Actor Yash: ಎಲ್ಲ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು ಎಂದ ಯಶ್‌! - Vistara News

South Cinema

Actor Yash: ಎಲ್ಲ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು ಎಂದ ಯಶ್‌!

ಯಶ್‌ (Actor Yash) ಯಾವುದೇ ಹೊಸ ಸಿನಿಮಾ ಬಗ್ಗೆ ಘೋಷಣೆ ಮಾಡಿಲ್ಲ. ನಟ ಇದೀಗ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ಹೊಸ ವಿಡಿಯೊದಲ್ಲಿ ಡೈಲಾಗ್‌ ಮೂಲಕ ಮತ್ತೆ ಮಿಂಚಿದ್ದಾರೆ.

VISTARANEWS.COM


on

Actor Yash In Add
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯುಗಾದಿಗೆ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಅವರು ಹೊಸ ಸಿನಿಮಾ ಅನೌನ್ಸ್‌ ಮಾಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದರೆ ಈ ಬಾರಿಯೂ ಯಶ್‌ ಯಾವುದೇ ಹೊಸ ಸಿನಿಮಾ ಬಗ್ಗೆ ಘೋಷಣೆ ಮಾಡಿಲ್ಲ. ನಟ ಇದೀಗ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ಹೊಸ ವಿಡಿಯೊದಲ್ಲಿ ನಟ ಡೈಲಾಗ್‌ ಮೂಲಕ ಮತ್ತೆ ಮಿಂಚಿದ್ದಾರೆ.

ಯಶ್ ಕೊನೆಯದಾಗಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 1250 ಕೋಟಿ ರೂ. ಬಾಚಿಕೊಂಡಿರುವ ಸಿನಿಮಾ 2022ರಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೀಗ ಯಶ್‌ ಪಾನೀಯ ಸಂಸ್ಥೆ ಪೆಪ್ಸಿಗೆ ರಾಯಭಾರಿ ಆಗಿದ್ದಾರೆ. ಇದರ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಬಾಲಿವುಡ್​ನಿಂದ ರಣವೀರ್ ಸಿಂಗ್ ಅವರನ್ನು ಈ ಸಂಸ್ಥೆ ಆಯ್ಕೆ ಮಾಡಿಕೊಂಡರೆ ಕನ್ನಡದಿಂದ ಯಶ್ ಇದ್ದಾರೆ. ಈಗ ಪೆಪ್ಸಿ ಜಾಹೀರಾತಿಗೆ ‘ಕೆಜಿಎಫ್ 2’ ಚಿತ್ರದಲ್ಲಿ ಬರೋ ರೀತಿಯಲ್ಲೇ ಯಶ್ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ.

‘ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್​ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತುಗಳಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದು ಯಶ್ ಹೇಳಿದ್ದಾರೆ. ಈ ಜಾಹೀರಾತಿನ ಮೂಲಕ ಯಶ್‌ ಸಖತ್‌ ಹವಾ ಕ್ರಿಯೇಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Yash : ಮುಂಬೈನಲ್ಲಿ ಕಾಣಿಸಿಕೊಂಡ ರಾಕಿ ಭಾಯ್‌; ಬಾಲಿವುಡ್‌ಗೆ ಹೆಜ್ಜೆ ಇಟ್ಟರಾ ಯಶ್‌?

ಯಶ್‌ ಜಾಹಿರಾತು ಪೋಸ್ಟ್‌

ಸಲಾರ್‌ನಲ್ಲೂ ರಾಕಿ ಭಾಯ್‌?

ಕೆಜಿಎಫ್‌ ಸಿನಿಮಾದಂತೆಯೇ ಇರಲಿರುವ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್‌ ಜತೆ ಯಶ್‌ (Yash) ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್‌ ನಾಗ್‌, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್‌ ಅವರು ಮತ ಚಲಾಯಿಸಿದರು. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ ಎನದರು.

VISTARANEWS.COM


on

Lok Sabha Election 2024 Anant Nag outrage against non-voters
Koo

ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ (Lok Sabha Election 2024) ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿದೆ. ಮತದಾನ ಮುಕ್ತಾಯಕ್ಕೆ ಇನ್ನು ಎರಡು ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್‌ ನಾಗ್‌, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್‌ ಅವರು ಮತ ಚಲಾಯಿಸಿದರು.

