Dasara 2022 | ದಸರಾ ಚಿತ್ರೋತ್ಸವದಲ್ಲಿ 112 ಚಿತ್ರಗಳ ಪ್ರದರ್ಶನ: ನಟ ಪುನೀತ್‌ , ಸಂಚಾರಿ ವಿಜಯ್‌ಗೆ ವಿಶೇಷ ಗೌರವ - Vistara News

ದಸರಾ ಸಂಭ್ರಮ

Dasara 2022 | ದಸರಾ ಚಿತ್ರೋತ್ಸವದಲ್ಲಿ 112 ಚಿತ್ರಗಳ ಪ್ರದರ್ಶನ: ನಟ ಪುನೀತ್‌ , ಸಂಚಾರಿ ವಿಜಯ್‌ಗೆ ವಿಶೇಷ ಗೌರವ

ವಿಶ್ವವಿಖ್ಯಾತ ದಸರಾ ಅಂಗವಾಗಿ (Dasara 2022 ) ಚಲನಚಿತ್ರೋತ್ಸವದಲ್ಲಿ112 ಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದೆ. ಸಿನಿಮಾಗಳ ಪಟ್ಟಿ ಇಲ್ಲಿದೆ.

VISTARANEWS.COM


on

Dasara 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ವಿಶ್ವವಿಖ್ಯಾತ ದಸರಾ (Dasara 2022) ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಸಂಚಾರಿ ವಿಜಯ್‌ ಅವರಿಗೆ ಗೌರವ ನೀಡುವುದರ ಜತೆ ಭಾರತೀಯ ಸಿನಿಮಾಗಳೊಂದಿಗೆ ವಿಶ್ವದ ಚಿತ್ರಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ. ಚಲನಚಿತ್ರೋತ್ಸವವು ಸೆ.27ರಿಂದ ಆರಂಭವಾಗಿ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. 56 ಕನ್ನಡ, 28 ಪನೋರಮಾ, 28 ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಐನಾಕ್ಸ್‌ನಲ್ಲಿ 3 ಮತ್ತು ಡಿಆರ್ ಸಿಯ 1 ಸ್ಕ್ರೀನ್‌ನಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಚಲನಚಿತ್ರೋತ್ಸವ ಸಮಿತಿಯ ವಿಶೇಷಾಧಿಕಾರಿ ಆರ್‌. ಶೇಷು ಮಾಹಿತಿ ನೀಡಿದ್ದಾರೆ.

2022ನೇ ಸಾಲಿನ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಚಲನಚಿತ್ರೋತ್ಸವವನ್ನು ಸೆ.26ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಟ ಡಾ. ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳು
ಪುನಿತ್ ನಟನೆಯ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ್, ಮೈತ್ರಿ, ಪೃಥ್ವಿ, ಯುವರತ್ನ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಸಂಚಾರಿ ವಿಜಯ್‌ ಚಿತ್ರಗಳು
ಸಂಚಾರಿ ವಿಜಯ್ ಅಭಿನಯದ ತಲೆದಂಡ, ಪುಕ್ಸಟ್ಟೆ ಲೈಫು, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಶಕ್ತಿಧಾಮದ ಮಕ್ಕಳೊಂದಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌
ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಶಕ್ತಿಧಾಮದ ಮಕ್ಕಳೊಂದಿಗೆ ಸೆ.27ರಂದು ಪುನೀತ್ ಅಭಿನಯಿಸಿರುವ ಬೆಟ್ಟದ ಹೂ ಚಿತ್ರವನ್ನು ವೀಕ್ಷಿಸಲಿದ್ದಾರೆ. ಸೆ.22 ರಿಂದ 24ರವರೆಗೆ ಸಿನಿಮಾ ಕಾರ್ಯಾಗಾರ ನಡೆಸಲಾಗುತ್ತಿದೆ. 22ರಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಉದ್ಘಾಟಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರವೇಶಕ್ಕೆ 300 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ | Mysore Dasara 2022 | ದಸರಾ ಕುಸ್ತಿಗೆ ಅಖಾಡ ಸಜ್ಜು, ಈ ಬಾರಿ ಅದ್ಧೂರಿ ಪಂದ್ಯಾವಳಿ ಆಯೋಜನೆಗೆ ಸಿದ್ಧತೆ

