Milana Nagaraj: ಫೆಬ್ರವರಿ 23ಕ್ಕೆ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್; ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ‌ ಮಿಲನಾ-ಪೃಥ್ವಿ! - Vistara News

ಸ್ಯಾಂಡಲ್ ವುಡ್

Milana Nagaraj: ಫೆಬ್ರವರಿ 23ಕ್ಕೆ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್; ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ‌ ಮಿಲನಾ-ಪೃಥ್ವಿ!

Milana Nagaraj: ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರತಂಡ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ.‌ ಫೆಬ್ರವರಿ 23ಕ್ಕೆ ಸಿನಿಮಾವನ್ನು ತೆರೆಗೆ ತರುವುದಾಗಿ ಚಿತ್ರತಂಡ ತಿಳಿಸಿದೆ.

VISTARANEWS.COM


on

Milana-Pruthvi Ambaar For Registration on February 23
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್‌ (Milana Nagaraj) ನಟಿಸಿರುವ ‘ಫಾರ್‌ ರಿಜಿಸ್ಟ್ರೇಷನ್‌’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರತಂಡ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ.‌ ಫೆಬ್ರವರಿ 23ಕ್ಕೆ ಸಿನಿಮಾವನ್ನು ತೆರೆಗೆ ತರುವುದಾಗಿ ಚಿತ್ರತಂಡ ತಿಳಿಸಿದೆ.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ʻʻನಮಗೆ ಇದೊಂದು ರೀತಿ ಚಾಲೆಂಜಿಂಗ್ ಟೈಮ್. ಸಿನಿಮಾ ಬಿಡುಗಡೆ ತಡವಾಯ್ತು. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನೇ ಹೊಣೆ ತೆಗೆದುಕೊಳ್ಳುತ್ತೇನೆ. ತುಂಬಾ ಕಾರಣಗಳಿಂದ ಸಿನಿಮಾ ತಡವಾಯ್ತು. ಒಳ್ಳೆ ಔಟ್ ಪುಟ್ ಕೊಡಲು ಸಮಯ ಹಿಡಿಯಿತು. ಕ್ವಾಲಿಟಿ ಹಾಗೂ ಟೆಕ್ನಿಕಲ್ ದೃಷ್ಟಿಯಿಂದ ಟೈಮ್ ತೆಗೆದುಕೊಳ್ತು. ಮಿಲನಾ ಹಾಗೂ ಪೃಥ್ವಿ ಪಾತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಕಂಪ್ಲೀಟ್ ಕಾಮಿಡಿ ಎಂಟರ್ ಟೈನರ್. ಪ್ಯಾಕೇಜ್ ಆಫ್ ಎಮೋಷನ್ ಹಾಗೂ ಡ್ರಾಮಾ ಚಿತ್ರದಲ್ಲಿದೆ. ಸೆನ್ಸಾರ್ ಆಗಿದ್ದು, ಫೆಬ್ರವರಿ 23ಕ್ಕೆ ಚಿತ್ರ ತೆರೆಗೆ ಬರುತ್ತಿದೆʼʼ ಎಂದು ತಿಳಿಸಿದರು.

