ಕಾಲಿವುಡ್
Nayanathara marriage | ನೀರಿನಲ್ಲಿ ನಡೆದ ಜೋಡಿ, ಚಂದದ ಡ್ರೆಸ್‌ಗೆ ಫ್ಯಾನ್ಸ್ ಖುಷ್
Nayanathara marriage: ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಮದುವೆ ಚಿತ್ರಗಳು, ಅವರು ತೊಟ್ಟ ಉಡುಗೆ ಅಭಿಮಾನಿಗಳಿಗೆ ಭಾರಿ ಖುಷಿ ಕೊಟ್ಟಿದೆ.
ಬೆಂಗಳೂರು: ಖ್ಯಾತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಅವರ ಅದ್ಧೂರಿ ವಿವಾಹ ಸಂಭ್ರಮದ (Nayanathara marriage) ಬಳಿಕ ಇದೀಗ ಅವರ ಫೋಟೊ ಶೂಟ್ ಮತ್ತು ಧರಿಸಿದ ಡ್ರೆಸ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜೋಡಿ ಗುರುವಾರ ಬೆಳಗ್ಗೆ 8.30ಕ್ಕೆ ಸಪ್ತಪದಿ ತುಳಿದಿದ್ದರೂ ಅಧಿಕೃತ ಫೋಟೊಗಳು ಬಿಡುಗಡೆಯಾಗಿರಲಿಲ್ಲ. ಸಂಜೆ ಹೊತ್ತಿಗೆ ವಿಘ್ನೇಶ್ ತಮ್ಮ ಇನ್‌ಸ್ಟಾ ಗ್ರಾಂ ಮೂಲಕ ಫೋಟೊ ರಿವೀಲ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಫುಲ್ ಖುಷ್ ಆದರು. ಬಳಿಕ ಅವರಿಬ್ಬರ ಡ್ರೆಸ್ ಬಗ್ಗೆ ಭಾರಿ ಚರ್ಚೆ ನಡೆಯಿತು.
ಕ್ಯೂಟ್ ಕಪಲ್, ಕ್ಯೂಟ್ ಡ್ರೆಸ್
ಫೊಟೊ ವಿಘ್ನೇಶ್ ತಮ್ಮ ವಿವಾಹದ ಫೋಟೊಗಳನ್ನು ಇನ್‌ಸ್ಟಾ ಮೂಲಕ ರಿವೀಲ್ ಮಾಡುತ್ತಿದ್ದಂತೆಯೇ ಜನರು ಕ್ಯೂಟ್ ಕಪಲ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಘ್ನೇಶ್ ಅವರು ವೇಷ್ಟಿ, ಕುರ್ತಾ ಮತ್ತು ಶಾಲು ಧರಿಸಿ ಮಿಂಚುತ್ತಿದ್ದರೆ, ಕುಂಕುಮ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು ನಯನತಾರಾ.
