ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ನಾಮ ನಿರ್ದೇಶನದಲ್ಲಿ ದರ್ಶನ್, ರಕ್ಷಿತ್ ಚಿತ್ರಗಳಿಗೆ ಸಿಂಹಪಾಲು - Vistara News

ಸಿನಿಮಾ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ನಾಮ ನಿರ್ದೇಶನದಲ್ಲಿ ದರ್ಶನ್, ರಕ್ಷಿತ್ ಚಿತ್ರಗಳಿಗೆ ಸಿಂಹಪಾಲು

Chandanavana Film Critics Academy Awards: ಈ ಬಾರಿಯ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್‌ನ ನಾಮಿನೇಷನ್‌ ಪಟ್ಟಿ ಪ್ರಕಟವಾಗಿದೆ. ಯಾರು ಯಾವ ವಿಭಾಗದಲ್ಲಿ ನಾಮಿನೇಟ್‌ ಆಗಿದ್ದಾರೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

award
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ (Chandanavana Film Critics Academy Awards) ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ಮತ್ತು ನಟಿ ಅಮೂಲ್ಯ (Amulya) ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನಗಳನ್ನು ಘೋಷಿಸಲಾಗಿದೆ. ಈ ಪೈಕಿ ದರ್ಶನ್ ನಟನೆಯ ʼಕಾಟೇರʼ (Kaatera) ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ಶೆಟ್ಟಿ ಅಭಿನಯದ ʼಸಪ್ತ ಸಾಗರದಾಚೆ ಎಲ್ಲೋʼ (Sapta Saagaradaache Ello) ಸಿನಿಮಾ ಎರಡನೇ ಸ್ಥಾನ ಪಡೆದಿದೆ.

ಅತ್ಯುತ್ತಮ ನಟ (ದರ್ಶನ್), ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ‘ಕಾಟೇರ’ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ʼಸಪ್ತ ಸಾಗರದಾಚೆ ಎಲ್ಲೋʼ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ, ʼಡೇರ್ ಡೆವಿಲ್ ಮುಸ್ತಫಾʼ, ʼಆಚಾರ್ ಆ್ಯಂಡ್‌ ಕೋʼ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡಿವೆ.

ಇಂದ್ರಜಿತ್ ಲಂಕೇಶ್ ಮಾತನಾಡಿ, ʼʼಕನ್ನಡದ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆʼʼ ಎಂದು ಶ್ಲಾಘಿಸಿದರು. ನಟಿ ಅಮೂಲ್ಯ ಮಾತನಾಡಿ ʼʼಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳುʼʼ ಎಂದರು.

ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜತೆಗೆ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದೆ. ಈ ಬಾರಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಜತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಈ ಕುರಿತು ಮಾತನಾಡಿದ ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್ ʼʼಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣುದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆʼʼ ಎಂದು ಹೇಳಿದರು.

ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ʼʼವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆʼʼ ಎಂದು ತಿಳಿಸಿದರು.
ಜನವರಿ 28ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ನಾಮಿನೇಷನ್‌ ವಿವರ

ಅತ್ಯುತ್ತಮ ಚೊಚ್ಚಲ ನಿರ್ಮಾಣ-ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿ

  • ಸ್ವಾತಿ ಮುತ್ತಿನ ಮಳೆ ಹನಿಯೇ (ರಮ್ಯಾ – ಆ್ಯಪಲ್ ಬಾಕ್ಸ್ ಸ್ಟುಡಿಯೋಸ್)
  • ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ (ವರುಣ್ ಸ್ಟುಡಿಯೋಸ್)
  • ಡೇರ್‌ಡೆವಿಲ್ ಮುಸ್ತಫಾ (ಸಿನೆಮಾ ಮರ)
  • ಸೌತ್ ಇಂಡಿಯನ್ ಹೀರೋ (ಶಿಲ್ಪಾ ಎಲ್.ಎಸ್.)
  • ಮಂಡಲ (ಅಜಯ್ ಸರ್ಪೆಷ್ಕರ್)

ಅತ್ಯುತ್ತಮ ಚೊಚ್ಚಲ ನಟಿ-ತ್ರಿಪುರಾಂಬ ಅವಾರ್ಡ್

  • ಆರಾಧನಾ ರಾಮ್ (ಕಾಟೇರ)
  • ನಿರೀಕ್ಷಾ ರಾವ್ (ರಾಜಯೋಗ)
  • ಅಮೃತಾ ಪ್ರೇಮ್ (ಟಗರು ಪಲ್ಯ)
  • ಚೈತ್ರಾ ಎಚ್.ಜಿ (ಮಾವು ಬೇವು)
  • ಪ್ರೀತಿಕಾ ದೇಶಪಾಂಡೆ (ಪೆಂಟಗನ್)

ಅತ್ಯುತ್ತಮ ಚೊಚ್ಚಲ ನಟ-ಸಂಚಾರಿ ವಿಜಯ್ ಪ್ರಶಸ್ತಿ

  • ಶಿಶಿರ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)
  • ರಾಜೇಶ್ ಧ್ರುವ ( ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ)
  • ಶಿವಣ್ಣ ಬೀರುಹುಂಡಿ (ದೊಡ್ಡಹಟ್ಟಿ ಬೋರೇಗೌಡ)
  • ಕಿರಣ್ ನಾರಾಯಣ್ (ಸ್ನೇಹಶ್ರೀ)
  • ಸಾರ್ಥಕ್ (ಸೌತ್ ಇಂಡಿಯನ್ ಹೀರೋ)

ಅತ್ಯುತ್ತಮ ಚೊಚ್ಚಲ ಬರಹಗಾರ-ಚಿ.ಉದಯಶಂಕರ್ ಪ್ರಶಸ್ತಿ

  • ರಾಮೇನಹಳ್ಳೀ ಜಗನ್ನಾಥ್ (ಹೊಂದಿಸಿ ಬರೆಯಿರಿ)
  • ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)
  • ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಆ್ಯಂಡ್‌ ಕೋ)
  • ಉಮೇಶ್ ಕೃಪಾ (ಟಗರು ಪಲ್ಯ)
  • ಅಜಯ್ ಸರ್ಪೆಶ್ಕರ್ (ಮಂಡಲ)

