Anil Kapoor : ಅನಿಲ್‌ ಕಪೂರ್‌ ಸಿನಿ ಪಯಣಕ್ಕೆ 40 ವರ್ಷ: ಸಂತಸದಿಂದ ಪೋಸ್ಟ್‌ ಹಂಚಿಕೊಂಡ ನಟ Vistara News
Connect with us

ಬಾಲಿವುಡ್

Anil Kapoor : ಅನಿಲ್‌ ಕಪೂರ್‌ ಸಿನಿ ಪಯಣಕ್ಕೆ 40 ವರ್ಷ: ಸಂತಸದಿಂದ ಪೋಸ್ಟ್‌ ಹಂಚಿಕೊಂಡ ನಟ

ನಟ ಅನಿಲ್‌ ಕಪೂರ್‌ (Anil Kapoor) ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 40 ವರ್ಷಗಳು ತುಂಬಿವೆ. ಈ ಸಂತಸದಲ್ಲಿ ನಟ ಪೋಸ್ಟ್‌ ಒಂದರ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

VISTARANEWS.COM


on

Anil Kapoor
Koo

ಮುಂಬೈ: ಬಾಲಿವುಡ್‌ ಹಿರಿಯ ನಟ ಅನಿಲ್‌ ಕಪೂರ್‌ (Anil Kapoor) ಇಂದಿಗೂ ಯಂಗ್‌ ಆಂಡ್‌ ಎನರ್ಜಿಟಿಕ್‌ ಕಲಾವಿದ. ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿರುವ ಅನಿಲ್‌ ಅವರು ಬಾಲಿವುಡ್‌ಗೆ ಕಾಲಿಟ್ಟು 40 ವರ್ಷಗಳು ಕಳೆದಿವೆ. ಈ ಸಂತಸವನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ.

ಅನಿಲ್‌ ಕಪೂರ್‌ 1983ರಲ್ಲಿ ಬಿಡುಗಡೆಯಾದ ʼವೋ 7 ದಿನ್‌ʼ ಸಿನಿಮಾ ಮೂಲಕ ಸಿನಿ ಪ್ರಪಂಚಕ್ಕೆ ಕಾಲಿಟ್ಟವರು. ವಿಶೇಷ ಅಂದರೆ ಅನಿಲ್‌ ಕಪೂರ್‌ ಅವರು ಕನ್ನಡದ ʼಪಲ್ಲವಿ ಅನುಪಲ್ಲವಿʼ ಚಿತ್ರದಲ್ಲಿ ಅದೇ ವರ್ಷ ನಟಿಸಿದ್ದರು. ಇದು ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮೊದಲ ಚಿತ್ರ ಎನ್ನುವುದು ಮತ್ತೊಂದು ವಿಶೇಷ. ವೋ 7 ದಿನ್‌ ಸಿನಿಮಾದಲ್ಲಿ ತಾವು ಹಾಡು ಹಾಡುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಅನಿಲ್‌, ತಮ್ಮ ಮೇಲೆ ನಂಬಿಕೆ ಇಟ್ಟು ಸಿನಿಮಾ ಪ್ರಪಂಚಕ್ಕೆ ಕರೆತಂದ ತಂದೆ ಸುರೀಂದರ್‌ ಕಪೂರ್‌ ಮತ್ತು ಅಣ್ಣ ಬೋನಿ ಕಪೂರ್‌ಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ ನಾಸಿರುದ್ದೀನ್ ಷಾ ಮತ್ತು ಪದ್ಮಿನಿ ಕೊಲ್ಹಾಪುರೆ ಅವರಿಗೂ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Video Viral: ಕಳ್ಳಿಯ ʼಶಕ್ತಿʼ ಪ್ರದರ್ಶನ; ಮಾಂಗಲ್ಯ ಕದ್ದು ನಾನವಳಲ್ಲ ಎಂದವಳ ಜುಟ್ಟು ಹಿಡಿದಳು!
“40 ವರ್ಷಗಳ ಕಾಲ ನನ್ನನ್ನು ಸ್ವೀಕರಿಸಿ, ಪ್ರೀತಿಸಿದ ಹಾಗೆಯೇ ಆಶೀರ್ವಾದ ನೀಡಿದ ಪ್ರೇಕ್ಷಕರಿಗೂ ವಂದನೆಗಳು. ನಾಲ್ಕು ದಶಕ ಕಣ್ಣು ಮಿಟುಕಿಸುವಂತೆ ದಾಟಿ ಹೋಯಿತು. ಜೀವನದಲ್ಲಿ ಈ ಹಂತಕ್ಕೆ ಬರಲು ಹಲವರು ನನಗೆ ಸಹಾಯ ಮಾಡಿದ್ದಾರೆ. ಎಲ್ಲರಿಂದ ನಾನು ಪಡೆದ ಪ್ರೀತಿ ಮತ್ತು ಸಹಾಯಕ್ಕೆ ನಾನಿಂದು ಋಣಿಯಾಗಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

