South Cinema
Megha Shetty: ವಿನಯ್ ರಾಜ್‌ಕುಮಾರ್ ಸಿನಿಮಾಗೆ ಮೇಘಾ ಶೆಟ್ಟಿ ನಾಯಕಿ!
Megha Shetty: ಚಿತ್ರದ ಚಿತ್ರೀಕರಣ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದ್ದು, ಮೊದಲ ದಿನದ ಚಿತ್ರೀಕರಣ ಕಡೂರಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ನಟನಾಗಿ ವಿನಯ್ ರಾಜ್ ಕುಮಾರ್ ಅವರು ನಟಿಸುತ್ತಿರುವುದು ಅಧಿಕೃತವಾಗಿದ್ದು, ನಿರ್ಮಾಪಕರು ಇದೀಗ ಚಿತ್ರದ ನಾಯಕ ನಟಿಯಾಗಿ ಮೇಘಾ ಶೆಟ್ಟಿಯವರನ್ನು ಅಂತಿಮಗೊಳಿಸಿದ್ದಾರೆ.
ಬೆಂಗಳೂರು: ʻಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ (Megha Shetty) ಆಗಾಗ ರೀಲ್ಸ್ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮೇಘಾ ದೊಡ್ಮನೆ ಕುಟಂಬಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾ ಬಹಳ ಹಿಂದೆ ಸೆಟ್ಟೇರಿತ್ತು. ಆದರೆ ನಾಯಕಿ ಯಾರೆಂಬುದರ ಬಗ್ಗೆ ಸಿನಿರಸಿಕರು ಕುತೂಹಲದಿಂದ ಕಾದಿದ್ದರು. ಇದೀಗ ಮೇಘಾ ಶೆಟ್ಟಿ ನಾಯಕಿ ಎಂಬುದು ಕನ್‌ಫರ್ಮ್ ಆಗಿದೆ.
ಚಿತ್ರದ ಚಿತ್ರೀಕರಣ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದ್ದು, ಮೊದಲ ದಿನದ ಚಿತ್ರೀಕರಣ ಕಡೂರಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ನಾಯಕ ನಟನಾಗಿ ವಿನಯ್ ರಾಜ್ ಕುಮಾರ್ ಅವರು ನಟಿಸುತ್ತಿರುವುದು ಅಧಿಕೃತವಾಗಿದ್ದು, ನಿರ್ಮಾಪಕರು ಇದೀಗ ಚಿತ್ರದ ನಾಯಕ ನಟಿಯಾಗಿ ಮೇಘಾ ಶೆಟ್ಟಿಯವರನ್ನು ಅಂತಿಮಗೊಳಿಸಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ʻಟ್ರಿಬಲ್ ರೈಡಿಂಗ್ʼ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು ಮೇಘಾ ಶೆಟ್ಟಿ. ಧನ್ವೀರ್ ನಟನೆಯ ʻಕೈವʼ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಕಾಲಿಟ್ಟಿದ್ದಾರೆ. ‘ಲಂಡನ್ ಕೆಫೆ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಕೃಷ್ಣ ಅಭಿನಯದ ದಿಲ್ಪಸಂದ್ ಚಿತ್ರದಲ್ಲಿಯೂ ನಟಿಸಿದ್ದರು.
ಇದನ್ನೂ ಓದಿ: Megha Shetty: ಮದುವೆ ಫಿಕ್ಸ್ ಆಯ್ತಾ ಬಂಗಾರ? ಮೂಗು ಚುಚ್ಚಿಸಿಕೊಂಡ ಮೇಘಾ ಶೆಟ್ಟಿಗೆ ಫ್ಯಾನ್ಸ್ ಪ್ರಶ್ನೆ!
