South Cinema
Jr NTR: ಖಡಕ್ ವಾರ್ನಿಂಗ್ ಬೆನ್ನಲ್ಲೇ ಫೋಟೊಗಾಗಿ ಜ್ಯೂನಿಯರ್ ಎನ್‌ಟಿಆರ್ ಮೇಲೆ ಅಟ್ಯಾಕ್ ಮಾಡಿದ ಅಭಿಮಾನಿ
ಇತ್ತೀಚೆಗೆ ನಡೆದ (Jr NTR) ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾಗ ಅಭಿಮಾನಿಯೊಬ್ಬ ಹಿಂಬದಿಯಿಂದ ನಟನನ್ನು ಹಿಡಿದುಕೊಂಡಿದ್ದಾನೆ. ಬಾಡಿಗಾರ್ಡ್ಸ್ ತಪ್ಪಿಸಲು ಬಂದಾಗ ಜ್ಯೂನಿಯರ್ ಎನ್‌ಟಿಆರ್ ತಡೆದು ಅಭಿಮಾನಿಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಬೆಂಗಳೂರು: ಜ್ಯೂನಿಯರ್ ಎನ್‌ಟಿಆರ್ (Jr NTR) ಫ್ಯಾನ್ಸ್ ಮೇಲೆ ಗರಂ ಆದ ಬೆನ್ನಲ್ಲೇ ಇದೀಗ ಅಭಿಮಾನಿಯೊಬ್ಬ ವೇದಿಕೆಯಲ್ಲಿ ನಟನ ಹಿಂಬದಿಯಿಂದ ಬಂದು ಹಿಡಿದುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ನಟ ಆಸ್ಕರ್ ಪ್ರಶಸ್ತಿ ಗೆದ್ದು ಬಂದ ನಂತರ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾಗ ಅಭಿಮಾನಿಯೊಬ್ಬ ಹಿಂಬದಿಯಿಂದ ನಟನನ್ನು ಹಿಡಿದುಕೊಂಡಿದ್ದಾನೆ. ಬಾಡಿಗಾರ್ಡ್ಸ್ ತಪ್ಪಿಸಲು ಬಂದಾಗ ಜ್ಯೂನಿಯರ್ ಎನ್‌ಟಿಆರ್ ತಡೆದು ಅಭಿಮಾನಿಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಜ್ಯೂನಿಯರ್ ಎನ್‌ಟಿಆರ್ ಅವರನ್ನು ಸೊಂಟದ ಹಿಂದಿನಿಂದ ಅಭಿಮಾನಿಯೊಬ್ಬ ಹಿಡಿದುಕೊಂಡಿದ್ದಾನೆ. ಬಾಡಿಗಾರ್ಡ್ಸ್ ತಪ್ಪಿಸಲು ಬಂದಾಗ ಜ್ಯೂನಿಯರ್ ಎನ್‌ಟಿಆರ್ ತಡೆದು ಅಭಿಮಾನಿಗೆ ಪೋಸ್ ಕೊಟ್ಟಿದ್ದಾರೆ. ನಂತರ ವೇದಿಕೆಯಿಂದ ನಿರ್ಗಮಿಸಿದ್ದಾನೆ. ಈಗಾಗಲೇ ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗೆ ಗರಂ ಪ್ರತಿಕ್ರಿಯೆ ನೀಡಿದ್ದಾರೆ.
ಆಗಿದ್ದೇನು?
