ಬಾಲಿವುಡ್
ಖಾನ್ಗಳ ಜತೆ ಕೆಲಸ ಮಾಡುವ ಆಸೆ ಎಂದಿಗೂ ಇರಲಿಲ್ಲ ಎಂದ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ !
ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇಂದು ಬೆಳಗ್ಗೆ ಟ್ರೇಲರ್ ರಿಲೀಸ್ ಆಗಿದೆ.
ಮುಂಬಯಿ: ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್, ಕನ್ನಡತಿ ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮುಖ್ಯ ಭೂಮಿಕೆಯಲ್ಲಿರುವ ‘ಗುಡ್ ಬೈ (Good Bye)’ ಹಿಂದಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮುಂಬಯಿಯಲ್ಲಿ ನಡೆದ ಈ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಅವರು ವರ್ಚ್ಯುವಲ್ ಆಗಿ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮತ್ತು ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಸಮ್ಮುಖದಲ್ಲಿ ಟ್ರೇಲರ್ ರಿಲೀಸ್ ಆಯಿತು. ಅಂದಹಾಗೇ, ಏಕ್ತಾ ಕಪೂರ್ ಇದೇ ಮೊದಲ ಬಾರಿಗೆ ಬಿಗ್ ಬಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಅಂದರೆ ಬಾಲಾಜಿ ಮೋಷನ್ ಪಿಕ್ಟರ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಏಕ್ತಾ ಕಪೂರ್, ಶೋಭಾ ಕಪೂರ್ ಮತ್ತು ವಿಕಾಸ್ ಬಾಹ್ಲ್ ನಿರ್ಮಾಪಕರು.
ಟ್ರೇಲರ್ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗೋಷ್ಠಿ ನಡೆಸಿದ ಏಕ್ತಾ ಕಪೂರ್ ತಮ್ಮ ಸಂತೋಷವನ್ನು ಹೇಳಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಜತೆ ಕೆಲಸ ಮಾಡಬೇಕು ಎಂಬ ಬಾಲ್ಯದ ಕನಸು ಈಡೇರಿತು ಎಂದಿದ್ದಾರೆ. ‘ನಾನು ಚಿಕ್ಕವಳಿರುವಾಗಿನಿಂದಲೂ ನನಗೆ ಅಮಿತಾಬ್ ಬಚ್ಚನ್ ಜತೆ ಕೆಲಸ ಮಾಡಬೇಕು ಎಂಬ ಬಯಕೆ ಇತ್ತು. ಇವರನ್ನು ಹೊರತು ಪಡಿಸಿದರೆ ಇನ್ಯಾರೊಂದಿಗಾದರೂ ಕೆಲಸ ಮಾಡಲೇಬೇಕು ಎಂದು ಯಾವತ್ತೂ ಅನ್ನಿಸಿಲ್ಲ. ಯಾವ ಖಾನ್ಗಳ ಜತೆಗಾಗಲೀ, ಮತ್ಯಾರೊಂದಿಗಾಗಲೀ ಸಿನಿಮಾ ಮಾಡುವ ಆಸೆ ಎಂದಿಗೂ ಹೊಂದಿರಲೂ ಇಲ್ಲ’ ಎಂದು ಏಕ್ತಾ ಕಪೂರ್ ಹೇಳಿಕೊಂಡಿದ್ದಾರೆ.