ಚೊಚ್ಚಲ ನಿರ್ದೇಶನ-ಶಂಕರ್‌ ನಾಗ್‌ ಪ್ರಶಸ್ತಿ

  • ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಆ್ಯಂಡ್‌ ಕೋ)
  • ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ)
  • ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಾಫಾ)
  • ದೇವೇಂದ್ರ ಬಡಿಗೇರ್ (ರುದ್ರಿ)
  • ಉಮೇಶ್ ಕೃಪಾ (ಟಗರು ಪಲ್ಯ)

ಅತ್ಯುತ್ತಮ ವಿಎಫ್‍ಎಕ್ಸ್‌

  • ಸಪ್ತಸಾಗರದಾಚೆ ಎಲ್ಲೋ (ಎ ಮತ್ತು ಬಿ)- ಪಿಂಕ್ ಸ್ಟುಡಿಯೋಸ್– ರಾಹುಲ್ ವಿ. ಗೋಪಾಲಕೃಷ್ಣ
  • ಕಬ್ಜ– ಯೂನಿಫೈ ಮೀಡಿಯಾ
  • ಗುರುದೇವ್ ಹೊಯ್ಸಳ– ಡಿಜಿಟಲ್ ಟರ್ಬೋ ಮೀಡಿಯಾ, ಖುಷ್
  • ಕಾಟೇರ– ಗಗನ್ ಅಜೈ
  • ಘೋಸ್ಟ್– ಆಸೋ ಸ್ಟುಡಿಯೋಸ್ (ಟೆಹರನ್), ಮೊಹಮ್ಮದ್ ಅಬ್ಡಿ

ಅತ್ಯುತ್ತಮ ಕಲಾ ನಿರ್ದೇಶನ

  • ಕಬ್ಜ-ಶಿವಕುಮಾರ್ ಜೆ
  • ಸಪ್ತ ಸಾಗರದಾಚೆ ಎಲ್ಲೋ (ಎ ಮತ್ತು ಬಿ)- ಉಲ್ಲಾಸ್ ಹೈದರ್
  • ಕಾಟೇರ– ಗುಣ
  • ಘೋಸ್ಟ – ಮೋಹನ್ ಬಿ ಕೆರೆ
  • ಕೈವ– ಧರಣಿ ಗಂಗೆಪುತ್ರ

ಅತ್ಯುತ್ತಮ ಸಾಹಸ ನಿರ್ದೇಶನ

  • ಸಪ್ತ ಸಾಗರದಾಚೆ ಎಲ್ಲೋ (ಬಿ ಸೈಡ್)- ಚೇತನ್ ಡಿʼಸೋಜಾ, ವಿಕ್ರಮ್ ಮೋರ್
  • ಗುರುದೇವ್ ಹೊಯ್ಸಳ– ದಿಲೀಪ್ ಸುಬ್ರಹ್ಮಣ್ಯ, ಅರ್ಜುನ್ ರಾಜ್
  • ಕಬ್ಜ– ರವಿ ವರ್ಮಾ, ವಿಕ್ರಮ್ ಮೋರ್
  • ಕೈವ– ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ
  • ಕಾಟೇರ– ರಾಮ್ ಲಕ್ಷ್ಮಣ

ಅತ್ಯುತ್ತಮ ಛಾಯಾಗ್ರಹಣ

  • ಸಪ್ತ ಸಾಗರದಾಚೆ ಎಲ್ಲೋ (ಬಿ ಸೈಡ್)- ಅದ್ವೈತ ಗುರುಮೂರ್ತಿ
  • ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ– ಅರವಿಂದ್ ಕಶ್ಯಪ್
  • ಸ್ವಾತಿ ಮುತ್ತಿನ ಮಳೆ ಹನಿಯೇ– ಪ್ರವೀಣ್ ಶ್ರೀಯಾನ್
  • ಘೋಸ್ಟ್- ಮಹೇಂದ್ರ ಸಿಂಹ
  • ಕಾಟೇರ– ಸುಧಾಕರ್ ಎಸ್. ರಾಜ್

ಅತ್ಯುತ್ತಮ ಸಂಕಲನ

  • ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ– ಸುರೇಶ್ ಎಂ.
  • ಘೋಸ್ಟ್– ದೀಪು ಎಸ್ ಕುಮಾರ್
  • ಶಿವಾಜಿ ಸುರತ್ಕಲ್ 2– ಆಕಾಶ್ ಶ್ರೀವತ್ಸ್
  • ಕಾಟೇರ– ಕೆ.ಎಂ. ಪ್ರಕಾಶ್
  • ಕೈವ– ಕೆ.ಎಂ. ಪ್ರಕಾಶ್

ಅತ್ಯುತ್ತಮ ನೃತ್ಯ ನಿರ್ದೇಶನ

  • ಪುಷ್ಪವತಿ (ಕ್ರಾಂತಿ)- ಗಣೇಶ್
  • ಪಸಂದಾಗವ್ಳೆ (ಕಾಟೇರ)- ಭೂಷಣ್
  • ಬ್ಯಾಡ್ ಮ್ಯಾನರ್ಸ್ (ಬ್ಯಾಡ್ ಮ್ಯಾನರ್ಸ್) – ಬಿ. ಧನಂಜಯ್
  • ನೈಂಟಿ ಹಾಕು ಕಿಟ್ಟಪ್ಪ (ಕೌಸಲ್ಯ ಸುಪ್ರಜಾ ರಾಮ) – ಕಲೈ
  • ಚುಮು ಚುಮು (ಕಬ್ಜ) – ಜಾನಿ ಮಾಸ್ಟರ್