ಜೋಡಿಯ ವಸ್ತ್ರ ವಿನ್ಯಾಸ ಮಾಡಿದ ಡಿಸೈನರ್‌ಗಳಾದ ಮೋನಿಕಾ ಮತ್ತು ಕರೀಷ್ಮಾ , ವರ ವಿಘ್ನೇಶ್ ಶಿವನ್ ಅವರ ಉಡುಗೆ ಕುರಿತು ಧರ್ಮ, ಅರ್ಥ, ಕರ್ಮ, ಮೋಕ್ಷ ಎನ್ನುವ ನಾಲ್ಕು ಅರ್ಥಗಳನ್ನು ಹೊಂದಿದೆ ಎಂದು ತಮ್ಮ ಇನ್‌ಸ್ಟಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
ಹೊಯ್ಸಳ ಕೆತ್ತಲೆ ಪ್ರೇರಣೆ
ನಯನತಾರಾ ಅವರ ಕುಂಕುಮ ಬಣ್ಣದ ಸೀರೆ ಮತ್ತು ಅದಕ್ಕೊಪ್ಪುವಂತೆ ಧರಿಸಿದ್ದ ಡಿಸೈನರ್ ಚೈನ್‌ಗಳು ಎಲ್ಲರ ಕಣ್ಮನ ಸೆಳೆದಿವೆ. ಈ ವಿನ್ಯಾಸದ ಹಿನ್ನೆಲೆ ಬಿಚ್ಚಿಟ್ಟ ಡಿಸೈನರ್ಸ್, ಹೊಯ್ಸಳ ದೇವಾಲಯಗಳ ಕೆತ್ತನೆಗಳಿಂದ ಪ್ರೇರಿತವಾಗಿ ಸಾರಿಯ ಡಿಸೈನ್ ಮಾಡಲಾಗಿದ್ದು, ಸಂಪ್ರದಾಯ ಬದ್ಧವಾಗಿ, ರವಿಕೆಯ ಮೇಲೆ ಲಕ್ಷ್ಮೀ ದೇವಿಯ ರೂಪಗಳನ್ನು ಡಿಸೈನ್ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Nayanthara marriage | ವಿಘ್ನೇಶ್ ಕೈ ಹಿಡಿದ ನಯನತಾರಾ: ಹರಸಿದ ರಜನಿ, ಶಾರುಖ್, ಮಣಿರತ್ನಂ
ಶಾರುಖ್ ಹಾಗೂ ರಜನಿಕಾಂತ್ ಹಾರೈಕೆ
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಶಾರುಖ್ ದಂಪತಿಗಳಿಗೆ ಹಾರೈಸಿದ್ದಾರೆ. ಶಾರುಖ್ ಅವರ ಜವಾನ್ ಚಿತ್ರದಲ್ಲಿ ನಯನತಾರಾ ನಟಿಯಾಗಲಿದ್ದಾರೆ ಎಂದು ಸುದ್ದಿ ಕೂಡ ಹಬ್ಬಿತ್ತು.
ಜವಾನ್ ನಿರ್ದೇಶಕ ಅಟ್ಲೀ ಕೂಡ ಶಾರುಖ್ ಜತೆ ಪೋಟೊ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಸಮಾರಂಭದಲ್ಲಿ ಸೂರ್ಯ, ವಿಜಯ್, ಮಣಿರತ್ನಂ ಮತ್ತು ಇತರ ಅನೇಕ ಗಣ್ಯ ಅತಿಥಿಗಳು ಮದುವೆಯಲ್ಲಿ ಕಾಣಿಸಿಕೊಂಡರು.
ಶುಭಾಶಯಗಳ ಸುರಿಮಳೆ
ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆಗೆ ನಟ ನಟಿಯರ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ನಯನತಾರಾ ಅವರ ಕನಸಿನ ಮುದುವೆಗೆ ನಟಿಯರಾದ ಕತ್ರಿನಾ ಕೈಫ್, ಸಮಂತಾ ಪ್ರಭು ಮತ್ತು ಪೂಜಾ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಸುಂದರ ಜೋಡಿ ಎಂದು ಅಭಿನಂದಿಸಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ , ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್, ಕಲಾವಿದರಾದ ಕಾರ್ತಿ, ಶರತ್ ಕುಮಾರ್, ಅಟ್ಲಿ, ವಿಜಯ್ ಸೇತುಪತಿ, ಮಣಿರತ್ನಂ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದರು.
ತಿರುಪತಿಯ ಅರ್ಚಕರ ಪೌರೋಹಿತ್ಯ
ನಯನತಾರಾ ಮತ್ತು ವಿಘ್ನೇಶ್ ತಿರುಪತಿಯಲ್ಲಿ ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಅದು ಸಾಧ್ಯವಾಗದ ಕಾರಣ ತಿರುಪತಿಯಿಂದಲೇ ಅರ್ಚಕರನ್ನು ಆಹ್ವಾನಿಸಿರುವುದಾಗಿ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ʼತಿರುಟ್ಟಣಿ, ವಡಪಳನಿ, ಮೈಲಾಪುರ್, ಕಾಳಿಕಾಂಬಳ್ ದೇವಸ್ಥಾನದ 20 ಪುರೋಹಿತರು ಬೆಳಗ್ಗೆ 8.30 ರ ಸುಮಾರಿಗೆ ಹಿಂದೂ ಧಾರ್ಮಿಕ ಕ್ರಿಯೆಗಳನ್ನು ನೇರವೇರಿಸಿದ್ದಾರೆʼ ಎಂದು ವರದಿ ಮಾಡಿದೆ.
