Kannada New Movie: ಪ್ರವೀಣ್ ತೇಜ್ 'ಜಿಗರ್‌'ಗೆ ಧ್ವನಿಯಾದ ಸಂಜಿತ್‌ ಹೆಗಡೆ! - Vistara News

South Cinema

Kannada New Movie: ಪ್ರವೀಣ್ ತೇಜ್ ‘ಜಿಗರ್‌’ಗೆ ಧ್ವನಿಯಾದ ಸಂಜಿತ್‌ ಹೆಗಡೆ!

Kannada New Movie: ಮೊದಲ ಬಾರಿಗೆ ಪ್ರವೀಣ್ ‘ಜಿಗರ್’ (Jigar Movie) ಎನ್ನುವ ಆ್ಯಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿಯಾಗಿರುವ ʻಜಿಗರ್ʼ ಸದ್ಯ ಹಾಡಿನ ಮೂಲಕ ಆಮಂತ್ರಣ ನೀಡಿದೆ.

VISTARANEWS.COM


on

Jigar Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಪ್ರವೀಣ್ ತೇಜ್ (Praveen Tej ) ಮತ್ತೊಂದು ವಿಭಿನ್ನ ಸಿನಿಮಾ (Kannada New Movie) ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಪ್ರವೀಣ್ ‘ಜಿಗರ್’ (Jigar Movie) ಎನ್ನುವ ಆ್ಯಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿಯಾಗಿರುವ ʻಜಿಗರ್ʼ ಸದ್ಯ ಹಾಡಿನ ಮೂಲಕ ಆಮಂತ್ರಣ ನೀಡಿದೆ.

ʻಜಿಗರ್ʼ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಮಾಸ್ ಸಿನಿಮಾ ಆಗಿದ್ದರೂ ರೊಮ್ಯಾಂಟಿಕ್‌ ಹಾಡಿನ ಮೂಲಕ ಮೋಡಿ ಮಾಡುತ್ತಿದ್ದಾರೆ ಪ್ರವೀಣ್. ಬಿಡುಗಡೆಯಾಗಿರುವ ಈ ಹಾಡು ಗಾನಪ್ರಿಯರ ನೆಚ್ಚಿನ ಸಿಂಗರ್ ಸಂಜಿತ್‌ ಹೆಗಡೆ (Sanjith Hegde) ಕಂಠದಲ್ಲಿ ಮೂಡಿಬಂದಿದೆ.

‘ಸುಮ್ಮನೆ…..’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ರಿತ್ವಿಕ್ ಮುರಳಿಧರ (Ritvik Muralidhar) ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯವಿದೆ. ಈಗಾಗಲೇ ಚಮಕ್, ವೆನಿಲ್ಲ, ಸಖತ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಹಾಡು ಬರೆದಿರುವ ಅರ್ಜುನ್ ಇದೀಗ ಜಿಗರ್ ಸಿನಿಮಾದ ಹಾಡನ್ನೂ ಬರೆದಿದ್ದಾರೆ. ಈ ಸುಂದರ ಹಾಡನ್ನು ಕರಾವಳಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಲ್ಪೆ, ಮರವಂತೆ, ಮಂಗಳೂರು ಸುತ್ತಮುತ್ತ ಸೆರೆಹಿಡಿಯಲಾಗಿದೆ. ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ.

ಪ್ರವೀಣ್ ತೇಜ್ ಅವರನ್ನು ಆಕ್ಷನ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕರೆತರುತ್ತಿದ್ದಾರೆ ನಿರ್ದೇಶಕ ಸೂರಿ ಕುಂದರ್. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸೂರಿ ಜಿಗರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾದ ಮೇಲೆ ನಿರ್ದೇಶಕ ಸೂರಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯು ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಗಿದ್ದು ಪೂಜಾ ವಸಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ , ಶಿವಸೇನಾ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ವಿಜಯ್ ಶ್ರೀ ಕಾಣಿಸಿಕೊಂಡಿದ್ದಾರೆ. ವಿಜಯ್ ಶ್ರೀ ಅವರಿಗೂ ಇದು ಮೊದಲ ಸಿನಿಮಾವಾಗಿದೆ.

ಇದನ್ನೂ ಓದಿ: Kannada New Movie: ’ನಗುವಿನ ಹೂಗಳ ಮೇಲೆ’ ಸಿನಿಮಾದ ಪ್ರೇಮಗೀತೆ ರಿಲೀಸ್!

