Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ Vistara News

ಪ್ರಮುಖ ಸುದ್ದಿ

Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ

ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್​ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ ಎನ್​. ಎಂ ಸುರೇಶ್ ಅವರು karnataka film chamber of commerce) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

VISTARANEWS.COM


on

karnataka film chamber
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (karnataka film chamber of commerce) ಚುನಾವಣಾ (Sandalwood) ಫಲಿತಾಂಶ ಶನಿವಾರ ಸಂಜೆಯ ವೇಳೆಗೆ ಪ್ರಕಟಗೊಂಡಿದೆ. ನಿರ್ಮಾಪಕ ಎನ್​ ಎಂ ಸುರೇಶ್ ಅವರು ಅತ್ಯಧಿಕ ಮತಗಳನ್ನು (337) ಪಡೆಯುವ ಮೂಲಕ ಅಧ್ಯಕ್ಷ ಗದ್ದುಗೆಗೆ ಏರಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್​ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿತರಕ ಏ ಗಣೇಶ್ ಅವರು 204 ಮತಗಳನ್ನು ಪಡೆದಿದ್ದರೆ, ಮಾರ್ಸ್ ಸುರೇಶ್ ಅವರ 181 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ 1599 ಮತಗಳಲ್ಲಿ 967 ಮತಗಳು ಚಲಾವಣೆಯಾಗಿದ್ದವು. ಸೆಪ್ಟೆಂಬರ್​ 23ರಂದು ಚುನಾವಣೆ ನಡೆದು ಅಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು.

ಕೌತುಕ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಸಂಜೆಯ ತನಕ ನಡೆಯಿತು. ಮತದಾನ ಪ್ರಕ್ರಿಯೆಯಲ್ಲಿ ಸ್ಟಾರ್ ನಟರು, ನಿರ್ಮಾಪಕರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ಸೇರಿದಂತೆ ಹಲವು ವಲಯಗಳ 93 ಸ್ಥಾನಗಳಿಗೆ ಮತದಾನ ನಡೆಯಿತು. ಇಷ್ಟೊಂದು ಸ್ಥಾನಗಳಿಗೆ ಒಟ್ಟು 158 ಅಭ್ಯರ್ಥಿಗಳು ಕಣದಲ್ಲಿದ್ದರು.

ಅಧ್ಯಕ್ಷರ ಹುದ್ದೆಗೆ ಈ ಬಾರಿ ಪೈಪೋಟಿ ಏರ್ಪಟ್ಟಿತ್ತು. ಎನ್​ಎಂ ಸುರೇಶ್, ವಿತರಕ ಮಾರ್ಸ್ ಸುರೇಶ್, ನಿರ್ಮಾಪಕ ಶಿಲ್ಪ ಶ್ರೀನಿವಾಸ್, ವಿತರಕ ಏ ಗಣೇಶ್ ಅವರುಗಳು ಅಧ್ಯಕ್ಷ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಒಡ್ಡಿದ್ದರು. ಆದರೆ, ಸುರೇಶ್​ ಅವರಿಗೆ ಸಾರಾ ಗೋವಿಂದು ಸೇರಿದಂತೆ ಮಂಡಳಿಯ ಕೆಲವು ಪ್ರಮುಖರ ಬೆಂಬಲ ಸಿಕ್ಕಿತ್ತು. ಹೀಗಾಗಿ ಅವರೇ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ : Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಿತರಕರ ವಲಯದಿಂದ ಕರಿಸುಬ್ಬು ವಿಜಯ ಸಾಧಿಸಿದ್ದಾರೆ ಪ್ರದರ್ಶಕರ ವಲಯದಿಂದ ಸುಂದರ ರಾಜು ಜಯಭೇರಿ ಬಾರಿಸಿದ್ದಾರೆ. ಖಜಾಂಚಿಯಾಗಿ‌ ಜಯಸಿಂಹ‌ ಮುಸೂರಿ ಗೆಲುವು ತಮ್ಮದಾಗಿಸಿಕೊಂಡಡಿದ್ದಾರೆ.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ ಆಯ್ಕೆಯಾಗಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್. ಜಿ ಗೆಲುವು ಸಾಧಿಸಿದ್ದರೆ, ಪ್ರದರ್ಶಕರ ವಲಯದಿಂದ ನರಸಿಂಹುಲು ಜಯ ಗಿಟ್ಟಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಕಳೆದ ಬಾರಿಗಿಂತ ಸುಮಾರು 55ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

Government Job : ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಆರೋಗ್ಯ – ವೈದ್ಯಕೀಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಗಳಲ್ಲಿ ಒಟ್ಟು 2,47,558 ಹುದ್ದೆಗಳು ಖಾಲಿ ಇವೆ.

