Kannada Cinema : ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್‌- ಕಾಮ್‌ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ - Vistara News

ಪ್ರಮುಖ ಸುದ್ದಿ

Kannada Cinema : ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್‌- ಕಾಮ್‌ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ

Kannada Cinema : ಚೌ ಚೌ ಬಾತ್ ಕನ್ನಡದ ಮಟ್ಟಿಗೆ ಅನೇಕ ಮೊದಲುಗಳನ್ನು, ಹೊಸತನವನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ. ಅದು ಕನ್ನಡದ ಮೊಟ್ಟ ಮೊದಲ ಹೈಪರ್ ಲಿಂಕ್ ರಾಮ್‌ ಕಾಮ್‌ ಮಾದರಿಯ ಚಿತ್ರ

VISTARANEWS.COM


on

chow chow bath cinema
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೇಂಜ ಚೇತನ್ ಕುಮಾರ್ ನಿರ್ದೇಶನದ `ಚೌ ಚೌ ಬಾತ್’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಗುರುವಾರ (ಜನವರಿ 25ರಂದು) ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಈ ಟ್ರೈಲರ್ ಅನ್ನು ಚಿತ್ರದ ನಿರ್ಮಾಪಕರಾದ ಸತೀಶ್ ಎಸ್.ಬಿ ತಮ್ಮ ಪತ್ನಿಯೊಂದಿಗೆ ಲೋಕಾರ್ಪಣೆಗೊಳಿಸಿದ್ದಾರೆ.

ಬಿಗ್ ಬಾಸ್‍ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಈ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದಂತೆ ಚಿತ್ರಸಾಹಿತಿ ಪ್ರಮೋದ್ ಮರವಂತೆ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮೂರ್ತಿ ಬೆಳಗೆರೆ, ಸಾಗರ್ ಗೌಡ, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಹರ್ಷವರ್ಧನ್, ಪ್ರಸಾದ್, ನಿಶಾಂತ್ ಶೆಟ್ಟಿ ಸೇರಿದಂತೆ ಚಿತ್ರತಂಡ ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿತ್ತು. ಈಗೊಂದಷ್ಟು ಕಾಲದಿಂದ ಚೌ ಚೌ ಬಾತ್ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ನಿರೀಕ್ಷೆ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾ ವಿಶೇಷವಾದ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ, ಚೌ ಚೌ ಬಾತ್ ಕನ್ನಡದ ಮಟ್ಟಿಗೆ ಅನೇಕ ಮೊದಲುಗಳನ್ನು, ಹೊಸತನವನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ. ಅದು ಕನ್ನಡದ ಮೊಟ್ಟ ಮೊದಲ ಹೈಪರ್ ಲಿಂಕ್ ರಾಮ್‌ ಕಾಮ್‌ ಮಾದರಿಯ (Hyper link Rom-com) ಚಿತ್ರವೆಂಬ ಮಾಹಿತಿಯನ್ನೂ ಕೂಡಾ ನಿರ್ದೇಶಕರು ತೆರೆದಿಟ್ಟಿದ್ದಾರೆ. ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ,ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿರುವ ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನು ಖುದ್ದು ಕೇಂಜ ಚೇತನ್ ಕುಮಾರ್ ಅವರೇ ನಿಭಾಯಿಸಿದ್ದಾರೆ.

ಇದನ್ನೂ ಓದಿ : Animal OTT Release: ಗಣರಾಜ್ಯೋತ್ಸವಕ್ಕೆ ಒಟಿಟಿಯಲ್ಲಿ ರಣಬೀರ್ ಕಪೂರ್ ನಟನೆಯ `ಅನಿಮಲ್’!

ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ `ಚೌ ಚೌ ಬಾತ್’ ಚಿತ್ರ ಮೂಡಿ ಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಕಾರ್ಯ ನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅವರನ್ನು ಅಮಾನತು ಮಾಡಲಾಗಿದ್ದು, ಅವರೊಂದಿಗೆ ಇನ್ನು ಮುಂದೆ ಯಾವುದೇ ವ್ಯವಹಾರ ಮಾಡಬಾರದು ಎಂದು ಸಂಸ್ಥೆಯ ಆಡಳಿತ ಮಂಡಳಿ ವಿನಂತಿಸಿದೆ.

VISTARANEWS.COM


on

Kiran Kumar
Koo


ಬೆಂಗಳೂರು: ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದ ಕಿರಣ್‌ ಕುಮಾರ್‌ ಡಿ ಕೆ ಅವರನ್ನು ದಿನಾಂಕ 19-07-2024ರಂದು ಸೇವೆಯಿಂದ ಅಮಾನತು ಮಾಡಲಾಗಿದ್ದು, ಇನ್ನು ಮುಂದೆ ಇವರೊಂದಿಗೆ ನಮ್ಮ ಸಂಸ್ಥೆಗೆ ಸಂಬಂಧಿಸಿದ ಯಾವುದೇ ವ್ಯವಹಾರ ಮಾಡುವಂತಿಲ್ಲ ಎಂದು ಸಂಸ್ಥೆಯ ಆಡಳಿತ ಮಂಡಳಿ ಹೇಳಿದೆ.

ಇವರೊಂದಿಗೆ ನಮ್ಮ ಸಂಸ್ಥೆಗೆ ಸಂಬಂಧಿಸಿ ಯಾವುದೇ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಯಾರಾದರೂ ಆ ರೀತಿ ಮಾಡಿದ್ದಲ್ಲಿ ಅದಕ್ಕೆ ಅವರೇ ಹೊಣೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Assembly Monsoon Session: ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.

VISTARANEWS.COM


on

Assembly monsoon session UT Khader karnataka assembly live
Koo

ಬೆಂಗಳೂರು: 16ನೇ ವಿಧಾನಸಭೆಯ ಮಳೆಗಾಲದ ಅಧಿವೇಶನಕ್ಕೆ (Vidhan Sabha Session, Assembly monsoon session) ) ಮುನ್ನವೇ ವಿಧಾನಸೌಧವನ್ನು (Vidhana Soudha) ಹೊಸದಾಗಿ ಶೃಂಗರಿಸಲಾಗಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣವನ್ನು (renovation) ನವೀಕರಣಗೊಳಿಸಲಾಗಿದೆ. ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಅವರು ಮುತುವರ್ಜಿ ವಹಿಸಿ ಈ ನವೀಕರಣ ನಡೆಸಿದ್ದು, ಇದೀಗ ಒಳಾಂಗಣ ಹೈಟೆಕ್ ಸ್ಪರ್ಶದಿಂದ ಕಂಗೊಳಿಸುತ್ತಿದೆ.

ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.

ಮಧ್ಯಾಹ್ನ ಹೊತ್ತು ಊಟದ ಲಾಂಜ್‌ನಲ್ಲಿ ಶಾಸಕರಿಗೆ ವಿಶ್ರಾಂತಿ ಪಡೆಯಲು ಅಳವಡಿಸಲಾದ ರಿಕ್ಲೈನರ್‌ಗಳ ಬಗೆಗೆ ನಿನ್ನೆ ಸ್ಪೀಕರ್‌ ಕಲಾಪದಲ್ಲಿ ಹೇಳಿದ್ದರು. ಶಾಸಕರ ಗೈರುಹಾಜರು ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.

ಯಾವುದಕ್ಕೆ ಎಷ್ಟೆಷ್ಟು ಖರ್ಚು?