ಗ್ರಾಮಾಯಣ ಸಿನಿಮಾ
ಚಿತ್ರವನ್ನು ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್‌ಟೈನರ್ ನಿರ್ಮಿಸುತ್ತಿದೆ. ಹಳ್ಳಿಯ ಹಿನ್ನೆಲೆಯಲ್ಲಿ ವಿನಯ್ ಗ್ರಾಮೀಣ ಯುವಕನ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಖ್ಯಾತ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಅಪರ್ಣಾ ಕೂಡ ಇದರಲ್ಲಿದ್ದಾರೆ. ಚಿತ್ರತಂಡ ಅಂತಿಮ ಹಂತದ ಕಾಸ್ಟಿಂಗ್‌ನಲ್ಲಿದ್ದು, ಶೀಘ್ರದಲ್ಲೇ ಸಂಪೂರ್ಣ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.
ಅಂದೊಂದಿತ್ತು ಕಾಲ ಚಿತ್ರದ ಚಿತ್ರೀಕರಣ ಕೂಡ ವಿನಯ್ ಮುಗಿಸಿದ್ದಾರೆ. ಗಣೇಶ್ ಚತುರ್ಥಿ ದಿನ ಅಂದೊಂದಿತ್ತು ಕಾಲ ಚಿತ್ರದಿಂದ ಟೀಸರ್ ಕೂಡ ರಿಲೀಸ್ ಆಗಿದೆ. ಪೆಪೆ ಸಿನಿಮಾ ಕೂಡ ರಿಲೀಸ್ ಆಗುವ ಹಂತದಲ್ಲಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಶಂಕರ್ ಮತ್ತು ಶ್ರೀರಾಮ್ ಬಿ ಎಮ್ ಕೋಲಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
South Cinema
Kamal Haasan: ಕಮಲ್ ಹಾಸನ್ ಜನುಮದಿನಕ್ಕೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಮರು ಬಿಡುಗಡೆ!
Kamal Haasan: ಬಾಂಬೆ ಮೂಲದ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲೀರ್ ಅವರ ಜೀವನವನ್ನು ಆಧರಿಸಿದೆ .’ನಾಯಕನ್’ ಬಿಡುಗಡೆಯಾಗಿ 36 ವರ್ಷಗಳ ನಂತರ 4ಕೆ ರೂಪದಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.
ಬೆಂಗಳೂರು: ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ (Kamal Haasan starrer Nayakan) ಅಭಿನಯದ `ನಾಯಕನ್’ ನವೆಂಬರ್ 3ರಂದು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. ಕಮಲ್ ಹಾಸನ್ ಜನುಮದಿನದ ಪ್ರಯುಕ್ತ ಈ ಸಿನಿಮಾ ರಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಶರಣ್ಯ ಮತ್ತು ಕಾರ್ತಿಕಾ ಕೂಡ ಕಾಣಿಸಿಕೊಂಡಿದ್ದರು. ಜನಗರಾಜ್, ವಿಜಯನ್, ಎಂ.ವಿ. ವಾಸುದೇವ ರಾವ್, ದೆಹಲಿ ಗಣೇಶ್, ನಿಜಲ್ಗಲ್ ರವಿ, ನಾಸರ್ ಮತ್ತು ತಾರಾ ಪೋಷಕ ಪಾತ್ರಗಳಲ್ಲಿದ್ದಾರೆ. ʻನಾಯಕನ್ʼ ಸಿನಿಮಾವು ಹಾಲಿವುಡ್ ಕ್ಲಾಸಿಕ್ ‘ದಿ ಗಾಡ್‌ಫಾದರ್’ ನಿಂದ ಪ್ರೇರಿತವಾಗಿದ್ದು, ಬಾಂಬೆ ಮೂಲದ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲೀರ್ ಅವರ ಜೀವನವನ್ನು ಆಧರಿಸಿದೆ. ‘ನಾಯಕನ್’ ಬಿಡುಗಡೆಯಾಗಿ 36 ವರ್ಷಗಳ ನಂತರ 4ಕೆ ರೂಪದಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.
