Manu James: ಮಲಯಾಳಂ ಯುವ ನಿರ್ದೇಶಕ ಮನು ಜೇಮ್ಸ್ ನಿಧನ - Vistara News

ಮಾಲಿವುಡ್

Manu James: ಮಲಯಾಳಂ ಯುವ ನಿರ್ದೇಶಕ ಮನು ಜೇಮ್ಸ್ ನಿಧನ

ನ್ಯಾನ್ಸಿ ರಾಣಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ (Manu James) ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುಂಚೆಯೇ ನಿರ್ದೇಶಕ ನಿಧನರಾಗಿದ್ದಾರೆ. ನಿಧನಕ್ಕೆ ಮಾಲಿವುಡ್‌ ಸಿನಿರಂಗ ಸಂತಾಪ ಸೂಚಿಸಿದೆ.

VISTARANEWS.COM


on

Malayalam director Manu James passes away
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾಲಿವುಡ್‌ ನಿರ್ದೇಶಕ ಮನು ಜೇಮ್ಸ್ (Manu James) ಫೆಬ್ರವರಿ 24 ರಂದು ಕೇರಳದ ಎರ್ನಾಕುಲಂನ ಆಲುವಾದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಫೆಬ್ರವರಿ 26, ಮಧ್ಯಾಹ್ನ 3 ಗಂಟೆಗೆ ಎರ್ನಾಕುಲಂನಲ್ಲಿ ನಡೆಯಿತು. ಅವರಿಗೆ ಕೇವಲ 31 ವರ್ಷ ವಯಸ್ಸಾಗಿತ್ತು. ವೈದ್ಯರ ಪ್ರಕಾರ, ನ್ಯುಮೋನಿಯಾ ಮತ್ತು ಹೆಪಟೈಟಿಸ್‌ನಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ʻನ್ಯಾನ್ಸಿ ರಾಣಿʼ (Nancy Rani) ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ನ್ಯಾನ್ಸಿ ರಾಣಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುಂಚೆಯೇ ನಿರ್ದೇಶಕ ನಿಧನರಾಗಿದ್ದಾರೆ. ನಿಧನಕ್ಕೆ ಮಾಲಿವುಡ್‌ ಸಿನಿರಂಗ ಸಂತಾಪ ಸೂಚಿಸಿದೆ. ನಟ ಅಜು ವರ್ಗೀಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, “ತುಂಬಾ ಬೇಗ ಹೋದ ಸಹೋದರ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮಾಜಿ ವಿದ್ಯಾರ್ಥಿಯ ಕ್ರೌರ್ಯಕ್ಕೆ ಸುಟ್ಟು ಬೆಂದು ಹೋಗಿದ್ದ ಪ್ರಾಂಶುಪಾಲೆ ನಿಧನ; ಆರೋಪಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸ್​

ಮನು ಜೇಮ್ಸ್ ಯಾರು?

ನಿರ್ದೇಶಕ ಸಾಬು ಜೇಮ್ಸ್ ಅವರ ಐ ಆಮ್ ಕ್ಯೂರಿಯಸ್ ಚಿತ್ರದಲ್ಲಿ ಮನು ಬಾಲ ನಟನಾಗಿ ಪದಾರ್ಪಣೆ ಮಾಡಿದರು. ಚಿತ್ರವು 2004 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವರ್ಷಗಳ ನಂತರ, ಅವರು ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಅನೇಕ ಚಲನಚಿತ್ರಗಳಲ್ಲಿ ಸಹಾಯಕ ಮತ್ತು ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಶ್ರೀನಿವಾಸನ್, ಲಾಲ್, ಲೀನಾ ಮತ್ತು ಇಂದ್ರನ್ಸ್ ಸೇರಿದಂತೆ ಹಿಂದಿನ ನಟರು ಮನು ಜೇಮ್ಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಾಲಿವುಡ್

Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

Turbo Trailer Out: ಭೀಷ್ಮ ಪರ್ವಂ (2022) ನಂತರ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಮೊದಲ ಪೂರ್ಣ ಪ್ರಮಾಣದ ಮಾಸ್ ಎಂಟರ್‌ಟೈನರ್ ಸಿನಿಮಾ ಇದು. ಇಲ್ಲಿ ರಾಜ್‌ .ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ. ಟ್ರೈಲರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಮೇ 23ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