ವಿಧಾನಸೌಧದ ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶದ್ವಾರ, ಅಸೆಂಬ್ಲಿ ಪ್ರವೇಶದ ಮುಂಭಾಗ ಮತ್ತು ಹಿಂಭಾಗದ ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಮತ್ತು ಮುಂಭಾಗದ ಪಿಲ್ಲರ್ ಮತ್ತು ಹೊಸ ಬಾಗಿಲಿನ ನಡುವೆ 1 ವಾಲ್ ಕ್ಲಾಡಿಂಗ್ ಹಾಕಲು- 43 ಲಕ್ಷ

ಅಸೆಂಬ್ಲಿ ಪ್ರವೇಶ, ಆಡಳಿತ ಮತ್ತು ವಿರೋಧ ಪಕ್ಷದ ಲಾಂಜ್ ಪ್ರವೇಶ ಕಾರಿಡಾರ್, ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶ ಹಂತಗಳಿಗೆ ನೆಲದ ಕಾರ್ಪೆಟ್ ಹಾಕಲು- 32 ಲಕ್ಷ 50 ಸಾವಿರ

ಪಾಲಿಕಾರ್ಬೊನೇಟ್ ಶೀಟ್‌ನಿಂದ ಒಳಗಿನ ಕಾರಿಡಾರ್ ಓಪನ್ನಿಂಗ್‌ನ 3 ಅಸೆಂಬ್ಲಿ ಪ್ರವೇಶದ್ವಾರದ ಸುತ್ತಲೂ 10 ರಿಂದ 12 ಮಿಮೀ ದಪ್ಪದ ಟಫನ್ ಗ್ಲಾಸ್ ವಿಭಾಗವನ್ನು ಒದಗಿಸುವುದು ಮತ್ತು ಪ್ಯಾರಪೆಟ್ ರಂಧ್ರಗಳನ್ನು ಮುಚ್ಚುವುದು- 8 ಲಕ್ಷ 90 ಸಾವಿರ

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಕ್ಕೆ ಯಾಂತ್ರಿಕೃತ ರಿಕ್ಲೈನರ್ ಕುರ್ಚಿಗಳನ್ನು ಒದಗಿಸುವುದು- 23 ಲಕ್ಷ 60 ಸಾವಿರ

ಅಸೆಂಬ್ಲಿ ಪ್ರವೇಶ ಕಾರಿಡಾರ್ ಮತ್ತು ಪೂರ್ವ ಭಾಗದ ಸೆಂಟ್ರಲ್ ಹಾಲ್ ಮತ್ತು ಗ್ರ್ಯಾಂಡ್ ಸ್ಟೆಪ್ ಪ್ರವೇಶ ಗೋಡೆಗಳಿಗೆ ಪೇಂಟಿಂಗ್ ಮತ್ತು ಪಾಲಿಶಿಂಗ್ ಮಾಡುವುದು- 14 ಲಕ್ಷ 80 ಸಾವಿರ

ಸಿಎಂ ಚೇಂಬರ್, ಪ್ರೆಸ್ ಲಾಂಜ್, ಸಚಿವರ ಲಾಂಜ್ ಮತ್ತು ಮಹಿಳಾ ಲಾಂಜ್‌ನ ಶೌಚಾಲಯ ನವೀಕರಣ- 18 ಲಕ್ಷ 50 ಸಾವಿರ

ಮೊದಲ ಮಹಡಿಯ ಸೆಂಟ್ರಲ್ ಹಾಲ್‌ನಲ್ಲಿ ತಾತ್ಕಾಲಿಕ ಅಡಿಗೆ, ಊಟ, ಕುರ್ಚಿಗಳು, ಟೇಬಲ್‌ಗಳು, ವಿಭಜನೆ, ಬ್ಯಾರಿಕೇಡ್‌ಗಳನ್ನು ಹಾಕುವುದು ಮತ್ತು ಊಟದ ಟೇಬಲ್, ಟ್ಯಾಪ್ ಕ್ಲಾತ್‌ಗಳು, ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಕುರ್ಚಿಗಳನ್ನು ಹಾಕುವುದು ಅಧಿವೇಶನದಲ್ಲಿ ಅಸೆಂಬ್ಲಿಗೆ ಇತರ ಸಂಬಂಧಿತ ಕೆಲಸಗಳಿಗೆ- 27 ಲಕ್ಷ 75 ಸಾವಿರ