ಹಾಗೆಯೇ ತಮ್ಮ ಮುಂಬರುವ ಸಿನಿಮಾಗಳ ಬಗ್ಗೆಯೂ ನಟ ಹೇಳಿಕೊಂಡಿದ್ದಾರೆ. ತಾವು ʼದಿ ನೈಟ್‌ ಮ್ಯಾನೇಜರ್‌ ಪಾರ್ಟ್‌ 2ʼ ಮತ್ತು ʼಅನಿಮಲ್‌ʼ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಅನಿಲ್‌ ಅವರ ಪೋಸ್ಟ್‌ಗೆ ಸಹೋದರ ಬೋನಿ ಕಪೂರ್‌ ಅವರು ಸೇರಿ ಅನೇಕ ಸೆಲೆಬ್ರಿಟಿಗಳು ಕಮೆಂಟ್‌ಗಳನ್ನು ಮಾಡಿದ್ದಾರೆ. “ನೀನು ನನಗೆ, ರೀನಾ ಮತ್ತು ಸಂಜಯ್‌ಗೆ ಎಂದಿಗೂ ಉತ್ತಮ ಸಹೋದರನಾಗಿದ್ದೀಯ. ಹಾಗೆಯೇ ಹೆತ್ತವರಿಗೆ ಅತ್ಯುತ್ತಮ ಮಗನಾಗಿದ್ದೀಯ. ಸುನಿತಾಗೆ ಒಳ್ಳೆಯ ಪತಿ, ಸೋನಂ, ರಿಯಾ, ಹರ್ಷ್‌ ಮತ್ತು ಆನಂದ್‌ಗೆ ಒಳ್ಳೆಯ ತಂದೆಯಾಗಿದ್ದೀಯ. ಇದೀಗ ವಾಯುವಿಗೆ ಒಳ್ಳೆಯ ಅಜ್ಜನಾಗಿದ್ದೀಯ ಕೂಡ. ಭವಿಷ್ಯದಲ್ಲಿ ನಾಲ್ಕನೇ ಪೀಳಿಗೆಗೆ ಒಳ್ಳೆಯ ಮುತ್ತಜ್ಜನಾಗಿರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಪ್ರಾಮಾಣಿಕತೆಯಿಂದಲೇ ನೀನು ಈ 40 ವರ್ಷಗಳಲ್ಲಿ ಒಳ್ಳೆಯ ನಟನಾಗಿ ಮಿಂಚಿದ್ದೀಯ. ನಿನ್ನ ಖ್ಯಾತಿ ಇನ್ನೂ ಕನಿಷ್ಠ ನೂರು ವರ್ಷಗಳ ಕಾಲ ಉಳಿಯುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Shah Rukh Khan: ಕೇವಲ ಸ್ಮಾರ್ಟ್‌ ಫೋನ್‌ ಬಳಸಿ ʻಜವಾನ್‌ʼ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್; ಶಾರುಖ್‌ ಫಿದಾ!

