BBK SEASON 10: ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ; ಇವರ ಜಗಳ ಮುಗಿಯೋದೇ ಇಲ್ವಾ? - Vistara News

ಕಿರುತೆರೆ

BBK SEASON 10: ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ; ಇವರ ಜಗಳ ಮುಗಿಯೋದೇ ಇಲ್ವಾ?

BBK SEASON 10: ಕೆಲವು ದಿನಗಳ ಕಾಲ ಸ್ನೇಹಿತರಾಗಿದ್ದ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ಮತ್ತೆ ಕಿತ್ತಾಡಲು ಆರಂಭಿಸಿದ್ದಾರೆ.

VISTARANEWS.COM


on

big boss 5
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ರೋಚಕವಾಗಿ ಸಾಗಿದೆ. ಈಗಾಗಲೇ 50 ದಿನ ಪೂರೈಸಿ ಮುನ್ನಗ್ಗುತ್ತಿದೆ. ಈ ಮಧ್ಯೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಇಬ್ಬರು ಮನೆಯೊಳಗೆ ಪ್ರಶೇಶಿಸಿದ್ದಾರೆ. ಅಚ್ಚರಿ ಎಂದರೆ ಶೋ ಆರಂಭವಾದಾಗಿನಿಂದಲೂ ಕಿತ್ತಾಡುತ್ತಲೇ ಇರುವ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವಿನ ಜಗಳ ನಿಲ್ಲುವ ಲಕ್ಷಣವೇ ಕಂಡು ಬರುತ್ತಿಲ್ಲ.

ಮತ್ತೆ ಹತ್ತಿಕೊಂಡ ಬೆಂಕಿ

ಬಿಗ್‌ ಬಾಸ್‌ನ ಹೊಸ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ವಿನಯ್‌ ಮತ್ತು ಸಂಗೀತಾ ನಡುವೆ ವಾಗ್ವಾದ ನಡೆಯುತ್ತಿರುವುದು ಕಂಡು ಬಂದಿದೆ. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯತನ ಇದೆ ಎಂಬುದನ್ನು ಹೇಳಲು ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಆದೇಶಿಸಿದ್ದರು. ಈ ವೇಳೆ ವಿನಯ್‌-ಸಂಗೀತಾ ನಡುವೆ ಕಿಡಿ ಹೊತ್ತಿಕೊಂಡಿದೆ. ʼʼವಿನಯ್ ಕೆಟ್ಟ ಗುಣಗಳ ಬೇರುʼʼ ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಕೂಡ ಮಾಡಿದ್ದಾರೆ. ಕೊನೆಗೆ ಸಂಗೀತಾಗೆ ʼʼಶಟ್​ ಅಪ್ʼʼ​ ಎಂದು ವಿನಯ್‌ ಬೈದಿದ್ದಾರೆ. ಸಂಗೀತಾ ಕೂಡ ಸುಮ್ಮನಿರದೆ, ʼʼಮೈಂಡ್ ಯುವರ್ ಲ್ಯಾಂಗ್ವೇಜ್ʼʼ ಎಂದು ಮಾರುತ್ತರ ಕೊಟ್ಟಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ.

ಕೆಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ವಿನಯ್‌ ಗೌಡ ಮತ್ತು ಸಂಗೀತ ಜತೆಯಾಗಿ ನಟಿದ್ದರು. ಆದರೆ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿಯಾದ ಬಳಿಕ ಅವರು ಕಿತ್ತಾಡುತ್ತಲೇ ಸುದ್ದಿಯಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ವಾಗ್ವಾದ, ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಅವರಿಬ್ಬರು ಸ್ನೇಹಿತರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ದೀಪಾವಳಿ ಸಮಯದಲ್ಲಿ ಸಂಗೀತಾ ಶೃಂಗೇರಿ ರಾಕೆಟ್ ಪಟಾಕಿಯನ್ನು ವಿನಯ್‌ಗೆ ನೀಡಿ, ‘ʼರಾಕೆಟ್‌ನಂತೆಯೇ ನೀವು ಎತ್ತರಕ್ಕೆ ಹೋಗಿ, ನಿಮ್ಮ ಸಿನಿಮಾಗಳು ಹಿಟ್ ಆಗಲಿ, ಯಶಸ್ಸು ಸಿಗಲಿ’ʼ ಎಂದೆಲ್ಲ ಹಾರೈಸಿದ್ದರು. ಇತ್ತ ವಿನಯ್‌ ಕೂಡ ಸಂಗೀತಾ ಅವರನ್ನು ಹೊಗಳಿದ್ದರು. ಸಂಗೀತಾ ಚೆಂದವಾಗಿ ಸೀರೆಯುಟ್ಟು ರೆಡಿಯಾದಾಗ ವಿನಯ್‌ ಮೆಚ್ಚುಗೆ ಸೂಚಿಸಿದ್ದರು. ವಿನಯ್‌ ಅವರ ಈ ಹೊಗಳಿಕೆ ಮಾತು ಕೇಳಿ ನಮ್ರತಾ ಕೂಡ ಬಾಯಿ ಮೇಲೆ ಬೆರಳು ಇಟ್ಟಿದ್ದರು. ಈ ಬೆಳವಣಿಗೆ ಸುದೀಪ್‌ ಅವರಿಗೂ ಅಚ್ಚರಿ ತಂದಿತ್ತು. ಆದರೆ ಈ ಆತ್ಮೀಯತೆ ಹೆಚ್ಚು ದಿನ ಉಳಿಯಲಿಲ್ಲ.

ಇದನ್ನೂ ಓದಿ: BBK SEASON 10: ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ!

ಅವರ ಸ್ನೇಹ ಕೆಲವೇ ದಿನಗಳಲ್ಲಿ ಮುರಿದು ಬಿದ್ದು, ಮತ್ತೆ ವಿನಯ್‌-ಸಂಗೀತಾ ಮಧ್ಯೆ ವಾಗ್ವಾದ ಆರಂಭವಾಗಿತ್ತು. ದುರಹಂಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ನೀಡುವ ಟಾಸ್ಕ್‌ನಲ್ಲಿ ಇದು ತಾರಕಕ್ಕೇರಿತ್ತು. ʼʼಎಲುಬಿಲ್ಲದ ನಾಲಗೆ, ಯಾರ ಬಗ್ಗೆ ಏನಾದರೂ ಮಾತನಾಡುತ್ತಾನೆʼʼ ಎಂದು ವಿನಯ್ ಬಗ್ಗೆ ಸಂಗೀತಾ ಹೇಳಿದರೆ, ʼʼಸಂಗೀತಾ ಜತೆ ಫ್ರೆಂಡ್​ಶಿಪ್‌ ಮಾಡಿದರೆ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಬೇಕು ಅವರು ನಿರೀಕ್ಷೆ ಮಾಡುತ್ತಾರೆʼʼ ಎಂದು ವಿನಯ್‌ ಆರೋಪಿಸಿದ್ದರು. ಹೀಗಾಗಿ ಇಬ್ಬರ ಮಧ್ಯೆ ದ್ವೇಷ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಮತ್ತೆ ಇಬ್ಬರು ಕಿತ್ತಾಡಿಕೊಂಡಿದ್ದು, ಇಬ್ಬರ ಜಗಳ ಮುಗಿಯುವ ಲಕ್ಷಣವೇ ಕಾಣಿಸುತ್ತಿಲ್ಲ ಎಂದು ನೋಡುಗರು ಹೇಳುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

TPL Seson 3: ಟಿಪಿಎಲ್ ಸೀಸನ್-3ಕ್ಕೆ ತೆರೆ; ಕಿರುತೆರೆ ಕ್ರಿಕೆಟ್ ಲೀಗ್‌ನ ಚಾಂಪಿಯನ್‌ ಪಟ್ಟ ಯಾರಿಗೆ?