VISTARANEWS.COM


on

Turbo Trailer Out mammoottys raj b shetty looks menacing
Koo

ಬೆಂಗಳೂರು: ಮಮ್ಮುಟ್ಟಿ (Mammootty) ಅವರು ಈ ಹಿಂದೆ ಘೋಷಿಸಿದ ಮೂರು ಸಿನಿಮಾಗಳ ಬಿಡುಗಡೆಗಳಲ್ಲಿ ʻಟರ್ಬೋʼ (Turbo Trailer Out) ಕೂಡ ಒಂದು. ರಾಜ್ ಬಿ ಶೆಟ್ಟಿ (Raj B Shetty) ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು ಗಮನ ಸೆಳೆದಿದೆ. ರಾಜ್ ಅವರು ಪವರ್​ಫುಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಾಜ್‌ ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ. ಟ್ರೈಲರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಮೇ 23ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

ಭೀಷ್ಮ ಪರ್ವಂ (2022) ನಂತರ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಮೊದಲ ಪೂರ್ಣ ಪ್ರಮಾಣದ ಮಾಸ್ ಎಂಟರ್‌ಟೈನರ್ ಸಿನಿಮಾ ಇದು. 133 ಸೆಕೆಂಡ್​ಗಳ ಟ್ರೈಲರ್‌ನಲ್ಲಿ ಆರಂಭದಲ್ಲಿ ಜೋಸ್​ನ​ (ಮಮ್ಮುಟಿ) ಪರಿಚಯ ಮಾಡಿಕೊಡುವ ಪ್ರಯತ್ನ ನಡೆದಿದೆ. ಟ್ರೈಲರ್‌ನಲ್ಲಿ ಭರ್ಜರಿ ಆ್ಯಕ್ಷನ್ ತೋರಿಸಲಾಗಿದೆ. ಇದರ ಜತೆಗೆ ಕಾಮಿಡಿ ಕೂಡ ಇದೆ. ಟ್ರೈಲರ್‌ನಲ್ಲಿ ರಾಜ್ ಬಿ ಶೆಟ್ಟಿ ಅವರು ಕೂಡ ಕಾಣಿಸುತ್ತಾರೆ. ರಾಜ್​ ಬಿ ಶೆಟ್ಟಿ ಎಂಟ್ರಿ ಸಖತ್ ಆಗಿದೆ. ರಾಜ್‌ ಬಿ ಶೆಟ್ಟಿ ಮಲಯಾಳಂನಲ್ಲೂ ಅವರೇ ಡಬ್ ಮಾಡಿದ್ದಾರೆ.

ಇದನ್ನೂ ಓದಿ: Palanku Movie: 17 ವರ್ಷ ಪೂರೈಸಿದ ಮಮ್ಮುಟ್ಟಿ ಅಭಿನಯದ ʻಪಲುಂಕುʼ ಸಿನಿಮಾ, ಇದರ ಕತೆ ಹೃದಯಸ್ಪರ್ಶಿ

ಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ.

‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಕನ್ನಡ ಸಿನಿರಸಿಕರ ಮುಂದೆ ರಾಜ್. ಶೆಟ್ಟಿ ಬಂದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ‘ಗರುಡಗಮನ ವೃಷಭವಾಹನ’ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ತಾವೇ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ಶಿವ ಆಗಿ ಅಬ್ಬರಿಸಿದ್ದರು. ಸದ್ಯ ‘ಟರ್ಬೋ’ ಚಿತ್ರದಲ್ಲೂ ವೆಟ್ರಿವೇಲ್ ಷಣ್ಮುಗಂ ಎನ್ನುವ ಖಡಕ್ ಪಾತ್ರದಲ್ಲಿ ದರ್ಬಾರ್ ನಡೆಸಿದ್ದಾರೆ.

ಇದೊಂದು ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಆಗಿದ್ದು ಮೇ 23ಕ್ಕೆ ತೆರೆಗೆ ಬರಲಿದೆ. ಆಟೋ ಬಿಲ್ಲ ಆಗಿ ತೆಲುಗು ನಟ ಸುನೀಲ್ ಕೂಡ ಕಾಣಿಸಿಕೊಂಡಿದ್ದಾರೆ. ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕಿ ಸೇರಿದಂತೆ ದೊಡ್ಡ ತಾರಾಗಣ ‘ಟರ್ಬೋ’ ಚಿತ್ರದಲ್ಲಿದೆ. ವಿಷ್ಣು ಶರ್ಮಾ ಛಾಯಾಗ್ರಹಣ, ಕ್ರಿಸ್ಟೋ ಕ್ಸೇವಿಯರ್ ಸಂಗೀತ ಚಿತ್ರಕ್ಕಿದೆ.

