South Cinema
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
Nandamuri Balakrishna: ಅನಿಲ್ ರವಿಪುಡಿ ನಿರ್ದೇಶನವಿರುವ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ ಇಷ್ಟೂ ದಿನ ತಾತ್ಕಾಲಿಕವಾಗಿ NBK 108 ಎಂದು ಇಡಲಾಗಿತ್ತು.
ಬೆಂಗಳೂರು: ಸರಿಲೇರು ನೀಕೆವ್ವರು ಮತ್ತು ಎಫ್-2 ನಂತಹ ಸಿನಿಮಾಗಳ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರಗಳ ನಿರ್ದೇಶಕ ಅನಿಲ್ ರವಿಪುಡಿ ಹೊಸ ಸುದ್ದಿ ನೀಡಿದ್ದಾರೆ. ಇವರ ನಿರ್ದೇಶನವಿರುವ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ ಇಷ್ಟೂ ದಿನ ತಾತ್ಕಾಲಿಕವಾಗಿ NBK 108 (Nandamuri Balakrishna) ಎಂದು ಇಡಲಾಗಿತ್ತು. ಇದೀಗ ಚಿತ್ರತಂಡ ಈ ಸಿನಿಮಾಗೆ ʻಭಗವಂತ ಕೇಸರಿʼಎಂದು ಶೀರ್ಷಿಕೆ ಇಟ್ಟಿದ್ದಾರೆ. ಜತೆಗೆ ಫಸ್ಟ್ ಲುಕ್ ಪೋಸ್ಟರ್ ಕೂಡ ಶೇರ್ ಮಾಡಿಕೊಂಡಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಬಾಲಕೃಷ್ಣ ಅವರು ಖಡ್ಗದಂತಹ ಆಯುಧವನ್ನು ಹಿಡಿದಿದ್ದಾರೆ. ಪೋಸ್ಟರ್‌ನಲ್ಲಿ ಲುಕ್ ಜತೆಗೆ, ‘ಐ ಡೋಂಟ್ ಕೇರ್’ ಎಂದು ಟ್ಯಾಗ್‌ಲೈನ್ ಕೂಡ ಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ನಿರ್ಮಾಣ ಸಂಸ್ಥೆ ಶೈನ್ ಸ್ಕ್ರೀನ್ಸ್ ಬಿಡುಗಡೆ ಮಾಡಿದೆ. ಈ ಸಿನಿಮಾ ಮೂಲಕ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತೆಲುಗು ಸಿನಿಮಾಗೆ ಪದಾರ್ಪಣೆ ಮಾಡಿದ್ದಾರೆ. ನಟ ಶ್ರೀಲೀಲಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎಸ್ ಥಮನ್ ಸಂಗೀತ ಚಿತ್ರಕ್ಕಿದೆ. ಭಗವಂತ ಕೇಸರಿ ದಸರಾಕ್ಕೆ ಥಿಯೇಟರ್‌ಗೆ ಲಗ್ಗೆ ಇಡಲಿದೆ.
ಅನಿಲ್ ರವಿಪುಡಿ ಅವರು ಮಹೇಶ್ ಬಾಬು ಅವರಿಗೆ ಸರಿಲೇರು ನೀಕೆವ್ವರು (2020)ನಲ್ಲಿ ನಿರ್ದೇಶಿಸಿದ ನಂತರ ಸ್ಟಾರ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಬಾಲಕೃಷ್ಣ ಸಿನಿಮಾದ ಟ್ರೇಡ್ ಮಾರ್ಕ್ ಮಾಸ್ ಅಂಶಗಳೂ ಇದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Nandamuri Balakrishna: ನಂದಮೂರಿ ಬಾಲಕೃಷ್ಣ NBK 108 ಸಿನಿಮಾದ ಫಸ್ಟ್ ಲುಕ್ ಔಟ್
అన్న దిగిండు🔥
— Shine Screens (@Shine_Screens) June 8, 2023
ఇగ మాస్ ఊచకోత షురూ 😎
Presenting #NandamuriBalakrishna in & as #BhagavanthKesari 💥#NBKLikeNeverBefore ❤️🔥@AnilRavipudi @MsKajalAggarwal @sreeleela14 @rampalarjun @MusicThaman @sahugarapati7 @harish_peddi @YoursSKrishna @JungleeMusicSTH pic.twitter.com/aIAYbnMgcK
ಮಾರ್ಚ್ 22ರಂದು, ಅನಿಲ್ ರವಿಪುಡಿ ಅವರು NBK 108 ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದರು. ಪೋಸ್ಟರ್‌ಗಳಲ್ಲಿ ‘ಈ ಬಾರಿ ನಿಮ್ಮ ಕಲ್ಪನೆಗೂ ಮೀರಿ’ ಎಂಬ ಅಡಿಬರಹವಿತ್ತು. ಈ ಚಿತ್ರವು ಬಾಲಯ್ಯ ಅವರ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ಮಾಸ್ ಆಗಿರಲಿದೆ ಎನ್ನಲಾಗಿದೆ.