ಜ್ಯೂನಿಯರ್ ಎನ್‌ಟಿಆರ್ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅವರ ನಟನೆಯ ‘ಆರ್‌ಆರ್‌ಆರ್’ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಇದೀಗ ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರಿಗೆ ಒಂದು ಪ್ರಶ್ನೆ ಕಿರಿಕಿರಿ ಉಂಟು ಮಾಡಿದೆ. ಎಲ್ಲೇ ಬಂದರೂ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಇದು ಎನ್‌ಟಿಆರ್ ಕೋಪಕ್ಕೆ ಕಾರಣವಾಗಿದೆ. ‘ದಾಸ್ ಕಾ ಧಮ್ಕಿ’ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ಗೆ ಆಗಮಿಸಿದ್ದರು. ಇದೇ ವೇಳೆ ಫ್ಯಾನ್ಸ್ ಮುಂದಿನ ಸಿನಿಮಾದ ಅಪ್‌ಡೇಟ್ ನೀಡುವಂತೆ ಕೇಳಿದ್ದಾರೆ. ಇದು ಎನ್‌ಟಿಆರ್‌ಗೆ ಬೇಸರ ತಂದಿದೆ. ಆ ವೇದಿಕೆಯಲ್ಲೇ ಮಾತನಾಡಿದ ಅವರು, ‘ನೀವು ಮತ್ತೆ ಮತ್ತೆ ಅದನ್ನೇ ಕೇಳಿದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ..’ ಎಂದು ಕೋಪದಿಂದ ಹೇಳಿದ್ದಾರೆ.
ಮಾತು ಮುಂದುವರಿಸಿದ ಅವರು, ‘ನಾನು ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ನಿಮಗೆ ಗೊತ್ತಿದೆ. ಅಷ್ಟೇ ಏಕೆ, ನೀವು ಕೂಡ ಸಿನಿಮಾದಿಂದ ನಾನು ದೂರವಾಗಲು ಬಿಡುವುದಿಲ್ಲ. ಆದರೆ ದಯವಿಟ್ಟು ಅಪ್‌ಡೇಟ್ ಬಗ್ಗೆ ಪದೇ ಪದೇ ಕೇಳಬೇಡಿ. ನಾನು ಶೀಘ್ರದಲ್ಲೇ ಸಿನಿಮಾ ಪ್ರಾರಂಭ ಮಾಡುವೆʼʼ ಎಂದು ಎನ್‌ಟಿಆರ್ ಹೇಳಿದ್ದಾರೆ.
ಇದನ್ನೂ ಓದಿ:Actor Jr NTR: ಆಸ್ಕರ್ ಕಾರ್ಯಕ್ರಮಕ್ಕೆ ದುಬಾರಿ ವಾಚ್ ತೊಟ್ಟಿದ್ದ ಜೂ. ಎನ್‌ಟಿಆರ್! ಆ ವಾಚ್ ಬೆಲೆ ಎಷ್ಟು?
ವಿಡಿಯೊ
ಎನ್‌ಟಿಆರ್30
ಜೂ. ಎನ್‌ಟಿಆರ್ ನಟನೆಯ ಮೂವತ್ತನೇ ಸಿನಿಮಾದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್‌ಲಾಲ್ ಹಾಗೂ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯ ಮುಂಚೆ ಈ ಸಿನಿಮಾವನ್ನು ಘೋಷಿಸಿದ್ದರು. ಮೋಹನ್‌ಲಾಲ್ ಹಾಗೂ ಜೂ. ಎನ್‌ಟಿಆರ್ ಈ ಹಿಂದೆಯೂ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ‘ಜನತಾ ಗ್ಯಾರೇಜ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಮತ್ತೊಮ್ಮೆ ಈ ತಾರಾ ಜೋಡಿ ಒಟ್ಟಿಗೆ ನಟಿಸುತ್ತಿದೆ.
ಜೂ. ಎನ್‌ಟಿಆರ್ ರ 30ನೇ ಸಿನಿಮಾದ ಬಳಿಕ 31ನೇ ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಜತೆಗೆ ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
South Cinema
Actor Nani: ನಾನಿ ಅಭಿನಯದ ʻದಸರಾʼ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ 36 ಕಟ್ ಸೂಚನೆ
ಸೆನ್ಸಾರ್ (Actor Nani) ಮಂಡಳಿಯು 36 ಕಟ್ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗುವಿನಲ್ಲಿ ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .
ಬೆಂಗಳೂರು: ತೆಲುಗು ನಟ ನಾನಿ (Actor Nani) ಅಭಿನಯದ ದಸರಾ ಸಿನಿಮಾ ಮಾರ್ಚ್ 30ರಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ-ಲೇಖಕ ಶ್ರೀಕಾಂತ್ ಒಡೆಲಾ ಅವರು ನಾನಿ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾನಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆನ್ಸಾರ್ ಮಂಡಳಿಯು 36 ಕಟ್ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗಿನಲ್ಲಿ ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .
ದೃಶ್ಯಗಳನ್ನು ತೆಗೆಯುವ ಹೊರತಾಗಿ, ವಿವಿಧ ಫ್ರೇಮ್‌ಗಳಿಂದ ಕೆಲವು ಆಡಿಯೊ ಮತ್ತು ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ. ಸೆನ್ಸಾರ್ ಮಂಡಳಿ ಸದಸ್ಯರು ಕೆಲವು ಸೀಕ್ವೆನ್ಸ್‌ಗಳಿಂದ ಸಬ್‌ಟೈಟಲ್ ತೆಗೆದುಹಾಕಲು ಸೂಚಿಸಿದ್ದಾರೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್ಗಳನ್ನು ಸೂಚಿಸಿದೆ. ಇವಲ್ಲದೆ ಸಿನಿಮಾದ ಪ್ರಚಾರದಲ್ಲಿಯೂ ಬಳಸಲಾಗುತ್ತಿರುವ ಬಾಂಚೆತ್ ಹಾಗೂ ಬದ್ದಲು ಬಾಸಿಂಗಾಲೈತಾಯ್ ಸಂಭಾಷಣೆಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.
ಮಾರ್ಚ್ 26 ರಂದು ಆಂಧ್ರಪ್ರದೇಶದ ಅನಂತಪುರದ ಆರ್ಟ್ಸ್ ಕಾಲೇಜು ಮೈದಾನದಲ್ಲಿ ದಸರಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಎಂದು ಎಸ್‌ಎಲ್‌ವಿ ಸಿನಿಮಾಸ್ ಹೇಳಿಕೊಂಡಿದೆ. “ಧೂಮ್ ಧಾಮ್ ದಸರಾ ಆಚರಣೆಗೆ ಸಿದ್ಧರಾಗಿ. ಮಾರ್ಚ್ 26 ರಂದು ಅನಂತಪುರದ ಆರ್ಟ್ಸ್ ಕಾಲೇಜ್ ಮೈದಾನದಲ್ಲಿ ದಸರಾ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್” ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್ ಮಾಡಿದೆ.
ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Dasara Movie: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ದಲ್ಲಿ ಮಿಂಚಲಿದ್ದಾರೆ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ
ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.
South Cinema
Kiran Govi: `ಪಯಣ’ ಸಿನಿಮಾ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ನಿಧನ, ಹೃದಯಾಘಾತವೇ ಕಾರಣ
ಪಯಣ ಸಿನಿಮಾ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ (Kiran Govi)ನಿಧನರಾಗಿದ್ದಾರೆ. ಸಂಚಾರಿ, ʻಯಾರಿಗೆ ಯಾರುಂಟುʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
ಬೆಂಗಳೂರು: ರವಿಶಂಕರ್ ನಾಯಕ ನಟರಾಗಿ ನಟಿಸಿದ್ದ ಪಯಣ ಸಿನಿಮಾ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ (Kiran Govi) ನಿಧನರಾಗಿದ್ದಾರೆ. ಅವರಿಗೆ 40 ವರ್ಷ ಆಗಿತ್ತು. ಮಾರ್ಚ್ 25ರಂದು ತಮ್ಮ ಕಚೇರಿಯಲ್ಲಿದ್ದಾಗ ಕಿರಣ್ ಅವರಿಗೆ ಹೃದಯಾಘಾತವುಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಚಾರಿ, ʻಯಾರಿಗೆ ಯಾರುಂಟುʼ ಹೀಗೆ ಹಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು.
