ಬಾಲಿವುಡ್
ಟ್ರೇಲರ್ ರಿಲೀಸ್ ಬೆನ್ನಲ್ಲೇ ಟ್ರೆಂಡ್ ಆಗ್ತಿದೆ Boycott LaalSingh Chaddha; ಆಮಿರ್ ಮಾತು ಮರೆತಿಲ್ಲ ಜನ
Laal Singh Chaddha: ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಹಿಂದೆ ಆಡಿದ ಒಂದಷ್ಟು ಮಾತುಗಳನ್ನು ಇಟ್ಟುಕೊಂಡು ನೆಟ್ಟಿಗರು ಅವರಿಬ್ಬರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ.
ಮುಂಬೈ: ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಹಿಂದಿ ಸಿನಿಮಾ ಲಾಲ್ ಸಿಂಗ್ ಛಡ್ಡಾ (Laal Singh Chaddha) ಟ್ರೇಲರ್ ಭಾನುವಾರ (ಮೇ 29)ವಷ್ಟೇ ಬಿಡುಗಡೆಯಾಗಿದೆ. ನಿನ್ನೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆಯೇ ಈ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು ವಿಶೇಷ. ಆದರೆ ಟ್ರೇಲರ್ ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಸೋಷಿಯಲ್ ಮೀಡಿಯಾದಲ್ಲಿ Boycott LaalSingh Chaddha (ಲಾಲ್ ಸಿಂಗ್ ಛಡ್ಡಾ ಚಿತ್ರವನ್ನು ಬಹಿಷ್ಕರಿಸಿ) ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅಂದರೆ ಆಮೀರ್ ಖಾನ್ ಅಭಿನಯದ ಈ ಸಿನಿಮಾವನ್ನು ನೋಡಬೇಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
1994ರ ಹಾಲಿವುಡ್ ಸಿನಿಮಾ ಫಾರೆಸ್ಟ್ ಗಂಪ್‌ನ ರಿಮೇಕ್ ಆಗಿರುವ ಲಾಲ್ ಸಿಂಗ್ ಛಡ್ಡಾವನ್ನು ನಿರ್ದೇಶನ ಮಾಡಿದ್ದು ಅದ್ವೈತ್ ಚಂದನ್. ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ, ಇದೇ ವರ್ಷ 2022ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಸಿನಮಾದಲ್ಲಿ ತೆಲುಗು ನಟ ನಾಗಚೈತನ್ಯ ಕೂಡ ಅಭಿನಯಿಸಿದ್ದು, ಇದು ಅವರ ಮೊದಲ ಹಿಂದಿ ಸಿನಿಮಾ. ಹಾಗಾಗಿ ಸಿನಿಪ್ರಿಯರಲ್ಲಿ ಕುತೂಹಲ ತುಸು ಜಾಸ್ತಿಯಾಗಿಯೇ ಇದೆ. ಇದೇ ಹೊತ್ತಲ್ಲಿ, ಒಂದು ವರ್ಗದ ಜನರು ಈಗಿನಿಂದಲೇ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಹಿಷ್ಕರಿಸುವಂತೆ ಸೋಷಿಯಲ್ ಮೀಡಿಯಾ ಮೂಲಕ ಕರೆ ನೀಡುತ್ತಿದ್ದಾರೆ. ಈ ಅಭಿಯಾನ ಟ್ರೆಂಡ್ ಕೂಡ ಆಗಿದೆ. ಟ್ರೇಲರ್ ವೀಕ್ಷಿಸಿಲು ಇಲ್ಲಿ ಕ್ಲಿಕ್ ಮಾಡಿ.
