South Cinema
Mahesh Babu: ರೇಂಜ್ ರೋವರ್ ಕಾರು ಖರೀದಿಸಿದ ನಟ ಮಹೇಶ್ ಬಾಬು, ರೇಟ್ ಕೇಳಿದರೆ ಅಬ್ಬಾ ಅಂತೀರಿ
Mahesh Babu: ರೋಲ್ಸ್ ರಾಯ್ಸ್, ಮರ್ಸಿಡೀಸ್ ಬೆಂಜ್, ಆಡಿ ಸೇರಿ ಹಲವು ಐಷಾರಾಮಿ ಕಾರುಗಳ ಒಡೆಯರಾಗಿರುವ ಮಹೇಶ್ ಬಾಬು ಅವರೀಗ ರೇಂಜ್ ರೋವರ್ ಎಸ್‌ವಿ ಎಂಬ ಅದ್ಭುತ ಕಾರನ್ನು ಖರೀದಿಸಿದ್ದಾರೆ. ರೇಂಜ್ ರೋವರ್ ಎಸ್‌ವಿ ಗೋಲ್ಡ್ ಕಲರ್ ಕಾರು ಹೊಂದಿರುವ ಹೈದರಾಬಾದ್‌ನ ಮೊದಲ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಹೈದರಾಬಾದ್: ಸಿನಿಮಾ ಇರಲಿ, ಕ್ರಿಕೆಟ್ ಇರಲಿ. ಯಾವುದೇ ಕ್ಷೇತ್ರದ ಸೆಲೆಬ್ರಿಟಿಗಳು ಇರುವುದೇ ಹಾಗೆ. ಅವರ ಬಳಿ ಐಷಾರಾಮಿ ಕಾರುಗಳು ಇರುತ್ತವೆ. ಲಕ್ಷಾಂತರ ರೂ. ಬೆಲೆ ಬಾಳುವ ಬೈಕ್‌ಗಳು ಮನೆ ಮುಂದೆ ನಿಂತಿರುತ್ತವೆ. ಅದರಲ್ಲೂ, ಹೊಸದಾಗಿ ಮಾರುಕಟ್ಟೆಗೆ ಬರುವ ಐಷಾರಾಮಿ ಕಾರುಗಳ ಮೇಲೆ ಸೆಲೆಬ್ರಿಟಿಗಳು ಯಾವಾಗಲೂ ಕಣ್ಣಿಟ್ಟಿರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರು 5.4 ಕೋಟಿ ರೂಪಾಯಿ ಕೊಟ್ಟು ರೇಂಜ್ ರೋವರ್ ಕಾರು ಖರೀದಿಸಿದ್ದಾರೆ.
ಹೌದು, ಅತ್ಯಾಧುನಿಕ ಫೀಚರ್‌ಗಳಿರುವ, ಹೊಸ ಬ್ರ್ಯಾಂಡ್ ರೇಂಜ್ ರೋವರ್ ಎಸ್‌ವಿ ಕಾರನ್ನು ಮಹೇಶ್ ಬಾಬು ಅವರು ಖರೀದಿಸಿದ್ದಾರೆ. ಗೋಲ್ಡ್ ಕಲರ್ ಕಾರು ಆಕರ್ಷಕವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾರುಗಳ ಫೋಟೊಗಳು ವೈರಲ್ ಆಗಿವೆ. ಹಾಗೆಯೇ, ಗೋಲ್ಡ್ ಕಲರ್ ಕಾರು ಹೊಂದಿರುವ ಹೈದರಾಬಾದ್‌ನ ಮೊದಲ ವ್ಯಕ್ತಿ ಎಂಬ ಖ್ಯಾತಿಗೂ ಮಹೇಶ್ ಬಾಬು ಪಾತ್ರರಾಗಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟರಿಗೆಲ್ಲ ರೇಂಜ್ ರೋವರ್ ಕಾರು ಎಂದರೆ ಅಚ್ಚುಮೆಚ್ಚು. ಮಲಯಾಳಂ ಸಿನಿಮಾ ಕ್ಷೇತ್ರದ ದಿಗ್ಗಜ ಮೋಹನ್‌ಲಾಲ್, ತೆಲುಗಿನ ಜ್ಯೂನಿಯರ್ ಎನ್‌ಟಿಆರ್, ಚಿರಂಜೀವಿ ಸೇರಿ ಹಲವು ಖ್ಯಾತನಾಮರು ರೇಂಜ್ ರೋವರ್ ಕಾರುಗಳಲ್ಲೇ ಓಡಾಡುತ್ತಾರೆ.
