Malaika Arora | ʻಐ ಸೆಡ್‌ ಯೆಸ್‌ʼ ಅಂದಿದ್ಯಾಕೆ ನಟಿ ಮಲೈಕಾ? ಸದ್ದಿಲ್ಲದೇ ನಡೀತೀದೆ ಮದುವೆ ತಯಾರಿ! - Vistara News

ಬಾಲಿವುಡ್

Malaika Arora | ʻಐ ಸೆಡ್‌ ಯೆಸ್‌ʼ ಅಂದಿದ್ಯಾಕೆ ನಟಿ ಮಲೈಕಾ? ಸದ್ದಿಲ್ಲದೇ ನಡೀತೀದೆ ಮದುವೆ ತಯಾರಿ!

ನಾಚಿಕೊಂಡಿರುವ ಫೋಟೊ ಪೋಸ್ಟ್‌ (Malaika Arora) ಮಾಡಿರುವ ಮಲೈಕಾ ಅವರು ʻಐ ಸೆಡ್ ಯೆಸ್ʼ ಎಂಬ ಅಡಿಬರಹ ಕೊಟ್ಟಿದ್ದಾರೆ.

VISTARANEWS.COM


on

Malaika Arora
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಲಿವುಡ್‌ ನಟಿ ಮಲೈಕಾ ಅರೋರಾ (Malaika Arora) ಅವರ ಪೋಸ್ಟ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ನಾಚಿಕೊಂಡಂತಿರುವ ಫೋಟೊ ಪೋಸ್ಟ್‌ ಮಾಡಿರುವ ಮಲೈಕಾ ಅವರು ʻಐ ಸೆಡ್ ಯೆಸ್ʼ ಎಂಬ ಅಡಿಬರಹ ಕೊಟ್ಟಿದ್ದಾರೆ. ಈ ಪೋಸ್ಟ್‌ನಿಂದ ಮಲೈಕಾ ಮತ್ತು ಅರ್ಜುನ್ ಜೋಡಿ ಮದುವೆಗೆ ಸೈಲೆಂಟ್ ಆಗಿ ರೆಡಿಯಾಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಅರ್ಜುನ್‌ ಕಪೂರ್‌ ಮತ್ತು ಮಲೈಕಾ ಪ್ರೇಮ ಪಕ್ಷಿಗಳು ಎಂಬುದು ಗೊತ್ತಿರುವ ವಿಚಾರ. ಸಾಕಷ್ಟು ವರ್ಷಗಳಿಂದ ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದು, ಸದ್ದಿಲ್ಲದೆ ನಟಿ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಕಳೆದ ಐದಾರು ತಿಂಗಳಿಂದ ಇವರ ಮದುವೆ ವಿಚಾರ ಹರಿದಾಡುತ್ತಿದ್ದು, ಇದೀಗ ಅದನ್ನು ಅಧಿಕೃತಗೊಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ | Dolly Dhananjay | ರಮ್ಯಾ-ಧನಂಜಯ್‌ ಕಾಂಬಿನೇಷನ್‌ನ ಉತ್ತರಕಾಂಡಕ್ಕೆ ಬಾಲಿವುಡ್‌ ಸಿನಿಮಾ ಪ್ರೇರಣೆ?

ತಮಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ಅರ್ಜುನ್‌ ಕಪೂರ್‌ ಅವರೊಂದಿಗೆ ಡಿಸೆಂಬರ್‌ ಹೊತ್ತಿಗೆ ಮಲೈಕಾ ಮದುವೆ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಅರ್ಜುನ್‌ ಮತ್ತು ಮಲೈಕಾ ಜತೆಗೆ ವಾಸವಿದ್ದು, ಮದುವೆಯಷ್ಟೇ ಆಗಬೇಕಿದೆ.

1998ರಲ್ಲಿ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಅವರನ್ನು ಮದುವೆ ಆಗಿದ್ದರು ಮಲೈಕಾ. ಅನಂತರ ವಿಚ್ಛೇದನ ಪಡೆದರು. ಕೆಲವು ವರ್ಷಗಳ ಕಾಲ ಒಂಟಿಯಾಗೇ ಇದ್ದ ನಟಿ , ನಂತರದಲ್ಲಿ ಅರ್ಜುನ್‌ ಅವರೊಂದಿಗೆ ಡೇಟಿಂಗ್‌ನಲ್ಲಿ ತೊಡಗಿಸಿಕೊಂಡರು. ಅರ್ಬಾಜ್‌ ಖಾನ್‌ ಮತ್ತು ಮಲೈಕಾಗೆ ಒಬ್ಬ ಪುತ್ರನಿದ್ದಾನೆ.

