BBK Season 10: ಎರಡು ವರ್ಷಗಳ ಹಿಂದೆಯೇ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ವಿವಾಹ! ಸಹೋದರ ಹೇಳಿದ್ದೇನು? Vistara News

ಬಿಗ್ ಬಾಸ್

BBK Season 10: ಎರಡು ವರ್ಷಗಳ ಹಿಂದೆಯೇ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ವಿವಾಹ! ಸಹೋದರ ಹೇಳಿದ್ದೇನು?

BBK Season 10: ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಅವರ ಸಹೋದರ ಕೂಡ ಮಾತನಾಡಿದ್ದಾರೆ.

VISTARANEWS.COM


on

santhosh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವರ್ತೂರು ಸಂತೋಷ್‌ ಕಾರಣದಿಂದ ಕನ್ನಡ ಬಿಗ್‌ ಬಾಸ್‌ ಸೀಸನ್‌ 10(BBK Season 10) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್‌ ಬಾಸ್‌ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ಅವರು ಬಳಿಕ ಸ್ಪರ್ಧೆ ಮುಂದುವರಿಸಿದ್ದರು. ಬಳಿಕ ಶೋ ಬಿಟ್ಟು ಮಧ್ಯದಿಂದಲೇ ಹೊರ ಹೋಗುವುದಾಗಿ ಹೇಳಿ ಸುದ್ದಿಯಾಗಿದ್ದರು. ಅವರಿಗೆ 2 ವರ್ಷಗಳ ಹಿಂದೆಯೇ ಮದುವೆಯಾಗಿದೆ ಎನ್ನುವ ವಿಚಾರ ಇದೀಗ ಮುನ್ನಲೆಗೆ ಬಂದಿದೆ.

ಈಗಾಗಲೇ ಮದುವೆಯಾಗಿರುವ ವರ್ತೂರು ಸಂತೋಷ್ ಅವರಿಗೆ ಹೆಣ್ಣು ಮಗುವಿದೆ ಎನ್ನುವ ವಿಚಾರವೇ ಚರ್ಚೆಯಾಗುತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆಯ ಫೋಟೊ, ವಿಡಿಯೊ ಹರಿದಾಡುತ್ತಿದೆ.

2 ವರ್ಷಗಳ ಹಿಂದೆಯೇ ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಎಸ್‌.ಜಯಶ್ರೀ ಎಂಬುವರನ್ನ ವರ್ತೂರು ಸಂತೋಷ್ ವರಿಸಿದ್ದಾರೆ. ಅವರಿಗೆ ಮಗುವೂ ಇದೆ. ಬಳಿಕ ಮನಸ್ತಾಪ ಎದುರಾಗಿ ಪತಿ-ಪತ್ನಿ ದೂರವಾಗಿದ್ದಾರೆ ಎನ್ನಲಾಗುತ್ತಿದೆ.

ಸಹೋದರ ಹೇಳಿದ್ದೇನು?

ಇದೀಗ ಸಂತೋಷ್ ಸಹೋದರ ಈ ಬಗ್ಗೆ ಮಾತನಾಡಿದ್ದು, ಸಂತೋಷ್ ಅವರಿಗೆ ಮದುವೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆಯಾಗಿ ಸುಮಾರು ಎರಡು ವರ್ಷ ಆಗಿದೆ ಎಂದ ವರ್ತೂರು ಸಹೋದರ ಮಧು ಹೇಳಿದ್ದಾರೆ. ಜಯಶ್ರೀ ಗರ್ಭಿಣಿಯಾಗಿದ್ದಾಗಲೇ ತವರಿಗೆ ತೆರಳಿದ್ದಾರೆ. ತವರು ಮನೆಯವರೇ ಅವರನ್ನು ವಾಪಸ್ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ತನಿಷಾ ಜತೆ ಆತ್ಮೀಯತೆ

ಸದ್ಯ ಬಿಗ್‌ ಬಾಸ್‌ ಮನೆಯೊಳಗೆ ವರ್ತೂರು ಸಂತೋಷ್‌ ತಮ್ಮ ಸ್ಪರ್ಧಿ ತನಿಷಾ ಕುಪ್ಪಂಡ ಜತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಇಬ್ಬರ ಮಧ್ಯೆ ಗೆಳತನಕ್ಕಿಂತ ವಿಶೇಷವಾದುದು ಏನೋ ಇದೆ ಎಂದು ಇತರ ಸ್ಪರ್ಧಿಗಳು ರೇಗಿಸುತ್ತಿದ್ದಾರೆ. ಜತೆಗೆ ವೀಕ್ಷಕರಿಗೂ ಅದೇ ರೀತಿಯ ಅನುಮಾನವೂ ಮೂಡುತ್ತಿದೆ. ಇದೆಲ್ಲದರ ಮಧ್ಯೆ ಮದುವೆ ವಿಚಾರವೂ ಸದ್ದು ಮಾಡತೊಡಗಿದೆ.

