BBK Season 10: ಬಿಗ್‌ಬಾಸ್‌ ಮನೆಯಲ್ಲಿ ಉಳಿಯಲು ನಿರ್ಧರಿಸಿದ ವರ್ತೂರು; ತೀರ್ಮಾನ ಬದಲಾಗಿದ್ದು ಹೇಗೆ? - Vistara News

ಬಿಗ್ ಬಾಸ್

BBK Season 10: ಬಿಗ್‌ಬಾಸ್‌ ಮನೆಯಲ್ಲಿ ಉಳಿಯಲು ನಿರ್ಧರಿಸಿದ ವರ್ತೂರು; ತೀರ್ಮಾನ ಬದಲಾಗಿದ್ದು ಹೇಗೆ?

BBK Season 10: ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವ ನಿರ್ಧಾರದಿಂದ ವರ್ತೂರು ಸಂತೋಷ್‌ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಏನು? ಉತ್ತರ ಇಲ್ಲಿದೆ.

VISTARANEWS.COM


on

varthur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರೋಚಕತೆ ಮೂಡಿಸಿರುವ ಬಿಗ್‌ ಬಾಸ್‌ ಸೀಸನ್‌ 10(BBK Season 10)ರಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗುತ್ತಿವೆ. ಸ್ಪರ್ಧಿ ವರ್ತೂರು ಸಂತೋಷ್ (Varthur Santhosh)​ ಮನೆಯಿಂದ ಹೊರ ಹೋಗುವುದಾಗಿ ಪಟ್ಟು ಹಿಡಿದು ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಅವರು ಬಿಗ್‌ಬಾಸ್‌ ಮನೆಯಲ್ಲಿ ಇರುತ್ತಾರಾ ಅಥವಾ ಹೊರ ಹೋಗುತ್ತಾರಾ? ಎನ್ನುವ ವಿಚಾರ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿತ್ತು. ಇದೀಗ ಗೊಂದಲಕ್ಕೆ ತೆರೆ ಬಿದ್ದಿದ್ದು ಅವರು ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಕಾರಣ ಏನು?

ವರ್ತೂರು ಸಂತೋಷ್​ ಅವರ ತಾಯಿ ಬಿಗ್‌ ಬಾಸ್‌ ಮನೆಯೊಳಗೆ ಬಂದು ಮಗನ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಆಟವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಮೊದಲಿಗೆ ʼ‘ನನ್ನಿಂದ ಸಾಧ್ಯವಿಲ್ಲʼʼ ಎಂದು ಕಣ್ಣೀರು ಹಾಕಿದ ವರ್ತೂರು ಸಂತೋಷ್​ ಬಳಿಕ ತಾಯಿಯ ಮಾತನ್ನು ಒಪ್ಪಿಕೊಂಡಿದ್ದಾರೆ. ಸ್ಪರ್ಧೆಯಿಂದ ಅರ್ಧದಲ್ಲೇ ಹೊರ ಹೋಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ʼʼಈಗ ಗೇಮ್​ ಸ್ಟಾರ್ಟ್​ʼʼ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್ ಸಮ್ಮತಿ ನೀಡಿರುವುದು ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಸ್ಪಷ್ಟವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಮನೆಯೊಳಗೆ ಬಂದ ವರ್ತೂರು ಸಂತೋಷ್‌ ಅವರ ಅಮ್ಮ ಮಗನನ್ನು ಸಮಾಧಾನ ಪಡಿಸುತ್ತಿರುವುದು ಕೂಡ ಪ್ರೋಮೋದಲ್ಲಿ ಕಂಡು ಬಂದಿದೆ. ಈ ಮೂಲಕ ವರ್ತೂರು ಸಂತೋಷ್‌ ಸ್ಪರ್ಧೆ ಮುಂದುವರಿಸುತ್ತಾರಾ? ಎನ್ನುವ ಕೆಲವು ದಿನಗಳ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಕಣ್ಣೀರಿಟ್ಟಿದ್ದ ವರ್ತೂರ್‌ ಸಂತೋಷ್‌?

ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ವರ್ತೂರು ಸಂತೋಷ್‌ ಬಳಿಕ ಬಿಗ್‌ ಬಾಸ್‌ ಸ್ಪರ್ಧೆಗೆ ಮರಳಿ ಮತ್ತೆ ಆಟ ಪ್ರಾರಂಭಿಸಿದ್ದರು. ಕಳೆದ ವಾರ ವರ್ತೂರ್‌ ಸಂತೋಷ್‌ ನಾಮಿನೇಟ್‌ ಆಗಿದ್ದರೂ ಬರೋಬ್ಬರಿ 34,15,472 ಮತಗಳು ಬಂದು ಸೇಫ್‌ ಆಗಿದ್ದರು. ಆದರೆ ಅವರು ಕಿಚ್ಚ ಸುದೀಪ್‌ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದರು.

ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಘಟನೆ ನಡೆಯಿತು. ನಾನು ಆ ಗುಂಗಿನಿಂದ ಹೊರಗಡೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟ ಪಡುತ್ತೇನೆʼʼ ಎಂದು ಸಂತೋಷ್‌ ಹೇಳಿದ್ದರು. ಸುದೀಪ್‌ ಕೂಡ ಗರಂ ಆಗಿ ʻʻನಿಮಗೆ ಬಂದಿರುವಂತಹ ವೋಟ್ಸ್‌ 34,15,472. ಜನಗಳ ವಿರುದ್ಧ ನಾನು ಹೋಗೋದಕ್ಕೆ ಆಗಲ್ಲ. ಹೋಗೋದು ಇಲ್ಲ. ನನಗೆ ಸ್ವಲ್ಪ ನಿರಾಸೆಯಾಯ್ತುʼʼ ಎಂದು ವೇದಿಕೆಯಿಂದ ಹೊರಟೇ ಬಿಟ್ಟಿದ್ದರು. ಅಲ್ಲದೆ ವರ್ತೂರು ಅವರ ಈ ನಡೆಗೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದರು.

ಇದನ್ನೂ ಓದಿ: BBK Season 10: ವಿನಯ್‌ಗೆ ಸಂಗೀತಾಳಿಂದ ಬಂದ ದೀಪಾವಳಿ ಸ್ಪೆಷಲ್ ಏನು?

ಈ ಮಧ್ಯೆ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ. ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿ ವರ್ತೂರು ಅವರನ್ನು ಸಮಾಧಾನ ಪಡಿಸಿದ್ದರು. ʼʼನಾನು ನಿಮ್ಮ ಅಕ್ಕ ಆಗಿ ಹೇಳ್ತಿದ್ದೀನಿ. ನನ್ನಿಂದ ಆಗಲ್ಲ ಅನ್ನೋದನ್ನು ಮನಸಿಂದ ತೆಗೆದುಬಿಡಿʼʼ ಎಂದು ಪಕ್ಕ ಕೂತು ಧೈರ್ಯ ತುಂಬಿದ್ದರು. ಸದ್ಯ ವರ್ತೂರು ಸ್ಪರ್ಧೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದು ಅವರ ಮುಂದಿನ ಆಟ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

Sangeetha Sringeri: ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರು ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು.

VISTARANEWS.COM


on

Sangeetha Sringeri Wore Lioness Logo On Her Belt
Koo
ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ (Sangeetha Sringeri) ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಲವು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಅವರ ಡ್ರೆಸ್ ಹಾಗೂ ಬೆಲ್ಟ್ ಪ್ರಮುಖ ಹೈಲೈಟ್‌.

ಸಂಗೀತಾ ಶೃಂಗೇರಿ ಅವರ ಬೆಲ್ಟ್​ ಮೇಲೆ ಸಿಂಹಿಣಿಯ ಲೋಗೊ ಇದೆ. ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಅವರ ಫ್ಯಾನ್ಸ್‌ ಸಿಂಹಿಣಿ ಎಂದು ಬಿರುದು ಕೊಟ್ಟಿದ್ದರು. ಹೀಗಾಗಿ ಈ ರೀತಿ ಪೋಸ್‌ ಕೊಟ್ಟಿದ್ದಾರೆ ಸಂಗೀತಾ. ʼ

