Deepika Das: ದುಬೈನಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ದೀಪಿಕಾ ದಾಸ್‌! Vistara News

South Cinema

Deepika Das: ದುಬೈನಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ದೀಪಿಕಾ ದಾಸ್‌!

ಶೂಟಿಂಗ್‌ನಿಂದ ಬ್ರೇಕ್‌ ಪಡೆದುಕೊಂಡಿರುವ ಬಿಗ್‌ ಬಾಸ್‌ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das) ದುಬೈನಲ್ಲಿ ಮಜಾ ಮಾಡುತ್ತಿದ್ದಾರೆ.

VISTARANEWS.COM


on

Deepika Das
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಶೂಟಿಂಗ್‌ನಿಂದ ಬ್ರೇಕ್‌ ಪಡೆದುಕೊಂಡಿರುವ ಬಿಗ್‌ ಬಾಸ್‌ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das) ದುಬೈನಲ್ಲಿ  ಮಜಾ ಮಾಡುತ್ತಿದ್ದಾರೆ.
ಶೂಟಿಂಗ್‌ನಿಂದ ಬ್ರೇಕ್‌ ಪಡೆದುಕೊಂಡಿರುವ ಬಿಗ್‌ ಬಾಸ್‌ ಖ್ಯಾತಿಯ ನಟಿ ದೀಪಿಕಾ ದಾಸ್ Deepika Das ದುಬೈನಲ್ಲಿ ಮಜಾ ಮಾಡುತ್ತಿದ್ದಾರೆ
Deepika Das
ದೀಪಿಕಾ ದಾಸ್‌ ಅವರು ಹೊಸ ಫೋಟೊ ಶೂಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ
Deepika Das
ಇತ್ತೀಚಿಗೆ ಅಂತರಪಟ ಸೀರಿಯಲ್‌ನಲ್ಲಿ ಗೆಸ್ಟ್ ರೋಲ್‌ನಲ್ಲಿ ದೀಪಿಕಾ ಮಿಂಚಿದ್ದರು
Deepika Das
ಕೃಷ್ಣ ರುಕ್ಮಿಣಿ ನಾಗಿಣಿ ಸೀರಿಯಲ್‌ನಿಂದ ಖ್ಯಾತಿ ಪಡೆದಿದ್ದರು ದೀಪಿಕಾ ದಾಸ್ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ದೀಪಿಕಾ ದಾಸ್ ರೆಡಿಯಾಗಿದ್ದಾರೆ
Deepika Das
ದುಬೈಗೆ ಹಾರಿರುವ ದೀಪಿಕಾ ದಾಸ್ ಅವರು ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಇದ್ದಾರೆ ಕಲರ್‌ಫುಲ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ
Deepika Das
ಹೊಸ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಪಾಯಲ್ ಎಂಬ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

South Cinema

Prajwal Devaraj: ಕೋಣದ ಮೇಲೆ ಪ್ರಜ್ವಲ್ ಸವಾರಿ; ‘ಕರಾವಳಿ’ ಟೀಸರ್ ಔಟ್‌!

Prajwal Devaraj: ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

VISTARANEWS.COM


on

Karavali prajwal devaraj
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Prajwal Devaraj) ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅ ಮಂಗಳೂರಿನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜತೆಗೆಯೇ ಕೋಣ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡುತ್ತಿದ್ದರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೋತ್ತಾಗುತ್ತಿದೆ. ಬ್ಯಾಗ್ರೌಂಡ್‌ನಲ್ಲಿ ಬರುವ ಯಕ್ಷಗಾನದ ಧ್ವನಿ ಟೀಸರ್‌ನ ತೂಕವನ್ನು ಹೆಚ್ಚಿಸುವ ಜೊತೆಗೆ ಕುತೂಹಲ ದುಪ್ಪಟ್ಟು ಮಾಡಿದೆ.