ಅತ್ಯುತ್ತಮ ಚಿತ್ರ ಸಾಹಿತ್ಯ

  • ಟಗರು ಪಲ್ಯ– ಸಂಬಂಜ ಅಂದ್ರೆ– ಡಾಲಿ ಧನಂಜಯ್
  • ಸಪ್ತ ಸಾಗರದಾಚೆ ಎಲ್ಲೋ–ನದಿಯೇ– ಧನಂಜಯ್ ರಂಜನ್
  • ಕೌಸಲ್ಯ ಸುಪ್ರಜಾ ರಾಮ–ಪ್ರೀತಿಸುವೆ– ಜಯಂತ್ ಕಾಯ್ಕಿಣಿ
  • ರಾಘವೇಂದ್ರ ಸ್ಟೋರ್ಸ್–ಗಾಳಿಗೆ ಗಂಧ– ಗೌಸ್ ಪೀರ್
  • ಸ್ವಾತಿ ಮುತ್ತಿನ ಮಳೆ ಹನಿಯೇ– ಮೆಲ್ಲಗೆ- ಪೃಥ್ವಿ

ಅತ್ಯುತ್ತಮ ಹಿನ್ನೆಲೆ ಸಂಗೀತ

  • ಘೋಸ್ಟ್ – ಅರ್ಜುನ್ ಜನ್ಯ
  • ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
  • ಕಾಟೇರ – ವಿ. ಹರಿಕೃಷ್ಣ
  • ವಿರಾಟಪುರದ ವಿರಾಟ – ಕದ್ರಿ ಮಣಿಕಾಂತ್
  • ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ – ಬಿ.ಅಜನೀಶ್ ಲೋಕನಾಥ್

ಅತ್ಯುತ್ತಮ ಹಿನ್ನೆಲೆ ಗಾಯಕಿ

  • ಕಾಯೋಶಿವ ಕಾಪಾಡೋ ಶಿವ – ಪೆಂಟಾಗನ್ – ಸಂಗೀತಾ ಕಟ್ಟಿ
  • 90 ಹಾಕು ಕಿಟ್ಟಪ್ಪ –ಕೌಸಲ್ಯ ಸುಪ್ರಜಾ ರಾಮ- ಐಶ್ವರ್ಯ ರಂಗರಾಜನ್
  • ಪಸಂದಾಗವ್ನೆ – ಕಾಟೇರ – ಮಂಗ್ಲಿ
  • ಚುಮು ಚುಮು ಚಳಿ – ಕಬ್ಜ- ಐರಾ ಉಡುಪಿ
  • ಮೆಲ್ಲಗೆ – ಸ್ವಾತಿ ಮುತ್ತಿನ ಮಳೆ ಹನಿಯೇ – ಮಾಧುರಿ ಶೇಷಾದ್ರಿ

ಅತ್ಯುತ್ತಮ ಹಿನ್ನೆಲೆ ಗಾಯಕ

  • ನೋಡಲಾಗದೆ – ವೀರಾಟಪುರ ವಿರಾಗಿ – ರವೀಂದ್ರ ಸೊರಗಾಂವಿ
  • ಬೊಂಬೆ ಬೊಂಬೆ – ಕ್ರಾಂತಿ – ಸೋನು ನಿಗಂ
  • ಸಿಂಗಲ್ ಸುಂದರಿ – ರಾಘವೇಂದ್ರ ಸ್ಟೋರ್ಸ್ – ವಿಜಯ ಪ್ರಕಾಶ್ ಮತ್ತು ನವೀನ್ ಸಜ್ಜು
  • ನೊಂದುಕೋಬೇಡ – ಟಗರು ಪಲ್ಯ- ವಾಸುಕಿ ವೈಭವ್
  • ಸಪ್ತ ಸಾಗರದಾಚೆ ಎಲ್ಲೋ – ಸಪ್ತ ಸಾಗರದಾಚೆ ಎಲ್ಲೋ- ಕಪೀಲ್‍ ಕಪೀಲನ್

ಅತ್ಯುತ್ತಮ ಸಂಗೀತ ನಿರ್ದೇಶನ

  • ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
  • ಕೌಸಲ್ಯ ಸುಪ್ರಜಾ ರಾಮ – ಅರ್ಜುನ್ ಜನ್ಯ
  • ಟಗರು ಪಲ್ಯ – ವಾಸುಕಿ ವೈಭವ್
  • ಕ್ರಾಂತಿ – ವಿ. ಹರಿಕೃಷ್ಣ
  • ಕೈವ – ಅಜನೀಶ್ ಲೋಕನಾಥ್

ಅತ್ಯುತ್ತಮ ಬಾಲ ಕಲಾವಿದ / ಕಲಾವಿದೆ

  • ಅಂಬುಜಾ – ಆಕಾಂಕ್ಷ
  • ಶಿವಾಜಿ ಸುರತ್ಕಲ್ 2 – ಆರಾಧ್ಯ
  • ಗೌಳಿ – ನಮನ
  • ಟೋಬಿ – ಸ್ನಿಗ್ಧ ಆರ್. ಶೆಟ್ಟಿ
  • ಓ ನನ್ನ ಚೇತನ – ಪ್ರತೀಕ ಮಂಜುನಾಥ್

ಅತ್ಯುತ್ತಮ ಪೋಷಕ ನಟಿ

  • ಹೇಮಾ ದತ್ತ – ತೋತಾಪುರಿ
  • ಶ್ರುತಿ – ಕಾಟೇರ
  • ತಾರಾ ಅನುರಾಧ – ಟಗರು ಪಲ್ಯ
  • ಸುಧಾ ಬೆಳವಾಡಿ – ಕೌಸಲ್ಯ ಸುಪ್ರಜಾ ರಾಮ
  • ಎಂ.ಡಿ. ಪಲ್ಲವಿ – 19.20.21

ಅತ್ಯುತ್ತಮ ಪೋಷಕ ನಟ

  • ಪೂರ್ಣಚಂದ್ರ ಮೈಸೂರು – ಡೇರ್ ಡೆವಿಲ್ ಮುಸ್ತಾಫಾ
  • ರಂಗಾಯಣ ರಘು – ಟಗರು ಪಲ್ಯ
  • ರಾಘು ಶಿವಮೊಗ್ಗ – ಕೈವ
  • ಮಹದೇವ ಹಡಪದ – 19.20.21
  • ರಮೇಶ್ ಇಂದಿರಾ – ಸಪ್ತ ಸಾಗರದಾಚೆ ಎಲ್ಲೋ