ನನಗೆ ಬಿಗ್ ಬಿ ಎಂದರೆ ಯಾವಾಗಲೂ ಇಷ್ಟ. ಅವರ ಮಕ್ಕಳಾದ ಶ್ವೇತಾ ಮತ್ತು ಅಭಿಷೇಕ್ ನನಗೆ ಸ್ನೇಹಿತರು. ಅಮಿತಾಬ್ ಬಚ್ಚನ್ ಮನೆಯಲ್ಲಿ ನಡೆಯುತ್ತಿದ್ದ ಹುಟ್ಟುಹಬ್ಬದ ಪಾರ್ಟಿಗಳಿಗೆ ನಾನು ಹಾಜರಾಗುತ್ತಿದ್ದೆ. ಆಗೆಲ್ಲ ಅಮಿತ್ ಜೀ ನೋಡಲು ಸಾಧ್ಯವಾಗುತ್ತಿತ್ತು. ಯಾವಾಗಲೋ ಒಮ್ಮೆ ಅಮಿತಾಬ್ ಬಚ್ಚನ್ ಅವರು ನನ್ನ ತಂದೆ (ನಟ ಜಿತೇಂದ್ರ)ಗೆ ‘ನಿಮ್ಮ ಮಗಳು ನಮ್ಮ ಮನೆಗೆ ಬಂದಿದ್ದಳು, ಸಂಜೆ ಪೂರ್ತಿ ನನ್ನನ್ನು ನೋಡಿಯೇ ಕಾಲಕಳೆದಳು’ ಎಂದು ಹೇಳಿದ್ದರಂತೆ’ ಎಂದು ಹಳೇ ದಿನಗಳನ್ನೂ ಏಕ್ತಾ ಕಪೂರ್ ನೆನಪಿಸಿಕೊಂಡರು.
ಇತ್ತೀಚೆಗಷ್ಟೇ ಗುಡ್ ಬೈ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಇಂದು ಬೆಳಗ್ಗೆ ಟ್ರೇಲರ್ ರಿಲೀಸ್ ಆಗಿದೆ. ಪ್ರೀತಿ, ಲಾಜಿಕ್, ಸಂಪ್ರದಾಯ, ಮಾನವೀಯತೆ, ದುಃಖ – ಈ ಎಲ್ಲ ಭಾವಗಳನ್ನೂ ಸಿನಿಮಾ ಒಳಗೊಂಡಿರುವುದು 2 ನಿಮಿಷ 59 ಸೆಕೆಂಡ್ಗಳ ಈ ಟ್ರೇಲರ್ನಲ್ಲೇ ಸಾಬೀತಾಗುತ್ತದೆ. ಗುಡ್ಬೈನಲ್ಲಿ ಅಮಿತಾಬ್ ಬಚ್ಚನ್ ಮಗಳಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಅಕ್ಟೋಬರ್ 7 ರಂದು ಚಿತ್ರ ತೆರೆಕಾಣಲಿದೆ ಎಂದು ಹೇಳಲಾಗಿದೆ. ಇಲ್ಲಿದೆ ನೋಡಿ ಟ್ರೇಲರ್..
ಇದನ್ನೂ ಓದಿ: Goodbye Movie | ಬಾಲಿವುಡ್ ಬಿಗ್ ಬಿ ಮಗಳಾಗಿ ರಶ್ಮಿಕಾ ಮಂದಣ್ಣ: ರಿಲೀಸ್ ಡೇಟ್ ಅನೌನ್ಸ್!
ದೇಶ
ಬಾಲಕಿಯನ್ನು ರೇಪ್ ಮಾಡಿ, ಇನ್‌ಸ್ಟಾದಲ್ಲಿ ಫೋಟೋ ಷೇರ್ ಮಾಡಿದ ಕಾಮುಕ ಗಾಯಕ ಈಗ ಅಂದರ್!
Bhojpuri Singer Arrested: ಭೋಜಪುರಿ ಗಾಯಕನೊಬ್ಬ 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದ.