Shah Rukh Khan: ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್‌ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್‌ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Edited by

Shah Rukh Khan YouTuber Zarmatics scene
Koo

ಶಾರುಖ್ ಖಾನ್ (Shah Rukh Khan) ಅವರು ತಮ್ಮ ಇತ್ತೀಚಿನ ಬ್ಲಾಕ್‌ಬಸ್ಟರ್‌ ‘ಜವಾನ್’ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಸಿನಿಮಾ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಫ್ಯಾನ್ಸ್‌ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಶಾರುಖ್‌ ಆಗಾಗ ಟ್ವಿಟರ್‌ನಲ್ಲಿ ಸೇಷನ್‌ ಏರ್ಪಡಿಸಿ ಮಾತನಾಡುತ್ತಿದ್ದಾರೆ.

ಇತ್ತೀಚಿನ ಪೋಸ್ಟ್‌ನಲ್ಲಿ ಶಾರುಖ್ ಖಾನ್ ಅವರು ಯೂಟ್ಯೂಬರ್, ಜರ್ಮಾಟಿಕ್ಸ್ (zarmatics) ರಚಿಸಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್‌ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್‌ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬರ್‌ ಜವಾನ್‌ ಸಿನಿಮಾದ ದೃಶ್ಯವೊಂದನ್ನು ಮರುಸೃಷ್ಟಿ ಮಾಡಿರುವ ಬಗ್ಗೆ ಶಾರುಖ್‌ ಇದೀಗ ʻʻತುಂಬಾ ಮಾಸ್‌ ಆಗಿದೆ, ಅದ್ಭುತʼʼ ಎಂದು ಹೊಗಳಿದ್ದಾರೆ. ಶಾರುಖ್ ಖಾನ್ ಅವರ ‘ಜವಾನ್’ ಸೆಪ್ಟೆಂಬರ್ 7ರಂದು ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮಾಡುತ್ತಿದೆ. ಈಗಾಗಲೇ 1000 ಕೋಟಿ ರೂ. ಗಡಿ ದಾಟತಿದೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

2023 ಬಾದ್‌ಷಾ ವರ್ಷ 

ಈ ಬಾರಿ ಶಾರುಖ್‌ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ʼಡಂಕಿʼ ಸಿನಿಮಾವನ್ನು ಫ್ಯಾನ್ಸ್‌ಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ʼಡಂಕಿʼ ಚಿತ್ರಕ್ಕೆ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬೆಂಬಲ ನೀಡಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿಯ ಹೊರತಾಗಿ ಬೊಮನ್ ಇರಾನಿ ಕೂಡ ನಟಿಸಲಿದ್ದಾರೆ.

ಇದನ್ನೂ ಓದಿ: Jawan box office collection: 9 ತಿಂಗಳಲ್ಲೇ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್‌; ʻಜವಾನ್‌ʼ ಹೊಸ ದಾಖಲೆ!

ʼಬಾಲಿವುಡ್​ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ (Dunki OTT) ಹಕ್ಕುಗಳು ಸೇಲ್​ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂ. ಎಂದು ಹೇಳಲಾಗುತ್ತಿದೆ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.ಕ್ಲಾಸ್​ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್​ ಎಂಬಿಬಿಎಸ್​​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

Continue Reading

ಪ್ರಮುಖ ಸುದ್ದಿ

Rakshit Shetty: ಹೌದು, ನಾನು ಈಗಲೂ ರಶ್ಮಿಕಾ ಜತೆ ಸಂಪರ್ಕದಲ್ಲಿದ್ದೇನೆ! ರಕ್ಷಿತ್ ಶೆಟ್ಟಿ ಹೇಳಿಕೆ