ಚಲನಚಿತ್ರ ಮಂದಿರಗಳಲ್ಲಿ ಇತ್ತೀಚೆಗೆ ಹೀರೊಗಳ ಹಳೆಯ ಸೂಪರ್ ಹಿಟ್ ಸಿನಿಮಾಗಳನ್ನು ಮರು-ಬಿಡುಗಡೆ ಮಾಡುವುದು ಕಾಮನ್ ಆಗಿದೆ. ಹೊಸ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿರುವ ಕಾರಣ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರಲು ಹಿಂದಿನ ಜನಪ್ರಿಯ ತಾರೆಯರ ಜನ್ಮ ವಾರ್ಷಿಕೋತ್ಸವದಂದು ವಿಶೇಷ ಪ್ರದರ್ಶನಗಳನ್ನು ನಡೆಸುತ್ತಿವೆ.
‘ನಾಯಕನ್’ ಸಿನಿಮಾ ವಿತರಕರು ಇತ್ತೀಚೆಗೆ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾವನ್ನು ತಮಿಳುನಾಡು, ಕರ್ನಾಟಕ ಮತ್ತು ಕೇರಳದಾದ್ಯಂತ ಎಲ್ಲ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಸೂಪರ್ ಹಿಟ್ ಚಿತ್ರ ‘ನಾಯಕನ್’ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. 1988ರಲ್ಲಿ ಆಸ್ಕರ್ ಪ್ರಶಸ್ತಿಗಳಿಗಾಗಿ ನಾಮೀನೇಟ್ ಆಗಿತ್ತು.
“ನಾವು ಈ ಹಿಂದೆ ಹಳೆಯ ಹಿಟ್ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಆದರೆ ಅದು ಸೀಮಿತ ಪ್ರಮಾಣದಲ್ಲಿ ಇತ್ತು. ಆದ್ದರಿಂದ ಕಾರ್ಯಸಾಧ್ಯವಾಗಿರಲಿಲ್ಲ. ಅಮಿತಾಭ್ ಬಚ್ಚನ್ ಅವರ ಸಿನಿಮಾಗಳೂ ಮತ್ತೆ ಮರು ಬಿಡುಗಡೆಯಾದಾಗ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ದರಿಂದ ನಾವು ಸ್ಕ್ರೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆವುʼʼ ಎಂದು INOX ಲೀಸರ್‌ನ ಮುಖ್ಯ ಪ್ರೋಗ್ರಾಮಿಂಗ್ ಅಧಿಕಾರಿ ರಾಜೇಂದ್ರ ಸಿಂಗ್ ಜ್ಯಾಲಾ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
The unimaginable feeling of watching #Nayagan on the big screen 🔥🔥🔥 who else can't wait! #Ulaganayagan @ikamalhaasan pic.twitter.com/TMHCb7qczj
— AGS Cinemas (@agscinemas) September 19, 2023
ಕಮಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳು
ಸದ್ಯ ಕಮಲ್ ಅವರ ಕೈಯಲ್ಲಿ ನಾಲ್ಕು ಪ್ರಾಜೆಕ್ಟ್‌ಗಳಿವೆ. ಅವುಗಳಲ್ಲಿ ಯಾವುದೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ನಾಗ್ ಅಶ್ವಿನ್ ಅವರ ಮುಂದಿನ ಚಿತ್ರ ಕಲ್ಕಿಯಲ್ಲಿ (Kalki cinema) ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ ಇತರ ಪ್ರಮುಖ ತಾರೆಗಳು ಇದ್ದಾರೆ. ಎಸ್ ಶಂಕರ್ ಅವರ 1996ರ ಚಲನಚಿತ್ರದ ಮುಂದುವರಿದ ಭಾಗವಾದ ಇಂಡಿಯನ್-2 ಸಿನಿಮಾದಲ್ಲಿಯೂ ಕಮಲ್ ಇದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ನಡೆಯುತ್ತಿದೆ. ಇವುಗಳ ಹೊರತಾಗಿ H. ವಿನೋದ್ ಅವರೊಂದಿಗೆ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದು ತಾತ್ಕಾಲಿಕವಾಗಿ ʻKH233- ರೈಸ್ ಟು ರೂಲ್ʼ ಎಂದು ಹೆಸರಿಸಲಾಗಿದೆ. ಕಮಲ್ ಹಾಸನ್ ಅವರು KH234ಗಾಗಿ 37 ವರ್ಷಗಳ ನಂತರ ಮಣಿರತ್ನಂ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್, ತ್ರಿಷಾ ಮತ್ತು ಜಯಂ ರವಿ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
South Cinema
Parineeti Chopra: ಮದುವೆಯಲ್ಲಿ ಫೋನ್, ಕ್ಯಾಮೆರಾಗಳಿಗೆ ಟೇಪ್, 100 ಭದ್ರತಾ ಸಿಬ್ಬಂದಿ!