VISTARANEWS.COM


on

Government Job Vistara Exclusive
Koo
VISTARA-EXCLUSIVE

ಬೆಂಗಳೂರು: ವಿಸ್ತಾರ ನ್ಯೂಸ್‌ನಲ್ಲಿ ಮೆಗಾ EXCLUSIVE ಸ್ಟೋರಿ ಇದಾಗಿದ್ದು, ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಲಕ್ಷ, ಲಕ್ಷ ಖಾಲಿ ಹುದ್ದೆ (Government Job) ಇರುವುದು ಗೊತ್ತಾಗಿದೆ. ಗ್ಯಾರಂಟಿ ಯೋಜನೆಯನ್ನು ಕೊಟ್ಟಿರುವ ಕಾಂಗ್ರೆಸ್‌ ಸರ್ಕಾರದಲ್ಲಿ (Congress Government) ಉದ್ಯೋಗ ಸೃಷ್ಟಿಗೆ ‘ಗ್ಯಾರಂಟಿ’ಯೇ ಇಲ್ಲ ಎನ್ನುವಂತೆ ಆಗಿದೆ. ಸರ್ಕಾರ ಬಂದು 6 ತಿಂಗಳು ಕಳೆದರೂ ಉದ್ಯೋಗ ಭರ್ತಿಗೆ ಹೊಸ ನೋಟಿಫಿಕೇಷನ್ ಮಾಡಲಾಗಿಲ್ಲ. ಖಾಲಿ ಹುದ್ದೆ ಭರ್ತಿ ಹೇಳಿಕೆಯು ಕೇವಲ ಬಜೆಟ್‌ಗೆ ಸೀಮಿತವಾಗಿದೆ. ಯಾವ್ಯಾವ ಸರ್ಕಾರಿ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ? ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಆರೋಗ್ಯ – ವೈದ್ಯಕೀಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಗಳಲ್ಲಿ ಒಟ್ಟು 2,47,558 ಹುದ್ದೆಗಳು ಖಾಲಿ ಇವೆ.

ಇಲ್ಲಿ ದಾಖಲೆಗಳ ಸಮೇತ ಖಾಲಿ ಹುದ್ದೆಗಳ ವಿವರ; ಇಲ್ಲಿದೆ ವಿಡಿಯೊ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

  • ಮಂಜೂರಾದ ಹುದ್ದೆಗಳು – 2,82,862
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 2,16,803
  • ಖಾಲಿ ಹುದ್ದೆಗಳು- 66,059

ಒಳಾಡಳಿತ ಇಲಾಖೆ

  • ಮಂಜೂರಾದ ಹುದ್ದೆಗಳು – 1,26,913
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -1,03,356
  • ಖಾಲಿ ಹುದ್ದೆಗಳು – 23,557

ಉನ್ನತ ಶಿಕ್ಷಣ ಇಲಾಖೆ

  • ಮಂಜೂರಾದ ಹುದ್ದೆಗಳು – 24,785
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -12,111
  • ಖಾಲಿ ಹುದ್ದೆಗಳು- 12,674

ಆರೋಗ್ಯ ಮತ್ತು ವೈದ್ಯಕೀಯ

  • ಮಂಜೂರಾದ ಹುದ್ದೆಗಳು – 74,857
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -40,213
  • ಖಾಲಿ ಹುದ್ದೆಗಳು- 34,644

ಕಂದಾಯ ಇಲಾಖೆ

  • ಮಂಜೂರಾದ ಹುದ್ದೆಗಳು – 32,309
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -21,688
  • ಖಾಲಿ ಹುದ್ದೆಗಳು – 10,621

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

  • ಮಂಜೂರಾದ ಹುದ್ದೆಗಳು – 6,940
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -3,710
  • ಖಾಲಿ ಹುದ್ದೆಗಳು – 3,230

ಆರ್ಥಿಕ ಇಲಾಖೆ

  • ಮಂಜೂರಾದ ಹುದ್ದೆಗಳು – 18,892
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 10,113
  • ಖಾಲಿ ಹುದ್ದೆಗಳು – 8,779

ಕೃಷಿ ಇಲಾಖೆ

  • ಮಂಜೂರಾದ ಹುದ್ದೆಗಳು – 10,324
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 4,008
  • ಖಾಲಿ ಹುದ್ದೆಗಳು – 6,316

ಪಶುಸಂಗೋಪನೆ ಇಲಾಖೆ

  • ಮಂಜೂರಾದ ಹುದ್ದೆಗಳು – 19,610
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 8,581
  • ಖಾಲಿ ಹುದ್ದೆಗಳು – 11,029

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

  • ಮಂಜೂರಾದ ಹುದ್ದೆಗಳು – 10,986
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 5,248
  • ಖಾಲಿ ಹುದ್ದೆಗಳು – 5,738

ಗ್ರಾಮೀಣಾಭಿವೃದ್ಧಿ ಇಲಾಖೆ

  • ಮಂಜೂರಾದ ಹುದ್ದೆಗಳು – 28,223
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 17,814
  • ಖಾಲಿ ಹುದ್ದೆಗಳು – 10,409

ಸಮಾಜ ಕಲ್ಯಾಣ ಇಲಾಖೆ

  • ಮಂಜೂರಾದ ಹುದ್ದೆಗಳು – 15,177
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 5,585
  • ಖಾಲಿ ಹುದ್ದೆಗಳು – 9,592