Continue Reading

ಮಾಲಿವುಡ್

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Aavesham Releases On OTT: ಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

VISTARANEWS.COM


on

Aavesham Releases On OTT Fahadh Faasil Hit Malayalam Film
Koo

ಬೆಂಗಳೂರು: ಫಹಾದ್ ಫಾಸಿಲ್ (Fahadh Faasil) ಅಭಿನಯದ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾ ʻಆವೇಶಂʼ ಒಟಿಟಿಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ʻಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಇದೀಗ ಅಮೆಜಾನ್‌ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಡಬ್ಬಿಂಗ್ ಆವೃತ್ತಿಗಳ ಕುರಿತು ಇನ್ನೂ ಯಾವುದೇ ಅಪಡೇಟ್‌ ಬಂದಿಲ್ಲ. ಫ್ರಂಟ್ ರೋ ಅವರ ಟ್ವೀಟ್ ಪ್ರಕಾರ, ಆವೇಶಂನ ಡಿಜಿಟಲ್ ಹಕ್ಕುಗಳು 35 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಈ ಮೂಲಕ ದುಲ್ಕರ್ ಸಲ್ಮಾನ್ ಅವರ ʻಕಿಂಗ್ ಆಫ್ ಕೋಥಾʼದ ದಾಖಲೆಯನ್ನು ಮುರಿದಿದೆ ಎಂದು ವರದಿಯಾಗಿದೆ. ʻಕಿಂಗ್ ಆಫ್ ಕೋಥಾʼ 32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.

ಜಿತು ಮಾಧವನ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಕೂಡ ನಟಿಸಿದ್ದಾರೆ. ಮಲಯಾಳಂ ಸಿನಿಮಾದ ಪ್ರಮುಖ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಓದಲೆಂದು ಬೆಂಗಳೂರಿಗೆ ಬರುವ ಮೂವರು ಹುಡುಗರು ಅಲ್ಲಿ ಜಗಳದಲ್ಲಿ ಸಿಕ್ಕಿ ಬಿದ್ದು ಸ್ಥಳೀಯ ದರೋಡೆಕೋರನ ನೆರವಿನಿಂದ ಗೆಲುವು ಪಡೆಯಲು ಪ್ರಯತ್ನಿಸುವಂತಹ ಕಥೆ ಹೊಂದಿದೆ. ಆ ಸ್ಥಳೀಯ ದರೋಡೆಕೋರ ಬೇರಾರು ಅಲ್ಲ, ಫಹಾದ್‌ ಫಾಸಿಲ್‌.

ಸಂಪೂರ್ಣ ಬಿಳಿ ಉಡುಗೆಯಲ್ಲಿ, ಚಿನ್ನದ ಸರಗಳೊಂದಿಗೆ, ದಪ್ಪ ಮೀಸೆಯನ್ನು ಹೊಂದಿರುವ ಫಹಾದ್‌ ಪಾತ್ರ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಫಹಾದ್ ಅವರು ರಂಗಾ ಪಾತ್ರವನ್ನು ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತು ಈ ಮುಂಚೆ ಹೇಳಿಕೊಂಡಿದ್ದರು. ʻʻನಾನು ಈ ಮೊದಲು ಅಂತಹ ಪಾತ್ರಗಳನ್ನು ಮಾಡಿಲ್ಲ. ಆದ್ದರಿಂದ ಈ ಕಥೆ ನನ್ನ ಬಳಿಗೆ ಬಂದಾಗ, ನಾನು ಹೌದು ಎಂದು ಹೇಳಿದೆ. ಈ ಹಿಂದೆ ನಾನು ಮಾಡಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಇತ್ತು. ಅಲ್ಲದೆ, ನಾನು ಕನ್ನಡ ಮತ್ತು ಮಲಯಾಳಂ ಮಿಶ್ರಿತ ಭಾಷೆ ಮಾತನಾಡಬೇಕು ಎಂದು ಮನೋರಮಾ ಹೇಳಿದ್ದರುʼʼ ಎಂದರು. ಇವು 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಮಲಯಾಳ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು.

