ನೋಡಲೇಬೇಕಾದ ಸಿನಿಮಾ : Sirf Ek Bandaa Kaafi Hai; ನ್ಯಾಯದ ಕನ್ನಡಿ, ಹೋರಾಟದ ಛಲಕ್ಕೆ ಮುನ್ನುಡಿ ಬರೆಯುವ ಚಿತ್ರ - Vistara News

South Cinema

ನೋಡಲೇಬೇಕಾದ ಸಿನಿಮಾ : Sirf Ek Bandaa Kaafi Hai; ನ್ಯಾಯದ ಕನ್ನಡಿ, ಹೋರಾಟದ ಛಲಕ್ಕೆ ಮುನ್ನುಡಿ ಬರೆಯುವ ಚಿತ್ರ

ಅಪರಾಧಿ ಬಾಬಾ ವಿರುದ್ಧ ವಾದಿಸುವ ಸಾಮಾನ್ಯ ಸೆಷನ್ಸ್ ಕೋರ್ಟ್ ವಕೀಲ ಸೋಲಂಕಿಗೆ ಐದು ವರ್ಷಗಳ ಸುದೀರ್ಘ ಹೋರಾಟದಲ್ಲಿ ಬಾಬಾನ ಅನುಯಾಯಿಗಳು ಅಭಿಮಾನಿಗಳು ಹಾಗೂ ಪ್ರಭಾವಿಗಳು ಏನೆಲ್ಲ ತೊಂದರೆ ನೀಡಲು ಪ್ರಯತ್ನಿಸುತ್ತಾರೆ ಎನ್ನುವ ರೋಚಕತೆಯೇ ಇಡೀ ಸಿರ್ಫ್‌ ಏಕ್‌ ಬಂದಾ ಕಾಫಿ ಹೈ ಸಿನಿಮಾದ ಸಾರ.

VISTARANEWS.COM


on

Sirf Ek Bandaa Kaafi Hai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಶಿವರಾಜ್‌ ಡಿ.ಎನ್‌.ಎಸ್

Shivaraj DNS

ಇಲ್ಲಿ ಅಪರಾಧ ಎಷ್ಟು ಸೂಕ್ಷ್ಮವೋ ಆಪಾದಿತನೂ ಅಷ್ಟೇ ಸೂಕ್ಷ್ಮ, ಇವೆರಡರ ನಡುವೆ ಕತೆ ಕಟ್ಟುವುದು ಅತಿ ಸೂಕ್ಷ್ಮದ ಸವಾಲಾದರೂ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಸವಾಲು ಸ್ವೀಕರಿಸಿ ಸವಾಲಿಗೆ ಪ್ರತಿ ಸವಾಲು ಹಾಕುವ ವಕೀಲರ ವಾದ ವಿವಾದದ, ತೀಕ್ಷ್ಣ ಸಂಭಾಷಣೆಯೊಂದಿಗೆ ಕಾನೂನು ಅರ್ಥೈಸುವ ನಿಟ್ಟಿನಲ್ಲಿ ಕಟ್ಟಿರುವ ಸಿನಿಮಾ. ಈ ಕಾನೂನು ಹೋರಾಟದ ಕಥೆಯಲ್ಲಿ ಯಾವುದೇ ರೀತಿಯಲ್ಲಿಯೂ ಧರ್ಮವನ್ನು ಅವಮಾನಿಸದೆ ಅಧರ್ಮ, ಅನ್ಯಾಯಕಷ್ಟೆ ಪೆಟ್ಟು ಕೊಡುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕನ ಜಾಣ್ಮೆ ಮೆಚ್ಚುವಂಥದ್ದು, ಯಾಕೆಂದರೆ.. ಇತ್ತೀಚಿನ ದಿನಗಳ ಸಿನಿಮಾಗಳಲ್ಲಿ ಒಂದನ್ನ ಹೊಗಳುವ ಭರದಲ್ಲಿ ಇನ್ನೊಂದನ್ನ ಅವಮಾನಿಸಿರುತ್ತಾರೆ. ಅಂತಹ ತಪ್ಪು ಈ ಸಿನಿಮಾದಲ್ಲಿ ಆಗಿಲ್ಲ .