ಲೋಕೋಪಯೋಗಿ ಇಲಾಖೆ

  • ಮಂಜೂರಾದ ಹುದ್ದೆಗಳು – 16,635
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 10,602
  • ಖಾಲಿ ಹುದ್ದೆಗಳು – 6,033

ನೀರಾವರಿ ಇಲಾಖೆ

  • ಮಂಜೂರಾದ ಹುದ್ದೆಗಳು – 10,623
  • ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 6,401
  • ಖಾಲಿ ಹುದ್ದೆಗಳು – 4,222

ಒಟ್ಟು 2,47,558 ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿಗೆ ರಾಜ್ಯ ಸರ್ಕಾರ ಚಿಂತನೆಯನ್ನೇ ನಡೆಸಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಸಹ ಯಾವುದೇ ನೋಟಿಫಿಕೇಶನ್‌ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

Continue Reading

ದೇಶ

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

ಪ್ರಣಬ್‌ ಮುಖರ್ಜಿ (Pranab Mukherjee) ಅವರು ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಇತರ ಕಾಂಗ್ರೆಸ್‌ ನಾಯಕರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು ಎಂಬ ಕುತೂಹಲಕ್ಕೆ ಈ ಮೂಲಕ ಉತ್ತರ ದೊರೆತಿದೆ.

VISTARANEWS.COM


on

pranab mukherjee and rahul gandhi
Koo

ಹೊಸದಿಲ್ಲಿ: ರಾಹುಲ್ ಗಾಂಧಿ (Rahul Gandhi) ರಾಜಕೀಯವಾಗಿ ಇನ್ನೂ ಪ್ರಬುದ್ಧರಾಗಿಲ್ಲ; ಅವರಿಗೆ ಆ ವಿಷಯದಲ್ಲಿ ಇನ್ನೂ ಪ್ರೌಢಿಮೆ ಅಗತ್ಯ ಇದೆ ಎಂದು ಕಾಂಗ್ರೆಸ್‌ನ (Congress Party) ಉನ್ನತ ನಾಯಕರಾಗಿದ್ದ ಪ್ರಣಬ್ ಮುಖರ್ಜಿ (Pranab Mukherjee) ಒಮ್ಮೆ ಹೇಳಿದ್ದರಂತೆ. ಹೀಗೆಂದು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmishta Mukherjee) ಬರೆದ ʼಇನ್ ಪ್ರಣಬ್, ಮೈ ಫಾದರ್: ಎ ಡಾಟರ್ ರೆಮೆಂಬರ್ಸ್ʼ (In Pranab, My Father: A Daughter Remembers) ಕೃತಿಯಲ್ಲಿ ಬರೆದಿದ್ದಾರೆ.

ಪ್ರಣಬ್‌ ಮುಖರ್ಜಿ ಅವರು ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಇತರ ಕಾಂಗ್ರೆಸ್‌ ನಾಯಕರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು ಎಂಬ ಕುತೂಹಲಕ್ಕೆ ಈ ಮೂಲಕ ಉತ್ತರ ದೊರೆತಿದೆ. ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೆ (PM Post) ಆಯ್ಕೆ ಮಾಡುವುದಿಲ್ಲ ಎಂಬ ಸಂಗತಿ ಪ್ರಣಬ್ ಅವರಿಗೆ ಖಚಿತವಾಗಿ ಗೊತ್ತಿತ್ತಂತೆ!

ರಾಹುಲ್ ಗಾಂಧಿ ಅವರನ್ನು ‘ಅತ್ಯಂತ ಸೌಜನ್ಯಯುತ’ ಮತ್ತು ‘ಪ್ರಶ್ನೆಗಳಿಂದ ತುಂಬಿದ’ ಎಂದು ಪ್ರಣಬ್ ಮುಖರ್ಜಿ ಅವರು ಬಣ್ಣಿಸಿದ್ದರು. ಇದನ್ನು ಅವರು ರಾಹುಲ್ ಅವರ ಕಲಿಯುವ ಬಯಕೆಯ ಸಂಕೇತವಾಗಿ ಪರಿಗಣಿಸಿದ್ದರು. ಆದರೆ ರಾಹುಲ್ ರಾಜಕೀಯವಾಗಿ ಇನ್ನೂ ಪ್ರಬುದ್ಧವಾಗಿಲ್ಲ. ರಾಷ್ಟ್ರಪತಿ ಭವನದಲ್ಲಿ ಪದೇ ಪದೇ ಅಲ್ಲದಿದ್ದರೂ ರಾಹುಲ್ ಪ್ರಣಬ್ ಅವರನ್ನು ಭೇಟಿಯಾಗುತ್ತಲೇ ಇದ್ದರು. ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಮತ್ತು ಆಡಳಿತದಲ್ಲಿ ಸ್ವಲ್ಪ ಅನುಭವವನ್ನು ಪಡೆಯಲು ಪ್ರಣಬ್ ಅವರು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಅವರು ಈ ಸಲಹೆಗಳಿಗೆ ಕಿವಿಗೊಡುತ್ತಿರಲಿಲ್ಲ. ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಕ್ಷಿಪ್ರವಾಗಿ ಲಂಘಿಸುತ್ತಿದ್ದರು ಎಂಬ ಮಾಹಿತಿ ಸಂಗತಿ ಪುಸ್ತಕದಲ್ಲಿದೆ.