ನಟ ಪೃಥ್ವಿ ಅಂಬಾರ್‌ ಮಾತನಾಡಿ, ʻʻದಿಯಾಗೂ ಮೊದಲು ಸಹಿ ಮಾಡಿದ ಚಿತ್ರವಿದು. ನನ್ನ ತುಳು ಚಿತ್ರ ರಿಲೀಸ್ ಆದಾಗ ನವೀನ್ ಸರ್ ಮಂಗಳೂರಿನಲ್ಲಿ ಇದ್ದರು. ಅಲ್ಲಿ ಸಿನಿಮಾ ನೋಡಿ‌ ಮೆಚ್ಚಿ ನನಗೆ ಕಾಲ್ ಮಾಡಿದರು. ಹಾಗೇ ನನ್ನ ಜರ್ನಿ ಫಾರ್ ರಿಜಿಸ್ಟರ್ ಜತೆ ಮುಂದುವರಿದಿದೆ. ಫ್ಯಾಷನೆಟೇಡ್ ಪ್ರೊಡಕ್ಷನ್ ನವೀನ್. ರಿಜಿಸ್ಟ್ರೇಷನ್ ಎನ್ನುವುದು ಎಲ್ಲಾ ವಿಷಯಕ್ಕೂ ಬೇಕು. ಕಾರು, ಜಾಗಕ್ಕೆ ಮಾತ್ರವಲ್ಲ. ಸಂಬಂಧಗಳು ಸರಿಯಾದ ರೀತಿ ರಿಜಿಸ್ಟರ್ ಆಗಬೇಕು ಎಂದಾಗ ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಂಡಿದ್ದಾರೆ. ನಿರ್ಮಾಪಕರು ಹಾಗೂ ನಿರ್ದೇಶಕರು. ಸಂಬಂಧಗಳ ಬಗ್ಗೆ ಸಂಬಂಧಗಳು ರಿಜಿಸ್ಟರ್ ಆಗುವ ಬಗ್ಗೆ ತುಂಬಾ ಒಳ್ಳೆಯ ತಿಳಿ ಹಾಸ್ಯ ಇರುವ ಸಿನಿಮಾʼʼ ಎಂದರು.

ಇದನ್ನೂ ಓದಿ: Milana Nagaraj | ಚಂದನ್‌ ಶೆಟ್ಟಿ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಪೃಥ್ವಿ ಅಂಬಾರ್‌: `Don’t Worry Bro’ ವಿಡಿಯೊ ಸಾಂಗ್‌ ಔಟ್‌!

ನಾಯಕಿ ಮಿಲನಾ ನಾಗರಾಜ್ ಮಾತನಾಡಿ, ʻʻನಾನು ನೋಡಿರುವ ಫ್ಯಾಷನೇಟೆಡ್ ನಿರ್ಮಾಪಕರಲ್ಲಿ ನವೀನ್ ಕೂಡ ಒಬ್ಬರು. ಇಂತಹ ನಿರ್ಮಾಪಕರು ಗೆಲ್ಲಬೇಕು. ಹೆಚ್ಚು ಸಿನಿಮಾ ಬರಬೇಕು. ನವೀನ್ ಅವರು ಪ್ರಿಪರೇಷನ್ ಆಗಿ ಬಂದಿದ್ದರು. ಚಿತ್ರದಲ್ಲಿ ಒಳ್ಳೆ ತಾರಾಬಳಗವಿದೆ. ನನ್ನ ಪೃಥ್ವಿ ಮೊದಲ ಬಾರಿಗೆ ಕಾಂಬಿನೇಷನ್, ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮಾ. ತುಂಬಾ ಜನಗಳಿಗೆ ಹತ್ತಿರವಾಗುವ ಸಿನಿಮಾ. ಹೊಡಿಬಡಿ ಇಲ್ಲ ಫೈಟ್ ಇಲ್ಲ. ಮ್ಯೂಸಿಕ್ ತುಂಬಾ ಚೆನ್ನಾಗಿ ಮಾಡಿದ್ದಾರೆʼʼ ಎಂದರು.

ನಿರ್ಮಾಪಕ ನವೀನ್ ರಾವ್ ಮಾತನಾಡಿ, ʻʻನಾನು ಡೈರೆಕ್ಟರ್ ಫಂಡ್ ಆಗಿ ಸಿನಿಮಾ ಶುರು ಮಾಡೋಣಾ ಎಂದು ಹೊರಟೆವು. ಕಥೆಗೆ ಯಾರ್ ಪಾತ್ರ ಇರಬೇಕು. ಅದೇ ತರ ಎಲ್ಲಾ ಬೆಳೆದುಕೊಂಡು ಹೋಗಿ ಇಲ್ಲಿ ನಿಂತಿದ್ದೇವೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದೇವೆ ನಿಮ್ಮ ಸಹಕಾರ ಇರಲಿʼʼ ಎಂದರು.

ಇದನ್ನೂ ಓದಿ: Milana Nagaraj | ಅಂಡರ್‌ ವಾಟರ್‌ ಶೂಟಿಂಗ್‌ನಲ್ಲಿ ಪೃಥ್ವಿ ಅಂಬಾರ್‌-ಮಿಲನಾ ನಾಗರಾಜ್‌: `FOR REGN’ನಲ್ಲಿ “ಮೋಕೊ ಬೋಟ್”!