ಕರಾವಳಿ ಎಂದಮೇಲೆ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಅಲ್ಲಿನ ಆಚಾರ ವಿಚಾರ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಕಾತರದಲ್ಲಿದ್ದಾರೆ ಅಭಿಮಾನಿಗಳು. ಇನ್ನು ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ; Prajwal Devaraj: ಸೋನಾ ಬೇಬಿ ಜತೆ ಹೆಜ್ಜೆ ಹಾಕಿದ ಪ್ರಜ್ವಲ್ ದೇವರಾಜ್!

ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ನೋಡಿದ್ರೆ ಇದುವರೆಗೂ ಅವರು ಮಾಡಿರುವ ಪಾತ್ರಗಳಲ್ಲಿಯೇ ಅತ್ಯಂತ ವಿಭಿನ್ನವಾಗಿದೆ. ಟೀಸರ್ ನೋಡ್ತಿದ್ರೆ ಪ್ರಜ್ವಲ್ 40ನೇ ಸಿನಿಮಾ ತುಂಬಾ ವಿಶೇಷವಾಗಿ ಮೂಡಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುದರಲ್ಲಿ ಎರಡು ಮಾತಿಲ್ಲ. ಇದೀಗ ಟೀಸರ್ ಮೂಲಕ ಸದ್ದು ಮಾಡುತ್ತಿರುವ ‘ಕರಾವಳಿ’ ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಶೂಟಿಂಗ್‌ಗೆ ಹೊರಡಲಿದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Continue Reading

South Cinema

Actress Leelavathi: ವಿನೋದ್​ ರಾಜ್​ ಪುತ್ರನಿಗೆ ಲೀಲಾವತಿ ಅಜ್ಜಿಯೇ ಕನ್ನಡ ಟೀಚರ್​!

Actress Leelavathi: ಲೀಲಾವತಿ ಅವರು ಅವರ ಮೊಮ್ಮಗ ಯುವರಾಜ್​ (Leelavathi Grandson Yuvaraj) ಕೂಡ ಚೆನ್ನೈನಿಂದ ಬಂದು ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಿದ್ದಾರೆ. ಇದೀಗ ವಿಸ್ತಾರದೊಂದಿಗೆ ಯುವರಾಜ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Vinod Raj Son Yuvaraj
Koo

ಬೆಂಗಳೂರು: ಈ ಮುಂಚೆ ವಿನೋದ್‌ ರಾಜ್‌ (Actress Leelavathi) ಅವರ ಮದುವೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಪೋಸ್ಟ್‌ ಹಂಚಿಕೊಂಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಲೀಲಾವತಿ ಅವರು ಅವರ ಮೊಮ್ಮಗ ಯುವರಾಜ್​ (Leelavathi Grandson Yuvaraj) ಕೂಡ ಚೆನ್ನೈನಿಂದ ಬಂದು ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಿದ್ದಾರೆ. ಇದೀಗ ವಿಸ್ತಾರದೊಂದಿಗೆ ಯುವರಾಜ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ʻʻಅಜ್ಜಿ ನನಗೆ ಕನ್ನಡ ಹೇಳಿಕೊಟ್ಟಿದ್ದು. ನನಗೆ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಅವರು ಇದ್ದಿದ್ದರೆ ಇನ್ನೂ ಕನ್ನಡ ಕಲಿತಾ ಇದ್ದೆ. ಜೀವನದಲ್ಲಿ ಹೇಗೆ ಇರಬೇಕು ಎಂಬುದು ಅಜ್ಜಿ ನನಗೆ ಕಲಿಸಿದ್ದಾರೆ. ತಂದೆ ಅವರು ಕಲಾವಿದರು. ನಾನು ಐಟಿ ಫೀಲ್ಡ್‌ನಲ್ಲಿ ಇದ್ದೇನೆ. ನನ್ನ ಫೇವರೇಟ್‌ ಹೀರೊ ಕೂಡ ನನ್ನ ತಂದೆನೆ’ ಎಂದರು. ಮೊಮ್ಮಗನಿಗೆ ಯುವರಾಜ್​ ಎಂದು ಲೀಲಾವತಿ ಅವರೇ ನಾಮಕರಣ ಮಾಡಿದ್ದರು. ಆ ಎಲ್ಲ ವಿಷಯಗಳನ್ನು ಯುವರಾಜ್​ ಮೆಲುಕು ಹಾಕಿದ್ದಾರೆ. ‘ಅಂದು ನಾನು ಬಂದು ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟಿದ್ದರು. ಯುವರಾಜಾ ಎಂದು ನನ್ನನ್ನು ಕರೆದಿದ್ದರು. ಅದು ನನಗೆ ತುಂಬ ಫೀಲ್​ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Actress Leelavathi: ಇಂದು ಹಾಲು, ತುಪ್ಪ ಕಾರ್ಯ; ಲೀಲಾವತಿ ಆಪ್ತರು ಮಾತ್ರ ಭಾಗಿ

ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ‘‘ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟು ನೋಡಿದ್ದರು. ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್​ವೇರ್ ಉದ್ಯೋಗ ಮಾಡುತ್ತಿದ್ದಾನೆ’’ ಎಂದಿದ್ದಾರೆ.

ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ(ಡಿ.9) ಸಂಜೆ ನೆರವೇರಿತು. ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಿತು.

ಇದನ್ನೂ ಓದಿ: Actress Leelavathi: ಮಣ್ಣಲ್ಲಿ ಮಣ್ಣಾದ ಲೀಲಾವತಿ; ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ

ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಸೋಲದೇವನಹಳ್ಳಿಗೆ ಆಂಬ್ಯುಲೆನ್ಸ್‌ನಲ್ಲಿ ತರಲಾಯಿತು. ನಂತರ ವಿನೋದ್‌ ರಾಜ್‌ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ನಂತರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವ ಕೆ.ಎಚ್‌.ಮುನಿಯಪ್ಪ ಪುಷ್ಪಗುಚ್ಛ ಸಮರ್ಪಿಸಿದರು. ಬಳಿಕ ಹಿಂದು ಧರ್ಮದ ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

Continue Reading

South Cinema

Yash Radhika: ಯಶ್‌ ಬಿಗಿದಪ್ಪಿ ವೆಡ್ಡಿಂಗ್​ ಆ್ಯನಿವರ್ಸರಿ ವಿಶ್‌ ಮಾಡಿದ ರಾಧಿಕಾ!

Yash Radhika: ಯಶ್‌ ಹಾಗೂ ರಾಧಿಕಾ ‘ನಂದಗೋಕುಲ’ ಎಂಬ ಧಾರಾವಾಹಿ ಸೆಟ್‌ನಲ್ಲಿ ಭೇಟಿಯಾಗಿದ್ದರು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು. ಬಳಿಕ 2008 ರ ‘ಮೊಗ್ಗಿನ ಮನಸ್ಸು’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.

VISTARANEWS.COM


on

yash radhika 7th wedding anniversary
Koo

ಬೆಂಗಳೂರು: ಯಶ್‌ ಹಾಗೂ ರಾಧಿಕಾ (Yash Radhika) ಅವರಿಗೆ ಡಿ.9 ಏಳನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ರಾಧಿಕಾ ಅವರು ಮೂರು ಫೋಟೊಗಳನ್ನು ಹಂಚಿಕೊಂಡು ʻʻವಾರ್ಷಿಕೋತ್ಸವದ ಶುಭಾಶಯಗಳು ನನ್ನ ಸಂಗಾತಿ” ಎಂದು ಶೀರ್ಷಿಕೆ ನೀಡಿದ್ದಾರೆ. ಸಂಗಾತಿ ಜತೆಗಿನ ಪ್ರಯಾಣವನ್ನು ಈ ಮೂರು ಫೋಟೊಗಳಲ್ಲಿ ವಿವರಿಸಿದ್ದಾರೆ. ಮೊದಲನೆಯ ಫೋಟೊದಲ್ಲಿ ಒಂದು ಪಾಂಡಾ ಮತ್ತು ಪುಟ್ಟ ಡ್ರ್ಯಾಗನ್ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತೊಂದರಲ್ಲಿ ಯಶ್ ಅವರು ರಾಧಿಕಾ ಅವರ ಹಣೆಗೆ ಚುಂಬಿಸುತ್ತಿದ್ದಾರೆ. ಇನ್ನೊಂದರಲ್ಲಿ ಇಬ್ಬರು ಬೆಚ್ಚಗೆ ಅಪ್ಪಿಕೊಂಡಿದ್ದಾರೆ.