ಕಾಂಗ್ರೆಸ್‌ನ ಮಾಜಿ ವಕ್ತಾರೆ ಶರ್ಮಿಷ್ಠಾ ಮುಖರ್ಜಿ ಅವರು ಈ ಕೃತಿಯಲ್ಲಿ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 2021ರಲ್ಲಿ ಶರ್ಮಿಳಾ ಅವರು ರಾಜಕಾರಣವನ್ನು ತೊರೆದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡದಿದ್ದಕ್ಕಾಗಿ ಅವರು ಯಾವುದೇ ದ್ವೇಷವನ್ನು ಹೊಂದಿರಲಿಲ್ಲ ಮತ್ತು ಆಯ್ಕೆಯಾದ ಮನಮೋಹನ್ ಸಿಂಗ್ ಅವರ ಬಗ್ಗೆಯಂತೂ ಯಾವುದೇ ತಕಾರರು ಇರಲಿಲ್ಲ ಎಂದು ಪ್ರಣಬ್ ಅವರು ಹೇಳಿದ್ದರು ಎಂಬ ಸಂಗತಿಯೂ ಪುಸ್ತಕದಲ್ಲಿದೆ.

ಪ್ರಣಬ್ ಅವರು ಬರೆದ ಡೈರಿ, ತಾವೇ ಕೇಳಿದ ಮಾಹಿತಿಗಳು ಮತ್ತು ಸ್ವಂತ ಸಂಶೋಧನೆಯನ್ನು ಒಳಗೊಂಡ ಅನೇಕ ಒಳನೋಟಗಳನ್ನು ಈ ಹೊಸ ಪುಸ್ತಕದಲ್ಲಿ ಕಾಣಬಹುದು. ಪ್ರಣಬ್ ಅವರ ರಾಜಕೀಯ ಜೀವನದ ಅನೇಕ ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇದುವರೆಗೂ ಗೊತ್ತಿರದ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಸೋನಿಯಾ ಗಾಂಧಿಯವರ ನಂಬಿಕೆಯನ್ನು ಗಳಿಸಲು, ನೆಹರು-ಗಾಂಧಿ ಕುಟುಂಬದ ಸುತ್ತಲಿನ ವ್ಯಕ್ತಿತ್ವ ಆರಾಧನೆ ಮತ್ತು ರಾಹುಲ್ ಗಾಂಧಿಯವರ ವರ್ಚಸ್ಸಿನ ಕೊರತೆ ಮತ್ತು ರಾಜಕೀಯ ತಿಳುವಳಿಕೆ ಇತರ ವಿಷಯಗಳ ಜೊತೆಗೆ ಅನೇಕ ಸಂಗತಿಗಳು ಪುಸ್ತಕದಲ್ಲಿವೆ.

ಪ್ರಣಬ್ ಮುಖರ್ಜಿ ಅವರು ಭಾರತದ ವಿತ್ತ ಸಚಿವರಾಗಿ, ವಿದೇಶಾಂಗ ಸಚಿವರಾಗಿ, ರಕ್ಷಣೆ, ಫೈನಾನ್ಸ್ ಮತ್ತು ವಾಣಿಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. 2012ರಿಂದ 2017ರವರೆಗೆ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ 84ನೇ ವಯಸ್ಸಿನಲ್ಲಿ 2020ರ ಆಗಸ್ಟ್‌ 31ರಂದು ನಿಧನರಾದರು.

ಶರ್ಮಿಷ್ಠಾ ಮುಖರ್ಜಿ ಅವರು ಬರೆದಿರುವ ಪುಸ್ತಕದಲ್ಲಿ ಭಾರತ ಎಂದೂ ಹೊಂದದ ಪ್ರಧಾನಿ(ದಿ ಪಿಎಂ ಇಂಡಿಯಾ ನೆವರ್ ಹ್ಯಾಡ್) ಅಧ್ಯಾಯದಲ್ಲಿ ಸಾಕಷ್ಟು ಅಂಶಗಳ ಕುರಿತು ಚರ್ಚಿಸಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆ ರೇಸಿನಿಂದ ಹಿಂದೆ ಸರಿದ ಬಳಿಕ, ಮುಂದಿನ ಪ್ರಧಾನಿ ಯಾರಾಗುತ್ತಾರೆಂಬ ಮಾಧ್ಯಮಗಳು ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು.

