Kannada New Movie | ಅಪ್ಪು ಹುಟ್ಟಿದ ಹಬ್ಬದಂದೇ ತೆರೆಗೆ ಬರಲಿದೆ ರಿಯಲ್‌ ಸ್ಟಾರ್‌ ನಟನೆಯ ಕಬ್ಜ Vistara News

ಪ್ರಮುಖ ಸುದ್ದಿ

Kannada New Movie | ಅಪ್ಪು ಹುಟ್ಟಿದ ಹಬ್ಬದಂದೇ ತೆರೆಗೆ ಬರಲಿದೆ ರಿಯಲ್‌ ಸ್ಟಾರ್‌ ನಟನೆಯ ಕಬ್ಜ

ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕಿಚ್ಚ ಸುದೀಪ್‌ ನಟನೆಯ ʼಕಬ್ಜʼ (Kabza Movie) ಸಿನಿಮಾ ಪುನೀತ್‌ ರಾಜ್‌ಕುಮಾರ್‌ ಜನ್ಮದಿನವಾರ ಮಾ.17ರಂದು ತೆರೆ ಕಾಣಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ಬೆಳೆದು ಮಿಂಚಲಾರಂಭಿಸಿವೆ. ಅದರಲ್ಲೂ ನಮ್ಮ ಕನ್ನಡದ ಕೆಜಿಎಫ್‌, ಕಾಂತಾರಾ, ವಿಕ್ರಾಂತ್‌ ರೋಣಾ, ಚಾರ್ಲಿ 777 ಅಂತಹ ಸಿನಿಮಾಗಳು ದೇಶಾದ್ಯಂತ ಮೆಚ್ಚುಗೆ ಪಡೆದ ಚಿತ್ರಗಳಾಗಿವೆ. ಈ ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಪ್ಯಾನ್‌ ಇಂಡಿಯಾ ಸಿನಿಮಾವಾದ ʼಕಬ್ಜʼ (Kabza Movie) ಕೂಡ ತೆರೆಗೆ ಬರಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಹು ನಿರೀಕ್ಷೆಯ ಈ ಸಿನಿಮಾ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನ್ಮದಿನದಂದೇ ತೆರೆಗೆ ಬರಲಿದೆ ಎಂದು ತಿಳಿಸಿದೆ ಚಿತ್ರತಂಡ.

ಇದನ್ನೂ ಓದಿ: Kabzaa Film | ʻಕಬ್ಜʼ ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ತೆಕ್ಕೆಗೆ
ಅಪ್ಪು ಜನ್ಮದಿನವಾದ ಮಾ.17ರಂದು ಕಬ್ಜ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ನಮ್ಮನ್ನು ಅಗಲಿರುವ ಅಪ್ಪುಗೆ ಅರ್ಪಿಸುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ನಾಡಿನ ಹಬ್ಬವಾದ ಯುಗಾದಿ ಕೂಡ ಇದೇ ಸಂದರ್ಭದಲ್ಲಿ ಬರಲಿದ್ದು, ಅಭಿಮಾನಿಗಳಿಗೆ ಈ ಸಿನಿಮಾ ಯುಗಾದಿ ಗಿಫ್ಟ್‌ ಎಂದೂ ಹೇಳಬಹುದು.


ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರ ಜತೆಯಲ್ಲಿ ಕಿಚ್ಚ ಸುದೀಪ್‌ ಅವರೂ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಕ್ಕೆ ನಿರ್ದೇಶಕ ಆರ್‌.ಚಂದ್ರು ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಐಎಂಡಿಬಿ ಬಿಡುಗಡೆ ಮಾಡಿರುವ 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇರುವ ಕನ್ನಡದ ಏಕೈಕ ಸಿನಿಮಾ ಇದಾಗಿದೆ.

ಇದನ್ನೂ ಓದಿ: Kabza Movie | ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಕಬ್ಜ ಚಿತ್ರದ ರಿಲೀಸ್‌ ಡೇಟ್‌ಗಾಗಿ ಹೆಚ್ಚಾಗಿದೆ ಕಾತರ!


