ದೇವ್‌ ಭರೇ ಕರೋ... ಕೊಂಕಣಿ ಮಾತನಾಡಿ ಅಚ್ಚರಿಪಡಿಸಿದ ನಟ ರಣವೀರ್! - Vistara News

ಬಾಲಿವುಡ್

ದೇವ್‌ ಭರೇ ಕರೋ… ಕೊಂಕಣಿ ಮಾತನಾಡಿ ಅಚ್ಚರಿಪಡಿಸಿದ ನಟ ರಣವೀರ್!

ಅಮೆರಿಕದ ಪ್ರವಾಸದಲ್ಲಿರುವ ಬಾಲಿವುಡ್​​ನ ಸೂಪರ್​ ಸ್ಟಾರ್​ ಕಪಲ್​ಗಳಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

VISTARANEWS.COM


on

deepika and ranveer
ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮುಂಬಯಿ: ಬಾಲಿವುಡ್​ನ ಸ್ಟಾರ್ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು. ಇತ್ತೀಚಿಗೆ ಬಿಡುವು ಮಾಡಿಕೊಂಡು ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಈ ಪ್ರೇಮ ಪಕ್ಷಿಗಳು ಕುಟುಂಬದವರ ಜೊತೆ ಕಾಲ ಕಳೆಯುತ್ತಿವೆ. ಸದ್ಯ ಅವರಿಬ್ಬರೂ ಒಟ್ಟಾಗಿ ಎಂಜಾಜ್ ಮಾಡುತ್ತಿರುವ ಪೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ರಣವೀರ್ ಸಿಂಗ್ ಕೊಂಕಣಿಯಲ್ಲಿ ಸುಲಲಿತವಾಗಿ ಮಾತನಾಡಿರುವ ವಿಡಿಯೊ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಕೊಂಕಣಿ ಸುಲಲಿತ
ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. ಹೀಗಿರುವಾಗಲೇ ನಟ ರಣವೀರ್​ ಪತ್ನಿ ದೀಪಿಕಾ ಜತೆ ಅಮೆರಿಕದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ಕೊಂಕಣಿ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಟ ರಣವೀರ್​ ಕೂಡ ದೀಪಿಕಾಗೆ ಸಾಥ್ ನೀಡಿದ್ದರು. ಅಲ್ಲದೆ ಇದೇ ಕಾರ್ಯಕ್ರಮದಲ್ಲಿ ರಣವೀರ್​ ಸಿಂಗ್, ಅಭಿಮಾನಿಗಳು ಹಾಗೂ ಕೊಂಕಣಿ ಸಮುದಾಯದವರೊಂದಿಗೆ ಎರಡ್ಮೂರು ಸಾಲು ಸಾಲು ಕೊಂಕಣಿ ಮಾತನಾಡಿ ಅಚ್ಚರಿಗೊಳಿಸಿದ್ದಾರೆ. ದೇವ್‌ ಭರೇ ಕರೋ (ದೇವರು ಒಳ್ಳೆಯದು ಮಾಡಲಿ) ಎಂದು ಇವರು ಕೊಂಕಣಿಯಲ್ಲಿ ಹೇಳಿದಾಗ ಕೊಂಕಣಿಕರು ಖುಷಿಪಟ್ಟಿದ್ದಾರೆ. ಸ್ವತಃ ದೀಪಿಕಾ ಕೂಡ ಪತಿ ಸುಲಲಿತವಾಗಿ ಕೊಂಕಣಿ ಮಾತನಾಡಿದ್ದನ್ನು ಕೇಳಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಕದಿಯುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೆ, ದೀಪಿಕಾ ಪಡುಕೋಣೆ ಅವರ ಮಾತೃಭಾಷೆ ಕೊಂಕಣಿ.

