ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸಿಎಂ ಸಿದ್ದರಾಮಯ್ಯ ಕರೆ - Vistara News

ರಾಜಕೀಯ

ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸಿಎಂ ಸಿದ್ದರಾಮಯ್ಯ ಕರೆ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ರಾಣೇಬೆನ್ನೂರು: ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ರಾಣಿಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀಬೀರೇಶ್ವರ ಸ್ವಾಮಿ ದೇವಸ್ಥಾನದ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಟ್ಟೂರಿನ ದೇವಸ್ಥಾನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬೀರಲಿಂಗೇಶ್ವರ ದೇವಸ್ಥಾನ ನಿಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ದೇವನೊಬ್ಬ ನಾಮ ಹಲವು ಎಂದು ಅರ್ಥೈಸಿಕೊಳ್ಳಬೇಕು. ನಮ್ಮ ನಾಡು, ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದು ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ , ಕುವೆಂಪು ಬಯಸಿದ್ದರು. ಅದನ್ನೇ ನಮ್ಮ ಸರ್ಕಾರ ಪಾಲಿಸುತ್ತಿದೆ ಎಂದರು.
ಕೇವಲ 13 ಕುರುಬರ ಕುಟುಂಬಗಳಿರುವ ಊರಿನಲ್ಲಿ ಬೀರಲಿಂಗೇಶ್ವರ ದೇವಾಲಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ನಿಟ್ಟೂರಿನ ಸಾಮರಸ್ಯಕ್ಕೆ ದ್ಯೋತಕವಾಗಿದೆ ಎಂದು ಹೇಳಿದರು.
ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ:
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ವಿಚಾರಗಳು ಸಂವಿಧಾನದ ಆಧಾರ ಸ್ತಂಭಗಳು. ದೇವರ ಪೂಜೆ ಮಾಡಬೇಕು ಆದರೆ ಮೂಢ ನಂಬಿಕೆಗಳನ್ನು ಇಟ್ಟುಕೊಳ್ಳಬಾರದು. ಬಸವಣ್ಣ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು ಎನ್ನಿವುದನ್ನು ಸ್ಮರಿಸಬೇಕು. ಅಂಬೇಡ್ಕರ್ ಅವರು ದೇಶದ ಸ್ವಾತಂತ್ರ್ಯ ಸಮಾಜಿಕ, ಆರ್ಥಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ, ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ ಎಂದಿದ್ದರು. ಸಮಾನತೆಯ ಆಶಯದಿಂದಲೇ ಭಾಗ್ಯಗಳನ್ನು, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಎಂದರು.
ಇಸ್ಲಾಂ, ಹಿಂದೂ, ಕ್ರಿಶ್ಚಿಯನ್ ಧರ್ಮಗಳು ಜನರನ್ನು ಪ್ರೀತಿಸಬೇಕೆಂದು ಬೋಧಿಸುತ್ತವೆ. ಇದಾದಾಗ ಮಾತ್ರ ಮಾನವ ಸಮಾಜ ನಿರ್ಮಾಣ ಸಾಧ್ಯ.‌ ಸೈದ್ಧಾಂತಿಕವಾಗಿ ನಮ್ಮ ವಿರೋಧಿಗಳಾದರೂ ಜನರನ್ನು ಪ್ರೀತಿಸಬೇಕು. ಕುಲದ ನೆಲೆಯನ್ನು ಬಲ್ಲಿರಾ ಎಂದ ಕನಕದಾಸರ ಹಾಗೂ ಇವ ನಮ್ಮವ ಎಂಬ ಬಸವಣ್ಣನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉನ್ನತ ವಿದ್ಯೆ ಕಲಿತವರೇ ಜಾತಿ ವ್ಯವಸ್ಥೆಯನ್ನು ಪೋಷಿಸುವುದು ನಮ್ಮ ಸಮಾಜದ ದುರಂತ ಎಂದರು.
ನಾನು ಬಸವಣ್ಣನ ಅನುಯಾಯಿ:
ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದೆ. ನಮ್ಮ ಸರ್ಕಾರ ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕೆನ್ನುವ ಉದ್ದೇಶ ಹೊಂದಿದ್ದು, ನಾನೂ ಕೂಡ ಬಸವಣ್ಣನ ಅನುಯಾಯಿ ಎಂದರು.
ಈ ಬಾರಿ ಮಳೆ ಕೊರತೆಯಾಗಲಿದೆ ಎಂಬ ಮುನ್ಸೂಚನೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿಸಲಾಗಿದೆ. ರಾಣೆಬೆನ್ನೂರಿನ ವರ್ತುಲ ರಸ್ತೆ ಹಾಗೂ ಸಮುದಾಯ ಭವನಕ್ಕೆ ಅನುದಾನ ನೀಡುವ ಭರವಸೆ ನೀಡಿದರು.
ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ್, ಪ್ರಕಾಶ್ ಕೋಳಿವಾಡ, ಯಾಸಿರ್ ಖಾನ್ ಪಠಾಣ್, ಯು. ಬಿ.ಬಣಕಾರ್, ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮೊದಲಾದವರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