ಮದುವೆಯ ಬಗ್ಗೆ ಹೇಳಿದ್ದ ರಕ್ಷಕ್‌

ಈ ಮಧ್ಯೆ ಎಲಿಮಿನೇಟ್‌ ಆಗಿ ಹೊರ ಬಂದ ರಕ್ಷಕ್‌ ಅವರ ಮಾತು ಕೂಡ ಅನುಮಾನ, ಗೊಂದಲ ಹೆಚ್ಚಿಸಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಕ್ಷಕ್‌,  ʼʼಹೊರಗಡೆ ವರ್ತೂರು ಸಂತೋಷ್ ಅವರಿಗಾಗಿ ಹುಡುಗಿಯೊಬ್ಬರು ಕಾಯುತ್ತಿದ್ದಾರೆ. ‘ಬಿಗ್ ಬಾಸ್‌’ ಮನೆಯಿಂದ ಹೊರಗೆ ಬಂದಮೇಲೆ ವರ್ತೂರು ಸಂತೋಷ್ ಜತೆ ಅವರ ನಿಶ್ಚಿತಾರ್ಥ ನಡೆಯಲಿದೆ. ತಮಾಷೆಗಾಗಿ ವರ್ತೂರು ಸಂತೋಷ್ ಮತ್ತು ತನಿಷಾ ಅವರನ್ನ ರೇಗಿಸುತ್ತಿದ್ವಿ. ವರ್ತೂರು ಸಂತೋಷ್ – ತನಿಷಾ ಮಧ್ಯೆ ಏನೂ ಇಲ್ಲ’’ ಎಂದಿದ್ದರು. ಆದರೆ ಆ ಹುಡುಗಿ ಯಾರು ಎಂಬುದನ್ನು ಅವರು ಬಹಿರಂಗ ಪಡಿಸಿರಲಿಲ್ಲ.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಯಲ್ಲಿ ಉಳಿಯಲು ನಿರ್ಧರಿಸಿದ ವರ್ತೂರು; ತೀರ್ಮಾನ ಬದಲಾಗಿದ್ದು ಹೇಗೆ?

ಸ್ಪರ್ಧೆ ಮುಂದುವರಿಸಲು ಒಪ್ಪಿದ ವರ್ತೂರು ಸಂತೋಷ್‌

ಇತ್ತೀಚೆಗೆ ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದರು. ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಅವರು, ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಘಟನೆ ನಡೆಯಿತು. ನಾನು ಆ ಗುಂಗಿನಿಂದ ಹೊರಗೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಗುತ್ತಿಲ್ಲ. ನಾನು ಹೊರ ಹೋಗಲು ಇಷ್ಟ ಪಡುತ್ತೇನೆʼʼ ಎಂದು ಹೇಳಿದ್ದರು. ಆದರೆ ಸುದೀಪ್‌ ಇದಕ್ಕೆ ಅವಕಾಶ ನೀಡಿರಲಿಲ್ಲ. ಸಹ ಸ್ಪರ್ಧಿಗಳು ಆಟ ಮುಂದುವರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ವರ್ತೂರು ಅವರ ತಾಯಿ ಸ್ವತಃ ಬಿಗ್‌ ಬಾಸ್‌ ಮನೆಗೆ ಬಂದು ಮಗನ ಮನವೊಲಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಿಗ್ ಬಾಸ್

BBK SEASON 10: ಯಾರ ಕಣ್ಣು ಬಿತ್ತಮ್ಮ ತನಿಷಾ-ವರ್ತೂರ್ ಸ್ನೇಹದ ಮ್ಯಾಲೆ?

BBK SEASON 10: ತನಿಷಾ ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

VISTARANEWS.COM


on

Varthur Santhosh and tanisha bigg boss Kannada
Koo

ಬೆಂಗಳೂರು: ಬೆಳಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ಬಿಗ್‌ಬಾಸ್ (BBK SEASON 10) ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ ಹೀಟ್ ಎದ್ದು ಕಾಣುತ್ತಿದೆ. ‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆʼ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ತನಿಷಾ ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ.

9ನೇ ವಾರದಲ್ಲೂ ಹಾಗೆಯೇ ಆಗಿದೆ. ಅದರಲ್ಲೂ ವರ್ತೂರು ಸಂತೋಷ್​ ಅವರು ತನಿಷಾ ಕುಪ್ಪಂಡ ವಿರುದ್ಧವೇ ತಿರುಗಿ ಬಿದ್ದಿರುವುದು ಅಚ್ಚರಿಗೆ ಕಾರಣ ಆಗಿದೆ. 8ನೇ ವಾರದಲ್ಲಿ ತನಿಷಾಗೆ ಪೆಟ್ಟಾಗಿತ್ತು. ಆದರೂ ಕೂಡ ನಾಮಿನೇಷನ್​ ವಿಚಾರದಲ್ಲಿ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಹೇಳಿದ್ದಾರೆ.