ಲೈಂಗಿಕ ದೌರ್ಜನ ಪ್ರಕರಣವೊಂದು ಸುದೀರ್ಘ ಐದು ವರ್ಷಗಳ ಕಾಲ ವಾದ – ವಿವಾದ ನಡೆಯುವ ಕ್ಲೀನ್‌ ಕೋರ್ಟ್ ಡ್ರಾಮಾ ಇಲ್ಲಿದೆ. ಅನ್ಯಾಯದ ವಿರುದ್ಧ, ಸತ್ಯದ ಪರ ಹೋರಾಡುವ ನ್ಯಾಯವಾದಿ ಸೋಲಂಕಿಯ ಸ್ಥಿತಿಗತಿಗಳೊಂದಿಗೆ ತೆರೆದಿಡುತ್ತ ಸಾಗುವ ಸಿನಿಮಾ, ಕಾನೂನಿನ ಮುಂದೆ ಎಲ್ಲರೂ ಒಂದೇ, ಅಪರಾಧಿ ಯಾರೇ ಆದರೂ ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುವ ನಿಟ್ಟಿನಲಿ ಸಾಮಾನ್ಯ ವಕೀಲನೊಬ್ಬ ಕಾರ್ಯಪ್ರವೃತ್ತನಾದಾಗ ಏನೆಲ್ಲ ಸಮಸ್ಯೆ ಎದುರಾಗುತ್ತವೆ? ಅವನ್ನೆಲ್ಲ ಮೆಟ್ಟಿ ನಿಲ್ಲುವುದು ಅಸಾಧ್ಯವೇ? ಲೈಂಗಿಕ ದೌರ್ಜನ್ಯ ಪ್ರಕರಣ ಸೂಕ್ಷ್ಮವಾದದ್ದು, ಅದು ಹೇಗೆ ವಿಚಾರಣೆಗೆ ಒಳಪಡಬೇಕು, ಯಾರು ಸರಿ- ಯಾರು ತಪ್ಪು ಅನ್ನುವುದು ತೀರ್ಮಾನ ಆಗುವುದಕ್ಕಿಂತಲೂ ಮೊದಲು ದೌರ್ಜನ್ಯಕ್ಕೆ ಒಳಗಾದವರನ್ನ ಹೇಗೆ ಉಪಚರಿಸಬೇಕು ಅನ್ನುವುದನ್ನ ಅರ್ಥೈಸುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ, ಏಕಾಂಗಿಯಾಗಿ ಹೋರಾಡುವ ಸೋಲಂಕಿಯ ಶ್ರದ್ಧಾ ಭಕ್ತಿ ಪ್ರಾಮಾಣಿಕತೆಗೆ ಪ್ರೇಕ್ಷಕರು ಮನಸೋಲೋದು ಖಂಡಿತ. ಮಾತಿನ ಮಧ್ಯೆ ಸೋಲಂಕಿ ಹೇಳುವ ಉಪಕತೆ ಹಾಗು ರಾಮಾಯಣ ಮಹಾ ಭಾರತದ ಸಂದರ್ಭಗಳು ವಾವ್ ಎನ್ನುವಂತಿವೆ.

Movie Review Of Sirf Ek Bandaa Kaafi Hai

ಕೆಲ ಕಮರ್ಷಿಯಲ್‌ ಚಿತ್ರಗಳಲ್ಲಿ ಕಟಕಟೆಯಲ್ಲಿಯೊ, ವಕೀಲನಾಗಿಯೋ ನಿಂತು ಉದ್ದುದ್ದ ಡ್ರಾಮೆಟಿಕ್‌ ಮಾಸ್‌ ಡೈಲಾಗ್‌ಗಳ ಆಡಂಬರ ಎಲ್ಲೂ ನುಸುಳಿಲ್ಲ. ಕೋರ್ಟ್‌ ದೃಶ್ಯದಲ್ಲಿ ಅಷ್ಟೆ ಅಲ್ಲದೇ ಸಣ್ಣ ಗಲ್ಲಿಯಲಿ ಬೆನ್ನಟ್ಟುವ ದೃಶ್ಯ, ಜನ ಜಂಗುಳಿಯಿಂದ ಕೂಡಿದ ಸಾರ್ವಜನಿಕ ಸ್ಥಳ ಎಲ್ಲವೂ ನೈಜತೆಯಿಂದ ಕೂಡಿವೆ. ಚಿತ್ರದಲ್ಲಿ ಕತೆಯನ್ನು ಯಾವುದನ್ನೂ ಅತಿಯಾಗಿಸದೆ ಎಷ್ಟು ಬೇಕೋ ಅಷ್ಟೆ ಎನ್ನುವಂತೆ ಸಮರ್ಪಕವಾಗಿ ಹೆಣೆದಿದ್ದಾರೆ. ಪೋಕ್ಸೊ ಆಕ್ಟ್ ಹಾಗೂ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿರುವ ಈ ಸಿನಿಮಾ ಕತೆ, ಚಿತ್ರಕತೆ, ಸಂಭಾಷಣೆಯ ಬರವಣಿಗೆಯಿಂದ ಅಭಿನಯದವರೆಗೂ ಕೂಡಿರುವ ಸೂಕ್ಷ್ಮತೆ ಜೊತೆಗೆ ಮನೋಜ್‌ ಬಾಜಪೇಯಿ ಅವರ ಮನೋಜ್ಞ ಅಭಿನಯದಿಂದ ಮನಸ್ಸಿನಲ್ಲಿ ಉಳಿಯುತ್ತದೆ.

