Bigg Boss Telugu 7: ಬಿಗ್‌ ಬಾಸ್‌ ತೆಲುಗು ವೇದಿಕೆಯಲ್ಲಿ ಕನ್ನಡ ಮಾತನಾಡಿದ ಆಶಿಕಾ ರಂಗನಾಥ್‌! - Vistara News

South Cinema

Bigg Boss Telugu 7: ಬಿಗ್‌ ಬಾಸ್‌ ತೆಲುಗು ವೇದಿಕೆಯಲ್ಲಿ ಕನ್ನಡ ಮಾತನಾಡಿದ ಆಶಿಕಾ ರಂಗನಾಥ್‌!

Bigg Boss Telugu 7: ನಟಿ ಆಶಿಕಾ ರಂಗನಾಥ್‌ ಅವರು ಬಿಗ್‌ ಬಾಸ್‌ ವೇದಿಕೆಯಲ್ಲಿ ಮುಖ್ಯ ಅತಿಯಾಗಿ ಭಾಗಿಯಾಗಿದ್ದರು. ಆಶಿಕಾ ಜತೆ ಶೋಭಾ ಶೆಟ್ಟಿ ಅವರು ಕನ್ನಡದಲ್ಲಿ ಮಾತನಾಡಿರುವುದು ಸಖತ್‌ ವೈರಲ್‌ ಆಗಿದೆ. ಅಮರ್‌ದೀಪ್‌ಗೆ ಫ್ಲೈ ಕಿಸ್‌ ಕೊಟ್ಟಿದ್ದಾರೆ ಆಶಿಕಾ.

VISTARANEWS.COM


on

Ashika Ranganath spoke Kannada on the Bigg Boss Telugu stage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್ ಬಾಸ್ ತೆಲುಗು (Bigg Boss Telugu 7) ಸೀಸನ್ 7 ಶೋನಲ್ಲಿ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ (Shobha Shetty) ಅವರು ಸ್ಪರ್ಧಿಯಾಗಿದ್ದಾರೆ. ಶೋಭಾ ಅವರು ಬಿಗ್‌ ಬಾಸ್‌ ಮೂಲಕ ಸಖತ್‌ ಸುದ್ದಿಯಾಗಿದ್ದಾರೆ. ಮಾತ್ರವಲ್ಲ ಅದೇ ವೇದಿಕೆಯಲ್ಲಿ ಅವರ ಬಾಯ್‌ಫ್ರೆಂಡ್‌ ಯಾರು ಎಂಬುದು ಈ ಮುಂಚೆ ರಿವೀಲ್‌ ಆಗಿತ್ತು. ಇದೀಗ ನಟಿ ಆಶಿಕಾ ರಂಗನಾಥ್‌ ಅವರು ಬಿಗ್‌ ಬಾಸ್‌ ವೇದಿಕೆಯಲ್ಲಿ ಮುಖ್ಯ ಅತಿಯಾಗಿ ಭಾಗಿಯಾಗಿದ್ದರು. ಆಶಿಕಾ ಜತೆ ಶೋಭಾ ಶೆಟ್ಟಿ ಅವರು ಕನ್ನಡದಲ್ಲಿ ಮಾತನಾಡಿರುವುದು ಸಖತ್‌ ವೈರಲ್‌ ಆಗಿದೆ. ಅಮರ್‌ದೀಪ್‌ಗೆ ಫ್ಲೈ ಕಿಸ್‌ ಕೊಟ್ಟಿದ್ದಾರೆ ಆಶಿಕಾ.

ಈ ಬಾರಿ ಬಿಗ್‌ ಬಾಸ್‌ ತೆಲುಗುವಿನಲ್ಲಿ ಕನ್ನಡ ಹೆಚ್ಚಾಗಿ ಕೇಳಿ ಬರುತ್ತಿದೆ ಎಂದರೆ ಅದಕ್ಕೆ ಶೋಭಾ ಅವರೇ ಕಾರಣ. ಈ ಬಾರಿ ನಟಿ ಆಶಿಕಾ ರಂಗನಾಥ್‌ ಕೂಡ ಮುಖ್ಯ ಅತಿಥಿಯಾಗಿ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊ ಕೂಡ ಸಖತ್‌ ವೈರಲ್‌ ಆಗಿದೆ. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಕನ್ನಡತಿ ಆಶಿಕಾ ರಂಗನಾಥ್ ಅವರು ಈಗ ನಾಗಾರ್ಜುನ ಅಭಿನಯದ ‘ನಾ ಸಾಮಿರಂಗ’ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.