ಸ್ನೇಹಿತ್‌ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

ಮಿಸ್‌ ಮಾಡಿಕೊಂಡಿದ್ದ ವರ್ತೂರ್‌

ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿತ್ತು. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದರು. ತನಿಷಾ ಮನೆಯಲ್ಲಿ ಇಲ್ಲದ ಕಾರಣ ವರ್ತೂರ್‌ ಕೂಡ ತುಂಬಾ ಮಿಸ್‌ ಮಾಡಿಕೊಂಡಿದ್ದರು.. ನಮ್ರತಾ ವರ್ತೂರ್‌ ಅವರನ್ನು ಕಂಡು ʻʻ ʻʻಬೆಂಕಿ ಯೋಚನೆಯಲ್ಲಿ ಮುಳುಗಿ ಹೋಗಿದ್ದಾರೆ ವರ್ತೂರ್‌ʼʼಎಂದ್ದಿದ್ದರು. ತುಕಾಲಿ ಮಾತನಾಡಿ ʻʻಈ ರೀತಿ ಒಬ್ಬರಿಗೋಸ್ಕರ ಕನವರಿಸಿಕೊಂಡವರನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ಎಷ್ಟು ಸಲ ಬೆಂಕಿ ಹೆಸರು ಹೇಳಿದ್ರು ಗೊತ್ತಾ? ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಬೆಂಕಿ ಕರೆದುಕೊಂಡು ಬಂದು ಇವರಿಗೆ ಒಪ್ಪಿಸಬೇಕು ಅಂತ ಅನಿಸಿಬಿಡ್ತು. ಅವರಿಗೆ ಆಗ್ತಾನೇ ಇಲ್ಲ, ದಿಢೀರ್ ಅಂತ ಯಾರಿಗೋ ಹೊಡೆಯೋಕೆ ಹೋಗ್ತಾರೆ, ಕಚ್ಚುತ್ತಾರೆ, ನನ್ನ ಜತೆಯೂ ಜಗಳ ಆಡಿದ್ರುʼʼ ಎಂದಿದ್ದರು. ವರ್ತೂರ್‌ ಕೂಡ ತನಿಷಾ ವಾಪಸ್ ಬಂದ್ರೆ ಸಾಕು ಎಂದಿದ್ದರು. ಆದರೆ ಈಗ ವರ್ತೂರ್‌ ಅವರ ವರ್ತನೆ ನೋಡುಗರಿಗೆ ಅಚ್ಚರಿ ಮೂಡಿಸಿದೆ.

ನಮ್ರತಾ ಕೂಡ ತನಿಷಾ ಪರವಾಗಿ ಹಿಂದಿನ ವಾರ ಆಟವಾಡಿ ಕಿಚ್ಚ ಸುದೀಪ್‌ ಅವರಿಂದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

Continue Reading

ಫ್ಯಾಷನ್

Kiccha Sudeep: ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್‌ ಡ್ರೆಸ್‌! ಏನಿದರ ಸ್ಪೆಷಲ್‌?

ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ (Kiccha Sudeep) ವೀಕೆಂಡ್‌ನಲ್ಲಿ ಧರಿಸುವ ಯೂನಿಕ್‌ ಔಟ್‌ಫಿಟ್‌ಗಳನ್ನು ನೋಡಲು ಅಭಿಮಾನಿಗಳು ಮಾತ್ರವಲ್ಲ, ಫ್ಯಾಷನ್‌ ಪ್ರಿಯರು ಕಾದಿರುತ್ತಾರೆ. ಇದಕ್ಕೆ ಕಾರಣ ಪ್ರತಿಬಾರಿ ಅವರು ಧರಿಸುವ ಯೂನಿಕ್‌ ಫ್ಯಾಷನ್‌! ಅವರ ಈ ಡಿಫರೆಂಟ್‌ ಡಿಸೈನರ್‌ವೇರ್ಸ್ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

VISTARANEWS.COM


on

Kiccha Sudeep unique fashion wears in Bigg Boss season 10
ಚಿತ್ರಗಳು : ಬಿಗ್‌ಬಾಸ್‌ ಸೀಸನ್‌10ನಲ್ಲಿ ಕಿಚ್ಚ ಸುದೀಪ್‌ರ ಪಾಪ್ಯುಲರ್‌ ಔಟ್‌ಫಿಟ್ಸ್
Koo
VISTARA-EXCLUSIVE