VISTARANEWS.COM


on

ಬೆಂಗಳೂರು: ಕಲಬುರಗಿ-ಯಾದಗಿರಿ ರಸ್ತೆಯ 90 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಒದ್ದಾಡುತ್ತಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವಿಟರ್ ನಲ್ಲಿ ನಿರತರಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರೇ, ಕಲಬುರಗಿ-ಯಾದಗಿರಿ ರಸ್ತೆಯ 90 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲದೆ ಜನಸಾಮಾನ್ಯರು ರಣ ಬಿಸಿಲಲ್ಲಿ ಸುಡುತ್ತಿದ್ದಾರೆ ಎನ್ನುವ ಸುದ್ದಿ ನಿಜಕ್ಕೂ ಆಘಾತ ಮೂಡಿಸಿದೆ. ಇದೇನು ಸಾಮಾನ್ಯ ಕೊರತೆಯೋ ಅಥವಾ ವೈಫಲ್ಯವೋ ಅಲ್ಲ. ದಶಕಗಳಿಂದ ಕಲ್ಯಾಣ ಕರ್ನಾಟಕವನ್ನ ಸ್ವಂತ “ಜಹಗೀರು” ಅಂದುಕೊಂಡಿರುವ ನಿಮ್ಮ ಕುಟುಂಬ ಈ ಭಾಗದ ಜನರಿಗೆ ಮಾಡಿದ ಘೋರ ಅನ್ಯಾಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಡುವ 45 ಡಿಗ್ರಿ ಬಿಸಿಲಿನಲ್ಲಿ ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ನೆರಳಿಲ್ಲದೆ ರಸ್ತೆ ಬದಿಯಲ್ಲಿ ನರಳುತ್ತಿದ್ದಾರೆ. ಕುಡಿಯಲು ಹನಿ ನೀರಿಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ. ಇದೇನಾ ನಿಮ್ಮ ಕಾರ್ಯವೈಖರಿ? ದಿನಾ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿ ಉಪದೇಶ ಮಾಡುವ ತಮಗೆ ನಿಮ್ಮ ಸ್ವಂತ ಜಿಲ್ಲೆಯ ಜನರ ಈ ನರಕಯಾತನೆ ಕಣ್ಣಿಗೆ ಕಾಣಿಸುತ್ತಿಲ್ಲವೇ ಸ್ವಾಮಿ?
“ಮತ ನಿಮ್ಮದು, ಮಜ ನಮ್ಮದು” ಎನ್ನುವ ಎನ್ನುವಂತಾಗಿದೆ ನಿಮ್ಮ ಧೋರಣೆ. ಈ ಭಾಗದ ಜನ ನಿಮ್ಮನ್ನ ನಂಬಿ ವೋಟ್ ಹಾಕಿದ್ದು ಅವರು ರಸ್ತೆ ಬದಿಯಲ್ಲಿ ನಿಲ್ಲಲಿ ಅಂತಲ್ಲ, ನೀವು ಬೆಂಗಳೂರು-ದೆಹಲಿಯಲ್ಲಿ ರಾಜಾತಿಥ್ಯ ಅನುಭವಿಸಲಿ ಅಂತಲೂ ಅಲ್ಲ.
ದಶಕಗಳಿಂದ ನೀವು ಮಾಡಿದ್ದು “ಜನ ಕಲ್ಯಾಣ”ವಲ್ಲ, ಬರೀ “ಖರ್ಗೆ ಕುಟುಂಬ ಕಲ್ಯಾಣ”. ಜನರ ಹೆಸರಲ್ಲಿ ಅಧಿಕಾರ ಅನುಭವಿಸಿ, ಅದೇ ಜನರಿಗೆ ಒಂದು ಬಸ್ ತಂಗುದಾಣ ಕೊಡಲಾಗದ ನೀವು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತೀರಿ?
ನಿಮ್ಮ ಪ್ರಚಾರದ ಗೀಳು, ಗಿಮಿಕ್‌ಗಳು ಇನ್ನು ನಡೆಯಲ್ಲ. ತಕ್ಷಣ ಈ ಮಾರ್ಗದಲ್ಲಿ ಬಸ್ ನಿಲ್ದಾಣ ಮತ್ತು ಮೂಲಸೌಕರ್ಯ ಕಲ್ಪಿಸದಿದ್ದರೆ, ಕಲ್ಯಾಣ ಕರ್ನಾಟಕದ ಜನರೇ ನಿಮ್ಮನ್ನ ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಲೇವಡಿ ಮಾಡಿದ್ದಾರೆ.