ಕಾರ್ಪೆಟ್, ಕುರ್ಚಿಗಳು, ಸೋಫಾಗಳು ಮತ್ತು ಅವುಗಳನ್ನು ತೊಳೆಯುವುದು, ನೀರು ಸರಬರಾಜು, ಪೇಂಟಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳಿಗೆ- 10 ಲಕ್ಷ 35 ಸಾವಿರ

ಮೊದಲನೇ ಮಹಡಿಗೆ ಸ್ಟೇನ್‌ಲೆಸ್ ಸ್ಟೀಲ್ ನೇಮ್ ಬೋರ್ಡ್‌ಗಳಲ್ಲಿ ಅಸೆಂಬ್ಲಿ ಪ್ರವೇಶ ಕಾರಿಡಾರ್‌ನ ಎರಡೂ ಬದಿಗಳಿಗೆ ಸ್ಟೇನ್‌ಲೆಸ್ ಸ್ಟೀಲ್ ಗ್ರಿಲ್‌ಗಳನ್ನು ಒದಗಿಸುವುದು, ಅಸೆಂಬ್ಲಿ ಪ್ರವೇಶ ನಾಮ ಫಲಕ ಅಳವಡಿಕೆಗೆ- 16 ಲಕ್ಷ 60 ಸಾವಿರ

ಒಟ್ಟು 1 ಕೋಟಿ 96 ಲಕ್ಷ ವ್ಯಯ ಮಾಡಲಾಗಿದ್ದು, ಈ ಮೂಲಕ ವಿಧಾನಸೌಧ ಹೈಟೆಕ್ ಜೊತೆ ಆಧುನಿಕ ಮಾಡಲಾಗಿದೆ.

ಇದನ್ನೂ ಓದಿ: Karnataka Assembly Live: ಇಡಿಗೆ ಹೆದರುವುದಿಲ್ಲ, ನಿಮ್ಮನ್ನು ಬಲಿ ಹಾಕಿಯೇ ಸಿದ್ಧ: ವಾಲ್ಮೀಕಿ ಹಗರಣ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ

Continue Reading

ಪ್ರಮುಖ ಸುದ್ದಿ

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Bangladesh Protests: ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 300 ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.

VISTARANEWS.COM


on

bangladesh protests dhaka
Koo

ಢಾಕಾ: ಕಳೆದ ಕೆಲದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ (Bangladesh Protests) ಪ್ರತಿಭಟನೆ ಹಾಗೂ ಹಿಂಸಾಚಾರ (Bangladesh Violence) ಇದೀಗ ಉಲ್ಬಣಿಸಿದ್ದು, ಅಲ್ಲಿರುವ ಸುಮಾರು 300 ಭಾರತೀಯ ವಿದ್ಯಾರ್ಥಿಗಳು (Indian Students) ಸ್ವದೇಶಕ್ಕೆ ಮರಳಿದ್ದಾರೆ. ಹಿಂಸಾಚಾರದಲ್ಲಿ 105 ಮಂದಿ ಮೃತಪಟ್ಟಿದ್ದಾರೆ. ದೇಶವಿಡೀ ಕರ್ಫ್ಯೂ ಹಾಕಲಾಗಿದೆ.

ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 300 ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿದ್ದು, ಸಾವುನೋವಿಗೆ ಕಾರಣವಾಗಿದೆ. ಶುಕ್ರವಾರ ಕೂಡ ಬಾಂಗ್ಲಾದೇಶದಲ್ಲಿ ಘರ್ಷಣೆಗಳು ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಪ್ರತಿಭಟನಾ ನಿರತರು ನರಸಿಂಗಡಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯ ಬಿಸಿ ಸಾಮಾನ್ಯ ಜನರ ಬದುಕಿಗೂ ತಟ್ಟಿದೆ.