‘ಬಿಗ್ ಬಾಸ್’ ವೇದಿಕೆ ಮೇಲೆ ಆಶಿಕಾ ರಂಗನಾಥ್ ಅವರನ್ನು ಕಂಡ ಸ್ಪರ್ಧಿಗಳು ಖುಷಿಯಾದರು. ನಾಗಾರ್ಜುನ ಅವರು, ‘ನಮ್ಮ ನಾಯಕಿಗೆ ಎಷ್ಟು ಮಾರ್ಕ್ಸ್ ಕೊಡುತ್ತೀರಿ’ ಎಂದು ಸ್ಪರ್ಧಿ ಅಮರ್‌ಗೆ ಕೇಳಿದರು. ಅದಕ್ಕೆ ಅವರು, ‘100ಕ್ಕೆ 1000 ಮಾರ್ಕ್ಸ್‌ ಕೊಡುತ್ತೇನೆ ಸರ್‌’ ಎಂದು ಹೇಳಿದರು. ಮತ್ತೆಲ್ಲ ಸ್ಪರ್ಧಿಗಳು ಆಶಿಕಾ ಅವರನ್ನು ಕಂಡು ಹಾಡಿ ಹೊಗಳಿದ್ದಾರೆ. ಒಬ್ಬ ಸ್ಪರ್ಧಿ ʻʻಆಶಿಕಾ ಅವರು ನೋಡಲು ತೆಲುಗು ಹುಡುಗಿ ತರ ಇದ್ದಾರೆʼʼಎಂದರು. ನಾಗಾರ್ಜುನ್‌ ಕೂಡ ಶೋಭಾ ಜತೆ ಮಾತನಾಡಿಸುತ್ತೇನೆ ಎಂದು ಮಾತನಾಡಿದರು. ಆಗ ಆಶಿಕಾ ಮತ್ತು ಶೋಭಾ ಅವರು ಕನ್ನಡದಲ್ಲಿಯೇ ಮಾತನಾಡಿದರು.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

ಆಗ ಶೋಭಾ ಅವರು ʻʻಆಶಿಕಾ ತೆಲುಗು ಹುಡುಗಿ ತರವೇ ಇದ್ದಾರೆ ಹಾಗೂ ಕನ್ನಡ ಹುಡುಗಿಯಂತೆಯೂ ಇದ್ದಾರೆʼʼಎಂದರು. ವಿಶೇಷವೆಂದರೆ ಟಾಪ್ 5 ಸ್ಪರ್ಧಿಗಳಲ್ಲಿ ಶೋಭಾ ಶೆಟ್ಟಿ ಕೂಡ ಒಬ್ಬರು. ಶೋಭಾ ಶೆಟ್ಟಿ ಅವರು ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರ ತಂಗಿ ತನು ಪಾತ್ರವನ್ನು ನಿಭಾಯಿಸುತ್ತಿದ್ದರು.

‘ನಾ ಸಾಮಿ ರಂಗ’ ಚಿತ್ರವನ್ನು ವಿಜಯ್ ಬಿನ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಚಿತ್ತುರಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ಅವರನ್ನು ನಾಯಕಿಯನ್ನಾಗಿ ಮಾಡಿಕೊಳ್ಳುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ.ಸಾಕಷ್ಟು ಸಿನಿಮಾಗಳಲ್ಲಿ ನಟಿ ತೊಡಗಿಗೊಂಡಿದ್ದು ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದನ್ನು ಹೊರತುಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸಿದ್ದಾರೆ. ಶರಣ್​ ಜತೆ ಅವರು ನಟಿಸಿದ ‘ರ‍್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತೈತಿ..’ ಹಾಡಿಗೆ ಸಾಕಷ್ಟು ಖ್ಯಾತಿ ಗಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ʻಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ: ಪೊಲೀಸರಿಂದ ಅನುಮತಿ ಸಿಕ್ತಾ?