ಶ್ರೀಸಿದ್ಧೇಶ್ವರ ಎಂಟರ್‌ಪ್ರೈಸಸ್ ನಿರ್ಮಿಸಿರುವ ‘ಕಬ್ಜ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Akash Anand: 28 ವರ್ಷದ ಆಕಾಶ್ ಆನಂದ್ ಅವರು ಮಾಯಾವತಿಯ ಸಹೋದರನ ಪುತ್ರರಾಗಿದ್ದಾರೆ. ಲಂಡನ್‌ನಲ್ಲಿ ವ್ಯಾಸಂಗ ಮಾಡಿ, ಎಂಬಿಎ ಪದವಿ ಪಡೆದಿದ್ದಾರೆ.

VISTARANEWS.COM


on

Akash anand is BSP Leader mayawati's political heir
Koo

ನವದೆಹಲಿ: ಉತ್ತರ ಪ್ರದೇಶ (Uttar Pradesh) ಮತ್ತು ಉತ್ತರಾಖಂಡ (Uttarakhand) ಹೊರತುಪಡಿಸಿ ಬಹುಜನ ಸಮಾಜ ಪಕ್ಷದ (BSP) ಉತ್ತರಾಧಿಕಾರಿಯಾಗಿ ಮಾಯಾವತಿ (Mayawati) ತಮ್ಮ ಸೋದರಳಿಯ ಆಕಾಶ್ ಆನಂದ್ (Akash Anand) ಅವರನ್ನು ಭಾನುವಾರ ಘೋಷಿಸಿದ್ದಾರೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆಕಾಶ್ ಆನಂದ್ (ಮಾಯಾವತಿ ಅವರ ಸೋದರಳಿಯ) ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ” ಎಂದು ಪಕ್ಷದ ಮುಖಂಡ ಉದಯ್​ವೀರ್ ಸಿಂಗ್ ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ್ದಾರೆ. ಪಕ್ಷದೊಳಗೆ ಆಕಾಶ್ ಆನಂದ್ ಬಗ್ಗೆ ಪರಿಚಯವಿತ್ತು. ಆದರೆ, ದೇಶದ ರಾಜಕಾರಣದಲ್ಲಿ ಅವರು ಹೆಸರು ಅಷ್ಟೇನೂ ಚಿರಪರಿಚಿತವಾಗಿರಲಿಲ್ಲ.

ಆಕಾಶ್ ಆನಂದ್ ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ ಮತ್ತು ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಎಸ್‌ಪಿಯ ಉಸ್ತುವಾರಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಬಿಎಸ್‌ಪಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದರು. ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ಒಳಗೊಂಡ ಪಕ್ಷದ ಚುನಾವಣಾ ಪ್ರಚಾರವನ್ನು ತಯಾರಿಸಲು ನಿಯೋಗದ ಭಾಗವಾಗಿ ಮಾಯಾವತಿ ಅವರನ್ನು ನಿಯೋಜಿಸಿದ್ದರು.

2017ರಲ್ಲಿ ರಾಜಕೀಯ ಪ್ರವೇಶಿಸಿದ ಆಕಾಶ್

ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.

2019ರಲ್ಲಿ ಆಕಾಶ್ ಆನಂದ್ ಉತ್ತರ ಪ್ರದೇಶದ ಆಗ್ರಾದಲ್ಲಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಆಗ ಬಿಎಸ್‌ಪಿ ಮಹಾಘಟಬಂಧನ್‌ನ ಒಂದು ಭಾಗವಾಗಿತ್ತು, ಇದು 2019 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದೊಂದಿಗೆ ಅಖಿಲೇಶ್ ಯಾದವ್ ಮತ್ತು ಮಾಯಾವತಿ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಬಣವಾಗಿತ್ತು.

ಪಾದಯಾತ್ರೆ ಸಂಘಟಿಸಿದ್ದ ಆಕಾಶ್ ಆನಂದ್

ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ, ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಈ ಯಾತ್ರೆ ನಡೆಸಿದ್ದರು.

ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ದೀರ್ಘಾವಧಿಗೆ ಸಿದ್ಧ ಮಾಡುತ್ತಿದ್ದರು. ಮಾಯಾವತಿಯವರ ಸಹೋದರ ಆನಂದ್ ಕುಮಾರ್ ಅವರ ಪುತ್ರರಾಗಿರುವ 28 ವರ್ಷದ ಆಕಾಶ್ ಆನಂದ್ ಬಿಎಸ್ಪಿ ವಲಯಗಳಲ್ಲಿ ಚಿರಪರಿಚಿತ ಹೆಸರು. ಇನ್‌ಸ್ಟಾಗ್ರಾಮದಲ್ಲಿ ಅವರು ತಮ್ಮನ್ನು ತಾವು “ಬಾಬಾ ಸಾಹೇಬ್ ಅವರ ದೃಷ್ಟಿಯ ಯುವ ಬೆಂಬಲಿಗರು. ನಾನು ಶಿಕ್ಷಣ, ಸಬಲೀಕರಣ ಮತ್ತು ಸಮಾನತೆಗಾಗಿ ನಿಲ್ಲುತ್ತೇನೆ” ಎಂದು ಕರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Mayawati : ಸೋದರಳಿಯನನ್ನೇ ಉತ್ತರಾಧಿಕಾರಿಯಾಗಿ ಘೋಷಿಸಿದ ಬಿಎಸ್​ಪಿ ನಾಯಕಿ ಮಾಯಾವತಿ

Continue Reading

ದೇಶ

Chhattisgarh CM: ವಿಷ್ಣು ದೇವ ಸಾಯಿ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ

Vishnu Deo Sai: 90 ಸ್ಥಾನಗಳಿರುವ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ಸಾಧಿಸಿತ್ತು.

VISTARANEWS.COM


on

Vishnu Deo Sai New chief minister of Chhattisgarh
Koo

ನವದೆಹಲಿ: ಛತ್ತೀಸ್‌ಗಢ ನೂತನ ಮುಖ್ಯಮಂತ್ರಿಯಾಗಿ (Chhattisgarh Chief Minister) ಭಾರತೀಯ ಜನತಾ ಪಾರ್ಟಿಯು (BJP Party) ವಿಷ್ಣು ದೇವ ಸಾಯಿ (Vishnu Deo Sai) ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಒಂದು ವಾರದಿಂದ ಉಂಟಾಗಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಮಾಜಿ ಸಿಎಂ ರಮಣ್ ಸಿಂಗ್, ಬಿಜೆಪಿ ಅಧ್ಯಕ್ಷ ಅರುಣ್ ಸಾವೋ ಸೇರಿದಂತೆ ಹಲವು ನಾಯಕರ ಹೆಸರಿದ್ದವು. ಅಂತಿಮವಾಗಿ ಕೇಂದ್ರ ನಾಯಕತ್ವ ವಿಷ್ಣು ದೇವ ಸಾಯಿ ಅವರನ್ನು ಆಯ್ಕೆ ಮಾಡಿದೆ. ವಿಷ್ಮು ದೇವ ಸಾಯಿ ಅವರು ಆದಿವಾಸಿ ಸಮುದಾಯದ ಮುಖವಾಗಿದ್ದಾರೆ.

ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ವೇಳೆ, ಎಲ್ಲ ಶಾಸಕರ ಅಭಿಪ್ರಾಯವನ್ನು ಪಡೆದು ಅಂತಿಮವಾಗಿ ಹೊಸ ಮುಖ್ಯಮಂತ್ರಿಯನ್ನು ಘೋಷಣೆ ಮಾಡಲಾಗಿದೆ. ವೀಕ್ಷಕರಾಗಿ ಬಿಜೆಪಿ ನಾಯಕರಾದ ಬಿಜೆಪಿ ನಾಯಕರಾದ ಸರ್ಬಾನಂದ್ ಸೋನೋವಾಲ, ಅರ್ಜುನ ಮುಂಡಾ ಆಗಮಿಸಿದ್ದರು.