ಯಶ್‌ ಹಾಗೂ ರಾಧಿಕಾ ‘ನಂದಗೋಕುಲ’ ಎಂಬ ಧಾರಾವಾಹಿ ಸೆಟ್‌ನಲ್ಲಿ ಭೇಟಿಯಾಗಿದ್ದರು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು. ಬಳಿಕ 2008 ರ ‘ಮೊಗ್ಗಿನ ಮನಸ್ಸು’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಮದುವೆ ಬಳಿಕ ನಟಿ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರು ಸಿನಿಮಾಕ್ಕೆ ಬರಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ. ಇದೀಗ ಜೋಡಿ ಇಬ್ಬರು ಮುದ್ದಾದ ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ವಿವಾಹ ವಾರ್ಷಿಕೋತ್ಸವಕ್ಕೆ ಯಶ್‌ ಹಾಗೂ ರಾಧಿಕಾ ಫ್ಯಾನ್ಸ್‌ ಶುಭ ಹಾರೈಸುತ್ತಿದ್ದಾರೆ.

ಯಶ್‌ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌!

ನಟ ಯಶ್ (Actor Yash), ‘ಕೆಜಿಎಫ್’ ಹೊರತಾಗಿ (Yash19 Title Reveal) ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಅವರ ಫ್ಯಾನ್ಸ್‌ ಮಾತ್ರವಲ್ಲದೆ ಭಾರತದ ಸಿನಿಮಾ ಪ್ರೇಕ್ಷಕರಲ್ಲಿತ್ತು. ಈಗ ಯಶ್‌ ಸಿಹಿ ಸುದ್ದಿ ಕೊಟ್ಟಾಗಿದೆ. ʻಟಾಕ್ಸಿಕ್‌ʼ -ಎ ಫೈರಿ ಟೇಲ್‌ ಫಾರ್‌ ಗ್ರೌನ್‌ʼ (TOXIC) ಎಂದು ರಿವೀಲ್‌ ಆಗಿದೆ. ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಯುಕೆ, ಯೂರೋಪ್ ಸೇರಿದಂತೆ ಹಲವೆಡೆ ಟೈಟಲ್ ರಿವೀಲ್ ಆಗಿದೆ. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಕೂಡ ಕನ್ಫರ್ಮ್ ಆಗಿದೆ. ಗೀತು ಮೋಹನ್ ದಾಸ್ ಕಲ್ಪನೆಯ ಕತೆಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 2025ರ ಏಪ್ರಿಲ್‌ 10ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್‌ ಅಗುತ್ತಿದೆ.

ಇದನ್ನೂ ಓದಿ: Yash 19 Movie Update: ನಿರ್ಮಾಣ ಕ್ಷೇತ್ರಕ್ಕೆ ರಾಕಿ ಭಾಯ್‌ ಎಂಟ್ರಿ; `ಟಾಕ್ಸಿಕ್‌’ನಲ್ಲಿ ಮಲಯಾಳಂ ಖ್ಯಾತ ನಟ?

