Actress Amulya | ಅವಳಿ ಮಕ್ಕಳ ಹೆಸರು ರಿವೀಲ್‌ ಮಾಡಿದ ನಟಿ ಅಮೂಲ್ಯ! - Vistara News

ಸಿನಿಮಾ

Actress Amulya | ಅವಳಿ ಮಕ್ಕಳ ಹೆಸರು ರಿವೀಲ್‌ ಮಾಡಿದ ನಟಿ ಅಮೂಲ್ಯ!

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ (Actress Amulya) ಅವರು ತಮ್ಮ ಅವಳಿ ಮಕ್ಕಳ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಮಕ್ಕಳ ಮುದ್ದಾದ ಫೋಟೊಗಳು ಇಲ್ಲಿವೆ!

VISTARANEWS.COM


on

Actress Amulya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇದನ್ನೂ ಓದಿ | Jahnavi Kapoor | ನೀಲಿ ಬಣ್ಣದ ಉಡುಪಿನಲ್ಲಿ ಜಾನ್ವಿ ಕಪೂರ್ ಆಕರ್ಷಕ ಫೋಟೊಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada New Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಔಟ್‌; ಶೀಘ್ರದಲ್ಲೇ ತೆರೆಗೆ

Kannada New Movie: ‘ರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣ’ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ 5ನೇ ಸಿನಿಮಾ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಚಿತ್ರದ ಪೋಸ್ಟರ್ ಈಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಸಿಂಪಲ್ ಸುನಿ, ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

VISTARANEWS.COM


on

Bank of Bhagyalakshmi movie poster released
Koo

ಬೆಂಗಳೂರು: ‘ರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ. ಪ್ರಕಾಶ್ ನಿರ್ಮಾಣದ 5ನೇ ಸಿನಿಮಾ ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಚಿತ್ರದ ಪೋಸ್ಟರ್ (Kannada New Movie) ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರು ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

ದೀಕ್ಷಿತ್ ಶೆಟ್ಟಿ ಅಭಿನಯದ ಚಿತ್ರ‌

ದಿಯಾ , ದಸರಾ, ಕೆಟಿಎಂ ಹಾಗೂ ಬ್ಲಿಂಕ್ ಸಿನಿಮಾಗಳಲ್ಲಿ ಅಭಿನಯದಲ್ಲಿ ಹೆಸರು ಮಾಡಿ, ತೆಲುಗು, ಮಲಯಾಳಂಗಳಲ್ಲಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ಸಿನಿಮಾದ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

ಚಿತ್ರಕ್ಕೆ ನವ ನಿರ್ದೇಶಕ ಅಭಿಷೇಕ ಎಂ. ಅವರ ನಿರ್ದೇಶನವಿದೆ. ನಿರ್ದೇಶಕ ಸಿಂಪಲ್ ಸುನಿ ಜತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗು ಕೆಲ ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. ‘ಪಿನಾಕ’ ಎಂಬ ವಿಎಫ್‌ಎಕ್ಸ್‌ (VFX) ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಹಾಸ್ಯ ಪ್ರಧಾನ ಕಥಾಹಂದರ

ಬ್ಯಾಂಕ್‌ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರವನ್ನು ಈ ಚಿತ್ರವು ಒಳಗೊಂಡಿದೆ. ಸಹ ಕಲಾವಿದರಾಗಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಸೇರಿದಂತೆ ಮುಂತಾದ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.

ಶೀಘ್ರದಲ್ಲೇ ಚಿತ್ರೀಕರಣ ಮುಕ್ತಾಯ

ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗ ಸುತ್ತಮುತ್ತ ಶೇ.80 ರಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಇನ್ನು ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾವನ್ನು ನಿರ್ಮಾಪಕ ಎಚ್.ಕೆ ಪ್ರಕಾಶ್, ಕನ್ನಡದ ಜತೆಗೆ ತೆಲುಗಿನಲ್ಲಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ. ಕಾಸರಗೋಡು ಅವರ ಕ್ಯಾಮೆರಾ ನಿರ್ದೇಶನ, ರಘು ಮೈಸೂರ್ ಅವರ ಕಲಾ ನಿರ್ದೇಶನ, ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

