Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ! Vistara News

South Cinema

Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ!

Nithya Menen: ಸಿನಿಮಾಗಳಿಗಿಂತ ನಟಿ ವೈಯಕ್ತಿಕ ವಿಚಾರಗಳಿಗೆ ಆಗಾಗ ಮುನ್ನಲ್ಲೆಗೆ ಬರುತ್ತಲೇ ಇರುತ್ತಾರೆ ನಿತ್ಯಾ ಮೆನನ್‌. ಅವರು ಧನುಷ್ ನಟನೆಯ 50ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

VISTARANEWS.COM


on

Nithya Menen
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ಮೈನಾ’ (Mynaa) ನಾಯಕಿ ನಿತ್ಯಾ ಮೆನನ್ (Nithya Menen) ಹಲವು ದಿನಗಳಿಂದ ಸಖತ್‌ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗಿಂತ ನಟಿ ವೈಯಕ್ತಿಕ ವಿಚಾರಗಳಿಗೆ ಆಗಾಗ ಮುನ್ನಲ್ಲೆಗೆ ಬರುತ್ತಲೇ ಇರುತ್ತಾರೆ. ʻʻತಮಿಳು ಚಲನಚಿತ್ರ ನಟರೊಬ್ಬರು ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದಾರೆʼ ಎಂದು ನಟಿ ಹೇಳಿರುವುದಾಗಿ ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಇದೆಲ್ಲ ಸುಳ್ಳು ಸುದ್ದಿ ಎಂದು ನಟಿ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

ʻʻತೆಲುಗು ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ, ಆದರೆ ತಮಿಳು ಚಿತ್ರರಂಗದಲ್ಲಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ತಮಿಳು ಚಲನಚಿತ್ರ ನಟರೊಬ್ಬರು ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದಾರೆʼʼಎಂದು ನಿತ್ಯಾ ಮೆನನ್‌ ಹೇಳಿದ್ದರು ಎಂಬ ಸುದ್ದಿ ವೈರಲ್‌ ಆಗಿತ್ತು. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಲ್ಲಿತ್ತು.

ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ವದಂತಿಗಳು ಸಂಪೂರ್ಣವಾಗಿ ಸುಳ್ಳು, ನಾನು ಯಾವುದೇ ಸಂದರ್ಶನವನ್ನು ನೀಡಿಲ್ಲ. ಈ ರೀತಿ ಹೇಳಿಕೆ ಎಲ್ಲಿಯೂ ಹೇಳಿಕೊಂಡಿಲ್ಲ. ಕೇವಲ ಕ್ಲಿಕ್‌ಗಳನ್ನು ಪಡೆಯಲು ಈ ರೀತಿಯ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ಪತ್ತೆ ಹೆಚ್ಚಬೇಕಿದೆ. ಯಾರೂ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ ʼʼಎಂದು ನಟಿ ಹೇಳಿದ್ದಾರೆ. ಇಂತಹ ವದಂತಿಗಳ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯಾ ಅವರ ಈ ಸ್ಪಷ್ಟೀಕರಣ ಎಲ್ಲಾ ಉಹಾಪೋಹಗಳಿಗೆ ಅಂತ್ಯ ಹಾಡಿವೆ.

ಇದನ್ನೂ ಓದಿ: Nithya Menen: ನಿತ್ಯಾ ಮೆನನ್ ಅಜ್ಜಿ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ!

ಟ್ವಟರ್‌ನಲ್ಲಿ ನಿತ್ಯಾ ಮೆನನ್ ಸಖತ್‌ ಟ್ರೆಂಡ್‌!

ಈ ಬಗ್ಗೆ ನಟಿ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ʻʻಸುದ್ದಿಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ಪತ್ತೆ ಹೆಚ್ಚಬೇಕಿದೆ’ ಎಂದು ನಿತ್ಯಾ ಮೆನನ್ ಬರೆದುಕೊಂಡಿದ್ದಾರೆ. ‘ಇಷ್ಟು ಕೆಳಮಟ್ಟಕ್ಕೆ ಇಳಿಯಬೇಡಿ. ಉತ್ತಮರಾಗಿ’ ಎಂದು ಅವರು ಮನವಿ ಮಾಡಿದ್ದಾರೆ.