ವಿಷ್ಣು ದೇವ ಸಾಯಿ ಅವರು ಕುಂಕುರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 87,604 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಮಾಜಿ ರಾಜ್ಯ ಮುಖ್ಯಸ್ಥರಾದ ದೇವ್ ಸಾಯಿ ಅವರು ಬುಡಕಟ್ಟು ಮುಖವನ್ನು ಆಯ್ಕೆ ಮಾಡಿದರೆ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಮೊದಲ ಆಯ್ಕೆಯಾಗುತ್ತಾರೆ ಎಂದು ಊಹಿಸಲಾಗಿತ್ತು.

ವಿಷ್ಣದೇವ್ ಸಾಯ ಅವರು ಈ ಮೊದಲು ಮೋದಿ ಸಂಪುಟದಲ್ಲ ಕೇಂದ್ರ ಉಕ್ಕು ಇಲಾಖೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 16 ನೇ ಲೋಕಸಭೆಯಲ್ಲಿ ಛತ್ತೀಸ್‌ಗಢದ ರಾಯಗಢ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಿಷ್ಣು ದೇವ ಸಾಯಿ ಅವರು 2020ರಿಂದ 2022ರವರೆಗೆ ಛತ್ತೀಸ್‌ಗಢ ಬಿಜೆಪಿ ಅಧಯಕ್ಷರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಯಶಸ್ವಿಯಾಗಿದೆ. ಮಧ್ಯಪ್ರದೇಶವನ್ನು ಭರ್ಜರಿ ಜಯದೊಂದಿಗೆ ಉಳಿಸಿಕೊಂಡಿದೆ. ಇದು ಕೇಸರಿ ಪಕ್ಷವು ಹಿಂದಿಯ ಹೃದಯಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸುವುದಕ್ಕೆ ಕಾರಣವಾಯಿತು ಮತ್ತು 2024 ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊಡ್ಡ ಉತ್ತೇಜನವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Revanth Reddy: ರೇವಂತ್ ರೆಡ್ಡಿ ತೆಲಂಗಾಣ ನೂತನ ಮುಖ್ಯಮಂತ್ರಿ; ಕಾಂಗ್ರೆಸ್ ಘೋಷಣೆ

Continue Reading

ಕರ್ನಾಟಕ

TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

TN Seetharam : ನನ್ನ ರಾಜಕೀಯ ಜೀವನ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಳೇ ಜೀವನವನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ, ತಾವು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಜತೆಗೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

VISTARANEWS.COM


on

TN Seetharam Book release function
Koo

ಬೆಂಗಳೂರು: ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ (TN Seetharam) ಅವರೊಂದಿಗೆ ನನಗೆ 40 ವರ್ಷಗಳ ಒಡನಾಟವಿದ್ದು, ಇವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅಲ್ಲದೆ, ಇದೇ ವೇಳೆ ತಮ್ಮ ರಾಜಕೀಯ ಜೀವನವನ್ನು (Political Life) ಮೆಲುಕು ಹಾಕಿದ ಸಿಎಂ, ಪ್ರೊ. ನಂಜುಂಡಸ್ವಾಮಿ (Prof Nanjundaswamy) ಅವರಿಂದಲೇ ತಾವು ರಾಜಕೀಯವನ್ನು ಪ್ರವೇಶ ಮಾಡಿದ್ದಾಗಿ ವಿವರಿಸಿದರು.

ಸಾವಣ್ಣ ಪ್ರಕಾಶನದಿಂದ ಹೊರತರಲಾದ ಖ್ಯಾತ ನಿರ್ದೇಶಕ, ಲೇಖಕ ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟಿ.ಎನ್.ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತ ಸ್ನೇಹಿತ. ನಾನು ಲಂಕೇಶ್ ಪತ್ರಿಕಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನಾನು ಸದಸ್ಯನಾಗಲು ನೆರವಾದರು. 1971ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದರು.