ದೇಶಾದ್ಯಂತ ಹರಡಿರುವ ಅಶಾಂತಿಯನ್ನು ತಡೆಯಲು ಪೊಲೀಸರು ಕೂಡ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಶುಕ್ರವಾರ ಕರ್ಫ್ಯೂ ಮತ್ತು ಮಿಲಿಟರಿ ಪಡೆಗಳ ನಿಯೋಜನೆಯನ್ನು ಘೋಷಿಸಿದೆ. ಆಸ್ಪತ್ರೆಗಳು ನೀಡಿದ ವರದಿಗಳನ್ನು ಉಲ್ಲೇಖಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಈ ವಾರದ ಘರ್ಷಣೆಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. 15 ವರ್ಷಗಳ ಅಧಿಕಾರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಸರ್ಕಾರ ದೊಡ್ಡ ಸವಾಲನ್ನು ಎದುರಿಸಿದೆ.

ಪ್ರತಿಭಟನೆಗಳು ಪ್ರಾರಂಭವಾದ ನಂತರ ಮೊದಲ ಬಾರಿಗೆ ಹೆಚ್ಚಿನ ಹಿಂಸಾಚಾರವನ್ನು ತಡೆಯುವ ಪ್ರಯತ್ನದಲ್ಲಿ ರಾಜಧಾನಿ ಢಾಕಾದಲ್ಲಿ ಪೊಲೀಸರು ಮೊದಲ ದಿನ ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದಾರೆ. ‘ನಾವು ಇಂದು ಢಾಕಾದಲ್ಲಿ ಎಲ್ಲಾ ರ್ಯಾಲಿಗಳು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದೇವೆ’ ಎಂದು ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್ ತಿಳಿಸಿದ್ದಾರೆ.

ರ್ಯಾಲಿಗಳನ್ನು ವಿಫಲಗೊಳಿಸಲು ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ಆದರೆ ನಗರದಲ್ಲಿ ಜನರ ಬೃಹತ್ ಗುಂಪುಗಳು ಜಮಾಯಿಸಿವೆ. ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾರಣಾಂತಿಕ ಘರ್ಷಣೆಗೆ ಕಾರಣವಾಯಿತು. ‘ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ರಾಜಧಾನಿಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದವರು ಘೋಷಿಸಿದ್ದಾರೆ. ‘ಈ ಹತ್ಯೆಗಳಿಗೆ ಸರ್ಕಾರವೇ ಹೊಣೆಯಾಗಿರುವುದರಿಂದ ಶೇಖ್ ಹಸೀನಾ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

1971ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರಿಗೆ ಕೆಲವು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಮೀಸಲಿಡುವ ವ್ಯವಸ್ಥೆಯ ವಿರುದ್ಧ ಢಾಕಾ ಮತ್ತು ಇತರ ನಗರಗಳಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಇದನ್ನೂ ಓದಿ: Bangladesh Violence: ಬಾಂಗ್ಲಾ ಧಗ ಧಗ; ಭುಗಿಲೆದ್ದ ಹಿಂಸಾಚಾರಕ್ಕೆ 35 ಮಂದಿ ಬಲಿ

Continue Reading

Latest

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

Pets in Designer Outfits: ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ಬ್ರಾಂಡ್ ಅಂಬಾನಿ ಕುಟುಂಬದ ಸಾಕುಪ್ರಾಣಿಗಳಿಗಾಗಿ 29ಕ್ಕೂ ಹೆಚ್ಚು ಉಡುಪುಗಳನ್ನು ವಿನ್ಯಾಸಗೊಳಿಸಿದೆ. “ನಾವು ನಾಯಿಗಳಿಗಾಗಿ 29 ಉಡುಗೆಗಳನ್ನು ತಯಾರಿಸಿದ್ದೇವೆ, ಅವುಗಳಲ್ಲಿ 14 #HappyAmbani ಮತ್ತು 14#PopcornMerchant ಗಾಗಿ ಟ್ವಿನ್ನಿಂಗ್ ಮತ್ತು 1#ChasePiramalಗಾಗಿ. ನೀವೆಲ್ಲರೂ ನಮ್ಮ ಕೆಲಸವನ್ನು ಇಷ್ಟಪಟ್ಟಿದ್ದೀರಿ ಎಂದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ರಾಂಡ್‍ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಬರೆದಿದೆ.

