ಕಿರುತೆರೆ
Raksha Somashekar: ಸದ್ದಿಲ್ಲದೇ ಎಂಗೇಜ್ ಆದ ಬಿಗ್ ಬಾಸ್ ಸ್ಪರ್ಧಿ ರಕ್ಷಾ ಸೋಮಶೇಖರ್
‘ಬಿಗ್ ಬಾಸ್'(Bigg Boss Kannada) ಖ್ಯಾತಿಯ ರಕ್ಷಾ ಸೋಮಶೇಖರ್ (Raksha Somashekar) ಅವರು ಗೆಳೆಯ ನತನ್ ಜಾನಿ (Nathan Johny) ಜತೆ ಎಂಗೇಜ್ ಆಗಿದ್ದಾರೆ.
‘ಬಿಗ್ ಬಾಸ್'(Bigg Boss Kannada) ಖ್ಯಾತಿಯ ರಕ್ಷಾ ಸೋಮಶೇಖರ್ (Raksha Somashekar) ಅವರು ಗೆಳೆಯ ನತನ್ ಜಾನಿ (Nathan Johny) ಜತೆ ಎಂಗೇಜ್ ಆಗಿದ್ದಾರೆ.
ಮೇ 20ಕ್ಕೆ ನಿಶ್ಚಿತಾರ್ಥ ನಡೆದಿದೆ. ‘ಮೇ1’ ಎಂಬ ಹಾರರ್ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು ಮಾಡೆಲ್ ಹಾಗೂ ನಟಿ ರಕ್ಷಾ ಸೋಮಶೇಖರ್. ಕನ್ನಡದಲ್ಲಿ ‘ಗೋದ್ರಾ’ ಸಿನಿಮಾದಲ್ಲಿ ವಸಿಷ್ಠ ಅವರಿಗೆ ಜೋಡಿಯಾಗಿ ಇವರು ಕಾಣಿಸಿಕೊಂಡಿದ್ದರು.
‘ಮಿಸ್ಟರ್ ಜೈ, ಮತ್ತು ಮಸ್ತ್ ನನ್ನ ಪ್ರೇಮ ಕಹಾನಿ’ ಎಂಬ ಸಿನಿಮಾಗಳಲ್ಲಿ ರಕ್ಷಾ ಸೋಮಶೇಖರ್ ನಟಿಸಿದ್ದರು.
ದೀಪಿಕಾ ದಾಸ್, ಶೈನ್ ಶೆಟ್ಟಿ, ಭೂಮಿ ಶೆಟ್ಟಿ ಸೀಸನ್‌ನಲ್ಲಿ ರಕ್ಷಾ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು.ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರಲಿಲ್ಲ. ಬಹುಬೇಗ ಅವರು ಮನೆಯಿಂದ ಹೊರಬಂದಿದ್ದರು.
ಇದು ಲವ್ ಮ್ಯಾರೇಜೋ, ಅರೆಂಜ್ ಮ್ಯಾರೇಜ್ ಎಂಬ ಬಗ್ಗೆ ಮಾಹಿತಿ ಇಲ್ಲ. ಹುಡುಗನ ಬಗ್ಗೆ ರಕ್ಷಾ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಬಿಗ್ ಬಾಸ್ ಸ್ಪರ್ಧಿಯಾಗಿದ್ದಾಗ ರಕ್ಷಾ ಮನೆಗೆ ಪ್ರವೇಶ ಪಡೆದ 12 ದಿನದಲ್ಲಿಯೇ ಮನೆಯಿಂದ ಹೊರಗೆ ಬಂದಿದ್ದರು. ಕೊನೆಯ ಸುತ್ತಿನಲ್ಲಿ ಚೈತ್ರಾ ಕೊಟ್ಟೂರು ಮತ್ತು ರಕ್ಷಾ ಉಳಿದುಕೊಂಡಿದ್ದರು.
ಕಿರುತೆರೆ
Chaitra Hallikeri: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಹಳ್ಳಿಕೇರಿ
Chaitra Hallikeri: ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಚೈತ್ರಾ ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಬರುತ್ತಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada) ಒಟಿಟಿ ರಿಯಾಲಿಟಿ ಶೋನಲ್ಲಿ ಮನೆಮಾತಾಗಿದ್ದ ಚೈತ್ರಾ ಹಳ್ಳಿಕೇರಿ (Chaitra Hallikeri) ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಚೈತ್ರಾ ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಬರುತ್ತಿದ್ದಾರೆ. ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಂತರಪಟ’ ಧಾರಾವಾಹಿಯಲ್ಲಿ ಬ್ಯುಸಿನೆಸ್ ವುಮೆನ್ ಚಾಂದಿನಿ ಪಾತ್ರದ ಮೂಲಕ ಚೈತ್ರಾ ಹಳ್ಳಿಕೇರಿ ಕಮ್ ಬ್ಯಾಕ್ ಆಗಿದ್ದಾರೆ.