ಅತ್ಯುತ್ತಮ ನಟಿ

  • ರುಕ್ಮಿಣಿ ವಸಂತ್‌ – ಸಪ್ತ ಸಾಗರದಾಚೆ ಎಲ್ಲೋ
  • ಅಕ್ಷತಾ ಪಾಂಡವಪುರ – ಪಿಂಕಿ ಎಲ್ಲಿ?
  • ಮಿಲನಾ ನಾಗರಾಜ್ – ಕೌಸಲ್ಯ ಸುಪ್ರಜಾ ರಾಮ
  • ಸಿರಿ ರವಿಕುಮಾರ್ – ಸ್ವಾತಿ ಮುತ್ತಿನ ಮಳೆ ಹನಿಯೇ
  • ಮೇಘಾ ಶೆಟ್ಟಿ – ಕೈವ

ಅತ್ಯುತ್ತಮ ನಟ

  • ರಕ್ಷಿತ್ ಶೆಟ್ಟಿ – ಸಪ್ತ ಸಾಗರದಾಚೆ ಎಲ್ಲೋ
  • ರಾಜ್ ಬಿ ಶೆಟ್ಟಿ – ಸ್ವಾತಿ ಮುತ್ತಿನ ಮಳೆ ಹನಿಯೇ
  • ರಮೇಶ್ ಅರವಿಂದ್ – ಶಿವಾಜಿ ಸುರತ್ಕಲ್ 2
  • ಶೃಂಗ ಬಿ.ವಿ – 19.20.21
  • ದರ್ಶನ್ – ಕಾಟೇರ

ಅತ್ಯುತ್ತಮ ಸಂಭಾಷಣೆ

  • ಕೈವ – ರಘು ನಿಡುವಳ್ಳಿ
  • ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ – ನಿತಿನ್ ಕೃಷ್ಣಮೂ‍ರ್ತಿ
  • ಕೌಸಲ್ಯ ಸುಪ್ರಜಾ ರಾಮ – ಯದುನಂದನ್
  • ಕಾಟೇರ – ಮಾಸ್ತಿ
  • ಟಗರು ಪಲ್ಯ – ಉಮೇಶ್ ಕೆ ಕೃಪಾ

ಅತ್ಯುತ್ತಮ ಚಿತ್ರಕಥೆ

  • ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ, ಅಭಿಜಿತ್‍ ವೈ.ಆರ್.
  • ಕೈವ – ಜಯತೀರ್ಥ
  • ಸ್ವಾತಿ ಮುತ್ತಿನ ಮಳೆಹನಿಯೇ – ರಾಜ್ ಬಿ. ಶೆಟ್ಟಿ
  • ದೂರದರ್ಶನ – ಸುಕೇಶ್ ಶೆಟ್ಟಿ
  • ಕಾಟೇರ – ತರುಣ್ ಕಿಶೋರ್ ಸುಧೀರ್, ಜಡೇಶ್ ಕೆ. ಹಂಪಿ

ಅತ್ಯುತ್ತಮ ನಿರ್ದೇಶಕ

  • ಜಯತೀರ್ಥ – ಕೈವ
  • ತರುಣ್ ಕಿಶೋರ್ ಸುಧೀರ್ – ಕಾಟೇರ
  • ನಿತೀನ್ ಕೃಷ್ಣಮೂರ್ತಿ – ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
  • ಮಂಸೋರೆ – 19.20.21
  • ರಾಜ್ ಬಿ. ಶೆಟ್ಟಿ – ಸ್ವಾತಿ ಮುತ್ತಿನ ಮಳೆ‌ ಹನಿಯೇ

ಅತ್ಯುತ್ತಮ ಚಿತ್ರ

  • ಸಪ್ತ ಸಾಗರದಾಚೆ ಎಲ್ಲೋ
  • ಡೇರ್ ಡೆವಿ‍ಲ್ ಮುಸ್ತಾಫಾ
  • 19.20.21
  • ಕಾಟೇರ
  • ಕೌಸಲ್ಯ ಸುಪ್ರಜಾ ರಾಮ

ಇದನ್ನೂ ಓದಿ: Vijay Raghavendra: ವಿಜಯ್‌ ರಾಘವೇಂದ್ರ ಈಗ ಖಡಕ್‌ ಪೊಲೀಸ್‌; ʼಕೇಸ್ ಆಫ್ ಕೊಂಡಾಣʼ ಚಿತ್ರದ ಟ್ರೈಲರ್‌ ಔಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

Actor Darshan: ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

VISTARANEWS.COM


on

Actor Darshan Full aggressive mode while he drunk
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ (Actor Darshan) ನೀಡಿದ್ದಾರೆ. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

ಭಾವನಾ ಬೆಳಗೆರೆ ಮಾತನಾಡಿ ʻʻದರ್ಶನ್‌ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್‌ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಪ್ರತಿ ಬಾರಿ ಮಾತನಾಡುವಾಗ ಅಲ್ವಾ! ಎಂಬ ಉತ್ತರಕ್ಕೆ ಕಾಯುತ್ತಾರೆ. ಮಿಕ್ಕಿದ ದಿನದಲ್ಲಿ ಕ್ಯಾಮೆರಾಗೆ ಅಟ್ಯಾಕ್‌ ಮಾಡಲು ಬರುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅಣುಭವ ಹಂಚಿಕೊಳ್ಳುತ್ತಿರುವೆʼʼಎಂದರು.