ಸಂಪನ್ಮೂಲ ವ್ಯಕ್ತಿಗಳ ಜತೆ ಹಲವು ತಾರೆಯರು ಭಾಗಿ
ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಟ ನಟಿಯರಾದ ಡಾ. ಶಿವರಾಜ್ ಕುಮಾರ್, ಅಮೃತ ಅಯ್ಯಂಗಾರ್, ಕಾವ್ಯ ಶೆಟ್ಟಿ, ಸುಧಾರಾಣಿ, ಅನುಪ್ರಭಾಕರ್ ಸೇರಿದಂತೆ ಅನೇಕ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಂಪಾ ಶೆಟ್ಟಿ, ಪ್ರಶಾಂತ್‌ ಪಂಡಿತ್‌, ಪ್ರವೀಣ್‌ ಕೃಪಾಕರ್‌, ಪವನ್‌ ಕುಮಾರ್‌, ಶಂಕರ್‌ ಎನ್‌. ಸಂಡೂರು, ಮಂಸೂರೆ, ಪನ್ನಗಾಭರಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ʻʻವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ . ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳಾಗಿವೆʼʼ ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್‌ ತಿಳಿದ್ದಾರೆ.

ಪ್ರದರ್ಶನಗೊಳ್ಳಲಿರುವ ಕನ್ನಡ ಚಿತ್ರಗಳು
100, 777 ಚಾರ್ಲಿ, ಶ್ರೀ ಸುತ್ತೂರು ಮಠ-ಗುರುಪರಂಪರೆ, ಆದ್ಯಾ, ಅವನೇ ಶ್ರೀಮನ್ನನಾರಾಯಣ, ಅವತಾರ ಪುರುಷ, ಬಡವ ರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭ ವಾಹನ, ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸ್‌ಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್ 1, ಕೆಜಿಎಫ್ 2, ಲವ್ ಮಾಕ್ಟೇಲ್ 1, ಲವ್ ಮಾಕ್ಟೇಲ್-2, ಮದಗಜ, ಮುಗಿಲ್ ಪೇಟೆ, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು, ಫೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸುರತ್ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್ .
ಭಾರತೀಯ ಚಿತ್ರಗಳು
ಎ ಡಾಗ್ ಆ್ಯಂಡ್‌ ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯುಗೊಡಾರ್ಡ್ , ಅಗ್ನಿವರ್ಷ, ಐಸೇ ಹಿ, ಬಾಫ್, ಬೂಂಬಾ ರೈಡ್, ಈ ಮಣ್ಣು, ಘೋಡೇ ಕೋ ಜಲೇಬಿ ಖಿಲಾನೆ ಲೇಜಾರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ದಿ ಕ್ಲೌಡ್ ಆ್ಯಂಡ್‌ ದಿ ಮ್ಯಾನ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿಹಕ್ಕಿ, ನೋಯ್, ಪದಕ, ಸಾರಾ ವಜ್ರ, ಉರಿಯಟ್ಟು, ವಿಡೋ ಆಫ್ ಸೈಲೆನ್ಸ್.

ಜಾಗತಿಕ ಚಿತ್ರಗಳು
ಎ ಜೆಂಟಲ್ ಕ್ರೀಚರ್, ಎ ಹೀರೋ, ಅಡಲ್ಟ್ಸ್ ಇನ್ ದಿ ರೂಮ್, ಅನದರ್ ರೌಂಡ್, ಆಶ್ ಇಸ್ ದಿ ಪ್ಯೂರೆಸ್ಟ್ ವೈಟ್, ಕ್ಯಾಪರ್ನಾಮ್, ಎವರಿಥಿಂಗ್ ಎವೆರಿವೇರ್ ಆಲ್‌ ಎಟ್ ಒನ್ಸ್, ಐ ಡೇನಿಯಲ್ ಬ್ಲೇಕ್, ಲವ್ ಲೆಸ್, ನಾರ್ಥ್ ಸಿ, ಪ್ಯಾರಲೆಲ್ ಮದರ್ಸ್, ಪ್ಯಾರಾ ಸೈಟ್, ಪೋಟ್ರೇಟ್‌ ಆಫ್ ಎ ಲೇಡಿ ಆನ್ ಫೈರ್, ಸಾರಿ ವಿ ಮಿಸ್ಡ್ ಯೂ, ಸ್ಪೆನ್ಸರ್, ಬೈಸಿಕಲ್ ಥೀವ್ಸ್, ದಿ ಸೆವೆಂತ್ ಸೀಲ್, ದಿ ಟ್ಯೂರಿನ್ ಹಾರ್ಸ್, ಥ್ರೋನ್ ಆಫ್ ಬ್ಲಡ್ , ವ್ಯಾಗಾ ಬಾಂಡ್, ವೆನ್ ಹಿಟ್ಲರ್ ಸ್ಟೋಲ್ ಪಿಂಕ್ ರ್ಯಾಬಿಟ್, ವೈಫ್ ಆಫ್ ಎ ಸ್ಪೈ, ವಿಮೆನ್ ಇನ್ ದಿ ಡ್ಯೂನ್ಸ್.