ಚೈತ್ರಾ ಹಳ್ಳಿಕೇರಿ ಈ ಧಾರಾವಾಹಿಯಲ್ಲಿ ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್‌ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜತೆಗೆ “ಅಂತರಪಟ” ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ.
ಸದ್ಯಕ್ಕೆ ‘ನಾಗಪಂಚಮಿ’ ಎಂಬ ತೆಲುಗು ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿರುವ ಚೈತ್ರಾ ಹಳ್ಳಿಕೇರಿ ಇದೀಗ ಕನ್ನಡಕ್ಕೆ ಮತ್ತೆ ವಾಪಸ್ ಆಗಿರುವುದು ಪ್ರೇಕ್ಷಕರಿಗಂತೂ ಖುಷಿ ತಂದಿದೆ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚೈತ್ರಾಗೆ ಕನ್ನಡದ ಧಾರಾವಾಹಿಯಲ್ಲಿ ನಟಿಸಬೇಕೆಂಬ ಆಸೆ ಬಹುದಿನಗಳಿಂದೂ ಇತ್ತು. ಗೌಡ್ರು, ಖುಷಿ, ಶಿಷ್ಯ, ಗುನ್ನ, ಪಾರ್ಥ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದಲೇ ದೂರವಾದರು.
ಇದನ್ನೂ ಓದಿ: Viral News: Deepika Das: ಕಿರುತೆರೆಗೆ ಎಂಟ್ರಿ ಕೊಟ್ಟ ದೀಪಿಕಾ ದಾಸ್, ‘ಅಂತರಪಟ’ದಲ್ಲಿ ಏನಿದೆ?
‘ಅಂತರಪಟ’ ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ನಟಿಸಿದ್ದಾರೆ.
ಅಂತರಪಟ ಧಾರಾವಾಹಿಗೆ ನಾಯಕನಾಗಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಅವರ ಪತಿ ಚಂದನ್ ಅವರ ಎಂಟ್ರಿ ಕೂಡ ಆಗಿದೆ.
ಕರ್ನಾಟಕ
Weekend With Ramesh: ಸಾಧಕರ ಕುರ್ಚಿ ಏರಿದ ಟ್ರಬಲ್ ಶೂಟರ್ ಡಿಕೆಶಿ; ಜೂ.10, 11ಕ್ಕೆ ಪ್ರಸಾರ
Weekend With Ramesh: ಜೀ ಕನ್ನಡ ವಾಹಿನಿಯಲ್ಲಿ ಜೂನ್ 10 ಮತ್ತು 11ರಂದು ಪ್ರಸಾರವಾಗಲಿರುವ ಸಂಚಿಕೆಗಳಲ್ಲಿ ತಮ್ಮ ರಾಜಕೀಯ ಜೀವನದ ಏಳು ಬೀಳುಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಲಿದ್ದಾರೆ.
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಾಗುತ್ತಿರುವ ʼವೀಕೆಂಡ್ ವಿತ್ ರಮೇಶ್ ಶೋ-5ʼ ರಲ್ಲಿ (Weekend With Ramesh) ಈ ವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಧಕರ ಕುರ್ಚಿ ಏರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜ್ಯ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆಶಿ ಅವರು ಜೂನ್ 10 ಮತ್ತು 11ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿರುವ ಸಂಚಿಕೆಗಳಲ್ಲಿ ತಮ್ಮ ರಾಜಕೀಯ ಜೀವನದ ಏಳು ಬೀಳುಗಳ ಬಗ್ಗೆ ಮಾತನಾಡಲಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೀವನದ ಸಂಪೂರ್ಣ ಚಿತ್ರಣ ಕಟ್ಟಿಕೊಡಲಿರುವ ಕಾರ್ಯಕ್ರಮದ ಟ್ರೇಲರ್ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ವಿವಿಧ ರಾಜಕಾರಣಿಗಳು, ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್‌ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | Bera movie: ಬೇರ: ಕೋಮು ದ್ವೇಷದ ಮೂಲ ಚಿತ್ರಿಸುವ ಕನ್ನಡ ಸಿನಿಮಾ ಜೂನ್ 16ರಂದು ರಿಲೀಸ್
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ಅವರ ಪೂರ್ಣ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ .ಯಾವುದೇ ಕುಟುಂಬ ರಾಜಕೀಯದ ಹಿನ್ನೆಲೆ ಹೊಂದಿಲ್ಲ. ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ ಇವರು.