TPL Seson 3: ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ಮುಕ್ತಾಯಗೊಂಡಿದೆ. ದೀಕ್ಷಿತ್ ಶೆಟ್ಟಿ ನಾಯಕತ್ವದ ರಾಸು ವಾರಿಯರ್ಸ್ ಟ್ರೋಫಿಗೆ ಮುತ್ತಿಟ್ಟಿದೆ. ಅಲಕಾ ನಂದ ಶ್ರೀನಿವಾಸ್ ನೇತೃತ್ವದ ಬಯೋಟಾಪ್ ಲೈಫ್ ಸೇವಿಯರ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

VISTARANEWS.COM


on

tpl
Koo

ಬೆಂಗಳೂರು: ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 (TPL Seson 3) ಮುಕ್ತಾಯಗೊಂಡಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ. ಮೈದಾನದಲ್ಲಿ ಫೆಬ್ರವರಿ 28ರಿಂದ ಟಿಪಿಎಲ್ ಪಂದ್ಯ ಪ್ರಾರಂಭವಾಗಿತ್ತು. ಮಾರ್ಚ್ 3ರಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ದೀಕ್ಷಿತ್ ಶೆಟ್ಟಿ ನಾಯಕತ್ವದ ರಾಸು ವಾರಿಯರ್ಸ್ ಟ್ರೋಫಿಗೆ ಮುತ್ತಿಟ್ಟಿದೆ. ಅಲಕಾ ನಂದ ಶ್ರೀನಿವಾಸ್ ನೇತೃತ್ವದ ಬಯೋಟಾಪ್ ಲೈಫ್ ಸೇವಿಯರ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿರುವ ಟಿಪಿಎಲ್ ಪಂದ್ಯದಲ್ಲಿ ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್ಸ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೇವಿಯರ್ಸ್, ಎವಿಆರ್‌ ಟಸ್ಕರ್ಸ್, ರಾಸು ವಾರಿಯರ್ಸ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸಿದ್ದು, 170 ಸೆಲೆಬ್ರಿಟಿಗಳು ಈ ಸಾಥ್ ಕೊಟ್ಟಿದ್ದರು.

ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿ.ಎಂ. ಗೌಡ ನಾಯಕ. ರಂಜಿತ್ ಕುಮಾರ್ ಎಸ್. ಓನರ್, ಜಿಎಲ್ಆರ್ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್. ಓನರ್, ಇನ್ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, ಎವಿಆರ್ ಟಸ್ಕರ್ಸ್‌ಗೆ ಚೇತನ್ ಸೂರ್ಯ ನಾಯಕ – ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೇವಿಯರ್ಸ್ ಅಲಕಾ ನಂದ ಶ್ರೀನಿವಾಸ್ ನಾಯಕ-ವಿಶ್ವನಾಥ್, ಪ್ರಸನ್ನ ಓನರ್, ಕೆಕೆಆರ್ ಮೀಡಿಯಾ ಹೌಸ್ ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ಸ್ ವಿಹಾನ್ ನಾಯಕ-ಕುಶಾಲ್ ಗೌಡ ಓನರ್‌.

ಇದನ್ನೂ ಓದಿ: Vaibhav Gupta: ಇಂಡಿಯನ್ ಐಡಲ್‌ ಸೀಸನ್ 14 ಗೆದ್ದ ವೈಭವ್ ಗುಪ್ತಾ!

ತುಪ್ಪದ ಬೆಡಗಿ, ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಟಿಪಿಎಲ್‌ ರಾಯಭಾರಿಯಾಗಿದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3ರಲ್ಲಿ ಆಟವಾಡಿದ್ದು ವಿಶೇಷವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

Lakshmi Tiffin Room: ಟೆನ್ನಿಸ್ ಕೃಷ್ಣ ಮತ್ತೆ ಕಿರುತೆರೆಗೆ ಎಂಟ್ರಿ: ಬರ್ತಿದೆ ವರಲಕ್ಷ್ಮಿಯ ಕಥೆ!