ಇದನ್ನೂ ಓದಿ | Mysore Dasara 2022 | ಅರಮನೆ ನಗರಿಯಲ್ಲಿ ಇಂದಿನಿಂದ ಯುವ ಸಂಭ್ರಮ: ನಟ ಡಾಲಿ ಧನಂಜಯ್ ಅತಿಥಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Mysore Dasara: ಚೆಕ್‌ ಬೌನ್ಸ್‌; ದಸರಾ ಕಲಾವಿದರಿಗೆ ಅವಮಾನ ಎಂದು ಯತ್ನಾಳ್‌ ಕಿಡಿ

Mysore Dasara: ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

VISTARANEWS.COM


on

Basanagouda Patil Yatnal
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮುಕ್ತಾಯವಾದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಹುಮಾನದ ಚೆಕ್‌ ಬೌನ್ಸ್‌ ಆಗಿರುವುದರಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಚೆಕ್‌ ವಾಪಸ್‌ ಬಂದರೂ ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿತವಾಗಿರುವುದಕ್ಕೆ ಕಲಾವಿದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿ ಕಾರಿದ್ದಾರೆ.

ಅ.26 ರಂದು ಮೈಸೂರಿನ ಹವ್ಯಾಸಿ ಛಾಯಾಚಿತ್ರಗಾರ ಎನ್.ಜಿ. ಸುಧೀರ್‌ಗೆ 7 ಸಾವಿರ ರೂ. ಬಹುಮಾನದ ಚೆಕ್ ನೀಡಲಾಗಿತ್ತು‌. ಅ.27 ರಂದು ಸುದೀರ್ ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಅ.30ರಂದು ಚೆಕ್ ವಾಪಸ್ ಆಗಿದೆ. ಈ ವೇಳೆ ಅಕೌಂಟ್‌ನಿಂದ 118 ರೂ. ಕಟ್ ಮಾಡಲಾಗಿದೆ.

ಇದನ್ನೂ ಓದಿ | Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಜಿ. ಸುಧೀರ್, ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118 ರೂ. ದಂಡ ಬಿದ್ದಿದೆ. ಇಂತಹ ಬೇಜಾವ್ದಾರಿತನ ಏಕೆ? ತಮ್ಮಂತೆ ಸಾಕಷ್ಟು ಕಲಾವಿದರಿಗೆ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

ದಸರಾ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಕಲಾವಿದರಿಗೆ ನೀಡಿದ್ದ ಬಹುಮಾನದ ಚೆಕ್‌ಗಳು ನಗದಾಗಿ ಪರಿವರ್ತನೆ ಆಗದೆ ವಾಪಸ್‌ ಆಗುತ್ತಿವೆ. ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ. ಉಪಸಮಿತಿಯ ಈ ಹಿಂದಿನ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಸಹಿಗಳೇ ಚೆಕ್‌ ಮೇಲೆ ಇದ್ದಿದ್ದರಿಂದ ಚೆಕ್‌ ಬೌನ್ಸ್‌ ಆಗಿವೆ ಎನ್ನಲಾಗಿದೆ. ಚೆಕ್ ವಾಪಸ್‌ ಆಗಿರುವುದು ತಿಳಿದುಬರುತ್ತಿದ್ದಂತೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Politics : ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್.‌ ರಾಜಣ್ಣ

ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್‌ ಆಕ್ರೋಶ

ಕಲಾವಿದರಿಗೆ ನೀಡಿದ್ದ ಚೆಕ್‌ ಬೌನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ದಸರಾ ಹಬ್ಬದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಕಲಾವಿದರಿಗೆ ಮಾಡಿದ ಅವಮಾನ. ಗಾಯದ ಮೇಲೆ ಬರೆ ಇಟ್ಟಂತೆ ಬೌನ್ಸ್ ಆದ ಚೆಕ್ ಬ್ಯಾಂಕ್‌ಗೆ ನೀಡಿದ್ದಕ್ಕೆ ಕಲಾವಿದರಿಗೆ ಬ್ಯಾಂಕ್ ದಂಡ ಹಾಕಿದೆ. ದಸರಾ ಹಾಗೂ ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಉತ್ತರದಾಯಿತ್ವವಿಲ್ಲದೆ, ಬೇಜವಾಬ್ದಾರಿ ವರ್ತನೆಯಿಂದ ಕೆಲಸ ಮಾಡುವವರಿಗೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿ. ಉಸ್ತುವಾರಿ ಸಚಿವರ ದುರಾಡಳಿತದಿಂದ ದಸರಾ ಸಂಭ್ರಮದಲ್ಲಿ ವಿದ್ಯುತ್ ಬೇಲಿ ಹಾರಿ ಬಂದು ಭದ್ರತಾ ವೈಫಲ್ಯವೆಸಗಿದ್ದು, ಈಗ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ನೀಡಿ ಸರಣಿ ವೈಫಲ್ಯಗಳು ಆಗಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.

Continue Reading

ಕರ್ನಾಟಕ

Mysore Dasara: ಮೈಸೂರು ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳಿವು

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ

VISTARANEWS.COM


on

Dasara sambhrama
Koo

ಮೈಸೂರು: ಅ.15ರಂದು ಆರಂಭವಾದ ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ, ವಿಜಯದಶಮಿ ದಿನವಾದ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ಕೊನೆಯ ದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳ ಮೆರವಣಿಗೆ, ಜಂಬೂ ಸವಾರಿ, ಪಂಜಿನ ಕವಾಯತು ಅದ್ಧೂರಿಯಾಗಿ ನೆರವೇರಿದ್ದು, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ | Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Continue Reading

ಕರ್ನಾಟಕ

Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Mysore Dasara : ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು.

VISTARANEWS.COM


on

Torch Light Parade 2023
Koo

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ (Jumboo Savari) ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ (Torch Light Parade 2023) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot) ಚಾಲನೆ ನೀಡಿದರು. ಪೊಲೀಸ್‌ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಮೊದಲು ರಾಷ್ಟ್ರಗೀತೆಯನ್ನು (National Anthem) ನುಡಿಸುವ ಮೂಲಕ ಕವಾಯತು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಳಿ ಬಂದ ಕಿಂಗ್‌ ಪವರ್‌ ಅಶ್ವರೂಢ ಖಡ್ಗಧಾರಿ ಪ್ರಧಾನ ದಳಪತಿ ಕವಾಯತು ವರದಿಯನ್ನು ಅತಿಥಿಗಳಿಗೆ ಸಮರ್ಪಿಸಿದರು. ತರುವಾಯ ನಿಶ್ಚಳ ದಳಗಳ ಪರಿವೀಕ್ಷಣೆಗಾಗಿ ರಾಜ್ಯಪಾಲರನ್ನು ಆಹ್ವಾನಿಸಿದರು.

ಆಹ್ವಾನವನ್ನು ಒಪ್ಪಿ ಅಲಂಕೃತ ತೆರೆದ ವಾಹನವನ್ನು ಹತ್ತಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿವಿಧ ಸೇವಾದಳಗಳ ನಿಶ್ಚಳದಳಗಳ ಪರಿವೀಕ್ಷಣೆಯನ್ನು ನಡೆಸಿದರು. ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಿ. ಅವರು ರಾಜ್ಯಪಾಲರಿಗೆ ವ್ಯಕ್ತಿಪರಿವೀಕ್ಷಕರಾಗಿದ್ದರು.

