ಮಾತನಾಡಿ ʻʻನಾನು ಮೊದಲು ರೀ-ರೆಕಾರ್ಡಿಂಗ್ ಇಲ್ಲದೆಯೇ ಸಿನಿಮಾ ನೋಡಿದೆ. ನಂತರ ನಾನು ಸೆಂಬಿಯಾನ್ ಸರ್ ಮತ್ತು ಕಣ್ಣನ್ ಸರ್ ಅವರಲ್ಲಿ ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದೆ. ಕಣ್ಣನ್ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆಗ ನಾನು ಕಣ್ಣನ್‌ಗೆ ಹೇಳಿದೆ, ನೆಲ್ಸನ್ ನಿಮ್ಮ ಸ್ನೇಹಿತ ಆದ ಕಾರಣ ಖಂಡಿತವಾಗಿಯೂ ನೀವು ಮೆಚ್ಚುತ್ತೀರಿ ಎಂದೆ. ಬಳಿಕ ಸೆಂಬಿಯನ್ ಅವರನ್ನು ಕೇಳಿದೆ. ಅವರು ಸಿನಿಮಾ ಆ್ಯವರೇಜ್ ಎಂದರು. ಆದರೆ, ರೀ-ರೆಕಾರ್ಡಿಂಗ್ ಮಾಡುವ ಮೊದಲು ನನಗೂ ಕೂಡ ಆ್ಯವರೇಜ್ ಎಂತಲೇ ಅನ್ನಿಸಿತ್ತು. ಯಾವಾಗ ಅನಿರುದ್ಧ್ ಅವರ ಸಂಗೀತ ಸಿನಿಮಾಗೆ ಸೇರಿತೋ, ಮೈ ಗಾಡ್! ಸಿನಿಮಾ ಬ್ಲಾಕ್‌ ಬಸ್ಟರ್‌ ಎಂದೆನಿಸತೊಡಗಿತುʼ ʼಎಂದು ರಜನಿ ಅನಿರುದ್ಧ ಅವರನ್ನು ಹಾಡಿ ಹೊಗಳಿದ್ದಾರೆ. ಈ ವೇಳೆ ಕ್ಯಾಮೆರಾಮನ್ ಕಾರ್ತಿಕ್ ಹಾಗೂ ಸಂಕಲನಕಾರ ನಿರ್ಮಲ್ ಅವರನ್ನು ರಜನಿ ಹೊಗಳಿದ್ದಾರೆ.

ರಜನಿಕಾಂತ್ ಭಾಷಣದ ವಿಡಿಯೊವನ್ನು ನಿರ್ಮಾಪಕರು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಹೀಗೆ ಬರೆದುಕೊಂಡಿದ್ದಾರೆ, “ರಜನಿ ತಮಗೆ ಅನಿಸಿದ್ದನ್ನು ಮಾತನಾಡಲು ಅವರು ಎಂದಿಗೂ ಹಿಂಜರಿಯುವುದಿಲ್ಲ. ಅಂತಹ ಒಳ್ಳೆಯ ರತ್ನ ಅವರುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, “ಏನು ಮಾತು, ಏನು ಮನುಷ್ಯ, ಸೋ ಡೌನ್ ಟು ಅರ್ಥ್. ದಿ ಒನ್ ಆ್ಯಂಡ್ ಓನ್ಲಿ ರಜನಿʼʼ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ರಜನಿ ಮಾತುಗಳನ್ನು ಒಪ್ಪಿಲ್ಲ. ʻʻನಿರ್ದೇಶಕ ನೆಲ್ಸನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಇಮೇಜ್ ಎತ್ತಿ ಹಿಡಿದಿದ್ದಾರೆ. ರಜನಿಕಾಂತ್ ಅವರನ್ನೂ ಗೌರವಿಸಬೇಕು. ಚಿತ್ರವನ್ನು ಪ್ರಶ್ನಿಸಬಾರದು” ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು “ಸಂಗೀತದಿಂದ ಮಾತ್ರ ಚಲನಚಿತ್ರ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ರಜನಿಕಾಂತ್ ತಿಳಿದಿರಬೇಕು. ಅವರ ಹೇಳಿಕೆಯು ನಿರ್ದೇಶಕ ಮತ್ತು ತಂಡದ ವಿಶ್ವಾಸದ ಮೇಲೆ ನೆಗೆಟಿವ್‌ ಪರಿಣಾಮ ಬೀರುತ್ತದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Rajinikanth: ರಜನಿಯನ್ನು ಸೂಪರ್‌ಸ್ಟಾರ್‌ ಸ್ಟೈಲಿನಲ್ಲೇ ಸ್ವಾಗತಿಸಿದ ಮಲೇಷ್ಯಾ ಪ್ರಧಾನಿ! ವಿಡಿಯೋ ವೈರಲ್