ಇದನ್ನು ಓದಿ | ನಟಿ ದೀಪಿಕಾ ಪಡುಕೋಣೆ ಹೃದಯ ಆರೋಗ್ಯ: ಕಳವಳಕ್ಕೆ ಕಾರಣವಿಲ್ಲ

ರಣವೀರ್​, ದೀಪಿಕಾ ಮುಂಬರುವ ಚಿತ್ರಗಳು

ಕೊನೆಯದಾಗಿ ರಣವೀರ್ ಜಯ್​ಶಭಾಯಿ ಜೋರ್​ಧರ್ ಸಿನಿಮಾದಲ್ಲಿ ನಟಿಸಿದ್ದರು. ಮುಂದೆ ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್ ಚಿತ್ರದಲ್ಲಿ ಪೂಜಾ ಹೆಗ್ಡೆ ಹಾಗೂ ಜಾಕ್ವೆಲಿನ್‌ ಫರ್ನಾಡೀಂಸ್​ ಅವರ ಜತೆ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟಿ ದೀಪಿಕಾ ಪಡುಕೋಣೆ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಪಠಾಣ್, ಫೈಟರ್ ಹಾಗೂ ಹಿಂದಿಗೆ ರಿಮೇಕ್​ ಆದ ಐತಿಹಾಸಿಕ ಚಿತ್ರ ಮಹಾಭಾರತ ಮತ್ತು ಪ್ರಾಜೆಕ್ಟ್​ ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನು ಓದಿ| ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Latest

ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

VISTARANEWS.COM


on

ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟಕ್ಕೆ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಕುತೂಹಲಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ‘ಸಿನಿಮಾಕಾನ್ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಈ ಸಿನಿಮಾ ಕೇವಲ ರಕ್ತಪಾತದ ಗ್ಯಾಂಗ್‌ಸ್ಟರ್ ಕಥೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಆಕ್ಷನ್ ಸಿನಿಮಾದಂತೆ ಕಂಡರೂ, ಕಥೆಯ ಒಳಗೆ ಮಾನವನ ಮನಸ್ಥಿತಿಯ ಆಳವಾದ ಪದರಗಳಿವೆ ಮತ್ತು ಇದು ಪ್ರತಿಯೊಬ್ಬರಿಗೂ ಹತ್ತಿರವಾಗುವಂತಹ ಭಾವನಾತ್ಮಕ ಕಥೆಯನ್ನು ಹೊಂದಿದೆ ಎಂದು ಅವರು ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ‘ಟಾಕ್ಸಿಕ್’ ಕೇವಲ ಭಾರತೀಯ ಭಾಷೆಗಳಿಗೆ ಸೀಮಿತವಾಗಿಲ್ಲ. ಈ ಚಿತ್ರವನ್ನು ಕನ್ನಡದ ಜೊತೆಗೆ ನೇರವಾಗಿ ಇಂಗ್ಲಿಷ್ ಭಾಷೆಯಲ್ಲೂ ಚಿತ್ರೀಕರಿಸಲಾಗಿದ್ದು, ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯುವ ಗುರಿ ಹೊಂದಿದೆ. ಜಾಗತಿಕ ಮಟ್ಟದ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ದೃಶ್ಯ ವೈಭವದ ಜೊತೆಗೆ ಪ್ರೇಕ್ಷಕರನ್ನು ಆಳವಾಗಿ ಯೋಚಿಸುವಂತೆ ಮಾಡುವ ವಿಭಿನ್ನ ಶೈಲಿಯ ಸಿನಿಮಾ ಇದಾಗಲಿದೆ ಎಂಬ ಭರವಸೆಯನ್ನು ಯಶ್ ನೀಡಿದ್ದಾರೆ. ಈ ಸುದ್ದಿಯು ಯಶ್ ಅವರ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಚಿತ್ರದ ಬಿಡುಗಡೆ ವಿಚಾರಕ್ಕೆ ಬರುವುದಾದರೆ, ಈ ಹಿಂದೆ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸಿನಿಮಾ ವಿಳಂಬವಾಗಬಹುದು ಎಂಬ ವದಂತಿಗಳಿದ್ದವು. ಆದರೆ, ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಎಲ್ಲ ಅಡೆತಡೆಗಳನ್ನು ದಾಟಿ ಸಿನಿಮಾ ಜೂನ್ 4, 2026 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಕಿಯಾರಾ ಅಡ್ವಾಣಿ, ನಯನತಾರಾ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದ್ದು, ಜೂನ್ ತಿಂಗಳಿನಲ್ಲಿ ‘ಟಾಕ್ಸಿಕ್’ ಹವಾ ಶುರುವಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

Continue Reading

ಸಿನಿಮಾ

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ ಬರಲಿದೆ.