ಇದರ ಮೂಲ ಸಿನಿಮಾ ಫಾರೆಸ್ಟ್ ಗಂಪ್ ಇನ್ನೂ ಒಟಿಟಿಯಲ್ಲಿ ಲಭ್ಯವಿದೆ. ಸ್ವಂತ ಕತೆ ಮಾಡುವ ಬದಲು ಹಾಲಿವುಡ್ ರಿಮೇಕ್ ಮಾಡುತ್ತಿದ್ದೀರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಹಾಗೇ, ಓಟಿಟಿಯಲ್ಲಿ ಆರಾಮಾಗಿ ಸಿನಿಮಾ ನೋಡಬಹುದು. ಅದರ ರಿಮೇಕ್ ನೋಡಲು ಯಾಕೆ ಹಣ ಸುರಿಯಬೇಕು ಎಂದೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅದರೊಂದಿಗೆ ಈ ಹಿಂದೆ ಆಮಿರ್ ಖಾನ್ ನೀಡಿದ ಕೆಲವು ವಿವಾದಾತ್ಮಕ ಹೇಳಿಕೆಗಳನ್ನೂ ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 2015ರಲ್ಲಿ ಆಮಿರ್ ಖಾನ್ ಅಸಹಿಷ್ಣುತೆ ಬಗ್ಗೆ ಮಾತನಾಡಿ ದೇಶದ ಜನರ ಕೋಪಕ್ಕೆ ಗುರಿಯಾಗಿದ್ದರು. ಭಾರತದಲ್ಲಿ ತೀವ್ರ ಅಸಹಿಷ್ಣುತೆ ಇದೆ. ನಮ್ಮ ಕುಟುಂಬಕ್ಕೂ ಅಭದ್ರತೆ ಕಾಡುತ್ತಿದೆ ಎಂದು ಹೇಳಿದ್ದರು. ಆಗಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈಗ ಅವರ ಲಾಲ್ ಸಿಂಗ್ ಛಡ್ಡಾ ಸಿನಿಮಾ ಟ್ರೇಲರ್ ಬಿಡುಗಡೆಯಾದ ಹೊತ್ತಲ್ಲಿ, ಮತ್ತೊಮ್ಮೆ ಅದೇ ಅಸಹಿಷ್ಣುತೆ ವಿಚಾರವನ್ನೇ ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಕರೀನಾ ಕಪೂರ್ ಕೂಡ ಟ್ರೋಲ್
ಕರೀನಾ ಕಪೂರ್ ಬಗ್ಗೆಯೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ) ನಡೆಯುತ್ತಿದೆ ಎಂಬ ಚರ್ಚೆ, ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಬಳಿಕ ಜೋರಾಗಿ ನಡೆಯುತ್ತಿತ್ತು. ಅಲ್ಲಿ ತಮಗೆ ಬೇಕಾದವರನ್ನು ಮಾತ್ರ ಬೆಳೆಸುತ್ತಾರೆ. ಹೀಗಾಗಿಯೇ ಸುಶಾಂತ್‌ರಂತ ಹಲವು ನಟರು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಅನೇಕರು ಹೇಳಿದ್ದರು. ಆ ವೇಳೆ ಕರೀನಾ ಕಪೂರ್ ಹೀಗೊಂದು ಪ್ರತಿಕ್ರಿಯೆ ನೀಡಿದ್ದರು. “ನನ್ನ ಸಿನಿ ಬದುಕು ಶುರುವಾಗಿ 21 ವರ್ಷ ಕಳೆಯಿತು. ನಾನಿಷ್ಟು ವರ್ಷ ಮಾಡಿದ ಸಾಧನೆ ಯಾವುದೇ ನೆಪೋಟಿಸಂನಿಂದ ಆಗಿದ್ದಲ್ಲ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ ಎಂಬುದನ್ನು ನಾನು ನಮ್ಮ ಸೂಪರ್‌ಸ್ಟಾರ್‌ಗಳ ಮಕ್ಕಳ ಪಟ್ಟಿಯನ್ನು ಕೊಡುವ ಮೂಲಕ ವಿವರಿಸಬಲ್ಲೆ. ನೆಪೋಟಿಸಂ ಇದೆ ಎಂದು ನಮ್ಮನ್ನು ದೂಷಿಸಬೇಡಿ. ನಾವು ಸ್ವಜನಪಕ್ಷಪಾತದಿಂದ ಉದ್ಧಾರವಾದ ಮಕ್ಕಳು ಎಂದು ಭಾವಿಸುವವರು ನಮ್ಮ ಸಿನಿಮಾವನ್ನೇ ನೋಡಬೇಡಿ” ಎಂದಿದ್ದರು. ಈಗ ನೆಟ್ಟಿಗರು ಅದೇ ಮಾತನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ʼಕರೀನಾ ಹೇಳಿದ್ದಾರೆ ಅವರ ಸಿನಿಮಾ ನೋಡುವುದು ಬೇಡವೆಂದು. ನಾವ್ಯಾಕೆ ಅವರ ಸಿನಿಮಾ ನೋಡೋಣ, ಅದೇ ಹಣವನ್ನು ಬಡ ಮಕ್ಕಳಿಗೆ ಊಟ ನೀಡಲು ಖರ್ಚು ಮಾಡೋಣʼ ಎಂದು ಹೇಳುತ್ತಿದ್ದಾರೆ.