Parineeti Chopra: ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.
ಬೆಂಗಳೂರು: ಸೆಪ್ಟೆಂಬರ್ 24ರಂದು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Raghav Chadha) ಅವರ ವಿವಾಹ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈಗಾಗಲೇ ಜೋಡಿ ಉದಯಪುರಕ್ಕೆ (Parineeti Chopra wedding) ತಲುಪಿದೆ. ಸದ್ಯ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ವಿವಾಹದಲ್ಲಿ 100 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಮದುವೆಯಲ್ಲೂ ಕಟ್ಟುನಿಟ್ಟಿನ ಭದ್ರತಾ ನಿಯಮಗಳಿವೆ. ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.
ಹೋಟೆಲ್ ಮೂಲಗಳ ಪ್ರಕಾರ, ಮದುವೆಯ ಸಿದ್ಧತೆಗಳ ಜತೆಗೆ ಕಾರ್ಯಕ್ರಮದ ಫೋಟೊಗಳು ಮತ್ತು ವಿಡಿಯೊಗಳು ಲೀಕ್ ಆಗದ್ದಂತೆ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಹೋಟೆಲ್‌ಗೆ ಪ್ರವೇಶಿಸುವವರ ಮೊಬೈಲ್ ಕ್ಯಾಮೆರಾಗಳಿಗೆ ನೀಲಿ ಬಣ್ಣದ ಟೇಪ್ ಅನ್ನು ಅಂಟಿಸಲಾಗುತ್ತದೆ. ಇದರಿಂದ ಅವರು ಮದುವೆ ಸಮಾರಂಭದಲ್ಲಿ ಯಾವುದೇ ವೀಡಿಯೊ-ಫೋಟೋಗ್ರಾಫ್ ತೆಗೆದುಕೊಳ್ಳುವಂತಿಲ್ಲ. ಈ ನೀಲಿ ಟೇಪ್‌ನ ವಿಶೇಷತೆ ಏನೆಂದರೆ, ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಅಳವಡಿಸಿದ ನಂತರ ಯಾರಾದರೂ ಅದನ್ನು ತೆಗೆದರೆ, ಟೇಪ್‌ನಲ್ಲಿ ಬಾಣದ ಚಿಹ್ನೆ ಗೋಚರಿಸುತ್ತದೆ. ಸೆಕ್ಯೂರಿಟಿ ಅವರು ಪರಿಶೀಲಿಸಿದಾಗ ಕ್ಯಾಮೆರಾ ಬಳಸಲು ಟೇಪ್ ತೆಗೆದಿರುವುದು ಗೊತ್ತಾಗಿ ಬಿಡುತ್ತದೆ. ಈ ನಿರ್ಬಂಧವು ವಿಶೇಷವಾಗಿ ಹೋಟೆಲ್ ಸಿಬ್ಬಂದಿಗೆ, ಬಾಣಸಿಗರಿಗೆ ಅನ್ವಯಿಸುತ್ತದೆ. ಕರಣ್ ಜೋಹರ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ ಅವರಂತಹ ಸೆಲೆಬ್ರಿಟಿಗಳು ಇಂದೇ (ಸೆ. 23) ಉದಯಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Parineeti Chopra; ನಾಳೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಅದ್ಧೂರಿ ಮದುವೆ; ಭರ್ಜರಿ ಸಿದ್ಧತೆ!
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ 20 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.
ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ಚಮ್ಕೀಲಾ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.
South Cinema
Actress Nayanthara: ಯೂಟ್ಯೂಬರ್ ಸಿನಿಮಾಗೆ ನಯನತಾರಾ ನಾಯಕಿ; ಅಚ್ಚರಿಗೊಂಡ ಫ್ಯಾನ್ಸ್!