ಮಹೇಶ್ ಬಾಬು ಬಳಿ ಇರುವ ಕಾರುಗಳು ಯಾವವು?
ಮಹೇಶ್ ಬಾಬು ಅವರು ಇದೇ ಮೊದಲ ಬಾರಿಗೆ ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಖರೀದಿಸುತ್ತಿಲ್ಲ. ಈಗಾಗಲೇ ಅವರ ಬಳಿ ರೋಲ್ಸ್ ರಾಯ್ಸ್ ಘೋಸ್ಟ್, ರೇಂಜ್ ರೋವರ್ ವೋಗ್, ಆಡಿ 7, ಬಿಎಂಡಬ್ಲ್ಯೂ 7 ಸಿರೀಸ್ ಹಾಗೂ ಮರ್ಸಿಡೀಸ್-ಬೆಂಜ್ ಎಸ್-ಕ್ಲಾಸ್ ಕಾರುಗಳಿವೆ. ಇವುಗಳ ಸಾಲಿಗೆ ಈಗ ರೇಂಜ್ ರೋವರ್ ಕೂಡ ಸೇರಿದೆ.
ಇದನ್ನೂ ಓದಿ: Maduri Dixit : 3 ಕೋಟಿ ರೂಪಾಯಿಯ ಪೋರ್ಶೆ ಕಾರು ಖರೀದಿಸಿದ ಮಾಧುರಿ ದಿಕ್ಷಿತ್
ಮಹೇಶ್ ಬಾಬು ಕೊನೆಯದಾಗಿ 2022ರಲ್ಲಿ ಬಿಡುಗಡೆಯಾದ ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಗುಂಟೂರು ಖಾರಂ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾಗೆ ತ್ರಿವಿಕ್ರಮ ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಗುಂಟೂರು ಖಾರಂ ಸಿನಿಮಾಗೆ ಪೂಜಾ ಹೆಗ್ಡೆ ಅವರು ನಾಯಕಿಯಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
South Cinema
Actress Nayanthara: ನಯನತಾರಾ -ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ಬರ್ತ್‌ಡೇ; ಕ್ಯೂಟ್ ಫೋಟೊಸ್ ಔಟ್!
Actress Nayanthara: ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದು ಒಂದು ವರ್ಷವಾಗಿದೆ.
ಇದನ್ನೂ ಓದಿ: Actress Nayanthara: ಯೂಟ್ಯೂಬರ್ ಸಿನಿಮಾಗೆ ನಯನತಾರಾ ನಾಯಕಿ; ಅಚ್ಚರಿಗೊಂಡ ಫ್ಯಾನ್ಸ್!
ನಯನತಾರಾ ಸದ್ಯ ‘ಜವಾನ್’ ಚಿತ್ರದ ಯಶಸ್ಸಿನಲ್ಲಿದ್ದಾರೆ. ನಟಿಯ ಕೈಯಲ್ಲಿ ಹಲವು ಸಿನಿಮಾಗಳು ಇವೆ.
South Cinema
Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ!