ಮಿಲನಾ ನಟಿಸಿದ್ದ ‘ಲವ್​ ಮಾಕ್ಟೇಲ್​’ ಚಿತ್ರ 2020ರ ಫೆಬ್ರವರಿ ಸನಿಹ ಅಂದರೆ ಜ.31 ತೆರೆಕಂಡಿತ್ತು. ‘ಲವ್​ ಮಾಕ್ಟೇಲ್​ 2’ ಚಿತ್ರ 2022ರ ಫೆ.11ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಅದೇ ರೀತಿ ಪೃಥ್ವಿ ಅಂಬಾರ್​ ನಟಿಸಿದ್ದ ‘ದಿಯಾ’ ಚಿತ್ರ 2020ರ ಫೆ.7ರಂದು ತೆರೆಕಂಡು ಗಮನ ಸೆಳೆದಿತ್ತು. ಈಗ ಮಿಲನಾ ಮತ್ತು ಪೃಥ್ವಿ ಅಂಬಾರ್​ ಅವರು ಜತೆಯಾಗಿ ನಟಿಸಿರುವ ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲೇ ರಿಲೀಸ್​ ಆಗುತ್ತಿರುವುದು ವಿಶೇಷ. 2023ರ ಫೆ.23ರಂದು ಈ ಸಿನಿಮಾ ತೆರೆಕಾಣಲಿದೆ.

ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್‌ ದ್ವಾರಕನಾಥ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, “ನಿಶ್ಚಲ್‌ ಫಿಲಂಸ್‌ ‘ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಬಂಡವಾಳ ಹೂಡಿದ್ದಾರೆ.

ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್‌, ಸಂಗೀತ ಸಂಯೋಜನೆ ಆರ್‌.ಕೆ ಹರೀಶ್‌, ಅಭಿಲಾಷ್‌ ಕಲಾತಿ, ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್‌ ಸಂಕಲನ ಚಿತ್ರಕ್ಕಿದೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ‌ ಇಳಿದಿರುವ ದೀಪಕ್ ಗಂಗಾಧರ್ ಫಿಲ್ಮ್ಶ್‌ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ಗೆದ್ದ ಎತ್ತಿನ ಬಾಲ ಹಿಡಿಯಬಾರದು ಎಂದ ದರ್ಶನ್‌! ಕಾಟೇರ 2 ಬರತ್ತಾ?

Actor Darshan: ‘ಕಾಟೇರ 2’ (Kaatera 2) ಸಿನಿಮಾದ ಘೋಷಣೆ ಆಗಲಿದೆ ಎಂದು ಕೆಲವರು ಊಹಿಸಿದ್ದರು. ಇದೀಗ ಈ ಬಗ್ಗೆ ದರ್ಶನ್‌ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಕನ್ನಡದಲ್ಲಿ ಮಾತ್ರ ʻಕಾಟೇರʼ ಸಿನಿಮಾ ರಿಲೀಸ್‌ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡಿದ್ದು ಹೆಮ್ಮೆಯ ವಿಚಾರ ಎನ್ನುತ್ತಿದ್ದಾರೆ ಫ್ಯಾನ್ಸ್‌. 72 ಮಲ್ಟಿಪ್ಲೆಕ್ಸ್‌ಗಳು ಹಾಗೂ 406 ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಒಂದು ವಾರಕ್ಕೆ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