Continue Reading

ಕರ್ನಾಟಕ

ಮಹಿಳಾ ಮೀಸಲಾತಿಗೆ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

VISTARANEWS.COM


on

ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
2023ರಲ್ಲಿಯೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಸಾಂವಿಧಾನಿಕ ತಿದ್ದುಪಡಿ ತಂದಿದ್ದರಿಂದ ಅದು ವಿಫಲವಾಯಿತು. ಕ್ಷೇತ್ರ ಮರುವಿಂಗಡನೆ ಮಾಡದೆಯೇ ಮಹಿಳಾ ಮೀಸಲಾತಿ ಒಂದೇ ಮಂಡನೆಯಾಗಿದ್ದರೆ ಅಂಗೀಕಾರವಾಗುತ್ತಿತು. ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡನೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಿದೆ ಎಂದರು. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದ್ದಾರೆ ಎಂದು ದೂರಿದರು.

Continue Reading

ಗದಗ

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ’ ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು

HK Patil: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ರಾಜಕಾರಣಿ ಹಾಗೂ ಸಚಿವ ಎಚ್.ಕೆ.ಪಾಟೀಲ್‌ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ ಡಿ.ಕೆ ಎಂದು ಹೇಳಿ ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

HK patil

ಗದಗ: ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಥಾನದ‌‌ ಮೇಲೆ ಎಲ್ಲರ ಕಣ್ಣಿದೆ. ಕಾರಣ ಮುಡಾ ಹಗರಣ‌‌ ಎದುರಿಸುತ್ತಿರುವ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಮುಡಾ ಹಗರಣದಿಂದ‌ ಖಾಲಿಯಾಗುತ್ತೆ ಅನ್ನೋ ಬಿಸಿ‌ಬಿಸಿ ಚರ್ಚೆ ಪ್ರಚಲಿತದಲ್ಲಿದೆ. ಇದಕ್ಕೆ ಪುಷ್ಟಿಕರೀಸುವಂತೆ ಗದಗದಲ್ಲಿ ಸಚಿವ ಎಚ್‌ಕೆ ಪಾಟೀಲ್‌ (HK Patil) ಮುಖ್ಯಮಂತ್ರಿ ಹೆಸರನ್ನು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿ.ಕೆ ಶಿವಕುಮಾರ್‌ ಹೆಸರು ಪ್ರಸ್ತಾಪಿಸಿ, ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡಿದ್ದಾರೆ.

ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ‌ ಶುಕ್ರವಾರ ಅದ್ಧೂರಿ 66ನೇ ಕನ್ನಡ ರಾಜ್ಯೋತ್ಸವ ಜರುಗಿತು. ‌ಈ ವೇಳೆ ಜಿಲ್ಲಾ ಉಸ್ತುವಾರಿ‌ ಸಚಿವ ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವೇದಿಕೆ ಮೇಲೆ ಭಾಷಣದ‌ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಬದಲಾಗಿ, ಡಿಕೆ ಎಂದು ಪ್ರಸ್ತಾಪಿಸಿ, ತಕ್ಷಣ ಎಚ್ಚೆತ್ತು,‌ ಸಿದ್ಧರಾಮಯ್ಯ‌ ಎಂದು ಮುಂದುವರೆದು,‌ ಉಪಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ್‌ ಅವರು ಎಂದೇಳಿ, ತಮ್ಮ ಭಾಷಣ ಮುಂದುವರೆಸಿದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ‌ ನಾಮಕರಣದ ಐವತ್ತರ‌ ಸಂಭ್ರಮಾಚರಣೆಯನ್ನು ಕಳೆದ ವರ್ಷ 2023ರ ನವಂಬರ್, 1,2,3 ರಂದು ಮೂರು‌ ದಿನಗಳ‌ ಕಾಲ ಗದಗ ನಗರದ ಸೊಸೈಟಿಯ ಆವರಣದಲ್ಲಿ ನಡೆದಿತ್ತು.‌ ಗತವೈಭವ ಮರುಕಳಿಸುವ ಹಾಗೆ, ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಎಲ್ಲ ಜನತೆ‌ ಸಾಕ್ಷಿಯಾಗಿದ್ದೀರಿ. ನಾಡಿನ ಮುಖ್ಯಮಂತ್ರಿಗಳಾದ ಡಿ.ಕೆ (ತಕ್ಷಣ ಎಚ್ಚೆತ್ತು ಭಾಷಣದ ಪ್ರತಿ ತೀಕ್ಷ್ಣವಾಗಿ ವೀಕ್ಷಿಸಿ) ಮಾನ್ಯ‌ ಸಿದ್ಧರಾಮಯ್ಯನವರು,‌ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಸೇರಿದಂತೆ, ಸಚಿವ ಸಂಪುಟದ ಎಲ್ಲ‌ ಸಹೋದ್ಯೋಗಿಗಳು ಈ‌ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಸ್ತಾಪಿಸಿ, ಮುಂದೆ ತಮ್ಮ ಭಾಷಣದ ಸಂದೇಶವನ್ನು ಮುಂದುವರಿಸಿದ್ದಾರೆ.

ಸಿದ್ದರಾಮಯ್ಯನವರ ಸಂಪುಟದಲ್ಲಿ ‌ಅತ್ಯಂತ‌ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿರುವ ಎಚ್.ಕೆ.ಪಾಟೀಲ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿಯೂ ಒಬ್ಬರಾಗಿದ್ದಾರೆ.‌ ದೀಪಾವಳಿ‌ ಶುಭ‌ ಸಂದರ್ಭದಲ್ಲಿ ಸಚಿವರ ಬಾಯಲ್ಲಿ, ಡಿಕೆಶಿ ಮುಖ್ಯಮಂತ್ರಿಯಾಗಿದ್ದು ಅಚಾನಕ್ ಆಗಿ ಆದ ಅಚಾತುರ್ಯವೋ,‌ ಅಥವಾ ಸಚಿವರ ಆಂತರ್ಯದ ನುಡಿಯೋ ಎಲ್ಲವೂ ಕಾಕತಾಳಿಯ‌ ಎಂಬಂತಿದೆ.

Continue Reading

ಬೆಂಗಳೂರು

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Fraud Case : ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಮಾಜಿ ಶಾಸಕನಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಟ್ಟ ಹಣ ಕೇಳಿದರೆ ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.

VISTARANEWS.COM


on

Fraud case Union Minister Pralhad Joshis brother duped of ticket for Lok Sabha polls
ಮಾಜಿ ಶಾಸಕ ದೇವಾನಂದ್ ಚೌಹಾಣ್ ಹಾಗೂ ಗೋಪಾಲ್‌ ಜೋಶಿ

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಪ್ರಲ್ಹಾದ ಜೋಶಿ ಸಹೋದರ ಗೋಪಾಲ್‌ ಜೋಶಿ ಎಂಬುವವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 2 ಕೋಟಿ ರೂ. ವಂಚಿಸಿರುವುದಾಗಿ (Fraud Case) ಎಫ್‌ಐಆರ್‌ ದಾಖಲಾಗಿದೆ. ಗೋಪಾಲ್ ಜೋಶಿ ಸೇರಿದಂತೆ ಸಹೋದರಿ ವಿಜಯಲಕ್ಷ್ಮಿ ಜೋಶಿ, ಪುತ್ರ ಅಜಯ್ ಜೋಶಿ ವಿರುದ್ಧವೂ ಕೇಸ್ ದಾಖಲಾಗಿದೆ.