ನಮ್ಮ ವೈರಿ ನಿಜಕ್ಕೂ ಎದುರಾಳಿಯಲ್ಲ. ನಮ್ಮೊಳಗಿನ ಭಯ, ಆತಂಕ, ನೋವು, ನಾವು ಮೊದಲಿಗೆ ಅವುಗಳೊಂದಿಗೆ ಹೋರಾಡಬೇಕು ಎನ್ನುವ ಧೈರ್ಯ ತುಂಬುವ ಮಾತನಾಡುವ ಪರಮೇಶ್ವರನ ಭಕ್ತ ಸೋಲಂಕಿ… ಸಾರ್ʼ ಫೀಸ್.. ಫೀಸ್ ಕಿತನಾ ದೇನಿಹೋಗಿ ಎಂದಾಗ.. ಕೆಲ ಕ್ಷಣ ಯೋಚಿಸಿ, ಹುಡುಗಿಯ ಕಡೆ ನೋಡಿ ಮುಗುಳು ನಗೆಯೊಂದಿಗೆ ಗುಡಿಯಾ ಕಿ ಸ್ಮೈಲ್’ ಎಂದಾಗ ಪ್ರೇಕ್ಷಕ ಲಾಯರ್‌ ಸೋಲಂಕಿ ಪಾತ್ರಕ್ಕೆ ಮನಸೋಲುತ್ತಾನೆ. ಸಾಮಾನ್ಯನಾದರೂ ದೇವ ಮಾನವ ಎನಿಸಿಕೊಂಡ ಬಾಬಾನನ್ನು, ಅವನ ಅನುಯಾಯಿಗಳನ್ನು ಪ್ರಭಾವಿಗಳು ಎಲ್ಲರ ವಿರುದ್ಧ ನಿಂತು ಹೋರಾಡುವುದು, ತನ್ನ ಜೀವಕ್ಕಿರುವ ಬೆದರಿಕೆಯ ಅರಿವಿದ್ದರೂ, ಕಾನೂನು ಪ್ರಕ್ರಿಯೆಗಳಿಗೆ ಹಗಲು ರಾತ್ರಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಶ್ರಮಿಸುವುದು ಗ್ರೇಟ್ ಅನಿಸುತ್ತದೆ. ದೌರ್ಜನ್ಯಕ್ಕೆ ಒಳಗಾದ ಆಕೆಯನ್ನು ಸಮಾಜ ಅವಳೇ ಅಪರಾಧಿ ಎನ್ನುವಂತೆ ಬೀರುವ ನೋಟ ಹಾಗೂ ಆಕೆಯ ಮನಸ್ಥಿತಿ ಪರಿಸ್ಥಿತಿ ನೋಡಿ ಆಲೋಚನೆಗೆ ದೂಡುತ್ತದೆ. ಒಟ್ಟಾರೆಯಾಗಿ ಚಿತ್ರಕ್ಕೆ ಕನೆಕ್ಟ್ ಆದ ಪ್ರೇಕ್ಷಕನಿಗೆ ಕ್ಲೈಮ್ಯಾಕ್ಸ್ ಹಂತ ಕುತೂಹಲ ಕೆರಳಿಸಿ ಕೊನೆಗೆ ನಿರಾಳ ಅನುಭವ ನೀಡುತ್ತದೆ.