Lakshmi Tiffin Room: ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

VISTARANEWS.COM


on

Lakshmi Tiffin Room
Koo

ಬೆಂಗಳೂರು: ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು (Lakshmi Tiffin Room) ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ “ಲಕ್ಷ್ಮಿ ಟಿಫನ್ ರೂಮ್” ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿಯನ್ನು ಹೊಂದಿರುವವಳು. ಎಂತಹ ಸಂದರ್ಭದಲ್ಲೂ ಈಕೆ ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ. ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಹೆಣ್ಣೊಬ್ಬಳು ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಈ ಕಥೆಯಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ.

ಇದನ್ನೂ ಓದಿ: Blast in Bangalore: ಯುವಕನ ಪ್ರಾಣ ಉಳಿಸಿದ ತಾಯಿಯ ಕರೆ; ರಾಮೇಶ್ವರಂ ಕೆಫೆ ಸ್ಫೋಟದ ಕರಾಳ ಅನುಭವ ಬಿಚ್ಚಿಟ್ಟ ಟೆಕ್ಕಿ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವಿಶೇಷ ಪಾತ್ರದಲ್ಲಿ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ವರಲಕ್ಷ್ಮಿಯ ಕಥೆ “ಲಕ್ಷ್ಮಿ ಟಿಫನ್ ರೂಮ್” ಇದೇ ಸೋಮವಾರದಿಂದ ಸಂಜೆ 6.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Continue Reading

ಕಿರುತೆರೆ

Jhalak Dikhhla Jaa 11: `ಝಲಕ್ ದಿಖ್ಲಾ ಜಾ ಸೀಸನ್ 11′ ರ ವಿಜೇತರಾಗಿ ಹೊರಹೊಮ್ಮಿದ ಮನೀಷಾ ರಾಣಿ!

Jhalak Dikhhla Jaa 11: ವಿನ್ನರ್‌ಗೆ 30 ಲಕ್ಷ ರೂ, ನಗದು ಹಣ ಸಿಕ್ಕಿದೆ. ಮನೀಷಾ ರಾಣಿ ಅವರ ನೃತ್ಯ ಸಂಯೋಜಕ ಅಶುತೋಷ್ ಪವಾರ್ ಅವರೂ 10 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಹಿಂದಿಯ ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ಮೂಲಕ ಜನಪ್ರೀಯತೆ ಪಡೆದುಕೊಂಡಿದ್ದರು ಮನೀಷಾ ರಾಣಿ.

VISTARANEWS.COM


on

Manisha Rani wins Jhalak Dikhhla Jaa 11
Koo

ಹಿಂದಿಯ ಜನಪ್ರಿಯ ಡ್ಯಾನ್ಸ್‌ ರಿಯಾಲಿಟಿ ಶೋ `ಝಲಕ್ ದಿಖ್ಲಾ ಜಾ ಸೀಸನ್ 11′ ರಲ್ಲಿ (Jhalak Dikhhla Jaa 11) ಮನೀಷಾ ರಾಣಿ ವಿಜೇತರಾದರು. ವಿನ್ನರ್‌ಗೆ 30 ಲಕ್ಷ ರೂ, ನಗದು ಹಣ ಸಿಕ್ಕಿದೆ. ಮನೀಷಾ ರಾಣಿ ಅವರ ನೃತ್ಯ ಸಂಯೋಜಕ ಅಶುತೋಷ್ ಪವಾರ್ ಅವರೂ 10 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಹಿಂದಿಯ ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ಮೂಲಕ ಜನಪ್ರೀಯತೆ ಪಡೆದುಕೊಂಡಿದ್ದರು ಮನೀಷಾ ರಾಣಿ.