ನಟ ಪ್ರವೀಣ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ಪ್ರವೀಣ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಜಿಗರ್ ಮೂಲಕ ಎಂಟ್ರಿಕೊಡುತ್ತಿದ್ದಾರೆ. ಸದ್ಯ ಹಾಡಿನ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ಜಿಗರ್ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Sanjana Anand: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸಂಜನಾ ಆನಂದ್!

Sanjana Anand: ತಿಳಿ ಹಸಿರು ಬಣ್ಣದ ಬ್ಯಾಕ್ ಲೆಸ್, ಹೈ ಸ್ಲಿಟ್ ಸ್ಯಾಟಿನ್ ಡ್ರೆಸಲ್ಲಿ ಸಂಜನಾ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ಕನಸುಗಾರ ವಿ ರವಿಚಂದ್ರನ್ (Vikram Ravichandran) ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಅವರ ಮುಧೋಳ್ ಸಿನಿಮಾಗೆ ಸಂಜನಾ ಆನಂದ್‌ (Sanjana Anand) ನಾಯಕಿ ಎಂದು ಹೇಳಲಾಗುತ್ತಿತ್ತು.

VISTARANEWS.COM


on

Sanjana Anand Hot Photoshoot
Koo

ʻಕೆಮೆಸ್ಟ್ರಿ ಆಫ್ ಕರಿಯಪ್ಪʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಂಜನಾ ಆನಂದ್ (Sanjana Anand) ಸಖತ್‌ ಹಾಟ್ ಆಗಿದ್ದಾರೆ. ಮಾಡರ್ನ್ ಡ್ರೆಸ್‌ನಲ್ಲಿ ಪೋಸ್ ನೀಡುತ್ತಿದ್ದಾರೆ.

ತಿಳಿ ಹಸಿರು ಬಣ್ಣದ ಬ್ಯಾಕ್ ಲೆಸ್, ಹೈ ಸ್ಲಿಟ್ ಸ್ಯಾಟಿನ್ ಡ್ರೆಸಲ್ಲಿ ಸಂಜನಾ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. 

ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ಕನಸುಗಾರ ವಿ ರವಿಚಂದ್ರನ್ (Vikram Ravichandran) ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಅವರ ಮುಧೋಳ್ ಸಿನಿಮಾಗೆ ಸಂಜನಾ ಆನಂದ್‌ (Sanjana Anand) ನಾಯಕಿ ಎಂದು ಹೇಳಲಾಗುತ್ತಿತ್ತು.

ದುನಿಯಾ ವಿಜಯ್ ನಟನೆಯ `ಸಲಗ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ನಟಿ ಸಂಜನಾ ಆನಂದ್‌ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದೀಗ ಮುಧೋಳ್ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Continue Reading

ಒಟಿಟಿ

Bujji and Bhairava: ಅಮೆಜಾನ್​ಗೆ ಬಂದ ‘ಕಲ್ಕಿ’ಯ ಬುಜ್ಜಿ-ಭೈರವ; ಹೆಚ್ಚಾಯ್ತು ‘ಕಲ್ಕಿ 2898 ಎಡಿ’ ನಿರೀಕ್ಷೆ!

Bujji and Bhairava: ‘ಕಲ್ಕಿ 2898 ಎಡಿ’ ಸಿನಿಮಾ ಜೂನ್‌ 27ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಭೈರವನ ಪಾತ್ರ ಮಾಡಿದ್ದು, ಭೈರವನ ಜೊತೆಗಾತಿಯಾಗಿ ಬುಜ್ಜಿ ಎಂಬ ಯಂತ್ರವಿದೆ. ಇನ್ನು ʻಬುಜ್ಜಿʼ ಯಂತ್ರಕ್ಕೆ ಕೀರ್ತಿ ಸುರೇಶ್‌ ಧ್ವನಿ ನೀಡಿದ್ದಾರೆ.