ಇದಾದ ಬಳಿಕ 21 ಕುಶಾಲತೋಪುಗಳನ್ನು ಮೂರು ಹಂತಗಳಲ್ಲಿ ಸಿಡಿಸಲಾಯಿತು. ನಿಶ್ಚಳದ ದಳ ಅಶ್ವಪಡೆಗಳ ಒಂದೊಂದಾಗಿ ಮೂರು ಕುದುರೆಗಳು ಒಂದು ಸುತ್ತು ಸುತ್ತಿ ಬಂದ ಬಳಿಕ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮತ್ತೊಮ್ಮೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.

18 ತುಕಡಿಗಳಿಂದ ಪ್ರದರ್ಶನ

ಒಟ್ಟು 18 ತುಕಡಿಗಳು ಪ್ರದರ್ಶನ ತೋರಿದವು. ಈ ತುಕಡಿಗಳು ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೂಲಕ ಕೆಲವು ದಿನಗಳಿಂದ ತಾಲೀಮು ನಡೆಸಿವೆ. ಲಯಬದ್ಧ ಸಂಗೀತಕ್ಕೆ ಶಿಸ್ತುಬದ್ಧ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇತ್ತು. ಎದೆ ಸೆಟೆದು ಕೈಬೀಸಿ ಕಾಲನ್ನು ಜೋರಾಗಿ ನೆಲಕ್ಕೆ ಗುದ್ದಿ ಧೂಳೆಬ್ಬಿಸುತ್ತಾ ಆರಕ್ಷಕ ದಳದವರು ವೀರ ನಡಿಗೆ ಸಾಗುತ್ತಿದ್ದರೆ ಸೇರಿದ್ದ ಜನಸ್ತೋಮ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವರಾದ ವೆಂಕಟೇಶ್‌, ಶಿವರಾಜ್‌ ತಂಗಡಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಣ್ತುಂಬಿದ ಲೈಟಿಂಗ್‌

ಧ್ವನಿ ಬೆಳಕಿನ ಸಂಭ್ರಮ ಇದೇ ವೇಳೆ ಅನಾವರಣಗೊಳಿಸಲಾಯಿತು. ಧ್ವನಿ ಮೊದಲೋ ಬೆಳಕೋ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಡಿಎನ್‌ಎ ಸಹಯೋಗದಲ್ಲಿ ಧ್ವನಿ – ಬೆಳಕಿನ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ಮನ ಮುಟ್ಟಿದ ನೃತ್ಯ ರೂಪಕ

ಡಿಎನ್‌ಎ ಸಮೂಹದ ಮೂಲಕ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಜರಂಗಿ ಮೋಹನ್‌ ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಈ ವೇಳೆ ಐಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಲಾಯಿತು. ಜತೆಗೆ ಶಂಕರ್‌ ನಾಗ್‌ ಅಭಿನಯದ ಗೀತಾ ಸಿನಿಮಾದ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ರವಿಚಂದ್ರನ್‌ ಅಭಿನಯದ ಮಲ್ಲ ಸಿನಿಮಾದ “ಕರುನಾಡೇ ಕೈ ಚಾಚಿದೆ ನೋಡೇ..” ಹಾಡುಗಳಿಗೆ ಹೆಜ್ಜೆ ಹಾಕಲಾಯಿತು. ಬಳಿಕ ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾದ “ಪೈಲ್ವಾನ್‌” ಹಾಡಿನಗೆ ಮಲ್ಲಕಂಭ ಸಾಹಸ ಪ್ರದರ್ಶನವನ್ನು ಮಾಡುವ ಮೂಲಕ ಡ್ಯಾನ್ಸ್‌ ಮಾಡಲಾಯಿತು. ಇದಲ್ಲದೆ, ಶಿವರಾಜ್‌ಕುಮಾರ್‌ ಅಭಿನಯದ ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ ಹಾಗೂ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಸಿನಿಮಾದ “ಡಾನ್ಸ್‌ ವಿಥ್‌ ಅಪ್ಪು” ಹಾಡಿಗೂ ಹೆಜ್ಜೆ ಹಾಕಲಾಯಿತು. ಕೊನೆಯಲ್ಲಿ ಡಾ. ರಾಜಕುಮಾರ್‌ ಅಭಿನಯದ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡು ನೋಡುಗರ ಮನ ಗೆಲ್ಲುವಲ್ಲಿ ಯಶ ಕಂಡಿತು.