‘ರುಲಕ್‌ ದಿಖ್ಲಾ ಜಾ’ ಫೈನಾಲಿಸ್ಟ್‌ ಆಗಿ ಐವರು ಸ್ಪರ್ಧಿಗಳಿದ್ದರು. ಜನಪ್ರಿಯ ಟಿವಿ ನಟ ಶೋಯೆಬ್‌ ಇಬ್ರಾಹಿಂ, ಹಿನ್ನೆಲೆ ಗಾಯಕ ಮತ್ತು ʻಇಂಡಿಯನ್‌ ಐಡಲ್‌ 5′ ವಿಜೇತ ಶ್ರೀರಾಮ ಚಂದ್ರ, ನಟ ಅದ್ರಿಜಾ ಸಿನ್ಹಾ ಮತ್ತು ಕ್ರಿಕೆಟಿಗ ಯುಜ್ವೇಂದ್ರ ಚಹಾಲ್‌ ಅವರ ಪತ್ನಿ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ ಧನಶ್ರೀ ವರ್ಮಾ ಪೈನಲಿಸ್ಟ್‌ ಆಗಿದ್ದರು. ಕಾರ್ಯಕ್ರಮದಲ್ಲಿ ಮನೀಷಾ ರಾಣಿ ಮತ್ತು ಧನಶ್ರೀ ಇಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿದ್ದರು. ವೀಕ್ಷಕರ ವೋಟಿಂಗ್‌ ಆಧಾರದಲ್ಲಿ ಮನೀಷಾ ರಾಣಿ ಹೆಚ್ಚು ಮತವನ್ನು ಪಡೆದಿದ್ದಾರೆ.

ಮನೀಷಾ ರಾಣಿ ತಮ್ಮ ಈ ಪ್ರಯಾಣದ ಬಗ್ಗೆ ಮಾತನಾಡಿ “ನನ್ನ ಕನಸು ನನಸಾಗಿದೆ. ತೀರ್ಪುಗಾರರು ಮತ್ತು ಪ್ರೇಕ್ಷಕರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ. ಈ ಜರ್ನಿ ನನ್ನ ಜೀವನವನ್ನು ಬದಲಾಯಿಸಿದೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟು ನನ್ನನ್ನು ಸಾಬೀತುಪಡಿಸಲು ನಾನು ಎರಡು ಪಟ್ಟು ಹೆಚ್ಚು ಕೆಲಸ ಮಾಡಬೇಕಾಗಿತ್ತು. ಈಗ ನಿಜವಾಗಿಯೂ ಆಗಿದೆ. ಅಶುತೋಷ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಗೆಲುವು ನನ್ನದಲ್ಲ. ಇದು ನನ್ನನ್ನು ನಂಬಿದ ಪ್ರತಿಯೊಬ್ಬರಿಗೂ ಸೇರಿದೆʼʼ ಎಂದರು.

ಇದನ್ನೂ ಓದಿ: Mahesh Babu: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತ ಎಲ್ಲಿ? ಯಾವಾಗ?

ಸೋನಿ ಟೆಲಿವಿಷನ್‌ನಲ್ಲಿ ಶನಿವಾರ ಅಂತಿಮ ಸಂಚಿಕೆ `ಝಲಕ್ ದಿಖ್ಲಾ ಜಾ ಸೀಸನ್ 11′ ಪ್ರಸಾರವಾಯಿತು. ʻಮರ್ಡರ್ ಮುಬಾರಕ್ʼ ಚಿತ್ರದ ತಾರಾ ಬಳಗ ಸಾರಾ ಅಲಿ ಖಾನ್, ವಿಜಯ್ ವರ್ಮಾ ಮತ್ತು ಸಂಜಯ್ ಕಪೂರ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ʻಝಲಕ್ ದಿಖ್ಲಾ ಜಾ ಸೀಸನ್‌ 11ʼರಲ್ಲಿ ಫರಾ ಖಾನ್, ಅರ್ಷದ್ ವಾರ್ಸಿ ಮತ್ತು ಮಲೈಕಾ ಅರೋರಾ ತೀರ್ಪುಗಾರರಾಗಿದ್ದರು. ಗೌಹರ್ ಖಾನ್ ಮತ್ತು ರಿತ್ವಿಕ್ ಧಂಜನಿ ಕಾರ್ಯಕ್ರಮದ ನಿರೂಪಕರಾಗಿದ್ದರು.