ಡಾ. ಮನಮೋಹನ್ ಸಿಂಗ್ ಮತ್ತು ಪ್ರಣಬ್ ಮುಖರ್ಜಿ ಅವರು ಹೆಸರುಗಳು ಪ್ರಧಾನವಾಗಿ ಕೇಳಿ ಬರುತ್ತಿದ್ದವು. ಆ ದಿನಗಳಲ್ಲಿ ನಾನು ಎರಡು ದಿನಗಳ ಕಾಲ ತಂದೆಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆಗ ನಾನು ಫೋನ್ ಮೂಲಕ ಅವರೊಂದಿಗೆ ಮಾತನಾಡಿದೆ. ನೀವು ಪ್ರಧಾನಿಯಾಗುತ್ತೀರಾ ಎಂದು ಕೇಳಿದೆ. ಆಗ ಅವರು, ”ಇಲ್ಲ ಆಕೆ(ಸೋನಿಯಾ ಗಾಂಧಿ) ನನ್ನನ್ನು ಪ್ರಧಾನಿಯನ್ನಾಗಿ ಮಾಡುವುದಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ. ಆದರೆ, ಈ ಬಗ್ಗೆ ಆದಷ್ಟು ಬೇಗನೆ ನಿರ್ಧಾರ ಕೈಗೊಳ್ಳಬೇಕು. ಅನಿಶ್ಚಿತತೆ ದೇಶದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ” ಎಂದು ಹೇಳಿದರು ಎಂದು ಶರ್ಮಿಷ್ಠಾ ಬರೆದಿದ್ದಾರೆ.

ಶರ್ಮಿಷ್ಠಾ ಮುಖರ್ಜಿಯವರು ಹೇಳುವಂತೆ, ಜನರು ತಮ್ಮ ತಂದೆಗೆ ನಿಜವಾಗಿಯೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇದೆಯೇ ಎಂದು ಆಗಾಗ್ಗೆ ಕೇಳುತ್ತಿದ್ದರು. ಯುಪಿಎ-1 ಅವಧಿಯಲ್ಲಿ ಶರ್ಮಿಷ್ಟಾ ಅವರು ಈ ಪ್ರಶ್ನೆಯನ್ನು ಪ್ರಣಬ್ ಅವರಿಗೂ ಕೇಳಿದ್ದರು.

ಹೌದು ಖಂಡಿತವಾಗಿಯೂ, ನಾನು ಕೂಡ ಭಾರತದ ಪ್ರಧಾನಿಯಾಗಬೇಕು. ಅರ್ಹ ಆಗಿರುವ ಯಾವುದೇ ರಾಜಕೀಯ ನಾಯಕ ಇಂಥ ಮಹತ್ವಾಕಾಂಕ್ಷೆ ಹೊಂದಿರುತ್ತಾನೆ. ಆದರೆ ನಾನು ಅದನ್ನು ಬಯಸುವುದರಿಂದ ನಾನು ಅದನ್ನು ಪಡೆಯಲಿದ್ದೇನೆ ಎಂದು ಅರ್ಥವಲ್ಲ ಎಂದು ಹೇಳಿದ್ದರು ಎಂಬ ಸಂಗತಿಯನ್ನು ಶರ್ಮಿಷ್ಠಾ ಅವರು ದಾಖಲಿಸಿದ್ದಾರೆ.

ಇದನ್ನೂ ಓದಿ: ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

Continue Reading

ದೇಶ

ಕರ್ಣಿ ಸೇನಾ ನಾಯಕನ ಹತ್ಯೆ ವಿರೋಧಿಸಿ ಇಂದು ರಾಜಸ್ಥಾನ ಬಂದ್, ಗೆಹ್ಲೋಟ್‌ ಮೇಲೆ ಆರೋಪ

ಹಿಂದಿನ ಸಿಎಂ ಅಶೋಕ್ ಗೆಹ್ಲೋಟ್ (ashok gehlot) ಅವರು ತಮ್ಮ ಭದ್ರತೆಯನ್ನು ಕಡಿತಗೊಳಿಸಿದ್ದಾರೆ ಎಂದು ವಿಡಿಯೊದಲ್ಲಿ ಗೊಗಮೆಡಿ (Sukhdev Singh Gogamedi) ಹೇಳಿಕೊಂಡಿದ್ದರು.

VISTARANEWS.COM


on

karni sena chief murder
Koo

ಜೈಪುರ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ (Karni Sena) ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಅವರನ್ನು ನಿನ್ನೆ ಗುಂಡಿಕ್ಕಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ರಾಜಸ್ಥಾನ ಬಂದ್‌ಗೆ (Rajasthan bandh) ಕರ್ಣಿ ಸೇನೆ ಕರೆ ನೀಡಿದೆ. ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದು, ರಾಜಸ್ಥಾನದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿದೆ.