ಗುರುಗ್ರಾಮ: ಬಾಲಕಿಯನ್ನು (13 Year Old girl) ಅತ್ಯಾಚಾರ (Rape) ಮಾಡಿ, ಆಕೆಯ ಆಕ್ಷೇಪಾರ್ಹ ಭಾವಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ ಆರೋಪದ ಮೇರೆಗೆ ಭೋಜಪುರಿ ಗಾಯಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ(Bhojpuri Singer Arrested). ಬಂಧಿತನನ್ನು 21 ವರ್ಷದ ಅಭಿಷೇಕ್ (Abhishek) ಎಂದು ಗುರುತಿಸಲಾಗಿದೆ. ಬಿಹಾರದ (Bihar) ಮೂಲದ ಈ ಯುವಕನನ್ನು ಭೋಜಪುರಿ ಸಿಂಗರ್ ಬಬುಲ್ ಬಿಹಾರಿ ಎಂದೂಕರೆಯಲಾಗುತ್ತದೆ. ಯುಟ್ಯೂಬ್ ಚಾನೆಲ್‌ನಲ್ಲಿ ಇವರಿಗೆ 27 ಸಾವಿರಕ್ಕೂ ಅಧಿಕ ಜನರು ಫಾಲೋವರ್ಸ್ ಇದ್ದಾರೆ.
ಆರೋಪಿ ಗಾಯಕ ದಿಲ್ಲಿಯ ರಾಜೀವ್ ನಗರದಲ್ಲಿ ಎರಡು ವರ್ಷಗಳ ಹಿಂದೆ ವಾಸವಾಗಿದ್ದರು. ಆಗ 13 ವರ್ಷದ ಬಾಲಕಿಯ ಸ್ನೇಹ ಸಂಪಾದಿಸಿದ ಆರೋಪಿ, ಆಕೆಯನ್ನು ಹೊಟೇಲ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕ್ಷೇಪಾರ್ಹ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ. ಈ ಘಟನೆಯ ಬಳಿಕ ಬಾಲಕಿ ಆತನಿಂದ ದೂರವಾಗಿದ್ದಾಳೆ. ಅಲ್ಲದೇ, ಈ ಘಟನೆಯ ಬಗ್ಗೆ ಯಾರೊಂದಿಗೆ ಆಕೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಕೆಲವು ದಿನಗಳ ಹಿಂದೆ ಆರೋಪಿ, ಸಂತ್ರಸ್ತೆಯ ಆಕ್ಷೇಪಾರ್ಹ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಫೋಟೋಗಳನ್ನು ನೋಡಿದ ಬಳಿಕ, ಸಂತ್ರಸ್ತೆಯ ಕುಟುಂಬಸ್ಥರು ಆಕೆಯನ್ನು ಪ್ರಶ್ನಿಸಿದ್ದಾರೆ. ಆಗ, ಆಕೆ ಎಲ್ಲ ಮಾಹಿತಿಯನ್ನು ಅವರೆದುರಿಗೆ ಹೇಳಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Crime : ಬಾಡಿಗೆ ಸರಿಯಾಗಿ ಕೊಡಲಿಲ್ಲವೆಂದು ಕುಡುಕನನ್ನೇ ರೇಪ್ ಮಾಡಿದ ಆಟೋ ಚಾಲಕ!
ಸಂತ್ರಸ್ತೆಗೆ ಕೌನ್ಸೆಲಿಂಗ್ ಮಾಡಿದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಗಾಯಕನ ಪೋಕ್ಸೋ ಹಾಗೂ ಐಟಿ ಕಾಯ್ದೆ ಉಲ್ಲಂಘನೆಯ ಆರೋಪಗಳನ್ನು ಹೊರಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆತನನ್ನು ಸಿಟಿ ಕೋರ್ಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಭಾಶ್ ಬೋಕನ್ ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
South Cinema
Sara Ali Khan: ಶುಭ್‌ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ
Sara Ali Khan: ಇತ್ತೀಚಿನ ಸಂದರ್ಶನವೊಂದರಲ್ಲಿ, ಕ್ರಿಕೆಟಿಗ ಶುಭಮನ್ ಗಿಲ್ ಅವರೊಂದಿಗಿನ ಹಿಂದಿನ ಒಡನಾಟವನ್ನು ಗಮನಿಸಿ, ಕ್ರಿಕೆಟಿಗರನ್ನು ಮದುವೆಯಾಗುವ ಸಾಧ್ಯತೆಯ ಬಗ್ಗೆ ನಟಿಯನ್ನು ಪ್ರಶ್ನಿಸಲಾಯಿತು.