ನಿತ್ಯಾ ಮೆನನ್‌ ಅವರು ಧನುಷ್ ನಟನೆಯ 50ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಧನುಷ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಡಿ50 ಸಿನಿಮಾ ದೊಡ್ಡ ಬಜೆಟ್ ಚಿತ್ರವಾಗಿದೆ.ಹಾಗೇ ಅವರೇ ನಾಯಕರಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಎಆರ್ ರೆಹಮಾನ್ ಅವರ ಸಂಗೀತವಿದೆ ಎಂತಲೂ ವರದಿಯಾಗಿದೆ. ಎಸ್​ಜೆ ಸೂರ್ಯ, ಸಂದೀಪ್ ಕಿಶನ್ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

South Cinema

Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

Dolly Dhananjay: ಮುಖ್ಯಮಂತ್ರಿ ಸಿದ್ದರಾಮಯ್ಯ ನಟ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್‌ ರಾಯಭಾರಿಯಾಗಿ ಘೋಷಣೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

VISTARANEWS.COM


on

lidkar ambassador dolly dhananjay Officially
Koo

ಬೆಂಗಳೂರು; ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನು (Dolly Dhananjay) ಆಯ್ಕೆ ಮಾಡಲಾಗಿದೆ. ʼನಟ‌ ರಾಕ್ಷಸʼ ಡಾಲಿ ಧನಂಜಯ್ ಲಿಡ್ಕರ್‌ಗೆ ರಾಯಭಾರಿಯಾಗಿದ್ದಾರೆ. ಅಂಬೇಡ್ಕರ್ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಡಿ.6) ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್‌ ರಾಯಭಾರಿಯಾಗಿ ಘೋಷಣೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಸ್ಯಾಂಡಲ್‌ವುಡ್ ನಟ, ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರ್ಯಾಂಡ್‌ ಪ್ರಮೋಟ್ ಮಾಡುತ್ತಿದ್ದಾರೆ. ಲಿಡ್ಕರ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ.

ಇದನ್ನೂ ಓದಿ: Dolly Dhananjay: ಚರ್ಮ ಕುಶಲಕರ್ಮಿಗಳಿಗೆ ಬೆಂಬಲ; ʻಲಿಡ್ಕರ್ʼ ರಾಯಭಾರಿಯಾದ ಡಾಲಿ

ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ನಟ ಧನಂಜಯ್ “ನಾನು ಮೊದಲ ಬಾರಿಗೆ ರಾಯಭಾರಿ ಆಗುತ್ತಿದ್ದೇನೆ. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ ಅವರು ಈ ಉದ್ಯಮ ನಂಬಿಕೊಂಡು 50 ಸಾವಿರ ಕುಟುಂಬಗಳಿವೆ ಎಂದಾಗ ಖುಷಿಯಾಯಿತು. ನಮ್ಮ ಕರ್ನಾಟಕದಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯರಂತಹ ಸಾವಿರಾರು ಜನ ಕುಶಲಕರ್ಮಿಗಳಿದ್ದಾರೆ. ನಮ್ಮದೇ ಆದ ಬ್ರ್ಯಾಂಡಿಗೆ ನಾವು ಸಹಾಯ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ʻಮೇಕ್ ಇನ್ ಕರ್ನಾಟಕʼ ಆಗಬೇಕು. ಲಿಡ್ಕರ್‌ಗೆ ಸಪೋರ್ಟ್ ಮಾಡುವುದರಿಂದ ಅದನ್ನೆ ನಂಬಿಕೊಂಡ ಕುಟುಂಬಗಳಿಗೆ ಸಹಾಯವಾಗಲಿದೆ. ಮೈಸೂರ್ ಸಿಲ್ಕ್ ಹೇಗಿದಿಯೋ ಹಾಗೆ ನಮ್ಮದೆ ಬ್ರ್ಯಾಂಡ್ ಇರಬೇಕುʼʼ ಎಂದರು.