Movie Review Of Sirf Ek Bandaa Kaafi Hai

ಜೂತೆ ಜೆ ಗಲೆಮೆ, ದಾಲೆ ಸಾಚ್‌ ಕ ಫಂದಾ, ದಾಲಿಯೇ ಜಸ್ಟೀಸ್‌ ಹೆ ಹೈ ರಬ್‌ ಕಾ ಬಂದಾ… ಎನ್ನುವ ಟೈಟಲ್ ಟ್ರಾಕ್ ನೊಂದಿಗೆ ಸೋಲಂಕಿ ಪಾತ್ರ ಪರಿಚಯಿಸುತ್ತ ಶುರುವಾಗುವ ಸಿನಿಮಾ, ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಕುಟುಂಬ ಸ್ಟೇಷನ್‌ಗೆ ಹೋಗಿ ಕಂಪ್ಲೈಟ್ ಕೊಡುತ್ತಿರುವ ದೃಶ್ಯದೊಂದಿಗೆ ಸಾಗುತ್ತದೆ. ಆಕೆಗೆ ಆ ಸ್ಥಿತಿ ಎದುರಾಗಿದ್ದು ಹೇಗೆ? ಅಪರಾಧಿ ಕಾನೂನಿಂದ ತಪ್ಪಿಸಿಕೊಳ್ಳಲೂ ಅವನ ಬಳಗ ಕಾನೂನಾತ್ಮಕವಾಗಿ ಕೋರ್ಟಿನ ಒಳಗೂ ಹೊರಗೂ ಏನೆಲ್ಲ ತಂತ್ರ ಹೆಣೆಯುತ್ತಾರೆ? ಅಪರಾಧಿ ಬಾಬಾ ವಿರುದ್ಧ ವಾದಿಸುವ ಸಾಮಾನ್ಯ ಸೆಷನ್ಸ್ ಕೋರ್ಟ್ ವಕೀಲ ಸೋಲಂಕಿಗೆ ಐದು ವರ್ಷಗಳ ಸುದೀರ್ಘ ಹೋರಾಟದಲ್ಲಿ ಬಾಬಾನ ಅನುಯಾಯಿಗಳು ಅಭಿಮಾನಿಗಳು ಹಾಗೂ ಪ್ರಭಾವಿಗಳು ಏನೆಲ್ಲ ತೊಂದರೆ ನೀಡಲು ಪ್ರಯತ್ನಿಸುತ್ತಾರೆ ಎನ್ನುವ ರೋಚಕತೆಯೇ ಇಡೀ ಸಿನಿಮಾ.

ದೇವ ಮಾನವನಿಂದ ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಕೊಡುವ ಹೋರಾಟದ ಕತೆ ಎಂದು ಒಂದೇ ಮಾತಿನಲ್ಲಿ ಹೇಳುವಷ್ಟು ಸುಲಭವಾಗಿಲ್ಲ ಸಿನಿಮಾ. ಪ್ರತಿ ಹಂತದಲ್ಲೂ ಪ್ರಕರಣ ಮುಂದೇನೋ ತಿರುವು ಪಡೆದುಕೊಳ್ಳಬಹುದು ಎನ್ನುವ ಕುತೂಹಲ ಉಳಿಸಿಕೊಂಡೆ ಸಾಗುತ್ತದೆ. ಅಂತಿಮವಾಗಿ ಸಂತ್ರಸ್ತೆಗೆ ನ್ಯಾಯ ಸಿಗುತ್ತಾ ಅದು ಹೇಗೆ ಆಪಾದಿತ ಬಾಬಾ ಅಪರಾಧಿ ಎಂದು ಸಾಬೀತಾಗುತ್ತದೆಯೆ?.. ಆದರೂ ಅವನಿಗೆ ಏನು ಶಿಕ್ಷೆ ಇತ್ಯಾದಿ ಕುತೂಹಲಕ್ಕೆ ಸಿನಿಮಾ ನೋಡಲೇಬೇಕಷ್ಟೆ.

Movie Review Of Sirf Ek Bandaa Kaafi Hai

ಈ ಸಿನಿಮಾ ಅಸಾರಾಂ ಬಾಪು ಅತ್ಯಾಚಾರ ಪ್ರಕರಣ ಕುರಿತಾದ ಸತ್ಯಘಟನೆ ಆಧಾರಿತ ಚಿತ್ರ ಹಾಗೂ ಆ ಪ್ರಕರಣ ಪ್ರಮುಖ ವಕೀಲರಾದ ಸೋಲಂಕಿಯವರಿಂದ ಅನುಮತಿ ಪಡೆದು ಈ ಚಿತ್ರ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುತ್ತಿದೆ.

ಈ ಚಿತ್ರಕ್ಕೆ ದೀಪಕ್ ಕಿನ್ಗೃಣಿ ಕತೆ ರಚಿಸಿದ್ದು, ಅಪೂರ್ವ್ ಸಿಂಗ್ ಕಾರ್ಕಿ ನಿರ್ದೇಶನ ಮಾಡಿದ್ದಾರೆ. ಮನೋಜ್ ಬಾಜಪೇಯಿ ಅವರು ಸೋಲಂಕಿ ಪಾತ್ರ ನಿರ್ವಹಿಸಿದ್ದು, ಸಂತ್ರಸ್ತೆ ಪಾತ್ರದಲ್ಲಿ ಅದ್ರಿಜ ಸಿನ್ಹ ನಟಿಸಿದ್ದಾರೆ. ಸೂರ್ಯ ಮೋಹನ್ ಕುಲಶ್ರೇಷ್ಠ ಬಾಬಾ ಪಾತ್ರ ನಿರ್ವಹಿಸಿದ್ದಾರೆ. ಸಹಪಾತ್ರಗಳಲ್ಲಿ ಸೂರ್ಯ ಮೋಹನ್, ನಿಖಿಲ್ ಪಾಂಡೆ, ಜೈಹಿಂದ್ ಕುಮಾರ್, ದುರ್ಗಾ ಶರ್ಮಾ ಮುಂತಾದವರು ನಟಿಸಿದ್ದು ಚಿತ್ರಕ್ಕೆ ಬಾನುಶಾಲಿ ಸ್ಟೂಡಿಯೋಸ್ ಹಾಗೂ ಜೀ ಸ್ಟುಡಿಯೋ ಬಂಡವಾಳ ಹೂಡಿದ್ದು‌ ಸದ್ಯ ZEE5 ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಹಲವು ರೀತಿಯ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಆಸಕ್ತರು ವೀಕ್ಷಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Shakhahaari Movie: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದೆ. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Shakhahaari Movie In OTT amzon Prime
Koo