VISTARANEWS.COM


on

Actor Darshan React about Kaatera 2
Koo

ಬೆಂಗಳೂರು: `ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಹಾಗೂ ನಟ ದರ್ಶನ್ (Actor Darshan)​ ಅವರು ಕಾರು ಗಿಫ್ಟ್‌ ಮಾಡಿದ್ದಾರೆ. ಕಾಟೇರದ ಈ ಸಂಭ್ರವನ್ನು ಶೇರ್‌ ಮಾಡಿಕೊಳ್ಳಲು ರಾಕ್​ಲೈನ್​ ವೆಂಕಟೇಶ್ ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದರು. ‘ಕಾಟೇರ 2’ (Kaatera 2) ಸಿನಿಮಾದ ಘೋಷಣೆ ಆಗಲಿದೆ ಎಂದು ಕೆಲವರು ಊಹಿಸಿದ್ದರು. ಇದೀಗ ಈ ಬಗ್ಗೆ ದರ್ಶನ್‌ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ದರ್ಶನ್‌ ಅವರು ಕಾಟೇರ ‘ಪಾರ್ಟ್​ 2’ ಮಾಡಲು ಅ ಸಿದ್ಧರಿಲ್ಲ. ಈ ಬಗ್ಗೆ ನಟ ಮಾತನಾಡಿ ʻʻನಾನು ಸೀಕ್ವೆಲ್‌ ಮಾಡಲ್ಲ. ಕಾಟೇರ ಅಲ್ಲಿಗೆ ಮುಗಿಯಿತು. ನನಗೆ ಇಷ್ಟವಾಗಲ್ಲ. ಗೆದ್ದ ಎತ್ತಿನ ಬಾಲ ಹಿಡಿಯಬಾರದು. ಕಾಟೇರ ಕಥೆಯನ್ನು ಇನ್ನೂ ಎಳೆಯಬಾರದು’ ಎಂದು ದರ್ಶನ್​ ಹೇಳಿದ್ದಾರೆ.

ಇದನ್ನೂ ಓದಿ: Kaatera  Movie: `ಕಾಟೇರ’ ಸಿನಿಮಾಗೆ 100 ದಿನ: ಕೇಕ್‌ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ!

ಸುದ್ದಿಗೋಷ್ಠಿಯಲ್ಲಿ ರಾಕ್​ಲೈನ್​ ವೆಂಕಟೇಶ್​, ನಟ ದರ್ಶನ್​,ನಿರ್ದೇಶಕ ತರುಣ್​ ಸುಧೀರ್​, . ‘ಕಾಟೇರ’ ಚಿತ್ರದ ಸಂಭಾಷಣೆಕಾರ ಮಾಸ್ತಿ, ಕಥೆಗಾರ ಜಡೇಶ್​ ಕುಮಾರ್​ ಹಂಪಿ ಹಾಗೂ ನಟ ಸೂರಜ್​ ಇದ್ದರು. ಇದೇ ವೇಳೆ ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ಕಾರು ನೀಡಲಾಗಿದೆ. ಮುಖ್ಯವಾಗಿ ನಿರ್ದೇಶಕ ತರುಣ್ ಸುಧೀರ್ ಜತೆ ಸೇರಿ ಜಡೇಶ್ ಹಂಪಿ ರಚಿಸಿದ ಕಥೆ, ಚಿತ್ರಕಥೆ ಹಾಗೂ ಮಾಸ್ತಿ ಸಂಭಾಷಣೆ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಇವರಿಬ್ಬರ ಶ್ರಮದ ಬಗ್ಗೆ ಮಾತನಾಡಿದ್ದರು. ಇನ್ನು ನಟ ಸೂರಜ್ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್, ನೋವಿನ ನಡುವೆಯೂ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದರು. ಸದ್ಯ ಮೂವರಿಗೆ ನಿರ್ಮಾಪಕರ ರಾಕ್‌ಲೈನ್ ವೆಂಕಟೇಶ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕನ್ನಡದಲ್ಲಿ ಮಾತ್ರ ʻಕಾಟೇರʼ ಸಿನಿಮಾ ರಿಲೀಸ್‌ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡಿದ್ದು ಹೆಮ್ಮೆಯ ವಿಚಾರ ಎನ್ನುತ್ತಿದ್ದಾರೆ ಫ್ಯಾನ್ಸ್‌. 72 ಮಲ್ಟಿಪ್ಲೆಕ್ಸ್‌ಗಳು ಹಾಗೂ 406 ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಒಂದು ವಾರಕ್ಕೆ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದರು.

Continue Reading

ಸ್ಯಾಂಡಲ್ ವುಡ್

Kaatera  Movie:  ಕಾಟೇರ ಗೆಲುವು: ಮೂವರಿಗೆ ಉಡುಗೊರೆಯಾಗಿ ಸಿಕ್ತು ಕಾರುಗಳು!