Continue Reading

ಕಿರುತೆರೆ

Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ಖ್ಯಾತಿಯ ನಟಿ ನಯನ ನಾಗರಾಜ್

Nayana Nagaraj ಕುಟುಂಬಸ್ಥರ ಸಮ್ಮುಖದಲ್ಲಿ ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಉಂಗುರ ಬದಲಿಸಿಕೊಂಡಿದ್ದಾರೆ. ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ.

VISTARANEWS.COM


on

ginirama serial actress nayana nagaraj gets engaged to suhas shivanna
Koo

ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮಿಂಚಿದ ನಯನ ನಾಗರಾಜ್ (Nayana Nagaraj) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಉಂಗುರ ಬದಲಿಸಿಕೊಂಡ ಜೋಡಿ.

ದೀರ್ಘಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ನಯನ ನಾಗರಾಜ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Mahesh Babu: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತ ಎಲ್ಲಿ? ಯಾವಾಗ?

ಕುಟುಂಬಸ್ಥರ ಸಮ್ಮುಖದಲ್ಲಿ ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಉಂಗುರ ಬದಲಿಸಿಕೊಂಡಿದ್ದಾರೆ. ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ.

ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ .

Continue Reading
Advertisement
KPSC Secretary
ನೌಕರರ ಕಾರ್ನರ್2 mins ago

KPSC Transfer : ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಡಾ. ರಾಕೇಶ್‌ ಕುಮಾರ್‌ ನೇಮಕ; ಲತಾ ಕುಮಾರಿ ವರ್ಗ

Adi Shankara
ಪ್ರಮುಖ ಸುದ್ದಿ3 mins ago

ತತ್ತ್ವ ಶಂಕರ: ಶಂಕರ; ಲೋಕ ಕಲ್ಯಾಣಕ್ಕಾಗಿ ಬಂದ ಅವತಾರ ಪುರುಷ

Death Threat to Modi threatens to kill PM Nrendra Modi and Yogi Adityanath and Nasir Brother Khaja apologises
ಯಾದಗಿರಿ9 mins ago

Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್;‌ ಕ್ಷಮೆ ಕೋರಿದ ಸಹೋದರ ಖಾಜಾ

tpl
ಕಿರುತೆರೆ14 mins ago

TPL Seson 3: ಟಿಪಿಎಲ್ ಸೀಸನ್-3ಕ್ಕೆ ತೆರೆ; ಕಿರುತೆರೆ ಕ್ರಿಕೆಟ್ ಲೀಗ್‌ನ ಚಾಂಪಿಯನ್‌ ಪಟ್ಟ ಯಾರಿಗೆ?

Rohit Sharma
ಕ್ರೀಡೆ18 mins ago

IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

Neetha Ambani Jewel Love
ಫ್ಯಾಷನ್18 mins ago

Neetha Ambani Jewel Love: ನೀತಾ ಅಂಬಾನಿಯ ದುಬಾರಿ ಜ್ಯುವೆಲರಿ ಪ್ರೇಮ!

Rahul Gandhi
ದೇಶ19 mins ago

Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್‌ ಗಾಂಧಿ; ಹೀಗೆ ಹೇಳಿದ್ದೇಕೆ?

ram charan
ಸಿನಿಮಾ39 mins ago

Ram Charan: ದಕ್ಷಿಣ ಭಾರತದ ಸ್ಟಾರ್‌ ರಾಮ್‌ ಚರಣ್‌ಗೆ ಶಾರುಖ್‌ ಖಾನ್‌ನಿಂದ ಅವಮಾನ? ಫ್ಯಾನ್ಸ್‌ ಗರಂ ಆಗಿದ್ದೇಕೆ?

Man harasses Wife for giving birth to girl child
ಚಿಕ್ಕಬಳ್ಳಾಪುರ40 mins ago

Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ

Guarantee Survey HD Kumarawamy
ಬೆಂಗಳೂರು43 mins ago

Guarantee Survey : ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ; ಎಸಿ ಗಿರಾಕಿಗಳೆಲ್ಲಿ ಎಂದ HDK

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ24 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