ತುಮಕೂರು ಮೂಲದವರಾದ ಕಿರಣ್ ಗೋವಿ ಗಾಯನದಲ್ಲಿ ತುಂಬಾ ಆಸಕ್ತಿ ಇತ್ತು. ಹಾಗಾಗಿ ಆರ್ಕೆಸ್ಟ್ರಾ ಸೇರಿಕೊಂಡಿದ್ದರು. ಮುಂದೆ ಸಿನಿಮಾ ಲೋಕ ಪ್ರವೇಶಿಸಿ ನಿರ್ದೇಶಕರಾದರು. ನಿರ್ದೇಶಕ ಕಿರಣ್ ಗೋವಿ ನಿಧನಕ್ಕೆ ಸ್ಯಾಂಡಲ್ವುಡ್ನ ಕೆಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಒರಟ ಖ್ಯಾತಿಯ ಪ್ರಶಾಂತ್ ಜತೆಗೆ ಸಂಚಾರಿ ಹೆಸರಿನ ಸಿನಿಮಾವನ್ನು ಮಾಡಿದ್ದರು.
ಇದನ್ನೂ ಓದಿ: Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ ಸುಬ್ರಮಣ್ಯಂ ನಿಧನ
ಯಾರಿಗೆ ಯಾರುಂಟು ಸಿನಿಮಾ ಬಿಡುಗಡೆಯಾದಾಗ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಡುಗಳಷ್ಟೇ ಮಾಧುರ್ಯ ಹೊಂದಿರುವ ಕಥೆ, ಮನೋರಂಜನೆ, ಜೀವನಪ್ರೇಮದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸುತ್ತಲೇ ಗೆಲುವಿನ ಯಾನ ಆರಂಭಿಸಿತ್ತು.
South Cinema
Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?
ನಟಿ (Samantha Ruth Prabhu) ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಅವರ ಮುಂಬರುವ ಪೌರಾಣಿಕ ಚಿತ್ರ ಶಾಕುಂತಲಂ (Shaakuntalam) ಏಪ್ರಿಲ್ 14 ರಂದು ತೆರೆ ಕಾಣುತ್ತಿದೆ. ಸ್ಯಾಮ್ ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಟಿ ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಸಮಂತಾ ಮಾತನಾಡಿ ʻʻನಾನು ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ ಸಮಯದಲ್ಲಿ ನನಗೆ ಈ ಆಫರ್ ಬಂದಿತು. ನಾನು ಆಗಷ್ಟೇ ಶಾಕುಂತಲೆಗಿಂತ ವಿಭಿನ್ನವಾದ ರಾಜಿ ಪಾತ್ರವನ್ನು ನಿರ್ವಹಿಸಿದ್ದೆ. ಶಾಕುಂತಲೆ ಪಾತ್ರ ಪಾವಿತ್ರ್ಯತೆ, ಮುಗ್ಧತೆ ಮತ್ತು ಘನತೆಯ ಸಂಕೇತವಾಗಿದೆ. ಆ ಸಮಯದಲ್ಲಿ ನಾನು ಶಾಕುಂತಲೆ ಆಗಿ ಬದಲಾಗಬಹುದೇ ಎಂದು ನನಗೆ ಖಚಿತ ಇರಲಿಲ್ಲʼʼಬಎಂದು ಸಮಂತಾ ಹೇಳಿದ್ದಾರೆ.
ʻಬಳಿಕ ನಾನು ಶಾಕುಂತಲೆ ಪಾತ್ರ ನನಗೊಂದು ಅವಕಾಶ ಎಂದು ಸಹಿ ಹಾಕಿದೆ. ಕಳೆದ 3 ವರ್ಷಗಳಲ್ಲಿ, ನಾನು ತುಂಬ ಭಯದಿಂದ ಬದುಕಿದ್ದೇನೆ. ಶಾಕುಂತಲೆ ಕೂಡ ತುಂಬ ಕಷ್ಟಗಳನ್ನು ಎದುರಿಸಿದ್ದಳು. ಆದರೆ ಅವಳು ಎಲ್ಲವನ್ನೂ ಘನತೆಯಿಂದ ಎದುರಿಸಿದಳು. ನನ್ನ ಭಯವನ್ನು ಎದುರಿಸಲು ನಾನು ಈ ಸಿನಿಮಾ ತೆಗೆದುಕೊಂಡೆ. ಕಳೆದ ಮೂರು ವರ್ಷಗಳಲ್ಲಿ ನನ್ನ ಭಯವನ್ನು ನಾನು ಹೇಗೆ ಎದುರಿಸಿದೆ ಎಂಬುದು ನಟಿಯಾಗಿ ನನ್ನ ವಿಕಾಸವನ್ನು ವಿವರಿಸುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: Samantha: ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾದಲ್ಲಿ ನಟ ಜಿಶು ಸೇನಗುಪ್ತಾ ಪಾತ್ರವೇನು?