ಇದನ್ನೂ ಓದಿ: ‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

ʻʻಆಗಿನ ಕಾಲದ ನಟರನ್ನು ನಾವು ಪೂಜಿಸುತ್ತಿದ್ದೇವು. ಅಣ್ಣಾವ್ರ ಆಗಲಿ ಹಲವು ನಟರು ಇಷ್ಟವಾಗುತ್ತಿದ್ದರು. ಆದರೆ ಆಗ ಅಭಿಮಾನಿಗಳ ನಡುವೆ ಜಿದ್ದಾ ಜಿದ್ದಿ ಇರಲಿಲ್ಲ. ಆದರೆ ಈಗ ದರ್ಶನ್‌ ಅಥವಾ ಅಪ್ಪು, ಸುದೀಪ್‌ ಈ ರೀತಿ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ಮುಂಚೆ ಎಲ್ಲರೂ ಒಟ್ಟಿಗೆ ನಿಂತು ಬೆಳೆಸುತ್ತಿದ್ದರು. ಆದರೀಗ ಒಬ್ಬರ ಫ್ಯಾನ್ಸ್‌ ಇನ್ನೊಬ್ಬರ ಸಿನಿಮಾ ಕೂಡ ನೋಡುತ್ತಿಲ್ಲʼʼಎಂದರು.

ನಮ್ಮ ತಂದೆ ಅವತ್ತು ಬುದ್ಧಿ ಹೇಳಿದ್ದೇ ತಪ್ಪಾ?

ʻʻನನ್ನ ತಂದೆ ದರ್ಶನ್‌ ಅವರಿಗೆ ವಿಜಯಲಕ್ಷ್ಮಿ ಅವರನ್ನು ಹೊಡೆಯಬೇಡ ಎಂದಿದ್ದಾಗ, ದರ್ಶನ್‌ ನನ್ನ ಹೆಂಡತಿ ಅವಳು ಹೊಡತ್ತೀನಿ, ನೀನು ಯಾರು ಎಂದು ಕೇಳಿದ್ದರು. ಆದರೆ ನನ್ನ ತಂದೆ ಬುದ್ಧಿ ಮಾತು ಹೇಳಿದ್ದರು. ಕುಡಿದಾಗ ಮಾತ್ರ ದರ್ಶನ್‌ ಹೀಗೆ. ಆದರೆ ಬೇರೆ ಸಮಯದಲ್ಲಿ ತುಂಬ ಸಾಫ್ಟ್‌. ಈ ಕೃತ್ಯ ಆದಾಗ ಅವರು ಕುಡಿದಾಗಲೇ ಮಾಡಿರೋದು. ಆದರೆ ಈಗ ಕಾನೂನು ಒಂದೇ. ಕುಡಿದು ಮಾಡಿದೆ ಅಂತ ಕ್ಷಮೆ ಏನು ಕಡಿಮೆ ಆಗಲ್ಲ. ಆದರೆ ದರ್ಶನ್‌ ಯಾವಾಗ ಈ ರೀತಿಯ ಗೂನವನ್ನು ಸರಿ ಮಾಡ್ಕೋತ್ತಾರೆ? ಆದರೆ ಮುಂದೆ ಏನಾಗುತ್ತೆ ಎನ್ನುವುದು ಗೊತ್ತಿಲ್ಲʼʼಎಂದರು.

ರೇಣುಕಾ ಸ್ವಾಮಿ ಚಿತ್ರದುರ್ಗದವರಾಗಿದ್ದು ಬಡ ಮಧ್ಯಮ ಕುಟುಂಬದವರಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಮದುವೆಯಾಗಿದ್ದ ರೇಣುಕಾ ಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಶನಿವಾರ ಅಪಹರಣ ಮಾಡಿದ್ದ ನಟ ದರ್ಶನ್ ಸಹಚರರು ಪಟ್ಟಣಗೆರೆಯ ಶೆಡ್​ನಲ್ಲಿ ಕೂಡಿಹಾಕಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ, ಚರಂಡಿಗೆ ಎಸಗಿ ಹೋಗಿದ್ದರು.

Continue Reading

ಕಾಲಿವುಡ್

Actress Akshita: ಕನ್ನಡತಿ ಅಕ್ಷಿತಾ ಈಗ ತಮಿಳು ಚಿತ್ರದ ನಾಯಕಿ!

Actress Akshita : ಕನ್ನಡದ ಸಿದ್ಲಿಂಗು-2 ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ.

VISTARANEWS.COM


on

Actress Akshita entry to kollywood cinema
Koo

ಬೆಂಗಳೂರು: ಕನ್ನಡದ ನಟ ನಟಿಯರು ಬೇರೆ ಭಾಷೆಗಳಲ್ಲಿ ಮಿಂಚುವುದು ಹೊಸತೇನಲ್ಲ. ಆದರೆ, ಬೇರೆ ಭಾಷೆಗಳಲ್ಲಿ ಜನಪ್ರಿಯತೆ ದಕ್ಕಿದ ಮೇಲೂ ಕನ್ನಡತನವನ್ನೇ ಧ್ಯಾನಿಸುತ್ತಾ, ತಾಯ್ನೆಲದ ಪ್ರೇಕ್ಷಕರನ್ನು ಚೆಂದದ ಪಾತ್ರಗಳ ಮೂಲಕ ಪ್ರಧಾನ ಆದ್ಯತೆಯಾಗಿಸಿಕೊಂಡವರ ಸಂಖ್ಯೆ ಕಡಿಮೆಯಿದೆ. ಆ ಸಾಲಿಗೆ ಸೇರುವ ಗುಣ ಹೊಂದಿರುವವರು ಅಕ್ಷಿತಾ ಬೋಪಯ್ಯ. ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ಅಕ್ಷಿತಾ, ಕಾಲದ ಸೆಳವಿಗೆ ಸಿಕ್ಕು ತಮಿಳು ಸೀರಿಯಲ್ ಜಗತ್ತಿಗೆ ಅಡಿಯಿರಿಸಿದ್ದರು. ಈವತ್ತಿಗೆ ಆಕೆಯ ಪಾಲಿಗೆ ತಮಿಳು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನೂ ಸಂಪಾದಿಸಿಕೊಂಡಿರುವ ಅಕ್ಷಿತಾ ಈಗ ತಮಿಳು ಚಿತ್ರವೊಂದರ ಮೂಲಕ ನಾಯಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.