TN Seetharam Book release function

ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪು

ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಪಕ್ಷದ ನಾಯಕರು ನನಗೆ ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ನಂತರ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ಬಳಿಕ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ. 1985ರಲ್ಲಿ ಜನತಾದಳದ ಪರವಾಗಿ ನಿಂತು ಜಯ ಸಾಧಿಸಿದ ನಂತರ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾಂತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ತನ್ನ ಬಳಿಯಿದ್ದ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪುಗಳನ್ನು ಮುಖ್ಯಮಂತ್ರಿಯವರು ಸ್ಮರಿಸಿಕೊಂಡರು.

TN Seetharam Book release function

ಬಹುಮುಖ ಪ್ರತಿಭೆ

ಟಿ.ಎನ್. ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ಅವರ ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿರುವವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು. ಆದರೆ, ಅವರು ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಲಿಲ್ಲ. ಒಂದು ವೇಳೆ ಅವರು ಗೆದ್ದಿದ್ದರೆ, ನಮಗೆಲ್ಲ ರಾಜಕಾರಣದಲ್ಲಿ ಮುಂದೆ ಬರಲು ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈಗ ಅವರು ನೆನಪಿನ ಪುಟಗಳ ಪುಸ್ತಕವನ್ನು ಉತ್ತಮವಾಗಿ ಹಾಗೂ ಸತ್ಯವನ್ನೇ ಬರೆದಿದ್ದಾರೆ. ನನ್ನ ಉತ್ತಮ ಸ್ನೇಹಿತರಾಗಿರುವ ಟಿ.ಎನ್.ಸೀತಾರಾಂ ಅವರು ಬರೆದಿರುವ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಅರಸು ನಂತರ ಅವರಂತೆಯೇ ಸರ್ವ ಜನಾಂಗದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಅವರು ತಾವೇ ಮಾಡಿಸಿದ ಜಾತಿ ಜನಗಣತಿಯನ್ನು ಒಪ್ಪಿಕೊಂಡು, ಅದರ ಅನುಷ್ಠಾನಕ್ಕೆ ಮುಂದಾಬೇಕು ಎಂದು ಹೇಳಿದರು.

ಕೃತಿಯ ಲೇಖಕ ಟಿ.ಎನ್‌. ಸೀತಾರಾಮ್‌ ಮಾತನಾಡಿ, ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡನಾಟವನ್ನು ನೆನಪಿಸಿಕೊಂಡರು. ಎತ್ತರಕ್ಕೇರಿದರೂ ಸ್ವಲ್ಪವೂ ಗರ್ವ ಇರದ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ನಾನು ಹಲವಾರು ಮುಖ್ಯಮಂತ್ರಿಗಳೊಂದಿಗೆ ಒಡನಾಟ ಹೊಂದಿದ್ದರೂ, ಸಿದ್ದರಾಮಯ್ಯರನ್ನು ಹೆಚ್ಚು ಇಷ್ಟ ಪಡಲು ಇದೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಲೇಖಕರಿಯರ ಸಂಘದ ಅಧ್ಯಕ್ಷೆ, ಕವಯತ್ರಿ ಎಚ್‌.ಎಲ್‌. ಪುಷ್ಪಾ, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಉಪಸ್ಥಿತರಿದ್ದರು.

Continue Reading

ದೇಶ

ರಜಪೂತ ನಾಯಕನ ಹತ್ಯೆ ಸಂಚು ನಡೆದಿದ್ದು ಕೆನಡಾದಲ್ಲಿ; ಇದರ ಹಿಂದೆ ಇರೋದು ಯಾರು?

Sukhdev Singh Gogamedi: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ ಅವರ ಹತ್ಯೆಗೆ ಸಂಬಂಧಿಸಿದ ಒಂದೊಂದೇ ರಹಸ್ಯಗಳು ಬಯಲಾಗುತ್ತಿದೆ. ಇದರ ಸಂಚು ಕೆನಡಾದಲ್ಲಿ ರೂಪುಗೊಂಡಿತ್ತು ಎನ್ನುವ ರಹಸ್ಯ ಬಯಲಾಗಿದೆ.