Nithya Menen: ಸಿನಿಮಾಗಳಿಗಿಂತ ನಟಿ ವೈಯಕ್ತಿಕ ವಿಚಾರಗಳಿಗೆ ಆಗಾಗ ಮುನ್ನಲ್ಲೆಗೆ ಬರುತ್ತಲೇ ಇರುತ್ತಾರೆ ನಿತ್ಯಾ ಮೆನನ್. ಅವರು ಧನುಷ್ ನಟನೆಯ 50ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: ‘ಮೈನಾ’ (Mynaa) ನಾಯಕಿ ನಿತ್ಯಾ ಮೆನನ್ (Nithya Menen) ಹಲವು ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗಿಂತ ನಟಿ ವೈಯಕ್ತಿಕ ವಿಚಾರಗಳಿಗೆ ಆಗಾಗ ಮುನ್ನಲ್ಲೆಗೆ ಬರುತ್ತಲೇ ಇರುತ್ತಾರೆ. ʻʻತಮಿಳು ಚಲನಚಿತ್ರ ನಟರೊಬ್ಬರು ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದಾರೆʼ ಎಂದು ನಟಿ ಹೇಳಿರುವುದಾಗಿ ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಇದೆಲ್ಲ ಸುಳ್ಳು ಸುದ್ದಿ ಎಂದು ನಟಿ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.
ʻʻತೆಲುಗು ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ, ಆದರೆ ತಮಿಳು ಚಿತ್ರರಂಗದಲ್ಲಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ತಮಿಳು ಚಲನಚಿತ್ರ ನಟರೊಬ್ಬರು ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದಾರೆʼʼಎಂದು ನಿತ್ಯಾ ಮೆನನ್ ಹೇಳಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಲ್ಲಿತ್ತು.
ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ವದಂತಿಗಳು ಸಂಪೂರ್ಣವಾಗಿ ಸುಳ್ಳು, ನಾನು ಯಾವುದೇ ಸಂದರ್ಶನವನ್ನು ನೀಡಿಲ್ಲ. ಈ ರೀತಿ ಹೇಳಿಕೆ ಎಲ್ಲಿಯೂ ಹೇಳಿಕೊಂಡಿಲ್ಲ. ಕೇವಲ ಕ್ಲಿಕ್‌ಗಳನ್ನು ಪಡೆಯಲು ಈ ರೀತಿಯ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ಪತ್ತೆ ಹೆಚ್ಚಬೇಕಿದೆ. ಯಾರೂ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ ʼʼಎಂದು ನಟಿ ಹೇಳಿದ್ದಾರೆ. ಇಂತಹ ವದಂತಿಗಳ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯಾ ಅವರ ಈ ಸ್ಪಷ್ಟೀಕರಣ ಎಲ್ಲಾ ಉಹಾಪೋಹಗಳಿಗೆ ಅಂತ್ಯ ಹಾಡಿವೆ.
ಇದನ್ನೂ ಓದಿ: Nithya Menen: ನಿತ್ಯಾ ಮೆನನ್ ಅಜ್ಜಿ ನಿಧನ; ಭಾವುಕ ಪೋಸ್ಟ್ ಹಂಚಿಕೊಂಡ ನಟಿ!
ಟ್ವಟರ್‌ನಲ್ಲಿ ನಿತ್ಯಾ ಮೆನನ್ ಸಖತ್ ಟ್ರೆಂಡ್!
The news circulating about Nithya Menen is basesless and doesn't contain any truth to it.
— Manobala Vijayabalan (@ManobalaV) September 26, 2023
||#NithyaMenen|| pic.twitter.com/9U1a1qg0iw
So it's fake…!! #NithyaMenen herself clarified that she never made any statements against her Tamil co-stars… pic.twitter.com/dqIJZjHrdv
— AB George (@AbGeorge_) September 26, 2023
It's very sad that certain sections of journalism have come down to this. I urge you – Be Better than this! 😊#stopfakenews @letscinema pic.twitter.com/zevdEPqTlL
— Nithya Menen (@MenenNithya) September 26, 2023
We are all here for such a short period of time . It always surprises me how much wrong we do to each other 🙂
— Nithya Menen (@MenenNithya) September 26, 2023
I point this out today because only accountability stops bad behaviour
Be better humans @ursBuzzBasket@letscinema and all the others who have followed this bandwagon pic.twitter.com/qMfHM5dDgB
ಈ ಬಗ್ಗೆ ನಟಿ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ʻʻಸುದ್ದಿಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ಪತ್ತೆ ಹೆಚ್ಚಬೇಕಿದೆ’ ಎಂದು ನಿತ್ಯಾ ಮೆನನ್ ಬರೆದುಕೊಂಡಿದ್ದಾರೆ. ‘ಇಷ್ಟು ಕೆಳಮಟ್ಟಕ್ಕೆ ಇಳಿಯಬೇಡಿ. ಉತ್ತಮರಾಗಿ’ ಎಂದು ಅವರು ಮನವಿ ಮಾಡಿದ್ದಾರೆ.