ಇದನ್ನೂ ಓದಿ | Actor Shankar Nag | ʻಅಬ ಜಬ ದಬʼ ಸಿನಿಮಾದಲ್ಲಿದ್ದಾರಂತೆ ನಟ ಶಂಕರ್‌ನಾಗ್‌: ಏನಿದರ ವಿಶೇಷತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Ragini Khanna: ನಟ ಗೋವಿಂದ ಅವರ ಸೋದರ ಸೊಸೆಯಾಗಿರುವ ರಾಗಿಣಿ ಖನ್ನಾ ಅವರು ಗುರುಗಾಂವ್‌, ಡಬಲ್‌ ದಿ ತ್ರಿಬಲ್‌, ಘೂಮಕೇತು, ಪೋಷಂ ಪಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಇತ್ತೀಚೆಗೆ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಎನ್ನಲಾಗಿತ್ತು. ಈಗ ಅವರು ಹಿಂದು ಧರ್ಮಕ್ಕೆ ಮರಳಿದ್ದು, ಕ್ರೈಸ್ತ ಧರ್ಮ ಸ್ವೀಕರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

Ragini Khanna
Koo

ಮುಂಬೈ: ಬಾಲಿವುಡ್‌ ನಟ ಗೋವಿಂದ (Actor Govinda) ಅವರ ಸೋದರ ಸೊಸೆ, ನಟಿ ರಾಗಿಣಿ ಖನ್ನಾ (Ragini Khanna) ಅವರು ಕ್ರೈಸ್ತ ಧರ್ಮಕ್ಕೆ (Christianity) ಮತಾಂತರ ಆಗಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. “ನಾನು ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದಕ್ಕೆ ವಿಷಾದವಿದೆ. ಈ ಕುರಿತು ನಾನು ಕ್ಷಮೆಯಾಚಿಸುತ್ತೇನೆ. ನಾನೀಗ ಹಿಂದು ಧರ್ಮಕ್ಕೆ ಮರಳಿದ್ದು, ನಾ ಖಟ್ಟರ್‌ ಹಿಂದು ಸನಾತನವಾದಿಯಾಗಿದ್ದೇನೆ. ನಾನೀಗ ನನ್ನ ಬೇರುಗಳಿಗೆ ಮರಳಿದ್ದೇನೆ ಎಂಬುದಾಗಿ ಅನಿಸುತ್ತಿದೆ” ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಚುಕುದಾರ್‌ಬಹದ್ದೂರ್‌ 2.0 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಗಿಣಿ ಖನ್ನಾ ಅವರು ಕ್ರೈಸ್ತ ಧರ್ಮ ಸ್ವೀಕರಿಸಿದ ಕುರಿತು ಪೋಸ್ಟ್‌ ಮಾಡಲಾಗಿತ್ತು. “ನಾನು ರಾಗಿಣಿ ಖನ್ನಾ. ನಾನೀಗ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಕ್ರೈಸ್ತನು ಈಗ ನನಗೆ ದೇವರಾಗಿದ್ದು, ಆತನ ಬೋಧನೆಗಳೊಂದಿಗೆ ನಾನು ನನ್ನ ಜೀವನದ ಮಾರ್ಗವನ್ನು ಕಂಡುಕೊಳ್ಳುತ್ತೇನೆ” ಎಂಬುದಾಗಿ ಪೋಸ್ಟ್‌ ಮಾಡಲಾಗಿತ್ತು.