ರಾಜಸ್ಥಾನದಲ್ಲಿ ರಜಪೂತ ನಾಯಕನ ಹತ್ಯೆ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಸುಖದೇವ್ ಸಿಂಗ್ ಗೊಗಮೆಡಿ ಬೆಂಬಲಿಗರು ಜೈಪುರದ ಆಸ್ಪತ್ರೆಯ ಹೊರಭಾಗದಲ್ಲಿ ರಸ್ತೆ ತಡೆದು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟಿಸಿದ್ದಾರೆ. ಚುರು, ಉದಯಪುರ, ಅಲ್ವಾರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ. ಆರೋಪಿಗಳ ಮೇಲೆ ದಾಳಿ ನಡೆಸಿ ಶೀಘ್ರವಾಗಿ ಬಂಧಿಸಲಾಗುವುದು, ಎಲ್ಲರೂ ಶಾಂತಿ ಕಾಪಾಡಬೇಕು ಎಂದು ರಾಜಸ್ಥಾನದ ಪೊಲೀಸ್ ಮುಖ್ಯಸ್ಥ ಉಮೇಶ್ ಮಿಶ್ರಾ ಮನವಿ ಮಾಡಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲನ್ನು ಕಂಡ ಬಳಿಕ ಇದೀಗ ಕರ್ಣಿ ಸೇನಾ ಅಧ್ಯಕ್ಷನ ಹತ್ಯೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಸುಖದೇವ್ ಸಿಂಗ್ ಗೊಗಮೆಡಿ ಈ ಮೊದಲು ಮಾತನಾಡಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಸಿಎಂ ಅಶೋಕ್ ಗೆಹ್ಲೋಟ್ (ashok gehlot) ಅವರು ತಮ್ಮ ಭದ್ರತೆಯನ್ನು ಕಡಿತಗೊಳಿಸಿದ್ದಾರೆ ಎಂದು ವಿಡಿಯೊದಲ್ಲಿ ಗೊಗಮೆಡಿ ಹೇಳಿಕೊಂಡಿದ್ದರು.

ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್, ರಾಜ್ಯವರ್ಧನ್ ರಾಥೋಡ್ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ನಾಯಕರು ಹತ್ಯೆಯನ್ನು ಖಂಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರಾಜಸ್ಥಾನ ಜಂಗಲ್ ರಾಜ್‌ಗೆ ಮರಳಿದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಟೀಕಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಶ್ಯಾಮ್ ನಗರ ಪ್ರದೇಶದಲ್ಲಿ ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಗೊಗಮೆಡಿ ಅವರ ಮನೆಗೆ ನುಗ್ಗಿದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಅವರ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಶೂಟೌಟ್‌ನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ರೋಹಿತ್ ಗೋಡಾರಾ ಕಪುರಿಸರ್ ಗೊಗಮೆಡಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ.

ಸುಖದೇವ್ ಸಿಂಗ್ ಗೊಗಮೆಡಿ ಅವರು ಲೋಕೇಂದ್ರ ಸಿಂಗ್ ಕಲ್ವಿಯವರ ರಜಪೂತ್ ಕರ್ಣಿ ಸೇನೆಯ ಭಾಗವಾಗಿದ್ದರು. ಈ ಸಂಘಟನೆ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’ ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿ ಗಮನ ಸೆಳೆದಿತ್ತು. ನಂತರ ಆಂತರಿಕ ಗಲಾಟೆಯಿಂದ ಗೊಗಮೆಡಿ ತಮ್ಮದೇ ಪ್ರತ್ಯೇಕ ಕರ್ಣಿ ಸೇನೆಯನ್ನು ಕಟ್ಟಿದ್ದರು.

ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ‘ಪದ್ಮಾವತ್’ ಸಿನಿಮಾ ವಿರೋಧಿಸಿ ಮತ್ತು ಗ್ಯಾಂಗ್‌ಸ್ಟರ್ ಆನಂದ್‌ಪಾಲ್ ಎನ್‌ಕೌಂಟರ್ ಪ್ರಕರಣದ ನಂತರ ರಾಜಸ್ಥಾನದಲ್ಲಿ ಪ್ರತಿಭಟನೆ ನಡೆಸುವ ಗೊಗಮೆಡಿ ಬೆಳಕಿಗೆ ಬಂದಿದ್ದರು.

ಇದನ್ನೂ ಓದಿ: Sukhdev Singh Gogamedi: ರಜಪೂತ್ ಕರ್ಣಿ ಸೇನಾ ಮುಖಂಡ ಸುಖ್​ದೇವ್​​ ಗೋಗಮೇಡಿ ಗುಂಡಿಟ್ಟು ಹತ್ಯೆ

Continue Reading

ಕ್ರಿಕೆಟ್

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

IPL 2024 : ಫ್ರಾಂಚೈಸಿಗಳು ತಮ್ಮಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗಾಗಿ ಆಲ್​ರೌಂಡರ್​ಗಳನ್ನು ನೆಚ್ಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

VISTARANEWS.COM


on

IPL Auction 1
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೆಚ್ಚು ಯಶಸ್ಸು ಪಡೆಯುವುದು ಆಲ್​ರೌಂಡರ್​ಗಳು. ಹೀಗಾಗಿ ಅವರಿಗೆ ಹರಾಜಿನಲ್ಲಿ ಹಚ್ಚು ಬೇಡಿಕೆ ಇರುತ್ತದೆ. ಚಾಂಪಿಯನ್ ತಂಡಗಳಂತೂ ಆಲ್​ರೌಂಡರ್​ಗಳ ದೊಡ್ಡ ಬಣವನ್ನೇ ಹೊಂದಿತ್ತು. ಗುಜರಾತ್ ಟೈಟಾನ್ಸ್ ತಂಡವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ರವೀಂದ್ರ ಜಡೇಜಾ ಅವರ ಪಾತ್ರ ದೊಡ್ಡದಾಗಿದೆ. ಹೀಗಾಗಿ ಐಪಿಎಲ್ 2024 ಹರಾಜಿಗೆ ಕೇವಲ ಎರಡು ವಾರಗಳು ಬಾಕಿ ಇರುವಾಗ, ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​ರೌಂಡರ್​ಗಳ ಕುರಿತು ನೋಡೋಣ.