VISTARANEWS.COM


on

Action Prince Dhruva Sarja much awaited film Martin to hit the screens on October 11

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ, ಪ್ಯಾನ್‌ ವರ್ಲ್ಡ್‌ ಸಿನಿಮಾ ಮಾರ್ಟಿನ್‌ ರಿಲೀಸ್‌ಗೆ ಕೌಂಟ್‌ ಡೌನ್‌ ಶುರುವಾಗಿದೆ. ಅಕ್ಟೋಬರ್ 11 ರಂದು ಭಾರತದಾದ್ಯಂತ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಮಾರ್ಟಿನ್‌ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

Action Prince Dhruva Sarjas much-awaited film 'Martin' to hit the screens on October 11

ಭರ್ಜರಿ ಬರ್ತ್‌ ಡೇ ಸೆಲೆಬ್ರೆಷನ್‌ಗೆ ಫ್ಯಾನ್ಸ್‌ ಸಜ್ಜು

ಮಾರ್ಟಿನ್‌ ಸಿನಿಮಾಗೂ ಮೊದಲೇ ಧ್ರುವ ಸರ್ಜಾರ ಬರ್ತ್ ಡೇ ಸೆಲೆಬ್ರೆಷನ್‌‌ಗೆ ಫ್ಯಾನ್ಸ್ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಆಟಂ ಬಾಂಬ್ ಧ್ರುವ ಸರ್ಜಾ ನಟನೆಯಲ್ಲಿ ರಿಲೀಸ್ ಆಗಿರುವುದುದು ನಾಲ್ಕೇ ಸಿನಿಮಾವಾದರೂ, 40 ಸಿನಿಮಾ ಮಾಡಿರುವಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅಭಿಮಾನಿಗಳನ್ನು ವಿಐಪಿ ಅಂತೇಳು ಧ್ರುವ, ಅವರಿಗಾಗಿಯೇ ಒಂದು ದಿನ ಮೀಸಲಿಟ್ಟಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವ ಬಹದ್ಧೂರ್, ಈ ಬಾರಿ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಇರುವ ಜಾಗಕ್ಕೆ ಭೇಟಿ ಕೊಡುತ್ತಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಧ್ರುವ ಮನೆಯ ರಸ್ತೆಯು, ಅಭಿಮಾನಿಗಳಿಂದ ತುಂಬಿ ಹೋಗಿತ್ತು.

Action Prince Dhruva Sarjas much-awaited film 'Martin' to hit the screens on October 11

ಧ್ರುವ ಹುಟ್ಟುಹಬ್ಬಕ್ಕೂ ಮೊದಲು ಮಾರ್ಟಿನ್ ಚಿತ್ರತಂಡ ಅಕ್ಟೋಬರ್ 4ರಂದು ಹೈದರಾಬಾದ್‌ನಲ್ಲಿ ಧ್ರುವ ಅವರ ಇಂಟ್ರೋಡಕ್ಷನ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಕ್ಟೋಬರ್ 5ರಂದು ಹುಬ್ಬಳಿಯಲ್ಲಿ ಧ್ರುವ ತಮ್ಮ ಫ್ಯಾನ್ಸ್‌ನ ಮೀಟ್ ಮಾಡಲಿದ್ದಾರೆ. ತಮ್ಮ ಹುಟ್ಟುಹಬ್ಬದಂದು ದಾವಣಗೆರೆಯಲ್ಲಿ ಮಾರ್ಟಿನ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಉತ್ತರ ಕರ್ನಾಟಕ ಜನರ ಜತೆ ಧ್ರುವ ಈ ಬಾರಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಮುಂಬೈನಲ್ಲಿ ಸಾಂಗ್‌ ರಿಲೀಸ್‌