ಬೆಂಗಳೂರು: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ (Shakhahaari Movie) ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿತ್ತು. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಮೂಲಗಳ ಪ್ರಕಾರ ʻಶಾಖಾಹಾರಿʼ ಸಿನಿಮಾ (Shakhahaari Movie OTT) ಡಿಜಿಟಲ್‌ ರೈಟ್ಸ್‌ ಅಮೆಜಾನ್‌ ಪ್ರೈಂ (Amazon Prime) ಪಾಲಾಗಿದೆ. ಮುಂದಿನ ವಾರ ಒಟಿಟಿಗೆ ಕಾಲಿಡಿದೆ ಎಂದು ವರದಿಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ . ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್‌ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್‌ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್‌ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು.

ಇದನ್ನೂ ಓದಿ: Shakhahaari Movie: ಬೆಂಗಳೂರಿನಲ್ಲೇ ಕನ್ನಡದ “ಶಾಖಾಹಾರಿʼಯನ್ನು ಕೊಂದ ಮಲಯಾಳಂ ಸಿನಿಮಾ! ಕನ್ನಡಿಗರಿಗೇ ಸವಾಲ್‌!

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ.ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

South Cinema

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Tamannaah Bhatia: ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು. ಇದೀಗ ನಟಿ ತಮನ್ನಾಗೆ ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ.

VISTARANEWS.COM


on

Tamannaah Bhatia Summoned in Illegal IPL Streaming Case
Koo

ಮುಂಬೈ: ಫೇರ್‌ಪ್ಲೇ ಆ್ಯಪ್‌ನಲ್ಲಿ ಅಕ್ರಮ ಐಪಿಎಲ್ ಪಂದ್ಯಗಳ ಸ್ಟ್ರೀಮಿಂಗ್ (Illegal IPL Streaming Case) ಪ್ರಕರಣದಲ್ಲಿ ಟಾಲಿವುಡ್‌ ನಟಿ ತಮನ್ನಾ ಭಾಟಿಯಾ (Tamannaah Bhatia) ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಮಹಾರಾಷ್ಟ್ರ ಸೈಬರ್ ಸೆಲ್ (Maharashtra Cyber Cell ) ವಿಚಾರಣೆಗೆ ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಹೆಸರು ಕೂಡ ಈ ಮುಂಚೆ ಕೇಳಿಬಂದಿತ್ತು.

ಫೇರ್‌ಪ್ಲೇ ಆ್ಯಪ್‌ನಲ್ಲಿ (Fairplay App) ಐಪಿಎಲ್ 2023ರ ಅಕ್ರಮ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ವಯಾಕಾಮ್‌ಗೆ ಕೋಟ್ಯಂತರ ರೂ. ನಷ್ಟ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್‌ ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಕರೆದಿದೆ. ಏಪ್ರಿಲ್ 29ರಂದು ಮಹಾರಾಷ್ಟ್ರ ಸೈಬರ್‌ಗೆ ಹಾಜರಾಗುವಂತೆ ನಟಿಗೆ ತಿಳಿಸಲಾಗಿದೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು.

ಇದನ್ನೂ ಓದಿ: Tamannaah Bhatia : ಪಾಕ್​ ಕ್ರಿಕೆಟಿಗ ರಜಾಕ್ ಜತೆ ಚಿನ್ನದ ಮಳಿಗೆಗೆ ಹೋದ ಕಹಿ ಘಟನೆ ನೆನೆದ ತಮನ್ನಾ

ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಬೆಟ್ಟಿಂಗ್‌ ಅಪ್ಲಿಕೇಶನ್‌ ಆಗಿದೆ. ವಯಾಕಾಮ್‌ 18 ಐಪಿಎಲ್‌ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಬೆಟ್ಟಿಂಗ್ ಅಪ್ಲಿಕೇಶನ್ ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಅಕ್ರಮವಾಗಿ ಪಂದ್ಯಗಳನ್ನು ಸ್ಟ್ರೀಮ್ ಮಾಡುತ್ತಿದೆ ಎಂದು ವಯಾಕಾಮ್‌ ಎಫ್‌ಐಆರ್‌ ದಾಖಲಿಸಿತ್ತು . ವಯಾಕಾಮ್‌ 18ಗೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಾಗಿದೆ. ಎಫ್‌ಐಆರ್ ದಾಖಲಿಸಿದ ಬಳಿಕ ಬಾದ್‌ಶಾ, ಸಂಜಯ್ ದತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ತಮನ್ನಾ ಸೇರಿದಂತೆ ಹಲವಾರು ತಾರೆಯರನ್ನು ವಿಚಾರಣೆಗೆ ಕರೆಯಲಾಯಿದೆ ಎಂದು ವರದಿಯಾಗಿದೆ. ಡಿಸೆಂಬರ್ 2023 ರಲ್ಲಿ, ಬೆಟ್ಟಿಂಗ್ ಅಪ್ಲಿಕೇಶನ್‌ನ ಉದ್ಯೋಗಿಯನ್ನು ಬಂಧಿಸಲಾಯಿತ್ತು.

Continue Reading

ಟಾಲಿವುಡ್

Kiara Advani: ಪ್ರಭಾಸ್ ನಟನೆಯ ʻಸಲಾರ್ 2ʼ ಸಿನಿಮಾದಲ್ಲಿ ಕಿಯಾರಾ ಆಡ್ವಾಣಿ?

Kiara Advani: ಪ್ರಶಾಂತ್ ನೀಲ್ ನಿರ್ದೇಶನದ, ʻಸಲಾರ್ ಭಾಗ 1ʼ (Salaar Part 1: Ceasefire ) ಡಿಸೆಂಬರ್ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 500 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ ಕಿಯಾರ ಸಲಾರ್‌ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಭಾಸ್ ಜತೆ ವಿಶೇಷ ಹಾಡಿನಲ್ಲಿ ಕಿಯಾರಾ ಆಡ್ವಾಣಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ನಟಿಯಾಗಲಿ, ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

VISTARANEWS.COM


on

Kiara Advani Joins Salaar 2
Koo

ಬೆಂಗಳೂರು: ಕಿಯಾರಾ ಆಡ್ವಾಣಿ (Kiara Advani) ಸೌತ್‌ ಸಿನಿಮಾಗಳಿಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‌. ಶಂಕರ್‌ ಅವರ ‘ಗೇಮ್‌ ಚೇಂಜರ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೀಗ ನಟಿ ಶೀಘ್ರದಲ್ಲೇ ಪ್ರಭಾಸ್ ನಟನೆಯ ʻಸಲಾರ್ 2ʼ ( Prabhas’ Salaar 2) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪ್ರಮುಖ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಭಾಸ್ ಜತೆ ವಿಶೇಷ ಹಾಡಿನಲ್ಲಿ ಕಿಯಾರಾ ಆಡ್ವಾಣಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ನಟಿಯಾಗಲಿ, ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಪ್ರಶಾಂತ್ ನೀಲ್ ನಿರ್ದೇಶನದ, ʻಸಲಾರ್ ಭಾಗ 1ʼ (Salaar Part 1: Ceasefire ) ಡಿಸೆಂಬರ್ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 500 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ ಕಿಯಾರ ಸಲಾರ್‌ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kiara Advani: ‘ಡಾನ್‌ 3’ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಕಿಯಾರಾ ಅಡ್ವಾಣಿ

 ‘ಡಾನ್‌ 3’ ಚಿತ್ರದಲ್ಲಿಯೂ ಕಿಯಾರ ನಾಯಕಿ!

ಬಾಲಿವುಡ್‌ನ ಜನಪ್ರಿಯ ನಾಯಕಿ ಕಿಯಾರಾ ಆಡ್ವಾಣಿ ಸದ್ಯ ಬೇಡಿಯಲ್ಲಿರುವ ನಟಿಯರ ಪೈಕಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಹಿಂದಿಯ ಜತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ಅವರ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್‌ಗಳಿವೆ. ಈ ಮಧ್ಯೆ ಅವರು ಬಾಲಿವುಡ್‌ನ ಬಹು ನಿರೀಕ್ಷಿತ ʼಡಾನ್‌ 3ʼ (Don 3) ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಣವೀರ್‌ ಸಿಂಗ್‌ (Ranveer Singh) ಜತೆ ಮೊದಲ ಬಾರಿ ತೆರೆ ಹಂಚಿಕೊಳ್ಳಲಿರುವ ಅವರು ಈ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುಗುತ್ತಿದೆ.

