Agent' trailer Out: Akhil Akkineni Mass Look Akhil Akkineni: ‘ಏಜೆಂಟ್’ ಟ್ರೈಲರ್‌ ಔಟ್‌: ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡ ಅಖಿಲ್ ಅಕ್ಕಿನೇನಿ! - Vistara News

South Cinema

Akhil Akkineni: ‘ಏಜೆಂಟ್’ ಟ್ರೈಲರ್‌ ಔಟ್‌: ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡ ಅಖಿಲ್ ಅಕ್ಕಿನೇನಿ!

ಚಿತ್ರದಲ್ಲಿ ಸಾಕ್ಷಿ ವೈದ್ಯ ಅವರು ಅಖಿಲ್ ಅಕ್ಕಿನೇನಿ (Akhil Akkineni) ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

VISTARANEWS.COM


on

Agent' trailer Out Akhil Akkineni Mass Look
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ಅಖಿಲ್ ಅಕ್ಕಿನೇನಿ (Akhil Akkineni) ಹಾಗೂ ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್‌ ಸಿನಿಮಾ ‘ಏಜೆಂಟ್’ ಟ್ರೈಲರ್‌ ಬಿಡುಗಡೆಗೊಂಡಿದೆ. ಈ ಮೊದಲು ಅಖಿಲ್ ಅವರು ಚಾಕೋಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಅವರು ಸಂಪೂರ್ಣ ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ. ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್ 28ರಂದು ಬಿಡುಗಡೆಯಾಗಲಿರುವ ಅಖಿಲ್ ಅಕ್ಕಿನೇನಿ ಮತ್ತು ಸುರೇಂದರ್ ರೆಡ್ಡಿ ಅವರ ಮುಂಬರುವ ಸ್ಪೈ ಆ್ಯಕ್ಷನ್ ಚಿತ್ರ ಏಜೆಂಟ್ ಬಗ್ಗೆ ಇದೀಗ ಭಾರಿ ಕುತೂಹಲ ಮೂಡಿದೆ. ಆ್ಯಕ್ಷನ್ ದೃಶ್ಯಗಳಲ್ಲಿ ಗನ್‌ಫೈರ್, ಕಾರ್ ರೇಸ್, ಬೈಕ್ ಚೇಸ್‌ಗಳು ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿಸುವಂತಿವೆ. ಡಿನೋ ಮೋರಿಯಾ ಮತ್ತು ಮಮ್ಮುಟ್ಟಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ.

ಚಿತ್ರದಲ್ಲಿ ಸಾಕ್ಷಿ ವೈದ್ಯ ಅವರು ಅಖಿಲ್ ಅಕ್ಕಿನೇನಿ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಮ್ಮುಟ್ಟಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್‌ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ.

ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್ ಎಂಟ್ರಿ

ರಾಝ್, ಅಕ್ಸರ್, ಜೂಲಿ ಮುಂತಾದ ಪಾತ್ರಗಳ‌ ಮೂಲಕ ಖ್ಯಾತಿ ಪಡೆದಿರುವ ಬಿಟೌನ್ ಸ್ಟಾರ್ ಡಿನೊ ಮೋರಿಯಾ ಏಜೆಂಟ್ ಸಿನಿಮಾದಲ್ಲಿ ದಿ ಗಾಡ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉದ್ದವಾದ ಕೇಶರಾಶಿ, ಮುಖದ‌ ಮೇಲೆ ಗಾಯದ ಗುರುತು, ಕೈಯಲ್ಲಿ ಗನ್ ಹಿಡಿದು ಡಿಯೋ ಮೋರಿಯಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ ನೀಡಿದ್ದಾರೆ. ರಸೂಲ್ ಎಲ್ಲೂರು ಛಾಯಾಗ್ರಹಣ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನವಿದೆ. ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ : Agent Movie : ಅಖಿಲ್‌ ಅಕ್ಕಿನೇನಿ ಅವರ ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್ ಎಂಟ್ರಿ