ಹುಟ್ಟುಹಬ್ಬದ ನಂತರ ಅಕ್ಟೋಬರ್ 8ರಂದು ಮುಂಬೈನಲ್ಲಿ ಮಾರ್ಟಿನ್ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗುತ್ತಿದೆ. ಅಂದ‌ ಹಾಗೆ ಮಾರ್ಟಿನ್ ಒಂದಲ್ಲ ಒಂದು ಕಾರಣಕ್ಕೆ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.ಇದೇ ತಿಂಗಳ 11ರಂದು ಮಾರ್ಟಿನ್ ಆಲ್ ಓವರ್ ಇಂಡಿಯಾ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಅತಿ ಹೆಚ್ಚು ಬಜೆಟ್‌ನ ಮಾರ್ಟಿನ್‌, ಶೇಖಡಾ 80ರಷ್ಟು ಚಿತ್ರವನ್ನು ಸೆಟ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಹಾಲಿವುಡ್‌ನ ಫಾಸ್ಟ್ ಆ್ಯಂಡ್ ಪ್ಯೂರಿಯಸ್ ಚಿತ್ರ ನೋಡಿದ ಅನುಭವ ಆಗುತ್ತೆ ಎನ್ನುವ ಮಾತನ್ನು ಸಿನಿಮಾ ತಂಡ ಹೇಳಿಕೊಂಡಿದೆ.

Action Prince Dhruva Sarjas much-awaited film 'Martin' to hit the screens on October 11

ಮಾರ್ಟಿನ್ ತಂಡದಿಂದ ನಿರ್ದೇಶಕರೇ ಔಟ್!

ಮಾರ್ಟಿನ್ ಗೆಲ್ಲುತ್ತೆ ಎಂಬ ಭರವಸೆ ಕೂಡ ಗಾಂಧಿನಗರಕ್ಕಿದೆ. ಆದರೆ ಈ ಸಮಯದಲ್ಲಿ ಜತೆಯಾಗಿರಬೇಕಿದ್ದ ತಂಡದಲ್ಲಿ ಬಿರುಕು ಮೂಡಿದೆ. ಚಿತ್ರದ ಪ್ರಚಾರದಿಂದ ನಿರ್ದೇಶಕ ಎಪಿ ಅರ್ಜುನ್ ಅವರನ್ನು ದೂರ ಇಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಾರ್ಟಿನ್‌ಗೆ ದ್ರೋಹದ ವಿಚಾರ ಜಗಜ್ಜಾಹೀರಾಗಿತ್ತು. ಚಿತ್ರದ ಹೆಸರಿನಲ್ಲಿ ನಿರ್ಮಾಪಕ ಉದಯ್ ಮೆಹ್ತಾಗೆ ನಿರ್ದೇಶಕ ಎ.ಪಿ.ಅರ್ಜುನ್ ಅವರಿಂದ ಮೋಸವಾಗಿದೆ. ಕೇವಲ ಸಿಜಿ ಮತ್ತು ವಿಎಫ್‌ಎಕ್ಸ್ ಒಂದರಲ್ಲೇ 73 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕೆ ಉದಯ್ ಮೆಹ್ತಾ ಮತ್ತು ಎಪಿ ಅರ್ಜುನ್ ನಡುವೆ ಸಂಬಂಧ ಹಳಸಿದೆ. ತಮ್ಮದೇ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಎಪಿ ಅರ್ಜುನ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾ ಆಗಿದೆ ಎಂದು ಹೊಸ ಬಾಂಬ್ ಕೂಡ ಉದಯ್ ಮೆಹ್ತಾ ಸಿಡಿಸಿದ್ದಾರೆ.