Actress Nayanthara : ಯೂಟ್ಯೂಬರ್ ಡ್ಯೂಡ್ ವಿಕ್ಕಿ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ. ಈಗ ನಟಿ ಯೂಟ್ಯೂಬರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಲು ತಯಾರಾಗಿದ್ದಾರೆ. ಇದು ಫ್ಯಾನ್ಸ್‌ಗೆ ಅಚ್ಚರಿ ತಂದಿದೆ.
ಬೆಂಗಳೂರು: ನಯನತಾರಾ (Actress Nayanthara: ) ಇನ್ನೂ ಜವಾನ್ (Jawan Movie)ಸಿನಿಮಾ ಸಕ್ಸೆಸ್ ಮೂಡ್‌ನಲ್ಲಿದ್ದಾರೆ. ಈ ಸಿನಿಮಾ ಮೂಲಕ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ಹಿಂದಿಗೂ ಪರಿಚಯವಾದರು. ನಯನತಾರಾ ಹೊಸಬರ ಜತೆ ಕೆಲಸ ಮಾಡುವುದಿಲ್ಲ ಎಂದು ಹಲವರ ವಾದವಾಗಿತ್ತು. ಜವಾನ್ ಯಶಸ್ಸಿನ ಉತ್ತಂಗದಲ್ಲಿರುವ ನಟಿ ಇನ್ನು ಹೊಸಬರ ಜತೆ ಕೆಲಸ ಮಾಡುವುದೇ ಇಲ್ಲ ಎಂಬ ಚರ್ಚೆಗಳು ಆಗಿತ್ತು. ಆದರೀಗ ನಟಿ ಈ ವದಂತಿಗಳನ್ನು ಸುಳ್ಳು ಮಾಡಿದ್ದಾರೆ. ಯೂಟ್ಯೂಬರ್ ಡ್ಯೂಡ್ ವಿಕ್ಕಿ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ. ಈಗ ನಟಿ ಯೂಟ್ಯೂಬರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಲು ತಯಾರಾಗಿದ್ದಾರೆ. ಇದು ಫ್ಯಾನ್ಸ್‌ಗೆ ಅಚ್ಚರಿ ತಂದಿದೆ.
ಯೂಟ್ಯೂಬರ್ ಡ್ಯೂಡ್ ವಿಕ್ಕಿ ನಿರ್ದೇಶನದದ ಈ ಸಿನಿಮಾಗೆ ನಯನತಾರಾ ನಾಯಕಿ. ಈಗಾಗಲೇ ಚಿತ್ರತಂಡ ಮೋಷನ್ ಪೋಸ್ಟರ್ ಹಂಚಿಕೊಂಡಿದೆ. ಈ ಯೋಜನೆಗೆ ‘ಮನ್ನಂಗಟ್ಟಿ’ ಎಂದು ಹೆಸರಿಡಲಾಗಿದೆ. ಮತ್ತು ಅದರ ಅಡಿಬರಹ, ‘1960 ರಿಂದ ಮನ್ನಂಗಟ್ಟಿ (Mannangatti)’. ಈ ಚಿತ್ರಕ್ಕೆ ‘ಸಿನ್ಸ್ 1960’ ಎನ್ನುವ ಅಡಿಬರಹ ಇದೆ. ಲಕ್ಷ್ಮಣ್ ಕುಮಾರ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ಬಾಬು, ಗೌರಿ ಕಿಶನ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.
ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಆರ್‌ಡಿ ರಾಜಶೇಖರ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದಾರೆ. ಡ್ಯೂಡ್ ವಿಕ್ಕಿ ಬರೆದು ನಿರ್ದೇಶಿಸಿದ ಈ ಚಿತ್ರವನ್ನು ಪ್ರಿನ್ಸ್ ಪಿಕ್ಚರ್ಸ್ ಬೆಂಬಲಿಸಿದೆ. ನಯನತಾರಾ ನಟನೆಯ ಮತ್ತೊಂದು ಸಿನಿಮಾ ‘ಉರೈವನ್’ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಇದರ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಜಯಂ ರವಿ ಹೀರೋ. ಈ ಸಿನಿಮಾಗೆ ಎ ಪ್ರಮಾಣಪತ್ರ ಸಿಕ್ಕಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೂಡ ಇದೇ ದಿನ ರಿಲೀಸ್ ಆಗುತ್ತಿದ್ದು, ಭರ್ಜರಿ ಪೈಪೋಟಿ ಉಂಟಾಗಲಿದೆ.