ನಿತ್ಯಾ ಮೆನನ್ ಅವರು ಧನುಷ್ ನಟನೆಯ 50ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಧನುಷ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಡಿ50 ಸಿನಿಮಾ ದೊಡ್ಡ ಬಜೆಟ್ ಚಿತ್ರವಾಗಿದೆ.ಹಾಗೇ ಅವರೇ ನಾಯಕರಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಎಆರ್ ರೆಹಮಾನ್ ಅವರ ಸಂಗೀತವಿದೆ ಎಂತಲೂ ವರದಿಯಾಗಿದೆ. ಎಸ್ಜೆ ಸೂರ್ಯ, ಸಂದೀಪ್ ಕಿಶನ್ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
South Cinema
Rekha Vedavyas: ನನ್ನನ್ನು ಚೆನ್ನಾಗಿ ನಗಿಸಿ, ಬೇಗ ಚೇತರಿಸಿಕೊಳ್ತೀನಿ ಎಂದ ನಟಿ ರೇಖಾ
Rekha Vedavyas: ನಟಿ ರೇಖಾ ಅವರ ಈಗಿನ ಸ್ಥಿತಿ ಕಂಡು ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ರೇಖಾ ಈಗ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅವರು ತಮ್ಮ ಆರೋಗ್ಯದ ಕುರಿತು ಮಾತನಾಡಿದ್ದಾರೆ.
ಬೆಂಗಳೂರು: `ಹುಚ್ಚ’ ‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ವೇದವ್ಯಾಸ್ (Rekha Vedavyas) ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಸೈ ಎನಿಸಿಕೊಂಡವರು. ಹಲವು ವರ್ಷಗಳಾದ ಮೇಲೆ ನಟಿ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ನಟಿಯ ಈಗಿನ ಸ್ಥಿತಿ ಕಂಡು ಅವರ ಫ್ಯಾನ್ಸ್ ಬಹಳ ಆತಂಕ ವ್ಯಕ್ತಪಡಿಸಿದ್ದರು. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ನಟಿ ರಿವೀಲ್ ಮಾಡಿದ್ದಾರೆ.
ಕಳೆದ 9 ವರ್ಷಗಳಿಂದ ರೇಖಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಟಿ ಇದ್ದಕ್ಕಿಂದ್ದಂತೆ ತೆಲುಗು ಕಿರುತೆರೆ ‘ಶ್ರೀದೇವಿ ಡ್ರಾಮಾ ಕಂಪನಿ’ ಶೋಗೆ ಅತಿಥಿಯಾಗಿ ಬಂದಿದ್ದರು. ನಟಿಯನ್ನು ನೋಡಿದ ಕೆಲವರು ಅಚ್ಚರಿಗೊಂಡಿದ್ದರು. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದರು ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ಮಾತನಾಡಿ ʻʻನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದೆಲ್ಲ ಸಡನ್ ಆಗಿ ಆಯಿತು. ಸಾಕಷ್ಟು ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದು ಸಣ್ಣ ತಲೆನೋವು ಇರಬಹುದು, ಅಥವಾ ದೊಡ್ಡ ಸಮಸ್ಯೆಯೇ ಆಗಿರಬಹುದು. ಯಾವುದಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು. ಒತ್ತಡದಿಂದ ಆರೋಗ್ಯ ಇನ್ನಷ್ಟು ಹದೆಗೆಡುತ್ತದೆ. ಎಲ್ಲಕ್ಕಿಂತ ದೇವರಲ್ಲಿ ಹೆಚ್ಚಿನ ನಂಬಿಕೆ ಇಡಬೇಕು. ಯಾವುದೇ ದೇವರು ಆಗಿರಲಿ. ನಿಮ್ಮ ಮೆಡಿಸಿನ್ ಕೆಲಸ ಮಾಡಿದ್ದಿದ್ದರೂ ನಿಮ್ಮ ನಂಬಿಕೆ ಕೆಲಸ ಮಾಡುತ್ತದೆ. ನನ್ನನ್ನು ಚೆನ್ನಾಗಿ ನಗಿಸಿ, ನಾನು ಬೇಗ ಚೇತರಿಸಿಕೊಳ್ತೀನಿ” ಎಂದು ರೇಖಾ ಹೇಳಿದ್ದಾರೆ.