Actor Darshan: ಉಮಾಪತಿ ಶ್ರೀನಿವಾಸ್ ಬೆಂಬಲಿಗರು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಗಲಾಟೆ ನಡೆದರೂ ನಡೆಯಬಹುದು. ಈ ಸಾಧ್ಯತೆಯೂ ಇದೆ. ಆದರೇ ಇದೀಗ ಈ ದರ್ಶನ್ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಿಲ್ಲ ಎನ್ನಲಾಗಿದೆ.

VISTARANEWS.COM


on

Massive rally in the name of Onti Salaga darshan
Koo

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಹಾಗೂ ಉಮಾಪತಿ ಶ್ರೀನಿವಾಸ್ ಅವರ ನಡುವಿನ ಜಿದ್ದಾಜಿದ್ದಿ ಇನ್ನೂ ಮುಗಿದಿಲ್ಲ. ಈಗಾಗಲೇ ದರ್ಶನ್‌ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ‘ಕಾಟೇರ’ ಸಿನಿಮಾದ 50 ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ‘ತಗಡು’ ಎಂದು ಪದ ಬಳಕೆ ಮಾಡಿ ಉಮಾಪತಿಯನ್ನು ನಿಂದಿಸಿದ್ದರು. ಇದರ ಬೆನ್ನಲ್ಲೆ ಇದೀಗ ನಟ ದರ್ಶನ್ ಇಂದು (ಫೆ. 26) ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ್‍ಯಾಲಿ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಉಮಾಪತಿ ಶ್ರೀನಿವಾಸ್ ಬೆಂಬಲಿಗರು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಗಲಾಟೆ ನಡೆದರೂ ನಡೆಯಬಹುದು. ಈ ಸಾಧ್ಯತೆಯೂ ಇದೆ. ಆದರೇ ಇದೀಗ ಈ ದರ್ಶನ್ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಿಲ್ಲ ಎನ್ನಲಾಗಿದೆ.

ಮೂಲಗಳ ಪ್ರಕಾರದ ನಗರದಲ್ಲಿ ರ್‍ಯಾಲಿಗೆ ಅವಕಾಶ ಇಲ್ಲ. ಫ್ರೀಡಂ ಪಾರ್ಕ್ ಬಳಿ ಬೇಕಾದ್ರೆ ರ್‍ಯಾಲಿ ಮಾಡಬಹುದು ಎಂದು ಪೊಲೀಸರು ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ದರ್ಶನ್ ಈ ಬೈಕ್ ರ್‍ಯಾಲಿ ಮಾಡುತ್ತಿದ್ದಾರೆ, ಇದು ಬೇಕು ಬೇಕು ಎಂದೇ ದರ್ಶನ್‌ ಹೀಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ʻಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸುತ್ತಿದ್ದಾರೆ.

ಉಮಾಪತಿ ಶ್ರೀನಿವಾಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಆದರೆ ಉಮಾಪತಿ ಶ್ರೀನಿವಾಸ್ ಆ ಚುನಾವಣೆಯಲ್ಲಿ ಸೋತಿದ್ದರು.

ಈಗ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ. ಹೀಗಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ್‍ಯಾಲಿ ನಡೆಸಲಿದ್ದಾರೆ. ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ಈ ಬೈಕ್ ರ್‍ಯಾಲಿ ಮಾಡುತ್ತಿದ್ದಾರೆ ದರ್ಶನ್ ಎನ್ನಲಾಗುತ್ತಿದೆ.

ಇದನ್ನೂ ಓದಿ: Actor Darshan: ಉಮಾಪತಿ ಶ್ರೀನಿವಾಸ್ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದ ದರ್ಶನ್‌: ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬೈಕ್ ರ್‍ಯಾಲಿ!

ದರ್ಶನ್‌ ಉಮಾಪತಿಗೆ ವಾರ್ನಿಂಗ್‌ ನೀಡಿದ್ದೇನು?