ಅಖಿಲ್ ಅಕ್ಕಿನೇನಿ ಸಿನಿಮಾ ‘ಏಜೆಂಟ್’ ಟ್ರೈಲರ್

ಗಟ್ಟಿಯಾದ ಕಥಾ ಹಂದರ, ಗಮನಾರ್ಹವಾದ ಆ್ಯಕ್ಷನ್ ಸೀಕ್ವೆನ್ಸ್‌ಗಳು, ನುರಿತ ಪಾತ್ರವರ್ಗ ಈ ಚಿತ್ರದ ವಿಶೇಷ. ರೋಮಾಂಚನಕಾರಿ ಸಿನಿಮೀಯ ಅನುಭವ ನೀಡುವದರಲ್ಲಿ ಸಂಶಯವೇ ಇಲ್ಲವಂತಿದೆ ʼಏಜೆಂಟ್ʼ ಚಿತ್ರದ ಟ್ರೈಲರ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಾಲಿವುಡ್

Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Parvathi Menon: ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು. ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

VISTARANEWS.COM


on

Parvathi Menon secretly marry prashant murali
Koo

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

ಪಾರ್ವತಿ ಇನ್ನೂ ಮದುವೆಯಾಗಿಲ್ಲ. ಈ ನಡುವೆ ಪಾರ್ವತಿ ಮೆನನ್ ಗುಟ್ಟುಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಕಾರಣ ವೈರಲ್‌ ಆಗಿರುವ ಫೋಟೊ. ಆದರೆ ಸತ್ಯ ಸಂಗತಿ ಏನೆಂದರೆ ವೈರಲ್ ಆದ ಈ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಪಾರ್ವತಿ ಮೆನನ್ ”ಉಲ್ಲೋಜುಕ್ಕು” ಎಂಬ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಈ ಸಿನಿಮಾ ಪ್ರೋಮೊ ಈ ಮದುವೆ ಸೀನ್‌. ರೀಲ್‌ನಲ್ಲಿ ಆಗಷ್ಟೇ ಮದುವೆಯಾದ ಹಿನ್ನೆಲೆ ದೋಣಿಯಲ್ಲಿ ಕುಳಿತು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಹೀಗೆ ತೆಗೆಯಲಾದ ಈ ಫೋಟೋಗಳೇ ಇದೀಗ ವೈರಲ್ ಆಗಿವೆ.

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು.

Continue Reading

ಕಾಲಿವುಡ್

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

Kamal Haasan: ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

VISTARANEWS.COM


on

Kamal Haasan gives a fiery speech at Indian 2 event
Koo

ಚೆನ್ನೈ: ಕಮಲ್‌ ಹಾಸನ್‌ (Kamal Haasan) ಅಭಿನಯದ ʻಇಂಡಿಯನ್ 2ʼ ಸಿನಿಮಾ ಆಡಿಯೊ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಶಂಕರ್, ಕಮಲ್ ಹಾಸನ್, ಅನಿರುದ್ಧ್ ರವಿಚಂದರ್, ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್, ಸಿಲಂಬರಸನ್ ಟಿಆರ್, ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್, ಬಾಬಿ ಸಿಂಹ ಮತ್ತು ಬ್ರಹ್ಮಾನಂದಂ ಹಾಜರಿದ್ದರು. ಕಾರ್ಯಕ್ರಮದಲ್ಲಿ ಅತ್ಯಂತ ಖಡಕ್‌ ಆಗಿ ಭಾಷಣ ಮಾಡಿದರು ಕಮಲ್‌ ಹಾಸನ್‌.