Kaatera  Movie:  ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ಕಾರು ನೀಡಲಾಗಿದೆ. ಇನ್ನು ನಟ ಸೂರಜ್ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್, ನೋವಿನ ನಡುವೆಯೂ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದರು. ಸುದ್ದಿಗೋಷ್ಠಿ ವೇಳೆ ರಾಕ್​ಲೈನ್​ ವೆಂಕಟೇಶ್​ ಹಾಗೂ ದರ್ಶನ್ ಈ ಬಗ್ಗೆ ಮಾಹಿತಿ ಹಂಚಿಕೊಂಡರು.

VISTARANEWS.COM


on

Kaatera  Movie Rockline Venkatesh Gifts Car To Jadesh K Hampi Maasthi And Suraj
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ `ಕಾಟೇರ’ ಸಿನಿಮಾ (Kaatera Movie) ಬಾಕ್ಸಾಫೀಸ್‌ನಲ್ಲಿ 200 ಕೋಟಿ ರೂ.ಅಧಿಕ ಕಲೆಕ್ಷನ್ ಮಾಡಿದೆ. ಒಟಿಟಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ.ಈ ಸಂಭ್ರಮದಲ್ಲಿ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಹಾಗೂ ನಟ ದರ್ಶನ್​ ಅವರು ‘ಕಾಟೇರ’ ಸಿನಿಮಾ ತಂಡದ ಮೂವರಿಗೆ ಕಾರು ಗಿಫ್ಟ್​ ನೀಡಿದ್ದಾರೆ. ಸುದ್ದಿಗೋಷ್ಠಿ ವೇಳೆ ರಾಕ್​ಲೈನ್​ ವೆಂಕಟೇಶ್​ ಹಾಗೂ ದರ್ಶನ್ ಈ ಬಗ್ಗೆ ಮಾಹಿತಿ ಹಂಚಿಕೊಂಡರು.

ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ಕಾರು ನೀಡಲಾಗಿದೆ. ಮುಖ್ಯವಾಗಿ ನಿರ್ದೇಶಕ ತರುಣ್ ಸುಧೀರ್ ಜತೆ ಸೇರಿ ಜಡೇಶ್ ಹಂಪಿ ರಚಿಸಿದ ಕಥೆ, ಚಿತ್ರಕಥೆ ಹಾಗೂ ಮಾಸ್ತಿ ಸಂಭಾಷಣೆ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಇವರಿಬ್ಬರ ಶ್ರಮದ ಬಗ್ಗೆ ಮಾತನಾಡಿದ್ದರು. ಇನ್ನು ನಟ ಸೂರಜ್ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್, ನೋವಿನ ನಡುವೆಯೂ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದರು. ಸದ್ಯ ಮೂವರಿಗೆ ನಿರ್ಮಾಪಕರ ರಾಕ್‌ಲೈನ್ ವೆಂಕಟೇಶ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: Kaatera  Movie: `ಕಾಟೇರ’ ಸಿನಿಮಾಗೆ 100 ದಿನ: ಕೇಕ್‌ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ!