- 7 ಬಾರಿ ಶಾಸಕರಾಗಿ ಆಯ್ಕೆ
- 1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್. ಡಿ.ದೇವೇಗೌಡರ ವಿರುದ್ಧ ಸೋಲು
- 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ
- 1989ರ ಸಾತನೂರು ಕ್ಷೇತ್ರದಿಂದ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ
- 1991ರಲ್ಲಿ ಎಸ್.ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಸಚಿವರಾಗಿ ನೇಮಕ
- 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸಾತನೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಜಯ
- 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಆಯ್ಕೆ
- 1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾಗಿ ಬಳಿಕ ನಗರಾಭಿವೃದ್ಧಿ ಸಚಿವರಾಗಿ ಸೇವೆ
- 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರದಿಂದ ಸ್ಪರ್ಧಿಸಿ ಗೆಲುವು
- 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿ ಆಯ್ಕೆ
- 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ
- 2020ರ ಮಾರ್ಚ್ 11ರಂದು ಕೆಪಿಸಿಸಿಯ 23ನೇ ಅಧ್ಯಕ್ಷರಾಗಿ ನೇಮಕ
South Cinema
Kollam Sudhi: ಮಲಯಾಳಂ ಖ್ಯಾತ ಕಿರುತೆರೆ ನಟ ಕಾರು ಅಪಘಾತದಲ್ಲಿ ನಿಧನ; ಕಾರು ನಜ್ಜುಗುಜ್ಜು!
ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ, ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ (Kollam Sudhi) ಕಾರು ಅಪಘಾತದಲ್ಲಿ ಜೂನ್ 5ರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಂಗಳೂರು: ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ, ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ (Kollam Sudhi) ಕಾರು ಅಪಘಾತದಲ್ಲಿ ಜೂನ್ 5ರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೈಪಮಂಗಲದಲ್ಲಿ ಟ್ರಕ್ಗೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 39 ವರ್ಷದ ನಟ ಮೃತಪಟ್ಟಿದ್ದಾರೆ. ಇನ್ನು ಮೂವರು ಮಿಮಿಕ್ರಿ ಕಲಾವಿದರಾದ ಬಿನು ಅಡಿಮಲಿ, ಉಲ್ಲಾಸ್ ಮತ್ತು ಮಹೇಶ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ವರದಿಯ ಪ್ರಕಾರ, ಸುಧಿ ಮತ್ತು ಇತರ ಕಲಾವಿದರು ತಮ್ಮ ಟಿವಿ ಕಾರ್ಯಕ್ರಮದ ನಂತರ ಮನೆಗೆ ಹಿಂತಿರುಗುತ್ತಿದ್ದರು. ಸುಧಿಯವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ತಲೆಗೆ ತೀವ್ರ ಪೆಟ್ಟಾಗಿರುವ ಕಾರಣದಿಂದ ಉಳಿಸಿಕೊಳ್ಳಲಾಗಲಿಲ್ಲ ಎಂದು ವರದಿಯಾಗಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಅವರು ಈ ಹಿಂದೆ ನಟ ಜಗದೀಶ್ ಅವರ ಅನುಕರಣೆ ಮೂಲಕ ಅದೆಷ್ಟೋ ಹೃದಯಗಳನ್ನು ಗೆದ್ದಿದ್ದರು.
ಸ್ಟಾರ್ ಮ್ಯಾಜಿಕ್‌ಗೆ ಪ್ರವೇಶಿಸಿದ ನಂತರ ಮಲಯಾಳಂ ಟಿವಿ ವೀಕ್ಷಕರಲ್ಲಿ ಮನೆಮಾತಾದರು. ನಟನ ಸಾವಿಗೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅವರ ಅಕಾಲಿಕ ಮರಣವು ಕುಟುಂಬದವರಿಗೆ ಹಾಗೂ ಫ್ಯಾನ್ಸ್ಗೆ ಅತೀವ ದುಃಖ ತಂದಿದೆ.