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಪ್ರತಿವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೇವಲ ಅವರ ಅಭಿಮಾನಿಗಳಿಗಷ್ಟೇ ಅಲ್ಲ, ಫ್ಯಾಷನ್‌ ಪ್ರಿಯರಿಗೂ ಕುತೂಹಲವಿರುತ್ತದೆ. ಹೌದು. ಸುದೀಪ್‌ರವರು ಪ್ರತಿ ವೀಕೆಂಡ್‌ನಲ್ಲಿ ಧರಿಸುವ ಒಂದೊಂದು ಡಿಫರೆಂಟ್‌ ಔಟ್‌ಫಿಟ್‌ಗಳು ನೋಡುಗರ ಕಣ್ಣರಳಿಸುತ್ತವೆ. ಕೆಲವೊಮ್ಮೆ ಬಾಲಿವುಡ್‌ಗರನ್ನು ಮೀರಿಸುವಂತಹ ಹುಬ್ಬೇರಿಸುವಂತಹ ಫ್ಯೂಶನ್‌ ಡಿಸೈನರ್‌ವೇರ್‌ಗಳನ್ನು ಕಾಣಬಹುದು. ಈ ಡಿಸೈನರ್‌ವೇರ್‌ಗಳ ಹಿಂದಿರುವ ಡಿಸೈನರ್‌ಗಳ್ಯಾರು? ಡಿಸೈನ್‌ ಆಯ್ಕೆ ಹೇಗೆ? ಅಷ್ಟ್ಯಾಕೆ ದುಬಾರಿ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

ವಾರಕ್ಕೆ ಇಬ್ಬರ ಡಿಸೈನರ್ಸ್ ಔಟ್‌ಫಿಟ್ಸ್ ಧರಿಸುವ ಸುದೀಪ್‌

ವಾರಕ್ಕೆ ಇಬ್ಬರ ಡಿಸೈನರ್ಸ್ ಔಟ್‌ಫಿಟ್ಸ್ ಧರಿಸುವ ಸುದೀಪ್‌ಗೆ ಸೂಟನ್ನು ರ‍್ಯಾಂಪ್‌ ಲೆಬೆಲ್‌ನ ಸೆಲೆಬ್ರೆಟಿ ಡಿಸೈನರ್‌ ಭರತ್‌ ರಾಮ್‌ದಾಸ್‌ ಸಿದ್ಧಪಡಿಸಿದರೇ, ಜಂಪ್‌ಸೂಟ್‌ನಂತವನ್ನು ಡಿಸೈನರ್‌ ಭರತ್‌ ಸಾಗರ್‌ ಸಿದ್ಧಪಡಿಸಿ, ಸ್ಟೈಲಿಂಗ್‌ ಮಾಡುತ್ತಾರಂತೆ.

ಲಕ್ಷ ರೂ. ಮೀರುವ ದುಬಾರಿ ಔಟ್‌ಫಿಟ್‌ಗಳಿವು

ಇನ್ನು, ಕಿಚ್ಚ ಸುದೀಪ್‌ರವರು ಧರಿಸುವ ಒಂದೊಂದು ಸೂಟ್‌ನ ಫ್ಯಾಬ್ರಿಕ್‌ ಇಟಲಿ, ಲಂಡನ್‌ ಹಾಗೂ ಜಪಾನ್‌ನಿಂದ ಅಮದು ಮಾಡಿಕೊಳ್ಳಲಾಗುತ್ತದಂತೆ. ಇವುಗಳ ಫ್ಯಾಬ್ರಿಕ್‌ ಫಾಲ್‌ ಆ್ಯಂಡ್‌ ಫೀಲ್‌ ಟೆಕ್ಚ್ಷರ್‌ ಹೊಂದಿರುವುದರಿಂದ ಇವುಗಳ ಬೆಲೆ ದುಬಾರಿಯಂತೆ. ಕಡಿಮೆ ಎಂದರೂ ಒಂದು ಸೂಟ್‌ ಸೆಟ್‌ ಬೆಲೆ 70 ಸಾವಿರ ದಾಟುತ್ತದಂತೆ. ಕೆಲವೊಮ್ಮೆ ಲಕ್ಷ ರೂ.ಗಳನ್ನೂ ಮೀರಬಹುದು.

ಇದನ್ನೂ ಓದಿ: Kiccha Sudeep: ಫ್ಯಾನ್ಸ್‌ ಜತೆ ಕಿಚ್ಚ ಸುದೀಪ್‌ ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್‌