ಮತಹಾಕದವರ ವಿರುದ್ಧ ಹಿರಿಯ ನಟ ಅನಂತ್ ನಾಗ್ ಅವರು ಆಕ್ರೋಶ ಹೊರ ಹಾಕಿದರು. ಅನಂತ್‌ ನಾಗ್‌ ಮಾತನಾಡಿ ʻಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ. ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದಾರೆ. ಇವರು ಮನೆಯಿಂದ ಹೊರಬಂದು ಒಂದು ಓಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಇನ್ನೂ ಎಂಥಹ ಜಾಗೃತಿ ಬೇಕು?. ಇಲ್ಲಿ ಯುವಕರು, ಹಿರಿಯರು ಎನ್ನುವ ಪ್ರಶ್ನೆ ಇಲ್ಲ. ಎಲ್ಲರನ್ನೂ ಒಂದೇ ತರಹ ನೋಡಿ. 75 ವರ್ಷಗಲ್ಲಿ ಆಗದ ಕೆಲಸ ಮುಂದೆ ಬರುವ ಸರ್ಕಾರ ಮಾಡಬೇಕುʼʼಎಂದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿದರೆ ಉಳಿದ ಹನ್ನೊಂದು ಕ್ಷೇತ್ರಗಳಲ್ಲಿ ಶರವೇಗದ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೂ ಮತಗಟ್ಟೆ ಕಡೆ ಉತ್ಸಾಹದಿಂದ ಮತದಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್‌ಗಳಲ್ಲಿ ಇರೋ ಜನರಿಂದ ಈ ಬಾರಿ ದಾಖಲೆ ಮತದಾನವಾಗಿದೆ. ಡಾಲರ್ಸ್ ಕಾಲೋನಿ, ಸದಾಶಿವನಗರ ಹಾಗೂ ಆರ್‌ಆರ್ ನಗರ, ಆನೇಕಲ್‌ ಬೂತ್ನಲ್ಲಿ 3 ಗಂಟೆವರೆಗೂ ಶೇಕಡಾ ಶೇ.65 ಮತದಾನ ದಾಖಲಾಗಿದೆ.

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 3 ಗಂಟೆ ವೇಳಗೆ ಶೇ.50.93ರಷ್ಟು ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.58.76ರಷ್ಟು ಮತದಾನ ದಾಖಲಾಗಿದ್ದು, ಇದೇ ಜಿಲ್ಲೆಯಲ್ಲಿ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.40.10ರಷ್ಟು ಮತದಾನ ನಡೆದಿದ್ದು, ಅತಿ ಕಡಿಮೆ ಮತದಾನ ದಾಖಲಾದ ಜಿಲ್ಲೆ ಎನಿಸಿದೆ. ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರಿನಲ್ಲೂ ಹೆಚ್ಚಿನ ಜನ ಮತದಾನ ಮಾಡಿದ್ದಾರೆ.

Continue Reading

Lok Sabha Election 2024

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

Lok Sabha Election 2024: ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂದರು ಸುದೀಪ್‌.

VISTARANEWS.COM


on

Lok Sabha Election 2024 sandalwood celebrities reaction
Koo

ಬೆಂಗಳೂರು:  ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. 

ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ನಟ ಮಾಧ್ಯಮದ ಜತೆ ಮಾತನಾಡಿ ʻʻತಲೆ ಇರುವವರು, ಬುದ್ಧಿ ಇರುವವರು, ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಯಾರು ವೋಟ್‌ ಹಾಕಲು ಬರುತ್ತ ಇಲ್ಲವೋ ಅವರ ಬಗ್ಗೆ ತುಂಬ ತೆಲೆ ಕೆಡಿಸಿಕೊಳ್ಳುವುದನ್ನು ಬಿಡೋಣʼʼಎಂದರು.

ಇದನ್ನೂ ಓದಿ: Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

ನಟ ಉಪೇಂದ್ರ ಮಾತನಾಡಿ ʻʻವೋಟ್‌ ಮಾಡಲು ತುಂಬ ಜನ ಬರುತ್ತ ಇದ್ದಾರೆ. ಎಲ್ಲರಿಗೂ ಮಹತ್ವ ಗೊತ್ತಿದೆ. ಖಂಡತ ಎಲ್ಲರೂ ಬರ್ತಾರೆ. ಯುವಕರು ಬಂದು ವೋಟ್‌ ಮಾಡಿ. ಪ್ರಜೆಗಳು ವಿಚಾರ ಮಾಡಿ ಮತ ಹಾಕಿʼʼಎಂದರು.

ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ಈ ವೇಳೆ ವಿಸ್ತಾರ ಜತೆಗೆ ಮಾತನಾಡಿ ʻʻಮತದಾನ ಪರ್ಸಂಟೇಜ್‌ ಜಾಸ್ತಿ ಆಗಬೇಕು. ನಾವು ಮತ ಚಲಾಯಿಸಬೇಕು. ಯುವಕರಿಗೆ ಹೇಳೋದು ಏನಂದರೆ ಯೋಚನೆ ಮಾಡಿ ಮತ ಹಾಕಿ. ನೋಡೋದು, ಕೇಳೋದು ಯಾವತ್ತೂ ಸತ್ಯ ಇರುವುದಿಲ್ಲ. ನಮ್ಮ ಭವಿಷ್ಯಕ್ಕೆ ಏನು ಬೇಕು ಎಂದು ಅರಿತು ವೋಟ್‌ ಮಾಡಬೇಕು. ನಮ್ಮ ಮತ ಖಂಡಿತ ಒಳ್ಳೆಯ ನಾಯಕರಿಗೆ ಆಗರುತ್ತೆʼʼಎಂದರು.

ಮತದಾನದ ಬಳಿಕ ನಟಿ ತಾರಾ ಮಾತನಾಡಿ ʻಇವತ್ತು ರಾಷ್ಟ್ರ ಕಟ್ಟುವ ಸಮಯ. ಇಲ್ಲಿ ನಮ್ಮ ನೆಚ್ಚಿನ ನಾಯಕನ್ನು ಆರಿಸುವ ಸಮಯ. ವೋಟ್‌ ಮಾಡುವ ಸಂಭ್ರಮ ನೋಡಿ ಖುಷಿ ಆಗುತ್ತದೆ. ತುಂಬ ಯುವಕರು ವೋಟ್‌ ಮಾಡುತ್ತಿದ್ದಾರೆ. ದೇಶದ ಪ್ರಜೆಯಾಗಿ ವೋಟ್‌ ಮಾಡುವುದು ತುಂಬ ಮುಖ್ಯ. ಎಲ್ಲ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮಗಿಂತ ಹೆಚ್ಚಾಗಿ ನೀವು ಮನೆ ಮನೆಗೆ ತಲುಪಿ ಮತದಾನದ ಅರಿವು ಮೂಡಿಸಿದ್ದೀರಿʼʼ ಎಂದರು.

ನಟ ಯಶ್ ಮಾತನಾಡಿ ʻʻಮತ ಹಾಕೋದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಹಕ್ಕು. ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು. ನಿಮ್ಮ ನಿರ್ಧಾರಗಳಿಂದ ಕಲಿಯುವುದಕ್ಕೆ ಅವಕಾಶ ಸಿಗಲಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಮುಖ್ಯ. ಸಮಯ ಕಳೆದಂತೆ ಮತದಾನ ಹೆಚ್ಚಾಗಬಹುದು. ಅಭಿವೃದ್ಧಿ ಅನ್ನೋದು ಮುಖ್ಯ. ದೇಶಕ್ಕೆ ಈಗ ಒಳ್ಳೆಯ ಅವಕಾಶ ಇದೆ. ಒಳ್ಳೆಯ ಸಮಯʼʼಎಂದು ಹೇಳಿದರು.

ನಟ ಸೃಜನ್ ಲೋಕೇಶ್ ಮಾತನಾಡಿ ʻʻಮತ ಹಾಕಿರುವುದು ಖುಷಿ ಕೊಟ್ಟಿದೆ. ಒತ್ತಾಯದಿಂದ ಯಾರು ಮತದಾನ ಮಾಡಬಾರದು. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ನಮ್ಮ ಮೂಲ ಹಕ್ಕುʼʼಎಂದರು.