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ? ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

Continue Reading

ಸ್ಯಾಂಡಲ್ ವುಡ್

Bigg Boss Shashi: ʻಮೆಹಬೂಬಾʼ ಟೀಸರ್ ರಿಲೀಸ್ ವೇಳೆ ಕಣ್ಣೀರಿಟ್ಟ ಮಾಡರ್ನ್‌ ರೈತ ಶಶಿ

Bigg Boss Shashi: ಕನ್ನಡ ಬಿಗ್ ಬಾಸ್ ವಿನ್ನರ್ ಗಳಾದ ಚಂದನ್ ಶೆಟ್ಟಿ, ಅಕುಲ್ ಬಾಲಾಜಿ, ಶೈನ್ ಶೆಟ್ಟಿ, ರೂಪೇಶ್ ಶೆಟ್ಟಿ, ಮಂಜು ಪಾವಗಡ, ವಿಜಯ್ ರಾಘವೇಂದ್ರ, ಪ್ರಥಮ್ ಹಾಗೂ ಕಾರ್ತಿಕ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಹಬೂಬಾ ಟೀಸರ್ ಹಂಚಿಕೊಳ್ಳುವ ಮೂಲಕ ಶಶಿ ಹೊಸ ಪಯಣಕ್ಕೆ ಸಾಥ್ ಕೊಟ್ಟಿದ್ದಾರೆ.

VISTARANEWS.COM


on

Bigg Boss Shashi Cryed In About Mehabooba Movie
Koo

ಬೆಂಗಳೂರು: ‘ಮಾರ್ಡನ್ ರೈತ’ ಶಶಿ ಹೊಸ ಪ್ರಯತ್ನ ʻಮೆಹಬೂಬಾʼ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಮಾರ್ಚ್ 15ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಪೋಸ್ಟರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ʻಮೆಹಬೂಬಾʼ ಟೀಸರ್ ಅನಾವರಣಗೊಂಡಿದೆ. ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. `ಬಿಗ್​ಬಾಸ್ ಕನ್ನಡ ಸೀಸನ್ 10′ ವಿನ್ನರ್ ಕಾರ್ತಿಕ್ ಮಹೇಶ್, ಸ್ಪರ್ಧಿಗಳಾದ ರಕ್ಷಕ್ ಬುಲೆಟ್, ಪವಿ ಪೂವಪ್ಪ ಮೆಹಬೂಬಾ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನೂ, ಕನ್ನಡ ಬಿಗ್ ಬಾಸ್ ವಿನ್ನರ್ ಗಳಾದ ಚಂದನ್ ಶೆಟ್ಟಿ, ಅಕುಲ್ ಬಾಲಾಜಿ, ಶೈನ್ ಶೆಟ್ಟಿ, ರೂಪೇಶ್ ಶೆಟ್ಟಿ, ಮಂಜು ಪಾವಗಡ, ವಿಜಯ್ ರಾಘವೇಂದ್ರ, ಪ್ರಥಮ್ ಹಾಗೂ ಕಾರ್ತಿಕ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಹಬೂಬಾ ಟೀಸರ್ ಹಂಚಿಕೊಳ್ಳುವ ಮೂಲಕ ಶಶಿ ಹೊಸ ಪಯಣಕ್ಕೆ ಸಾಥ್ ಕೊಟ್ಟಿದ್ದಾರೆ.

ಬಿಗ್ ಬಾಸ್ ವಿನ್ನರ್ ಶಶಿ ಅವರು ಟೀಸರ್ ಇವೆಂಟ್‌ನಲ್ಲಿ ಕಣ್ಣೀರು ಹಾಕಿದ್ದಾರೆ. ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ‌ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್ ಬಾಸ್ ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂದರು ಎಂದಿದ್ದಾರೆ. ರೈತ ಅಂತಿಯಾ, ಈ‌ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು. ನಾನು ಯಾವತ್ತೂ ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್ ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ ಎಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಾನು ನಿದ್ದೆ ಮಾಡ್ತಿಲ್ಲ ಎಂದಿದ್ದಾರೆ. ನಾನು ಇಡೀ ತಂಡದ ಜತೆ ಕಿತ್ತಾಡಿದ್ದೀನಿ ಎಂದು ಶಶಿ ಕಣ್ಣೀರಿಟ್ಟರು. ಮೆಹಬೂಬಾ ರಾಮಮಂದಿರ ಬಾಬ್ರಿ ಮಸೀದಿ ಕತೆಯಲ್ಲ. ಕಾರ್ತಿಕ್ ಗೌಡ ನಸ್ರಿಯಾ ಪ್ರೀತಿಯ ಕಥೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Shashi: `ಬಿಗ್‌ ಬಾಸ್‌’ ಖ್ಯಾತಿಯ ಶಶಿಗೆ ಕೃಷಿ ಸಚಿವರಿಂದ ಸಾಥ್‌; ‘ಮೆಹಬೂಬಾ’ ಪೋಸ್ಟರ್ ಔಟ್‌!