Kiccha Sudeep unique fashion wears in Bigg Boss season 10

ಸುದೀಪ್‌ರ ಅಭಿರುಚಿಗೆ ತಕ್ಕಂತೆ ಡಿಸೈನರ್‌ವೇರ್ಸ್

ಆರಂಭದಿಂದಲೂ ಬಿಗ್‌ಬಾಸ್‌ ಸೀಸನ್‌ಗಳಿಗಾಗಿ ಡಿಸೈನರ್‌ ಭರತ್‌ ರಾಮ್‌ದಾಸ್‌ ಅವರು ಸಿದ್ಧಪಡಿಸಿರುವ ಸೂಟ್‌ಗಳು ಸಖತ್‌ ಟ್ರೆಂಡ್‌ ಸೆಟ್‌ ಮಾಡಿದೆಯಂತೆ. “ಪ್ರತಿವಾರ ಮೂರ್ನಾಲ್ಕು ಸೂಟ್‌ ಸೆಟ್‌ ರೆಡಿ ಇರಿಸಿರುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಅಭಿರುಚಿಗೆ ತಕ್ಕಂತೆ ಫೀಡ್‌ಬ್ಯಾಕ್‌ ಪಡೆದು ಕಲರ್ಸ್ ಹಾಗೂ ವಿನ್ಯಾಸವನ್ನು ಡಿಫರೆಂಟ್ ಆಗಿ ಸಿದ್ಧಪಡಿಸುತ್ತೇವೆ” ಎನ್ನುತ್ತಾರೆ ಭರತ್ ರಾಮ್‌ದಾಸ್‌. ಮತ್ತೊಂದು ದಿನ ಡಿಫರೆಂಟ್‌ ವಿನ್ಯಾಸದ ಜಂಪ್‌ ಸೂಟ್‌ ಸೆಟ್‌ಗಳಲ್ಲಿ ಕಾಣಿಸುವ ಸುದೀಪ್‌ ಅವರಿಗೆ ಇವನ್ನು ಸ್ಟೈಲಿಂಗ್‌ ಹಾಗೂ ಡಿಸೈನ್‌ ಮಾಡುವುದು ಮತ್ತೊಬ್ಬ ಡಿಸೈನರಾದ ಭರತ್‌ ಸಾಗರ್‌. ಧರಿಸುವ ಶೂನಿಂದ ಹಿಡಿದು, ಆಕ್ಸೆಸರೀಸ್‌ ಆಯ್ಕೆ ಕೂಡ ಇವರದ್ದೇ.

ಸುದೀಪ್‌ ಡಿಸೈನರ್‌ವೇರ್‌ ಡಿಟೇಲ್ಸ್

ಭರತ್‌ ರಾಮ್‌ದಾಸ್‌ ಅವರ ರ‍್ಯಾಂಪ್‌ ಬ್ರ್ಯಾಂಡ್‌ ಆಕಾಶ ನೀಲಿ ವರ್ಣದ ಅತ್ಯಾಕರ್ಷಕ ವಿನ್ಯಾಸದ ಕೊ-ಆರ್ಡ್ ಜಾಕೆಟ್‌ ಔಟ್‌ಫಿಟ್‌, ರಸ್ಟಿಕ್‌ ಚಾರ್ಮ್ ನೀಡಿದ ಆಲೀವ್‌ ಗ್ರೀನ್‌ ಜಾಕೆಟ್‌, ತಿಳಿ ಹಾಫ್‌ ವೈಟ್‌ ವರ್ಣದ ಓವರ್‌ಸೈಝ್‌ ಜಾಕೆಟ್‌ ಸೆಟ್‌, ಫ್ಲಾನೆಲ್‌ ಫ್ಯಾಬ್ರಿಕ್‌ನ ಕೋಲ್‌ ಕೋ ಆರ್ಡ್ ಜಾಕೆಟ್‌ ಸೆಟ್‌, ಬೀಸ್ಪೋಕ್‌ ಕ್ಯಾರೆಮಲ್‌ ಕೆಫೆ ಜಾಕೆಟ್‌, ಪೇಂಟರ್‌ ಪ್ಯಾಂಟ್‌ ಶೈಲಿಯೊಂದಿಗೆ ಬ್ಲಾಕ್‌ ಫಾರೆಸ್ಟ್ ಗ್ರೀನ್‌ ಶೇಡ್‌ನ ಸೆಟ್‌ ಸೇರಿದಂತೆ ಸುದೀಪ್‌ ಧರಿಸಿದ ಜಾಕೆಟ್‌ ಸೂಟ್ಸ್ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.

ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಬರ್ತ್‌ಡೇಗೆ ಫ್ಯಾನ್ಸ್ ದಂಡು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು…

Kiccha Sudeep unique fashion wears in Bigg Boss season 10

ಇನ್ನು, ಸೂಟ್‌ ಹೊರತುಪಡಿಸಿದಲ್ಲಿ, ಸುದೀಪ್‌ರ ಜಂಪ್‌ಸೂಟ್‌ ಶೈಲಿಯ ಔಟ್‌ಫಿಟ್‌ ಗಮನಿಸಿರುತ್ತೀರಿ! ಇದು ಡಿಸೈನರ್‌ ಹಾಗೂ ಸ್ಟೈಲಿಸ್ಟ್ ಭರತ್‌ ಸಾಗರ್‌ ಕೈ ಚಳಕ ಎನ್ನಬಹುದು. ಇಲ್ಲಿ ಅವರು ಬಾಟಲ್‌ ಪೈಪ್‌ ಬ್ರ್ಯಾಂಡ್‌ ನ ಜಂಪ್‌ಸೂಟ್‌ ಜತೆಗೆ ರೇರ್‌ ರ‍್ಯಾಬೀಟ್‌, ಅರ್ಮಾನಿ ಸೇರಿದಂತೆ, ನಾನಾ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಆ್ಯಕ್ಸೆಸರೀಸ್‌ ಮಿಕ್ಸ್‌ ಮ್ಯಾಚ್‌ ಮಾಡಿದ್ದಾರೆ. ಹಾಗಾಗಿ ಈ ಕಂಪ್ಲೀಟ್‌ ಜಂಪ್‌ಸೂಟ್‌ ಔಟ್‌ಫಿಟ್‌ ಲುಕ್‌ ತೀರಾ ದುಬಾರಿ ಎನ್ನಬಹುದು. ಇವೆಲ್ಲಾ ಹೈ ಮೆನ್ಸ್‌ ಫ್ಯಾಷನ್‌ ಲಿಸ್ಟ್‌ಗೆ ಸೇರುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಬಿಗ್ ಬಾಸ್

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

BBK SEASON 10: ಸಂಗೀತಾ ಅವರು ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಾಯಿಯ ಹಾಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ.