ಇದನ್ನೂ ಓದಿ | Nayanthara marriage | ಇಲ್ಲಿವೆ ʼನಯನʼಮನೋಹರ ಫೋಟೋಗಳು
ʼಕ್ರೇಜಿ ರಿಚ್ ಏಷ್ಯನ್ಸ್ʼ ಸ್ಫೂರ್ತಿ ಪಡೆದರಾ ಜೋಡಿ
ನಯನ ತಾರಾ ಮತ್ತು ವಿಘ್ನೇಶ್ ಹೂವಿನ ಗಿಡಗಳ ಸಾಲಿನ ನಡುವೆ ನೀರಿನಿಂದ ತುಂಬಿದ ನೆಲದ ಮೇಲೆ ನಡೆದುಬರುವ ಚಿತ್ರ ಎಲ್ಲರ ಗಮನ ಸೆಳೆದಿದೆ. ಜನರ ಈ ಫೋಟೊಗಳಿಗೆ ಫಿದಾ ಆಗಿದ್ದಾರೆ. ಈ ನಡುವೆ, ಈ ಕಾನ್ಸೆಪ್ಟ್ ʼಕ್ರೇಜಿ ರಿಚ್ ಏಷ್ಯನ್ಸ್ʼ ಚಿತ್ರದಿಂದ ಕಾಪಿ ಮಾಡಿದ್ದಾ ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡಿದೆ. ಈ ಚಿತ್ರದಲ್ಲಿ ನಟ ಕಾನ್‌ಸ್ಟಾನ್ಸ್ ವು ಮತ್ತು ನಟಿ ಮಿಶೆಲ್ ಯೋ ಅವರು ನೀರಿನಲ್ಲಿ ನಡೆದುಬರುವ ದೃಶ್ಯವಿದೆ.
ಇದನ್ನೂ ಓದಿ | Kushi Movie : ಶೂಟಿಂಗ್ ವೇಳೆ ಅವಘಡದಲ್ಲಿ ವಿಜಯ್ ದೇವರಕೊಂಡ -ಸಮಂತಾಗೆ ಗಾಯ
South Cinema
Rajinikanth : ಬೃಹತ್ ಕೇಕ್ ಕತ್ತರಿಸಿದ ರಜನಿಕಾಂತ್; ಈ ಸಂಭ್ರಮಕ್ಕೇನು ಕಾರಣ?
ರಜನಿಕಾಂತ್ (Rajinikanth) ಅಭಿನಯದ ಜೈಲರ್ ಸಿನಿಮಾದ ಚಿತ್ರೀಕರಣ ಪೂರ್ಣಗೊ೦ಡಿದೆ. ಆ ಹಿನ್ನೆಲೆಯಲ್ಲಿ ಚಿತ್ರತಂಡ ದೊಡ್ಡದೊಂದು ಕೇಕ್ ಕತ್ತರಿಸಿ, ಸಂಭ್ರಮಾಚರಿಸಿದೆ.