Continue Reading

ದೇಶ

Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

Kangana Ranaut: ಕಂಗನಾ ರಣಾವತ್‌ ಅವರ ಬಹುನಿರೀಕ್ಷಿತ ಸಿನಿಮಾ ಎಮರ್ಜನ್ಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ತಾವೇ ನಿರ್ದೇಶಿಸಿದ ಸಿನಿಮಾದಲ್ಲಿ ಕಂಗನಾ ರಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಘೋಷಿಸಿದರೂ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಅವರು, ಚುನಾವಣೆಯಲ್ಲಿ ಗೆದ್ದರೆ ನಟನೆ ಬಿಡುವುದಾಗಿ ಘೋಷಿಸಿದ್ದಾರೆ.

VISTARANEWS.COM


on

Kangana Ranaut
Koo

ನವದೆಹಲಿ: ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಅವರು ರಾಜಕೀಯಕ್ಕೆ ಧುಮುಕಿದ್ದು, ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜೂನ್‌ 1ರಂದು ಮಂಡಿ ಕ್ಷೇತ್ರದಲ್ಲಿ ಮತದಾನ (Lok Sabha Election 2024) ನಡೆಯುವ ಕಾರಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಕಂಗನಾ ರಣಾವತ್‌ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ನಾನು ಗೆದ್ದರೆ ನಟನೆಯನ್ನು ಬಿಟ್ಟುಬಿಡುತ್ತೇನೆ” ಎಂಬುದಾಗಿ ಹೇಳಿದ್ದಾರೆ.

ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಕಂಗನಾ ರಣಾವತ್‌ ಅವರು ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

ಕಂಗನಾ ರಣಾವತ್‌ ಅವರ ಬಹುನಿರೀಕ್ಷಿತ ಸಿನಿಮಾ ಎಮರ್ಜನ್ಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ತಾವೇ ನಿರ್ದೇಶಿಸಿದ ಸಿನಿಮಾದಲ್ಲಿ ಕಂಗನಾ ರಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಘೋಷಿಸಿದರೂ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಪಂಗಾ, ಮಣಿಕರ್ಣಿಕಾ: ದಿ ಕ್ವೀನ್‌ ಆಫ್‌ ಜಾನ್ಸಿ, ಜಡ್ಜ್‌ಮೆಂಟಲ್‌ ಹೈ ಕ್ಯಾ, ತನು ವೆಡ್ಸ್‌ ಮನು ರಿಟರ್ನ್ಸ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಅಭಿನಯದ ತಲೈವಿ ಸಿನಿಮಾಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು.

91 ಕೋಟಿ ರೂ. ಆಸ್ತಿಗೆ ಒಡತಿ

ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಕಂಗನಾ ರಣಾವತ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಚುನಾವಣಾ ಅಫಿಡವಿಟ್ ನಲ್ಲಿ 91 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಅವರ ಆಸ್ತಿಯಲ್ಲಿ 28.7 ಕೋಟಿ ರೂ.ಗಳ ಚರಾಸ್ತಿ ಮತ್ತು 62.9 ಕೋಟಿ ರೂ.ಗಳ ಸ್ಥಿರಾಸ್ತಿ ಸೇರಿವೆ. ಅವರ ಬಳಿ 5 ಕೋಟಿ ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ಮೌಲ್ಯದ 60 ಕೆಜಿ ಬೆಳ್ಳಿ, 3 ಕೋಟಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳಿವೆ. 2 ಲಕ್ಷ ನಗದು ಮತ್ತು ಸುಮಾರು 1.35 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವುದಾಗಿ ನಟಿ ಹಾಗೂ ರಾಜಕಾರಣಿ ಘೋಷಿಸಿದ್ದಾರೆ.