ಮಾಜಿ ಶಾಸಕ ದೇವಾನಂದ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಎಂಬುವರಿಂದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 2018ರಲ್ಲಿ ನಾಗಠಾಣಾ ಕ್ಷೇತ್ರದಿಂದ ಜೆಡಿಎಸ್‌ (JDS)ದೇವಾನಂದ್ ಚೌಹಾಣ್ ಶಾಸಕರಾಗಿದ್ದರು. 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ದೇವಾನಂದ್ ಚೌಹಾಣ್ ಸೋತಿದ್ದರು. ಬಳಿಕ ಪರಿಚಯಸ್ಥ ಶೇಖರ್ ನಾಯಕ್ ಮೂಲಕ ಗೋಪಾಲ್ ಜೋಶಿ ಪರಿಚಯವಾಗಿದ್ದರು. ಮಾರ್ಚ್ ಮೊದಲ ವಾರ ಹುಬ್ಬಳ್ಳಿಯಲ್ಲಿ ಗೋಪಾಲ್ ಜೋಶಿ ಚೌಹಾಣ್ ದಂಪತಿಯನ್ನು ಭೇಟಿ ಮಾಡಿದ್ದರು. ಈ ವೇಳೆ 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ನನ್ನ ತಮ್ಮನಿಗೆ ಕೇಂದ್ರ ಸರ್ಕಾರದಲ್ಲಿ ವರ್ಚಸ್ಸು ಚೆನ್ನಾಗಿದೆ. ಪ್ರಹ್ಲಾದ್ ಜೋಶಿ ಹೇಳಿದಂತೆ ಮೋದಿ, ಅಮಿತ್ ಶಾ ಕೇಳುತ್ತಾರೆ. ಹೀಗಾಗಿ ಬಿಜಾಪುರ ಕ್ಷೇತ್ರದಿಂದ ನಿಮಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು.

ಗೋಪಾಲ್ ಜೋಶಿ ಟಿಕೆಟ್‌ಗೆ ಬರೋಬ್ಬರಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿಯೇ ಡೀಲ್ ನಡೆದಿತ್ತು. ಆದರೆ 5 ಕೋಟಿ ರೂ.‌ಸಾಧ್ಯವಿಲ್ಲ ಎಂದು ಚೌಹಣ್ ದಂಪತಿ ಹೊರಟು ಹೋಗಿದ್ದರು ಎನ್ನಲಾಗಿದೆ. ಬಳಿಕ ಗೋಪಾಲ್ ಜೋಶಿ ಮತ್ತು ಶೇಖರ್ ಇಬ್ಬರು ಚೌಹಣ್ ದಂಪತಿ ಮನವೊಲಿಸಿದ್ದರು. ಸದ್ಯಕ್ಕೆ 25 ಲಕ್ಷ ರೂ. ಕೊಟ್ಟು ಉಳಿದ ಹಣಕ್ಕೆ ಚೆಕ್ ಕೊಡಿ ಎಂದಿದ್ದರಂತೆ. ಹೀಗಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಗೋಪಾಲ್ ಜೋಶಿ ಸಹೋದರಿ ವಿಜಯಲಕ್ಷ್ಮಿ ಮನೆಗೆ 25 ಲಕ್ಷ ರೂ. ಹಣವನ್ನು ತಂದು ಸುನೀತಾ ಚೌಹಣ್ ನೀಡಿದ್ದರು. ಆದರೆ ದೇವನಾಂದ್‌ಗೆ ಗೋಪಾಲ್ ಜೋಶಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲಿಲ್ಲ.

ಸುನೀತಾ ಚೌಹಾಣ್ ತಮ್ಮ 25 ಲಕ್ಷ ರೂ.‌ ಹಣ ನೀಡುವಂತೆ ಕೇಳಿದ್ದಾರೆ. ಹಣ ಕೇಳಿದರೆ 200 ಕೋಟಿ ರೂ. ಪ್ರಾಜೆಕ್ಟ್ ಹಣ ಬರಬೇಕು ಕೊಡುವುದಾಗಿ ಸಬೂಬು ನೀಡಿದ್ದಾರೆ. ಅಷ್ಟಲ್ಲದೇ ಗೋಪಾಲ್ ಜೋಶಿ, ಸುನೀತಾ ಬಳಿ ಮತ್ತೆ 1.75 ಕೋಟಿ ರೂ. ಹಣ ಕೇಳಿದ್ದರು. ಮುಂದಿನ ಚುನಾವಣೆಗೆ ಸಹಾಯ ಮಾಡುವುದಾಗಿ ಹಣ ಕೇಳಿದ್ದರು. ಈ ಮಾತನ್ನು ನಂಬಿ ಮತ್ತೆ 1.75 ಕೋಟಿ ಹಣವನ್ನು ವಿಜಯಲಕ್ಷ್ಮಿಗೆ ಸುನೀತಾ ಚೌಹಣ್ ನೀಡಿದ್ದರು. ಆದರೆ ಹಣ ಕೇಳಿದಾಗ ಸಬೂಬು ಗೋಪಾಲ್, ವಿಜಯಲಕ್ಷ್ಮಿ ಹೇಳುತ್ತಿದ್ದರು.