ಇದನ್ನೂ ಓದಿ: Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

ಇನ್ನು ಫಹಾದ್‌ ಫಾಸಿಲ್‌ ಹಲವು ಬಹು ನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಪ್ಯಾನ್‌ ಇಂಡಿಯಾ ಚಿತ್ರ ‌ʼಪುಷ್ಪ 2: ದಿ ರೂಲ್‌ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಫಹಾದ್‌ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದ ಮೊದಲ ಭಾಗ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂಡು ಕೊಟ್ಟಿತ್ತು. ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರದಲ್ಲಿ ಫಹಾದ್‌ ನಟಿಸಿದ್ದರು. ಎರಡನೇ ಭಾಗದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ಇದರ ಜತೆಗೆ ಹಲವು ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್‌ ಸ್ಟಾರ್‌ಗಳಾದ ರಜನಿಕಾಂತ್‌- ಅಮಿತಾಭ್‌ ಬಚ್ಚನ್‌ ಅವರ ʼವೆಟ್ಟೈಯನ್‌ʼ ಸಿನಿಮಾದಲ್ಲಿ ಫಹಾದ್‌ ಅಭಿನಯಿಸುತ್ತಿದ್ದಾರೆ. ಇದನ್ನು ಟಿ.ಜೆ.ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್‌, ದುಶಾರಾ ವಿಜಯನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಫಾಹದ್‌ ಮಲಯಾಳಂನ ʼಆವೇಶಮ್‌ʼ, ʼಪಾಟ್ಟುʼ, ʼಹನುಮಾನ್‌ ಗೇರ್‌ʼ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading

ಮಾಲಿವುಡ್

Sangeeth Sivan dies: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan dies ಸಂಗೀತ್ ಶಿವನ್ ಮೂಲತಃ ಕೇರಳದ ತಿರುವನಂತಪುರಂನವರು. 1989 ರಲ್ಲಿ ಆಮೀರ್ ಖಾನ್-ನ ಅಭಿನಯದ ರಾಖ್‌ಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು.

VISTARANEWS.COM


on

Sangeeth Sivan dies Riteish Deshmukh Tusshar Kapoor pay tribute
Koo

ಬೆಂಗಳೂರು: ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ (Sangeeth Sivan dies) ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಂಗೀತ್ ಶಿವನ್ ಅವರಿಗೆ 61 ವರ್ಷ ವಯಸ್ಸಾಗಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಸಂಗೀತ್ ಶಿವನ್ ಮೂಲತಃ ಕೇರಳದ ತಿರುವನಂತಪುರಂನವರು. 1989 ರಲ್ಲಿ ಆಮೀರ್ ಖಾನ್ ಅಭಿನಯದ ರಾಖ್‌ಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು. ಮೋಹನ್​ಲಾಲ್​ ನಟನೆಯ ‘ಯೋಧ’ ಸಿನಿಮಾಗೆ ನಿರ್ದೇಶನ ಮಾಡಿ ಅವರು ಗುರುತಿಸಿಕೊಂಡರು.

ʻಜೋರ್ʼ, ʻಕ್ಯಾ ಕೂಲ್ ಹೈ ಹಮ್ʼ, ʻಅಪ್ನಾ ಸಪ್ನಾ ಮನಿ ಮನಿʼ ಮತ್ತು ʻಯಮ್ಲಾ ಪಗ್ಲಾ ದೀವಾನಾ 2ʼ ಮುಂತಾದ ಹಿಂದಿ ಚಲನಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಮಲಯಾಳಂನ ‘ರೋಮಾಂಚಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಅವರು ಮುಂದಾಗಿದ್ದರು. ಆ ಕೆಲಸ ಪೂರ್ಣಗೊಳ್ಳುವುದಕ್ಕೂ ಮೊದಲೇ ಅವರು ನಿಧನರಾಗಿರಾಗಿದ್ದಾರೆ.

ರಿತೇಶ್ ದೇಶ್‌ಮುಖ್ ಅವರು ಎಕ್ಸ್‌ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. “ಸಂಗೀತ್ ಶಿವನ್ ಸರ್ ಇನ್ನಿಲ್ಲ ಎಂದು ಗೊತ್ತಾದಾಗ ತೀವ್ರ ದುಃಖ ಮತ್ತು ಆಘಾತವಾಯಿತು.ಮೃದು ಮಾತು, ಸೌಮ್ಯ ಮತ್ತು ಅದ್ಭುತ ಮನುಷ್ಯ.ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ, ಪತ್ನಿ, ಮಕ್ಕಳು, ಸಹೋದರರಿಗೆ ನನ್ನ ಸಂತಾಪʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Do You Know: ನಿಮಗಿದು ಗೊತ್ತಾ? ಲವ್‌ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!