ಪ್ರಮುಖ ಆಲ್​ರೌಂಡರ್​ಗಳ ವಿವರ ಇಂತಿದೆ

  • ಶಾರ್ದೂಲ್ ಠಾಕೂರ್: ಭಾರತದ ಬೌಲಿಂಗ್ ಆಲ್ರೌಂಡರ್
  • ಶಾರುಖ್ ಖಾನ್ ಭಾರತದ ಬ್ಯಾಟಿಂಗ್ ಆಲ್ರೌಂಡರ್
  • ಅಜ್ಮತುಲ್ಲಾ ಒಮರ್ಜೈ ಅಫ್ಘಾನಿಸ್ತಾನ ಬ್ಯಾಟಿಂಗ್ ಆಲ್​​ರೌಂಡರ್​
  • ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಬೌಲಿಂಗ್ ಆಲ್ರೌಂಡರ್
  • ಡೇವಿಡ್ ವಿಲ್ಲಿ, ಇಂಗ್ಲೆಂಡ್ ಬೌಲಿಂಗ್ ಆಲ್ರೌಂಡರ್
  • ಕೈಲ್ ಜೇಮಿಸನ್, ನ್ಯೂಜಿಲೆಂಡ್ ಬೌಲಿಂಗ್ ಆಲ್ರೌಂಡರ್
  • ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಬ್ಯಾಟಿಂಗ್ ಆಲ್ರೌಂಡರ್
  • ವನಿಂದು ಹಸರಂಗ ಶ್ರೀಲಂಕಾದ ಬೌಲಿಂಗ್ ಆಲ್ರೌಂಡರ್
  • ಮೈಕಲ್ ಬ್ರೇಸ್ವೆಲ್, ನ್ಯೂಜಿಲೆಂಡ್ ಬ್ಯಾಟಿಂಗ್ ಆಲ್ರೌಂಡರ್
  • ಒಡಿಯನ್ ಸ್ಮಿತ್ ವೆಸ್ಟ್ ಇಂಡೀಸ್ ಬೌಲಿಂಗ್ ಆಲ್ರೌಂಡರ್

ಬೌಲಿಂಗ್ ಆಲ್ ರೌಂಡರ್ ಗಳು

ಶಾರ್ದೂಲ್ ಠಾಕೂರ್, ಪ್ಯಾಟ್ ಕಮಿನ್ಸ್, ಡೇವಿಡ್ ವಿಲ್ಲಿ, ಕೈಲ್ ಜೇಮಿಸನ್, ವನಿಂದು ಹಸರಂಗ ಮತ್ತು ಒಡಿಯನ್ ಸ್ಮಿತ್ ಈ ವರ್ಗಕ್ಕೆ ಸೇರುತ್ತಾರೆ. ಸಾಮಾನ್ಯವಾಗಿ ಈ ಕ್ರಿಕೆಟಿಗರು ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ಯಾವುದೇ ಇಲೆವೆನ್​ಗೆ ಸೇರುವ ಅವಕಾಶನವನ್ನು ಹೊಂದಿರುತ್ತಾರೆ.

ಪ್ಯಾಟ್ ಕಮಿನ್ಸ್ ಬೌಲಿಂಗ್ ಆಲ್ರೌಂಡರ್​​ಗೆ ಉತ್ತಮ ಉದಾಹರಣೆ. ಟೂರ್ನಿಯ 6 ಆವೃತ್ತಿಗಳಲ್ಲಿ ಆಡಿರುವ ಅವರು 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಐಪಿಎಲ್​​ನಲ್ಲಿ ಅವರ ಬ್ಯಾಟಿಂಗ್ ಅಷ್ಟೊಂದು ಬಲವಾಗಿ ಇರದ ಹೊರತಾಗಿಯೂ ಒಮ್ಮೊಮ್ಮೆ ಅಚ್ಚರಿ ಮೂಡಿಸಿದ್ದೂ ಇದೆ. ವೇಗದ ಬೌಲಿಂಗ್ ಆಲ್ರೌಂಡರ್ 152.21 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಐಪಿಎಲ್​​ನಲ್ಲಿ 3 ನೇ ಅತಿವೇಗ ವೇಗದ ಅರ್ಧ ಶತಕ ಬಾರಿಸಿದ್ದಾರೆ.