ಇದನ್ನೂ ಓದಿ: Sandalwood Update: ‘ಝೀಬ್ರಾ’ ಕಂಪ್ಲೀಟ್‌; ಶೀಘ್ರದಲ್ಲೇ ತೆರೆಗೆ ಬರಲಿದೆ ಡಾಲಿ-ಸತ್ಯದೇವ್ ಚಿತ್ರ

ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ‘ಖ್ಯಾತ ನಟ ಡಾಲಿ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಇರುವ ನಟ, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಉತ್ತೇಜನ ಆಗುತ್ತೆ’ ಎಂದು ಹೇಳಿದರು. ಲಿಡ್ಕರ್‌ ಕೇಂದ್ರಕ್ಕೆ ಭೇಟಿ ನೀಡಿದ ನಟ ಧನಂಜಯ ಅವರಿಗೆ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಧನಂಜಯವರಿಗಾಗಿಯೇ ವಿಶೇಷವಾಗಿ ಚಪ್ಪಲಿಯನ್ನು ತಯಾರಿಸಲಾಗಿತ್ತು. ಡಾಲಿ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜತೆ ಮಾತನಾಡಿ ಖುಷಿಪಟ್ಟರು

ಧನಂಜಯ್‌ ಅವರು ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ತಮ್ಮದೇ ಡಾಲಿ ಸಂಸ್ಥೆ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಮಾಡಿದ್ದರು. ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ಮಾಣದ ಜೊತೆಗೆ ಡಾಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನ ಪುಷ್ಪ-2 ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಈ ನಡುವೆ ಜಾಹೀರಾತು ಲೋಕಕ್ಕೆ ಡಾಲಿ ಲಗ್ಗೆ ಇಟ್ಟಿರುವುದು ಅವರ ಅಭಿಮಾನಿ ಬಳಗಕ್ಕೆ ಸಂತಸ ತಂದಿದೆ .

Continue Reading

South Cinema

Actress Namitha: ಚೆನ್ನೈ ಪ್ರವಾಹ; ಅವಳಿ ಮಕ್ಕಳೊಂದಿಗೆ ಅಪಾಯಕ್ಕೆ ಸಿಲುಕಿದ್ದ ನಟಿ!

Actress Namitha: ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಪಾರ್ಟ್‌ಮೆಂಟ್‌ ಬಳಿಗೆ ರಕ್ಷಣಾ ತಂಡ ತಲುಪಲು ತಡವಾಗಿದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

VISTARANEWS.COM


on

namitha actress
Koo

ಬೆಂಗಳೂರು: ಚೆನ್ನೈನ ಪ್ರವಾಹ ಪೀಡಿತ (Actress Namitha) ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಲಾಗಿರುವುದು ಗೊತ್ತೇ ಇದೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡಲೂರು ಮತ್ತು ತಿರುವಳ್ಳೂರು ಜಿಲ್ಲೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಚೆನ್ನೈನ ಹೆಚ್ಚಿನ ಭಾಗಗಳು ಪ್ರಸ್ತುತ ನೀರಿನಲ್ಲಿ ಮುಳುಗಿವೆ. ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರವಾಹ ಕಂಡು ಬಂದಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರತರಾಗಿದ್ದಾರೆ. ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು ಮನೆಗೆ ನುಗ್ಗಿದೆ. ಇದರಿಂದ ನಟಿ ನಮಿತಾ ಮನೆ ಜಲಾವೃತಗೊಂಡಿದೆ. ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಪಾರ್ಟ್‌ಮೆಂಟ್‌ ಬಳಿಗೆ ರಕ್ಷಣಾ ತಂಡ ತಲುಪಲು ತಡವಾಗಿದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಕಳೆದೆರಡು ದಿನಗಳಿಂದ ಮಿಗ್ಜಾಮ್ ಚಂಡಮಾರುತ ಭಾರೀ ಅವಾಂತರವನ್ನೇ ಸೃಷ್ಟಿಸಿತ್ತು. ಪ್ರವಾಹ ಹೆಚ್ಚಿದ್ದರಿಂದ ಪಳ್ಳಿಕರಣ ನಾರಾಯಣಪುರಂ ಕೆರೆಯ ದಡ ಒಡೆದಿದೆ. ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಪಳ್ಳಿಕರಣ, ಸಮೀಪದ ದುರೈಪಕ್ಕಂ ಪ್ರದೇಶ ಜಲಾವೃತಗೊಂಡಿದೆ. ಪಳ್ಳಿಕರಣ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ದಕ್ಷಿಣ ಭಾರತದ ನಟಿ ನಮಿತಾ ವಾಸವಿದ್ದರು. ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಪಾರ್ಟ್‌ಮೆಂಟ್‌ ಬಳಿಗೆ ರಕ್ಷಣಾ ತಂಡ ತಲುಪಲು ತಡವಾಗಿದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ವರದಿಯಾಗಿದೆ. ನಟಿ ನಮಿತಾ ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 2017ರಲ್ಲಿ ತಿರುಪತಿಯಲ್ಲಿ ಉದ್ಯಮಿ ವೀರೇಂದ್ರ ಚೌಧರಿಯನ್ನು ನಮಿತಾ ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದಾರೆ.