ರಾಕಿಂಗ್ ಜೋಡಿ ಯಶ್ – ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟಿದ್ದು ಡಿಸೆಂಬರ್ ತಿಂಗಳಲ್ಲಿ. ಹೀಗಾಗಿ ಇದೇ ತಿಂಗಳಲ್ಲಿ ಯಶ್ 19 ಅನೌನ್ಸ್ ಮಾಡಲು ಪ್ಲಾನ್ ಆಗಿತ್ತು ಎನ್ನಾಗಿದೆ. ಇದೀಗ ಯಶ್‌ 10 ಕೂಡ ಡಿಸೆಂಬರ್‌ನಲ್ಲಿಯೇ ಅನೌನ್ಸ್‌ ಅಗಿದೆ.

Continue Reading

South Cinema

Samantha Ruth Prabhu: ರಿಯಾಲಿಟಿ ಶೋಗೆ ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಸಮಂತಾ!

Samantha Ruth Prabhu: ಇದೀಗ ನಟಿ ಬಾದ್‌ಶಾ ಜತೆಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತಿಥಿಯಾಗಿ ಹೋಗಿದ್ದಾರೆಯೇ ಅಥವಾ ಶೋ ಮುಗಿಯುವವರೆಗೂ ತೀರ್ಪುಗಾರರಾಗಿರುತ್ತಾರೆಯೇ ಎಂಬುದು ಪಕ್ಕಾ ಆಗಿಲ್ಲ.

VISTARANEWS.COM


on

Samantha Ruth Prabhu MTV Hustle season 3 stage on fire
Koo
Samantha Ruth Prabhu

ನಟಿ ಸಮಂತಾ ಸದ್ಯ (Samantha Ruth Prabhu) ಸಿನಿಮಾದಿಂದ ಬ್ರೇಕ್‌ ಪಡೆದಿರುವುದು ಗೊತ್ತೇ ಇದೆ. ಇದೀಗ ನಟಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಏಕಾಏಕಿ ಹಿಂದಿಯ ರ್‍ಯಾಪ್ ರಿಯಾಲಿಟಿ ಶೋನಲ್ಲಿ ಸಮಂತಾ ಭಾಗಿಯಾಗಿದ್ದಾರೆ. ಜಡ್ಜ್ ಹನಿ ಸಿಂಗ್​ ಜತೆ ವೇದಿಕೆ ಹಂಚಿಕೊಂಡಿರುವ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. MTV ರಿಯಾಲಿಟಿ ಶೋನಲ್ಲಿ ಸಮಂತಾ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.

Samantha Ruth Prabhu

ಎಂಟಿವಿಯಲ್ಲಿ ರಿಯಾಲಿಟಿ ಶೋ MTV ಹಸ್ಲ್ ಸೀಸನ್ 3 (MTV Hustle season 3) ಪ್ರಸಾರವಾಗುತ್ತಿದೆ. ಕಾರ್ಯಕ್ರಮದ ಪ್ರೋಮೊ ಔಟ್‌ ಆಗಿದ್ದು, ನಟಿ ಸಮಂತಾ ರ್‍ಯಾಪರ್‌ ಬಾದ್‌ಶಾ ಅವರೊಂದಿಗೆ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೈದರಾಬಾದ್ ಸ್ಪರ್ಧಿ ಕೇಡೆನ್ ಶರ್ಮಾ ಅವರ ಹಿಪ್-ಹಾಪ್ ಬೀಟ್‌ಗಳನ್ನು ಎಂಜಾಯ್ ಮಾಡಿದ್ದಾರೆ.