ಇದನ್ನೂ ಓದಿ: Kangana Ranaut: ಬಾಲಿವುಡ್‌ ʼಕ್ವೀನ್‌ʼ ಕಂಗನಾ ಹೆಸರಿನಲ್ಲಿದೆ 50 ಎಲ್ಐಸಿ ಪಾಲಿಸಿ; ಏಜೆಂಟ್‌ ಅತ್ಯಂತ ಲಕ್ಕಿ ಎಂದ ನೆಟ್ಟಿಗರು

Continue Reading

ಕ್ರೀಡೆ

RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

RCB vs CSK: ಶಿವರಾಜ್​ ಕುಮಾರ್​ ಆರ್​ಸಿಬಿಯ ಜೆರ್ಸಿ ತೊಟ್ಟು ಗಮನಸೆಳೆದಿದ್ದಾರೆ. ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ತವರಿನ ತಂಡಕ್ಕೆ ಬೆಂಬಲ ಸೂಚಿಸಲು ರಾಜಕೀಯ ಗಣ್ಯರು, ಸಿನೆಮಾ ನಟ ನಟಿಯರು ಹಾಜರಾಗಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡ ಕಣಕ್ಕಿಳಿದಿದೆ. ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ತವರಿನ ತಂಡಕ್ಕೆ ಬೆಂಬಲ ಸೂಚಿಸಲು ರಾಜಕೀಯ ಗಣ್ಯರು, ಸಿನೆಮಾ ನಟ ನಟಿಯರು ಹಾಜರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್‌, ನಟ ಶಿವರಾಜ್​ ಕುಮಾರ್​, ರಿಷಬ್​ ಶೆಟ್ಟಿ ಸೇರಿ ಅನೇಕರು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದಾರೆ. ಶಿವರಾಜ್​ ಕುಮಾರ್​ ಆರ್​ಸಿಬಿಯ ಜೆರ್ಸಿ ತೊಟ್ಟು ಗಮನಸೆಳೆದಿದ್ದಾರೆ. ಗಣ್ಯರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ. ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು ಎಂದು ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

ಆರ್​ಸಿಬಿಗೆ ಸಪೋರ್ಟ್​ ಮಾಡಲು ಮಹಿಳಾ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ, ತಂಡದ ಆಟಗಾರ್ತಿಯರಾದ ಶ್ರೇಯಾಂಕ ಪಾಟೀಲ್​,ಆಶಾ ಶೋಭನಾ ಹಾಗೂ ಇತರೆ ಆಟಗಾರ್ತಿಯರು ಕೂಡ ಹಾಜರಾಗಿದ್ದಾರೆ. ಆರ್​ಸಿಬಿ ಮಾಜಿ ಆಟಗಾರ ಕ್ರಿಸ್​ ಗೇಲ್​ ಕೂಡ 333 ನಂಬರ್​ನ ಆರ್​ಸಿಬಿ ಜೆರ್ಸಿಯಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ.

ಪಂದ್ಯವನ್ನು ಆರ್​ಸಿಬಿ ತಂಡ ಗೆಲ್ಲುತ್ತದೆ ಎಂದು ಮಹಿಳಾ ಆಟಗಾರ್ತಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೋಟೋವನ್ನು ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹ್ಯಾಟ್ರಿಕ್​ ಹೀರೊ ಶಿವರಾಜ್​ ಕುಮಾರ್​ ಅವರು ಆರ್​ಸಿಬಿ ಜೆರ್ಸಿ ತೊಟ್ಟ ಫೋಟೊವನ್ನು ಅವರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ ಆರ್​ಸಿಬಿ ಹುಡುಗರೇ ಎಂದು ಬರೆದುಕೊಂಡಿದ್ದಾರೆ.

ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್​ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ. ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ.

Continue Reading

ಬಾಲಿವುಡ್

Cannes 2024: 20 ಕೆಜಿ ತೂಕದ ಗೌನ್ ಧರಿಸಿ ಬೆರಗುಗೊಳಿಸಿದ ನ್ಯಾನ್ಸಿ ತ್ಯಾಗಿ!