ಬೆಂಗಳೂರು: ಸಾರಾ ಅಲಿ ಖಾನ್ (Sara Ali Khan) ತಮ್ಮ ಇತ್ತೀಚಿನ ಚಲನಚಿತ್ರವಾದ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾದ ಸಕ್ಸೆಸ್‌ವನ್ನು ಆನಂದಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕ್ರಿಕೆಟಿಗ ಶುಭಮನ್ ಗಿಲ್ ಅವರೊಂದಿಗಿನ ಹಿಂದಿನ ಒಡನಾಟವನ್ನು ಗಮನಿಸಿ, ಕ್ರಿಕೆಟಿಗರನ್ನು ಮದುವೆಯಾಗುವ ಸಾಧ್ಯತೆಯ ಬಗ್ಗೆ ನಟಿಯನ್ನು ಪ್ರಶ್ನಿಸಲಾಯಿತು. ಈ ಪ್ರಶ್ನೆಗೆ ಸಾರಾ ತಮ್ಮದೇ ಆದ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ.
ಕ್ರಿಕೆಟಿಗನನ್ನು ಮದುವೆಯಾಗುವ ಮೂಲಕ ನಿಮ್ಮ ಅಜ್ಜಿ ಶರ್ಮಿಳಾ ಟ್ಯಾಗೋರ್ ಅವರ ಹಾದಿಯಲ್ಲೇ ನೀವು ಸಾಗ ಬಯಸುವಿರಾ ಎಂಬ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿದ ಸಾರಾ, “ನಾನು ಯಾವ ರೀತಿಯ ವ್ಯಕ್ತಿ ಎಂದರೆ, ನಟ, ಕ್ರಿಕೆಟಿಗ, ಉದ್ಯಮಿ, ವೈದ್ಯರು… ಇವೆಲ್ಲ ಮುಖ್ಯವಲ್ಲ. ನನ್ನನ್ನು ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಅರ್ಥೈಸಿಕೊಳ್ಳುವರು ಬೇಕು. ಇದು ವೃತ್ತಿಗಿಂತ ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆʼ ಎಂದು ಹೇಳಿದರು.
ನಟಿ ಮಾತು ಮುಂದುವರಿಸಿ “ನಾನು ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಬಹುತೇಕ ಖಚಿತವಾಗಿ ಹೇಳಬಲ್ಲೆ, ನನ್ನ ಜೀವನದಲ್ಲಿ ಮದುವೆಯಾಗಲಿರುವ ವ್ಯಕ್ತಿಯನ್ನು ಇನ್ನೂ ನಾನು ಭೇಟಿಯಾಗಿಲ್ಲʼʼ ಎಂದರು. ಕೆಲವು ದಿನಗಳ ಹಿಂದೆ ಶುಭಮನ್ ಹಾಗೂ ಸಾರಾ ಪರಸ್ಪರ್ ಸಾಮಾಜಿಕ ಜಾಲತಾಣಗಳಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದರು.
ಇದನ್ನೂ ಓದಿ: Sara Ali Khan: ಮತ್ತೆ ಮಹಾಕಾಳೇಶ್ವರನ ದರ್ಶನ ಪಡೆಯುವೆ; ಮುಸ್ಲಿಮಳೇ ಅಲ್ಲ ಅಂದವರಿಗೆ ಸಾರಾ ಅಲಿ ಖಾನ್ ತಿರುಗೇಟು
ಸುಳಿವು ಕೊಟ್ಟಿದ್ದ ಗಿಲ್
ಶುಭ್‌ಮನ್ ಗಿಲ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದವರು. ಬಳಿಕ ಅವರಿಬ್ಬರೂ ಬೇರ್ಪಟ್ಟಿದ್ದರು ಎನ್ನಲಾಗಿದೆ. ಇದಾದ ಬಳಿಕ ನಟಿ ಸಾರಾ ಅಲಿ ಖಾನ್ ಜತೆ ಡಿನ್ನರ್ಗೆ ಶುಭ್‌ಮನ್ ಹೋಗಿದ್ದು ಸುದ್ದಿಯಾಗಿತ್ತು. ಜತೆಗೆ ವಿಮಾನವೊಂದರಲ್ಲಿ ಜತೆಯಾಗಿ ಪ್ರಯಾಣ ಮಾಡಿದ್ದರ ವಿಡಿಯೊಗಳು ಬೆಳಕಿಗೆ ಬಂದಿದ್ದವು.