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಸದ್ಯ ಜೈಲರ್ ಆಗಿ ಮಿಂಚುವುದಕ್ಕೆ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಈ ಜೈಲರ್ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಅದೇ ಖುಷಿಯಲ್ಲಿ ರಜನಿಕಾಂತ್ ಅವರು ಪೂರ್ತಿ ಚಿತ್ರತಂಡದೊಂದಿಗೆ ಸೇರಿಕೊಂಡು ದೊಡ್ಡದೊಂದು ಕೇಕ್ ಕತ್ತರಿಸಿದ್ದಾರೆ. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಜೈಲರ್ ಸಿನಿಮಾ ಚಿತ್ರೀಕರಣ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಸನ್ ಪಿಕ್ಚರ್ಸ್ ದೊಡ್ಡದೊಂದು ಕೇಕ್ ತರಿಸಿದೆ. ಅದರಲ್ಲಿ ʼಜೈಲರ್ ಶೂಟ್ ರ್ಯಾಪಡ್ʼ ಎಂದು ಬರೆಸಲಾಗಿತ್ತು. ಅದನ್ನು ರಜನಿಕಾಂತ್ ಅವರು ಕತ್ತರಿಸಿದ್ದಾರೆ. ಅವರಿಗೆ ನಟಿ ತಮನ್ನಾ ಭಾಟಿಯಾ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಹಾಗೆಯೇ ಪೂರ್ತಿ ಚಿತ್ರತಂಡವು ಜತೆಯಾಗಿ ಫೋಟೋ ತೆಗೆಸಿಕೊಂಡಿದೆ.
ಇದನ್ನೂ ಓದಿ: Lal Salaam : ರಜನಿಕಾಂತ್ ಜತೆ ಬಣ್ಣ ಹಚ್ಚಲಿದ್ದಾರೆ ಕಪಿಲ್ ದೇವ್
ಈ ಸಂಭ್ರಮದ ಫೋಟೋಗಳನ್ನು ಸನ್ ಪಿಕ್ಚರ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ಒಂದು ಫೋಟೋದಲ್ಲಿ ರಜನಿಕಾಂತ್ ಅವರು ಕ್ಯಾಮೆರಾಕ್ಕೆ ಥಮ್ಸ್ ಅಪ್ ತೋರಿಸಿರುವುದನ್ನು ಕಾಣಬಹುದಾಗಿದೆ.
It's a wrap for #Jailer! Theatre la sandhippom 😍💥#JailerFromAug10@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @kvijaykartik @Nirmalcuts @KiranDrk @StunShiva8 pic.twitter.com/Vhejuww4fg
— Sun Pictures (@sunpictures) June 1, 2023
ಜೈಲರ್ ಸಿನಿಮಾದಲ್ಲಿ ರಜನಿಕಾಂತ್, ತಮನ್ನಾ ಜತೆಯಲ್ಲಿ ಶಿವರಾಜ್ ಕುಮಾರ್, ಜಾಕಿ ಶಾರ್ಫ್, ಮೋಹನ್‌ಲಾಲ್, ರಮ್ಯ ಕೃಷ್ಣ ನಟಿಸಿದ್ದಾರೆ. ರಜನಿಕಾಂತ್ ಈ ಸಿನಿಮಾದಲ್ಲಿ ಜೈಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ 10ರಂದು ತೆರೆ ಕಾಣಲಿದೆ. ಈ ಸಿನಿಮಾದ ನಂತರ ರಜನಿಕಾಂತ್ ಅವರು ಮಗಳು ಐಶ್ವರ್ಯ ನಿರ್ದೇಶಿಸುತ್ತಿರುವ ಲಾಲ್ ಸಲಾಂ ಸಿನಿಮಾದಲ್ಲಿ ನಟಿಸಲಿದ್ದಾರೆ.
South Cinema
Kamal Haasan: ಇಂಡಿಯನ್ 2 ಸಿನಿಮಾದಲ್ಲಿ ಸಿದ್ಧಾರ್ಥ್; ಕಮಲ್ ಜತೆ ಯಾವ ಪಾತ್ರದಲ್ಲಿ ಇವರ ಕಮಾಲ್?