ನಾನು ತುಂಬಾ ಟೆನ್ಷನ್‌ನಲ್ಲಿದ್ದೇನೆ

ಸಕ್ಸಸ್ ಮೀಟ್‌ನಲ್ಲಿ ರಜನಿ ಮಾತು ಮುಂದುವರಿಸಿ ʻʻನಾನು ಪ್ರಮಾಣ ಮಾಡುತ್ತೇನೆ, ಈ ಚಿತ್ರ ಹಿಟ್ ಆದಾಗ, ನಾನು ಐದು ದಿನ ಮಾತ್ರ ಸಂತೋಷಪಟ್ಟೆ. ಆ ಐದು ದಿನಗಳ ನಂತರ, ನನ್ನ ಮುಂದಿನ ಚಿತ್ರ ಇದಕ್ಕಿಂತಲೂ ಹೆಚ್ಚು ನಿರೀಕ್ಷೆ ಇರುವ ಸಿನಿಮಾ ಕೊಡಬೇಕು ಎಂದು ಯೋಚಿಸಿದೆ. ನನ್ನ ಮುಂದಿನ ಚಿತ್ರದ ಬಗ್ಗೆ ನಾನು ತುಂಬಾ ಟೆನ್ಷನ್‌ನಲ್ಲಿದ್ದೇನೆ ಮತ್ತು ಏನು ಮಾಡಬೇಕೆಂದೂ ನನಗೆ ತಿಳಿದಿಲ್ಲ. ಇದನ್ನು ನಾನು ಈ ಸಮಯದಲ್ಲಿ ಹೇಳಲೇಬೇಕು” ಎಂದು ಹೇಳಿಕೋಂಡಿದ್ದಾರೆ.

ಜೈಲರ್ ವಿಶ್ವಾದ್ಯಂತ 650 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ 600 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಎರಡನೇ ತಮಿಳು ಚಲನಚಿತ್ರವಾಗಿತ್ತು.

ಜೈಲರ್ ಸಿನಿಮಾದಲ್ಲಿ ವಸಂತ ರವಿ, ತಮನ್ನಾ ಭಾಟಿಯಾ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್, ಮಲಯಾಳಂನ ಹಿರಿಯ ನಟ ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಕೂಡ ಇದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

South Cinema

Pooja Hegde: ಖ್ಯಾತ ಕ್ರಿಕೆಟಿಗನ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪೂಜಾ ಹೆಗ್ಡೆ?

Pooja Hegde: ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ವರದಿಯಾಗಿದೆ.ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ.

VISTARANEWS.COM


on

Edited by

Pooja Hegde
Koo
Pooja Hegde
ನಟಿ ಪೂಜಾ ಹೆಗ್ಡೆ Pooja Hegde ಹಲವು ಸಿನಿಮಾಗಳು ಸೋಲು ಕಂಡಿವೆ ನಟಿ ಆಗಾಗ ಫೋಟೊ ಶೂಟ್‌ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ ಆದರೀಗ ನಟಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ
Pooja Hegde
ಖ್ಯಾತ ಕ್ರಿಕೆಟಿಗನ ಜತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿದೆ

ಇದನ್ನೂ ಓದಿ: Pooja Hegde: ಕೆಂಪು ಉಡುಪಿನಲ್ಲಿ ಸಖತ್‌ ಹಾಟ್‌ ಆಗಿ ಕಂಡ ಪೂಜಾ ಹೆಗ್ಡೆ

Pooja Hegde
ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ವರದಿಯಾಗಿದೆ ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ
Pooja Hegde
ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ ಆದರೆ ತೆಲುಗು ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿವೆ
Pooja Hegde
ನಟಿ ಸೌತ್ ಬಾಲಿವುಡ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ
Pooja Hegde
ಓಕೆ ಲೈಲಾ ಪಾರೋ ಚಿತ್ರದ ಮೂಲಕ ಪೂಜಾ ನಾಯಕಿಯಾಗಿ ಪದಾರ್ಪಣೆ ಮಾಡಿದರು
Continue Reading

South Cinema

Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ

Darshan Thoogudeepa: ನಟ ದರ್ಶನ್ ಅವರ ಬೇಜವಾಬ್ದಾರಿತನದ ಹೇಳಿಕೆ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರ ಹಾಕಿದೆ.

VISTARANEWS.COM


on

Edited by

actor Darshan
Koo

ಮಂಡ್ಯ: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ)‌ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್‌ವುಡ್‌ ಕಲಾವಿದರೂ ಕೂಡ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಕೂಡ ರೈತರ ಬೆಂಬಲಕ್ಕೆ ನಿಂತಿದ್ದರು. ಈ ವೇಳೆ ಕನ್ನಡ ಸಿನಿಮಾ ಕಲಾವಿದರು ಅದಕ್ಕೆ ಬರಲಿಲ್ಲ, ಇದಕ್ಕೆ ಬರಲಿಲ್ಲ ಎಂದು ಹೇಳುತ್ತೀರಲ್ಲ ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಮಿಳು ನಟರು ಹಾಗೂ ಅವರ ಸಿನಿಮಾಗಳ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಇದೀಗ ನಟ ದರ್ಶನ್ ಅವರ ಬೇಜಾವಬ್ದಾರಿತನದ ಹೇಳಿಕೆ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರ ಹಾಕಿದೆ.

ನಟ ದರ್ಶನ್ ವಿರುದ್ಧ ಭುಗಿಲೆದ್ದ ಆಕ್ರೋಶ

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಹೋರಾಟ ನಡೆಸಿದೆ. ಕಾವೇರಿ ವಿಚಾರವಾಗಿ ನಟ ದರ್ಶನ್‌ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ʻʻನಟ ದರ್ಶನ್ ಅವರು ಕೂಡಲೇ ರೈತರಲ್ಲಿ ಕ್ಷಮೆ ಕೇಳಬೇಕು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ದರ್ಶನ್ ಬಂದರೆ ಬಲ ಸಿಗುತ್ತದೆ ಎಂದು ಭಾವಿಸಿದ್ದೇವು. ಅದಕ್ಕಾಗಿಯೇ ನಾವು ಆಹ್ವಾನಿಸಿದ್ದೇವು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಿಬೇಕಿತ್ತುʼʼ ಎಂದು ರೈತರು ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: Darshan Thoogudeepa: ತಮಿಳು ಸಿನಿಮಾ ಯಾಕೆ ನೋಡಿದ್ರಿ? ಕಾವೇರಿ ವಿಚಾರದಲ್ಲಿ ದರ್ಶನ್‌ ಕೆಂಡ

ದರ್ಶನ್‌ ಹೇಳಿದ್ದೇನು?

ಕಾವೇರಿ ಗಲಾಟೆ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್‌ ನಟರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡ ಚಿತ್ರರಂಗದ ತಾರೆಗಳು ಧ್ವನಿ ಎತ್ತುತ್ತಿಲ್ಲ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ನಟ ದರ್ಶನ್‌ ಖಾರವಾಗಿಯೇ ಮಾತನಾಡಿದ್ದರು. ʻʻಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ? ಅವರು ಯಾರೂ ಕಾಣಿಸೋದಿಲ್ಲವೇ?ʼʼ ಎಂದು ಕನ್ನಡ ಕಲಾವಿದರ ಬಗ್ಗೆ ಟೀಕೆ ಮಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದರು.