ವಿದ್ಯುತ್ ಮತ್ತು ನೆಟ್‌ವರ್ಕ್‌ ಇಲ್ಲದೆ ಚೆನ್ನೈನ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ವಿಷ್ಣು ವಿಶಾಲ್‌ ಈ ಹಿಂದೆ ಬಹಿರಂಗಪಡಿಸಿದ್ದರು. ತನ್ನ ಮನೆಯೊಳಗೆ ನೀರು ನುಗ್ಗಿದೆ ಎಂದು ತಿಳಿಸಿದ್ದರು. ಫೋಟೊಗಳನ್ನು ಹಂಚಿಕೊಂಡಿದ್ದ ಅವರು, “ನೀರು ನನ್ನ ಮನೆಯೊಳಗೆ ನುಗ್ಗುತ್ತಿದೆ. ಕರಪಕ್ಕಂನಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿದೆ. ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಟೆರೇಸ್‌ನಲ್ಲಿ ಮಾತ್ರ ನನಗೆ ಕೆಲವು ಸಿಗ್ನಲ್ ಸಿಗುತ್ತದೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ನೆರವಿಗೆ ಬಂದ ನಟರು

ಈ ಮಧ್ಯೆ ತಮಿಳು ಚಿತ್ರರಂಗದ ನಟರಾದ ಸೂರ್ಯ ಮತ್ತು ಕಾರ್ತಿ 10 ಲಕ್ಷ ರೂ.ಗಳ ಆರಂಭಿಕ ದೇಣಿಗೆಯನ್ನು ಘೋಷಿಸಿದ್ದಾರೆ. ಅಗತ್ಯವಿರುವ ಯಾವುದೇ ರೀತಿಯ ಸಹಾಯ ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಟರ ಅಭಿಮಾನಿ ಸಂಘಗಳ ಮೂಲಕ ನೆರವು ನೀಡಲಾಗುತ್ತದೆ.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಬೀಸುತ್ತಿರುವ ಮಿಚಾಂಗ್‌ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತವಾಗಿದೆ. ಕಾರು- ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಕುಸಿದಿವೆ. ಕೋಟಿಗಟ್ಟಲೆ ಆಸ್ತಿಗೆ ಹಾನಿಯಾಗಿದೆ.

Continue Reading

South Cinema

Actor Nani: ‘ಹಾಯ್​ ನಾನ್ನʼ ಚಿತ್ರತಂಡದಿಂದ ವಿಜಯ್‌-ರಶ್ಮಿಕಾ ಖಾಸಗಿ ಫೋಟೊ ಬಳಕೆ; ನಾನಿ ಹೇಳಿದ್ದೇನು?

Actor Nani: ‘ಹಾಯ್​ ನಾನ್ನʼ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಫೋಟೋ ಬಿತ್ತರವಾಗಿತ್ತು. ಈ ಬಗ್ಗೆ ಇದೀಗ ನಟ ನಾನಿ ವಿಷಾಧ ವ್ಯಕ್ತಪಡಿಸಿದ್ದಾರೆ.