ವಿಶ್ವ ಮಾನವ ಸಂದೇಶದೊಂದಿಗೆ ಮಾತು ಪ್ರಾರಂಭಿಸಿದ ನಟಿ ಪಾವನಾ ಗೌಡ, ʻಟೀಸರ್ ರಿಲೀಸ್ ಆಗಿದೆ. ಚಿತ್ರದ ಕಿರುಪರಿಚಯ ಇದು. ಟ್ರೈಲರ್‌ ಬಾಕಿ ಇದೆ. ಇದಕ್ಕೆ ತುಂಬಾ ಕಾಣಿಸಿಕೊಳ್ಳದ ಶಕ್ತಿಗಳು ಕೆಲಸ ಮಾಡಿವೆ. ನನಗೆ ನನ್ನ ತಂಡದ ಬಗ್ಗೆ ಹೆಮ್ಮೆ ಇದೆʼ ಎಂದರು.

ನಿರ್ದೇಶಕರಾದ ಅನೂಪ್ ಆಂಟೋನಿ ಮಾತನಾಡಿ, ʻʻಮೆಹಬೂಬಾ ನಮ್ಮ ಇಡೀ ತಂಡಕ್ಕೆ ಒಳ್ಳೆ ಜರ್ನಿ. ಹೀರೋ ಆಗಿ ಶಶಿ ಅವರು ಲಾಂಚ್ ಆಗುತ್ತಿದ್ದಾರೆ. ಅದು ಅಲ್ಲದೇ ಪ್ರೊಡ್ಯೂಸರ್ ಕೂಡ ಆಗಿದ್ದಾರೆ. ಡೈರೆಕ್ಟರ್ ಆಗಿ ಹೊಸಬರ ಜೊತೆ ಕೆಲಸ ಮಾಡಲು ಟೆನ್ಷನ್ ಇರುತ್ತದೆ. ಬೇಕಾಗಿರುವ ಎಕ್ಸ್ ಪ್ರೆಷನ್ ಆಗಲಿ, ಆಕ್ಟಿಂಗ್ ಆಗಲಿ, ಮ್ಯಾನರಿಸಂ ಆಗ್ಲಿ ಬರುತ್ತೋ ಇಲ್ಲವೋ ಅಂತಾ. ಆದರೆ ಮೊದಲ ದಿನವೇ ನನ್ನ ಇಂಪ್ರೆಸ್ ಮಾಡಿದರು. ಇದು ಅವರ ಮೊದಲ ಸಿನಿಮಾ ಎಂದು ಹೇಳುವುದಿಕ್ಕೆ ಆಗಲ್ಲ‌. ಈಗಾಗಲೇ ಪಾವನ ತಾವು ಎಂಥ ನಟಿ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ತುಂಬಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ತುಂಬಿರುವ ಚಿತ್ರ. ಮಾರ್ಚ್ 15 ಮೆಹಬೂಬಾ ಬಿಡುಗಡೆಯಾಗುತ್ತಿದೆʼʼ ಎಂದರು.

ಶಶಿ ಅವರು ‘ಕನ್ನಡ ಬಿಗ್ ಬಾಸ್ ಸೀಸನ್ 6’ ವಿನ್ನರ್​ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಕೃಷಿ ಜೊತೆ ನಟನೆ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ಮೆಹಬೂಬಾ ಸಿನಿಮಾದ ಮೂಲಕ ಹೀರೋ ಆಗಿ ಅವರು ಚಂದನವನಕ್ಕೆ ಕಾಲಿಡುತ್ತಿದ್ದಾರೆ. ‘ದಕ್ಷ್ ಎಂಟರ್​ಟೇನ್ಮೆಂಟ್ಸ್​’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ‘ಮೆಹಬೂಬಾ’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಆಂಟೋನಿ ಅವರು ನಿರ್ದೇಶನ ಮಾಡಿದ್ದಾರೆ. ಮಾಡ್ರನ್ ರೈತನಿಂದ ಶಶಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಮೆಹಬೂಬಾ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ಪಾವನಾ ಗೌಡ ಅಭಿನಯಿಸಿದ್ದಾರೆ.