ಇದನ್ನೂ ಓದಿ: Gufi Paintal : ಮಹಾಭಾರತದ ‘ಶಕುನಿ ಮಾಮಾ’ ಇನ್ನಿಲ್ಲ
ಸ್ಟೇಜ್ ಶೋಗಳು ಮತ್ತು ಟಿವಿ ಕಾರ್ಯಮಗಳ ಜತೆಗೆ, ಸುಧಿ ಚಲನಚಿತ್ರಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. 2015ರಲ್ಲಿ ‘ಕಾಂತಾರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಕಟ್ಟಪ್ಪಣ್ಣ’, ‘ಆ್ಯನ್ ಇಂಟರ್ನ್ಯಾಷನಲ್ ಲೋಕಲ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಕಿರುತೆರೆ
Gufi Paintal : ಮಹಾಭಾರತದ ‘ಶಕುನಿ ಮಾಮಾ’ ಇನ್ನಿಲ್ಲ
ಬಿ ಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ʻಶಕುನಿ ಮಾಮಾʼ ಆಗಿ ಕಾಣಿಸಿಕೊಂಡಿರುವ ಹಿರಿಯ ನಟ ಗುಫಿ ಪೈಂಟಲ್ (Gufi Paintal) ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು; 1988ರಿಂದ 1990ರವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಬಿ ಆರ್ ಚೋಪ್ರಾ ಅವರ ಜನಪ್ರಿಯ ಧಾರಾವಾಹಿ ಮಹಾಭಾರತದಲ್ಲಿ ʻಶಕುನಿ ಮಾಮಾʼ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟ ಗುಫಿ ಪೈಂಟಲ್ (Gufi Paintal) ಜೂನ್ 5ರಂದು ನಿಧನರಾಗಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 78 ವರ್ಷ ವಯಸ್ಸಾಗಿತ್ತು. ಜೂನ್ 5ರ ಸೋಮವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಹಾಭಾರತದಲ್ಲಿ ʻಶಕುನಿ ಮಾಮಾʼ ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಮರೆಯುವುದು ಅಸಾಧ್ಯವೆಂದೇ ಹೇಳಬೇಕು. ಇದೀಗ ಗುಫಿ ಪೈಂಟಲ್ ಬಾರದ ಲೋಕಕ್ಕೆ ಹೋಗಿದ್ದಾರೆ. ನಟ ಗುಫಿ ಪೈಂಟಲ್ ಅವರ ಸೋದರಳಿಯ ಹಿತೇನ್ ಪೈಂಟಲ್ ಮಾಧ್ಯಮಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ “ ಗುಫಿ ಪೈಂಟಲ್ ದುರದೃಷ್ಟವಶಾತ್ ಜೂನ್ 5ರ ಬೆಳಗ್ಗೆ 9ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯ ಮತ್ತು ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರುʼʼ ಎಂದು ಮಾಹಿತಿ ನೀಡಿದ್ದಾರೆ.
ಗುಫಿ ಪೈಂಟಲ್ ಅವರು ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ ಕಾಯಿಲೆಯಿಂದ ಬಳಲುತ್ತಿದ್ದರು. ಏಳೆಂಟು ದಿನಗಳಿಂದ ಆಸ್ಪತ್ರೆಯಲ್ಲಿದ್ದರು ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಇಂದು ಸಂಜೆ 4 ಗಂಟೆಗೆ ಮುಂಬಯಿ ಉಪನಗರ ಅಂಧೇರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
RIP Gufi Paintal
— કૃષ્ણમ 🇮🇳 (@OsmKrishh) June 5, 2023
💐💐💐💐💐#Mahabharat #GufiPaintal pic.twitter.com/EFKCBm0dP4
ಗುಫಿ ಪೈಂಟಲ್ ಹಿಂದಿ ಚಲನಚಿತ್ರಗಳ ಹೊರತಾಗಿ, 1980ರ ದಶಕದಲ್ಲಿ ಕೆಲವು ಟಿವಿ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದರು. ನಟನೆಯ ಮೊದಲು ಎಂಜಿನಿಯರ್ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್‌ನಲ್ಲಿ ಪ್ರಾರಂಭಿಸಿದರು. 1975ರ ʻರಫೂ ಚಕ್ಕರ್ʼ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು. ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!