Action Prince Dhruva Sarja  much awaited film Martin to hit the screens on October 11

ಮಾರ್ಟಿನ್ ಚಿತ್ರದ ಕಥೆ ಚಿತ್ರಕಥೆಯನ್ನು ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಬರೆದಿದ್ದಾರೆ. ಹೀಗಿರುವಾಗ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಬೇಕಿದ್ದ ”ಮಾರ್ಟಿನ್‌” ಚಿತ್ರತಂಡದಲ್ಲಿ, ಸಿನಿಮಾ ರಿಲೀಸ್‌ಗೂ ಮೊದಲೇ ಬಿರುಕು ಮೂಡಿದೆ. ಇವೆಲ್ಲದರ ನಡುವೆ ಅಕ್ಟೋಬರ್ 6 ರಂದು ಧ್ರುವ ಸರ್ಜಾ ಬರ್ತ್ ಡೇ ಸೆಲೆಬ್ರೇಶನ್ ಮಾಡಿ ಮತ್ತೊಂದು ಮೆಗಾ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಾಲಿವುಡ್

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡೇಟು! ಮುಂಬೈ ಆಸ್ಪತ್ರೆಗೆ ದಾಖಲು

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡು ತಗುಲಿದ್ದು, ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

VISTARANEWS.COM


on

Actor Govinda

ಬಾಲಿವುಡ್‌ ನಟ ಗೋವಿಂದ (Actor Govinda) ಕಾಲಿಗೆ ಗುಂಡು ತಗುಲಿದೆ. ರಿವಾಲ್ವರ್​​ ಲಾಕ್​ ಓಪನ್​ ಆಗಿದ್ದರಿಂದ ಜೇಬಿಗೆ ರಿವಾಲ್ವರ್​ ಇಟ್ಟುಕೊಳ್ಳುವಾಗ ಮಿಸ್ ಫೈರ್ ಆಗಿದೆ. ಕೂಡಲೇ ಗೋವಿಂದ ಕುಟುಂಬಸ್ಥರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಮುಂಜಾನೆ 4.45ರ ಸುಮಾರಿಗೆ ಘಟನೆ ನಡೆದಿದೆ.

ನಟ ಗೋವಿಂದ ಲೈಸೆನ್ಸ್​ ರಿವಾಲ್ವರ್​ ಬಳಕೆ ಮಾಡುತ್ತಿದ್ದರು. ಮನೆ ಬಿಡುವಾಗ ಗನ್​ ಚೆಕ್​ ಮಾಡುತ್ತಿದ್ದರು. ಈ ವೇಳೆ ಗೋವಿಂದ ಕಾಲಿಗೆ ಬುಲೆಟ್ ತಗುಲಿದೆ. ತನ್ನದೇ ರಿವಾಲ್ವರ್​​ನಿಂದ ಫೈರಿಂಗ್​​​ ಆಗಿದೆ. ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಯಲ್ಲಿ ಗೋವಿಂದಗೆ ಟ್ರೀಟ್​ಮೆಂಟ್​ ಮುಂದುವರಿದಿದೆ. ಅದೃಷ್ಟವಶಾತ್‌ ಗೋವಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಬೈ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಲಿದ್ದು, ಈ ಸಂಬಂಧ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

ಮುಂಜಾನೆ ಕೋಲ್ಕತ್ತಾಗೆ ಹೊರಡುವ ಮೊದಲು ನಟ ತನ್ನ ಪರವಾನಗಿ ಪಡೆದ ರಿವಾಲ್ವರ್ ಅನ್ನು ಪರಿಶೀಲಿಸುತ್ತಿದ್ದಾಗ ಜುಹು ನಿವಾಸದಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಆಕಸ್ಮಿಕವಾಗಿ ಗೋವಿಂದ ಕೈಯಿಂದ ಬಿದ್ದು, ಕಾಲಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಲು ಬೆಳಿಗ್ಗೆ 6 ಗಂಟೆಗೆ ಫ್ಲೈಟ್‌ ಇತ್ತು. ನಾನು ಮೊದಲೇ ವಿಮಾನ ನಿಲ್ದಾಣವನ್ನು ತಲುಪಿದ್ದೆ. ಗೋವಿಂದ ಅವರು ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಹೊರಟಿದ್ದರು. ಆಗ ಈ ಅವಘಡ ಸಂಭವಿಸಿದೆ. ಸದ್ಯ ವೈದ್ಯರು ಗುಂಡು ಹೊರತೆಗೆದಿದ್ದು, ಗೋವಿಂದ ಆರೋಗ್ಯ ಸ್ಥಿರವಾಗಿದೆ ಎಂದು ನಟನ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ.