ಮ್ಯಾಥ್ಯೂಸ್‌ ಮನು ಅವರು ‘ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್​ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ ಎಂಬ ಕಾರಣದಿಂದಲೂ ಕೌತುಕ ಹೆಚ್ಚಿದೆ. ಮಾರ್ಚ್ 15ಕ್ಕೆ ಶಶಿ‌ ತಮ್ಮ ಕನಸಿನ ಚಿತ್ರವನ್ನ ನಿಮ್ಮ ಮಡಿಲಿಗೆ ಹಾಕುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Dhanya Ramkumar: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್​ ಪೋಸ್ಟರ್ ಔಟ್‌!

Dhanya Ramkumar: ಮಧು ತುಂಬೆಕೆರೆ ಅವರು ಸಂಕಲನ ಮಾಡಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಸ್ಯಾಂಡಿ ಅಡ್ಡಂಕಿ ಅವರು ಸಂಗೀತ ನೀಡಿದ್ದಾರೆ. ಎ2 ಮ್ಯೂಸಿಕ್​’ ಮೂಲಕ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿದೆ.

VISTARANEWS.COM


on

Dhanya Ramkumar hide and seek r motion poster is out
Koo

ಬೆಂಗಳೂರು: ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿದೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಅನೂಪ್​ ರೇವಣ್ಣ (Anoop Revanna) ಅವರು ಹೀರೋ ಆಗಿ ನಟಿಸಿದ್ದಾರೆ. ಧನ್ಯಾ ರಾಮ್​ಕುಮಾರ್ (Dhanya Ramkumar) ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾರ್ಚ್​ 15ರಂದು ‘ಹೈಡ್​ ಆ್ಯಂಡ್​ ಸೀಕ್​’ ಬಿಡುಗಡೆ ಆಗಲಿದೆ.

ಈ ಸಿನಿಮಾಗೆ ಪುನೀತ್​ ನಾಗರಾಜು ನಿರ್ದೇಶನ ಮಾಡಿದ್ದಾರೆ. ವಸಂತ್​ ಎಂ. ರಾವ್​ ಕುಲಕರ್ಣಿ, ಪುನೀತ್​ ನಾಗರಾಜು​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಸುನೇರಿ ಆರ್ಟ್​ ಕ್ರಿಯೇಷನ್ಸ್​’ ಬ್ಯಾನರ್​ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ಪಿಜೋ ಪಿ. ಜಾನ್​ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮಧು ತುಂಬೆಕೆರೆ ಅವರು ಸಂಕಲನ ಮಾಡಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಸ್ಯಾಂಡಿ ಅಡ್ಡಂಕಿ ಅವರು ಸಂಗೀತ ನೀಡಿದ್ದಾರೆ.

‘ಎ2 ಮ್ಯೂಸಿಕ್​’ ಮೂಲಕ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿದೆ. ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಜೊತೆ ಈ ಸಿನಿಮಾದಲ್ಲಿ ಮೈತ್ರಿ ಜಗ್ಗಿ, ಸೂರಜ್​, ಬಲರಾಜ್​ ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್​ ನಟರಂಗ, ಅರವಿಂದ್​ ರಾವ್​ ಮುಂತಾದವರು ನಟಿಸಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಅನೂಪ್​ ರೇವಣ್ಣ ಅವರು ಕಿಡ್ನಾಪರ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: Dhanya Ramkumar: ಅಣ್ಣಾವ್ರ ಮುದ್ದಿನ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಕೊರೊನಾ

ಡಾ. ರಾಜ್​ಕುಮಾರ್​ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ಈ ಸಿನಿಮಾದಲ್ಲಿ ಉದ್ಯಮಿಯ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆಯಲ್ಲಿ ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳು ಇವೆ. ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯಕ್ರಗಳು ಭರದಿಂದ ಸಾಗುತ್ತಿದೆ.

Continue Reading

ಸಿನಿಮಾ

Actor Darshan: ಉಮಾಪತಿ ಶ್ರೀನಿವಾಸ್ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದ ದರ್ಶನ್‌: ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬೈಕ್ ರ್‍ಯಾಲಿ!

Actor Darshan: ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಆದರೆ ಉಮಾಪತಿ ಶ್ರೀನಿವಾಸ್ ಆ ಚುನಾವಣೆಯಲ್ಲಿ ಸೋತಿದ್ದರು.