ಇದನ್ನೂ ಓದಿ: Actress Nayanthara: ನಿರ್ದೇಶಕ ಅಟ್ಲೀ ಜತೆ ಇರುವ ಫೋಟೊ ಹಂಚಿಕೊಂಡ ನಯನತಾರಾ; ಮುನಿಸಿಗೆ ತೆರೆ ಎಳೆದರೆ?
ಇದನ್ನೂ ಓದಿ: Actress Nayanthara: ನಿರ್ದೇಶಕ ಅಟ್ಲೀ ಜತೆ ಇರುವ ಫೋಟೊ ಹಂಚಿಕೊಂಡ ನಯನತಾರಾ; ಮುನಿಸಿಗೆ ತೆರೆ ಎಳೆದರೆ?
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲ್ವಾ ನಯನತಾರಾ?
ಶಾರುಖ್ ಖಾನ್ (Shah Rukh Khan) ಅವರ ಬ್ಲಾಕ್‌ಬಸ್ಟರ್ ಸಿನಿಮಾ ʻಜವಾನ್ʼನಲ್ಲಿ ನಟಿ ನಯನತಾರಾ(Nayanthara) ಏಜೆಂಟ್ ನರ್ಮದಾ ರಾಯ್ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾರುಖ್-ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ, ನಯನತಾರಾ ಅವರಿಗೆ ಅಟ್ಲೀ ಕುರಿತು ಅಸಮಾಧಾನ ಇದೆ ಎಂದು ವರದಿಯಾಗಿತ್ತು. ಚಿತ್ರದಲ್ಲಿ ತಮ್ಮ ಪಾತ್ರವನ್ನು ಹಲವು ಕಡೆ ಕತ್ತರಿಸಿದ್ದರಿಂದ ಅಟ್ಲಿಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದೂ ವರದಿಯಾಗಿತ್ತು.
ಚಿತ್ರದಲ್ಲಿ ವಿಕ್ರಮ್ ರಾಥೋಡ್ (ಶಾರುಖ್) ಪತ್ನಿಯಾಗಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಪ್ರಕಾರ ದೀಪಿಕಾ ಅವರದ್ದು ಅತಿಥಿ ಪಾತ್ರವಲ್ಲ. ಬದಲಿಗೆ ಜವಾನ್ ಅನ್ನು “ಶಾರುಖ್-ದೀಪಿಕಾ” ಚಿತ್ರದಂತೆ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದೆ. ಇದು ಅತಿಥಿ ಪಾತ್ರವಾಗಿರಲಿಲ್ಲ. ಜವಾನ್ ಅನ್ನು ಬಹುತೇಕ ಶಾರುಖ್-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು.
South Cinema
Vijay Raghavendra: ವಿಜಯ್ ರಾಘವೇಂದ್ರ -ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್ ಔಟ್!