ಬ್ಯಾಟಿಂಗ್ ಆಲ್ರೌಂಡರ್​ಗಳು

ಮೈಕೆಲ್ ಬ್ರೇಸ್ವೆಲ್, ಶಾರುಖ್ ಖಾನ್, ಅಜ್ಮತುಲ್ಲಾ ಒಮರ್ಜೈ ಮತ್ತು ಶಕೀಬ್ ಅಲ್ ಹಸನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ಆಲ್ರೌಂಡರ್​ಗಳಿಗಿಂತ ಭಿನ್ನವಾಗಿ ಈ ಆಟಗಾರರು ಯಾವಾಗಲೂ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಾಗಿರುವುದಿಲ್ಲ. ಅಜ್ಮತುಲ್ಲಾ ಮತ್ತು ಶಕೀಬ್ ತಮ್ಮ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳ ಆಧಾರದ ಮೇಲೆ ತಂಡವನ್ನು ರಚಿಸಬಹುದಾದರೂ ಬ್ರೇಸ್ವೆಲ್ ಮತ್ತು ಶಾರುಖ್ ಕೆಳ ಕ್ರಮಾಂಕದ ಬ್ಯಾಟರ್​ಗಳಾಗಿ ಮಾತ್ರ ಕರ್ತವ್ಯ ನಿರ್ವಹಿಸಬಲ್ಲರು.

ಇದನ್ನೂ ಓದಿ : Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

ಅಜ್ಮತುಲ್ಲಾ ಒಮರ್ಜೈ ಅಗ್ರ ಕ್ರಮಾಂಕಕ್ಕೆ ಸಂಪೂರ್ಣವಾಗಿ ಸರಿಹೊಂದುತ್ತಾರೆ. 2023 ರ ಏಕ ದಿನ ವಿಶ್ವ ಕಪ್​ನಲ್ಲಿ ಅವರು 9 ಪಂದ್ಯಗಳಲ್ಲಿ 350 ಕ್ಕೂ ಹೆಚ್ಚು ರನ್ ಮತ್ತು 7 ವಿಕೆಟ್​​ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ನೂರ್ ಅಹ್ಮದ್ ಮತ್ತು ಫಜಲ್ಹಕ್ ಫಾರೂಕಿ ಅವರಿಗಿಂತ ನಂತರದಲ್ಲಿ 23 ವರ್ಷದ ವೇಗಿ ಪಂದ್ಯಾವಳಿಯಲ್ಲಿ ತಮ್ಮ ದೇಶದ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಮತ್ತು ಐದನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. ಟಿ 20 ಯಲ್ಲಿ ಅವರ ದಾಖಲೆಯೂ ತುಂಬಾ ಕಳಪೆಯಾಗಿಲ್ಲ. ಆಡಿದ 62 ಪಂದ್ಯಗಳಲ್ಲಿ, ಅವರು ಬ್ಯಾಟ್​ನಿಂದ 129.51 ಸರಾಸರಿಯಲ್ಲಿ ರನ್​ ಮಾಡಿದ್ದಾರೆ. 59 ವಿಕೆಟ್​​ಗಳನ್ನು ಪಡೆದಿದ್ದಾರೆ.

Continue Reading
Advertisement
murder case in Bengaluru
ಕರ್ನಾಟಕ1 min ago

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Government Job Vistara Exclusive
ಉದ್ಯೋಗ20 mins ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

danish
ಕ್ರಿಕೆಟ್25 mins ago

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Snehith Gowda Became Villain In Bigg Boss Kannada in rakshasa task
ಬಿಗ್ ಬಾಸ್29 mins ago

BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

pranab mukherjee and rahul gandhi
ದೇಶ29 mins ago

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

Murder case in kopal
ಕರ್ನಾಟಕ39 mins ago

Murder Case : ನಿದ್ರೆಗೆ ಜಾರಿದಾಗ ವ್ಯಕ್ತಿಯ ಕತ್ತು ಕೊಯ್ದ ಹಂತಕರು!

gold bride
ಕರ್ನಾಟಕ1 hour ago

Gold Rate Today: ಬಂಗಾರದ ಬೆಲೆಯಲ್ಲಿ ತುಸು ಇಳಿಕೆ, ಬೆಳ್ಳಿ ದರವೂ ಕುಸಿತ

road Accident
ಕರ್ನಾಟಕ1 hour ago

Road Accident : ಸಿಎಂ‌ ಬರುವ ದಾರಿಯಲ್ಲಿ ಅಪಘಾತ; ಆಂಬ್ಯುಲೆನ್ಸ್‌ ಬಾರದೆ ವ್ಯಕ್ತಿ ನರಳಾಟ

Brindavana Serial Kannada Vishwanath Ravindra Haveri
ಕಿರುತೆರೆ1 hour ago

Brindavana Serial Kannada: ʻಏನಾಗಲಿ ಮುಂದೆ ಸಾಗು ನೀʼಎಂದ ʻಬೃಂದಾವನʼ ಧಾರಾವಾಹಿ ಮಾಜಿ ನಾಯಕ!

mamtha
ದೇಶ1 hour ago

Mamata Banerjee: ಸಲ್ಮಾನ್‌ ಖಾನ್‌ ಜತೆ ಮಮತಾ ಬ್ಯಾನರ್ಜಿ ಡ್ಯಾನ್ಸ್‌! ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Government Job Vistara Exclusive
ಉದ್ಯೋಗ20 mins ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ7 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ15 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ16 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ16 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

ಟ್ರೆಂಡಿಂಗ್‌