ಕಮಲ್‌ ಭಾಷಣದಲ್ಲಿ ʻʻನಾನು ತಮಿಳಿಗ ಮತ್ತು ಭಾರತೀಯ. ನಾನು ಒಮ್ಮೆ ತಮಿಳಿಗ ಹಾಗೂ ಒಮ್ಮೆ ಭಾರತೀಯ ಎರಡೂ ಆಗಬಲ್ಲೆ. ಒಡೆದು ಆಳುವುದು ಬ್ರಿಟಿಷ್ ಪರಿಕಲ್ಪನೆಯಾಗಿತ್ತು. ಅವರು ಹಾಗೆ ಮಾಡಿದರು. ಏಕೆಂದರೆ ಭಾರತೀಯರು ಒಗ್ಗಟ್ಟಾದಾಗ ಓಡಿಹೋಗಲು ಅವರಿಗೆ ಒಂದು ಮನೆ ಎಂಬುದಿತ್ತು. ಆದರೆ ಇಂದು ಒಡೆದು ಆಳುತ್ತಿರುವವರು ಎಲ್ಲಿಗೆ ಓಡಿಹೋಗುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದರು. ಭಾರತವನ್ನು ಒಡೆದು ಆಳುತ್ತಿರುವವರ ವಿರುದ್ಧ ಭಾರತೀಯರು ಒಂದಲ್ಲ ಒಂದು ದಿನ ದಂಗೆ ಏಳುತ್ತಾರೆ ಎಂದರು.

“ಪ್ರತಿಯೊಂದು ನಗರವೂ ​​ನಿಮ್ಮ ನಗರವೇ, ಎಲ್ಲರೂ ನಿಮ್ಮ ಬಂಧುಗಳೇ. ನಮ್ಮ ಈ ತಮಿಳು ರಾಜ್ಯಕ್ಕೆ ಬಂದವರಿಗೆ ನಾವು ಜೀವ ಕೊಡುವುದರಲ್ಲಿಯೂ ಹೆಸರುವಾಸಿಯಾಗಿದ್ದೇವೆ. ತಮಿಳಿಗನೊಬ್ಬ ದೇಶವನ್ನು ಆಳುವ ದಿನ ಏಕೆ ಬರಬಾರದು? ಇದು ನನ್ನ ದೇಶ, ಮತ್ತು ನಾವು ಏಕತೆಯನ್ನು ಕಾಪಾಡಬೇಕುʼʼಎಂದರು.  ಕಮಲ್ ಹಾಸನ್ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು, ‘ಮಕ್ಕಳ್ ನಿಧಿ ಮಯಂ’ ಹೆಸರಿನ ಪಕ್ಷ ಕಟ್ಟಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ `ಇಂಡಿಯನ್ 2‘ (Indian 2 Audio Launch) ಬಿಡುಗಡೆಗೆ ಮುಂಚಿತವಾಗಿ, ಜೂನ್ 1ರಂದು ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಮೆಗಾ ಆಡಿಯೊ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ.

1996ರಲ್ಲಿ ತೆರೆಕಂಡ ಎಸ್‌. ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನೆಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

Continue Reading

ಸ್ಯಾಂಡಲ್ ವುಡ್

Kannada Upcoming Movies: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಲು ಬರುತ್ತಿವೆ ಕನ್ನಡ ಸಿನಿಮಾಗಳು!

Kannada Upcoming Movies:
ಜೂನ್ 10ಕ್ಕೆ ‘ಯುಐ’ ಸಿನಿಮಾ ಅಪ್‌ಡೇಟ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇನ್ನು 6 ತಿಂಗಳಲ್ಲಿ 10ಕ್ಕೂ ಅಧಿಕ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿವೆ. ಶಿವಣ್ಣ ‘ಭೈರತಿ ರಣಗಲ್’ ಚಿತ್ರದ ಅಗಸ್ಟ್ 15ಕ್ಕೆ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಅಲ್ಲಿಗೆ ಉಳಿದಿರುವುದು ‘ಯುಐ’, ‘ಭೀಮ’, ‘ಮ್ಯಾಕ್ಸ್’ ಸಿನಿಮಾಗಳು ಮಾತ್ರ.