ಆಮೀರ್ ಖಾನ್ ತುಂಬ ಕಾದು, ವೈಯಕ್ತಿಕವಾಗಿ ಇಂಟರೆಸ್ಟ್ ತೆಗೆದುಕೊಂಡಿರುವ ಸಿನಿಮಾ ಈ ಲಾಲ್ ಸಿಂಗ್ ಛಡ್ಡಾ. ಆಗಸ್ಟ್ 11ಕ್ಕೆ ತೆರೆಕಾಣಲು ಸಜ್ಜಾಗಿದೆ. ಆದರೆ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿದ್ದು, ಇಲ್ಲಿವೆ ನೋಡಿ ನೆಟ್ಟಿಗರ ಒಂದಷ್ಟು ಟ್ವೀಟ್‌ಗಳು..
ಇದನ್ನೂ ಓದಿ: ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್ ನೈಟ್ಸ್
South Cinema
Rakhi Sawant: ರಾಖಿ ಸಾವಂತ್ ಬಯೋಪಿಕ್‌ಗೆ ರಿಷಬ್ ಶೆಟ್ಟಿ ನಿರ್ದೇಶನ; ನಟಿಯ ಹೊಸ ಆಸೆ ಪೂರೈಸ್ತಾರಾ ಶೆಟ್ರು?
Rakhi Sawant: ತನ್ನ ಜೀವನ ಚರಿತ್ರೆಯನ್ನು ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ ರಾಖಿ ಸಾವಂತ್.
ಬೆಂಗಳೂರು: ರಾಖಿ ಸಾವಂತ್ (Rakhi Sawant) ಆಗಾಗ ವೈಯಕ್ತಿಕ ವಿಚಾರಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಹೆಚ್ಚಾಗಿ ಮಾಜಿ ಪತಿ ಆದಿಲ್ ಖಾನ್ ದುರಾನಿ (Adil Khan Durrani ) ಕುರಿತ ವಿಚಾರಗಳಿಗೆ ಸೌಂಡ್ ಮಾಡುತ್ತಲೇ ಇರುತ್ತಾರೆ. ಆದರೀಗ ನಟಿ ತಮ್ಮ ಬಯೋಪಿಕ್ ಬಗ್ಗೆ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ತನ್ನ ಜೀವನ ಚರಿತ್ರೆಯನ್ನು ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ ರಾಖಿ ಸಾವಂತ್.
ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ಮನೆ ಮುಂದೆ ಬುಲ್ಡೋಜರ್ ತಂದು ಹೈಡ್ರಾಮಾ ಮಾಡಿದ್ದರು. ಮದುವೆ ಬಳಿಕ ತಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಈಗಾಗಲೇ ರಾಖಿ ಸಾವಂತ್ ಹೇಳಿದ್ದಾರೆ. ಅವರು ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಮೆಕ್ಕಾ ಮದೀನಾಗೂ ಅವರು ಹೋಗಿ ಬಂದಿದ್ದಾರೆ. ಆಗಾಗ ತಮ್ಮ ಹೊಸ ಅವತಾರಗಳಿಂದ ಮಾಧ್ಯಮದ ಮುಂದೆ ಅದೆಷ್ಟೋ ಬಾರಿ ಅತ್ತಿದ್ದೂ ಇದೆ. ಇದೀಗ ರಾಖಿ ಸಾವಂತ್ ಜೀವನ ಕಥೆ ಸಿನಿಮಾವಾಗುತ್ತಿದೆಯಂತೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಚ್ಚು ಇಷ್ಟ’ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಮೈಸೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಹೇಳಿದ್ದಾರೆ.