“ನಾನು ಮನಸಾರೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಭಕ್ತಿಯ ಹಾದಿಯಲ್ಲಿ ನಾನು ನಂಬಿಕೆಯೊಂದಿಗೆ ಮುನ್ನಡೆಯುತ್ತೇನೆ. ಶಾಂತಿ ಹಾಗೂ ಪ್ರೀತಿಯನ್ನು ಹಂಚುತ್ತ ಮುಂದೆ ಸಾಗುತ್ತೇನೆ. ಪ್ರಾರ್ಥನೆಗಳ ಮೂಲಕ ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕಗೆ ಮೂಡುವಂತೆ ಮಾಡುತ್ತೇನೆ” ಎಂದು ಮಾಡಿರುವ ಪೋಸ್ಟ್‌ ವೈರಲ್‌ ಆಗಿತ್ತು. ರಾಗಿಣಿ ಖನ್ನಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿ, ಪೋಸ್ಟ್‌ ವೈರಲ್‌ ಆದ ಬಳಿಕ ರಾಗಿಣಿ ಖನ್ನಾ ಅವರು ಕ್ಷಮೆಯಾಚಿಸಿದ್ದಾರೆ. ನಾನೀಗ ಖಟ್ಟರ್‌ ಹಿಂದು ಎಂದು ಅವರು ಹೇಳಿದ್ದಾರೆ. ಈಗ ಜನರು ರಾಗಿಣಿ ಖನ್ನಾ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನಟ ಗೋವಿಂದ ಅವರ ಸೋದರ ಸೊಸೆಯಾಗಿರುವ ರಾಗಿಣಿ ಖನ್ನಾ ಅವರು ಗುರುಗಾಂವ್‌, ಡಬಲ್‌ ದಿ ತ್ರಿಬಲ್‌, ಘೂಮಕೇತು, ಪೋಷಂ ಪಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Continue Reading

ಸಿನಿಮಾ

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Jolly LLB 3: ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಆರಂಭವಾಗಿರುವ ಕುರಿತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಅರ್ಷದ್‌ ವಾರ್ಸಿ ಹಾಗೂ ಅಕ್ಷಯ್‌ ಕುಮಾರ್‌ ಅವರು ಪಾರ್ಟ್‌ 3ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

Jolly LLB 3
Koo

ಮುಂಬೈ: ಅರ್ಷದ್‌ ವಾರ್ಸಿ ನಟನೆಯ ಜಾಲಿ ಎಲ್‌ಎಲ್‌ಬಿ (Jolly LLB) ಹಾಗೂ ಅಕ್ಷಯ್‌ ಕುಮಾರ್‌ (Askhay Kumar) ಅಭಿನಯದ ಜಾಲಿ ಎಲ್‌ಎಲ್‌ಬಿ 2 (Jolly LLB 2) ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು. ಕೋರ್ಟ್‌ ಡ್ರಾಮಾ ಜಾನರ್‌ನ ಈ ಸಿನಿಮಾಗಳು ಕಾಮಿಡಿ ದಿಸೆಯಲ್ಲೂ ಜನರ ಮನಸೂರೆಗೊಳಿಸಿದ್ದವು. ಸೌರಭ್‌ ಶುಕ್ಲಾ ಅವರ ಮನೋಜ್ಞ ನಟನೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ನಟ ಅಕ್ಷಯ್‌ ಕುಮಾರ್‌ ಅವರು ಜಾಲಿ ಎಲ್‌ಎಲ್‌ಬಿ 3 (Jolly LLB 3) ಸಿನಿಮಾ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.

ಹೌದು, ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಶುರುವಾಗಿರುವ ಕುರಿತು ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಸಮೇತ ಮಾಹಿತಿ ನೀಡಿದ್ದಾರೆ. “ಈಗ ಅಸಲಿ ಯಾರು, ನಕಲಿ ಯಾರು ಎಂಬುದು ಗೊತ್ತಿಲ್ಲ. ಆದರೆ, ಇದು ನಿಮಗೆ ಅತ್ಯುತ್ತಮ ಸಿನಿ ಪಯಣ ಆಗಲಿದೆ. ನನ್ನ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರಿ. ಜೈ ಮಹಾಕಾಳ್”‌ ಎಂಬುದಾಗಿ ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಜತೆಗೆ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಕ್ಷಯ್‌ ಕುಮಾರ್‌ ಘೋಷಣೆ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌

ಜಾಲಿ ಎಲ್‌ಎಲ್‌ಬಿ ಸಿನಿಮಾದಲ್ಲಿ ಅಭಿಮಾನಿಗಳಿಗೆ ಅಕ್ಷಯ್‌ ಕುಮಾರ್‌ ಸರ್‌ಪ್ರೈಸ್‌ ನೀಡಿದ್ದಾರೆ. ಜಾಲಿ ಎಲ್‌ಎಲ್‌ಬಿ ಸರಣಿಯ ಮೊದಲ ಸಿನಿಮಾದಲ್ಲಿ ಅರ್ಷದ್‌ ವಾರ್ಸಿ ಅವರು ಹೀರೊ ಆಗಿದ್ದರೆ, ಎರಡನೇ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಹೀರೊ ಆಗಿದ್ದರು. ಆದರೆ, ಮೂರನೇ ಭಾಗದಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಇಬ್ಬರೂ ಇದ್ದಾರೆ. ಎಂದಿನಂತೆ ಸೌರಭ್‌ ಶುಕ್ಲಾ ಅವರು ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾಗೆ ಯಾರು ನಾಯಕಿ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಅವರು ಇದಕ್ಕೂ ಮೊದಲು ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಜಾನಿ ದುಷ್ಮನ್: ಏಕ್‌ ಅನೋಖಿ ಕಹಾನಿ ಹಾಗೂ 2022ರಲ್ಲಿ ಬಿಡುಗಡೆಯಾದ ಬಚ್ಚನ್‌ ಪಾಂಡೆ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದರು. ಅರ್ಷದ್‌ ವಾರ್ಸಿ ಅವರ ಜಾಲಿ ಎಲ್‌ಎಲ್‌ಬಿ 2013ರಲ್ಲಿ ಬಿಡುಗಡೆಯಾಗಿತ್ತು. ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 2 ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Akshay Kumar: ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ಅಕ್ಷಯ್‌ ಕುಮಾರ್‌; ಜತೆಗಿರಲಿದ್ದಾರೆ ಶಿವಣ್ಣ!

Continue Reading

ಬಾಲಿವುಡ್

Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

Deepika Padukone: ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್‌ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಜ್ಯೂನಿಯರ್‌ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್‌ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್ಗೆ” ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ.ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

VISTARANEWS.COM


on

Deepika Padukone
Koo

ಬೆಂಗಳೂರು: ತಾಯಿಯಾಗಲಿರುವ ದೀಪಿಕಾ ಪಡುಕೋಣೆ ( Deepika Padukone) ಸದ್ಯ `ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಸೆಟ್‌ನಲ್ಲಿದ್ದಾಗ, ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್‌ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಫೋಟೊದಲ್ಲಿ ದೀಪಿಕಾ ಪಡುಕೋಣೆ ಅವರ ಮುಖ ಗ್ಲೋ ಆಗಿ ಕಂಡಿದೆ. ಇದೀಗ ದೀಪಿಕಾ ಫ್ಯಾನ್ಸ್‌ ಮೆಚ್ಚಿನ ನಟಿಯನ್ನು ಕಂಡು ಸಂತಸ ಹೊರಹಾಕುತ್ತಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜ್ಯೂನಿಯರ್‌ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್‌ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್‌”ಗೆ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಜ್ಯೂನಿಯರ್‌ ಆರ್ಟಿಸ್ಟ್‌ಗಳು ಪೋಟೊ ಶೇರ್‌ ಮಾಡಿ ʻದೀಪಿಕಾ ಪಡುಕೋಣೆ ದಿ ಓನ್ಲಿ ಲೇಡಿ ಸಿಂಗಮ್ . ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ ಮೇಡಮ್. ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು. ನಿಮ್ಮೊಂದಿಗೆ ಕೆಲಸ ಮಾಡಿದ್ದು ನಮ್ಮ ಅದೃಷ್ಟ. ಭವಿಷ್ಯದಲ್ಲಿ ನಾವು ಇನ್ನೂ ಹಲವು ಬಾರಿ ನಿಮ್ಮನ್ನು ಭೇಟಿಯಾಗಬೇಕೆಂದು ಪ್ರಾರ್ಥಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Deepika Padukone: ತಾಯ್ತತನದ ಜೊತೆಗೆ ವೃತ್ತಿ ಜೀವನ ನಿಭಾಯಿಸುತ್ತಿರುವ ದೀಪಿಕಾ ಪಡುಕೋಣೆ

ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

Continue Reading

ಬಾಲಿವುಡ್

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Amitabh Bachchan: ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು. ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Amitabh Bachchan vanity van ambition was to pee by Vidhu Vinod Chopra
Koo

ಬೆಂಗಳೂರು: ಬಾಲಿವುಡ್‌ ಫೇಮಸ್‌ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಅಮಿತಾಭ್‌ ಬಚ್ಚನ್‌ (Amitabh Bachchan) ಅವರೊಂದಿಗಿನ ಅವರ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಹೃಷಿಕೇಶ್ ಮುಖರ್ಜಿಯವರ ಶಿಫಾರಸು ಮೇರೆಗೆ ಅಮಿತಾಭ್‌ ಅವರನ್ನು ಮೊದಲ ಬಾರಿ ಭೇಟಿ ಮಾಡಿದರು. ಆ ಬಳಿಕ ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು.