ರಾಕ್​ಲೈನ್​ ವೆಂಕಟೇಶ್ ಮಾತನಾಡಿ ʻʻಸಿನಿಮಾದಲ್ಲಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ.ಸೂರಜ್​ ಕೂಡ ಒಳ್ಳೆಯ ಪಾತ್ರ ಮಾಡಿದರು. ಜಡೇಶ್​, ಮಾಸ್ತಿ ಮತ್ತು ಸೂರಜ್​ ಅವರನ್ನು ಗಮನದಲ್ಲಿ ಇಟ್ಟುಕೊಂಡು ನಾನು, ದರ್ಶನ್​ ಮತ್ತು ತರುಣ್​ ಈ ನಿರ್ಧಾರಕ್ಕೆ ಬಂದೆವು. ಈ ಮೂವರಿಗೂ ಕಾರು ಕೊಡಬೇಕು ಎನಿಸಿತುʼʼಎಂದು ಹೇಳಿಕೊಂಡಿದ್ದಾರೆ. ಮೂವರಿಗೂ 10 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರುಗಳನ್ನು ನಿರ್ಮಾಪಕರ ರಾಕ್‌ಲೈನ್‌ ವೆಂಕಟೇಶ್ ಉಡುಗೊರೆಯಾಗಿ ನೀಡಿದ್ದಾರೆ. ಮಾಸ್ತಿ, ಜಡೇಶ್, ಸೂರಜ್ ಮೂವರಿಗೆ ಇದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ʻʻಕನ್ನಡ ಚಿತ್ರರಂಗದಲ್ಲಿ ಬರಹಗಾರರ ಕೊರತೆ ಇದೆ. ಮಲಯಾಳಂ ಸಿನಿಮಾಗಳನ್ನು ಚೆನ್ನಾಗಿ ಓಡುತ್ತವೆ. ಅದಕ್ಕೆ ಕಥೆಯೇ ಕಾರಣ. ನಮ್ಮ ಚಿತ್ರರಂಗದಲ್ಲಿ ಕಥೆಗಾರರನ್ನು ಪ್ರೋತ್ಸಾಹಿಸಬೇಕು. ಆ ಉದ್ದೇಶದಿಂದ ನಾವು ಕಾರು ನೀಡುವ ನಿರ್ಧಾರಕ್ಕೆ ಬಂದೆವು. ಎಂದಿದ್ದಾರೆ ದರ್ಶನ್​.

ಕನ್ನಡದಲ್ಲಿ ಮಾತ್ರ ʻಕಾಟೇರʼ ಸಿನಿಮಾ ರಿಲೀಸ್‌ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡಿದ್ದು ಹೆಮ್ಮೆಯ ವಿಚಾರ ಎನ್ನುತ್ತಿದ್ದಾರೆ ಫ್ಯಾನ್ಸ್‌. 72 ಮಲ್ಟಿಪ್ಲೆಕ್ಸ್‌ಗಳು ಹಾಗೂ 406 ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಒಂದು ವಾರಕ್ಕೆ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದರು.

Continue Reading

ಸ್ಯಾಂಡಲ್ ವುಡ್

Karthik Jayaram: ʻಅಶ್ವಿನಿ ನಕ್ಷತ್ರʼ ಖ್ಯಾತಿಯ ʻಜೆಕೆʼ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​!

Karthik Jayaram: ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

VISTARANEWS.COM


on

Karthik Jayaram The first look of The Veer motion Poster
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಾರ್ತಿಕ್​ ಜಯರಾಮ್ (Karthik Jayaram)​ ಅಲಿಯಾಸ್​ ಜೆಕೆ ಮೇ.1ರಂದು ಜನುಮದಿನ ಆಚರಿಸಿಕೊಂಡರು. ʻಅಶ್ವಿನಿ ನಕ್ಷತ್ರʼ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆಕೆ ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಜಯರಾಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ವೀರ್ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಇದನ್ನೂ ಓದಿ: Karthik Jayram: ಬಣ್ಣದಲೋಕಕ್ಕೆ ಗುಡ್ ಬೈ ಹೇಳ್ತಾರಾ ಜೆಕೆ? ಗೌರವ ಇಲ್ಲದ ಕಡೆ ಇರಲ್ಲ ಅಂದಿದ್ಯಾಕೆ?

ʻವೀರ್ʼ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸಿದ್ದು, ರೋಚಿತ್, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಜೆಕೆ ಮೂಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವೀರ್ ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ಹಾಡುಗಳಿವೆ. ಸದ್ಯ ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಹಾಗೇ ಸಿನಿಮಾದಲ್ಲಿ ಸಿಗಲಿಲ್ಲ. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಬಣ್ಣದಲೋಕಕ್ಕೆ ಗುಡ್ ಬೈ ಎಂದಿದ್ದ ಜೆಕೆ