VISTARANEWS.COM


on

Kannada Upcoming Movies KD Martin Bheema Movies
Koo

ಬೆಂಗಳೂರು: ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ ( KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಆದರೆ ಅದೇ ಸಮಯಕ್ಕೆ ದರ್ಶನ್‌ ಅವರ `ಡೆವಿಲ್‌’ ಸಿನಿಮಾ ಕೂಡ ಬಿಡುಗಡೆಯಾಗಲಿದೆ.  ‘ಭೀಮ’ ಹಾಗೂ ‘ಯುಐ’ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಸಿಗುವ ಸುಳಿವು ಸಿಕ್ಕಿದೆ. ಆದಷ್ಟು ಬೇಗ (Kannada Upcoming Movies) ‘ಭೀಮ’ ಸಿನಿಮಾ ಅನೌನ್ಸ್‌ಮೆಂಟ್ ಎಂದು ಹೇಳಲಾಗುತ್ತಿದೆ. ಜೂನ್ 10ಕ್ಕೆ ‘ಯುಐ’ ಸಿನಿಮಾ ಅಪ್‌ಡೇಟ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇನ್ನು 6 ತಿಂಗಳಲ್ಲಿ 10ಕ್ಕೂ ಅಧಿಕ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿವೆ. ಶಿವಣ್ಣ ‘ಭೈರತಿ ರಣಗಲ್’ ಚಿತ್ರದ ಅಗಸ್ಟ್ 15ಕ್ಕೆ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಅಲ್ಲಿಗೆ ಉಳಿದಿರುವುದು ‘ಯುಐ’, ‘ಭೀಮ’, ‘ಮ್ಯಾಕ್ಸ್’ ಸಿನಿಮಾಗಳು ಮಾತ್ರ.

ಬಾಕ್ಸ್‌ ಆಫೀಸ್‌ನಲ್ಲಿ ʻಕೆಡಿʼ-ʻಡೆವಿಲ್‌ʼ ಕಾದಾಟ!

ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ ( KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಆದರೆ ಅದೇ ಸಮಯಕ್ಕೆ ದರ್ಶನ್‌ ಅವರ `ಡೆವಿಲ್‌’ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಮೊದಲೇ ದರ್ಶನ್‌ ಹಾಗೂ ಧ್ರುವ ನಡುವೆ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ಬಾಕ್ಸ್‌ ಆಫೀಸ್‌ ವಾರ್‌ ಜತೆ ಫ್ಯಾನ್ಸ್‌ ವಾರ ಕೂಡ ಆಗಬಹುದು ಎನ್ನಲಾಗುತ್ತಿದೆ.

ಇಷ್ಟೂ ದಿನ ಸಿನಿಮಾಗಳಿಲ್ಲ ಎಂದು ಪ್ರೇಕ್ಷಕರು ಕೊರಗುತ್ತಿದ್ದರು. ಇದರ ಬೆನ್ನಲ್ಲೇ ದೊಡ್ಡ ದೊಡ್ಡ ಸ್ಟಾರ್ಸ್‌ಗಳು ಸಿನಿಮಾ ರಿಲೀಸ್‌ ದಿನಾಂಕ ಘೋಷಣೆ ಮಾಡುತ್ತಿದ್ದಾರೆ. ಮತ್ತೆ ಡಿಸೆಂಬರ್‌ ತಿಂಗಳಲ್ಲಿ ಎರಡು ದುಬಾರಿ ಕನ್ನಡ ಸಿನಿಮಾಗಳ ಕಾದಾಟ ನೋಡುವ ಅವಕಾಶ ಪ್ರೇಕ್ಷಕರಿಗೆ ಇದೆ. ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ʻಕೆಡಿʼ ಹಾಗೂ ʻಮಾರ್ಟಿನ್‌ʼ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಜತೆಗೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು ಡಿಸೆಂಬರ್‌ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ದರ್ಶನ್ ಸಿನಿಮಾ ‘ಡಿವಿಲ್’ ಕೂಡ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Kannada New Movie: ‘ಶೆಫ್​ ಚಿದಂಬರ’ ಸಿನಿಮಾ ಟ್ರೈಲರ್‌​ ಅನಾವರಣ ಮಾಡಿ ಹಾರೈಸಿದ ರಮೇಶ್ ಅರವಿಂದ್!

ಇದೀಗ ‘ಭೀಮ’ ಹಾಗೂ ‘ಯುಐ’ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಸಿಗುವ ಸುಳಿವು ಸಿಕ್ಕಿದೆ. ಆದಷ್ಟು ಬೇಗ ‘ಭೀಮ’ ಸಿನಿಮಾ ಅನೌನ್ಸ್‌ಮೆಂಟ್ ಎಂದು ಹೇಳಲಾಗುತ್ತಿದೆ.ಜುಲೈನಲ್ಲೇ ‘ಯುಐ’ ಚಿತ್ರ ತೆರೆಗಪ್ಪಳಿಸುವ ಸಾಧ್ಯತೆಯಿದೆ. ತಪ್ಪಿದರೆ ಸೆಪ್ಟೆಂಬರ್‌ನಲ್ಲಿ ರಿಲೀಸ್ ಫಿಕ್ಸ್ ಎನ್ನಲಾಗ್ತಿದೆ. ಇನ್ನು ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಭೀಮ’ ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.

ಭೀಮ’ ಸಿನಿಮಾ

ʻಭೀಮ’ ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ “ಭೀಮʼ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಭೀಮನಿಗಿದೆ.
ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರುವ ʼಭೀಮʼ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿದೆ.

ಭೈರತಿ ರಣಗಲ್

ʻಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ (Bhairathi Ranagal) ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವರಾಜ್‌ಕುಮಾರ್‌. ವೇದ ಸಿನಿಮಾ ಬಳಿಕ ‘ಗೀತಾ ಪಿಕ್ಚರ್ಸ್​’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಆಗಿಲ್ಲರಲಿಲ್ಲ. ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ. ಭೈರತಿ ರಣಗಲ್ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು. ರವಿ ಬಸ್ರೂರು ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ‘ಶೆಫ್​ ಚಿದಂಬರ’ ಸಿನಿಮಾ ಟ್ರೈಲರ್‌​ ಅನಾವರಣ ಮಾಡಿ ಹಾರೈಸಿದ ರಮೇಶ್ ಅರವಿಂದ್!

Kannada New Movie: ಡಾ.ವಿಷ್ಣುವರ್ಧನ್ ಹಾಗೂ ತಮ್ಮ ನಡುವಿವ ಒಡನಾಟವನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ರಮೇಶ್ ಅರವಿಂದ್, ಅನಿರುದ್ಧ ನನ್ನ ನಿರ್ದೇಶನದ “ರಾಮ ಶ್ಯಾಮ ಭಾಮ” ಸೇರಿದಂತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ನಟ. ಈ ಚಿತ್ರದ ಟ್ರೈಲರ್‌ ಸಹ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದ ಟ್ರೈಲರ್‌ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಚಿತ್ರತಂಡದ ಶ್ರಮ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದರು.

VISTARANEWS.COM


on

Kannada New Movie chef chidambara Trailer out
Koo

ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ಅನಿರುದ್ಧ್ (Kannada New Movie)​ ಜತ್ಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ “Chef ಚಿದಂಬರ” ಚಿತ್ರದ ಟ್ರೈಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ರಮೇಶ್ ಅರವಿಂದ್ ಟ್ರೈಲರ್‌ ಬಿಡುಗಡೆ ಮಾಡಿದರು. ಟ್ರೈಲರ್‌ಗೆ ಮೆಚ್ಚುಗೆ ದೊರಕುತ್ತಿದ್ದು, ಇದೇ ಜೂನ್ 14ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಐದು ವರ್ಷಗಳ ನಂತರ ಅನಿರುದ್ಧ್​ ಜತ್ಕರ್ ಅಭಿನಯಿಸಿರುವ ಚಿತ್ರ ತೆರೆಗೆ ಬರುತ್ತಿದೆ. ಟ್ರೈಲರ್‌ ಬಿಡುಗಡೆ ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಡಾ.ವಿಷ್ಣುವರ್ಧನ್ ಹಾಗೂ ತಮ್ಮ ನಡುವಿವ ಒಡನಾಟವನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ರಮೇಶ್ ಅರವಿಂದ್, ಅನಿರುದ್ಧ ನನ್ನ ನಿರ್ದೇಶನದ “ರಾಮ ಶ್ಯಾಮ ಭಾಮ” ಸೇರಿದಂತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ನಟ. ಈ ಚಿತ್ರದ ಟ್ರೈಲರ್‌ ಸಹ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದ ಟ್ರೈಲರ್‌ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಚಿತ್ರತಂಡದ ಶ್ರಮ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದರು.

ನಿರ್ಮಾಪಕಿ ರೂಪ ಅವರ ಪತಿ ಸರ್ವೋತಮ್ ಹಾಗೂ ನಾನು ಬಹಳ ವರ್ಷಗಳ ಸ್ನೇಹಿತರು. ಅವರು‌ ಚಿತ್ರ ಮಾಡೋಣ ಎಂದಾಗ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆನಂದರಾಜ್ ಅವರು ಹೇಳಿದ ಈ ಕಥೆ ಇಷ್ಟವಾಯಿತು. ನಂತರ ಡಾ|ವಿಷ್ಣುವರ್ಧನ್ ಸ್ಮಾರಕದ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಯಿತು. ಮುಹೂರ್ತದ ದಿನ ಭಾರತಿ ವಿಷ್ಣುವರ್ಧನ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಕಿಚ್ಚ ಸುದೀಪ್ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದರು. ಈಗ ರಮೇಶ್ ಅರವಿಂದ್ ಟ್ರೈಲರ್‌ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ‌. ಜೂನ್ 14 ಚಿತ್ರ ಬಿಡುಗಡೆಯಾಗುತ್ತಿದೆ‌. ನೋಡಿ ಹಾರೈಸಿ ಎಂದರು ನಟ ಅನಿರುದ್ದ್.

ಇದನ್ನೂ ಓದಿ; Indian 2 Audio Launch: ಅದ್ಧೂರಿಯಾಗಿ ನೆರವೇರಿತು ʼಇಂಡಿಯನ್‌ 2ʼ ಸಿನಿಮಾದ ಆಡಿಯೊ ಲಾಂಚ್‌!

ಈ ಚಿತ್ರದ ಚಿತ್ರೀಕರಣ ಚಿತ್ರತಂಡದ ಸಹಕಾರದಿಂದ ಕೇವಲ 29 ದಿನಗಳಲ್ಲಿ ಮುಕ್ತಾಯವಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದೆ. ಅದರಲ್ಲಿ ಒಂದು ಹಾಡನ್ನು ಅನಿರುದ್ದ್ ಅವರೆ ಹಾಡಿದ್ದಾರೆ. ರೂಪ ಡಿ.ಎನ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರ ಪ್ರೇಕ್ಷಕರಿಗೂ ಪ್ರಿಯವಾಗಲಿದೆ ಎನ್ನುತ್ತಾರೆ ನಿರ್ದೇಶಕ ಆನಂದರಾಜ್.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕಿ ರೂಪ ಡಿ ಎನ್ ಅವರು ನಮ್ಮ ಚಿತ್ರವನ್ನು ಎಲ್ಲರು ನೋಡಿ. ಪ್ರೋತ್ಸಾಹ ನೀಡಿ ಎಂದರು.

ಚಿತ್ರದ ನಾಯಕಿಯರಾದ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್ ಅವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ಶಿವಮಣಿ ಅವರು ನಿರ್ದೇಶಕರೊಟ್ಟಿಗೆ ವಿಭಿನ್ನವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಛಾಯಾಗ್ರಾಹಕ ಉದಯ್ ಲೀಲ, ಸಂಕಲನಕಾರ ವಿಜೇತ್ ಚಂದ್ರ ಹಾಗೂ ಸಂಭಾಷಣೆ ಬರೆದಿರುವ ಗಣೇಶ್ ಪರಶುರಾಮ್ ಸೇರಿದಂತೆ ಮುಂತಾದ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Continue Reading
Advertisement
mlc election raghupathi bhat
ಪ್ರಮುಖ ಸುದ್ದಿ4 mins ago

MLC Election: ಮೇಲ್ಮನೆ ಚುನಾವಣೆ ಮತದಾನ ಆರಂಭ, 6 ಕ್ಷೇತ್ರಗಳಲ್ಲಿ 78 ಸ್ಪರ್ಧಿಗಳ ಹಣಾಹಣಿ

Parvathi Menon secretly marry prashant murali
ಮಾಲಿವುಡ್10 mins ago

Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Lok Sabha Election 2024
ದೇಶ17 mins ago

Lok Sabha Election 2024: ವಿಜಯೋತ್ಸವಕ್ಕೆ ಬಿಜೆಪಿ ಪ್ಲ್ಯಾನ್‌ ಹೇಗಿದೆ ಗೊತ್ತಾ? ಈಗಿನಿಂದಲೇ ಶುರುವಾಗಿದೆ ಭರ್ಜರಿ ತಯಾರಿ

vrl bus road accident
ಕ್ರೈಂ31 mins ago

Road Accident: ವಿಆರ್‌ಎಲ್ ಬಸ್‌ ಪಲ್ಟಿಯಾಗಿ ಇಬ್ಬರ ಸಾವು, ಹಲವರಿಗೆ ಗಾಯ

Raveena Tandon Was Not Drunk False Complaint Filed
ಬಾಲಿವುಡ್36 mins ago

Raveena Tandon: ರವೀನಾ ಟಂಡನ್ ವಿರುದ್ಧ ಸುಳ್ಳು ದೂರು ನೀಡಿದ್ರಾ? ಪೊಲೀಸರು ಹೇಳೋದೇನು?

ICMR Guidelines
ಆರೋಗ್ಯ47 mins ago

ICMR Guidelines: ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಹಾನಿಯೆ? ICMR ಅಭಿಪ್ರಾಯ ಹೀಗಿದೆ

bangalore rain news
ಪ್ರಮುಖ ಸುದ್ದಿ1 hour ago

Bangalore Rain News: ಬೆಂಗಳೂರಿಗೆ ಮುಂಗಾರು ಶಾಕ್‌, ನೂರಾರು ಮರಗಳು ಧರೆಗೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲೇ ಲಾಕ್!‌

Chikkodi Lok Sabha Constituency
ಚಿಕ್ಕೋಡಿ1 hour ago

Chikkodi Lok Sabha Constituency: ಜೊಲ್ಲೆ vs ಜಾರಕಿಹೊಳಿ; ಯಾರಿಗೆ ಗೆಲುವಿನ ಹೋಳಿ?

Toll Fee Hike
ದೇಶ1 hour ago

Toll Fee Hike: ವಾಹನ ಸವಾರರಿಗೆ ಮತ್ತೆ ಸುಂಕದ ಬರೆ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ

road accident tractor
ಪ್ರಮುಖ ಸುದ್ದಿ2 hours ago

Road Accident: ಮದುವೆ ದಿಬ್ಬಣದ ಟ್ರ್ಯಾಕ್ಟರ್‌ ಪಲ್ಟಿಯಾಗಿ 13 ಸಾವು, ರಾಷ್ಟ್ರಪತಿ ಸಂತಾಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