ಕೆಲ್ಲಾಗ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಲ್ಲಿ ನಡೆದ ಚಾಟ್‌ನಲ್ಲಿ ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಮಾತನಾಡಿ, “ಅಮಿತಾಭ್‌ ಅವರೊಂದಿಗೆ ಚಲನಚಿತ್ರ ಮಾಡುವುದು ಅವರ ವೈಯಕ್ತಿಕ ವಾಶ್‌ರೂಮ್‌ನಲ್ಲಿ ಮೂತ್ರ ವಿಸರ್ಜಿಸುವಷ್ಟು ಮುಖ್ಯವಾಗಿರಲಿಲ್ಲ” ಎಂದು ನಗುತ್ತ ಹೇಳಿದರು. “ನಾನು ಅಮಿತಾಭ್‌ ಅವರನ್ನು ಮೊದಲು ಅವರ ವ್ಯಾನಿಟಿ ವ್ಯಾನ್‌ನಲ್ಲಿ ಭೇಟಿಯಾದೆ. ಆ ಸಮಯದಲ್ಲಿ, ಅಮಿತಾಭ್‌ ಬಚ್ಚನ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಶೌಚಾಲಯವಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಮೊದಲ ಬಾರಿಯ ಭೇಟಿಯಲ್ಲಿಯೇ ನಾನು ತುಂಬಾ ಅಸಭ್ಯವಾಗಿ ವರ್ತಿಸಿದೆ. ಅಮಿತಾಭ್‌ಗೆ ನಾನು ಹೀಗೆ ಹೇಳಿದೆ. ನನ್ನ ಹೆಸರು ತುಂಬಾ ಪ್ರಭಾವಶಾಲಿಯಾಗಿಲ್ಲದಿರಬಹುದು, ಆದರೆ ನನ್ನ ಚಿತ್ರ….ಇದೆʼʼಎಂದು ಹೇಳಿದಾಗ ಸ್ವಲ್ಪ ನನ್ನನ್ನು ದಿಟ್ಟಿಸಿ ನೋಡಿ ಕೊನೆಗೆ ಸಿನಿಮಾ ಮಾಡಲು ಒಪ್ಪಿದರು ಎಂದರು.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

ಮಾತು ಮುಂದುವರಿಸಿ ʻʻಅಮಿತಾಭ್‌, ಹೃಷಿ ಮತ್ತು ನಟಿ ರೇಖಾ ಎಲ್ಲರೂ ಈಗ ಕೆಲಸದಲ್ಲಿ ನಿರತರಾಗಿದ್ದಾರೆ. ಆಗಾಗ ಅವರ ಮಧ್ಯೆ ಕೆಲವು ವಾದಗಳು ನಡೆಯುತ್ತಿತ್ತು. ನಾನು ನನ್ನ ಸಿನಿಮಾ ಮರ್ಡರ್‌ ಅಟ್‌ ಮಂಕಿ ಹಿಲ್‌ (Murder at Monkey Hill) ಸಿನಿಮಾವನ್ನು ಅಮಿತಾಭ್‌ ಅವರಿಗೆ ತೋರಸಿಬೇಕಿತ್ತು. ಸಂಜೆ 4ರ ಸುಮಾರಿಗೆ ನನ್ನ ಸಿನಿಮಾ ಅಮಿತಾಭ್‌ಗೆ ನೋಡಲು ಸಮಯ ಇಲ್ಲ ಎಂದು ಅರಿತುಕೊಂಡೆ. ಸ್ವಲ್ಪ ಸಮಯದ ನಂತರ, ನಾನು ಅಲ್ಲಿಂದ ಹೊರಟೆ. ನಾನು ಹೊರಗೆ ಕುಳಿತಿದ್ದೆ. ಆಗ ನನ್ನ ಭುಜದ ಮೇಲೆ ಒಂದು ಕೈ ಬಂತು. ಅದು ಯಾರದ್ದು ಅಲ್ಲ ಅಮಿತಾಭ್‌ ಅವರದ್ದು. ಅಮಿತಾಭ್ ನನ್ನ ಬಳಿ ಕೇಳಿದರು. ಥಿಯೇಟರ್‌ 5ರವರೆಗೆ ಬುಕ್ಕಿಂಗ್‌ ಆಗಿದೆಯಾ? ಇದ್ದರೆ ಹೋಗೋಣ ಎಂದು. ಮಾತ್ರವಲ್ಲ ನನ್ನ ಜೊತೆಯಲ್ಲಿ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದರು. ಅದು ಯಾರು ಅಲ್ಲ. ರೇಖಾ ಆಗಿದ್ದರು. ಬಳಿಕ ನಾವೆಲ್ಲ ಸಿನಿಮಾ ನೋಡಲು ತಯಾರಾದೆವುʼʼಎಂದರು.