VISTARANEWS.COM


on

Pets in Designer Outfits
Koo

ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹದ ಸಂಭ್ರಮಾಚರಣೆಯಲ್ಲಿ ಅಂಬಾನಿ ಕುಟುಂಬದವರು ಬಣ್ಣ ಬಣ್ಣದ ಹಾಗೂ ಚಿನ್ನದಿಂದ ತಯಾರಿಸಿದ ಬಟ್ಟೆಗಳನ್ನು ಧರಿಸಿ ಮಿಂಚಿದ್ದಾರೆ. ಮಾತ್ರವಲ್ಲ ಈ ಮದುವೆಯಲ್ಲಿ ಅವರ ಮನೆಯಲ್ಲಿ ಸಾಕಿದ ನಾಯಿಗಳಿಗೂ (Pets in Designer Outfits) ಕೂಡ ವಿಶೇಷವಾಗಿ ವಿನ್ಯಾಸ ಮಾಡಿದ ಬಟ್ಟೆಗಳನ್ನು ತೊಡಿಸಿದ್ದಾರೆ. ಹಾಗಾಗಿ ಅವುಗಳು ಅನಂತ್ ಮದುವೆಯಲ್ಲಿ ಬಹಳ ಅದ್ಭುತವಾಗಿ ಕಾಣುತ್ತಿದ್ದವು. ಮದುವೆಯಲ್ಲಿ ಅವುಗಳು ಸುಂದರವಾದ ಬಟ್ಟೆಯಲ್ಲಿ ಮಿಂಚಿದ ವಿಡಿಯೊ ವೈರಲ್ ಆಗಿದೆ.

ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ವಿನ್ಯಾಸಗೊಳಿಸಿದ ಸೂಪರ್ ಸ್ಟೈಲಿಶ್ ಗುಲಾಬಿ ಬನಾರಸಿ ಸಿಲ್ಕ್ ಬ್ರೊಕೇಡ್ ಜಾಕೆಟ್ ಧರಿಸಿ ಗೋಲ್ಡನ್ ರಿಟ್ರೀವರ್ ಹ್ಯಾಪಿ (ನಾಯಿ) ಅಂಬಾನಿ ಮದುವೆ ಮಂಟಪದಲ್ಲಿ ಕಂಡುಬಂದಿದೆ.

ಹ್ಯಾಪಿಗಾಗಿ ತಯಾರಿಸಿದ ಕಸ್ಟಮ್-ಮೇಡ್ ಉಡುಪುಗಳನ್ನು ಬಹಿರಂಗಪಡಿಸುವ ವಿಡಿಯೊವನ್ನು ಬ್ರಾಂಡ್ ಹಂಚಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಪಿಗೆ ಮಾತ್ರ ಫ್ಯಾಶನ್ ಡ್ರೆಸ್ ತೊಡಿಸಿರಲಿಲ್ಲ, ಅದರ ಜೊತೆ ರಾಧಿಕಾ ಕುಟುಂಬದ ಬುಲ್ಡಾಗ್ ಪಾಪ್ಕಾರ್ನ್ ಮರ್ಚೆಂಟ್ ಕೂಡ ಕೆಲವು ಡಿಸೈನರ್ ಉಡುಪುಗಳನ್ನು ಧರಿಸಿ ಮಿಂಚಿತು.