Samantha Ruth Prabhu

ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಚಿತ್ರಗಳನ್ನು ಸಮಂತಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೀನ್ಸ್ ಧರಿಸಿ ಸಖತ್ ಟ್ರೆಂಡಿಯಾಗಿ ಕಾಣುತ್ತಿದ್ದಾರೆ ಸಮಂತಾ. ನಟಿ ಕೇವಲ ಸಿನಿಮಾ ಮಾತ್ರವಲ್ಲದೇ ಆಹಾ ಒಟಿಟಿಯಲ್ಲಿ ಸ್ಯಾಮ್ ಜಾಮ್ ಮತ್ತು ಒಂದೆರಡು ಸಂದರ್ಶನಗಳನ್ನು ಹೋಸ್ಟ್ ಮಾಡಿದ್ದರು. ಹಿಂದಿಯ ‘ಫ್ಯಾಮಿಲಿ ಮ್ಯಾನ್ 2’ ಸೀರಿಸ್ ಬಳಿಕ ನಟಿ ಸಮಂತಾ ಬಾಲಿವುಡ್‌ನಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿದ್ದರು. ಹಲವು ಜಾಹೀರಾತುಗಳಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ಸಮಂತಾ ರೊಮ್ಯಾಂಟಿಕ್‌ ಪೋಸ್‌ಗೆ ‌’ಲುಕ್ಕಿಂಗ್ ಲೈಕ್ ಎ ವಾವ್’ ಅಂದ್ರು ಫ್ಯಾನ್ಸ್!

Samantha Ruth Prabhu

ಇದೀಗ ನಟಿ ಬಾದ್‌ಶಾ ಜತೆಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತಿಥಿಯಾಗಿ ಹೋಗಿದ್ದಾರೆಯೇ ಅಥವಾ ಶೋ ಮುಗಿಯುವವರೆಗೂ ತೀರ್ಪುಗಾರರಾಗಿರುತ್ತಾರೆಯೇ ಎಂಬುದು ಪಕ್ಕಾ ಆಗಿಲ್ಲ.

Samantha Ruth Prabhu

ಮುಂದೆ, ಸಮಂತಾ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

Continue Reading
Advertisement
man accused of murder wins acquittal after studying law and fighting own Case
ದೇಶ59 seconds ago

ಜೋಡಿ ಕೊಲೆ ಪ್ರಕರಣದಲ್ಲಿ ತಪ್ಪಾಗಿ ಆರೋಪಿಯಾಗಿದ್ದ ವ್ಯಕ್ತಿ, ಲಾ ಓದಿ ತನ್ನ ಕೇಸ್‌ನ್ನೇ ತಾನೇ ಗೆದ್ದ!

Kate Cross reveals ‘soft spot for RCB’ after bagging deal
ಕ್ರಿಕೆಟ್2 mins ago

ಚೆನ್ನೈ ತಂಡದ ಕಟ್ಟರ್‌ ಅಭಿಮಾನಿಯನ್ನು ಖರೀದಿ ಮಾಡಿದ ಆರ್​ಸಿಬಿ ಫ್ರಾಂಚೈಸಿ

Mysore people
ಕರ್ನಾಟಕ10 mins ago

Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

Winter Food Tips
ಆಹಾರ/ಅಡುಗೆ25 mins ago

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

ipl fans
ಕ್ರಿಕೆಟ್54 mins ago

IPL 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​; ಐಪಿಎಲ್​ ಆರಂಭಕ್ಕೆ ಡೇಟ್​ ಫಿಕ್ಸ್!​

Moral policing
ಕರ್ನಾಟಕ1 hour ago

Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

Akash anand is BSP Leader mayawati's political heir
ದೇಶ1 hour ago

Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Cloudy weather in Bengaluru for the entire day Rain Forecast
ಉಡುಪಿ1 hour ago

Karnataka weather: ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಇಲ್ಲಷ್ಟೇ ಮಳೆ ಸೂಚನೆ

money guide
ಮನಿ-ಗೈಡ್1 hour ago

Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

rohit sharma jay shah
ಕ್ರಿಕೆಟ್2 hours ago

Rohit Sharma: ಜಯ್​ ಶಾ ಕೈಯಲ್ಲಿದೆ ರೋಹಿತ್​ ಟಿ20 ವಿಶ್ವಕಪ್ ಭವಿಷ್ಯ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ3 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ5 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ13 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