Cannes 2024: 1,000 ಮೀಟರ್‌ಗಿಂತಲೂ ಹೆಚ್ಚು ಫ್ಯಾಬ್ರಿಕ್‌ ಬಟ್ಟೆಯನ್ನು ಬಳಸಿ ತಯಾರಿಸಿದ ಸುಂದರವಾದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ಡಿಸೈನರ್ ಮಾಡಿದ್ದಲ್ಲ.. ಸ್ವತಃ ನಾನೇ ತಯಾರಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಈ ಗೌನ್‌ ತಯಾರಿಸಲು ನ್ಯಾನ್ಸಿ ತ್ಯಾಗಿ ಅವರಿಗೆ ಬರೋಬ್ಬರಿ ಒಂದು ತಿಂಗಳು ಬೇಕಾಯ್ತಂತೆ.

VISTARANEWS.COM


on

Cannes 2024 Indian influencer who stitched a 20 kg dress
Koo

ಬೆಂಗಳೂರು: ಫ್ಯಾಶನ್ ಪ್ರಭಾವಿ ನ್ಯಾನ್ಸಿ ತ್ಯಾಗಿ ( Nancy Tyagi) ಕಾನ್‌ ಫಿಲ್ಮ್‌ ಫೆಸ್ಟಿವಲ್‌ (Cannes 2024) ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. 1,000 ಮೀಟರ್‌ಗಿಂತಲೂ ಹೆಚ್ಚು ಫ್ಯಾಬ್ರಿಕ್‌ ಬಟ್ಟೆಯನ್ನು ಬಳಸಿ ತಯಾರಿಸಿದ ಸುಂದರವಾದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ಡಿಸೈನರ್ ಮಾಡಿದ್ದಲ್ಲ.. ಸ್ವತಃ ನಾನೇ ತಯಾರಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಈ ಗೌನ್‌ ತಯಾರಿಸಲು ನ್ಯಾನ್ಸಿ ತ್ಯಾಗಿ ಅವರಿಗೆ ಬರೋಬ್ಬರಿ ಒಂದು ತಿಂಗಳು ಬೇಕಾಯ್ತಂತೆ.

“77ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಖುಷಿಯಾಯ್ತು. 30 ದಿನಗಳು, 1000 ಮೀಟರ್ ಬಟ್ಟೆ ಮತ್ತು 20 ಕೆಜಿಗಿಂತ ಹೆಚ್ಚು ತೂಕವಿರುವ ಈ ಗುಲಾಬಿ ಗೌನ್ ಅನ್ನು ರಚಿಸಲು ನಾನು ನನ್ನ ಹೃದಯ ಮತ್ತು ಆತ್ಮವನ್ನೇ ಅರ್ಪಿಸಿದ್ದೇನೆ. ನನ್ನ ಕನಸು ಈಗ ನನಸಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ. ನಿಮ್ಮ ಬೆಂಬಲವು ನನಗೆ ಸ್ಫೂರ್ತಿ ನೀಡಿದೆʼʼಎಂದು ಹೇಳಿಕೊಂಡಿದ್ದಾರೆ ನ್ಯಾನ್ಸಿ ತ್ಯಾಗಿ.

ಇದನ್ನೂ ಓದಿ: Cannes 2024: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶ್ವೇತ ವರ್ಣದ ಗೌನ್​ ಧರಿಸಿ ಮಿಂಚಿದ ಕಿಯಾರ! ಇಲ್ಲಿದೆ ವಿಡಿಯೊ

ನ್ಯಾನ್ಸಿ ತ್ಯಾಗಿ ಶೇರ್‌ ಮಾಡಿಕೊಂಡ ಬಳಿಕ ಕೇವಲ ಒಂದು ಗಂಟೆಯಲ್ಲಿ 1.8 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ನ್ಯಾನ್ಸಿ ಫ್ಯಾನ್ಸ್‌ ಈಗ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ,ಮಾತ್ರವಲ್ಲ ಕಮೆಂಟ್‌ ಮೂಲಕ ʻʻನ್ಯಾನ್ಸಿ, ಇದು ವೈಯಕ್ತಿಕ ಗೆಲುವಿನಂತೆ ಭಾಸವಾಗುತ್ತಿದೆ” ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಕಠಿಣ ಪರಿಶ್ರಮ ಮತ್ತು ಪ್ರತಿಭೆ ಇದೆ ನಿಮ್ಮಲ್ಲಿʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು ʻʻನನಗೆ ನ್ಯಾನ್ಸಿ ತ್ಯಾಗಿ ಬಗ್ಗೆ ವೈಯಕ್ತಿಕವಾಗಿ ತಿಳಿದಿಲ್ಲ, ಆದರೆ ನಾನು ಅವರನ್ನು ರೆಡ್‌ ಕಾರ್ಪೆಟ್ ಮೇಲೆ ನೋಡಿ ಸಂತೋಷವಾಯ್ತು. ದೇವರು ನಿಮ್ಮನ್ನು ಆಶೀರ್ವದಿಸಲಿ. ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳುತ್ತೇನೆ. ನೀವು ಬಾಲಿವುಡ್ ಸೆಲೆಬ್ರಿಟಿಗಳಿಗಿಂತ ಉತ್ತಮವಾಗಿ ಕಾಣುತ್ತೀರಿʼʼಎಂದು ಕಮೆಂಟ್‌ ಮಾಡಿದ್ದಾರೆ.

ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ನ್ಯಾನ್ಸಿ ತ್ಯಾಗಿ ಮೊದಲಿನಿಂದಲೂ ತಾನು ರಚಿಸುವ ಬಟ್ಟೆಗಳ ವಿನ್ಯಾಸದ ವಿಡಿಯೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

Continue Reading
Advertisement
IPL 2024
ಪ್ರಮುಖ ಸುದ್ದಿ29 seconds ago

IPL 2024 : ಕ್ಯಾಚ್​ ಆಫ್​​ ದಿ ಸೀಸನ್​, ಫಾಫ್​ ಡು ಪ್ಲೆಸಿಸ್​ ಹಿಡಿದ ಅದ್ಭುತ್​ ಕ್ಯಾಚ್​​ನ ವಿಡಿಯೊ ಇಲ್ಲಿದೆ

Virat kohli
ಕ್ರೀಡೆ16 mins ago

Virat kohli : ಡ್ಯಾರಿಲ್​ ಮಿಚೆಲ್ ಕ್ಯಾಚ್ ಹಿಡಿದ ಬಳಿಕ ಕೊಹ್ಲಿಯ ಆಕ್ರಮಣಕಾರಿ ಸಂಭ್ರಮ ಹೀಗಿತ್ತು; ಇಲ್ಲಿದೆ ವಿಡಿಯೊ

Tips for Mothers
ಆರೋಗ್ಯ18 mins ago

Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

virat kohli
ಕ್ರಿಕೆಟ್37 mins ago

Virat kohli : ಕೇಕೆ ಹಾಕುತ್ತಿದ್ದ ಸಿಎಸ್​ಕೆ ಅಭಿಮಾನಿಗಳ ಬಾಯ್ಮುಚ್ಚಿಸಿದ ಕೊಹ್ಲಿ; ಇಲ್ಲಿದೆ ವಿಡಿಯೊ

IPL 2024
ಕ್ರಿಕೆಟ್54 mins ago

IPL 2024 : ಚೆನ್ನೈ ಮಣಿಸಿ ಪ್ಲೇಆಫ್​ಗೇರುವ ಮುನ್ನವೇ ಸಿಕ್ಸರ್​​ಗಳ ವಿಶೇಷ ದಾಖಲೆ ಬರೆದ ಆರ್​ಸಿಬಿ

Karnataka weather Forecast
ಮಳೆ55 mins ago

Karnataka Weather : ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ; ಆರೆಂಜ್‌, ಯೆಲ್ಲೋ ಎಚ್ಚರಿಕೆ

Virat kohli
ಪ್ರಮುಖ ಸುದ್ದಿ1 hour ago

Virat kohli : ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್​ ಕೊಹ್ಲಿ

Health Tips in Kannada
ಆರೋಗ್ಯ1 hour ago

Health Tips in Kannada: ಕಾಮಕಸ್ತೂರಿ ಬೀಜದ ಪಾನಕ ಕುಡಿದರೆ ಆರೋಗ್ಯ ವೃದ್ಧಿ ಪಕ್ಕಾ!

Dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ರಹಸ್ಯ ಕಾರ್ಯಗಳಿಂದಲೂ ಸಿಗುತ್ತೆ ಯಶಸ್ಸು

Karnataka Police
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ5 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20245 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