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ಸಂಗೀತಾ ಅವರು ಬಿಗ್‌ ಬಾಸ್‌ ಸೀಸನ್‌ನಲ್ಲಿ ಅತ್ಯಂತ ರಗಡ್‌ ಆಗಿ ಇರುತ್ತಿದ್ದರು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​. ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದರು.
Continue Reading

ಕಿರುತೆರೆ

Drone Prathap: ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

Drone Prathap: ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

VISTARANEWS.COM


on

Drone Prathap Special Gift For sangeetha sringeri Birthday
Koo

ಬಿಗ್​ ಬಾಸ್​ ಸೀಸನ್​ 10ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಮತ್ತು ಸಂಗೀತಾ ಶೃಂಗೇರಿ (sangeetha sringeri) ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಕ್ಕ-ತಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​.ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಗೀತಾ ಅವರು ಪ್ರತಾಪ್‌ ಅವರಿಗೆ ಆರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದಾರೆ. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Elvish Yadav: ಐಷಾರಾಮಿ ದುಬಾರಿ ಕಾರು ಖರೀದಿಸಿದ  ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌!

Elvish Yadav: ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

VISTARANEWS.COM


on

Elvish Yadav
Koo

ಬೆಂಗಳೂರು: ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಹೊಂದಿದ್ದಾರೆ. ಬಿಗ್‌ ಬಾಸ್‌ (Bigg Boss OTT 2) ಮೂಲಕವೇ ಜನಪ್ರೀಯತೆ ಪಡೆದ ಎಲ್ವಿಶ್ ಯಾದವ್ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ . ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿಯಲ್ಲಿ ಇವೆ. ಇದೀಗ ಎಲ್ವಿಶ್‌ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮರ್ಸಿಡಿಸ್‌ ಗ್ವ್ಯಾಗನ್‌ G350 D (Mercedes G Wagon) ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂ. ಮರ್ಸಿಡಿಸ್‌ ಗ್ವ್ಯಾಗನ್‌ G350 D ಬಾಕ್ಸಿ ಸ್ಟೈಲಿಂಗ್‌ನಿಂದ ಕೂಡಿದೆ.

ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ.

ಏನಿದು ಪ್ರಕರಣ?

ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿತ್ತು. ನಂತರ ಎಲ್ವಿಶ್‌ಗೆ ಗೌತಮ್ ಬುದ್ ನಗರ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನೀಡಿತು. ಮಾರ್ಚ್ 17 ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆ ಬಳಿಕ ಗುರುಗ್ರಾಮ್ ನ್ಯಾಯಾಲಯದಿಂದ ಜಾಮೀನು ಪಡೆದರು. ಎರಡು ಜಾಮೀನು ಪಡೆದ ಬಳಿಕ ಇದೀಗ ರಿಲ್ಯಾಕ್ಸ್‌ ಆಗಿದ್ದಾರೆ ಎಲ್ವಿಶ್‌.

ಇದನ್ನೂ ಓದಿ: Elvish Yadav: ಎರಡು ಜಾಮೀನು ಪಡೆದ ಬಳಿಕ ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ ಟೆಂಪಲ್ ರನ್‌!

ಜಾಮೀನು ಪಡೆದ ನಂತರ, ಎಲ್ವಿಶ್ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದರು, “ಒಂದು ವಾರ ನಿಸ್ಸಂದೇಹವಾಗಿ ಕಳೆದುಹೋಯಿತು. ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು. ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ. ನನ್ನನ್ನು ಬೆಂಬಲಿಸಿದವರೆಲ್ಲರೂ ನನ್ನನ್ನು ಬೆಂಬಲಿಸಲಿಲ್ಲ, ನನ್ನ ಬಗ್ಗೆ ಕೆಟ್ಟದಾಗಿ ಹಾಗೂ ಚೆನ್ನಾಗಿ ಮಾತನಾಡಿದವರೆಲ್ಲರಿಗೂ, ಧನ್ಯವಾದಗಳು. ನಾನು ಎಲ್ಲರಿಗೂ ಧನ್ಯವಾದ ಮಾತ್ರ ಹೇಳಬಲ್ಲೆ. ನಾನು ನನ್ನ ಕೆಲಸಕ್ಕೆ ಮತ್ತೆ ಮರಳಿದ್ದೇನೆʼʼ ಎಂದು ಹೇಳಿಕೊಂಡಿದ್ದರು.