ವರದಿಯೊಂದರ ಪ್ರಕಾರ ಪ್ರರ್ಹಾನ್‌ ಅಖ್ತರ್‌ ನಿರ್ದೇಶನದ ಈ ಚಿತ್ರಕ್ಕೆ ಕಿಯಾರಾ ಬರೋಬ್ಬರಿ 13 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದರೆ ಇದು ಅವರು ʼವಾರ್‌ 2ʼ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಹಲವು ಪಟ್ಟು ಅಧಿಕ ಎನ್ನಲಾಗುತ್ತಿದೆ.

ʼʼಡಾನ್‌ 3ʼ ಸಿನಿಮಾಕ್ಕಾಗಿ ಕಿಯಾರಾ ಅಡ್ವಾಣಿ 13 ಕೋಟಿ ರೂ. ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಹಲವು ಅಪಾಯಕಾರಿ ಆ್ಯಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ದುಬಾರಿ ಸಂಭಾವನೆಯ ಬೇಡಿಕೆ ಸಲ್ಲಿಸಿದ್ದಾರೆ. ಇದು ʼವಾರ್‌ 2ʼ ಚಿತ್ರದಲ್ಲಿ ಪಡೆದ ಸಂಭಾವನೆಗಿಂತ ಎರಡು ಪಟ್ಟು ಅಧಿಕʼʼ ಎಂದು ವರದಿಯೊಂದು ತಿಳಿಸಿದೆ. ಇನ್ನೂ ಈ ಸುದ್ದಿ ಅಧಿಕೃತವಾಗಿ ದೃಢವಾಗಿಲ್ಲ.

ಇದನ್ನೂ ಓದಿ: Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

2025ರಲ್ಲಿ ತೆರೆ ಕಾಣಲಿರುವ ಈ ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈಗಾಗಲೇ ‘ಡಾನ್‌’ ಸರಣಿಯ ಎರಡೂ ಚಿತ್ರಗಳು ಯಶಸ್ವಿಯಾಗಿರುವುದರಿಂದ ಈ ಮೂರನೇ ಭಾಗ ಕುತೂಹಲ ಮೂಡಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ರಣವೀರ್‌ ಸಿಂಗ್‌ ಮತ್ತು ಕಿಯಾರಾ ಆಡ್ವಾಣಿ ತೆರೆ ಹಂಚಿಕೊಳ್ಳುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಕಿಯಾರಾ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‌.ಶಂಕರ್‌ ಅವರ ‘ಗೇಮ್‌ ಚೇಂಜರ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಮ್‌ ಚರಣ್‌ ನಾಯಕನಾಗಿರುವ ಈ ಸಿನಿಮಾದಲ್ಲಿ ಅಂಜಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಲಿದೆ. ‘ವಾರ್‌ 2’ ಸಿನಿಮಾದಲ್ಲಿ ನಾಯಕರಾಗಿ ಹೃತಿಕ್‌ ರೋಷನ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಅಭಿಮಾನಿಳ ಗಮನ ಸೆಳೆದಿದೆ. ಕಿಯಾರಾ ಆಡ್ವಾಣಿ ಕಳೆದ ವರ್ಷ ಫೆಬ್ರವರಿ 7ರಂದು ಬಾಲಿವುಡ್‌ ಸಿದ್ಧಾರ್ಥ್‌ ಮಲ್ಹೋತ್ರಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Continue Reading

ಟಾಲಿವುಡ್

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

Pushpa The Rule: ಪುಷ್ಪ 2 ಸಿನಿಮಾ (Pushpa 2) ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾದಾಗಿನಿಂದ, ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಟಿ-ಸೀರೀಸ್ (T series) ಎಲ್ಲಾ ಭಾಷೆಗಳ ಆಡಿಯೊ ಹಕ್ಕನ್ನು ಪಡೆದಿರುವುದು ಗೊತ್ತಿರುವ ವಿಚಾರ. ಭೂಷಣ್ ಕುಮಾರ್ ಸಂಸ್ಥೆಯು ಎಲ್ಲಾ ಭಾಷೆಗಳ ಸಂಗೀತ ಹಕ್ಕುಗಳಿಗಾಗಿ ಸುಮಾರು 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ.