ಗಮನ ಸೆಳೆದ ಸಾಹಸ ಪ್ರದರ್ಶನ

ಕೊನೆಯಲ್ಲಿ ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು. ಒಂದೊಂದು ರೀತಿಯ ವಿಶಿಷ್ಟ ಸಾಹಸ ಪ್ರದರ್ಶನಗಳಿಗೂ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.

ನೂರಾರು ಜನ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು. ಇದೇ ವೇಳೆ ವೆಲ್‌ ಕಮ್‌ ಟು ಮೈಸೂರು ದಸರಾ, ಫೇರ್‌ ವೆಲ್‌ ಟು ದಸರಾ, ಸಿ ಯು ದಸರಾ ಇನ್ 2024 ಎಂಬಿತ್ಯಾದಿ ಸಂದೇಶಗಳು ಕಂಡು ಬಂದವು.

ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ

ಜೋಶ್‌ ಹೆಚ್ಚಿಸಿದ ಪೊಲೀಸ್‌ ಬ್ಯಾಂಡ್‌

ಈ ಮಧ್ಯೆ ಪೊಲೀಸ್‌ ಬ್ಯಾಂಡ್‌ನವರು ಪೊಲೀಸ್‌ ಹಾಗೂ ಸೈನಿಕ ಗೀತೆಗಳನ್ನು ಪ್ರಸ್ತುತಿಪಡಿಸಿದರು. “ಸಾರೇ ಜಹಾಸೇ ಅಚ್ಚಾ” ಸೇರಿದಂತೆ ಇನ್ನೂ ಹಲವು ಗೀತೆಯನ್ನು ಪೊಲೀಸ್‌ ಬ್ಯಾಂಡ್‌ನವರು ನುಡಿಸಿ ಗಮನ ಸೆಳೆದರು. ಸೇರಿದ್ದವರಿಗೆಲ್ಲರಿಗೂ ಒಮ್ಮೆ ದೇಶಭಕ್ತಿ ಗೀತೆಯ ಬೀಟ್‌ಗಳು ಜೋಶ್‌ ಅನ್ನು ಹೆಚ್ಚಿಸುತ್ತಿದ್ದವು.

Continue Reading

ಕರ್ನಾಟಕ

Anekal Dasara : ಆನೇಕಲ್‌ನಲ್ಲಿ ಜಂಬೂ ಸವಾರಿಗೆ ಮೆರುಗು ನೀಡಿದ ಕೇರಳದ ಸಾಧು ಆನೆ

Anekal Dasara : ಬೆಂಗಳೂರು ಹೊರವಲಯದ ಆನೇಕಲ್ ಹಾಗೂ ಬನ್ನೇರುಘಟ್ಟದಲ್ಲಿ ವಿಜೃಂಭಣೆಯಿಂದ ಜಂಬೂ ಸವಾರಿ ಜರುಗಿತು. ಮಿನಿ ಮೈಸೂರು ಖ್ಯಾತಿಯ ಆನೇಕಲ್‌ನಲ್ಲಿ ಚೌಡೇಶ್ವರಿ ಜಂಬೂಸವಾರಿಗೆ ಕೇರಳದ ಸಾಧು ಆನೆ ಮೆರಗು ನೀಡಿತು.

VISTARANEWS.COM


on

By

Anekal Dasara 2023
Koo

ಆನೇಕಲ್‌: ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಆನೇಕಲ್‌ನಲ್ಲೂ (Anekal Dasara) ವಿಜಯದಶಮಿ ದಸರಾ ಉತ್ಸವ ಮತ್ತು ಜಂಬೂ ಸವಾರಿ (Jambu savari) ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಕೇರಳ ಮೂಲದ ಸಾಧು ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಜಂಬೂಸವಾರಿ ಮೂಲಕ ಆನೇಕಲ್ ದಸರಾ ಉತ್ಸವಕ್ಕೆ ಮೆರಗು ನೀಡಿತು. ರಾಜಗಾಂಭೀರ್ಯದಲ್ಲಿ ಗಜರಾಜ ಹೆಜ್ಜೆ ಹಾಕಿದ್ದು ಭಕ್ತ ಸಾಗರ ಅದ್ಧೂರಿ ದಸರಾ ಜಂಬು ಸವಾರಿಯನ್ನು ಕಂಡು ಪುನೀತರಾಗಿದ್ದಾರೆ.

Anekal And bannerughatta  Dasara 2023

ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲೂ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಸಾಧು ಆನೆ ಸವಾರಿ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು.