VISTARANEWS.COM


on

Tukali imitate sangeetha sringeri
Koo
tukali santosh

‘ಬಿಗ್‌ಬಾಸ್‌ ಮನೆಗೆ ‘ಚಾರ್ಲಿ’ ಬರ್ತಾನೆ ಎನ್ನುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದುವರೆಗೆ ಚಾರ್ಲಿ (BBK SEASON 10 ) ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ‘ಚಾರ್ಲಿ’ಗೆ ಸಿನಿಮಾದಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್, ಸಂಗೀತಾ ಶೃಂಗೇರಿ ನಾಯಿ ತರ ಆಡ್ತಿದ್ದಾರೆ!

sangeetha bigg boss

ಇದೇನು ಇಷ್ಟು ಕೀಳುಭಾಷೆಯಲ್ಲಿ ಸ್ಪರ್ಧಿಯನ್ನು ಹೀಗಳೆಯುತ್ತಿದ್ದಾರೆ ಎಂದು ಕೋಪಿಸಿಕೊಳ್ಳಬೇಡಿ. ಇದು ಹೀಗಳೆಯಲು ಹೇಳಿದ್ದು ಖಂಡಿತ ಅಲ್ಲ. ಈ ಮಾತು ಅಕ್ಷರಶಃ ಸತ್ಯ! ಸಂಗೀತಾ ಅವರು ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಾಯಿಯ ಹಾಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ.

vinay pavi

ಬಿಗ್‌ಬಾಸ್ ಮನೆಯೊಳಗೆ ಇದೇನೂ ಹೊಸ ಸಮಸ್ಯೆ ಎನ್ನಬೇಡಿ. ಇದು ಬಿಗ್‌ಬಾಸ್ ಅವರೇ ಮನೆಯ ಸ್ಪರ್ಧಿಗಳಿಗೆ ನೀಡಿದ ಹೊಸ ಟಾಸ್ಕ್‌! ‘ಬಿಗ್‌ಬಾಸ್‌ ಸೂಚಿಸಿದ ಚಟುವಟಿಕೆಗಳನ್ನು ಮನೆಯ ಸ್ಪರ್ಧಿಗಳು ಮಾಡಬೇಕು’ ಎಂಬುದು ಈ ವಾರದ ಮೊದಲ ಟಾಸ್ಕ್‌. ಇದರ ಭಾಗವಾಗಿಯೇ ಸಂಗೀತಾ ಅಳುತ್ತಿರುವ ನಾಯಿಯ ಹಾಗೆ ಆಡುತ್ತಿದ್ದಾರೆ. ತುಕಾಲಿ ಸಂತೋಷ್ ಕೂಡ ನಾಯಿಯ ಹಾಗೆ ಆಡುತ್ತ ಅವರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: BBK SEASON 10: ʻಎಲ್ಲೇ ಹೋದ್ರೂ ಗುಂಡಿ ತೋಡೇ ಬರೋದು; ಸಂಗೀತಾಳ ಅನುಕರಣೆ ಮಾಡಿದ ತುಕಾಲಿ!

namratha pavi poovappa

ಅವಿನಾಶ್‌ ನಾಗಿಣಿಯ ಹಾಗೆ ಆಡುತ್ತಿರುವುದು, ಕಾರ್ತಿಕ್ ಪೆಂಗ್ವಿನ್ ಹಾಗೆ ಕುಪ್ಪಳಿಸುತ್ತಿರುವುದೆಲ್ಲವೂ ಪ್ರೋಮೊದಲ್ಲಿ ಸೆರೆಯಾಗಿದೆ. ಈ ತಮಾಷೆಯ ಟಾಸ್ಕ್‌ಗೆ ಮನೆಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಿದ್ದಾರೆ.
ವಾರದ ಆರಂಭ ಭರಪೂರ ನಗೆಯೊಂದಿಗೆ ಆರಂಭಗೊಂಡಿದೆ.

tukali varthur santhosh

ಈ ನಗೆಯು ಕೋಪದ ಹೊಗೆಯಾಗಿ ಬದಲಾಗಲು ಜಾಸ್ತಿ ಹೊತ್ತೇನೂ ಬೇಕಾಗಿಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳುವುದೇ ಕಷ್ಟ.