ಏಪ್ರಿಲ್ 14 ರಂದು ತೆರೆಗೆ
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
South Cinema
Suniel Shetty: ಸುನೀಲ್ ಶೆಟ್ಟಿಗೆ ಅಮಿತಾಭ್ ಬಚ್ಚನ್, ಸಂಜಯ್ ದತ್ ʻಅಣ್ಣಾʼ ಅಂತ ಕರೆಯುವುದೇಕೆ?
ಅಮಿತಾಭ್ ಬಚ್ಚನ್ ಮತ್ತು ಸಂಜಯ್ ದತ್ ಅವರನ್ನು (Suniel Shetty) ‘ಅಣ್ಣಾ (ಸಹೋದರ)’ ಎಂದು ಕರೆಯುವ ಪ್ರವೃತ್ತಿಯನ್ನು ಹೇಗೆ ಪ್ರಾರಂಭಿಸಿದರು ಎಂಬುದನ್ನು ಸುನೀಲ್ ಬಹಿರಂಗಪಡಿಸಿದರು.
ಬೆಂಗಳೂರು: ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಇತ್ತೀಚೆಗೆ ಶೆಹನಾಜ್ ಗಿಲ್ ( Shehnaaz Gill ) ಅವರ ಟಾಕ್ ಶೋ ದೇಸಿ ವೈಬ್ಸ್‌ನಲ್ಲಿ ಕಾಣಿಸಿಕೊಂಡರು. ಅಮಿತಾಭ್ ಬಚ್ಚನ್ ಮತ್ತು ಸಂಜಯ್ ದತ್ ಅವರು ತಮ್ಮನ್ನು ‘ಅಣ್ಣಾ (ಸಹೋದರ)’ ಎಂದು ಕರೆಯುವ ಪ್ರವೃತ್ತಿಯನ್ನು ಹೇಗೆ ಪ್ರಾರಂಭಿಸಿದರು ಎಂಬುದನ್ನು ಸುನೀಲ್ ಬಹಿರಂಗಪಡಿಸಿದರು.
ಉದ್ಯಮಿಯೂ ಆಗಿರುವ ನಟ ಸುನೀಲ್ ಶೆಟ್ಟಿ ತಮ್ಮ ವ್ಯವಹಾರದ ಬಗ್ಗೆ ಬಗ್ಗೆಯೂ ಹಂಚಿಕೊಂಡರು. ʻʻನಾನು ಉದ್ಯಮಿ ಮತ್ತು ನಾನು ಹೋಟೆಲ್ ನಿರ್ವಹಣೆಯನ್ನು ಮಾಡಿದ್ದೇನೆ. ನಾನು ಹೊರಬಂದಾಗ, ನನ್ನ ತಂದೆ ಹೇಳಿದರು, ನಿಮಗೆ ಒಂದು ಜೀವನವಿದೆ, ನಿಮ್ಮ ಅದೃಷ್ಟವನ್ನು ಪ್ರಯತ್ನಿಸಿ ಎಂದು. ಹಾಗೇ ನಾನು ಸಿನಿರಂಗಕ್ಕೆ ಕಾಲಿಟ್ಟೆ. ಆದರೆ ವಿಮರ್ಶಕರು ನನ್ನ ಪರವಾಗಿರಲಿಲ್ಲ. ಆದ್ದರಿಂದ, ನಾನು ಹೆದರುತ್ತಿದ್ದೆ, ಈ ವೃತ್ತಿಜೀವನವು ಅದು ಎಷ್ಟು ಕಾಲ ಉಳಿಯುತ್ತದೆ?’ ಎಂಬ ಯೋಚನೆ ಬಂತು. ಅದಕ್ಕಾಗಿಯೇ ನಾನು ಬ್ಯುಸಿನೆಸ್ ಎಂದಿಗೂ ಬಿಡಲಿಲ್ಲ. ಆರ್ಥಿಕವಾಗಿ ಸುಭದ್ರವಾಗಿರುವುದು ಮುಖ್ಯ. ನಟನೆ ನನ್ನ ವೃತ್ತಿ ಎಂದು ನನಗೆ ಯಾವಾಗ ಪಕ್ಕಾ ಆಯ್ತೋ ನಾನು ಹೂಡಿಕೆ ಮಾಡುತ್ತಲೇ ಇದ್ದೆ, ಆದರೆ ನಾನು ವ್ಯಾಪಾರ ಮಾಡುವುದನ್ನು ನಿಲ್ಲಿಸಿದೆʼʼ ಎಂದರು.