ಕೆಲವು ತಿಂಗಳ ಹಿಂದೆ, ಸೋನಮ್ ಬಜ್ವಾ ಅವರೊಂದಿಗಿನ ಸಂದರ್ಶನದ ಸಮಯದಲ್ಲಿ ಮಾತನಾಡಿದ ಗಿಲ್, ಸಾರಾ ಜತೆಗಿನ ಡೇಟಿಂಗ್ ಸತ್ಯವೂ ಇರಬಹುದು, ಇಲ್ಲದೆಯೂ ಇರಬಹುದು ಎಂದು ಹೇಳಿದ್ದರು. ಈ ಮೇಲೆ ಅಭಿಮಾನಿಗಳ ಅನುಮಾನ ಹೆಚ್ಚಾಗಿತ್ತು.
ಸಾರಾ ಅಲಿ ಖಾನ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2018ರಲ್ಲಿ ಕೇದಾರನಾಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ಸಾರಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾಗಳೂ ಸಕ್ಸೆಸ್ ಕಂಡಿಲ್ಲ. ಇದಲ್ಲದೆ, ಜಗನ್ ಶಕ್ತಿ ನಿರ್ದೇಶನದ ʻ ಏ ವತನ್ ಮೇರೆ ವತನ್ʼ ಮತ್ತು ಹೋಮಿ ಅದ್ಜಾನಿಯಾ ಅವರ ʻಮರ್ಡರ್ ಮುಬಾರಕ್ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ.
South Cinema
Actor Yash: ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್, ಆಲಿಯಾ; ರಾಕಿಂಗ್ ಸ್ಟಾರ್ ಯಶ್ ಪಾತ್ರವೇನು?
ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಸಿನಿಮಾ ಡಿಸೆಂಬರ್ ವೇಳೆಗೆ ಸೆಟ್ಟೇರಲಿದೆ ಎಂದು ವರದಿಯಾಗಿದೆ.
ಬೆಂಗಳೂರು: ಕೆಲವು ದಿನಗಳ ಹಿಂದೆ ನಿರ್ದೇಶಕ ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ರಾವಣನ ಪಾತ್ರವನ್ನು ನಿರ್ವಹಿಸುವ ನಟನನ್ನು ನಿರ್ದೇಶಕರು ಹುಡುಕಲು ಸಾಧ್ಯವಾಗದ ಕಾರಣ ಈ ಪ್ರಾಜೆಕ್ಟ್ ನಿಧಾನ ಗತಿಯಲ್ಲಿ ಸಾಗಿತ್ತು ಎನ್ನಲಾಗಿದೆ. ಇದೀಗ ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಸಿನಿಮಾ ಡಿಸೆಂಬರ್ ವೇಳೆಗೆ ಸೆಟ್ಟೇರಲಿದೆ ಎಂದು ವರದಿಯಾಗಿದೆ.