Rakshit Shetty: ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

VISTARANEWS.COM


on

Edited by

Rakshit Shetty and Rashmika Madanna
Koo

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ಬೇರೆ ಬೇರೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಇಬ್ಬರು ಪರಸ್ಪರ ಸಂಪರ್ಕದಲ್ಲಿದ್ದಾರೆ! ಹೌದು, ಈ ವಿಷಯವನ್ನು ಸ್ವತಃ ನಟ ರಕ್ಷಿತ್ ಶೆಟ್ಟಿ ಅವರು ಬಹಿರಂಗಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradache Ello) ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದಂತೆ ಯುಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಮಾಹಿತಿಯನ್ನು ನೀಡಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದಯ ಯಶಸ್ಸಿನ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ರಶ್ಮಿಕಾ ಮಂದಣ್ಣ ಅವರು ಈ ನಿಶ್ಚಿತಾರ್ಥ ಮುರಿದು, ಮದುವೆಗೆ ನಿರಾಕರಿಸಿದರು. ಆ ಬಳಿಕ, ರಶ್ಮಿಕಾ ಮಂದಣ್ಣ ಅವರು ಈ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ರಕ್ಷಿತಾ ಶೆಟ್ಟಿ ಮಾತ್ರ ಈಗಲೂ ರಶ್ಮಿಕಾ ಮಂದಣ್ಣ ಜತೆಗೆ ಸಂಪರ್ಕದಲ್ಲಿರುವುದಾಗಿ ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಅಲ್ಲದೇ, ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ತೋರುತ್ತಿರುವ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಹೇಳಿದ್ದೇನು?

ಇತ್ತೀಚೆಗೆ ಯುಟ್ಯೂಬ್‍‌ಗೆ ನೀಡಿದ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿಗೆ, ಈಗಲೂ ರಶ್ಮಿಕಾ ಮಂದಣ್ಣ ಜತೆಗೆ ಸಂಪರ್ಕದಲ್ಲಿದ್ದೀರಾ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ ಅವರು, ಹೌದು. ಈಗಲೂ ನಾನು ಮತ್ತು ರಶ್ಮಿಕಾ ಇಬ್ಬರು ಪರಸ್ಪರ ಸಂಪರ್ಕದಲ್ಲಿದ್ದೇವೆ. ಸಿನಿಮಾ ಜಗತ್ತನಲ್ಲಿ ಆಕೆ ದೊಡ್ಡ ಕನಸು ಕಂಡಿದ್ದಾಳೆ. ಅದರಂತೆ ಆಕೆ ಆ ಕನಸಿನತ್ತ ಸಾಗುತ್ತಿದ್ದಾಳೆ. ತಾನು ಏನು ಮಾಡಬೇಕು ಅಂದುಕೊಂಡಿದ್ದಾಳೋ ಅದನ್ನು ಸಾಧಿಸುವ ಶಕ್ತಿ ಅವಳಲ್ಲಿದೆ. ಆಕೆಯ ಸಾಧನೆಗಾಗಿ ನಾವೆಲ್ಲ ಆಕೆಯನ್ನು ಬೆಂಬಲಿಸಬೇಕು ಎಂದು ಹೇಳಿದರು.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ರಶ್ಮಿಕಾ ಮಂದಣ್ಣ ಅವರು ಪದಾರ್ಪಣೆ ಮಾಡಿದರು. ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಭ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕರು. ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣದ ವೇಳೆಯೇ ರಶ್ಮಿಕಾ-ರಕ್ಷಿತ್ ಒಬ್ಬರಿಗೊಬ್ಬರು ಪ್ರೀತಿಸಲಾರಂಭಿಸಿದರು ಎನ್ನುವ ವರದಿಗಳಿವೆ. ಕಿರಿಕ್ ಪಾರ್ಟಿ ಚಿತ್ರದ ಬಿಡುಗಡೆ ಬಳಿಕ ರಶ್ಮಿಕಾ ಮತ್ತು ರಕ್ಷಿತ್ ಎಂಗೆಜ್ಮೆಂಟ್ ಮಾಡಿಕೊಂಡರು. ಆದರೆ, ಕೆಲವು ತಿಂಗಳ ಬಳಿಕ ಇಬ್ಬರು ನಿಶ್ಚಿತಾರ್ಥ ಮುರಿದುಕೊಂಡರು. ಆದರೆ, ಯಾವುದೇ ಕಾರಣವನ್ನು ಅವರು ಬಹಿರಂಗ ಮಾಡಿರಲಿಲ್ಲ.

ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್‌ ಸೀರೆಯುಟ್ಟು ಫಸ್ಟ್‌ ಲುಕ್‌ನಲ್ಲೇ ನಾಚಿ ನೀರಾದ ರಶ್ಮಿಕಾ!