Continue Reading

ಬಿಗ್ ಬಾಸ್

BBK SEASON 10: ʻಎಲ್ಲೇ ಹೋದ್ರೂ ಗುಂಡಿ ತೋಡೇ ಬರೋದು; ಸಂಗೀತಾಳ ಅನುಕರಣೆ ಮಾಡಿದ ತುಕಾಲಿ!

BBK SEASON 10: ಬೇರೊಬ್ಬರ ರೀತಿ ಮಾತನಾಡುವುದು ಅಥವಾ ನಾಯಿ ಅಳುವ ರೀತಿ ಅಳುವುದು, ಮಿಮಿಕ್ರಿ ಮಾಡುವ ಟಾಸ್ಕ್‌ಗಳನ್ನು ಬಿಗ್‌ ಬಾಸ್‌ ನೀಡಿದ್ದರು. ಇದೀಗ ಈ ಪ್ರೋಮೊ ವೈರಲ್‌ ಆಗುತ್ತಿದ್ದು ತಮಾಷೆ ಹೋಗಿ ಅಮಾಸೆ ಆಗುತ್ತಾ ಟಾಸ್ಕ್? ಎನ್ನುತ್ತಿದ್ದಾರೆ ನೆಟ್ಟಿಗರು.

VISTARANEWS.COM


on

Tukali Santosh Imitate Sangeetha Sringeri
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಅಂತೂ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಜಿಯೋ ಸಿನಿಮಾ ಹಂಚಿಕೊಂಡ ಪ್ರೋಮೊ ನೋಡಲು ತಮಾಷೆಯಾಗಿದ್ದರೂ ಮನೆಯಲ್ಲಿ ಅಶಾಂತಿ ಹುಟ್ಟಿಸುವುದು ಗ್ಯಾರಂಟಿ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಾರ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ವನ್ನು ನೀಡಿದ್ದರು. ಬೇರೊಬ್ಬರ ರೀತಿ ಮಾತನಾಡುವುದು ಅಥವಾ ನಾಯಿ ಅಳುವ ರೀತಿ ಅಳುವುದು, ಮಿಮಿಕ್ರಿ ಮಾಡುವ ಟಾಸ್ಕ್‌ಗಳನ್ನು ನೀಡಿದ್ದರು. ಇದರಲ್ಲಿ ತುಕಾಲಿ ಅವರು ಸಂಗೀತಾ ಬಗ್ಗೆ ಹೇಳಿರುವ ಮಾತು ಸಖತ್‌ ಹೈಲೈಟ್‌ ಆಗಿದೆ.

ಕಿಚ್ಚನ ಪಂಚಾಯಿತಿಯಲ್ಲಿ ತನಿಷಾ ಅವರು ಸಂಗೀತಾ ಅವರಿಗೆ ನಂಬಿಕೆ ದ್ರೋಹ ಟಾನಿಕ್‌ ನೀಡಿದ್ದರು. ಮಾತ್ರವಲ್ಲ ಸಂಗೀತಾ ಅವರಿಗೆ ದರಂಕಾರ ಪಟ್ಟ ಕೂಡ ಹಲವು ಸ್ಪರ್ಧಿಗಳು ಒಮ್ಮತದಿಂದ ನೀಡಿದ್ದರು. ಇದೀಗ ಬಿಗ್‌ ಬಾಸ್‌ ಸಂಗೀತಾ ಅವರು ನಾಯಿಯ ರೀತಿ ಅನುಕರಣೆ ಮಾಡಲು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ನಮ್ಮ ಮನೆಯ ನಾಯಿಯನ್ನು ಹೊರಗಡೆ ಬಿಟ್ಟಿದ್ದೇನೆ ಎಂದಿದ್ದಾರೆ. ಈ ತಮಾಷೆಯ ಮಾತೇ ಸಂಗೀತಾ ಕೋಪಕ್ಕೆ ಕಾರಣವಾಗಬಹುದು ಎನ್ನುತ್ತಿದ್ದಾರೆ ಪ್ರೇಕ್ಷಕರು. ಇನ್ನು ತುಕಾಲಿ ಸಂತು ಹಾಗೂ ಸಂತೋಷ್‌ ಅವರಿಗೆ ಕಾರ್ತಿಕ್‌ ಮತ್ತು ಸಂಗೀತಾ ಅವರ ರೀತಿ ಅನುಕರಣೆ ಮಾಡಲು ಬಿಗ್‌ ಬಾಸ್‌ ಹೇಳಿದ್ದರು. ಅದೇ ರೀತಿ ತುಕಾಲಿ ಸಂತೋಷ್, ಸಂಗೀತಾ ರೀತಿ ಅನುಕರಣೆ ಮಾಡಿದ್ದಾರೆ‌.

ಇದನ್ನೂ ಓದಿ: BBK SEASON 10: ಸಂಗೀತಾ ಜಾಗದಲ್ಲಿ ನಮ್ರತಾ ಇದ್ದಿದ್ದರೆ ʻಪನೀರ್‌ʼ ಕಥೆ ಏನಾಗ್ತಿತ್ತು? ಸ್ನೇಹಿತ್‌ಗೆ ಚಿವುಟಿದ ಸುದೀಪ್‌!