ನಟ ಸಿದ್ಧಾರ್ಥ್ ಅವರು ಕಮಲ್ ಹಾಸನ್ (Kamal Haasan) ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅವರೇ ಸ್ವತಃ ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಶಂಕರ್ ನಿರ್ದೇಶನ ಇರುವ ಈ ಚಿತ್ರವು ಈಗಾಗಲೇ ಒಂದು ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಬೆಂಗಳೂರು: ತಮ್ಮ ಮುಂಬರುವ ತಮಿಳು ಚಿತ್ರ ʻಟಕ್ಕರ್ʼ ಬಿಡುಗಡೆಗೆ ಸಜ್ಜಾಗುತ್ತಿರುವ ನಟ ಸಿದ್ಧಾರ್ಥ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ (Kamal Haasan) ಅವರ ಇಂಡಿಯನ್ 2 ಸಿನಿಮಾದ ಭಾಗವಾಗಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. ಶಂಕರ್ ನಿರ್ದೇಶನದ ಹಾಗೂ ಕಮಲ್ ಹಾಸನ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್ ಹಾಗೂ ಸಿದ್ಧಾರ್ಥ್ ಒಟ್ಟಿಗೆ ಕೆಲಸ ಮಾಡುವಂತಾಗಿದೆ.
ಸಿದ್ಧಾರ್ಥ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ ʻʻಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾದರೂ, ಬ್ಲಾಕ್ ಬಸ್ಟರ್ ಆಗಲಿದೆ. ಈ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನನಗೆ ಸಂತೋಷವಿದೆ. ಇಷ್ಟು ವರ್ಷಗಳ ನಂತರ ಮತ್ತೆ ನಿರ್ದೇಶಕರಾದ ಶಂಕರ್ ಹಾಗೂ ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ನಿರ್ದೇಶಕರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆʼʼ ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ.
ಇಂಡಿಯನ್ 2 ಲುಕ್‌ಗಾಗಿ ಕಮಲ್ ಸಾಕಷ್ಟು ಶ್ರಮ ವಹಿಸಿಸುತ್ತಿದ್ದಾರೆ. ಕಳೆದ ವರ್ಷ, ಬರಹಗಾರ ಜಯಮೋಹನ್ ಅವರು ಸೆಟ್‌ಗಳಲ್ಲಿ ಕಮಲ್ ಹಾಸನ್ ಇರುವ ಬಗೆಯನ್ನು ಬಣ್ಣಿಸಿದ್ದರು. ಕಮಲ್ ಅವರ ಬದ್ಧತೆ ಮತ್ತು ನಟನಾ ಮಯದಲ್ಲಿ ಹೇಗೆ ಇರುತ್ತಾರೆ ಎಂಬುದರ ಬಗ್ಗೆ ವಿವರಿಸಿದ್ದರು. ʻʻಕಮಲ್ ಅವರು ಸೆಟ್‌ಗಳಲ್ಲಿ ಬಹುತೇಕ ಹಸಿವಿನಿಂದಲೇ ಇರುತ್ತಾರೆ. ನಟಿಸುವ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ. ಇದಕ್ಕೆ ಕಾರಣವೂ ಇದ್ದು, ನಟನೆ ಸಂದರ್ಭದಲ್ಲಿ ಏನನ್ನಾದರೂ ತಿನ್ನುತ್ತಿದ್ದರೆ, ಅಂದರೆ ಬಾಯಲ್ಲಿ ಅಗಿಯುತ್ತಿದ್ದರೆ, ಅದು ಪ್ರಾಸ್ಥೆಟಿಕ್ ಮೇಕ್ಅಪ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ನಟಿಸುವಾಗ ಕೇವಲ ಜ್ಯೂಸ್ ಡಯಟ್ ಮಾಡುತ್ತಿದ್ದರುʼʼ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?
ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
South Cinema
Actor Dhanush: ಧನುಷ್ ಹೊಸ ಲುಕ್ ಕಂಡೊಡನೆ ಬಾಬಾ ರಾಮದೇವ್ ಅಂದ್ರು ನೆಟ್ಟಿಗರು!