ʻಬ್ರಹ್ಮಚಾರಿʼ, ʻಐ ಲವ್ ಯೂʼ, ʻಶಿವಾರ್ಜುನʼ ಮುಂತಾದ ಚಿತ್ರಗಳ ಮೂಲಕ ಅಕ್ಷಿತಾ ಕನ್ನಡದ ಪ್ರೇಕ್ಷಕರಿಗೆಲ್ಲ ಪರಿಚಿತರಾಗಿದ್ದಾರೆ. ಈ ನಡುವೆ ತಮಿಳು ಸೀರಿಯಲ್‌ಗಳಾಗಿ ನಟಿಸುವ ಮೂಲಕ ಭಾರೀ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಹಾಗೆ ಅಕ್ಷಿತಾ ನಟಿಸುತ್ತಿದ್ದ ಪ್ರಸಿದ್ಧ ತಮಿಳು ಧಾರಾವಾಹಿ ನಾಲ್ಕು ತಿಂಗಳ ಹಿಂದೆ ಮುಕ್ತಾಯಗೊಂಡಿತ್ತು. ಅದಾದ ನಂತರ ಸೀರಿಯಲ್ಲುಗಳ ಅವಕಾಶವಿದ್ದರೂ ಕೂಡಾ ಅಕ್ಷಿತಾರ ಆಸಕ್ತಿ ಹೊರಳಿಕೊಂಡಿದ್ದದ್ದು ಸಿನಿಮಾ ರಂಗದತ್ತ. ತಮಿಳು ಕಿರುತೆರೆ ಜಗತ್ತಿನ ಮುಖ್ಯ ನಾಯಕಿಯಾಗಿ ದಾಖಲಾಗಿದ್ದ ಅಕ್ಷಿತಾ, ಸಿನಿಮಾದಲ್ಲಿ ನಟಿಸುವ ಮೂಲಕ ಏಕತಾನತೆಯನ್ನು ದಾಟಿಕೊಳ್ಳುವ ನಿರ್ಧಾರ ಮಾಡಿದ್ದರು.
ಅಂಥಾ ಹೊತ್ತಿನಲ್ಲಿ ತಮಿಳಿನಲ್ಲೊಂದು ಚೆಂದದ ಅವಕಾಶ ಸಿಕ್ಕಿದೆ.

ಕನ್ನಡದ ಸಿದ್ಲಿಂಗು-2 ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ. ಆದರೆ, ಒಂದೊಳ್ಳ್ಳೆ ತಂಡ, ಹೊಸತೆನ್ನಿಸುವಂಥಾ ಕಥಾನಕದೊಂದಿಗೆ ಈ ಸಿನಿಮಾ ತಯಾರಾಗುತ್ತಿರುವ ಬಗ್ಗೆ ಅಕ್ಷಿತಾರೊಳಗೊಂದು ಖುಷಿ ಇದೆ. ಸದ್ಯ ಕೊಡಗಿನ ಸುತ್ತಮುತ್ತ ಸದರಿ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ತಮಿಳು ಒಂದು ಹಂತದಲ್ಲಿ ಅಕ್ಷಿತಾ ಪಾಲಿಗೆ ಗುರುತಿರದ ಭಾಷೆಯಾಗಿತ್ತು. ಆ ಭಾಷೆಯಲ್ಲೇ ಧಾರಾವಾಹಿಯೊಂದರ ನಾಯಕಿಯಾಗೋ ಅವಕಾಶ ಕೂಡಿ ಬಂದಾಗ, ಪ್ರತಿಭೆಯ ಬಲದಿಂದಲೇ ಅದನ್ನು ತಮ್ಮದಾಗಿಸಿಕೊಂಡಿದ್ದವರು ಅಕ್ಷಿತಾ. ಹಾಗೆ ತಮಿಳು ಕಿರುತೆರೆಗೆ ತೆರಳಿ ಅಲ್ಲಿನ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರುವ ಅಕ್ಷಿತಾ ಪಾಲಿಗೆ, ಅಲ್ಲಿಯೇ ನಟಿಯಾಗಿ ನೆಲೆಗಾಣುವ ವಿಪುಲ ಅವಕಾಶಗಳಿದ್ದಾವೆ. ಆದರೂ ಕೂಡಾ ಕನ್ನಡ ಚಿತ್ರರಂಗವೇ ತನ್ನ ಪಾಲಿನ ಖಾಯಂ ನೆಲೆ ಅಂದುಕೊಂಡಿರುವ ಅವರು, ಈಗಾಗಲೇ ಕರ್ನಾಟಕದ ಅಳಿಯ, ಮಿಸ್ಟರ್ ಆಂಡ್ ಮಿಸೆಸ್ ಎಂಬೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆರಡೂ ಸನಿಮಾಗಳೀಗ ಬಿಡುಗಡೆಯ ಹೊಸ್ತಿಲಿನಲ್ಲಿವೆ.

ಹೀಗೆ ಪರಭಾಷಾ ನೆಲದಲ್ಲಿಯೂ ನೆಲೆ ಕಂಡುಕೊಂಡು, ಕನ್ನಡ ಚಿತ್ರರಂಗದಲ್ಲಿಯೂ ಮಿಂಚುವ ಲಕ್ಷಣಗಳನ್ನ ಹೊಂದಿರುವ ಅಕ್ಷಿತಾ ಕೊಡಗಿನವರು. ಬಿಎಸ್‍ಸಿ ಪದವೀಧರೆಯಾಗಿರೋ ಅಕ್ಷಿತಾ ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಕುಟುಂಬದಲ್ಲಿ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡಾ ಆರಂಭದಿಂದಲೇ ನಟಿಯಾಗೋ ಕನಸು ಸಾಕಿಕೊಂಡಿದ್ದವರು ಅಕ್ಷಿತಾ. ಪದವಿ ಮುಗಿಯುತ್ತಲೇ ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ ಬಂದಾಗ ಸೀದಾ ತನ್ನ ಕನಸಿನ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆಯೂರಿದ್ದ ಈಕೆ, ಸಾಯಿ ಕುಮಾರ್ ನಟಿಸಿದ್ದ ರಿಯಲ್ ಪೊಲೀಸ್ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಮೂಲಕ ಎಂಟ್ರಿ ಪಡೆದುಕೊಂಡಿದ್ದ ಅಕ್ಷಿತಾ ಆ ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿ, ನಂತರ ನಾಯಕಿಯಾಗಿಯೂ ಹೊರಹೊಮ್ಮಿದ್ದರು.