ಮಾತು ಮುಂದುವರಿಸಿ ʻʻಹೀಗೆ ನಾನು ಅಮಿತಾಭ್‌ ಅವರ ಬಳಿ ನಿಮ್ಮ ವ್ಯಾನಿಟಿ ವ್ಯಾನ್‌ ಶೌಚಾಲಯವನ್ನು ಬಳಸಬಹುದೇ?’ ಎಂದು ಕೇಳಿದೆ, ಅಮಿತಾಭ್‌ ಬಚ್ಚನ್ ಅವರ ವ್ಯಾನ್‌ನಲ್ಲಿ ಮೂತ್ರ ಮಾಡುವುದು ನನ್ನ ಜೀವನದ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತು. ಚಿತ್ರವು ವರ್ಕ್ ಔಟ್ ಆಗುತ್ತದೋ ಇಲ್ಲವೋ ಯಾರಿಗೆ ಗೊತ್ತು, ಆದರೆ ಕನಿಷ್ಠ ಅವರ ವ್ಯಾಬಿಟಿ ವ್ಯಾನ್‌ನ ಶೌಚಾಲಯದಲ್ಲಿ ನಾನು ಮೂತ್ರ ವಿಸರ್ಜಿಸಿದ್ದೇನೆ ಅಂತಾದರೂ ಖುಷಿ ಇರತ್ತದಲ್ಲ ಎಂದು ಕೇಳಿದೆ. ಇದಾದ ಬಳಿಕ ಬಚ್ಚನ್ ಅಂತಿಮವಾಗಿ ನನ್ನ ಸಿನಿಮಾ ನೋಡಿದರು. ಒಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದರು. ಕೊನೆಗೆ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ ಮಾಡಿದೆವು. ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತುʼʼಎಂದರು. ಸಿನಿಮಾ ಹಿಟ್‌ ಆದ ಬಳಿಕ ಬಚ್ಚನ್‌ ಅವರು ಚೋಪ್ರಾ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Continue Reading
Advertisement
Gratuity
ದೇಶ4 mins ago

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Prajwal Revanna Case I was raped at gunpoint JDS women leader files complaint against Prajwal
ಹಾಸನ5 mins ago

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

icc men's test team rankings
ಕ್ರೀಡೆ20 mins ago

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

Bengaluru Rains
ಮಳೆ23 mins ago

Bengaluru Rains : ಬೆಂಗಳೂರಲ್ಲಿ ಶುರುವಾಯ್ತು ಮಳೆಗಾಲ; ಕವಿದ ಕಾರ್ಮೋಡ, ಭಯಂಕರ ವರ್ಷಧಾರೆ

Press Freedom Day
Latest30 mins ago

Press Freedom Day: ಇಂದು ಪತ್ರಿಕಾ ಸ್ವಾತಂತ್ರ್ಯ ದಿನ; ಏನಿದರ ಮಹತ್ವ?

Job Alert
ಉದ್ಯೋಗ38 mins ago

Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Prajwal Revanna Case Another case against Revanna transferred to SIT Notice to Bhavani
ಕ್ರೈಂ1 hour ago

Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್‌ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್‌!

Narendra Modi
Lok Sabha Election 20242 hours ago

Narendra Modi: ಅಮೇಥಿ ಬದಲು ರಾಯ್‌ ಬರೇಲಿಯಿಂದ ರಾಹುಲ್‌ ಗಾಂಧಿ ಸ್ಪರ್ಧೆ; ಓಡಬೇಡಿ ಎಂದು ವ್ಯಂಗ್ಯವಾಡಿದ ಮೋದಿ

Helicopter Crash
ದೇಶ2 hours ago

Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

Murder case
ಕ್ರೈಂ2 hours ago

Murder case : ಹುಬ್ಬಳ್ಳಿ, ಬೆಂಗಳೂರಲ್ಲಿ ಅಪರಿಚಿತ ಶವ ಪತ್ತೆ; ಹಂತಕರ ಬೆನ್ನಿಗೆ ಬಿದ್ದ ಖಾಕಿ ಪಡೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ21 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