ʻʻನನಗೆ ಬರುವ ಸಿನಿಮಾ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತ್ತು ಅದಕ್ಕೂ ಕಲ್ಲು ಹಾಕಿದರು. ದುಷ್ಟರಿಂದ ನಾನು ದೂರ ಇರುತ್ತೇನೆ. ಹಾಗಾಗಿ ಸಿನಿಮಾ ಇಂಡಸ್ಟ್ರಿ ನನಗೆ ಬೇಡ. ನನಗೆ ನೆಮ್ಮದಿ ಮುಖ್ಯ. ನನ್ನ ಮಾತು ಯಾರಿಗೆ ಅರ್ಥವಾಗಬೇಕು ಅವರಿಗೆ ಅರ್ಥ ಆದರೆ ಸಾಕು. ಇಂಡಸ್ಟ್ರಿಯಲ್ಲಿ 14ವರ್ಷದಿಂದ ಇದ್ದೇನೆ. ನಟನೆ ನನ್ನ ಫ್ಯಾಶನ್​​. ಈ ವೃತ್ತಿ ಇಲ್ಲ ಅಂದರೆ ಬೇರೆ ಇದೆ. ನಾನು ವಿದ್ಯಾವಂತʼʼ ಎಂದಿದ್ದರು. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡುತ್ತಿದ್ದೇನೆ’ ಎಂದಿದ್ದರು.

ಇತೀಚೆಗೆ ನಟ ಜೆಕೆ ತಮ್ಮ ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಜೆಕೆ ಅವರು ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದರು.

Continue Reading

ಸ್ಯಾಂಡಲ್ ವುಡ್

Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Kantara Movie: ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

VISTARANEWS.COM


on

Kantara Movie Massive Set Constructed In Kundapura
Koo

ಬೆಂಗಳೂರು: ʼಕಾಂತಾರʼ ಪ್ಯಾನ್‌ (Kantara Movie) ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ.

ಒಂದು ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದ್ದು, 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

ಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ನಾಯಕಿಯ ಪಾತ್ರ ಇರಲಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ ಎಂದಿವೆ. ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Continue Reading
Advertisement
West Bengal Governor
ದೇಶ8 mins ago

West Bengal Governor: ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ; TMC ಆಕ್ರೋಶ

T20 World Cup 2024
ಕ್ರೀಡೆ24 mins ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

Actor Darshan React about Kaatera 2
ಸ್ಯಾಂಡಲ್ ವುಡ್26 mins ago

Actor Darshan: ಗೆದ್ದ ಎತ್ತಿನ ಬಾಲ ಹಿಡಿಯಬಾರದು ಎಂದ ದರ್ಶನ್‌! ಕಾಟೇರ 2 ಬರತ್ತಾ?

KSET Exam 2023 provisional score list
ಪ್ರಮುಖ ಸುದ್ದಿ44 mins ago

KSET Exam 2023: ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್‌- 2023ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

Amith Shah
Lok Sabha Election 202449 mins ago

Amit Shah: ಅಮಿತ್‌ ಶಾ ವಿಡಿಯೊ ತಿರುಚಿದ ಪ್ರಕರಣ; ಕಾಂಗ್ರೆಸ್ ಐಟಿ ಸೆಲ್‌ನ ಐವರು ಸದಸ್ಯರ ಬಂಧನ

IPL 2024 Points Table
ಕ್ರೀಡೆ50 mins ago

IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

Lok sabha Election 2024
ದೇಶ52 mins ago

Lok sabha Election 2024: ರಾಯ್‌ಬರೇಲಿಯಲ್ಲಿ ಕಣಕ್ಕಿಳಿದಿರುವ ದಿನೇಶ್‌ ಪ್ರತಾಪ್‌ ಸಿಂಗ್‌ ಹಿನ್ನೆಲೆ ಏನು?

Kaatera  Movie Rockline Venkatesh Gifts Car To Jadesh K Hampi Maasthi And Suraj
ಸ್ಯಾಂಡಲ್ ವುಡ್55 mins ago

Kaatera  Movie:  ಕಾಟೇರ ಗೆಲುವು: ಮೂವರಿಗೆ ಉಡುಗೊರೆಯಾಗಿ ಸಿಕ್ತು ಕಾರುಗಳು!

Lok sabha Election
ದೇಶ1 hour ago

Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

prajwal revanna case arrest
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಟೈಟ್‌ ಎಫ್‌ಐಆರ್‌, ಇದರಲ್ಲಿ ಬಂಧನ ಖಚಿತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ15 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