ಈ ನಡುವೆ ತಮಿಳು ಸೀರಿಯಲ್ಲುಗಳ ಅವಕಾಶ ಸಿಕ್ಕಿ, ಅಲ್ಲಿ ಪ್ರಸಿದ್ಧಿ ಬಂದರೂ ಕನ್ನಡವೇ ಅಕ್ಷಿತಾರ ಪಾಲಿಗೆ ಪ್ರಧಾನ ಆದ್ಯತೆಯಾಗಿತ್ತು. ಕನ್ನಡದ ನೆಲೆಯಿಂದಲೇ ಬೇರೆ ಬೇರೆ ಭಾಷೆಗಳಲ್ಲಿಯೂ ನಟಿಸಬೇಕೆಂಬುದು ಅವರ ಬಯಕೆ. ಓರ್ವ ನಟಿಯಾಗಿ ಅಕ್ಷಿತಾರದ್ದು ಭಿನ್ನ ಅಭಿರುಚಿ. ಸಿಕ್ಕ ಅವಕಾಶಗಳನ್ನು ಅಳೆದೂ ತೂಗಿ ಒಪ್ಪಿಕೊಳ್ಳುವ ಈಕೆಯ ಪ್ರಧಾನ ಆದ್ಯತೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ. ನಟನೆಗೆ ಅವಕಾಶವಿರುವ ಭಿನ್ನ ಪಾತ್ರಗಳಲ್ಲಿ ಮಿಂಚುವ ಆಸೆ ಹೊಂದಿರುವ ಅಕ್ಷಿತಾ ಈಗ ತಮಿಳಿನಲ್ಲಿ ನಾಯಕಿಯಾಗಿ ಅವತರಿಸಿದ್ದಾರೆ. ತೆಲುಗಿಗೂ ಎಂಟರಿ ಕೊಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಕನ್ನಡದಲ್ಲಿಯೂ ಒಂದಷ್ಗಟು ಒಳ್ಳೆ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಸ್ತ್ರೀ ಪ್ರಧಾನ ಚಿತ್ರದ ಕನಸು ಹೊಂದಿರೋ ಅಕ್ಷಿತಾ, ಅಂಥಾದ್ದೊಂದು ಅಮೋಘ ಅವಕಾಶ ಕನ್ನಡದಿಂದಲೇ ಸಿಗುವ ನಿರೀಕ್ಷೆ ಹೊಂದಿದ್ದಾರೆ.

Continue Reading

ಕಿರುತೆರೆ

Shri Devi Mahathme: ಬರ್ತಿದೆ ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ”; ವೀಕ್ಷಣೆ ಎಲ್ಲಿ?

Shri Devi Mahathme: ಇನ್ನು ಈ ಧಾರಾವಾಹಿಯು ಅದ್ಧೂರಿಯಾಗಿ, ಅಮೋಘ ಸೆಟ್‌ ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ.

VISTARANEWS.COM


on

Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು (star suvrna) ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುವ ಸಲುವಾಗಿ ಗುರು ರಾಘವೇಂದ್ರ ವೈಭವ, ಹರ ಹರ ಮಹಾದೇವ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ (Shri Devi Mahathme) ಹಾಗು ಎಡೆಯೂರು ಶ್ರೀ ಸಿದ್ದಲಿಂಗೇಶ್ವರದಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಇದೀಗ ನಿಮ್ಮ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಜಗವನು ಕಾಯುವ ಕರುಣೆಯ ತಾಯಿ ‘ಪಾರ್ವತಿ’ಯ ಕಥೆಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಅದೇ “ಶ್ರೀ ದೇವೀ ಮಹಾತ್ಮೆ”.

ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ ? ಹಾಗು ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ ‘ಶ್ರೀ ದೇವೀ ಮಹಾತ್ಮೆ’ಯ ಮುಖ್ಯ ಉದ್ದೇಶ.

ಇನ್ನು ಈ ಧಾರಾವಾಹಿಯು ಅದ್ಧೂರಿಯಾಗಿ, ಅಮೋಘ ಸೆಟ್‌ ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ. ಶಿವನ ಪಾತ್ರವನ್ನು ಅರ್ಜುನ್ ರಮೇಶ್, ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Shubman Gill: ಕಿರುತೆರೆ​ ನಟಿಯೊಂದಿಗೆ ಶುಭಮನ್​ ಗಿಲ್ ಮದುವೆ?; ಸ್ವತಃ ಸ್ಪಷ್ಟನೆ ನೀಡಿದ ನಟಿ

ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ” ನಿಮ್ಮ ಮನೆ ಮನದಂಗಳದಲ್ಲಿ ಇದೇ ಜುಲೈ 1 ರಿಂದ ಸೋಮ-ಶನಿವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

{ಬದಲಾದ ಸಮಯದಲ್ಲಿ ಬರ್ತಿದೆ ನಿಮ್ಮ ನೆಚ್ಚಿನ ಧಾರಾವಾಹಿ “ಗೌರಿ ಶಂಕರ” ಇದೇ ಸೋಮವಾರದಿಂದ ಸಂಜೆ 6.30 ತಪ್ಪದೇ ವೀಕ್ಷಿಸಿ}

Continue Reading

ಕ್ರೈಂ

Varthur Santhosh: ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿದ್ದ ವರ್ತೂರು ಸಂತೋಷ್​ ವಿರುದ್ಧ ಪ್ರಕರಣ ದಾಖಲು

Varthur Santhosh: ಹಳ್ಳಿಕಾರ್‌ʼ ವರ್ತೂರ್‌ ಸಂತೋಷ್‌ (Varthur Santhosh) ಅವರು ʻಬಿಗ್‌ ಬಾಸ್‌ ಸೀಸನ್‌ ಹತ್ತರʼ 4ನೇ ರನ್ನರ್‌ ಅಪ್ ಆಗಿದ್ದರು. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ವರ್ತೂರ್‌ ಅವರು ಕಿಚ್ಚ ಸುದೀಪ್‌ ಅವರಿಗೆ ರೇಸ್‌ಗೆ ಆಹ್ವಾನ ನೀಡಿದ್ದರು. ಸುದೀಪ್ ಕೂಡ ರೇಸ್‌ಗೆ ಬರುವುದಾಗಿ ಹೇಳಿದ್ದರು.