VISTARANEWS.COM


on

Bujji and Bhairava Prabhas animated show raises
Koo

ಬೆಂಗಳೂರು: ಕೆಲವು ದಿನಗಳ ಹಿಂದೆ ಭೈರವ ಹಾಗೂ ಬುಜ್ಜಿಯ ಟೀಸರ್‌ವನ್ನು ‘ಕಲ್ಕಿ 2898 ಎಡಿ’ ತಂಡ ಬಿಡುಗಡೆಗೊಳಿಸಿತ್ತು. ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸಿರೀಸ್‌ವನ್ನು ಈಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. . ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರ ‘ಬಿ&ಬಿ: ಬುಜ್ಜಿ ಮತ್ತು ಭೈರವ’ ಜೋಡಿಯ (Bujji and Bhairava) ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕಲ್ಕಿ 2898 ಎಡಿ’ (Kalki 2989 ad) ತಂಡ, ಸಿನಿಮಾದ ಅನಿಮೇಟೆಡ್ ಸರಣಿಯನ್ನು ಬಿಡುಗಡೆ ಮಾಡಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮುನ್ನವೇ ಅದರ ಅನಿಮೇಟೆಡ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಪ್ರೇಕ್ಷಕರು ಸಖತ್‌ ಖುಷ್‌ ಆಗಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾ ಜೂನ್‌ 27ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಭೈರವನ ಪಾತ್ರ ಮಾಡಿದ್ದು, ಭೈರವನ ಜೊತೆಗಾತಿಯಾಗಿ ಬುಜ್ಜಿ ಎಂಬ ಯಂತ್ರವಿದೆ. ಇನ್ನು ʻಬುಜ್ಜಿʼ ಯಂತ್ರಕ್ಕೆ ಕೀರ್ತಿ ಸುರೇಶ್‌ ಧ್ವನಿ ನೀಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ, ‘ಬಿ&ಬಿ: ಬುಜ್ಜಿ ಮತ್ತು ಭೈರವ’ ಸಾಕಷ್ಟು ಆಕ್ಷನ್ ಮತ್ತು ಕಾಮಿಡಿ ಇದೆ. ಅನಿಮೇಟೆಡ್ ಸರಣಿಯ ಭೈರವನ ಪಾತ್ರಕ್ಕೆ ಪ್ರಭಾಸ್ ಅವರೇ ಧ್ವನಿ ನೀಡಿದ್ದಾರೆ. 

ಇದನ್ನೂ ಓದಿ: Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

ಪ್ಯಾನ್‍ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‍ (Actor Prabhas) ಅಭಿನಯದ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರ ಸದ್ಯ ಸದ್ದು ಮಾಡುತ್ತಿದೆ. ಜೂನ್ 27ರಂದು ತೆರೆಗೆ ಬರಲು ಸಜ್ಜಾಗಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಸಿನಿ ಪ್ರಿಯರ ಗಮನ ಸೆಳೆದಿದೆ.

ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ

ಐದನೇ ಸೂಪರ್‌ ಸ್ಟಾರ್‌ ಬುಜ್ಜಿ ಬೇರೆ ಯಾರೂ ಅಲ್ಲ ನಾಯಕ ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ ಎಂದೇ ಕರೆಯಲ್ಪಡುವ ವಿಶೇಷ ವಾಹನ. ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಎನಿಸಿಕೊಂಡಿದೆ ಎಂದು ಚಿತ್ರ ತಂಡ ವಿವರಿಸಿದೆ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿತ್ತು.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಜತೆಗೆ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

Continue Reading

ಕಾಲಿವುಡ್

Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

Raghu Thatha: ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʼʼರಘುತಾತಾ’ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಅಸಿತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು.

VISTARANEWS.COM


on

Raghu Thatha Hombale Films Realease date announced
Koo

ಬೆಂಗಳೂರು: ʼಕೆಜಿಎಫ್‌ʼ ಸರಣಿ, ʼಕಾಂತಾರʼ, ʼಸಲಾರ್‌ʼ ಮುಂತಾದ ಚಿತ್ರಗಳನ್ನು ನಿರ್ಮಿಸಿ ದೇಶಾದ್ಯಂತ ಸಂಚಲನ ಸೃಷಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್‌ನ (Hombale Films) ಮೊದಲ ತಮಿಳು ಸಿನಿಮಾ ‘ರಘು ತಾತಾ’ (Raghu Thatha). ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ನ ಮೊದಲ ಈ ತಮಿಳು ಸಿನಿಮಾದಲ್ಲಿ ಬಹುಭಾಷಾ ನಟಿ, ಪ್ರತಿಭಾವಂತ ಕಲಾವಿದೆ ಕೀರ್ತಿ ಸುರೇಶ್‌ (Keerthy Suresh) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʼʼರಘುತಾತಾ’ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಅಸಿತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼ ಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಈ ಸಿನಿಮಾ ಅಗಸ್ಟ್‌ 15ರಂದು ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ: Physical Abuse : ಸಂಜೆಯಾದರೆ ರೂಮಿಗೆ ಬಾ ಅಂತಾರೆ! ಕೇಂದ್ರೀಯ ವಿವಿಯ ವಿದ್ಯಾರ್ಥಿನಿಗೆ ಪಿಎಚ್‌ಡಿ ಗೈಡ್ ಮಾನಸಿಕ ಕಿರುಕುಳ