ಅಲ್ಲದೇ ಮುಕೇಶ್-ನೀತಾ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಅವರ ಪತಿ ಆನಂದ್ ಪಿರಮಾಲ್ ಅವರ ಕುಟುಂಬದ ನಾಯಿ ಚೇಸ್ ಪಿರಮಾಲ್ ಕೂಡ ಮದುವೆಗೆ ಡಿಸೈನ್‌ನಿಂದ ಕೂಡಿದ ಬಟ್ಟೆಯನ್ನು ಧರಿಸಿ ತಾನೇನು ಕಡಿಮೆ ಇಲ್ಲ ನೋಡಿ ಎಂದು ಬೀಗಿತು.

ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ಬ್ರಾಂಡ್ ಈ ಕುಟುಂಬದ ಸಾಕುಪ್ರಾಣಿಗಳಿಗಾಗಿ 29 ಕ್ಕೂ ಹೆಚ್ಚು ಉಡುಪುಗಳನ್ನು ವಿನ್ಯಾಸಗೊಳಿಸಿದೆ. “ನಾವು ನಾಯಿಗಳಿಗಾಗಿ 29 ಉಡುಗೆಗಳನ್ನು ತಯಾರಿಸಿದ್ದೇವೆ, ಅವುಗಳಲ್ಲಿ 14 #HappyAmbani ಮತ್ತು 14#PopcornMerchant ಗಾಗಿ ಟ್ವಿನ್ನಿಂಗ್ ಮತ್ತು 1#ChasePiramal ನೀವೆಲ್ಲರೂ ನಮ್ಮ ಕೆಲಸವನ್ನು ಇಷ್ಟಪಟ್ಟಿದ್ದೀರಿ ಎಂದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ರಾಂಡ್‍ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಬರೆದಿದೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಜನರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ನಾಯಿಗಳು ನಮಗಿಂತ ಒಳ್ಳೆಯ ಬಟ್ಟೆಗಳನ್ನು ಧರಿಸಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾಯಿಗಳೆಲ್ಲವೂ ಬಟ್ಟೆ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

ಜನವರಿ 2023 ರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಹ್ಯಾಪಿ ಕುಟುಂಬದ ಭಾವಚಿತ್ರಕ್ಕೆ ಪೋಸ್ ನೀಡುವ ಮೂಲಕ ಜನರ ಮನಗೆದ್ದಿತ್ತು.

Continue Reading
Advertisement
Kiran Kumar
ಕರ್ನಾಟಕ2 mins ago

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

Assembly monsoon session UT Khader karnataka assembly live
ಪ್ರಮುಖ ಸುದ್ದಿ7 mins ago

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Virat Kohli
ಕ್ರೀಡೆ12 mins ago

Virat Kohli: ಲಂಕಾ ಸರಣಿಯಲ್ಲಿ ರನ್​ ದಾಖಲೆ ಬರೆಯಲು ಸಜ್ಜಾದ ವಿರಾಟ್​ ಕೊಹ್ಲಿ

Actor Darshan 4th accused mother dies
ಸ್ಯಾಂಡಲ್ ವುಡ್23 mins ago

Actor Darshan: ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ

Microsoft Global Outage
ದೇಶ24 mins ago

Microsoft Global Outage: ಮೈಕ್ರೊಸಾಫ್ಟ್ ಟ್ರಬಲ್; ಯಾರ ಮೇಲೆ ಏನು ಪರಿಣಾಮ? ಮುಂದೇನು?

Mohammed Shami
ಕ್ರೀಡೆ41 mins ago

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Kannada New Movie Moorane Krishnappa in OTT
ಸಿನಿಮಾ42 mins ago

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

odscene act driver
ಕ್ರೈಂ52 mins ago

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Vicky Kaushal box office collection Movie Collects Only 8 Crore
ಬಾಲಿವುಡ್1 hour ago

Vicky Kaushal: ವಿಕ್ಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಕಳಪೆ ಕಲೆಕ್ಷನ್ ; ಮೊದಲ ದಿನದ ಗಳಿಕೆ ಎಷ್ಟು?

Paris Olympics
ಕ್ರೀಡೆ1 hour ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ21 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