ಇದನ್ನೂ ಓದಿ: Rakhi Sawant: ನನ್ನ ಸಾವಿಗೆ ರಾಖಿ ಸಾವಂತ್ ಕಾರಣ ಎಂದ ಆದಿಲ್; ಮಾಜಿ ಪತಿಯಿಂದ ಮತ್ತೊಂದು ದೂರು!
ಆದಿಲ್ ಖಾನ್ ದುರಾನಿ ಅವರು ರಾಖಿ ಸಾವಂತ್ ವಿರುದ್ಧ ಹಲವು ಆರೋಪಗಳಿಗೆ ತೆರೆ ಎಳೆದಿದ್ದಾರೆ. ತನ್ನ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ. ರಿತೇಶ್ ಜತೆ ಮದುವೆಯಾಗಿರುವಾಗಲೇ ರಾಖಿ ತನ್ನನ್ನು ಮದುವೆಯಾಗಿದ್ದಾಳೆ ಎಂದು ಆದಿಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಮೇಲೂ ಆಕೆ ಮೊದಲ ಪತಿ ರಿತೇಶ್ (Ritesh) ಜತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್ ಮಾಡಿದಳು ಎಂದೆಲ್ಲಾ ಹೇಳಿದ್ದರು. ಇದಾದ ಬಳಿಕ ರಾಖಿ ಸಾವಂತ್ ಪತ್ರಿಕಾಗೋಷ್ಠಿ ಕರೆದು, ಆದಿಲ್ ವಿರುದ್ಧ ಕಿಡಿ ಕಾರಿ ಪತಿ ಹೇಗೆಲ್ಲ ಮೋಸ ಮಾಡಿದರು ಎಂದು ತಿಳಿಸಿದ್ದರು.
South Cinema
Tiger 3 teaser: ಸಲ್ಮಾನ್ ಖಾನ್‌ಗೆ ಭಾರತದಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್ʼ ಬೇಕಂತೆ; ಟೈಗರ್ 3 ಟೀಸರ್ ಔಟ್!
Tiger 3 teaser: ಸೆ. 27ರಂದು ಟೈಗರ್ 3 ಸಿನಿಮಾದ ಹೊಸ ಟೀಸರ್ ʻಟೈಗರ್ ಕಾ ಮೆಸೆಜ್ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.ʻʻನಾನು ಭಾರತದಿಂದ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೇಳುತ್ತಿದ್ದೇನೆʼʼಎಂಬುವ ಡೈಲಾಗ್ ಇದೀಗ ವೈರಲ್ ಆಗುತ್ತಿದೆ.
ಬೆಂಗಳೂರು: ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಳಿಕ, ʻಟೈಗರ್ 3ʼ (Tiger 3 teaser) ಮೂಲಕ ಸಲ್ಮಾನ್ ಖಾನ್ ರಗಡ್ ಲುಕ್‌ನೊಂದಿಗೆ ಬಂದಿದ್ದಾರೆ. ʻಟೈಗರ್ ಕಾ ಮೆಸೆಜ್ʼ ಎಂಬ ವಿಡಿಯೊ ಮೂಲಕ ಮತ್ತೆ ಸಲ್ಮಾನ್ ಅಬ್ಬರಿಸಿದ್ದಾರೆ. ಸಲ್ಮಾನ್ ಖಾನ್ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್ ಟೈಗರ್ ಆಗಿ ಮರಳಿದ್ದಾರೆ. ಸೆ. 27ರಂದು ಟೈಗರ್ 3 ಸಿನಿಮಾದ ಹೊಸ ಟೀಸರ್ ʻಟೈಗರ್ ಕಾ ಮೆಸೆಜ್ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.ʻʻನಾನು ಭಾರತದಿಂದ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೇಳುತ್ತಿದ್ದೇನೆʼʼಎಂಬುವ ಡೈಲಾಗ್ ಇದೀಗ ವೈರಲ್ ಆಗುತ್ತಿದೆ.
ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿಯಂದು ಬಿಡುಗಡೆಯಾಗಲಿದೆ. ‘ಟೈಗರ್ 3’ ಟೀಸರ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಭಿಮಾನಿಗಳು ವಿಮರ್ಶಿಸಿ ಹಾಡಿ ಹೊಗಳಿದ್ದಾರೆ. ಟೈಗರ್ 3 ಬಳಿಕ ಹಲವು ಪತ್ತೆದಾರಿ ಸಿರೀಸ್ ಚಿತ್ರಗಳನ್ನು ವೈಆರ್‌ಎಫ್ ಬಿಡುಗಡೆ ಮಾಡಲಿದೆ. “ಎಲ್ಲಿಯವರೆಗೆ ಟೈಗರ್ ಸಾಯುವುದಿಲ್ಲವೋ, ಅಲ್ಲಿಯವರೆಗೆ ಅವನು ಕಾಣೆಯಾಗುವುದಿಲ್ಲ” ಎಂಬ ಡೈಲಾಗ್ ಸಖತ್ ಮಜವಾಗಿದೆ.
ಒಂದು ನಿಮಿಷದ 43 ಸೆಕೆಂಡುಗಳ ಅವಧಿಯ ಟೀಸರ್ ಇದಾಗಿದೆ. “ಭಾರತಕ್ಕೆ 20 ವರ್ಷಗಳ ಸೇವೆಯ ನಂತರ, ನಾನು ಪ್ರತಿಯಾಗಿ ಏನನ್ನೂ ಕೇಳಲಿಲ್ಲ. ಆದರೆ ಇಂದು ನನಗೆ ಬೇಡಿಕೆಯಿದೆ. ಟೈಗರ್ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್ ಒಬ್ಬ ದ್ರೋಹಿ ಎಂದು ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೇಳುತ್ತಿದ್ದೇನೆʼʼಎಂಬುವ ಸಲ್ಮಾನ್ ಡೈಲಾಗ್ ಹೈಲೈಟ್ ಆಗಿದೆ.
ಇದನ್ನೂ ಓದಿ: Tiger 3 teaser: ಸೆಪ್ಟೆಂಬರ್ 27ಕ್ಕೆ ಸಲ್ಮಾನ್ ಖಾನ್‌ರಿಂದ ಹೊಸ ಸಂದೇಶ! ಏನದು?
जब तक टाइगर मरा नहीं, तब तक टाइगर हारा नहीं #TigerKaMessage #Tiger3 arriving in cinemas this Diwali. Releasing in Hindi, Tamil & Telugu. #KatrinaKaif | #ManeeshSharma | @yrf | #YRF50 | #YRFSpyUniverse pic.twitter.com/TXRz13oU30
— Salman Khan (@BeingSalmanKhan) September 27, 2023
ಈ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೀಗ ಚಿತ್ರವು ಈ ದೀಪಾವಳಿಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ʻಈಗಾಗಲೇ ಯಶ್ ರಾಜ್ ಫಿಲ್ಮ್ಸ್ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.
Jab Tak Tiger Mara Nahi, Tab Tak Tiger Hara Nahi.#TigerKaMessage @BeingSalmanKhan #SalmanKhan 🔥🔥🔥 pic.twitter.com/mKstGj8TBI
— Being Savendra (@Beingsav21) September 27, 2023
ಟೈಗರ್ 3 ಸಿನಿಮಾವು ನವೆಂಬರ್ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಲಿವುಡ್
Parineeti Chopra: ‘ಓ ಪ್ರಿಯಾ’; ಪತಿಗಾಗಿ ವಿಶೇಷ ಹಾಡು ರೆಕಾರ್ಡ್ ಮಾಡಿದ ಪರಿಣಿತಿ ಚೋಪ್ರಾ!