South Cinema
Ragini Dwivedi: ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ!
ಫಸ್ಟ್ ಲುಕ್ ಮೂಲಕ ಗಮನಸೆಳೆದಿರುವ ಗಜರಾಮನ ಸ್ಪೆಷಲ್ ಹಾಡಿನ ಚಿತ್ರೀಕರಣ ಚಿಕ್ಕಗುಬ್ಬಿಯಲ್ಲಿ ನಡೆದಿದೆ. ಝಗಮಗಿಸುವ ಸೆಟ್ ನಲ್ಲಿ, ಧನು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ತುಪ್ಪದ ಬೆಡಗಿ ರಾಗಿಣಿ (Ragini Dwivedi) ಜತೆ ರಾಜವರ್ಧನ್ ಹೆಜ್ಜೆ ಹಾಕಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರ ಪುತ್ರ ರಾಜವರ್ಧನ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀರೊ ಆಗಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಿರುವ ರಾಜವರ್ಧನ್ ಕೈಯಲ್ಲಿ ಹಲವು ಪ್ರಾಜೆಕ್ಟ್ ಗಳಿವೆ. ಅವುಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ‘ಗಜರಾಮ’. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಫಸ್ಟ್ ಲುಕ್ ಮೂಲಕ ಗಮನಸೆಳೆದಿರುವ ಗಜರಾಮನ ಸ್ಪೆಷಲ್ ಹಾಡಿನ ಚಿತ್ರೀಕರಣ ಚಿಕ್ಕಗುಬ್ಬಿಯಲ್ಲಿ ನಡೆದಿದೆ. ಝಗಮಗಿಸುವ ಸೆಟ್ ನಲ್ಲಿ, ಧನು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ತುಪ್ಪದ ಬೆಡಗಿ ರಾಗಿಣಿ (Ragini Dwivedi) ಜತೆ ರಾಜವರ್ಧನ್ ಹೆಜ್ಜೆ ಹಾಕಿದ್ದಾರೆ.
ರಾಗಿಣಿ ಮಾತನಾಡಿ, “ಹೊಸ ಹೊಸ ಪ್ರಯತ್ನಗಳು ನಮ್ಮ ಇಂಡಸ್ಟ್ರೀಯಲ್ಲಿ ಆಗಬೇಕು. ಕನ್ನಡ ಸಿನಿಮಾಗಳು ಒಳ್ಳೆ ರೀತಿಯಲ್ಲಿ ಬೆಳೆಯುತ್ತಿವೆ. ಅದನ್ನು ನೋಡಿ ಹೆಮ್ಮೆ ಅನಿಸುತ್ತದೆ. ನಾನು ಎಲ್ಲಿ ಹೋದರು ಕರ್ನಾಟಕ ನನ್ನ ಮನೆ ತರ. ಗಜರಾಮ ಸಿನಿಮಾದಲ್ಲಿ ನನಗಾಗಿ ಮಾಡಿರುವ ಸ್ಪೆಷಲ್ ಸಾಂಗ್ ಇದೆ. ರಾಜ್ ಅದ್ಭುತ ನಟ. ಮನೋಮೂರ್ತಿ ಸರ್ ಮ್ಯೂಸಿಕ್, ಧನು ಕೊರಿಯೋಗ್ರಫಿ ಎಲ್ಲವೂ ಸೇರಿ ಈ ವರ್ಷದ ಹಿಟ್ ಹಾಡುಗಳಲ್ಲಿ ಒಂದಾಗಲಿದೆ. ಇಡೀ ತಂಡಕ್ಕೆ ನಿಮ್ಮ ಬೆಂಬಲ ಇರಲಿ” ಎಂದರು.