ರಣಬೀರ್‌ ಕಪೂರ್‌ (Ranbir Kapoor)) ಅಭಿನಯದ ʻಅನಿಮಲ್ʼ ಸಿನಿಮಾ (Animal first look poster) ದಿನಕ್ಕೊಂದು ಹೊಸ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಲೇ ಇದೆ. ಇದೀಗ ʻಅನಿಮಲ್ʼ ಸಿನಿಮಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ ಕಂಡು ರಶ್ಮಿಕಾ ಅವರ ಫ್ಯಾನ್ಸ್‌ ಸಂತಸ ಹೊರಹಾಕುತ್ತಿದ್ದಾರೆ. ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ʻಗೀತಾಂಜಲಿʼ (Geethanjali animal Cinema) ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Rashmika Mandanna: ಮೊದಲ ಬಾರಿಗೆ ರಕ್ಷಿತ್ ಶೆಟ್ಟಿಯವರ ʻಕಿರಿಕ್‌ ಪಾರ್ಟಿʼ ಕುರಿತು ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

ಈಗಾಗಲೇ ಅನಿಮಲ್‌ ಚಿತ್ರತಂಡ ಹಲವು ಪಾತ್ರಗಳನ್ನು ಪರಿಚಯಿಸಿದೆ. ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಈ ಸಿನಿಮಾ ನಿರ್ದೇಶಿಸಿದ್ದಾರೆ. ರಶ್ಮಿಕಾ ಪೋಸ್ಟರ್‌ನಲ್ಲಿ, ಕೆಂಪು ಮತ್ತು ಬಿಳಿ ಬಣ್ಣದ ಬಾರ್ಡರ್‌ ಸೀರೆಯೊಂದಿಗೆ ಗೃಹಿಣಿಯ ಲುಕ್‌ನಲ್ಲಿ ಸಿಂಪಲ್‌ ಆಗಿ ಕಂಡಿದ್ದಾರೆ. ರಶ್ಮಿಕಾ ಅಭಿನಿಯೊಬ್ಬರು ʻ ಗೀತಾಂಜಲಿಯ ಲುಕ್‌ ಬಹಳ ವಿಭಿನ್ನವೆಂದು ತೋರುತ್ತದೆʼʼಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು. ‘ಇಡೀ ಚಿತ್ರರಂಗದಲ್ಲಿ ನಿಮಗಿಂತ ಮಿಗಿಲಾದವರು ಯಾರೂ ಇಲ್ಲ, ನೀವೇ ಅತ್ಯಂತ ಸುಂದರಿʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಬಾಲಿವುಡ್

Dadasaheb Phalke Award: ವಹೀದಾ ರೆಹಮಾನ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

85ರ ಹರೆಯದ ವಹೀದಾ ರೆಹಮಾನ್ ಅವರು ಗೈಡ್, ಪ್ಯಾಸಾ, ಕಾಗಜ್ ಕೆ ಫೂಲ್ ಮತ್ತು ಚೌಧವೀಂ ಕಾ ಚಾಂದ್‌ನಂತಹ ಸೂಪರ್‌ಹಿಟ್‌ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ ಚಲನಚಿತ್ರಗಳಲ್ಲಿ ನಟಿಸಿದ್ದು, ಬಾಲಿವುಡ್‌ (bollywood) ರಸಿಕರ ಮೆಚ್ಚುಗೆಯ ನಟಿಯಾಗಿದ್ದಾರೆ.

VISTARANEWS.COM


on

Edited by

waheeda rehman
Koo

ಹೊಸದಿಲ್ಲಿ: ಬಾಲಿವುಡ್‌ನ ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ (Waheeda Rehman) ಅವರಿಗೆ 2021ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (Dadasaheb Phalke Award) ನೀಡಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur) ಘೋಷಿಸಿದ್ದಾರೆ.