Continue Reading

ಬಿಗ್ ಬಾಸ್

Tanisha Kuppanda: ತನಿಷಾಳ ಕನಸು ನನಸಾಗಿದೆ, ಹೊಸ ಬ್ಯುಸಿನೆಸ್‌ ಸಕ್ಸೆಸ್‌ ಆಗಲಿ ಎಂದು ಆಶಿಸಿದ ಕಾರ್ತಿಕ್‌!

Tanisha Kuppanda: ʻಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

VISTARANEWS.COM


on

Tanisha Kuppanda with karthik
Koo

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಅವರು ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್​ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಆದರೀಗ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ.

ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.

ಇದು ಮಾ. 29ರಂದು ಉದ್ಘಾಟನೆಯಾಗಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾಗೇ ಸೀಸನ್‌ 10ರ ವಿನ್ನರ್‌, ತನಿಷಾ ಅವರ ಬೆಸ್ಟ್‌ ಫ್ರೆಂಡ್‌ ಕಾರ್ತಿಕ್‌ ಮಹೇಶ್‌ ಸಹ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ!

ಕಾರ್ತಿಕ್‌ ಮಹೇಶ್‌ ಈ ಬಗ್ಗೆ ಇನ್‌ಸ್ಟಾ ಪೋಸ್ಟ್‌ ಮಾಡಿ ʻʻಬಿಗ್ ಬಾಸ್ ಮನೆಯಲ್ಲಿ ತನಿಶಾ ತನ್ನ ಕನಸಿನ ಬಗ್ಗೆ ಬಹಳ ಉತ್ಸುಕಳಾಗಿ ಹೇಳುತ್ತಿದ್ದಾಗ ಆಲಿಸಿದ್ದೆ. ಇಂದು ಗೆಳತಿ ತನಿಷಾಳ ಕನಸು ನನಸಾಗಿದೆ. ನಿನ್ನ ಮುಂದಿನ ಎಲ್ಲಾ ಕೆಲಸಗಳು ಯಶಸ್ವಿಯಾಗಲಿ ಎಂದು ಪ್ರೀತಿಯಿಂದ ಆಶಿಸುವೆʼʼಎಂದು ಬರೆದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

Continue Reading
Advertisement
Karnataka Weather
ಮಳೆ4 mins ago

Karnataka Weather: ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರಿ ಮಳೆ ಸಾಧ್ಯತೆ!

Viral News
ವೈರಲ್ ನ್ಯೂಸ್19 mins ago

Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

Rashmika Mandanna shares why she doesn’t speak English
ಸಿನಿಮಾ23 mins ago

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Bhavani Revanna
ಕರ್ನಾಟಕ29 mins ago

Bhavani Revanna: ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್;‌ ಮೇ 31 ಅಮ್ಮ-ಮಗನಿಗೆ ಬಿಗ್‌ ಡೇ!

Team India's T20 WC Jersey
ಕ್ರೀಡೆ30 mins ago

Team India’s T20 WC Jersey: ನೂತನ ಜೆರ್ಸಿಯಲ್ಲಿ ಕಂಗೊಳಿಸಿದ ರಿಷಭ್​ ಪಂತ್​; ಅಭಿಮಾನಿಗಳಿಂದಲೂ ಬೆಂಬಲ

Missing Case
ಕರ್ನಾಟಕ45 mins ago

Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್‌!

Prajwal Revanna Case
ಕರ್ನಾಟಕ51 mins ago

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Virat Kohli
ಕ್ರೀಡೆ1 hour ago

Virat Kohli: ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಕಠಿಣ ಅಭ್ಯಾಸ; ಮುಂಬೈನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್​ ಮಾಡುತ್ತಿರುವ ಕೊಹ್ಲಿ

PM Narendra Modi
ದೇಶ1 hour ago

PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ

Arvind Kejriwal
ದೇಶ1 hour ago

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ‘ಮದುವೆ’ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