ಮತದಾನ ಮಾಡಿದ ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ ʻʻಮತದಾನ ನಮ್ಮಲ್ಲೆರ ಹಕ್ಕು. ಯೋಚನೆ ಮಾಡಿ ಮತದಾನ ಮಾಡಿ. ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಮತದಾನ ಮಾಡಿ ಅಂತ ಹೇಳುತ್ತೇನೆ. ಬಂದು ಮತ ಹಾಕಿ ಎಲ್ಲಿಗಾದರೂ ಹೋಗಿ. ಯಾಕೆಂದರೆ ಮತಕ್ಕೆ ತುಂಬಾ ಬೆಲೆ ಇದೆʼʼಎಂದರು.

ನಟಿ ಅಮೂಲ್ಯ ಪತಿ ಜಗದೀಶ್ ಮಾತನಾಡಿ ʻʻವೋಟ್ ಮಾಡಿದ್ದೇವೆ,ಇದು ಎಲ್ಲರ ಹಕ್ಕು. ಈ ಬಾರೀ ತುಂಬಾ ಜನ ವೋಟ್ ಮಾಡ್ತಿದ್ದಾರೆ. ಹೆಚ್ಚು ಜನರು ವೋಟಿಂಗ್‌ಗೆ ಬಂದಿರೋದು ಖುಷಿಯಾಯ್ತು. ಎಲ್ಲರೂ ತಪ್ಪದೇ ಮತದಾನ ಮಾಡಬೇಕುʼʼಎಂದರು.

ಈಗಾಗಲೇ ಡಿಂಪಲ್‌ ಕ್ಷೀನ್‌ ರಚಿತಾ ರಾಮ್‌, ನಿರಂಜನ್‌ ದೇಶಪಾಂಡೆ, ದರ್ಶನ್‌, ವಿಜಯ್‌ ರಾಘವೇಂದ್ರ ಸೇರಿದಂತೆ ಸ್ಟಾರ್ಸ್‌ಗಳು ಮತಚಲಾಯಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

Lok Sabha Election 2024: : ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು.ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಡಾಲಿ ಧನಂಜಯ ಮತದಾನ ಮಾಡಿದರು. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು ಧನಂಜಯ್‌.

VISTARANEWS.COM


on

Lok Sabha Election 2024 Kannada Celeb vote Pictures
Koo

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆಗುತ್ತಿದೆ. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. ದೊಡ್ಡಬಿದರಕಲ್ಲು ರೆಡ್ಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ನಟ ದೊಡ್ಡಣ್ಣ ಹೆಂಡತಿ ಜತೆ ಮತದಾನ ಮಾಡಿದ್ದಾರೆ.

ನಟಿ ಅಮೂಲ್ಯ ಅವರು ಪತಿ ಜತೆ ಮುಂಜಾನೆಯೇ ಮತ ಚಲಾಯಿಸಲು ಆಗಮಿಸಿದ್ದರು.

ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್​ನಲ್ಲಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಮತದಾನ ಮಾಡಿದರು.

ಡಾ. ರಾಜ್ ಕುಮಾರ್ ಕುಟುಂಬದ Smiling ಮತದಾನ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

ನಟ ಕೋಮಲ್‌ ವೋಟ್‌ ಮಾಡಿ ಕ್ಯಾಮೆರಾಗೆ ಪೋಸ್‌ ಕೊಟ್ಟರು.

JP ನಗರದ ಎ.ವಿ.‌ಎಜುಕೇಷನ್ ಸ್ಕೂಲ್‌ನಲ್ಲಿ ಹಿರಿಯ ನಟಿ ತಾರಾ ಮತ್ತು ಅವರ ಪತಿ ಎಚ್ ಸಿ ವೇಣು ಮತದಾನ ಮಾಡಿದರು.

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಕೂಡ ಮತದಾನ ಮಾಡಿದರು.

ನಟ ಶ್ರೀಮುರಳಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕುಟುಂಬದ ಜತೆ ಬಂದು ಅವರು ಮತ ಚಲಾಯಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ದಂಪತಿ ವೋಟ್‌ ಮಾಡಿ, ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಜನತೆಗೆ ಮನವಿ ಮಾಡಿದರು.

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಡಾಲಿ ಧನಂಜಯ ಮತದಾನ ಮಾಡಿದರು. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು ಧನಂಜಯ್‌.