ಕಳೆದ ಕೆಲವು ವಾರಗಳಿಂದ ರಣಬೀರ್ ಮತ್ತು ಆಲಿಯಾ ಇಬ್ಬರೂ ಅನಿಮೇಷನ್ ಸ್ಟುಡಿಯೋ ಡಿಎನ್ಇಜಿಗೆ ಭೇಟಿ ನೀಡಿದ್ದಾರೆ. ರಾಮಾಯಣ ಕೆಲಸದ ಪ್ರೊಗ್ರೆಸ್ ವೀಕ್ಷಿಸಲು ಅವರು ಅಲ್ಲಿಗೆ ಭೇಟಿ ನೀಡಿದ್ದರು. ರಣಬೀರ್ ಕಪೂರ್ ಅವರ ಲುಕ್ ಟೆಸ್ಟ್ ನಡೆಯಬೇಕಷ್ಟೆ. ಇದರ ಜತೆ ನಿತೇಶ್ ತಿವಾರಿ ಕಚೇರಿಗೂ ಅವರು ಭೇಟಿ ನೀಡಿದ್ದಾರೆ’ ಎಂದು ಮೂಲಗಳು ಹೇಳಿರುವುದಾಗಿ ಪಿಂಕ್ವಿಲ್ಲಾ ವರದಿ ಮಾಡಿದೆ.
ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಚಿತ್ರತಂಡ ದೀಪಾವಳಿ ಹೊತ್ತಿಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಿದೆ ಎನ್ನಲಾಗಿದೆ.
ಇದನ್ನೂ ಓದಿ: Actor Yash: ಅಭಿಷೇಕ್ ದಂಪತಿಗೆ ವಿಶ್ ಮಾಡಿದ ಯಶ್ -ರಾಧಿಕಾ; ಸೈಲಿಶ್ ಆಗಿ ಕಂಡ ರಾಕಿ ಭಾಯ್!
ರಾವಣನ ಪಾತ್ರ ನಿಭಾಯಿಸಲಿದ್ದಾರಾ ಯಶ್?
ಜನವರಿ 28 ರಂದು, ನಿತೇಶ್ ತಿವಾರಿ ಮತ್ತು ಮಧು ಮಂತೇನಾ ರಾವಣನ ಪಾತ್ರದಲ್ಲಿ ನಟಿಸಲು ಯಶ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಪಿಂಕ್ವಿಲ್ಲಾ ಮೊದಲು ವರದಿ ಮಾಡಿತ್ತು. ಕಳೆದ ಎಂಟು ತಿಂಗಳಿನಿಂದ ಸಂಭಾಷಣೆಗಳು ನಡೆಯುತ್ತಿವೆ ಎಂದು ಮೂಲವು ಹಂಚಿಕೊಂಡಿದೆ. ರಾಮಾಯಣದ ಹೊರತಾಗಿ, ಯಶ್ ಕೂಡ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಯಶ್ ಅವರು ಸಿನಿಮಾಗೆ ಅಧಿಕೃತವಾಗಿ ಸಹಿ ಹಾಕುವುದು ಅಷ್ಟೇ ಬಾಕಿ ಇದೆ ಎನ್ನಲಾಗುತ್ತಿದೆ. ಈ ಮೊದಲು ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಅಪ್ಡೇಟ್ ಸಿಕ್ಕಿಲ್ಲ.
ಈ ಸಿನಿಮಾವನ್ನು ಅಲ್ಲು ಅರವಿಂದ್, ಮಧು ಮಂತೇನಾ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಲಿದ್ದು, ನಿತೇಶ್ ತಿವಾರಿ ಮತ್ತು ರವಿ ಉದ್ಯಾವರ್ ನಿರ್ದೇಶಕರಾಗಿದ್ದಾರೆ. 2023ರ ಡಿಸೆಂಬರ್ /2024ರ ಜನವರಿಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.
South Cinema
Nawazuddin Siddiqui: ಬಾಯ್‌ಫ್ರೆಂಡ್ ಪರಿಚಯಿಸಿದ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ; ಆತ ಭಾರತದವನಲ್ಲ!
ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ ಆಲಿಯಾ (Aaliya) ಅವರು ತಮ್ಮ ಸ್ನೇಹಿತನೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ ಆಲಿಯಾ (Aaliya) ಅವರು ತಮ್ಮ ಸ್ನೇಹಿತನೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ಆಲಿಯಾ ತಾವು ಹೊಸ ನಿರ್ಧಾರಕ್ಕೆ ಬಂದಿರುವ ಬಗ್ಗೆ ಹಾಗೂ ಬಾಯ್‌ಫ್ರೆಂಡ್ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ʻʻನನಗೆ ನನ್ನದೇ ಆದ ಜೀವನವಿದೆ, ನಾನು ನನ್ನ ಮಕ್ಕಳೊಂದಿಗೆ ಬದುಕಬೇಕು ಮತ್ತು ನನ್ನ ಮಕ್ಕಳಿಗೆ ಯಾವುದೇ ಸಮಸ್ಯೆಗಳನ್ನು ನೀಡಲು ನಾನು ಬಯಸುವುದಿಲ್ಲʼʼ ಎಂದು ಮಾಧ್ಯಮವೊಂದರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸ ಫೋಟೊ ವೈರಲ್ ಆಗುತ್ತಿದ್ದಂತೆ ಆಲಿಯಾ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ ʻʻಹೌದು, ನಾನು ಹಳೆಯ ಸಂಬಂಧದಿಂದ ಹೊರಗಡೆ ಬರಲು ನಿರ್ಧರಿಸಿದ್ದೇನೆ. ನನ್ನ ಈ ಸಂಬಂಧವು ಸ್ನೇಹಕ್ಕಿಂತ ಹೆಚ್ಚಾಗಿದೆ. ನನಗೆ ನನ್ನದೇ ಆದ ಜೀವನವಿದೆ. ನಾನು ನನ್ನ ಮಕ್ಕಳೊಂದಿಗೆ ಬದುಕಬೇಕು ಮತ್ತು ನನ್ನ ಮಕ್ಕಳಿಗೆ ಯಾವುದೇ ಸಮಸ್ಯೆಗಳನ್ನು ನೀಡಲು ನಾನು ಬಯಸುವುದಿಲ್ಲ. ಇದು ಗೌರವಯುತ ಸಂಬಂಧ. ನೀವು ಒಳ್ಳೆಯದನ್ನೂ ಮಾಡಿದರೂ ಕೂಡ ಜನರು ಇನ್ನೂ ನಿಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾರೆ.”ಎಂದರು.
ʻʻಹಣವು ನಿಮಗೆ ಸಂತೋಷವನ್ನು ನೀಡುವುದಿಲ್ಲ ಆದರೆ ವ್ಯಕ್ತಿ ನೀಡಬಲ್ಲ. ಅವರು ಭಾರತದವರಲ್ಲ. ಇಟಲಿಯವರು. ನಾವು ದುಬೈನಲ್ಲಿ ಭೇಟಿಯಾಗಿದ್ದೇವೆ. ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾವು ದೀರ್ಘಕಾಲ ಸ್ನೇಹಿತರಾಗಿದ್ದೇವೆ. ಅವರನ್ನು ಅರ್ಥ ಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತುʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Nawazuddin Siddiqui: ಪತ್ನಿ ಆರೋಪಕ್ಕೆ ಫಸ್ಟ್‌ಟೈಮ್ ಪ್ರತಿಕ್ರಿಯಿಸಿದ ನವಾಜುದ್ದೀನ್ ಸಿದ್ದಿಕಿ: ಇದು ಎಮೋಷನ್ ಅಂದಿದ್ಯಾಕೆ?
ಸಂಬಂಧಗಳು ಸ್ನೇಹಕ್ಕಿಂತಲೂ ಮಿಗಿಲಾದದ್ದು!
ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆಲಿಯಾ ಹೊಸ ಬಾಯ್‌ಫ್ರೆಂಡ್ ಜತೆಗಿನ ಫೋಟೊ ಹಂಚಿಕೊಂಡುʻ ನಾನು ಅಮೂಲ್ಯವಾದ ಸಂಬಂಧದಿಂದ ಹೊರಬರಲು 19 ವರ್ಷಗಳನ್ನು ತೆಗೆದುಕೊಂಡೆ. ಆದರೆ ನನ್ನ ಜೀವನದಲ್ಲಿ, ನನ್ನ ಮಕ್ಕಳು ನನ್ನ ಮೊದಲ ಆದ್ಯತೆ. ಜೀವನದಲ್ಲಿನ ಕೆಲವು ಸಂಬಂಧಗಳು ಸ್ನೇಹಕ್ಕಿಂತಲೂ ಮಿಗಿಲಾದವು. ಈ ಸಂಬಂಧ ಕೂಡ ಇದೇ ರೀತಿ ಆಗಿರುವಂಥದ್ದು. ಇದರಲ್ಲಿ ನಾನು ಖುಷಿಯಾಗಿದ್ದೇನೆ. ಹಾಗಾಗಿ ಈ ಖುಷಿಯ ವಿಷಯವನ್ನು ನಿಮ್ಮ ಜತೆ ಹಂಚಿಕೊಂಡಿದ್ದೇನೆ. ಖುಷಿಯಾಗಿ ಬದುಕುವ ಹಕ್ಕು ನನಗೆ ಇಲ್ಲವೇ’ ಎಂದು ಆಲಿಯಾ ಸಿದ್ದಿಕಿ ಅವರು ಪ್ರಶ್ನೆ ಮಾಡಿದ್ದಾರೆ.
ಆಲಿಯಾ ಸಿದ್ದಿಕಿ ಮಾಡಿದ ಈ ಪೋಸ್ಟ್ಗೆ ಅನೇಕ ಬಗೆಯ ಪ್ರತಿಕ್ರಿಯೆಗಳು ಬಂದಿವೆ. ‘ನಿಮ್ಮ ಸರ್ನೇಮ್ ಬದಲಾಯಿಸಿಕೊಳ್ಳಿ’ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅದಕ್ಕೆ ಉತ್ತರಿಸಿರುವ ಆಲಿಯಾ ಅವರು ‘ಅತಿ ಶೀಘ್ರದಲ್ಲಿ’ ಎಂದು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಕೂಡ ಅವರು ಬರೆದುಕೊಂಡಿದ್ದರು. ಅಧಿಕೃತವಾಗಿ ವಿಚ್ಛೇದನ ಪಡೆದ ಬಳಿಕ ‘ಆಲಿಯಾ ಸಿದ್ಧಿಕಿ’ ಎಂಬ ಹೆಸರನ್ನು ‘ಅಂಜನಾ ಕಿಶೋರ್ ಪಾಂಡೆ’ ಎಂದು ಬದಲಾಯಿಸಿಕೊಳ್ಳುವುದಾಗಿ ಅವರು ತಿಳಿಸಿದ್ದರು.
ಇದನ್ನೂ ಒದಿ: Nawazuddin Siddiqui : ನವಾಜುದ್ದೀನ್ ನೀವು ಕಂಡಂತಲ್ಲ; ನಟನ ಬಗ್ಗೆ ಗಂಭೀರ ಆರೋಪ ಮಾಡಿದ ಸಹೋದರ!
ವಿಚ್ಛೇದನದ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದವರು ಕಿರುಕುಳ ನೀಡಿದ್ದಾರೆ ಎಂದು ಆಲಿಯಾ ಈ ಹಿಂದೆ ಆರೋಪಿಸಿದ್ದರು. ನಂತರ, ಮಾರ್ಚ್‌ನಲ್ಲಿ, ನಟ ನವಾಜುದ್ದೀನ್ ತನ್ನನ್ನು ಮತ್ತು ಅವರ ಇಬ್ಬರು ಮಕ್ಕಳನ್ನು ತನ್ನ ಮನೆಯಿಂದ ಹೊರಹಾಕಿದ್ದಾರೆ ಎಂದು ಆಲಿಯಾ ಹೇಳಿದ್ದಾರೆ. ಈ ಹಿಂದೆ ಬಾಂಬೆ ಹೈಕೋರ್ಟ್ ದಂಪತಿ ತಮ್ಮ ಮಕ್ಕಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಸೂಚಿಸಿತ್ತು.
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
South Cinema24 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ23 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