Parineeti Chopra: ಹಿಂದಿ ಮತ್ತು ಪಂಜಾಬಿಯಲ್ಲಿ ಸಾಹಿತ್ಯವನ್ನು ಹೊಂದಿರುವ (lyrics in Hindi and Punjabi) ಹಾಡಿನಲ್ಲಿ, ಪರಿಣಿತಿ ರಾಘವ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಟಿ ಪರಿಣಿತಿ ಚೋಪ್ರಾ (Parineeti Chopra) ಕೆವಲ ನಟಿ ಮಾತ್ರವಲ್ಲ ಗಾಯಕಿಯೂ ಹೌದು. ನಟಿ ಆಗಾಗ ತಾವು ಹಾಡಿರುವ ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಅವರೊಂದಿಗಿನ ವಿವಾಹಕ್ಕಾಗಿ ನಟಿ ʻಓ ಪಿಯಾʼ (O Piya) ಎಂಬ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ಈ ಸುಮಧುರವಾದ ಹಾಡು ಅವರ ಮದುವೆ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು. ಹಿಂದಿ ಮತ್ತು ಪಂಜಾಬಿಯಲ್ಲಿ ಸಾಹಿತ್ಯವನ್ನು ಹೊಂದಿರುವ (lyrics in Hindi and Punjabi) ಹಾಡಿನಲ್ಲಿ, ಪರಿಣಿತಿ ರಾಘವ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಸಮಾರಂಭದಲ್ಲಿ ʻಓ ಪಿಯಾʼ ಹಾಡನ್ನು ನಟಿಯು ರಾಘವ್ ಅವರಿಗಾಗಿ ಹಾಡಿದ್ದಾರೆ ಎಂತಲೂ ವರದಿಯಾಗಿದೆ. ಈ ಹಾಡನ್ನು ಗೌರವ್ ದತ್ತಾ ಸಂಯೋಜಿಸಿದ್ದಾರೆ. ಗೌರವ್, ಸನ್ನಿ ಎಂಆರ್ ಮತ್ತು ಹರ್ಜೋತ್ ಕೌರ್ ಅವರ ಸಾಹಿತ್ಯವಿದೆ. ಇದೀಗ ಈ ಹಾಡು ಯಟ್ಯೂಬ್‌ನಲ್ಲಿ ಲಭ್ಯವಾಗಿದ್ದು, ಪರಿಣಿತಿ ಅವರ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪರಿಣಿತಿ ಅವರ ಸೋದರಸಂಬಂಧಿ, ನಟ ಪ್ರಿಯಾಂಕಾ ಚೋಪ್ರಾ ಅವರು ಮದುವೆಗೆ ಭಾಗಿಯಾಗಿಲ್ಲ. ಉದಯಪುರದಲ್ಲಿ ಪರಿಣಿತಿ ಮತ್ತು ರಾಘವ್ ಸ್ನೇಹಿತರು ಮತ್ತು ಕುಟುಂಬದವರಿಗೆ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಗಣ್ಯರು ಸಮರಾಂಭದಲ್ಲಿ ಸಾಕ್ಷಿಯಾಗಿದ್ದರು.
ಇದನ್ನೂ ಓದಿ: Parineeti Chopra: ದೇವನಾಗರಿ ಲಿಪಿಯಲ್ಲಿ ʻರಾಘವ್ʼ ಹೆಸರು; ಲೆಹೆಂಗಾ ತಯಾರಿಸಲು 104 ದಿನಗಳು ಬೇಕಾಯ್ತು!
ಈ ಮುಂಚೆ ಚಂಡೀಗಢದಲ್ಲಿ ಆರತಕ್ಷತೆ ಇರಲಿದೆ ಎಂದು ವರದಿಯಾಗಿತ್ತು. ಹೊಸ ವರದಿಯ ಪ್ರಕಾರ, ಚಂಡೀಗಢ ಮತ್ತು ದೆಹಲಿಯಲ್ಲಿನ ಆರತಕ್ಷತೆಗಳನ್ನು ರದ್ದುಗೊಳಿಸಲಾಗಿದ್ದು, ಪರಿಣಿತಿ ಮತ್ತು ರಾಘವ್ ಈಗ ತಮ್ಮ ಸ್ನೇಹಿತರಿಗೆ ಮುಂಬೈನಲ್ಲಿ ಅಕ್ಟೋಬರ್ 4ರಂದು ಆರತಕ್ಷತೆ ಆಯೋಜಿಸಿದ್ದಾರೆ ಎನ್ನಲಾಗಿದೆ.