ಈ ವೇಳೆ ಗೋಪಾಲ್ ಜೋಶಿ ಪುತ್ರ ಅಜಯ್ ಜೋಶಿ ಹಣ ನಾನು ವಾಪಸ್ ಕೊಡುವುದಾಗಿ ಹೇಳಿದ್ದರು. ಆದರೆ ಯಾರು ಕೂಡ ಸುನೀತಾಗೆ ಹಣ ವಾಪಸ್ ನೀಡಿರಲಿಲ್ಲ. ಕಳೆದ ಆ. 1ರಂದು ವಿಜಯಲಕ್ಷ್ಮಿ ಮನೆ ಬಳಿ ಬಂದಿದ್ದ ಸುನೀತಾ, ಹಣ ಕೇಳಿದಾಗ, ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪೊಲೀಸರ ಮೊರೆ ಹೋಗಿರುವ ಸುನೀತಾ ಚೌಹಣ್ ಬಸವೇಶ್ವರ ನಗರ ಠಾಣೆಯಲ್ಲಿ ವಂಚನೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Continue Reading
Advertisement
ರಾಜಕೀಯ6 ನಿಮಿಷಗಳು ago

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

Latest43 ನಿಮಿಷಗಳು ago

ಪಿಎನ್‌ಎಸ್‌ ವಿಸ್ತಾರ ಮುಂಚೂಣಿ ಸುದ್ದಿವಾಹಿನಿಯಾಗಲಿ: ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ವಿಶ್ವಾಸ

ಫ್ಯಾಷನ್50 ನಿಮಿಷಗಳು ago

ದೇಶದ ಗಮನ ಸೆಳೆದ ಕಾರವಾರದ ಪ್ರತಿಭೆ: ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟದ ಗರಿ.

Latest1 ಗಂಟೆ ago

ಹುಬ್ಬಳ್ಳಿ ರನ್-ವೇ ಬದಲಿಗೆ ಬೆಂಗಳೂರಲ್ಲಿ ಲ್ಯಾಂಡ್ ಆದ ಫ್ಲೈಟ್: ಆಗಸದಲ್ಲಿ ವಿಮಾನ ಸುತ್ತಾಡಿದ್ದೇಕೆ?

ಕರ್ನಾಟಕ1 ಗಂಟೆ ago

SSLC ಫಲಿತಾಂಶ ಪ್ರಕಟ ಯಾವಾಗ? ತಡ ಆಗುತ್ತಿರುವುದು ಏಕೆ?; ಇಲ್ಲಿದೆ ಮಾಹಿತಿ

Latest2 ಗಂಟೆಗಳು ago

ಕಾಂಗ್ರೆಸ್‌ ಶಾಸಕ ಹ್ಯಾರಿಸ್‌, ಪುತ್ರ ನಲಪಾಡ್‌ಗೆ ಇಡಿ ಶಾಕ್!

Latest2 ಗಂಟೆಗಳು ago

ತ್ಯಾಜ್ಯದಿಂದ ಸಂಪತ್ತು ಸೃಷ್ಟಿ: ದೇಶದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಜಲಮಂಡಳಿ ಸಜ್ಜು

ರಾಜಕೀಯ2 ಗಂಟೆಗಳು ago

ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸಿಎಂ ಸಿದ್ದರಾಮಯ್ಯ ಕರೆ

Latest2 ಗಂಟೆಗಳು ago

ಅಕ್ಷಯ ತೃತೀಯದ ದಿನ ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌

ಕರ್ನಾಟಕ22 ಗಂಟೆಗಳು ago

ಮಹಿಳಾ ಮೀಸಲಾತಿಗೆ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