ಸುನೀಲ್​ ಶೆಟ್ಟಿ, ರಿತೇಶ್​ ದೇಶಮುಖ್​, ಜಾಕಿ ಶ್ರಾಫ್​, ಸೆಲಿನಾ ಜೇಟ್ಲಿ, ಚಂಕಿ ಪಾಂಡೆ, ರಾಜ್​ಪಾಲ್​ ಯಾದವ್​, ತುಷಾರ್​ ಕಪೂರ್​, ಇಶಾ ಕೊಪ್ಪಿಕರ್​, ನೇಹಾ ದೂಪಿಯಾ, ಅನುಪಮ್​ ಖೇರ್​ ಮುಂತಾದ ಸೆಲೆಬ್ರಿಟಿಗಳ ಜೊತೆ ಸಂಗೀತ್​ ಶಿವನ್​ ಕೆಲಸ ಮಾಡಿದ್ದರು.

Continue Reading

ಮಾಲಿವುಡ್

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Actor Sathyaraj: ಸತ್ಯರಾಜ್ ಅವರು 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಮತ್ತು ಎಸ್‌.ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಕ್ಕಾಗಿ ಸತ್ಯರಾಜ್ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಅವರು ಇನ್ನೂ ಅನೇಕ ಪ್ರೇಕ್ಷಕರಿಗೆ ಕಟ್ಟಪ್ಪ ಎಂತಲೇ ಪರಿಚಿತರಾಗಿದ್ದಾರೆ. ಈಗ ಮಲಯಾಳ ಖ್ಯಾತ ನಟನ ಬಾಲ್ಯದ ಫೋಟೊ ವೈರಲ್‌ ಆಗಿದೆ. ಮೇ 7ರಂದು, MUBI ಇಂಡಿಯಾದ ಅಧಿಕೃತ ಎಕ್ಸ್‌ ಖಾತೆ ಫೋಟೊ ಶೇರ್‌ ಮಾಡಿಕೊಂಡಿದೆ.

VISTARANEWS.COM


on

Actor Sathyaraj throwback picture of with veteran actor
Koo

ಬೆಂಗಳೂರು: ಬಾಹುಬಲಿ ಸಿನಿಮಾ ಕಟ್ಟಪ್ಪ (Baahubali Actor Sathyaraj) ಪಾತ್ರದ ಮೂಲಕ ಹೆಸರುವಾಸಿಯಾಗಿರುವ ತಮಿಳು ಮತ್ತು ತೆಲುಗು ನಟ ಸತ್ಯರಾಜ್ (Actor Sathyaraj) ಜತೆ ಫಹಾದ್ ಫಾಸಿಲ್ ಪೋಸ್‌ (Fahadh Faasil) ಕೊಟ್ಟಿದ್ದಾರೆ. ಇದು 80ರ ದಶಕದ ಫೋಟೊ. ಆಗ ಫಹಾದ್ ಫಾಸಿಲ್ ತುಂಬ ಚಿಕ್ಕವರಿದ್ದರು. ಸತ್ಯರಾಜ್ ತೊಡೆ ಮೇಲೆ ಕುಳಿತು ಫಹಾದ್ ಫಾಸಿಲ್ ಕ್ಯೂಟ್‌ ಆಗಿ ಸ್ಮೈಲ್‌ ಕೊಟ್ಟಿದ್ದಾರೆ. ಈ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಟ ಸತ್ಯರಾಜ್ ಅವರು ಫಹಾದ್ ಅವರ ತಂದೆ ಫಾಸಿಲ್ ಜತೆ ತುಂಬ ಕ್ಲೋಸ್‌ ಇದ್ದರು. ಫಹಾದ್ ಅವರ ತಂದೆ ಫಾಸಿಲ್ ಹಾಗೂ ಸತ್ಯರಾಜ್‌ ‘ಎನ್ ಬೊಮ್ಮುಕುಟ್ಟಿ ಅಮ್ಮಾವುಕ್ಕು’ ಮತ್ತು ‘ಪೂವಿಜಿ ವಸಲಿಲೆ’ ಎಂಬ ತಮಿಳು ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.