ರಾಜವರ್ಧನ್ ಮಾತನಾಡಿ, “ಇವತ್ತು ಕುಂಬಳಕಾಯಿವರೆಗೂ ಬಂದಿದ್ದೇವೆ. ಈ ಸಿನಿಮಾ ಒಂದು ವರ್ಷದ ಜರ್ನಿ. ಲೈಫ್ ಲೈನ್ ಪಿಕ್ಚರ್ಸ್ jತೆ ಮಾಡುತ್ತಿರುವ ಮೊದಲ ಚಿತ್ರ ಇದು. ಅದ್ಭುತವಾಗಿ ಸಿನಿಮಾ ಬಂದಿದೆ. ಸುನಿಲ್ ಮುಂದಿನ ದಿನಗಳಲ್ಲಿ ಮಾಸ್ ಡೈರೆಕ್ಟರ್ ಆಗಿ ಚಿತ್ರರಂಗ ಬರುತ್ತಾರೆ. ರಾಗಿಣಿ ಮೇಡಂ ಕಾಲೇಜ್ ಟೈಮ್ ನಿಂದ ಕ್ರಶ್. ಈಗ ವರ್ಕ್ ಮಾಡುವ ಅವಕಾಶ ಸಿಕ್ಕಿದೆ. ಡ್ರೀಮ್ ಕಂಪ್ಲೀಟ್ ಆಗಿದೆ. ಮನೋ ಸರ್ ಮೆಲೋಡಿ ಕಿಂಗ್..ಈಗ ಮಾಸ್ ಕಿಂಗ್ ಆಗಿದ್ದಾರೆ. ನಮ್ಮ ಕಥೆಗೆ ಹೇಗೆ ಬೇಕೋ ಆಗಿದ್ದಾರೆ ನಮ್ಮ ಹೀರೋಯಿನ್. ರಾಮ್ ನನ್ನ ಪಾತ್ರ. ರಾಮ ರಾವಣ ಎರಡು ನಾನೇ. ತುಂಬಾ ಒಳ್ಳೆ ಆರ್ಟಿಸ್ಟ್ ಚಿತ್ರದಲ್ಲಿದ್ದಾರೆʼʼ ಎಂದರು.
ಇದನ್ನೂ ಓದಿ: Thapaswini Poonacha: ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರದ ನಾಯಕಿ!
ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ʻʻಬೆಂಗಳೂರು, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇವತ್ತು ಕೊನೆಯ ದಿನ. ರಾಜವರ್ಧನ್ ಸರ್ ತುಂಬಾ ಡೆಡಿಕೇಷನ್ ಆಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕರು ಬಜೆಟ್ ಕೇಳದೆ ಸಿನಿಮಾ ಮಾಡಿದ್ದಾರೆ. ಮನೋಮೂರ್ತಿ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಸಾಂಗ್ ಕೇಳಿದ ತಕ್ಷಣ ರಾಗಿಣಿ ಮೇಡಂ ಒಪ್ಪಿಕೊಂಡರುʼʼ ಎಂದರು.
ನಿರ್ಮಾಪಕ ನರಸಿಂಹಮೂರ್ತಿ ಮಾತನಾಡಿ, ʻʻಇವತ್ತು ಸಿನಿಮಾಗೆ ಕುಂಬಳಕಾಯಿ..ಮೂಹೂರ್ತ ಆದಾಗ ಎಷ್ಟು ಖುಷಿ ಆಗಿತ್ತು. ಈಗ ಅಷ್ಟೇ ಖುಷಿಯಾಗುತ್ತಿದೆ. ಈ ಸಾಂಗ್‌ವನ್ನು ವಿವರಣೆ ಪಡೆದು ಬಳಿಕ ಮಾಡುತ್ತೇನೆ. ಅದಕ್ಕಾಗಿ ಕಾಯಬೇಕು ಎಂದರು. ಮನೋ ಸರ್ ಗೆ ತುಂಬಾ ಕಾಟ ಕೊಟ್ಟು ಸಾಂಗ್ ಮಾಡಿಸಿದ್ದೇವೆ. ಧನು ಮಾಸ್ಟರ್ ಈ ಹಾಡನ್ನು ಕೊನೆಯಲಿ ಮಾಡೋಣಾ ಎಂದರು. ಒಳ್ಳೆ ಔಟ್ ಫುಟ್ ಬಂದಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ಪ್ರಯತ್ನ ಮಾಡುತ್ತೇವೆʼʼ ಎಂದರು.
ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ʻಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಈ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಈ ತರ ಹಾಡು ಮಾಡದೆ ಬಹಳ ವರ್ಷಗಳೇ ಆಗಿದೆʼ ಎಂದರು.
ಇದನ್ನೂ ಓದಿ: Ragini Dwivedi: ಕನ್ನಡ, ಮಲಯಾಳದಲ್ಲಿ ರಾಗಿಣಿ ದ್ವಿವೇದಿಯ ʼಶೀಲʼ
ಶಿಷ್ಯ ದೀಪಕ್ ಪೊಲೀಸ್ ಪಾತ್ರದಲ್ಲಿ, ತೆಲುಗಿನ ಖ್ಯಾತ ಖಳನಟ ಕಬೀರ್ ಸಿಂಗ್ ಖಳನಾಯಕನಾಗಿ, ತಪಸ್ವಿನಿ ರಾಜವರ್ಧನ್ ಗೆ ಜೋಡಿಯಾಗಿ ನಟಿಸಿದ್ದಾರೆ. ಕಾಮಿಡಿಕಿಲಾಡಿ ಖ್ಯಾತಿಯ ಸಂತು ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ. ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ‘ದುನಿಯಾ’ ಸೂರಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್ ಈಗ ‘ಗಜರಾಮ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
‘ಗಜರಾಮ’ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಪ್ರಮೋದ್ ಮರವಂತೆ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
South Cinema
Thalapathy Vijay: ದಳಪತಿ ವಿಜಯ್ ಅಭಿನಯದ ʻಲಿಯೋʼ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್!
Thalapathy Vijay: ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ.
ಬೆಂಗಳೂರು; ದಳಪತಿ ವಿಜಯ್ (Thalapathy Vijay) ಹಾಗೂ ಲೋಕೇಶ್ ಕನಕರಾಜ್ (Lokesh Kanakaraj) ಅವರ ಮುಂಬರುವ ಚಿತ್ರ ʻಲಿಯೋʼ (Leo poster) ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಗೊಂಡಿವೆ. ಇದೀಗ ಮಹತ್ವದ ಸುದ್ದಯನ್ನು ಚಿತ್ರತಂಡ ಘೋಷಣೆ ಮಾಡಿದೆ. ಹಲವು ದಿನಗಳಿಂದ ವಿಜಯ್ ಫ್ಯಾನ್ಸ್ ಟ್ರೈಲರ್ ರಿಲೀಸ್ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ಇದೀಗ ಉತ್ತರ ಸಿಕ್ಕಿದೆ. ಇದೇ ಅ.5ರಂದು ʻಲಿಯೋʼ ಟ್ರೈಲರ್ ಬಿಡುಗಡೆಯಾಗುತ್ತಿದೆ. ಪೋಸ್ಟ್ ಮೂಲಕ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಬ್ಬಿಂಗ್ ಕೆಲಸಗಳು ಆಗುತ್ತಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಲಿಯೋ ಚಿತ್ರಕ್ಕೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳ ಲೋಕೇಶ್ ಅವರು ಹೇಳಿಕೊಂಡಿದ್ದರು. ʻʻಚಿತ್ರಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಯಾವುದೇ ಅಪ್‌ಡೇಟ್‌ಗಳನ್ನು ನೀಡಿಲ್ಲ. ಕ್ರಮೇಣ ಹೊಸ ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಚಿತ್ರ ಬಿಡುಗಡೆಗೆ 30 ದಿನಗಳ ಮುಂಚೆಯೇ ಚಿತ್ರದ ಬಗ್ಗೆ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲು ನಾವು ಯೋಜಿಸಿದ್ದೇವೆʼʼ ಎಂದಿದ್ದರು. ಹೇಳಿದಂತೆ ಸೆ. 17ರಂದು ಚಿತ್ರದ ತೆಲುಗು ಪೋಸ್ಟರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: Actor Rajinikanth: ಲೋಕೇಶ್ ಕನಕರಾಜ್ ಜತೆ ರಜನಿ ಸಿನಿಮಾ ಪಕ್ಕಾ; ʻಲಿಯೋʼ ಕಥೆ ಎನು?