ಬಾಲಿವುಡ್
Shah Rukh Khan: ಕೇವಲ ಸ್ಮಾರ್ಟ್ ಫೋನ್ ಬಳಸಿ ʻಜವಾನ್ʼ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್; ಶಾರುಖ್ ಫಿದಾ!
Shah Rukh Khan: ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ (Shah Rukh Khan) ಅವರು ತಮ್ಮ ಇತ್ತೀಚಿನ ಬ್ಲಾಕ್‌ಬಸ್ಟರ್ ‘ಜವಾನ್’ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಸಿನಿಮಾ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಫ್ಯಾನ್ಸ್ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಶಾರುಖ್ ಆಗಾಗ ಟ್ವಿಟರ್‌ನಲ್ಲಿ ಸೇಷನ್ ಏರ್ಪಡಿಸಿ ಮಾತನಾಡುತ್ತಿದ್ದಾರೆ.
ಇತ್ತೀಚಿನ ಪೋಸ್ಟ್‌ನಲ್ಲಿ ಶಾರುಖ್ ಖಾನ್ ಅವರು ಯೂಟ್ಯೂಬರ್, ಜರ್ಮಾಟಿಕ್ಸ್ (zarmatics) ರಚಿಸಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
This is outstanding!!! Good job…. Very masssy!!! Thank u for the effort. Love u https://t.co/MuPreGvi1x
— Shah Rukh Khan (@iamsrk) September 26, 2023
ಯೂಟ್ಯೂಬರ್ ಜವಾನ್ ಸಿನಿಮಾದ ದೃಶ್ಯವೊಂದನ್ನು ಮರುಸೃಷ್ಟಿ ಮಾಡಿರುವ ಬಗ್ಗೆ ಶಾರುಖ್ ಇದೀಗ ʻʻತುಂಬಾ ಮಾಸ್ ಆಗಿದೆ, ಅದ್ಭುತʼʼ ಎಂದು ಹೊಗಳಿದ್ದಾರೆ. ಶಾರುಖ್ ಖಾನ್ ಅವರ ‘ಜವಾನ್’ ಸೆಪ್ಟೆಂಬರ್ 7ರಂದು ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮಾಡುತ್ತಿದೆ. ಈಗಾಗಲೇ 1000 ಕೋಟಿ ರೂ. ಗಡಿ ದಾಟತಿದೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
2023 ಬಾದ್‌ಷಾ ವರ್ಷ
ಈ ಬಾರಿ ಶಾರುಖ್ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ʼಡಂಕಿʼ ಸಿನಿಮಾವನ್ನು ಫ್ಯಾನ್ಸ್‌ಗೆ ಗಿಫ್ಟ್ ಆಗಿ ನೀಡಲಿದ್ದಾರೆ. ʼಡಂಕಿʼ ಚಿತ್ರಕ್ಕೆ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬೆಂಬಲ ನೀಡಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿಯ ಹೊರತಾಗಿ ಬೊಮನ್ ಇರಾನಿ ಕೂಡ ನಟಿಸಲಿದ್ದಾರೆ.
ಇದನ್ನೂ ಓದಿ: Jawan box office collection: 9 ತಿಂಗಳಲ್ಲೇ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್; ʻಜವಾನ್ʼ ಹೊಸ ದಾಖಲೆ!
ʼಬಾಲಿವುಡ್ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ (Dunki OTT) ಹಕ್ಕುಗಳು ಸೇಲ್ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂ. ಎಂದು ಹೇಳಲಾಗುತ್ತಿದೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.ಕ್ಲಾಸ್ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜತೆ ರಾಜ್‌ಕುಮಾರ್ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
-
ಪ್ರಮುಖ ಸುದ್ದಿ22 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ12 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ13 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ53 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ17 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ13 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ14 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕ್ರಿಕೆಟ್12 hours ago
IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