ಗಮನ ಸೆಳೆದ ಕೀರ್ತಿ ಸುರೇಶ್‌

ಈ ಮುಂಚೆ ಬಿಡುಗಡೆಯಾದ ಒಂದು ನಿಮಿಷದ ಟೀಸರ್‌ನಲ್ಲಿ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಹೋರಾಡುವ ಯುವತಿಯಾಗಿ ಕೀರ್ತಿ ಸುರೇಶ್‌ ಮಿಂಚಿದ್ದರು. ಉದ್ಯೋಗ ಬಡ್ತಿಗಾಗಿ ಹಿಂದಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಎನ್ನುವ ಷರತ್ತನ್ನು ಆಕೆ ವಿರೋಧಿಸುತ್ತಾಳೆ. ಅನೇಕ ಜನರನ್ನು ಸಂಘಟಿಸಿ ಬೀದಿಗಿಳಿದು ಹೋರಾಡುತ್ತಾಳೆ. ಸದ್ಯ ಇದಿಷ್ಟು ವಿಚಾರ ಟೀಸರ್‌ ಮೂಲಕ ಬಹಿರಂಗಗೊಂಡಿತ್ತು. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿ ಬಂದಿದೆ. ದಿಟ್ಟ ಯುವತಿ ಪಾತ್ರದಲ್ಲಿ ಕಂಡು ಬಂದಿರುವ ಕೀರ್ತಿ ಸುರೇಶ್‌ ಪಾತ್ರಕ್ಕೆ ಅಭಿಮಾನಿಗಳು ಮನ ಸೋತಿದ್ದರು.

ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್‌ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʼಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. 

ಪುಷ್ಪ ಸಿನಿಮಾಗೆ ಸೆಡ್ಡು ಹೊಡೆದ ಹೊಂಬಾಳೆ!

ಸದ್ಯ ದೇಶದ ಗಮನ ಸೆಳೆದಿರುವ ಚಿತ್ರಗಳ ಪೈಕಿ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ (Pushpa 2) ಕೂಡ ಒಂದು.ʼಪುಷ್ಪ 2ʼ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ʼಪುಷ್ಪ 2ʼ ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು.

Continue Reading

ಟಾಲಿವುಡ್

Nivetha Pethuraj: ಪೊಲೀಸ್ ಅಧಿಕಾರಿಯೊಂದಿಗೆ ಬಹುಭಾಷಾ ನಟಿ ಕಿರಿಕ್‌; ವಿಡಿಯೊ ವೈರಲ್‌!

Nivetha Pethuraj: ಸಿನಿಮಾ ವಿಚಾರಕ್ಕೆ ಬಂದರೆ ನಿವೇತಾ ಕೊನೆಯ ಬಾರಿಗೆ ಜಿಯೋ ಸಿನಿಮಾದಲ್ಲಿ ಕಳೆದ ವರ್ಷ ಮೇ 27 ರಂದು ಬಿಡುಗಡೆಯಾದ ʻಬೂʼ ಎಂಬ ದ್ವಿಭಾಷಾ ಹಾರರ್ ಥ್ರಿಲ್ಲರ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದರು. ರಕುಲ್ ಪ್ರೀತ್ ಸಿಂಗ್, ವಿಶ್ವಕ್ ಸೇನ್ ಮತ್ತು ರೆಬಾ ಮೋನಿಕಾ ಜಾನ್ ತೆರೆ ಹಂಚಿಕೊಂಡಿದ್ದಾರೆ.