ಕಾರ್ತಿಕ್ ರೀತಿ ವರ್ತೂರು ಸಂತೋಷ್ ನಟಿಸಿದ್ದಾರೆ. ವರ್ತೂರು ಸಂತೋಷ್ ʻʻನಾನು ವಿನಯ್‌ನನ್ನು ಬಿಡೋದಿಲ್ಲ, ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಟಾಸ್ಕ್ ಆಡುತ್ತೇನೆʼʼ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ʻʻಅವರನ್ನು ಯಾಕೆ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿಯಾ? ನನ್ನನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡುʼʼ ಎಂದಿದ್ದಾರೆ. ನಂತರ ವರ್ತೂರು ʻʻನೀವು ವಿನಯ್ ಟೀಮ್‌ಗೆ ಸೇರಿದಾಗ ಏನು ಮಾಡಿದ್ರಿ?ʼʼಎಂದಾಗ, ತುಕಾಲಿ ʻʻನಾನು ಎಲ್ಲಿಗೆ ಹೋದ್ರು ಅಲ್ಲಿ ಎಲ್ಲರಿಗೂ ಗುಂಡಿ ತೋಡಿ ಬರುತ್ತೇನೆʼʼ ಎಂದು ಸಂಗೀತಾ ರೀತಿ ಮಾತನಾಡಿದ್ದಾರೆ. ಇದು ಕೂಡ ಸಂಗೀತಾ ಅವರಿಗೆ ಕೆರಳಿಸುವಂತೆ ಇತ್ತು.

ಅವಿನಾಶ್ ಶೆಟ್ಟಿ ಹಾಗೂ ವಿನಯ್, ಕಾರ್ತಿಕ್, ಸ್ನೇಹಿತ್ ಹಾಗೂ ಸಂಗೀತಾ, ತುಕಾಲಿ‌ ಹಾಗೂ ವರ್ತೂರು ಸಂತೋಷ್ ಟಾಸ್ಕ್‌ನಲ್ಲಿ ಭಾಗಿಯಾಗಿದ್ದಾರೆ. ಅವಿನಾಶ್ ಶೆಟ್ಟಿ ಹಾವಿನ ರೀತಿಯಲ್ಲಿ ವರ್ತಿಸಿದ್ದಾರೆ. ಇದೀಗ ಈ ಪ್ರೋಮೊ ವೈರಲ್‌ ಆಗುತ್ತಿದ್ದು ತಮಾಷೆ ಹೋಗಿ ಅಮಾಸೆ ಆಗುತ್ತಾ ಟಾಸ್ಕ್? ಎನ್ನುತ್ತಿದ್ದಾರೆ ನೆಟ್ಟಿಗರು.

ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ

ದುರಂಹಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ಹೆಸರಿನಲ್ಲಿ ಮನೆಯಲ್ಲಿ ತರಸಲಾಗಿತ್ತು. ಈ ವೇಳೆ ಹೆಚ್ಚು ಟಾನಿಕ್ ಬಂದಿದ್ದು ಸಂಗೀತಾಗೆ, ಎರಡನೇ ಸ್ಥಾನ ವಿನಯ್ ಗೌಡಗೆ. ಪ್ರತಿಯೊಬ್ಬ ಸದಸ್ಯನು ಮನೆಯ ಎರಡು ಟಾನಿಕ್ ಅನ್ನು ಯಾರಾದರೂ ಇಬ್ಬರಿಗೆ ಕೊಡಬೇಕಿತ್ತು. ಸಂಗೀತಾ ಅವರಿಗೆ ಏಳು ಟಾನಿಕ್‌ ದೊರೆತರೆ, ವಿನಯ್‌ ಅವರಿಗೆ 5 ಸಿಕ್ಕಿತ್ತು. ಹೀಗಾಗಿ ಸಂಗೀತಾ ಅವರನ್ನು ಸ್ಪರ್ಧಿಗಳು ಸಖತ್‌ ಟಾರ್ಗೆಟ್‌ ಮಾಡುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lakhbir Singh Rode
ದೇಶ12 mins ago

Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

Head injury represetational
ಕರ್ನಾಟಕ22 mins ago

Labourer death: ವಿಜಯಪುರದ ಬಳಿಕ ನಂಜನಗೂಡಿನಲ್ಲೂ ದುರಂತ; ಕಾರ್ಮಿಕ ಸಾವು

lokayukta raid in channakeshava
ಕರ್ನಾಟಕ41 mins ago

Lokayukta Raid: ರಾಜ್ಯದೆಲ್ಲೆಡೆ ಲೋಕಾಯುಕ್ತ ದಾಳಿ, ಬೆಸ್ಕಾಂ ಇಇ ಮನೆಯಲ್ಲಿ ಕೋಟಿ ಕೋಟಿ ಪತ್ತೆ

David Warner
ಕ್ರಿಕೆಟ್50 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ2 hours ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ2 hours ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್3 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