Vijay Raghavendra: ಪೊಲೀಸ್ ಖದರ್‌ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರು: ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಸೋನು ಗೌಡ (sonu gowda) ನಟನೆಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್ ಕುತೂಹಲ ಹೆಚ್ಚಿಸಿದೆ. ಪೊಲೀಸ್ ಖದರ್‌ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಹಾಗೂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ʻʻಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ. ಮರೀಚಿ ಎಂದರೆ ಬ್ರಹ್ಮನ ಮಗ. ದೇವದಾಸ್ ಹಾಗೂ ಅಸುರರ ಗಾಡ್ ಫಾದರ್. ನಮ್ಮ ಚಿತ್ರದಲ್ಲಿ ಒಳ್ಳೆಯದು ಕೆಟ್ಟದಕ್ಕೆ ಮರೀಚಿ ಗಾಡ್ ಫಾದರ್ ಎಂದು ತೆಗೆದುಕೊಂಡಿದ್ದೇವೆ. ತುಂಬ ಅದ್ಭುತವಾಗಿ ಕಥೆ ಮೂಡಿ ಬಂದಿದೆ. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಸ್ಕ್ರೀನ್ ಪ್ಲೇ, ಸ್ಟೋರಿ ಎಲ್ಲವೂ ಚೆನ್ನಾಗಿ ಬಂದಿದೆʼʼ ಎಂದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ʻʻಮರೀಚಿ ಟೀಸರ್ ಲಾಂಚ್ ಆಗಿದೆ. ಟ್ಯಾಗ್ ಲೈನ್ ಹೇಳುವಂತೆ God father of good and bad ಎನ್ನುವಾಗೇ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಥೆ ಎಣೆಯುವ ಮನಸ್ಸು ಆಗುತ್ತದೆ. ನಮಗೂ ಅದೇ ಬೇಕಿರುವುದು. ಮರೀಚಿ ಸಿನಿಮಾ ಒಂದು ಕ್ರೈಮ್ ಥ್ರಿಲ್ಲರ್ ಟೀಸರ್ ನೋಡಿದರೆ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಮರೀಚಿ ಸಿನಿಮಾದಲ್ಲಿ ತಾಂತ್ರಿಕ ವರ್ಗದವರನ್ನು ಎಷ್ಟು ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದರೋ ಅದೇ ರೀತಿ ತೆರೆಮೇಲೆ ಬರುವ ಕಲಾವಿದರನ್ನು ಅಷ್ಟೇ ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದಾರೆ. ಅದರಲ್ಲಿ ನಾನು ಒಬ್ಬ ಇದ್ದೇನೆ ಎಂದು ಹೇಳಲು ಖುಷಿಯಾಗುತ್ತದೆʼʼ ಎಂದರು.
ಇದನ್ನೂ ಓದಿ: Vijay Raghavendra: ವಿಜಯ್ ರಾಘವೇಂದ್ರರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್-ಪ್ರಿಯಾ ದಂಪತಿ
ನಟಿ ಸೋನುಗೌಡ ಮಾತನಾಡಿ, ʻʻಮರೀಚಿ ಸ್ಟೋರಿ ಲೈನ್ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಪರ್‌ಫಾರ್ಮೆನ್ಸ್‌ಗೆ ತುಂಬ ಸ್ಕೋಪ್ ಇತ್ತು. ನನ್ನ ಪಾತ್ರ ತುಂಬ ಚೆನ್ನಾಗಿ ಬಂದಿದೆ. ಹ್ಯಾಪಿ ನ್ಯೂ ಇಯರ್‌ನಲ್ಲಿ ಗಂಡ ಹೆಂಡತಿಯಾಗಿ ನಾನು ವಿಜಯ್ ಸರ್ ನಟಿಸಿದ್ದೆವು. ಇಲ್ಲಿಯೂ ಗಂಡ ಹೆಂಡತಿಯಾಗಿ ನಟಿಸಿದ್ದೇವೆ. ಎಮೋಷನಲ್ ಆಗಿ ಮರೀಚಿ ಸಿನಿಮಾ ಮೂಡಿಬಂದಿದೆ. ಸ್ಕ್ರೀನ್ ನಲ್ಲಿ ನಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಲು ನಾನು ಕೂಡ ಕಾತುರಳಾಗಿದ್ದೇನೆʼʼ ಎಂದರು.
ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ .
ವಿಜಯ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸುತ್ತಿದ್ದು. ಅಭಿ ದಾಸ್, ಸ್ಪಂದನಾ ಸೋಮಣ್ಣ, ಆರ್ಯನ್, ಶ್ರುತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
-
ಪ್ರಮುಖ ಸುದ್ದಿ22 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ದೇಶ23 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ17 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ20 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ23 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ21 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ
-
ಉಡುಪಿ22 hours ago
Weather report : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ತಗ್ಗದ ಅಬ್ಬರ