VISTARANEWS.COM


on

Varthur Santhosh Animal Transport Rules Violation Allegation
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಅವರ ವಿರುದ್ಧ ಹಲವರು ಟೀಕೆ ಮಾಡುವವರು ಇದ್ದಾರೆ.ಬಿಗ್​ಬಾಸ್ ಮನೆಯಲ್ಲಿದ್ದಾಗಲೇ ಹುಲಿ ಉಗುರು ಪ್ರಕರಣದಿಂದಾಗಿ ಜೈಲು ಪಾಲಾಗಿದ್ದ ವರ್ತೂರು ಸತೋಷ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಾಣಿ ಸಾಗಾಟ ನಿಯಮವನ್ನು ಉಲ್ಲಂಘಿಸಿದ್ದಾರೆಂದು ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘಿಸಿ ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವರ್ತೂರು ಸಂತೋಷ್ ಅನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಸಹ ಮಾಡಲಾಗಿದೆ ಎನ್ನಲಾಗುತ್ತಿದೆ. ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿರುವ ವರ್ತೂರು ಸಂತೋಷ್‌ಗೆ ಸಂಕಷ್ಟ ಎದುರಾಗಿದೆ. ರೇಸ್‌ ಮಾಡಲು ಮುಂದಾಗಿದ್ದ ವರ್ತೂರ್‌ ಒಂದರಲ್ಲಿ ಒಂಬತ್ತು ಹೋರಿಗಳನ್ನು ತುಂಬಿ ಸಾಗಾಟ ಮಾಡಿದ್ದರಂತೆ ಅಲ್ಲದೆ ಅದೇ ಟ್ರಕ್​ನಲ್ಲಿ ಕೆಲವು ವಸ್ತುಗಳನ್ನು ಸಹ ತುಂಬಿಸಿದ್ದರಂತೆ. ಇದು ಪ್ರಾಣಿ ಸಾಗಾಟ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಧಿಕಾರಿ ಹರೀಶ್ ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಲು ಸಹ ಹರೀಶ್ ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ಹಳ್ಳಿಕಾರ್‌ʼ ವರ್ತೂರ್‌ ಸಂತೋಷ್‌ (Varthur Santhosh) ಅವರು ʻಬಿಗ್‌ ಬಾಸ್‌ ಸೀಸನ್‌ ಹತ್ತರʼ 4ನೇ ರನ್ನರ್‌ ಅಪ್ ಆಗಿದ್ದರು. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ವರ್ತೂರ್‌ ಅವರು ಕಿಚ್ಚ ಸುದೀಪ್‌ ಅವರಿಗೆ ರೇಸ್‌ಗೆ ಆಹ್ವಾನ ನೀಡಿದ್ದರು. ಸುದೀಪ್ ಕೂಡ ರೇಸ್‌ಗೆ ಬರುವುದಾಗಿ ಹೇಳಿದ್ದರು.

ಹುಲಿ ಉಗುರು ಹೊಂದಿರುವ ಆರೋಪ ಬಂದು ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದರು. ಸಂತೋಷ್ ಮದುವೆ ಬಗ್ಗೆ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ಮೇಲೆಯೂ ಅವರಿಗೆ ಪ್ರಶ್ನೆ ಎದುರಾಗಿತ್ತು. ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ವರ್ತೂರು ಸಂತೋಷ್. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರು ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತಿ ವಾರ ನಾಮಿನೇಷನ್‌ ಆಗುವಾಗಲೂ ಈ ಕಾರಣ ಎಲ್ಲರ ಬಾಯಿಯಲ್ಲಿ ಬರುತ್ತಿತ್ತು. ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದರು.

Continue Reading
Advertisement
Viral Video
Latest22 seconds ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ25 mins ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest38 mins ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ46 mins ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Viral Video
Latest48 mins ago

Viral Video: ಪ್ರೇಯಸಿ ಹೆಜ್ಜೆ ಇರಿಸಲು ಕಂತೆಕಂತೆ ನೋಟಿನ ಮೆಟ್ಟಿಲು! ಪ್ರಿಯತಮನ ಹುಚ್ಚು ಪ್ರೀತಿ ನೋಡಿ!

Arvind Kejriwal
ದೇಶ49 mins ago

Arvind Kejriwal: ಅರೆಸ್ಟ್‌ ಬೆನ್ನಲ್ಲೇ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಕೇಜ್ರಿವಾಲ್‌

Actor Darshan Full aggressive mode while he drunk
ಸ್ಯಾಂಡಲ್ ವುಡ್54 mins ago

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

5G Spectrum
ವಾಣಿಜ್ಯ56 mins ago

5G Spectrum: 11,300 ಕೋಟಿ ರೂ. ಮೌಲ್ಯದ 5ಜಿ ತರಂಗ ಹರಾಜು; ಭಾರ್ತಿ ಏರ್‌ಟೆಲ್‌ ಮುಂಚೂಣಿ

Rain News
ಕರ್ನಾಟಕ58 mins ago

Rain News: ಕೊಡಗು, ಚಿಕ್ಕಮಗಳೂರು, ಕಾರವಾರದಲ್ಲಿ ವರುಣಾರ್ಭಟ; ಐದು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ!

Money Guide
ಮನಿ-ಗೈಡ್1 hour ago

Money Guide: ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಈ ಅಂಶ ನಿಮಗೆ ತಿಳಿದಿರಲೇ ಬೇಕು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