ಆಸ್ಪತ್ರೆಯಿಂದ ನಟ ಗೋವಿಂದ ಆಡಿಯೋ ಮೆಸೇಜ್ ರಿಲೀಸ್ ಮಾಡಿದ್ದಾರೆ. ಎಲ್ಲರ ಹಾರೈಕೆ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಗುಂಡು ಬಿದ್ದಿದನ್ನು ತೆಗೆಯಲಾಗಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ. ಗೋವಿಂದ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Deepika Padukone: ಫೇಕ್ ಬೇಬಿ ಬಂಪ್ ಎಂದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಬಿಟೌನ್ ಪದ್ಮಾವತಿ..!

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮುಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಬೇಬಿ ಬಂಪ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Deepika Padukone
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Deepika Padukone
ಪ್ರೆಗ್ನೆಸಿಯ ಸ್ಟನ್ನಿಂಗ್​ ಫೋಟೋಗಳನ್ನು ದೀಪಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Deepika Padukone
ಬ್ಲ್ಯಾಕ್ ಥೀಮ್​ನಲ್ಲಿ ಬೋಲ್ಡ್ ಬೇಬಿ ಬಂಪ್ ಶೂಟ್ ಮಾಡಿಸಿರೋ ದೀಪಿಕಾ ನಟ್ಟಿಗರ ಮನ ಸೆಳೆದಿದ್ದಾರೆ.
Deepika Padukone
ಫೋಟೋಶೂಟ್‌ನಲ್ಲಿ ರಣವೀರ್ ಸಿಂಗ್ ಸಹ ದೀಪಿಕಾಗೆ ಸಾಥ್ ನೀಡಿದ್ದಾರೆ.
Deepika Padukone
ನಟಿಗೆ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್ ನೀಡಲಾಗಿದ್ದು ಸೌತ್ ಬಾಂಬೆ ಆಸ್ಪತ್ರೆಯಲ್ಲಿ ದೀಪಿಕಾ ಡೆಲಿವರಿ ಆಗಲಿದೆ ಎಂದು ಹೇಳಿದ್ದಾರೆ.
Deepika Padukone
ಸದ್ಯ ದೀಪಿಕಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದು, ಮಾರ್ಚ್ ತನಕವೂ ಡಿಪ್ಪಿ ಮೆಟರ್ನಿಟಿ ಲೀವ್‌ನಲ್ಲಿ ಇದ್ದಾರೆ.

ಇದನ್ನೂ ಓದಿ: Pranitha Subhash: 2ನೇ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಪ್ರಣೀತಾ ಸುಭಾಷ್; ಮತ್ತೆ ಬೇಬಿ ಬಂಪ್ ಫೋಟೋಶೂಟ್

Continue Reading
Advertisement
ಅವಿಭಾಗೀಕೃತ4 ನಿಮಿಷಗಳು ago

ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್; 15 ಸಾವು, ಹಲವರ ಸ್ಥಿತಿ ಗಂಭೀರ

ದೇಶ10 ನಿಮಿಷಗಳು ago

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

Latest17 ನಿಮಿಷಗಳು ago

ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

ಅವಿಭಾಗೀಕೃತ23 ನಿಮಿಷಗಳು ago

ಅಹಿಂದ ರಕ್ಷಣೆ ಹೊಣೆ ಹೊತ್ತ ಸಚಿವ ಜಾರಕಿಹೊಳಿ: ಇದರ ಮರ್ಮವೇನು?

Latest1 ಗಂಟೆ ago

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

Latest1 ಗಂಟೆ ago

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

Latest2 ಗಂಟೆಗಳು ago

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

Latest3 ಗಂಟೆಗಳು ago

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

Latest3 ಗಂಟೆಗಳು ago

ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ

ರಾಜಕೀಯ3 ಗಂಟೆಗಳು ago

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