VISTARANEWS.COM


on

Nivetha Pethuraj heated argument video with cops
Koo

ಬೆಂಗಳೂರು: ಬಹುಭಾಷಾ ನಟಿ ನಿವೇತಾ ಪೇತುರಾಜ್ (Nivetha Pethuraj) ಅವರು ಹೈದರಾಬಾದ್‌ನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಾರಿನ ಟ್ರಂಕ್‌ ಓಪನ್‌ ಮಾಡುವಂತೆ ಕೇಳಿದ ಪೊಲೀಸರೊಂದಿಗೆ ಅವರು ವಾಗ್ವದ ನಡೆಸಿದ್ದು ಮಾತ್ರವಲ್ಲದೆ, ಈ ದೃಶ್ಯವನ್ನು ಚಿತ್ರೀಕರಿಸಿದವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿವೇತಾ ಪೇತುರಾಜ್ ಪೊಲೀಸರೊಂದಿನ ವಾಗ್ವಾದದ ವಿಡಿಯೊ ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಕಾರಿನಲ್ಲಿ ಹೋಗುತ್ತಿದ್ದ ನಿವೇತಾ ಅವರನ್ನು ತಡೆದ ಪೊಲೀಸರು ಕಾರಿನ ಡಿಕ್ಕಿ ಓಪನ್‌ ಮಾಡುವಂತೆ ಹೇಳಿದ್ದಾರೆ. ತೆರೆಯಲು ನಿರಾಕರಿಸಿದ ನಟಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಡಾಕ್ಯುಮೆಂಟ್‌ಗಳೆಲ್ಲಾ ಸರಿಯಾಗಿವೆ, ದಯವಿಟ್ಟು ಅರ್ಥಮಾಡಿಕೊಳ್ಳಿ ನಾನು ಡಿಕ್ಕಿ ತೆರೆಯಲ್ಲ. ಎಂದು ಹೇಳುತ್ತಾರೆ. ಪೊಲೀಸರು ಮತ್ತು ನಿವೇತಾ ಅವರ ನಡುವಿನ ವಾಗ್ವಾದದ ದೃಶ್ಯವನ್ನು ರೆಕಾರ್ಡ್‌ ಮಾಡುತ್ತಿದ್ದ ವ್ಯಕ್ತಿಗೂ ಆ ಸಂದರ್ಭದಲ್ಲಿ ನಟಿ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: Kannada New Movie: ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!

ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಇದು ಪ್ರಚಾರದ ಗಿಮಿಕ್‌ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಈ ವಿಡಿಯೊ ಫೇಕ್‌ ಇರಬಬಹುದು ಶೂಟಿಂಗ್‌ ದೃಶ್ಯ ಇರಬಹುದುʼಎಂದು ಕಮೆಂಟ್‌ ಮಾಡಿದ್ದಾರೆ. ಪೊಲೀಸರು ಕಾಲಿಗೆ ಕ್ರಾಕ್ಸ್‌ ಧರಿಸಿದ್ದ ಕಾರಣ ನೆಟ್ಟಿಗರು ಇದೆಲ್ಲಾ ಪಬ್ಲಿಸಿಟಿ ಸ್ಟಂಟ್‌ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿ ಈ ವಿಡಿಯೋದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಸಿನಿಮಾ ವಿಚಾರಕ್ಕೆ ಬಂದರೆ ನಿವೇತಾ ಕೊನೆಯ ಬಾರಿಗೆ ಜಿಯೋ ಸಿನಿಮಾದಲ್ಲಿ ಕಳೆದ ವರ್ಷ ಮೇ 27 ರಂದು ಬಿಡುಗಡೆಯಾದ ʻಬೂʼ ಎಂಬ ದ್ವಿಭಾಷಾ ಹಾರರ್ ಥ್ರಿಲ್ಲರ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದರು. ರಕುಲ್ ಪ್ರೀತ್ ಸಿಂಗ್, ವಿಶ್ವಕ್ ಸೇನ್ ಮತ್ತು ರೆಬಾ ಮೋನಿಕಾ ಜಾನ್ ತೆರೆ ಹಂಚಿಕೊಂಡಿದ್ದಾರೆ.

ಪ್ರಸ್ತುತ, ನಟಿ ತಮಿಳಿನ ʻಸೊಪ್ಪಣ್ಣ ಸುಂದರಿʼಯ ತೆಲುಗು ರಿಮೇಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೊ ಈ ಸಿನಿಮಾದೇ ಆಗಿರಬಹದು ಎಂದು ಹಲವರು ಊಹಿಸಿದ್ದಾರೆ.

Continue Reading
Advertisement
Cardamom Benefits
ಆರೋಗ್ಯ10 mins ago

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Karnataka Weather Forecast
ಮಳೆ40 mins ago

Karnataka Weather : ವಾರಾಂತ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಿಸ್‌ಯಿಲ್ಲದೇ ಮಳೆ ಹಾಜರ್‌

Healthy Salad Tips
ಆಹಾರ/ಅಡುಗೆ1 hour ago

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Lok Sabha Election
ದೇಶ2 hours ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ2 hours ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ7 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ8 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು9 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ9 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ10 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