Anekal And bannerughatta  Dasara 2023

ದಿವ್ಯ ಜ್ಞಾನನಂದ ಸ್ವಾಮಿ ಹಾಗೂ ಶಾಸಕ ಬಿ.ಶಿವಣ್ಣ ಸೇರಿದಂತೆ ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆನೇಕಲ್ ‌ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿತು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಸಾಧು ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡರು.

ಇದನ್ನೂ ಓದಿ: Karnataka Weather : ಮಳೆಯಾಟ ಬಂದ್‌; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot

Anekal And bannerughatta  Dasara 2023

ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಂಡರು. ಎಂದಿನಂತೆ ತೋಗಟವೀರ ಜನಾಂಗದ ಸದಸ್ಯರು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಿದ್ದರು. ತಾಯಿ ಚೌಡೇಶ್ವರಿ ಸರ್ವರಿಗೂ ಒಳಿತು ಮಾಡಲಿ ಎಂದು ಶಾಸಕ ಬಿ ಶಿವಣ್ಣ ಪ್ರಾರ್ಥಿಸಿದರು.

Anekal And bannerughatta  Dasara 2023

ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಆನೇಕಲ್ ದಸರಾ ನಡೆಯುತ್ತಿದ್ದು, ಮಿನಿ ದಸರಾ ಎಂದೇ ಪ್ರಖ್ಯಾತಿಗಳಿಸುತ್ತಿದೆ. ಕಲಾತಂಡಗಳ ಜತೆಗೆ ಅಂಬಾರಿ ಸಾಗುವ ದೃಶ್ಯ ನೋಡುವುದೇ ಒಂದು ಹಬ್ಬವಾಗಿತ್ತು. ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದರು.

Anekal And bannerughatta  Dasara 2023

ಚಂಪಕಧಾಮಸ್ವಾಮಿ ಜಂಬೂ ಸವಾರಿ

ಬನ್ನೇರುಘಟ್ಟದಲ್ಲೂ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆದಿದೆ. ದೇವರ ಉತ್ಸವ ಮೂರ್ತಿ ಹೊತ್ತಿದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತ ಗಜರಾಜ ಬನ್ನೇರುಘಟ್ಟದ ರಾಜಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಜಾನಪದ ಕಲಾತಂಡಗಳ ಜತೆ ಹೆಜ್ಜೆ ಹಾಕಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತ ಸಾಗರ ಕಣ್ತುಂಬಿಕೊಂಡರು.

Anekal And bannerughatta  Dasara 2023

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Swiggy fined
ಬೆಂಗಳೂರು3 hours ago

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Vistara Editorial
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕರ್ನಾಟಕ4 hours ago

Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

IPL 2024
ಪ್ರಮುಖ ಸುದ್ದಿ4 hours ago

IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

CBI Raid
ದೇಶ4 hours ago

CBI Raid: ಸಂದೇಶ್‌ಖಾಲಿ ಟಿಎಂಸಿ ನಾಯಕನ ಆಪ್ತನ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರದ ಮೂಲ ಪತ್ತೆ

Hassan Pen Drive Case
ಪ್ರಮುಖ ಸುದ್ದಿ4 hours ago

Hassan Pen Drive Case: ಎಸ್‌ಐಟಿ ತನಿಖೆ ಆದೇಶಕ್ಕೂ ಮುನ್ನವೇ ವಿದೇಶಕ್ಕೆ ತೆರಳಿದ ಪ್ರಜ್ವಲ್ ರೇವಣ್ಣ!

KL Rahul
ಕ್ರಿಕೆಟ್4 hours ago

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

Modi in Karnataka
ಪ್ರಮುಖ ಸುದ್ದಿ5 hours ago

Modi in Karnataka: ಬೆಳಗಾವಿಗೆ ಆಗಮಿಸಿದ ಪ್ರಧಾನಿ‌ ಮೋದಿ; ಐಟಿಸಿ ವೆಲ್‌ಕಮ್‌ ಹೋಟೆಲ್‌ನಲ್ಲಿ ವಾಸ್ತವ್ಯ

Hasan pen drive case
ಹಾಸನ5 hours ago

Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ

Air Force Chopper
ದೇಶ6 hours ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 202411 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ15 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ22 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ3 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