ಮೇ 7ರಂದು, MUBI ಇಂಡಿಯಾದ ಅಧಿಕೃತ ಎಕ್ಸ್‌ ಖಾತೆ ಸತ್ಯರಾಜ್ ಮತ್ತು ಫಹಾದ್ ಫಾಸಿಲ್ ಅವರ ಈ ಅಪರೂಪದ ಫೋಟೊವನ್ನು ಹಂಚಿಕೊಂಡಿದೆ. “1980ರ ದಶಕದಲ್ಲಿ ಸತ್ಯರಾಜ್ ಮತ್ತು ಫಹಾದ್ ಫಾಸಿಲ್ ” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದೆ. ಫಹಾದ್ ಫಾಸಿಲ್ ಜನಪ್ರಿಯ ನಿರ್ದೇಶಕ, ನಿರ್ಮಾಪಕ, ಮತ್ತು ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ.ಎರಡು ತಮಿಳು ಚಿತ್ರಗಳಲ್ಲಿ ಸತ್ಯರಾಜ್ ಜತೆಗೂ ಫಹಾದ್ ಫಾಸಿಲ್ ತೆರೆ ಹಂಚಿಕೊಂಡಿದ್ದರು. ಆ ಎರಡೂ ಸಿನಿಮಾಗಳ ಬ್ಲಾಕ್ಬಸ್ಟರ್ ಹಿಟ್ ಕಂಡಿವೆ.

ಇದನ್ನೂ ಓದಿ: Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

ನಟ ಫಹಾದ್ ಫಾಸಿಲ್ (Fahad Faasil) ಅವರು ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರೆಂದಿಗೂ ಬಾಲಿವುಡ್​ನತ್ತ ಮುಖ ಮಾಡಿಲ್ಲ. ಪರಭಾಷೆಯ ‘ಸೂಪರ್ ಡಿಲಕ್ಸ್’, ‘ವಿಕ್ರಮ್’, ‘ಪುಷ್ಪ’ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಈ ಮೊದಲು ಹಿಂದಿ ಆಫರ್​ಗಳು ಬಂದಿದ್ದವು. ಆದರೆ, ಅವರಿಗೆ ಯಾವುದೂ ಇಷ್ಟ ಆಗಿಲ್ಲ.

ಫಹಾದ್ ಫಾಸಿಲ್ ಕೊನೆಯದಾಗಿ ನಿರ್ದೇಶಕ ಜಿತು ಮಾಧವನ್ ಅವರ ‘ಆವೇಶಂ’ ನಲ್ಲಿ ಕಾಣಿಸಿಕೊಂಡರು. ಇದು ವಿಶ್ವಾದ್ಯಂತ ರೂ 150 ಕೋಟಿ ರೂ, ಗಳಿಕೆ ಕಂಡಿದೆ. ಫಹಾದ್ ಫಾಸಿಲ್ ನಟನೆಯ ‘ಪುಷ್ಪ: ದಿ ರೂಲ್’, ‘ಮಾರೀಸನ್’ ಮತ್ತು ರಜನಿಕಾಂತ್ ಅವರ ‘ವೆಟ್ಟೈಯನ್’ ಸೇರಿದಂತೆ ಮೂರು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

ಸತ್ಯರಾಜ್ ಕೊನೆಯದಾಗಿ ತಮಿಳು ಚಿತ್ರ ‘ಸಿಂಗಪುರ ಸಲೂನ್’ ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ‘ತೋಜರ್ ಚೆಗುವೇರಾ’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ. ಸತ್ಯರಾಜ್ ಅವರು 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಮತ್ತು ಎಸ್‌.ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಕ್ಕಾಗಿ ಸತ್ಯರಾಜ್ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಅವರು ಇನ್ನೂ ಅನೇಕ ಪ್ರೇಕ್ಷಕರಿಗೆ ಕಟ್ಟಪ್ಪ ಎಂತಲೇ ಪರಿಚಿತರಾಗಿದ್ದಾರೆ.

Continue Reading
Advertisement
Mamata Banerjee
ಪ್ರಮುಖ ಸುದ್ದಿ34 mins ago

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Bengaluru News
ಕರ್ನಾಟಕ35 mins ago

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

CAA
ಸಂಪಾದಕೀಯ44 mins ago

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Amit Shah
ದೇಶ1 hour ago

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

PBKS vs RR
ಕ್ರೀಡೆ1 hour ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ1 hour ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Isha Ambani
ದೇಶ2 hours ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ2 hours ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು2 hours ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ2 hours ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ17 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ19 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