ಇದನ್ನೂ ಓದಿ: Rekha Vedavyas: ಗುರುತೇ ಸಿಗದಷ್ಟು ಬದಲಾದ ʻಹುಚ್ಚʼ ಸಿನಿಮಾ ನಾಯಕಿ ರೇಖಾ; ನಟಿಗೆ ಏನಾಯ್ತು?
ರೇಖಾ ಅವರ ಮಾತುಗಳನ್ನು ಕೇಳಿ ಅವರ ಫ್ಯಾನ್ಸ್ ʻʻಬೇಗ ಚೇತರಿಸಿಕೊಳ್ಳಿʼʼ ಎಂದು ಪ್ರಾರ್ಥಿಸುತ್ತಿದ್ದಾರೆ. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದಲ್ಲಿ ಮಿಂಚಿದರು. ಆ ಬಳಿಕ ಮತ್ತೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಈ ಬೆಂಗಳೂರು ಬೆಡಗಿ ನಟಿಸಿದರು. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ರೇಖಾ ವೇದವ್ಯಾಸ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಹುಚ್ಚ ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ನಟಿಸಿರುವ ರೇಖಾ, ಇಂದಿಗೂ ಫೇಮಸ್ಸು. 2014ರಲ್ಲಿ ಕೊನೆಯದಾಗಿ ‘ತುಳಸಿ’ ಕನ್ನಡ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು.
ಮೂರು ವರ್ಷಗಳ ಹಿಂದೆಯಷ್ಟೆ ತೆಲುಗು ಸಂದರ್ಶನವೊಂದರಲ್ಲಿ ಭಾಗಿ ಆಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ವ್ಯಕ್ತಪಡಿಸಿದ್ದರು. ‘ಪರಿಚಯ’, ‘ಬಾಸ್’, ‘ಬೆಂಕಿ ಬಿರುಗಾಳಿ’, ‘ಲೂಸ್‌ಗಳು’, ‘ಪರಮಶಿವ’ ಸೇರಿದಂತೆ ರೇಖಾ ನಟಿಸಿದ್ದರು.
South Cinema
Actor Yash: ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜತೆ ರಾಕಿಂಗ್ ಸ್ಟಾರ್ ಯಶ್!
Actor Yash: ನಿರ್ದೇಶಕಿ ಗೀತು ಮೋಹನ್ ದಾಸ್ ಜತೆ ಯಶ್ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಗೆ ಕಾಯಬೇಕಿದೆ.
ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಸಿನಿಮಾ’ ಮೂಲಕ ಯಶ್ (Actor Yash) ಜಾಗತಿಕ ಯಶಸ್ಸನ್ನು ಕಂಡರು. ‘ಕೆಜಿಎಫ್ 2’ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಯಶ್ ಯಾವುದೇ ಹೊಸ ಸಿನಿಮಾ ಅಪ್‌ಡೇಟ್ ಹಂಚಿಕೊಂಡಿಲ್ಲ. ಆಗಾಗ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ‘ಯಶ್ 19’ ಟ್ರೆಂಡ್ ಮಾಡಿ ಹೊಸ ಅಪ್‌ಡೇಟ್‌ಗಾಗಿ ಕಾಯುತ್ತಲೇ ಇರುತ್ತಾರೆ. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು (JJ Perry in London) ಲಂಡನ್ನಲ್ಲಿ ಭೇಟಿ ಆಗಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಜತೆ ಯಶ್ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಗೆ ಕಾಯಬೇಕಿದೆ. ಸೆಪ್ಟೆಂಬರ್ 26ರಂದು, ಯಶ್ ಹಾಲಿವುಡ್ ಸ್ಟಂಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು ಅವರನ್ನು ಭೇಟಿಯಾದರು. ಯಶ್ ಅವರ ಮುಂದಿನ ಸಿನಿಮಾಕ್ಕೆ ಜೆಜೆ ಪೆರ್ರಿ ಆ್ಯಕ್ಷನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಯಶ್, ಜೆಜೆ ಪೆರ್ರಿಯವರ ಗನ್ ಶೂಟಿಂಗ್ ಯಾರ್ಡ್ಗೆ ಭೇಟಿ ನೀಡಿ ಗನ್ ಶೂಟಿಂಗ್ ಅಭ್ಯಾಸ ಮಾಡಿದ್ದರು. ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Actor Yash : ರಾಕಿ ಭಾಯ್ ಯಶ್ ನಾಪತ್ತೆ; ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ!
‘ಅವತಾರ್’, ‘ಎಕ್ಸ್ಎಕ್ಸ್ಎಕ್ಸ್’, ಫಾಸ್ಟ್ ಆ್ಯಂಡ್ ಫ್ಯೂರಿಯಸ್, ‘ಜಾನ್ ವಿಕ್’, ‘ಸ್ಪೈ’, ‘ದಿ ಎಕ್ಸ್ಪ್ಯಾಂಡೆಬಲ್ಸ್ 3’ ಇನ್ನೂ ಹಲವು ಹಾಲಿವುಡ್ ಆ್ಯಕ್ಷನ್ ಸಿನಿಮಾಗಳಿಗೆ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. ಲೇವಿಸ್ ಹ್ಯಾಮಿಲ್ಟನ್ (Lewis Hamilton) ಅವರನ್ನೂ ಕೂಡ ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿ ಮಾಡಿದ್ದಾರೆ ಎಂಬ ವರದಿಯಿದೆ. ಜಗತ್ತಿನ ಅತ್ತುತ್ತಮ ಕಾರ್ ರೇಸರ್‌ನಲ್ಲಿ ಹ್ಯಾಮಿಲ್ಟನ್ ಕೂಡ ಒಬ್ಬರು. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಡೈರೆಕ್ಷನ್‌ನಲ್ಲಿ ಯಶ್ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹೊಸ ಪ್ರಾಜೆಕ್ಟ್ಗಾಗಿ ಯಶ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಕೆಲವು ದಿನಗಳ ಹಿಂದೆ ಮಲೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ದೊಡ್ಡ ಸಿನಿಮಾ ಮಾಡುತ್ತಿಲ್ಲ. ಚೆನ್ನಾಗಿರುವ ಕತೆಯ ಸಿನಿಮಾ ಕೊಡುವ ಪ್ರಯತ್ನದಲ್ಲಿದ್ದೀನಿ. ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡುತ್ತೇನೆ ಎಂದಿದ್ದರು. ಕೆಲವು ಮೂಲಗಳ ಪ್ರಕಾರ, ಯಶ್ರ ಮುಂದಿನ ಸಿನಿಮಾಕ್ಕೆ ಕತೆ ಸಿದ್ಧಗೊಂಡಿದ್ದು ಶೀಘ್ರದಲ್ಲೇ ಘೋಷಣೆಯಾಗಲಿದೆ.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ21 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema24 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ13 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಕರ್ನಾಟಕ24 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ದೇಶ14 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು