Kantara Movie | ʻವ್ಯಕ್ತಿಯನ್ನು ಗೇಲಿ ಮಾಡುವ ಹಕ್ಕು ಯಾರಿಗೂ ಇಲ್ಲʼ: ಮಾಲಿವುಡ್‌ ನಟಿ ಮಂಜು ಪಾತ್ರೋಜ್‌! - Vistara News

ಮಾಲಿವುಡ್

Kantara Movie | ʻವ್ಯಕ್ತಿಯನ್ನು ಗೇಲಿ ಮಾಡುವ ಹಕ್ಕು ಯಾರಿಗೂ ಇಲ್ಲʼ: ಮಾಲಿವುಡ್‌ ನಟಿ ಮಂಜು ಪಾತ್ರೋಜ್‌!

ಮಾಲಿವುಡ್‌ ನಟಿ ಮಂಜು ಪಾತ್ರೋಜ್‌ (Kantara Movie) ಚಿತ್ರದ ಬಾಡಿ ಶೇಮಿಂಗ್‌ ಕುರಿತಾಗಿ ಮಾತನಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ನಟಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಇನ್ನೂ ಹಲವೆಡೆ ಹೌಸ್‌ಫುಲ್‌ ಪ್ರದರ್ಶನಗಳು ಕಾಣುತ್ತಿವೆ. ಹದಿನಾರು ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಇದೀಗ 400 ಕೋಟಿ ರೂ. ಕ್ಲಬ್ ಸೇರುವತ್ತ ದಾಪುಗಾಲು ಇಟ್ಟಿದೆ. ಕನ್ನಡದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದಿರುವ ಸಿನಿಮಾ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಇವೆಲ್ಲದರ ನಡುವೆ ಮಾಲಿವುಡ್‌ ನಟಿ ಮಂಜು ಪಾತ್ರೋಜ್‌ ಚಿತ್ರದ ಬಾಡಿ ಶೇಮಿಂಗ್‌ ಕುರಿತಾಗಿ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ನಟಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ʻʻಎರಡು ದಿನಗಳ ಹಿಂದೆ ಕಾಂತಾರ ಸಿನಿಮಾ ನೋಡಿದ್ದೆ. ಸಿನಿಮಾ ತುಂಬಾ ಇಷ್ಟವಾಯಿತು. ಆದರೆ ನಾನು ನೋಡಿದ ಒಂದು ದೃಶ್ಯದಲ್ಲಿ ಒಂದು ಪಾತ್ರವನ್ನು ಬಾಡಿ ಶೇಮಿಂಗ್‌ಗೆ ಒಳಪಡಿಸಲಾಗಿದೆʼʼ ಎಂದು ನಟಿ ಮಂಜು ಪಾತ್ರೋಜ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನನ್ನದೇ: ರಾಕಿಂಗ್‌ ಸ್ಟಾರ್‌ ಯಶ್‌!

ʻʻಕಾಂತಾರ ಚಿತ್ರವನ್ನು ಎರಡು ದಿನಗಳ ಹಿಂದೆ ನೋಡಿದ್ದೆ. ರಿಷಬ್ ಶೆಟ್ಟಿ ‘ಶಿವ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅತ್ಯಂತ ಸುಂದರವಾಗಿ ನಿರ್ವಹಿಸಿದ್ದಾರೆ. ಕೊನೆಯಲ್ಲಿ ಶಿವನಾಗಿ ಬಂದ ರಿಷಬ್ ಅವರು ಅದ್ಭುತವಾಗಿ ನಟನೆ ಮಾಡಿದ್ದಾರೆ. ಚಿತ್ರದ ಛಾಯಾಗ್ರಹಣ, ನಿರ್ದೇಶನ ಮತ್ತು ಪಾತ್ರಗಳ ಅಭಿನಯ ಎಲ್ಲವೂ ಇಷ್ಟವಾಯಿತು. ಆದರೆ ಸಿನಿಮಾದಲ್ಲಿ ಒಂದು ದೃಶ್ಯ ಮಾತ್ರ ನನಗೆ ತುಂಬಾ ಬೇಸರವಾಯ್ತು. ಅದರ ಬಗ್ಗೆ ಬರೆಯಬೇಕು ಎಂದು ತುಂಬಾ ಸಲ ಅಂದುಕೊಂಡಿದ್ದೆ. ಚಿತ್ರದ ಮೊದಲ ಭಾಗದಲ್ಲಿ ಗೆಳೆಯರಿಬ್ಬರು ನಡೆದುಕೊಂಡು ಹೋಗುವ ದೃಶ್ಯವಿದೆ. ಅವರೊಬ್ಬರು ಸುಂದರ ಎಂಬ ಹೆಸರಿರುವವರು. ಮಾತಿನ ಮಧ್ಯೆ ಸುಂದನ ಗೆಳೆಯ, ಈ ಸಂಜೆ ನಿನ್ನ ಹೆಂಡತಿಯನ್ನು ತಂದು ಹೊಡೆಯೋಣ ಎಂದು ವ್ಯಂಗ್ಯವಾಡುತ್ತಾನೆ. ಆಗ ಸುಂದರನ ಮುಖದಲ್ಲಿ ಅಸೂಯೆ ಎದ್ದು ಕಾಣಿಸುತ್ತದೆ. ಇನ್ನೊಂದು ಕಡೆಯಿಂದ ಆತನ ಪತ್ನಿ ನಗುತ್ತಾಳೆ. ಈ ವೇಳೆ ಆಕೆಯ ಚಾಚಿರುವ ಹಲ್ಲನ್ನು ಎಮ್ಮೆಯ ಹಲ್ಲುಗಳಿಗೆ ಹೋಲಿಸಿ ತೋರಿಸಲಾಗುತ್ತದೆ. ಇದನ್ನು ನೋಡಿದ ಪ್ರೇಕ್ಷಕರು ಥಿಯೇಟರ್‌ನಲ್ಲಿ ಬಿದ್ದು ಬಿದ್ದು ನಗುತ್ತಾರೆ. ಅವರು ಯಾಕೆ ನಗುತ್ತಿದ್ದಾರೆ ಎಂಬುದೇ ಅರ್ಥವಾಗದ ವಿಷಯ. ಅಷ್ಟೊಂದು ಸುಂದರವಾದ ಸಿನಿಮಾದಲ್ಲಿ ಬಾಡಿ ಶೇಮ್ ಮಾಡುವ ಅಗತ್ಯವೇನಿತ್ತು. ಅದರಿಂದ ಸಿಗುವ ಲಾಭವೇನು? ಇದೊಂದು ಸಣ್ಣ ದೃಶ್ಯ. ಆದರೆ ಸಣ್ಣ ವಿಷಯವಲ್ಲ. ದೇಹವು ಹಾಸ್ಯದ ವಸ್ತುವಲ್ಲ. ಅದನ್ನು ನೋಡಿ ನಗಲು ಗೇಲಿ ಮಾಡುವ ಹಕ್ಕು ಯಾರಿಗೂ ಇಲ್ಲ. ಒಬ್ಬ ವ್ಯಕ್ತಿಯ ಆತ್ಮವಿಶ್ವಾಸವನ್ನು ಸೋಲಿಸುವ ಹಕ್ಕು ಯಾರಿಗೂ ಇಲ್ಲ ಸ್ನೇಹಿತರೇʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಪುನೀತ್‌ ಈಗ ದೈವನರ್ತಕ : ವೈರಲ್‌ ಆಗ್ತಿದೆ ಪೋಸ್ಟರ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

South Cinema

 L2 Empuraan: ಮೋಹನ್‌ಲಾಲ್ ಬರ್ತ್‌ಡೇ; L2E-ಎಂಪುರಾನ್‌ ಲುಕ್‌ ಔಟ್‌!

 L2 Empuraan: ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು.

VISTARANEWS.COM


on

L2 Empuraan first look poster shared by Prithviraj Sukumaran
Koo

ಬೆಂಗಳೂರು: ಇಂದು ಮಾಲಿವುಡ್‌ ಸ್ಟಾರ್‌ ಮೋಹನ್‌ಲಾಲ್ (Mohanlal as Khureshi Abraam ) ಅವರ 64ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಟ ಪೃಥ್ವಿರಾಜ್ ಸುಕುಮಾರನ್ ʻL2 ಎಂಪುರಾನ್‌ʼ (L2 Empuraan) ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೃಥ್ವಿರಾಜ್ ಅವರ ನಿರ್ದೇಶನದಲ್ಲಿ, ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ 2019ರ ಬ್ಲಾಕ್‌ಬಸ್ಟರ್ ಚಲನಚಿತ್ರ ʻಲೂಸಿಫರ್‌ʼನ ಮುಂದುವರಿದ ಭಾಗವಾಗಿದೆ.

ʻL2 ಎಂಪುರಾನ್‌ʼಗಾಗಿ ಮೋಹನ್‌ಲಾಲ್‌ನ ಜಾಕೆಟ್ ಮತ್ತು ಪ್ಯಾಂಟ್‌ ಧರಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ನಡುವೆ ಖಡಕ್‌ ಆಗಿ ನಡೆದುಕೊಂಡು ಹೋಗುತ್ತಿರುವ ಪೋಸ್ಟರ್‌ ಇದು. ಲೂಸಿಫರ್ ಪೃಥ್ವಿರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಅದಾದ ಬಳಿಕ ʻಬ್ರೋ ಡ್ಯಾಡಿʼ ಸಿನಿಮಾವನ್ನು ಒಟ್ಟಿಗೆ ಮಾಡಿದ್ದರು. ಮತ್ತೆ ಈ ಜೋಡಿ L2E-ಎಂಪುರಾನ್‌ ಮೂಲಕ ಒಂದಾಗಿದೆ.

ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು. ಮೋಹನ್‌ಲಾಲ್ ಅವರಲ್ಲದೆ, ಚಿತ್ರದಲ್ಲಿ ವಿವೇಕ್ ಒಬೆರಾಯ್, ಮಂಜು ವಾರಿಯರ್, ಟೊವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್, ಇಂದ್ರಜಿತ್ ಸುಕುಮಾರನ್, ಸಾನಿಯಾ ಐಯಪ್ಪನ್, ಸಾಯಿ ಕುಮಾರ್, ಜಾನ್ ವಿಜಯ್, ಸಚಿನ್ ಖೇಡೇಕರ್, ಬೈಜು ಸಂತೋಷ್, ಕಲಾಭವನ್ ಶಾಜೋನ್, ಫಾಜಿಲ್, ಸುರೇಶ್ ಚಂದ್ರ ಮೆನನ್ ಮತ್ತು ನೈಲಾ ಉಷಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮೋಹನ್ ಲಾಲ್ ಕೊನೆಯದಾಗಿ ಕಾಣಿಸಿಕೊಂಡದ್ದು ಫ್ಯಾಂಟಸಿ ನಾಟಕ ಮಲೈಕೊಟ್ಟೈ ವಾಲಿಬನ್ (2024), ಇದನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದಾರೆ.

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading

ಮಾಲಿವುಡ್

Mohan Lal: ಅಣ್ಣಾವ್ರ ಹಾಡನ್ನು ಎಂಜಾಯ್‌ ಮಾಡಿದ ಮೋಹನ್ ಲಾಲ್; ವಿಡಿಯೊ ವೈರಲ್‌!

Mohan Lal: ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ರಾಜ್‌ಕುಮಾರ್‌ ಅವರ ʻಎರಡೂ ಕನಸುʼ ಚಿತ್ರದ ʻಎಂದೆಂದೂ ನಿನ್ನನ್ನು ಮರೆತು” ಹಾಡನ್ನು ಪ್ಲೇ ಮಾಡಿ ಗುನುಗುತ್ತಿದ್ದರು ಮೋಹನ್ ಲಾಲ್.

VISTARANEWS.COM


on

Mohan Lal watching dr rajkumars super hit song
Koo

ಬೆಂಗಳೂರು: ಕನ್ನಡದ ಕುಲಪುತ್ರ ದಿವಂಗತ ಡಾ. ರಾಜ್ ಕುಮಾರ್ (Dr. Rajkumar) ಎಂದರೆ ಅದು ಕೇವಲ ವ್ಯಕ್ತಿಯಲ್ಲ. ಅವರು ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಸಾರ್ವಭೌಮ ಬಣ್ಣ ಹಚ್ಚಿದ್ದರು. ರಾಜ್‌ಕುಮಾರ್‌ ಅವರನ್ನು ಇಷ್ಟ ಪಡದವರೇ ಇಲ್ಲ. ಇನ್ನು ಮಾಲಿವುಡ್ ನಟ ಮೋಹನ್ ಲಾಲ್‌ಗೂ (Mohan Lal) ರಾಜ್‌ ಅಂದರೆ ಪ್ರೀತಿ. ರಾಜ್‌ಕುಮಾರ್‌ ಅವರ ʻಎರಡೂ ಕನಸುʼ ಚಿತ್ರದ ʻಎಂದೆಂದೂ ನಿನ್ನನ್ನು ಮರೆತು” ಹಾಡನ್ನು ಪ್ಲೇ ಮಾಡಿ ಗುನುಗುತ್ತಿದ್ದರು ಮೋಹನ್ ಲಾಲ್. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. 50 ವರ್ಷಗಳ ಹಿಂದೆ ತೆರೆಕಂಡಿದ್ದ ‘ಎರಡು ಕನಸು’ ಚಿತ್ರಕ್ಕೆ ದೊರೆ- ಭಗವಾನ್ ಆಕ್ಷನ್ ಕಟ್ ಹೇಳಿದ್ದರು. ವಾಣಿ ಅವರು ಬರೆದ ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬಂದಿತ್ತು.30 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ ‘ಎರಡು ಕನಸು’ ಸಿನಿಮಾ 1982ರಲ್ಲಿ ರೀ ರಿಲೀಸ್ ಆಗಿ ಶತದಿನೋತ್ಸವ ಆಚರಿಸಿತ್ತು. 2015ರಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಸಿನಿಮಾ ಗಮನ ಸೆಳೆದಿತ್ತು. ಇದೀಗ ಮೋಹನ್‌ಲಾಲ್‌ ತಮ್ಮ ಮೊಬೈಲ್ ನಲ್ಲಿ ರಾಜ್ ಕುಮಾರ್ ಹಾಡು ಕೇಳುತ್ತ ಅದೇ ರೀತಿ ಹಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Actor Mohanlal: 56ನೇ ಬಾರಿಗೆ ಮೋಹನ್ ಲಾಲ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಈ ಫೇಮಸ್‌ ನಟಿ!

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading

ಮಾಲಿವುಡ್

Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

Turbo Trailer Out: ಭೀಷ್ಮ ಪರ್ವಂ (2022) ನಂತರ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಮೊದಲ ಪೂರ್ಣ ಪ್ರಮಾಣದ ಮಾಸ್ ಎಂಟರ್‌ಟೈನರ್ ಸಿನಿಮಾ ಇದು. ಇಲ್ಲಿ ರಾಜ್‌ .ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ. ಟ್ರೈಲರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಮೇ 23ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

VISTARANEWS.COM


on

Turbo Trailer Out mammoottys raj b shetty looks menacing
Koo

ಬೆಂಗಳೂರು: ಮಮ್ಮುಟ್ಟಿ (Mammootty) ಅವರು ಈ ಹಿಂದೆ ಘೋಷಿಸಿದ ಮೂರು ಸಿನಿಮಾಗಳ ಬಿಡುಗಡೆಗಳಲ್ಲಿ ʻಟರ್ಬೋʼ (Turbo Trailer Out) ಕೂಡ ಒಂದು. ರಾಜ್ ಬಿ ಶೆಟ್ಟಿ (Raj B Shetty) ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು ಗಮನ ಸೆಳೆದಿದೆ. ರಾಜ್ ಅವರು ಪವರ್​ಫುಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಾಜ್‌ ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ. ಟ್ರೈಲರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಮೇ 23ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

ಭೀಷ್ಮ ಪರ್ವಂ (2022) ನಂತರ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಮೊದಲ ಪೂರ್ಣ ಪ್ರಮಾಣದ ಮಾಸ್ ಎಂಟರ್‌ಟೈನರ್ ಸಿನಿಮಾ ಇದು. 133 ಸೆಕೆಂಡ್​ಗಳ ಟ್ರೈಲರ್‌ನಲ್ಲಿ ಆರಂಭದಲ್ಲಿ ಜೋಸ್​ನ​ (ಮಮ್ಮುಟಿ) ಪರಿಚಯ ಮಾಡಿಕೊಡುವ ಪ್ರಯತ್ನ ನಡೆದಿದೆ. ಟ್ರೈಲರ್‌ನಲ್ಲಿ ಭರ್ಜರಿ ಆ್ಯಕ್ಷನ್ ತೋರಿಸಲಾಗಿದೆ. ಇದರ ಜತೆಗೆ ಕಾಮಿಡಿ ಕೂಡ ಇದೆ. ಟ್ರೈಲರ್‌ನಲ್ಲಿ ರಾಜ್ ಬಿ ಶೆಟ್ಟಿ ಅವರು ಕೂಡ ಕಾಣಿಸುತ್ತಾರೆ. ರಾಜ್​ ಬಿ ಶೆಟ್ಟಿ ಎಂಟ್ರಿ ಸಖತ್ ಆಗಿದೆ. ರಾಜ್‌ ಬಿ ಶೆಟ್ಟಿ ಮಲಯಾಳಂನಲ್ಲೂ ಅವರೇ ಡಬ್ ಮಾಡಿದ್ದಾರೆ.

ಇದನ್ನೂ ಓದಿ: Palanku Movie: 17 ವರ್ಷ ಪೂರೈಸಿದ ಮಮ್ಮುಟ್ಟಿ ಅಭಿನಯದ ʻಪಲುಂಕುʼ ಸಿನಿಮಾ, ಇದರ ಕತೆ ಹೃದಯಸ್ಪರ್ಶಿ

ಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ.

‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಕನ್ನಡ ಸಿನಿರಸಿಕರ ಮುಂದೆ ರಾಜ್. ಶೆಟ್ಟಿ ಬಂದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ‘ಗರುಡಗಮನ ವೃಷಭವಾಹನ’ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ತಾವೇ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ಶಿವ ಆಗಿ ಅಬ್ಬರಿಸಿದ್ದರು. ಸದ್ಯ ‘ಟರ್ಬೋ’ ಚಿತ್ರದಲ್ಲೂ ವೆಟ್ರಿವೇಲ್ ಷಣ್ಮುಗಂ ಎನ್ನುವ ಖಡಕ್ ಪಾತ್ರದಲ್ಲಿ ದರ್ಬಾರ್ ನಡೆಸಿದ್ದಾರೆ.

ಇದೊಂದು ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಆಗಿದ್ದು ಮೇ 23ಕ್ಕೆ ತೆರೆಗೆ ಬರಲಿದೆ. ಆಟೋ ಬಿಲ್ಲ ಆಗಿ ತೆಲುಗು ನಟ ಸುನೀಲ್ ಕೂಡ ಕಾಣಿಸಿಕೊಂಡಿದ್ದಾರೆ. ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕಿ ಸೇರಿದಂತೆ ದೊಡ್ಡ ತಾರಾಗಣ ‘ಟರ್ಬೋ’ ಚಿತ್ರದಲ್ಲಿದೆ. ವಿಷ್ಣು ಶರ್ಮಾ ಛಾಯಾಗ್ರಹಣ, ಕ್ರಿಸ್ಟೋ ಕ್ಸೇವಿಯರ್ ಸಂಗೀತ ಚಿತ್ರಕ್ಕಿದೆ.

Continue Reading

ಮಾಲಿವುಡ್

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Aavesham Releases On OTT: ಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

VISTARANEWS.COM


on

Aavesham Releases On OTT Fahadh Faasil Hit Malayalam Film
Koo

ಬೆಂಗಳೂರು: ಫಹಾದ್ ಫಾಸಿಲ್ (Fahadh Faasil) ಅಭಿನಯದ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾ ʻಆವೇಶಂʼ ಒಟಿಟಿಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ʻಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಇದೀಗ ಅಮೆಜಾನ್‌ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಡಬ್ಬಿಂಗ್ ಆವೃತ್ತಿಗಳ ಕುರಿತು ಇನ್ನೂ ಯಾವುದೇ ಅಪಡೇಟ್‌ ಬಂದಿಲ್ಲ. ಫ್ರಂಟ್ ರೋ ಅವರ ಟ್ವೀಟ್ ಪ್ರಕಾರ, ಆವೇಶಂನ ಡಿಜಿಟಲ್ ಹಕ್ಕುಗಳು 35 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಈ ಮೂಲಕ ದುಲ್ಕರ್ ಸಲ್ಮಾನ್ ಅವರ ʻಕಿಂಗ್ ಆಫ್ ಕೋಥಾʼದ ದಾಖಲೆಯನ್ನು ಮುರಿದಿದೆ ಎಂದು ವರದಿಯಾಗಿದೆ. ʻಕಿಂಗ್ ಆಫ್ ಕೋಥಾʼ 32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.

ಜಿತು ಮಾಧವನ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಕೂಡ ನಟಿಸಿದ್ದಾರೆ. ಮಲಯಾಳಂ ಸಿನಿಮಾದ ಪ್ರಮುಖ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಓದಲೆಂದು ಬೆಂಗಳೂರಿಗೆ ಬರುವ ಮೂವರು ಹುಡುಗರು ಅಲ್ಲಿ ಜಗಳದಲ್ಲಿ ಸಿಕ್ಕಿ ಬಿದ್ದು ಸ್ಥಳೀಯ ದರೋಡೆಕೋರನ ನೆರವಿನಿಂದ ಗೆಲುವು ಪಡೆಯಲು ಪ್ರಯತ್ನಿಸುವಂತಹ ಕಥೆ ಹೊಂದಿದೆ. ಆ ಸ್ಥಳೀಯ ದರೋಡೆಕೋರ ಬೇರಾರು ಅಲ್ಲ, ಫಹಾದ್‌ ಫಾಸಿಲ್‌.

ಸಂಪೂರ್ಣ ಬಿಳಿ ಉಡುಗೆಯಲ್ಲಿ, ಚಿನ್ನದ ಸರಗಳೊಂದಿಗೆ, ದಪ್ಪ ಮೀಸೆಯನ್ನು ಹೊಂದಿರುವ ಫಹಾದ್‌ ಪಾತ್ರ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಫಹಾದ್ ಅವರು ರಂಗಾ ಪಾತ್ರವನ್ನು ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತು ಈ ಮುಂಚೆ ಹೇಳಿಕೊಂಡಿದ್ದರು. ʻʻನಾನು ಈ ಮೊದಲು ಅಂತಹ ಪಾತ್ರಗಳನ್ನು ಮಾಡಿಲ್ಲ. ಆದ್ದರಿಂದ ಈ ಕಥೆ ನನ್ನ ಬಳಿಗೆ ಬಂದಾಗ, ನಾನು ಹೌದು ಎಂದು ಹೇಳಿದೆ. ಈ ಹಿಂದೆ ನಾನು ಮಾಡಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಇತ್ತು. ಅಲ್ಲದೆ, ನಾನು ಕನ್ನಡ ಮತ್ತು ಮಲಯಾಳಂ ಮಿಶ್ರಿತ ಭಾಷೆ ಮಾತನಾಡಬೇಕು ಎಂದು ಮನೋರಮಾ ಹೇಳಿದ್ದರುʼʼ ಎಂದರು. ಇವು 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಮಲಯಾಳ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು.

ಇದನ್ನೂ ಓದಿ: Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

ಇನ್ನು ಫಹಾದ್‌ ಫಾಸಿಲ್‌ ಹಲವು ಬಹು ನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಪ್ಯಾನ್‌ ಇಂಡಿಯಾ ಚಿತ್ರ ‌ʼಪುಷ್ಪ 2: ದಿ ರೂಲ್‌ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಫಹಾದ್‌ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದ ಮೊದಲ ಭಾಗ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂಡು ಕೊಟ್ಟಿತ್ತು. ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರದಲ್ಲಿ ಫಹಾದ್‌ ನಟಿಸಿದ್ದರು. ಎರಡನೇ ಭಾಗದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ಇದರ ಜತೆಗೆ ಹಲವು ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್‌ ಸ್ಟಾರ್‌ಗಳಾದ ರಜನಿಕಾಂತ್‌- ಅಮಿತಾಭ್‌ ಬಚ್ಚನ್‌ ಅವರ ʼವೆಟ್ಟೈಯನ್‌ʼ ಸಿನಿಮಾದಲ್ಲಿ ಫಹಾದ್‌ ಅಭಿನಯಿಸುತ್ತಿದ್ದಾರೆ. ಇದನ್ನು ಟಿ.ಜೆ.ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್‌, ದುಶಾರಾ ವಿಜಯನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಫಾಹದ್‌ ಮಲಯಾಳಂನ ʼಆವೇಶಮ್‌ʼ, ʼಪಾಟ್ಟುʼ, ʼಹನುಮಾನ್‌ ಗೇರ್‌ʼ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading
Advertisement
Love Case
ವಿಜಯಪುರ6 mins ago

Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

Bengaluru Traffic
ಬೆಂಗಳೂರು8 mins ago

Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

car care tips
ಆಟೋಮೊಬೈಲ್26 mins ago

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Viral Video
ವೈರಲ್ ನ್ಯೂಸ್48 mins ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ50 mins ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ60 mins ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ1 hour ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

namaz in road mangalore
ದಕ್ಷಿಣ ಕನ್ನಡ1 hour ago

Namaz: ಸಾರ್ವಜನಿಕ ನಮಾಜ್‌ ನಿಲ್ಲಿಸದಿದ್ದರೆ ಹನುಮಾನ್‌ ಚಾಲೀಸಾ ಪಠನ: ವಿಹಿಂಪ ಎಚ್ಚರಿಕೆ

Veer Savarkar
ದೇಶ1 hour ago

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Drain pipe collapse
ದೇಶ1 hour ago

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ23 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