VISTARANEWS.COM


on

Pushpa The Rule first single on May 1
Koo

ಬೆಂಗಳೂರು: ಅಲ್ಲು ಅರ್ಜುನ್‌ (Allu Arjun) ಅಭಿನಯದ ಬಹುನಿರೀಕ್ಷಿತ ‘ಪುಷ್ಪ: ದಿ ರೂಲ್’ (Pushpa The Rule) ಸಿನಿಮಾದ ಮೊದಲ ಸಿಂಗಲ್ ಅಂದರೆ ಮೊದಲ ಹಾಡು ‘ಪುಷ್ಪ ಪುಷ್ಪ’ (‘Pushpa Pushpa’) ಮೇ 1ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಅಲ್ಲು ಅರ್ಜುನ್‌ (Pushpa The Rule) ಸೋಷಿಯಲ್‌ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಏಪ್ರಿಲ್ 24 ರಂದು, ಅಲ್ಲು ಅರ್ಜುನ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜತೆಗೆ ‘ಪುಷ್ಪ ಪುಷ್ಪ’ ಟ್ರ್ಯಾಕ್‌ನ ಟೀಸರ್‌ ಶೇರ್‌ ಮಾಡಿಕೊಂಡಿದ್ದಾರೆ. ಮೇ 1ರಂದು ಬೆಳಗ್ಗೆ 11.7ಕ್ಕೆ ‘ಪುಷ್ಪ ಪುಷ್ಪ’ ಸಾಂಗ್‌ ಬಿಡುಗಡೆಯಾಗಲಿದೆ. ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದಾರೆ.

‘ಪುಷ್ಪ 2’ ಸಿನಿಮಾದ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆದಿದೆ. ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡಲು ಸಕಲ ತಯಾರಿ ಆಗಿದೆ. ಈಗ ಮೊದಲ ಹಾಡಿನ ಲಿರಿಕಲ್ ವಿಡಿಯೊ ಮೇ 1ಕ್ಕೆ ಅನಾವರಣ ಆಗಲಿದೆ.

ಪುಷ್ಪ 2 ಸಿನಿಮಾ (Pushpa 2) ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾದಾಗಿನಿಂದ, ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಟಿ-ಸೀರೀಸ್ (T series) ಎಲ್ಲಾ ಭಾಷೆಗಳ ಆಡಿಯೊ ಹಕ್ಕನ್ನು ಪಡೆದಿರುವುದು ಗೊತ್ತಿರುವ ವಿಚಾರ. ಭೂಷಣ್ ಕುಮಾರ್ ಸಂಸ್ಥೆಯು ಎಲ್ಲಾ ಭಾಷೆಗಳ ಸಂಗೀತ ಹಕ್ಕುಗಳಿಗಾಗಿ ಸುಮಾರು 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈಗ ಚಿತ್ರದ ಆಡಿಯೊ ಹಕ್ಕುಗಳು ಬರೋಬ್ಬರಿ 60 ಕೋಟಿ ರೂ . ಮಾರಟವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rashmika Mandanna: ಪುಷ್ಪ 2ನಲ್ಲಿ ಶ್ರೀವಲ್ಲಿ 2.0 ಲೆವೆಲ್‌ಗೆ ಇದ್ದಾಳಂತೆ! ರಶ್ಮಿಕಾ ಹೇಳಿದ್ದೇನು?

ತೆಲುಗಿನ ಜತೆ ಕನ್ನಡ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲೂ ಹಾಡುಗಳು ಸಿದ್ಧವಾಗುತ್ತಿವೆ. ಈ ಎಲ್ಲ ಭಾಷೆಯ ಆಡಿಯೊ ಹಕ್ಕುಗಳನ್ನು ಟಿ-ಸಿರೀಸ್​ ಸಂಸ್ಥೆ ಪಡೆದುಕೊಂಡಿದೆ. ದೇವಿ ಶ್ರೀ ಪ್ರಸಾದ್​ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 2021ರಲ್ಲಿ ಬಿಡುಗಡೆ ಆದ ‘ಪುಷ್ಪ 1’ ಸಿನಿಮಾದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

Continue Reading
Advertisement
arunachal pradesh landslide
ವೈರಲ್ ನ್ಯೂಸ್6 mins ago

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

Neha Murder case CID Officer
ಹುಬ್ಬಳ್ಳಿ14 mins ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Virender Sehwag
ಕ್ರೀಡೆ22 mins ago

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Guru Raghavendra and Vasishta Co operative Bank fraud handed over to SIT says DK Shivakumar
ಬೆಂಗಳೂರು24 mins ago

Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

Shakhahaari Movie In OTT amzon Prime
ಸ್ಯಾಂಡಲ್ ವುಡ್30 mins ago

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Xiaomi EV
ಆಟೋಮೊಬೈಲ್31 mins ago

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Nilkrishna Gajare JEE main 2024 result AIR 1
ಅಂಕಣ39 mins ago

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

Aircraft Crash
ದೇಶ45 mins ago

Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ; ಭಾಗಗಳು ಸುಟ್ಟು ಭಸ್ಮ

Lok Sabha Election 2024 vote for better future and 98 year old woman dies when returning officer arrives at home to cast her vote
ಪ್ರಮುಖ ಸುದ್ದಿ56 mins ago

Lok Sabha Election 2024: ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಮನೆಗೆ ಬಂದಾಗಲೇ 98ರ ವೃದ್ಧೆ ಸಾವು!

Horlicks Label
ದೇಶ59 mins ago

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ14 mins ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