ಲಿಯೋʼ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್ (Thalathy Vijay) ಹಾಗೂ ಲೋಕೇಶ್ ಕನಕರಾಜ್ ʼಲಿಯೋʼ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್ ಲುಕ್ ಹಾಗೂ ಮೊದಲ ಸಾಂಗ್ ʻನಾ ರೆಡಿʼ ಬಿಡುಗಡೆಗೊಂಡಿದೆ. ʼಮಾಸ್ಟರ್ʼ ಸಿನಿಮಾ ಬಳಿಕ ವಿಜಯ್ ಮತ್ತು ಲೋಕೇಶ್ ಕನಕರಾಜ್ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ. ʼಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.
South Cinema
Shiva Rajkumar: ಮಕ್ಕಳು ಧೀಮಂತ ನಾಯಕರ ಚಿಂತನೆ ಜೀವನದಲ್ಲೂ ಅಳವಡಿಸಿಕೊಳ್ಳಲಿ ಎಂದ ಶಿವಣ್ಣ!
Shiva Rajkumar: ಅ.2ರಂದು ಆಚರಿಸಲಾಗುತ್ತಿದೆ. ಈ ದಿನಶ ಶಕ್ತಿಧಾಮ ಮಕ್ಕಳ ಜತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಸಂಭ್ರಮವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಚರಿಸಿದರು.
ಬೆಂಗಳೂರು: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಿರ್ಣಾಯಕ ಕೊಡುಗೆ ನೀಡಿದ, ಅಹಿಂಸಾ ತತ್ವದಿಂದಲೇ ಜಗತ್ತಿಗೆ ಸ್ಫೂರ್ತಿಯಾದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ (Gandhi Jayanti 2023)ಅ.2ರಂದು ಆಚರಿಸಲಾಗುತ್ತಿದೆ. ಈ ದಿನ ಶಕ್ತಿಧಾಮ ಮಕ್ಕಳ ಜತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಸಂಭ್ರಮವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಚರಿಸಿದರು.
ಮಕ್ಕಳ ಜತೆ ಶಿವಣ್ಣ ನಿಂತು ʻʻಇಂದು ನಮ್ಮ ಶಕ್ತಿಧಾಮ ಮಕ್ಕಳ ಜತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಸಂಭ್ರಮ ಆಚರಿದ್ದು ಸಂತೋಷವಾಯ್ತು! ಮಕ್ಕಳು ಈ ಧೀಮಂತ ನಾಯಕರ ಚಿಂತನೆ ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲಿʼʼಎಂದು ಬರೆದುಕೊಂಡಿದ್ದಾರೆ. ಹಲವು ವಿಶೇಷ ದಿನಗಳಲ್ಲಿ ಶಿವರಾಜ್‌ಕುಮಾರ್ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ (Shiva Rajkumar) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಟ್ರೈಲರ್ (Ghost Trailer) ಬಿಡುಗಡೆಗೊಂಡಿದೆ. ʻʻಸಾಮಾನ್ಯವಾಗಿ ನಾನ್ ಯಾರ್ ತಂಟೆಗೂ ಹೋಗಲ್ಲ. ಸೋಲ್ತಿನಿ ಅನ್ನೊ ಭಯಕ್ಕಲ್ಲ, ನಾನ್ ಹೋದ್ರೆ ಯುದ್ಧಭೂಮಿ ರುದ್ರಭೂಮಿ ಆಗುತ್ತೆʼʼಎನ್ನು ಖಡಕ್ ಡೈಲಾಗ್ ಮೂಲಕ ರಗಡ್ ಆಗಿ ಕಂಡಿದ್ದಾರೆ ಶಿವಣ್ಣ. ಈ ಹಿಂದೆ “ಘೋಸ್ಟ್” ಚಿತ್ರದ ಸಾಂಗ್ ರಿಲೀಸ್ ಆಗಿತ್ತು. ಅರ್ಜುನ್ ಜನ್ಯಾ ಕಂಪೋಸ್ ಮಾಡಿದ್ದು, ಹಾಡು ಸಖತ್ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್ (GHOST OGM) ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Shiva Rajkumar: ʻಘೋಸ್ಟ್ʼ ಸಿನಿಮಾ ಹಾಡಿಗೆ ಶಿವಣ್ಣನ ಫ್ಯಾನ್ಸ್ ಫಿದಾ!
ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.
ಬಾಲಿವುಡ್ ನಟ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್ ಮಾಂಕ್ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್ ಅವರು ಘೋಸ್ಟ್ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಇದ್ದರೆ, ಸಂದೇಶ್ ನಾಗರಾಜ್ ನಿರ್ಮಾಪಕರಾಗಿದ್ದಾರೆ. ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.
South Cinema
Salaar Movie: ಯೂಟ್ಯೂಬ್‌ನಿಂದ ʻಉಗ್ರಂʼ ಮಾಯ; ರಿಮೇಕ್ ಆಯ್ತಾ ʻಸಲಾರ್ʼ?
Salaar Movie: ‘ಉಗ್ರಂ’ ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್‌ವನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಿದ್ದಾರೆ ಎಂದು ಬಾಲಿವುಡ್‌ನ ಸ್ವಯಂ ಪ್ರೇರಿತಾ ಕ್ರಿಟಿಕ್ ಕೆಆರ್‌ಕೆ ಟ್ವೀಟ್ ಮಾಡಿದೆ. ಇದೀಗ ಸಲಾರ್ ಸಿನಿಮಾ ಉಗ್ರಂ ರಿಮೇಕ್ ಎಂಬ ಅನುಮಾನ ಸಿನಿರಸಿಕರಲ್ಲಿ ಹೆಚ್ಚಾಗಿದೆ.
ಬೆಂಗಳೂರು: ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ʻಸಲಾರ್ʼ ಸಿನಿಮಾ (Salaar Movie) ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಂತೂ ಶಾರುಖ್ ಖಾನ್ ಅವರ ಡಂಕಿ ಸಿನಿಮಾದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗಲಿದೆ ಎಂಬುದಂತೂ ಪಕ್ಕಾ ಆಗಿದೆ. ಇದರ ಜತೆಗೆ ಇದೀಗ ಶ್ರೀಮುರುಳಿ ಅವರ ಉಗ್ರಂ (ugram Movie) ಕೂಡ ಟ್ರೆಂಡಿಂಗ್‌ನಲ್ಲಿದೆ. ‘ಉಗ್ರಂ’ ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್‌ವನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಿದ್ದಾರೆ ಎಂದು ಬಾಲಿವುಡ್‌ನ ಸ್ವಯಂ ಪ್ರೇರಿತಾ ಕ್ರಿಟಿಕ್ ಕೆಆರ್‌ಕೆ ಟ್ವೀಟ್ ಮಾಡಿದೆ. ಇದೀಗ ಸಲಾರ್ ಸಿನಿಮಾ ಉಗ್ರಂ ರಿಮೇಕ್ ಎಂಬ ಅನುಮಾನ ಸಿನಿರಸಿಕರಲ್ಲಿ ಹೆಚ್ಚಾಗಿದೆ.
ಸಲಾರ್ ಡಿಸೆಂಬರ್ 22ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಪ್ಪಳಿಸಲಿದೆ. ಅದೇ ದಿನ ಶಾರುಖ್ ಅವರ ಡಂಕಿ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಈ ಮೂಲಕ ಎರಡೂ ಚಿತ್ರಗಳ ನಡುವೆ ಭಾರಿ ಪೈಪೋಟಿ ಇರಲಿದೆ. ಇದರ ಜತೆ ಇದೀಗ ಉಗ್ರಂ ಸಖತ್ ಸುದ್ದಿಯಲ್ಲಿದೆ. ಬಾಲಿವುಡ್‌ನ ಸ್ವಯಂ ಪ್ರೇರಿತಾ ಕ್ರಿಟಿಕ್ ಕೆಆರ್‌ಕೆ ಟ್ವೀಟ್ ಮಾಡಿ ʻʻಸಲಾರ್ ಸಿನಿಮಾ ಮೇಕರ್ಸ್ ‘ಉಗ್ರಂ’ ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್ ಯೂಟ್ಯೂಬ್‌ನಿಂದ ತೆಗೆದು ಹಾಕಿದ್ದಾರೆ. ಹಾಗಾಗಿ ಸಲಾರ್ ಸಿನಿಮಾ ಉಗ್ರಂ ಸಿನಿಮಾದ ರಿಮೇಕ್ ಎನ್ನುವುದಕ್ಕೆ ಸಾಕ್ಷಿʼʼಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Salaar Movie: ‘ಕಮಿಂಗ್ ಬ್ಲಡಿ ಸೂನ್’ ಎಂದು ಬಂದೇ ಬಿಡ್ತು ʻಸಲಾರ್ʼ; ಶಾರುಖ್ Vs ಪ್ರಭಾಸ್ ಕನ್‌ಫರ್ಮ್!