85ರ ಹರೆಯದ ವಹೀದಾ ರೆಹಮಾನ್ ಅವರು ಗೈಡ್, ಪ್ಯಾಸಾ, ಕಾಗಜ್ ಕೆ ಫೂಲ್ ಮತ್ತು ಚೌಧವೀಂ ಕಾ ಚಾಂದ್‌ನಂತಹ ಸೂಪರ್‌ಹಿಟ್‌ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ ಚಲನಚಿತ್ರಗಳಲ್ಲಿ ನಟಿಸಿದ್ದು, ಬಾಲಿವುಡ್‌ (bollywood) ರಸಿಕರ ಮೆಚ್ಚುಗೆಯ ನಟಿಯಾಗಿದ್ದಾರೆ. ಅವರು ಪದ್ಮಭೂಷಣ ಮತ್ತು ಪದ್ಮಶ್ರೀ ಪುರಸ್ಕಾರಗಳನ್ನೂ ಪಡೆದಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು (Dadasaheb Phalke Award) ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ; ಇದನ್ನು ಕೇಂದ್ರ ಸರ್ಕಾರ ಕೊಡಮಾಡುತ್ತದೆ.

ಎಕ್ಸ್‌ (ಟ್ವಿಟರ್)‌ನಲ್ಲಿನ ಪೋಸ್ಟ್‌ನಲ್ಲಿ, ಅನುರಾಗ್ ಠಾಕೂರ್ ಹೀಗೆ ಬರೆದಿದ್ದಾರೆ: “ವಹೀದಾ ರೆಹಮಾನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ವರ್ಷದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ನಾನು ಅಪಾರ ಸಂತೋಷ ಪಡುತ್ತೇನೆ. ವಹೀದಾಜೀ ಹಿಂದಿ ಚಲನಚಿತ್ರಗಳಲ್ಲಿನ ಅವರ ಪಾತ್ರಗಳಿಗಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆದಿದ್ದಾರೆ. ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬಿವಿ ಔರ್ ಗುಲಾಮ್, ಗೈಡ್, ಖಾಮೋಶಿ ಅವುಗಳಲ್ಲಿ ಪ್ರಮುಖವಾದವುಗಳು. 5 ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು ತಮ್ಮ ಪಾತ್ರಗಳನ್ನು ಮೆರೆದಿದ್ದಾರೆ. ರೇಷ್ಮಾ ಔರ್ ಶೇರಾ ಚಿತ್ರದ ಪಾತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಹೀದಾಜಿ ಅವರು ಸಮರ್ಪಣೆ, ಬದ್ಧತೆ ಮತ್ತು ಅತ್ಯುನ್ನತ ಮಟ್ಟವನ್ನು ಸಾಧಿಸಬಲ್ಲ ಭಾರತೀಯ ನಾರಿಯ ಶಕ್ತಿಯನ್ನು ಪ್ರತಿನಿಧಿಸಿದ್ದಾರೆ. ಕಠಿಣ ಪರಿಶ್ರಮದಿಂದ ವೃತ್ತಿಪರ ಶ್ರೇಷ್ಠತೆ ಸಾಧಿಸಿದ್ದಾರೆ. ಸಂಸತ್ತು ಐತಿಹಾಸಿಕ ನಾರಿ ಶಕ್ತಿ ವಂದನೆ ಅಧಿನಿಯಮವನ್ನು ಅಂಗೀಕರಿಸಿರುವ ಸಮಯದಲ್ಲಿ ವಹೀದಾ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿರುವುದು ಸಕಾಲಿಕ ಹಾಗೂ ಭಾರತೀಯ ಚಿತ್ರರಂಗದ ಪ್ರಾತಿನಿಧಿಕ ಪ್ರಮುಖ ಮಹಿಳೆಯೊಬ್ಬರಿಗೆ ನೀಡಿದ ಸೂಕ್ತವಾದ ಗೌರವ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ನಮ್ಮ ಚಲನಚಿತ್ರ ಇತಿಹಾಸದ ಭಾಗವಾಗಿರುವ ಅವರ ಸಾಧನೆಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.”