Actor Dhanush: ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಗಡ್ಡ ಹಾಗೂ ಉದ್ದನೆಯ ಕೂದಲನ್ನು ಕಂಡು ನೆಟ್ಟಿಗರು ನಟ ಧನುಷ್‌ರನ್ನು ಬಾಬಾ ರಾಮದೇವ್ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು: ಧನುಷ್ (Actor Dhanush) ಕೊನೆಯದಾಗಿ ʻವಾತಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತು. ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಈ ಸಿನಿಮಾ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸದ್ಯ ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ಶಿವ ರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ನಟ ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಗಡ್ಡ ಹಾಗೂ ಉದ್ದನೆಯ ಕೂದಲನ್ನು ಕಂಡು ನೆಟ್ಟಿಗರು ನಟ ಧನುಷ್‌ರನ್ನು ಬಾಬಾ ರಾಮದೇವ್ ಎಂದು ಕಮೆಂಟ್ ಮಾಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಜೀನ್ಸ್ ಮತ್ತು ಸನ್‌ಗ್ಲಾಸ್‌ನೊಂದಿಗೆ ನೇರಳೆ ಬಣ್ಣದ ಸ್ವೆಟ್ಶರ್ಟ್ ಧರಿಸಿದ್ದರು ಧನುಷ್. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ನಲ್ಲಿ ʻʻಕ್ಯಾಶುಯಲ್ ಬಟ್ಟೆಗಳನ್ನು ಧರಿಸಿ ಹೊರಬಂದಿರುವುದು ನೋಡಿದರೆ ಬಾಬಾ ರಾಮದೇವ್ ಎಂದು ನಾನು ಭಾವಿಸಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು ʻʻಗುರುತು ಹಿಡಿಯಲಾರದಷ್ಟು ವಿಭಿನ್ನವಾಗಿ ಕಾಣುತ್ತಿದ್ದಾರೆʼʼಎಂದರೆ ಇನ್ನೊಬ್ಬರು ʻ”ಬಾಬಾ ರಾಮದೇವ್.. ಅದು ನೀವೇ?” ಎಂದು ಕಮೆಂಟ್ ಮಾಡಿದ್ದಾರೆ.
ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಧನುಷ್
ಕ್ಯಾಪ್ಟನ್ ಮಿಲ್ಲರ್ ಸಿನಿಮಾ
ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಸತ್ಯಜ್ಯೋತಿ ಫಿಲ್ಮ್ಸ್ ಬಂಡವಾಳ ಹೂಡಿದೆ. ಇನ್ನು ಸಂದೀಪ್ ಕಿಶನ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ‘ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ; Actor Dhanush: ಹೊಸ ಸಿನಿಮಾ ಅನೌನ್ಸ್ ಮಾಡಿದ ಕಾಲಿವುಡ್ ಸ್ಟಾರ್ ಧನುಷ್!
ವೈರಲ್ ವಿಡಿಯೊ
ಐತಿಹಾಸಿಕ ಕಥಾ ಹಂದರ ಹೊಂದಿರುವ ‘ಕ್ಯಾಪ್ಟನ್ ಮಿಲ್ಲರ್’ !