ದರ್ಶನ್‌ ವಿಡಿಯೊದಲ್ಲಿ ʻʻನೋಡಿ ಸ್ವಾಮಿ ಮೊನ್ನೆ ಮೊನ್ನೆಯಷ್ಟೇ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಒಬ್ಬ ವಿತರಕ 6 ಕೋಟಿಗೆ ಸಿನಿಮಾ ತಗೊಂಡ. 35, 36 ಕೋಟಿ ರೂ. ಮಾಡಿದ. ಆ ಸಿನಿಮಾವನ್ನು ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ? ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ?.” ಎಂದು ಪ್ರಶ್ನೆ ಮಾಡಿದ್ದರು. ನೀವು ಕನ್ನಡ ಸಿನಿಮಾ ನೋಡೋದಿಲ್ಲ, ನಾವೇಕೆ ಬೆಂಬಲ ನೀಡಬೇಕು ಎಂಬರ್ಥದಲ್ಲಿ ಮಾತನಾಡಿದ್ದರು.

Continue Reading

South Cinema

Dhruva Sarja: ಸಮಾಜಮುಖಿ ಕಾರ್ಯದಲ್ಲಿ ಕಾರುಣ್ಯ ರಾಮ್‌: ಅಶ್ವಿನಿ ಪುನೀತ್, ಧ್ರುವ ಸರ್ಜಾ ಸಾಥ್!

ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (ashwini puneeth rajkumar) ಹಾಗೂ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

VISTARANEWS.COM


on

Edited by

Karunya Ram in Social Work
Koo

ಬೆಂಗಳೂರು: ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕಾರುಣ್ಯ ರಾಮ್ (Karunya Ram) ಸದ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (ashwini puneeth rajkumar) ಹಾಗೂ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟಿ ಕಾರುಣ್ಯ ರಾಮ್, ‘ಅಂಗಾಂಗ ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಮ್ಮ ಉಪಯೋಗ ಆಗುತ್ತದೆ. ಅಂಗಾಂಗ ದಾನದಿಂದ ಪುಣ್ಯ ಸಿಗುತ್ತದೆ. ಎಲ್ಲರೂ ಅಂಗಾಂಗ ದಾನ ಮಾಡಿ’ ಎಂದು ಮನವಿ ಮಾಡಿದರು.

ಧ್ರುವ ಸರ್ಜಾ ಮಾತನಾಡಿ ʻʻಅನೇಕರಿಗೆ ನಾವು ಯೂಸ್ ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಉಪಯೋಗಕ್ಕೆ ಬರದೇ ಇರುವವರಲ್ಲ. ಯೂಸ್ಡ್ ಲೆಸ್ ಅಷ್ಟೇ. ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗ ಆಗುತ್ತದೆ. ನಾವು ಸತ್ತ ಮೇಲೂ ಇನ್ನೊಬ್ಬರಿಗೆ ಉಪಯೋಗ ಆಗುತ್ತದೆ ಎಂದರೆ ಯಾಕೆ ಮಾಡಬಾರದು. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಇಂಥ ಶಿಬಿರಗಳನ್ನು ಎಲ್ಲಾ ಕಡೆ ಮಾಡಬೇಕು, ಹೆಚ್ಚು ಹೆಚ್ಚು ಇಂತಹ ಶಿಬಿರಗಳು ಆಗಬೇಕು’ ಎಂದರು.

ಇದನ್ನೂ ಓದಿ: Dhruva Sarja: ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಧ್ರುವ ಸರ್ಜಾ, ಕಾರುಣ್ಯ ರಾಮ್!

Karunya Ram in Social Work

ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಭಾಗಿಯಾಗಿತ್ತು.

Continue Reading

South Cinema

Film Chamber Karnataka: ನಾಳೆ ಚಿತ್ರಮಂದಿರಗಳು ತೆರೆಯಲ್ಲ; ಬೆಂಗಳೂರು ಬಂದ್‌ಗೆ ಚಿತ್ರೋದ್ಯಮ ಸಾಥ್‌!

ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber Karnataka) ಮಂಡಳಿ ನಿರ್ಧರಿಸಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

VISTARANEWS.COM


on

Edited by

Film Chamber Karnataka
Koo

ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ)‌ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber Karnataka) ಮಂಡಳಿ ನಿರ್ಧರಿಸಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

ಕನ್ನಡ ಚಿತ್ರರಂಗದ ಪ್ರದರ್ಶಕ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್ ಈ ಬಗ್ಗೆ ಮಾತನಾಡಿ ʻʻಅಧ್ಯಕ್ಷರು ಪಧಾಧಿಕಾರಿಗಳ ಜತೆ ಕೂತು ಚರ್ಚೆ ಮಾಡಿದ್ದೇವೆ. ನೀರಿನ ವಿಚಾರದಲ್ಲಿ ಕರೆ ನೀಡಿದ ಬಂದ್​ಗೆ ಚಿತ್ರಮಂದಿರಗಳು ಬೆಂಬಲಕ್ಕೆ ಸದಾ ಸಿದ್ಧ. ನಾಡಿನ ಹಿತಕ್ಕಾಗಿ ಚಿತ್ರೋದ್ಯಮ ಯಾವತ್ತೂ ಇರುತ್ತದೆʼʼಎಂದರು.

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್. ಸುರೇಶ್ ಮಾತನಾಡಿ ʻʻಕಾವೇರಿ ವಿಚಾರ ಗಂಭೀರವಾದ ವಿಚಾರ. ನಮ್ಮ ಅಂಗ ಸಂಸ್ಥೆಗಳ ಜತೆ ಚರ್ಚೆ ಮಾಡಬೇಕು. ಕಲಾವಿದರನ್ನು ಭೇಟಿ ಮಾಡಬೇಕು. ಸಮಯದ ಅಭಾವ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ನೀರಿನ ಸಮಸ್ಯೆ ಆ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದರೆ ಸಮಯವಕಾಶ ಬೇಕು. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ’ ಎಂದರು.

ನಾಳೆಯ ಬೆಂಗಳೂರು ಬಂದ್‌ಗೆ ಬೆಂಬಲವನ್ನೂ ಸೂಚಿಸಿರುವ ವಾಣಿಜ್ಯ ಮಂಡಳಿ, ಬೆಂಗಳೂರು ಸಿಟಿಯಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಶೂಟಿಂಗ್ ಮಾಡುತ್ತಿರುವವರಿಗೆ ತೊಂದರೆ ಇಲ್ಲ ಎಂದಿದೆ.

ಇದನ್ನೂ ಓದಿ: Karnataka Film Chamber: ಕರ್ನಾಟಕ ಚಲನಚಿತ್ರ ಮಂಡಳಿ ಚುನಾವಣೆ; ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿದ ಶಿಲ್ಪಾ ಶ್ರೀನಿವಾಸ್!

ಹಿರಿಯ ನಟಿ ಲೀಲಾವತಿ ಸಾಥ್‌

ಈಗಾಗಲೇ ವಿವಿಧ ರೈತ ಹಾಗೂ ಸಂಘಟನೆಗಳು ಹೋರಾಟ ನಡೆಸುತಿದ್ದು, ಕಾವೇರಿ ಹೋರಾಟಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಿರಿಯ ನಟಿ ಎಂ.ಲೀಲಾವತಿ ಕೂಡ ಬೆಂಬಲ ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಮನೆಯಲ್ಲಿ ಮಾತನಾಡಿದ ಅವರು ʻʻನಾನು ಸಹ ಕಾವೇರಿ ಹೋರಾಟಕ್ಕೆ ಹೊರಡುವೆ. ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ಎಲ್ಲಾ ಕನ್ನಡಕೊಸ್ಕರ. ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ’ ಎಂದಿದ್ದಾರೆ. ನೆಲಮಂಗಲದ ಮನೆಯಿಂದ ಮಂಡ್ಯ ಪ್ರತಿಭಟನೆ ಸ್ಥಳಕ್ಕೆ ಮಗ ವಿನೋದ್ ರಾಜ್ ಜತೆಗೆ ಹೊರಟಿದ್ದಾರೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘಟನೆ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್​ಗೆ ಬೆಂಬಲ ನೀಡಿದೆ. ಮಂಗಳವಾರದಂದು ಕಿರುತೆರೆಗೆ ಸಂಬಂಧಿಸಿದ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಂದ್‌ ದಿನ ಏನು ಇರಲ್ಲ?

ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್‌ಗಳು, ಥಿಯೇಟರ್‌, ಸೂಪರ್ ಮಾರ್ಕೆಟ್‌, ಪೆಟ್ರೋಲ್ ಬಂಕ್‌, ಶಾಲಾ -ಕಾಲೇಜ್‌ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳು, ಕೈಗಾರಿಕೆಗಳು ಹೋಟೆಲ್‌ಗಳು, ಮಾಲ್‌ಗಳು.

ಎಲ್ಲ ಬಿಎಂಟಿಸಿ ಬಸ್‌ ಘಟಕಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತರದಿರಲು ನೌಕರರು ನಿರ್ಧರಿಸಿದ್ದಾರೆ. ಖಾಸಗಿ ಶಾಲೆಗಳಿಗೆ ಬಹುತೇಕ ರಜೆ ಘೋಷಣೆಯಾಗಿದ್ದು, ಪರೀಕ್ಷೆಗಳು ನಡೆಯುವ ಕಡೆ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ಬಂದ್‌ಗೆ ಬೆಂಬಲ ಸೂಚಿಸಲಿದ್ದಾರೆ.

Continue Reading
Advertisement
Dina Bhavishya
ಪ್ರಮುಖ ಸುದ್ದಿ41 mins ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

Pakistan Cricket Team Skipper Babaz azam fined exceeding speed limit
ಕ್ರಿಕೆಟ್5 hours ago

Babar Azam: ಆಡಿ ಕಾರ್ ಓವರ್‌ಸ್ಪೀಡ್ ಓಡಿಸಿ, ದಂಡ ಕಟ್ಟಿದ ಪಾಕ್ ಕ್ರಿಕೆಟ್ ಟೀಂ ನಾಯಕ ಬಾಬರ್ ಅಜಮ್!

Sara Sunny
ದೇಶ6 hours ago

Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ

Tree falls and kills woman, daughter survived
ಕರ್ನಾಟಕ6 hours ago

Bangalore rain : ಮನೆ ಮುಂದೆ ವಾಕ್‌ ಮಾಡುತ್ತಿದ್ದಾಗ ಉರುಳಿದ ಮರ; ತಾಯಿ ಮೃತ್ಯು, 5 ವರ್ಷದ ಮಗು ಗಂಭೀರ

BJP Flag
ದೇಶ6 hours ago

MP Assembly Election: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಮೂವರು ಕೇಂದ್ರ ಸಚಿವರು, ಹಲವು ಸಂಸದರು ಕಣಕ್ಕೆ!

Vistara Top 10 News 2509
ಕರ್ನಾಟಕ7 hours ago

VISTARA TOP 10 NEWS: ನಾಳೆ ಬೆಂಗಳೂರು ಬಂದ್‌, ಶುಕ್ರವಾರ ಕರ್ನಾಟಕ ಬಂದ್‌, ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ಬಂದ್‌

Protest demanding release of education subsidy for building construction workers at pavagada
ತುಮಕೂರು7 hours ago

Tumkur News: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ ಪಾವಗಡದಲ್ಲಿ ಪ್ರತಿಭಟನೆ

Sri Raghaveshvarabharati Swamiji pravachan
ಉತ್ತರ ಕನ್ನಡ7 hours ago

Uttara Kannada News: ಮಠಕ್ಕೆ ಗುರು ಎಷ್ಟು ಮುಖ್ಯವೋ ಸಮಾಜಕ್ಕೆ ಗುರಿಕ್ಕಾರರು ಅಷ್ಟೇ ಮುಖ್ಯ: ಶ್ರೀರಾಘವೇಶ್ವರಭಾರತೀ ಸ್ವಾಮೀಜಿ

Hindu Saints protest against Udhayanidhi Stalin at Delhi
ದೇಶ8 hours ago

Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ

Bangalore Bandh Photo
ಕರ್ನಾಟಕ8 hours ago

Bangalore Bandh : ಬೆಂಗಳೂರು ಬಂದ್‌ ಫಿಕ್ಸ್‌; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಬಸ್‌ ಸಂಚಾರ ಡೌಟ್; ಏನಿರುತ್ತೆ? ಏನಿರಲ್ಲ?‌

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ41 mins ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ12 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ14 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ16 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ17 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