VISTARANEWS.COM


on

sukhdev
Koo

ನವದೆಹಲಿ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ (Sukhdev Singh Gogamedi) ಅವರ ಹತ್ಯೆಗೆ ಸಂಬಂಧಿಸಿದ ಒಂದೊಂದೇ ರಹಸ್ಯಗಳು ಬಯಲಾಗುತ್ತಿದೆ. ಸುಖದೇವ್ ಸಿಂಗ್ ಅವರ ಮನೆಯೊಳಗೆ ಹತ್ತಿರದಿಂದಲೇ ಹಲವು ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್‌ಗಳು ಸೇರಿ ಮೂವರನ್ನು ಹರಿಯಾಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ರೋಹಿತ್ ರಾಥೋಡ್, ನಿತಿನ್ ಫೌಜಿ, ಉಧಮ್ ಸಿಂಗ್ ಬಂಧಿತರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಹತ್ಯೆಯ ಬೇರು ಕೆನಡಾದವರೆಗೂ ಹರಡಿರುವುದು ಕಂಡು ಬಂದಿದೆ. ಹತ್ಯೆಯ ಪಿತೂರಿ ಹೇಗೆ ನಡೆಯಿತು ಎನ್ನುವುದನ್ನು ಅವರು ಹಂತ ಹಂತವಾಗಿ ವಿವರಿಸಿದ್ದಾರೆ.

ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡುವ ಸಂಚಿನ ಮಾಸ್ಟರ್ ಮೈಂಡ್ ರಾಜಸ್ಥಾನದ ದರೋಡೆಕೋರ ರೋಹಿತ್ ಗೋದಾರಾ, ಕೆನಡಾದಲ್ಲಿ ವಾಸಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಕಳೆದ ವರ್ಷ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಗೆ ಸಂಬಂಧಿಸಿದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ರೋಹಿತ್ ಗೋದಾರಾ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡುವ ಮತ್ತು ಶೂಟರ್‌ಗಳನ್ನು ನೇಮಿಸುವ ಜವಾಬ್ದಾರಿಯನ್ನು ಗೋದಾರಾ ತನ್ನ ಸಹಚರ ವೀರೇಂದ್ರ ಚರಣ್‌ಗೆ ವಹಿಸಿದ್ದ. ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನದ ಅಜ್ಮೀರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಚರಣ್ ಮತ್ತು ಗೋದಾರಾ ಭೇಟಿಯಾಗಿದ್ದರು. ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನುವ ಕಾರಣಕ್ಕೆ ಸುಖದೇವ್ ಸಿಂಗ್ ವಿರುದ್ಧ ಗೋದಾರಾ ದ್ವೇಷ ಕಟ್ಟಿಕೊಂಡಿದ್ದ. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ.

ಬಂಧಿತ ನಿತಿನ್ ಫೌಜಿ ವಿದೇಶಕ್ಕೆ ತೆರಳಿ ಅಲ್ಲಿ ನೆಲೆಸಲು ಬಯಸಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಚರಣ್ ಆತನಿಗೆ ಹತ್ಯೆಯ ಜವಾಬ್ದಾರಿ ವಹಿಸಿ, ಕೆಲಸ ಮುಗಿದ ನಂತರ ವಿದೇಶಕ್ಕೆ ತೆರಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಹೀಗೆ ರೋಹಿತ್ ರಾಥೋಡ್, ನಿತಿನ್ ಫೌಜಿ ಅವರಿಗೆ ಹತ್ಯೆ ಮಾಡಲು ಸೂಚಿಸಿದ ಚರಣ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ.