VISTARANEWS.COM


on

Darshan Plans Bike Rally In Umapathy Srinivas
Koo

ಬೆಂಗಳೂರು: ದರ್ಶನ್‌ (Actor Darshan) ಹಾಗೂ ಉಮಾಪತಿ ನಡುವಿನ ವಾರ್‌ ದಿನದಿಂದ ದಿನಕ್ಕೆ ತಾರಕ್ಕೇರುತ್ತಲೇ ಇದೆ. ಈಗಾಗಲೇ ದರ್ಶನ್‌ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ‘ಕಾಟೇರ’ ಸಿನಿಮಾದ 50 ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ‘ತಗಡು’ ಎಂದು ಪದ ಬಳಕೆ ಮಾಡಿ ಉಮಾಪತಿಯನ್ನು ನಿಂದಿಸಿದ್ದರು. ಇದರ ಬೆನ್ನಲ್ಲೆ ಇದೀಗ ನಟ ದರ್ಶನ್, ಉಮಾಪತಿ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ್‍ಯಾಲಿ ನಡೆಸಲಿದ್ದಾರೆ.

ಉಮಾಪತಿ ಶ್ರೀನಿವಾಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಆದರೆ ಉಮಾಪತಿ ಶ್ರೀನಿವಾಸ್ ಆ ಚುನಾವಣೆಯಲ್ಲಿ ಸೋತಿದ್ದರು.

ಈಗ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ್‍ಯಾಲಿ ನಡೆಸಲಿದ್ದಾರೆ. ಈ ಬೈಕ್ ರ್‍ಯಾಲಿಗೆ ದರ್ಶನ್​ರ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ಈ ಬೈಕ್ ರ್‍ಯಾಲಿ ಮಾಡುತ್ತಿದ್ದಾರೆ ದರ್ಶನ್ ಎನ್ನಲಾಗುತ್ತಿದೆ. ಬೈಕ್ ರ್‍ಯಾಲಿ ನಡೆವ ದಿನವೂ ಸಹ ಉಮಾಪತಿ ಬೆಂಬಲಿಗರು ಹಾಗೂ ದರ್ಶನ್ ಬೆಂಬಲಿಗರ ನಡುವೆ ಜಗಳಗಳು ನಡೆಯುವ ಸಂಭವವೂ ಇದೆ ಎಂದು ವರದಿಯಾಗಿದೆ. ಬೊಮ್ಮನಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಎಚ್ ಎಸ್ ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ರ್‍ಯಾಲಿ ನಡೆದಿದೆ.

ಇದನ್ನೂ ಓದಿ: Actor Darshan: ದರ್ಶನ್, ಉಮಾಪತಿ ಫೈಟ್ ಬಗ್ಗೆ ಪ್ರಥಮ್ ವ್ಯಾಖ್ಯಾನ ಹೀಗಿದೆ!

ದರ್ಶನ್‌ ಉಮಾಪತಿಗೆ ವಾರ್ನಿಂಗ್‌ ನೀಡಿದ್ದೇನು?

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ? ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

Continue Reading
Advertisement
Drinking water supply to be disrupted in Bengaluru tomorrow
ಬೆಂಗಳೂರು2 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ14 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ16 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ24 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ27 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ46 mins ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Janardhana Reddy meets CM Siddaramaiah and DCM DK Shivakumar
ರಾಜಕೀಯ55 mins ago

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Namma Metro Farmer
ಬೆಂಗಳೂರು56 mins ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

Siddharth Bodke and Titeeksha Tawade to get married
ಸಿನಿಮಾ59 mins ago

Siddharth Bodke: ಮರಾಠಿ ನಟಿ ತಿತೀಕ್ಷಾ- ʻದೃಶ್ಯಂʼ ನಟ ಸಿದ್ಧಾರ್ಥ್ ಬೋಡ್ಕೆ ಜೋಡಿಯ ಅದ್ಧೂರಿ ಮದುವೆ ಇಂದು

Adani Group- Uber talks for electric passenger cars in India
ದೇಶ1 hour ago

Adani Group: ಎಲೆಕ್ಟ್ರಿಕ್‌ ಪ್ರಯಾಣಿಕ ಕಾರುಗಳಿಗಾಗಿ ಅದಾನಿ ಗ್ರೂಪ್‌- ಉಬರ್ ನಡುವೆ ಮಾತುಕತೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