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯು ದಿವಂಗತ ನಟ ದೇವ್ಆನಂದ್ (Dev Anand) ಅವರ ಶತಮಾನೋತ್ಸವದೊಂದಿಗೆ ಸೇರಿಕೊಂಡಿದೆ. ದೇವ್ ಆನಂದ್ ಹಾಗೂ ವಹೀದಾ ರೆಹಮಾನ್ 1965ರ ಬ್ಲಾಕ್‌ಬಸ್ಟರ್‌ ಚಿತ್ರ ʼಗೈಡ್‌ʼನ ರೊಮ್ಯಾಂಟಿಕ್‌ ಜೋಡಿ. ಈ ವರ್ಷದ ಕೊನೆಯಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ವಹೀದಾ ರೆಹಮಾನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 2020ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಆಶಾ ಪರೇಖ್ (Asha Parekh) ಹಾಗೂ ಅದರ ಹಿಂದಿನ ವರ್ಷದ (2019) ಪ್ರಶಸ್ತಿಯನ್ನು ರಜನಿಕಾಂತ್‌ (Rajinikanth) ಪಡೆದಿದ್ದರು. ವಹೀದಾ ಸದ್ಯ ಬೆಂಗಳೂರಿನ ನಿವಾಸಿಯಾಗಿದ್ದಾರೆ.

ಇದನ್ನೂ ಓದಿ: Sunday read | ಈ ಚೆಲುವೆ ವನ್ಯಜೀವಿ ಫೋಟೋಗ್ರಫಿ ಮಾಡಿದಾಗ…

Continue Reading

ದೇಶ

Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’

Swara Bhasker: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿದ್ದರು.

VISTARANEWS.COM


on

Edited by

Swara Bhasker and Fahad Ahmad With Baby Girl
Koo

ನವದೆಹಲಿ: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ (Swara Bhasker) ಅವರು ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ(Baby Girl). ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahmad) ಅವರು ಸ್ವರಾ ಅವರ ಪತಿಯಾಗಿದ್ದಾರೆ. ತಮಗೆ ಹೆಣ್ಣು ಮಗು ಜನಿಸಿದ ಮಾಹಿತಿಯನ್ನು ದಂಪತಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಮಗುವಿನ ಮೊದಲ ಫೋಟೋ ಕೂಡ ಷೇರ್ ಮಾಡಿದ್ದಾರೆ. ಮಗುವಿಗೆ ‘ರಾಬಿಯಾ’ (Raabiyaa) ಎಂದು ನಾಮಕರಣ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿರುವ ಸ್ವರಾ ಮತ್ತು ಫಹಾದ್ ಅವರು, ನಮ್ಮ ಪ್ರಾರ್ಥನೆ ಫಲಿಸಿತು. ಆಶೀರ್ವಾದ ಲಭಿಸಿತು. ಹಾಡು ಪಿಸುಗುಟ್ಟಿದೆ… ಅದು ಅತೀಂದ್ರಿಯ ಸತ್ಯ…. ಸೆಪ್ಟೆಂಬರ್ 23ರಂದು ನಮಗೆ ಹೆಣ್ಣು ಮಗು ಜನಿಸಿದೆ. ಕೃತಜ್ಞತೆಯ ಮತ್ತು ಸಂತೋಷದ ಹೃದಯಗಳೊಂದಿಗೆ, ನಿಮ್ಮ ಪ್ರೀತಿಗೆ ಧನ್ಯವಾದಗಳು! ಇದು ಸಂಪೂರ್ಣ ಹೊಸ ಜಗತ್ತು ಎಂದು ಬರೆದುಕೊಂಡಿದ್ದಾರೆ.

ಸ್ವರಾ-ಫಹಾದ್ ದಂಪತಿ ಫೋಟೋ ಷೇರ್ ಮಾಡಿದ್ದಾರೆ. ಈ ಪೈಕಿ ಮೊದಲನೆಯ ಫೋಟೋದಲ್ಲಿ ಕೂಸು ರಾಬಿಯಾ ಜತೆ ಸ್ವರ ಭಾಸ್ಕರ್ ಇದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಮಯದಲ್ಲಿ, ತೊಟ್ಟಿಲಲ್ಲಿ ಮಗುವಿನ ಪಕ್ಕದಲ್ಲಿ ಸ್ವರಾ ಮತ್ತು ಫಹಾದ್ ಇದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ತನ್ನ ನವಜಾತ ಮಗಳೊಂದಿಗೆ ಸ್ವರಾ ಇರುವ ಮತ್ತೊಂದು ಫೋಟೋ ಇದೆ. ಇನ್ನೂ ಒಂದು, ಫಹಾದ್ ಮಗುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಿರುವ ಹಾಗೂ ಕೊನೆಯದು ಮೂವರು ಇರುವ ಕುಟುಂಬದ ಮತ್ತೊಂದು ಫೋಟೋವನ್ನು ಕಾಣಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Swara Bhaskar: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ರಾಹುಲ್ ಗಾಂಧಿ ಭಾಗಿ

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ, ತಂದೆಯಾದ ಸ್ವರಾ ಮತ್ತು ಫಹಾದ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳಿಂದ ಸೆಲೆಬ್ರಿಟಿಗಳವರೆಗೆ ಹಲವಾರು ಜನರು ಈಗ ದಂಪತಿಗಳಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ತಿಲೋತಮಾ ಶೋಮ್, ಗುನೀತ್ ಮೊಂಗಾ ಮತ್ತು ಪಾರ್ವತಿ ಕಾಮೆಂಟ್‌ಗಳಲ್ಲಿ ದಂಪತಿಗಳನ್ನು ಅಭಿನಂದಿಸಿದ್ದಾರೆ.

ಇದೇ ವರ್ಷದ ಫೆಬ್ರವರಿಯಲ್ಲಿ ಸ್ವರಾ ಭಾಸ್ಕರ್ ಮ್ತತು ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು. ಈಗ ಮುದ್ದಾದ ಹೆಣ್ಣುಮಗಳ ತಂದೆತಾಯಿಯಾಗಿದ್ದಾರೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
HD DeveGowda HD Kumaraswamy and PM Narendra Modi on BJP JDS alliance
ಕರ್ನಾಟಕ46 seconds ago

BJP JDS alliance : ವಿಜಯದಶಮಿ ನಂತರ ಜೆಡಿಎಸ್‌ ಸೀಟು ಹಂಚಿಕೆ ಅಂತಿಮ ಮಾತುಕತೆ!

Nayanthara Vignesh Shivan twin
South Cinema7 mins ago

Actress Nayanthara: ನಯನತಾರಾ -ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ಬರ್ತ್‌ಡೇ; ಕ್ಯೂಟ್‌ ಫೋಟೊಸ್ ಔಟ್‌!

Murder case in Kolara
ಕರ್ನಾಟಕ8 mins ago

Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!

Team India
ಕ್ರಿಕೆಟ್28 mins ago

World Cup 2023 : ಭಾರತ ವಿರುದ್ಧ ಗೆದ್ದವರು ವಿಶ್ವ ಕಪ್​ ಗೆಲ್ತಾರೆ; ಪಾಕ್​ ತಂಡ ಮಾಜಿ ಆಟಗಾರನ ಭವಿಷ್ಯ

ದೇಶ28 mins ago

Stadium row: ಕ್ರೀಡಾಂಗಣದಲ್ಲಿ ನಾಯಿ ಜತೆ ವಾಕಿಂಗ್‌ ಮಾಡಿದ್ದ ಅಧಿಕಾರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ!

Nithya Menen
South Cinema33 mins ago

Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ!

Narendra Modi
ದೇಶ37 mins ago

Lok Sabha Election 2024: 2.5 ಲಕ್ಷ ಗ್ರಾಮಗಳಲ್ಲಿ ಬಿಜೆಪಿ ‘ರಥ’ಯಾತ್ರೆ; ‘ಲೋಕ’ ಸಮರಕ್ಕೆ ರಣತಂತ್ರ

HD Devegowda Press meet for BJP JDS alliance
ಕರ್ನಾಟಕ45 mins ago

BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್‌ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ

Instagram message murder
ಅವಿಭಾಗೀಕೃತ49 mins ago

Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

gold rate today
ಕರ್ನಾಟಕ1 hour ago

Gold Rate Today: ಬೆಂಗಳೂರಿನಲ್ಲಿ ಇಳಿಯಿತು ಬಂಗಾರದ ಬೆಲೆ, ಎಷ್ಟಿದೆ ನೋಡಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ8 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