ಇದನ್ನೂ ಓದಿ: INDvsAUS : ವೆಂಕಟೇಶ್ ಪ್ರಸಾದ್ಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ಸುನೀಲ್ ಶೆಟ್ಟಿ; ಏನಂದರು ಅವರು?
ಶೆಹನಾಜ್ ಗಿಲ್ ಟಾಕ್ ಶೋ
ಅದೇ ರೀತಿ ಸುನೀಲ್ ಶೆಟ್ಟಿ ತನಗೆ ಆ್ಯಕ್ಷನ್ ಹೀರೊ ಎಂಬ ಟ್ಯಾಗ್ ಸಿಕ್ಕಿರುವುದಕ್ಕಾಗಿ ಖುಷಿ ಇದೆ ಎಂದು ಹೇಳಿದರು. ಶೆಹನಾಜ್ ಅವರು ಸುನೀಲ್ ಅವರನ್ನು ‘ಅಣ್ಣಾ’ ಎಂದು ಏಕೆ ಕರೆಯುತ್ತಾರೆ ಎಂದು ಕೇಳಿದರು. ಈ ಬಗ್ಗೆ ನಟ ಪ್ರತಿಕ್ರಿಯೆ ನೀಡಿ ʻʻನಾವು LAನಲ್ಲಿ ಕಾಂಟೆಗಾಗಿ (Kaante in LA) ಚಿತ್ರೀಕರಣ ಮಾಡುತ್ತಿದ್ದೆವು. ನನ್ನ ಕೆಲವು ಸಿಬ್ಬಂದಿ ನನ್ನನ್ನು ಅಣ್ಣಾ ಎಂದು ಕರೆಯುತ್ತಿದ್ದರು. ನಂತರ, ಸಂಜಯ್ ದತ್ ನನ್ನನ್ನು ಅಣ್ಣಾ ಎಂದು ಕರೆಯಲು ಪ್ರಾರಂಭಿಸಿದರು. ಹೀಗೆ ಅದು ಮುಂದುವರಿದಿದೆʼʼ ಎಂದರು.
ಸುನೀಲ್ ಶೆಟ್ಟಿ ಮುಂದೆ ವೆಬ್ ಶೋ `ಹಂಟರ್: ಟೂಟೇಗಾ ನಹಿ ತೊಡೆಗಾ’ದಲ್ಲಿ (Hunter: Tootega Nahi Todega) ಕಾಣಿಸಿಕೊಳ್ಳಲಿದ್ದಾರೆ. ಅಮೆಜಾನ್ ಮಿನಿ ಟಿವಿಯಲ್ಲಿ ಕಾರ್ಯಕ್ರಮ ಬಿಡುಗಡೆಯಾಗಲಿದೆ.
-
ಸುವಚನ17 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ22 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ20 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ20 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