ಪ್ರಕಾಶ್‌ ರಾಜ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌ ದಂಪತಿ , ರವಿಶಂಕರ ದಂಪತಿ ಕೂಡ ಮುಂಜಾನೆಯೇ ಮತ ಚಲಾಯಿಸಿದರು.

ಗಿರಿನಗರದಲ್ಲಿ ಗಾಯಕ ವಾಸುಕಿ ವೈಭವ್‌ ಮತ ಚಲಾಯಿಸಿದರು.

ಚೈತ್ರಾ ಆಚಾರ್‌, ನಮ್ರತಾ ಗೌಡ, ಭಾರತಿ ವಿಷ್ಣುವರ್ಧನ್‌ ಮತದಾನ ಮಾಡಿದರು.

ಜೆಪಿ ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಮಗಳ ಜತೆ ಮತದಾನ ಮಾಡಿದರು ಸುದೀಪ್.

ಆರ್ ಆರ್ ನಗರದ ಮೌಂಟ್ ಕಾರ್ಮಲ್‌ನಲ್ಲಿ ನಟ ದರ್ಶನ್ ಮತದಾನ ಮಾಡಿದರು.

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರು ಉಡುಪಿಯ ಕುಕ್ಕಿಕಟ್ಟೆ ಶಾಲೆಯಲ್ಲಿ ಮತ ಚಲಾಯಿಸಿದರು.

ಪೂಜಾ ಗಾಂಧಿ ಹಾಗೂ ನಟ ಉಪೇಂದ್ರ ಅವರು ವೋಟ್‌ ಮಾಡಿ ಸಂಭ್ರಮಿಸಿದರು.

Continue Reading

ಕಾಲಿವುಡ್

Shruti Haasan: ಎರಡನೇ ಬಾಯ್‌ಫ್ರೆಂಡ್‌ ನಿಂದಲೂ ಕಮಲ್‌ ಹಾಸನ್‌ ಪುತ್ರಿ ಬ್ರೇಕಪ್?

Shruti Haasan: ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು. ನಟಿ ಶ್ರುತಿ ಹಾಸನ್ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದರು.

VISTARANEWS.COM


on

Shruti Haasan and boyfriend santanu hazarika break up
Koo

ಬೆಂಗಳೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ಮಲ್‌ ಹಾಸನ್‌ (Kamal Hassan) ಅವರ ಪುತ್ರಿ ನಟಿ ಶ್ರುತಿ ಹಾಸನ್‌ (Shruti Haasan) ಪ್ರಿಯತಮ ಶಂತನು ಹಜಾರಿಕಾ (santanu hazarika) ಜತೆ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿ ಇರುವುದು ಗೊತ್ತೇ ಇದೆ. ಇದೀಗ ಜೋಡಿ ಬ್ರೇಕಪ್‌ ಮಾಡಿಕೊಂಡಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಪೂರಕ ಎಂಬಂತೆ ನಟಿ ಪ್ರಿಯತಮ ಶಂತನು ಹಜಾರಿಕಾ ಅವರ ಎಲ್ಲ ಫೋಟೊಗಳನ್ನು ಡಿಲಿಟ್‌ ಮಾಡಿದ್ದಾರೆ. ಜತೆಗೆ ಇನ್‌ಸ್ಟಾ ಅನ್‌ಫಾಲೋ ಮಾಡಿದ್ದಾರೆ.

ಮೂಲಗಳ ಪ್ರಕಾರ ನಟಿ ಸ್ವಲ್ಪ ಸಮಯದವರೆಗೆ ಇನ್ಸ್ಟಾಗ್ರಾಮ್ ಖಾತೆಯನ್ನು ಡಿ ಆಕ್ಟಿವೇಟ್‌ ಮಾಡಿದ್ದರು. ಬಳಿಕ ಇನ್‌ಸ್ಟಾದಲ್ಲಿ ಶಂತನು ಹಜಾರಿಕಾ ಜತೆ ಇದ್ದ ಫೋಟೊಗಳನ್ನು ಡಿಲಿಟ್‌ ಮಾಡಿದ್ದಾರೆ. ಜತೆಗೆ ಅನ್‌ಫಾಲೋ ಮಾಡಿದ್ದಾರೆ. ಈಗಾಗಲೇ ಈ ಜೋಡಿ ಒಟ್ಟಿಗೆ ಇಲ್ಲ ಎಂದು ವರದಿಯಾಗಿದೆ. ಈ ಮುಂಚೆ ಒಂದೇ ಮನೆಯಲ್ಲಿ ಇಬ್ಬರೂ ಇದ್ದಿದ್ದರು. ನಟಿ ತನ್ನ ವೈಯಕ್ತಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಅಭಿಮಾನಿಗಳೊಂದಿಗೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬ್ರೇಕಪ್‌ ಬಗ್ಗೆ ನಟಿ ಶೀರ್ಘದಲ್ಲೇ ಅಧಿಕೃತವಾಗಿ ಹೇಳಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇದನ್ನೂ ಓದಿ: Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ

ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆಗಾಗ ಶ್ರುತಿ ಹಾಸನ್‌ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಿದ್ದರು. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್‌ ಅಂತೆ.

ನನ್ನ ಬಾಯ್‌ಫ್ರೆಂಡ್‌ನ ಹೂಸು ಕೂಡ ನಂಗಿಷ್ಟ ಎಂದಿದ್ದ ಕಮಲ್‌ ಹಾಸನ್‌ ಪುತ್ರಿ

ನಟಿ ಶ್ರುತಿ ಹಾಸನ್ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದರು.

ಶ್ರುತಿ ಹಾಸನ್ ಫುಲ್ ಬ್ಯುಸಿ ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ನಟಿ ಪ್ರಭಾಸ್ ಅವರ ಸಲಾರ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಲಾರ್‌ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡಿದ್ದರು. ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಮತ್ತು ವಾಲ್ತೇರ್‌ ವೀರಯ್ಯ ಜನವರಿ ತಿಂಗಳಲ್ಲಿ ಒಟ್ಟಿಗೆ ತೆರೆಗೆ ಬಂತು.

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. ಕಮಲ್‌ ಹಾಸನ್‌ ಪುತ್ರಿ ಶ್ರುತಿ ಹಾಸನ್‌ ಅವರಿಗೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಲೋಕೇಶ್‌ ಕನಕರಾಜ್‌. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ (RKFI) ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading
Advertisement
BJP National President JP Nadda Election campaign in Surapura
ಕರ್ನಾಟಕ7 mins ago

Lok Sabha Election 2024: ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ

deepfake
ತಂತ್ರಜ್ಞಾನ15 mins ago

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

Lok Sabha Election 2024 Bjp workers clash in Chikmagalur
Lok Sabha Election 202425 mins ago

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

lok sabha election
ಪ್ರಮುಖ ಸುದ್ದಿ51 mins ago

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

Karnataka weather Forecast
ಮಳೆ1 hour ago

Karnataka Weather : ಹಾಟ್‌ ಸಿಟಿಯಾದ ಬೆಂಗಳೂರು; ಇನ್ನು 3 ದಿನಗಳು ಈ ಜಿಲ್ಲೆಗಳು ಕಾದ ಕೆಂಡ

Lok Sabha Election 2024
ಕರ್ನಾಟಕ1 hour ago

Lok Sabha Election 2024: ಸಂಜೆ 5 ಗಂಟೆವರೆಗೆ ಶೇ.63.90 ಮತದಾನ; ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ!

Flower Crown Trend
ಫ್ಯಾಷನ್1 hour ago

Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

Rinku Singh
ಕ್ರೀಡೆ2 hours ago

Rinku Singh : ಹಠ ಹಿಡಿದು ಕೊಹ್ಲಿಯಿಂದ ಮತ್ತೊಂದು ಬ್ಯಾಟ್ ಪಡೆದುಕೊಂಡ ರಿಂಕು ಸಿಂಗ್​​

Tejasvi Surya
ಕರ್ನಾಟಕ2 hours ago

Tejasvi Surya: ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್‌

Lok Sabha Election 2024 Two die of heart attack in Tumakuru and Kodagu
Lok Sabha Election 20242 hours ago

Lok Sabha Election 2024: ಹೃದಯಾಘಾತಕ್ಕೆ 3 ಬಲಿ; ಮೈಸೂರು, ತುಮಕೂರಿನಲ್ಲಿ ಮತ ಹಾಕಿದ್ದ, ಕೊಡಗಲ್ಲಿ ವೋಟ್‌ ಹಾಕಲು ನಿಂತಿದ್ದವ ಸಾವು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ7 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20248 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20249 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ15 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