ಗನ್‌ ಸಂಗ್ರಹ

ಚರಣ್ ತನ್ನ ಪ್ರಭಾವ ಬಳಸಿ ಇಬ್ಬರು ಶೂಟರ್‌ಗಳಿಗೂ ಬಂದೂಕುಗಳನ್ನು ತಲುಪಿಸಿದ್ದ. ಹತ್ಯೆಯ ನಂತರ ಇಬ್ಬರೂ ಬಂದೂಕುಗಳನ್ನು ನಗರದ ಹೋಟೆಲ್ ಬಳಿ ಹೂತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂದೂಕುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಗೋದಾರಾ ಮತ್ತು ಸುಖದೇವ್ ಸಿಂಗ್ ನಡುವಿನ ಆಸ್ತಿ ವಿವಾದ ಬೆಳಕಿಗೆ ಬಂದಿದೆ. ಅಲ್ಲದೆ ಜಾತಿ ಸಮೀಕರಣದ ವಿಚಾರದಲ್ಲಿಯೂ ತನಿಖೆ ಮಾಡಲಾಗುತ್ತಿದೆ.

ಇದನ್ನೂ ಓದಿ: Sukhdev Singh Gogamedi : ಕರ್ಣಿಸೇನಾ ನಾಯಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮೂವರ ಬಂಧನ

ಒಟ್ಟಿಗೆ ಚಹಾ ಸೇವಿಸಿದ್ದ ಕೊಲೆ ಪಾತಕಿಗಳು

ಬಲಪಂಥೀಯ ಸಂಘಟನೆಯಾಗಿರುವ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ ಅವರನ್ನು ಡಿಸೆಂಬರ್‌ 5ರಂದು ಹತ್ಯೆ ಮಾಡುವ ಮೊದಲು ಜೈಪುರದ ಅವರ ಮನೆಯಲ್ಲಿ ಆರೋಪಿಗಳು ಅವರೊಂದಿಗೆ ಚಹಾ ಸೇವಿಸಿದ್ದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಏಕಾಏಕಿ ಎದ್ದು ಆರೋಪಿಗಳು ಸುಖದೇವ್ ಸಿಂಗ್ ಅವರ ಬೆಂಗಾವಲು ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ಗುಂಡಿನ ದಾಳಿ ಮಾಡಿದ್ದರು. ಬಳಿಕ ಸುಖ್​ದೇವ್ ಅವರ ತಲೆಗೆ ರಿವಾಲ್ವರ್ ಇಟ್ಟು ಗುಂಡು ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು.

Continue Reading
Advertisement
Mysore people
ಕರ್ನಾಟಕ4 mins ago

Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

Winter Food Tips
ಆಹಾರ/ಅಡುಗೆ19 mins ago

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

ipl fans
ಕ್ರಿಕೆಟ್48 mins ago

IPL 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​; ಐಪಿಎಲ್​ ಆರಂಭಕ್ಕೆ ಡೇಟ್​ ಫಿಕ್ಸ್!​

Moral policing
ಕರ್ನಾಟಕ1 hour ago

Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

Akash anand is BSP Leader mayawati's political heir
ದೇಶ1 hour ago

Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Cloudy weather in Bengaluru for the entire day Rain Forecast
ಉಡುಪಿ1 hour ago

Karnataka weather: ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಇಲ್ಲಷ್ಟೇ ಮಳೆ ಸೂಚನೆ

money guide
ಮನಿ-ಗೈಡ್1 hour ago

Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

rohit sharma jay shah
ಕ್ರಿಕೆಟ್2 hours ago

Rohit Sharma: ಜಯ್​ ಶಾ ಕೈಯಲ್ಲಿದೆ ರೋಹಿತ್​ ಟಿ20 ವಿಶ್ವಕಪ್ ಭವಿಷ್ಯ!

Model Fashion Life
ಫ್ಯಾಷನ್2 hours ago

Model Fashion Life: ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ ಚಳಿಗಾಲದ ಟಿಪ್ಸ್‌ ಹೀಗಿದೆ

Retired clerk jagadish sexually abuses girl
ಕರ್ನಾಟಕ2 hours ago

Physical Abuse : 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ನಿವೃತ್ತ ಕ್ಲರ್ಕ್!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ3 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ5 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ13 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