ಕೆಆರ್‌ಕೆ ಟ್ವೀಟ್
First tweet from iPhone 15 Pro Max!
— KRK (@kamaalrkhan) October 1, 2023
Makers of #Salaar have removed film #Ugramm (Hindi Dub) from YouTube. So it’s the proof that Salaar is the remake of that film only.
‘ಸಲಾರ್’ ಮುಹೂರ್ತ ಆದ ಕೆಲವೇ ದಿನಗಳಲ್ಲಿ ಸುದ್ದಿಯೊಂದು ವೈರಲ್ ಆಗಿತ್ತು. ಪ್ರಶಾಂತ್ ನೀಲ್ ಶ್ರೀಮುರಳಿ ಸೆಕೆಂಡ್ ಲೈಫ್ ಕೊಟ್ಟ ‘ಉಗ್ರಂ’ ಸಿನಿಮಾವನ್ನೇ ರಿಮೇಕ್ ಮಾಡುತ್ತಿದ್ದಾರೆ ಎಂದು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಚಿತ್ರತಂಡ ಹಂಚಿಕೊಂಡಿಲ್ಲ. ʻಸಲಾರ್ʼ ಸಿನಿಮಾದ ಟ್ರೈಲರ್ ಆಕ್ಟೋಬರ್ 23ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಶಾರುಖ್ ಅವರ ಈ ವರ್ಷದ ಮೂರನೇ ಸಿನಿಮಾ ಡಂಕಿ ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ಸಹ ನಾಯಕಿಯಾಗಿ ನಟಿಸಿದ್ದಾರೆ. ಡಂಕಿ ಸಿನಿಮಾ ರಿಲೀಸ್ ಕೂಡ ಮುಂದಕ್ಕೆ ಹೋಗಲಿದೆ ಎಂಬ ವದಂತಿಗಳಿಗೂ ಶಾರುಖ್ ಸ್ಪಷ್ಟನೆ ನೀಡಿದ್ದಾರೆ. ಕ್ರಿಸ್‌ಮಸ್‌ಗೆ ಪಕ್ಕಾ ರಿಲೀಸ್ ಆಗಲಿದೆ ಎಂದು ನಟ ಈಗಾಗಲೇ ಹೇಳಿಕೆ ನೀಡಿದ್ದಾರೆ.
Salaar ugram remake kaka pothe suddenly ugram videos anni private lo ami pettistunnnaru…?
— ᴀʟʟᴜ sᴀɴᴊᴜ ʀᴇᴅᴅʏ™♥ (@AlluSanjuReddy) October 2, 2023
Something is wrong.. 🧐#SalaarCeaseFirepic.twitter.com/0BZZjSxgRL
ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಲಾರ್’ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು. ಸೂಪರ್ ಹಿಟ್ ಆಗಿದೆ. 100 ಮಿಲಿಯನ್‌ಗೂ ಅಧಿಕ ವ್ಯೂಸ್ ಸಾಧಿಸಿದೆ. ಆದರೂ ಕೂಡ ಟೀಸರ್ ಬಗ್ಗೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್ ಲುಕ್ ರಿವೀಲ್ ಮಾಡಿಲ್ಲ ಎಂದಿದ್ದರು. ಇನ್ನು ʼಸಲಾರ್ʼ ಸಿನಿಮಾದ ವಿತರಣೆಯ ಹಕ್ಕನ್ನು ಪ್ರತ್ಯಾಂಗೀರ್ ಸಿನಿಮಾಸ್ ಪಡೆದುಕೊಂಡಿದೆ.
-
ದೇಶ19 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ14 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ದೇಶ23 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ಟಾಪ್ 10 ನ್ಯೂಸ್21 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ20 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್22 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ10 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕ್ರೈಂ11 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?