ಈ ಚಿತ್ರ 1930 ಮತ್ತು 40ರ ದಶಕದ ಮದ್ರಾಸ್ ಪ್ರೆಸಿಡೆನ್ಸಿ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣ, ನಾಗೂರನ್ ಅವರ ಸಂಕಲನ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ. ಸತ್ಯಜ್ಯೋತಿ ಫಿಲ್ಮ್ಸ್‌ನ ಸೆಂಧಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಿಸಿರುವ ʻಕ್ಯಾಪ್ಟನ್ ಮಿಲ್ಲರ್ʼ 2023ರಲ್ಲಿ ತೆರೆ ಕಾಣಲಿದೆ. ಮದನ್ ಕರ್ಕಿ ಸಂಭಾಷಣೆ ಇದೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಪೂರ್ಣಿಮಾ ರಾಮಸ್ವಾಮಿ ಮತ್ತು ಕಾವ್ಯ ಶ್ರೀರಾಮ್ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ, ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ವದಂತಿಗಳಿವೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಸರಿಡದ ತಮಿಳು ಚಿತ್ರಕ್ಕಾಗಿ ಒಂದಾದ ಮಾರಿ ಸೆಲ್ವರಾಜ್ ಮತ್ತು ಧನುಷ್
ಕ್ಯಾಪ್ಟನ್ ಮಿಲ್ಲರ್ ಜತೆಗೆ, ಧನುಷ್ ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಮುಂಬರುವ ಇನ್ನೂ ಹೆಸರಿಡದ ತಮಿಳು ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಹಿಂದೆ ಕರ್ಣನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಮಾರಿ ಸೆಲ್ವರಾಜ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಿಸಲಿದ್ದಾರೆ. ಏಪ್ರಿಲ್ 9ರಂದು, ಧನುಷ್ ಅವರು ಹೊಸ ಚಿತ್ರವನ್ನು ಮಾರಿ ಸೆಲ್ವರಾಜ್ ಅವರೊಂದಿಗೆ ಘೋಷಿಸಿದ್ದರು.
South Cinema
Keerthy Suresh: ಹೊಂಬಾಳೆ ಫಿಲ್ಮ್ಸ್ ಮೊದಲ ತಮಿಳು ಚಿತ್ರದ ಶೂಟಿಂಗ್ ಮುಕ್ತಾಯ!
Keerthy Suresh: ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಮೊದಲ ತಮಿಳು ಚಿತ್ರ ‘ರಘುತಾತʼ ಚಿತ್ರೀಕರಣ ಪೂರ್ಣಗೊಂಡಿದೆ. ಕೀರ್ತಿ ಸುರೇಶ್ (Keerthy Suresh) ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆಯ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಶ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಈ ಸಿನಿಮಾಗಿದೆ. ‘ರಘುತಾತʼ’ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಹೇಳಿಕೊಂಡಿದೆ.
ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದನ್ನೂ ಓದಿ: Keerthy Suresh: ಮಲ್ಟಿ ಕಲರ್ ಉಡುಗೆಯಲ್ಲಿ ಕೀರ್ತಿ ಸುರೇಶ್ ಹೊಸ ಫೋಟೊಶೂಟ್!
ಹೊಂಬಾಳೆ ಫಿಲ್ಮ್ಸ್ ಟ್ವೀಟ್
🎬 That’s a wrap, folks! 🎉🎥 Raghuthatha, where the revolution finds its home, has completed its fiery shoot! Stay tuned for a revolution that’ll make your heart race! #Raghuthatha@KeerthyOfficial @hombalefilms #VijayKiragandur @sumank #MSBhaskar @yaminiyag @RSeanRoldan… pic.twitter.com/rk4oSw7FyO
— Hombale Films (@hombalefilms) May 26, 2023
ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದೆ ಹೊಂಬಾಳೆ
ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಇದೀಗ ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ತೆಲುಗಿನಲ್ಲಿ ‘ಸಲಾರ್’, ಮಲಯಾಳಂನಲ್ಲಿ ‘ಟೈಸನ್’ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಕೈಗೆತ್ತಿಕೊಂಡಿದೆ. ಕನ್ನಡದಲ್ಲಿ ‘ಕಾಂತಾರ’- 2, ‘ರಿಚರ್ಡ್ ಆಂಟನಿ’, ‘ಯುವ’, ‘ಧೂಮಂ’, ‘ಬಘೀರ’ ಸಿನಿಮಾಗಳು ಶುರುವಾಗಿದ್ದರೆ ಮತ್ತೊಂದಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಮುಂದೆ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲೂ ಸಿನಿಮಾಗಳು ಮೂಡಿ ಬರಲಿವೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ‘ಧೂಮಂ’ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ‘ಸಲಾರ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema23 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ23 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್
-
ಕರ್ನಾಟಕ21 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!