VISTARANEWS.COM


on

actor nani
Koo

ಹೈದರಾಬಾದ್‌: ಟಾಲಿವುಡ್‌ನ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ಹಾಯ್​ ನಾನ್ನ’ (Hi Nanna) ಕೂಡ ಒಂದು. ನ್ಯಾಚುರಲ್‌ ಸ್ಟಾರ್‌ ಖ್ಯಾತಿಯ ನಾನಿ (Actor Nani) ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೇ ಶುಕ್ರವಾರ (ಡಿಸೆಂಬರ್‌ 7ರಂದು) ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ, 5 ಭಾಷೆಗಳಲ್ಲಿ ತೆರೆ ಕಾಣಲಿದೆ. ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ನಡೆದ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ವಿಜಯ್​ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಫೋಟೋವನ್ನು ಬಿತ್ತರ ಮಾಡಲಾಗಿತ್ತು. ಇದಕ್ಕೆ ಈಗ ನಟ ನಾನಿ ಪ್ರತಿಕ್ರಿಯೆ ನೀಡಿ ಚಿತ್ರತಂಡದಿಂದ ಆದ ಪ್ರಮಾದಕ್ಕೆ ಕ್ಷಮೆ ಕೇಳಿದ್ದಾರೆ.

‘ಹಾಯ್​ ನಾನ್ನ’ ಚಿತ್ರಕ್ಕೆ ಮತ್ತು ರಶ್ಮಿಕಾ-ವಿಜಯ್​ ದೇವರಕೊಂಡ ಅವರಿಗೆ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ವೇದಿಕೆಯ ಎಲ್​ಇಡಿ ಪರದೆಯಲ್ಲಿ ಇಬ್ಬರ ವೈಯಕ್ತಿಕ ಫೋಟೋ ಬಿತ್ತರ ಆಗಿತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರವಾಸದಲ್ಲಿರುವ ಫೋಟೊವನ್ನು ಸ್ಕ್ರೀನ್‌ನಲ್ಲಿ ಪ್ರತ್ಯಕ್ಷವಾಗಿತ್ತು. ಬಳಿಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು.

ನಾನಿ ಹೇಳಿದ್ದೇನು?

‘ʼಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆʼʼ ಎಂದು ನಾನಿ ಹೇಳಿದ್ದಾರೆ. ಈ ವಿವಾದ ಕುರಿತು ರಶ್ಮಿಕಾ ಆಗಲಿ, ವುಜತ್‌ ದೇವರಕೊಂಡ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ʼಹಾಯ್​ ನಾನ್ನ’ ಸಿನಿಮಾದಲ್ಲಿ ನಾನಿ ಮತ್ತು ಮೃಣಾಲ್​ ಠಾಕೂರ್​ ನಟಿಸಿದ್ದಾರೆ. ಪ್ರಚಾರದ ಹುಚ್ಚಿನಿಂದ ‘ಹಾಯ್​ ನಾನ್ನ’ ತಂಡ ಸಂಬಂಧವೇ ಇಲ್ಲದ ರಶ್ಮಿಕಾ-ವಿಜಯ್‌ ಅವರ ವೈಯಕ್ತಿಕ ಫೋಟೊ ಬಳಿಸಿ ಗಿಮಿಕ್​ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸದ್ಯ ಆ ಘಟನೆ ಬಗ್ಗೆ ನಾನಿ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: Rashmika Mandanna: ನಾನಿ ಸಿನಿಮಾ ಈವೆಂಟ್‌ನಲ್ಲಿ ವಿಜಯ್-ರಶ್ಮಿಕಾ ಮಾಲ್ಡೀವ್ಸ್ ಫೋಟೊ; ತಬ್ಬಿಬ್ಬಾದ ಮೃಣಾಲ್‌!

ತಂದೆ ಮತ್ತು ಮಗಳ ಬಾಂಧವ್ಯದ ಜತೆಗೆ ಪ್ರೀತಿ ಕಥಾಹಂದರವೇ ‘ಹಾಯ್ ನಾನ್ನ’ ಚಿತ್ರದ ಹೈಲೆಟ್. ಈ ಚಿತ್ರಕ್ಕೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊದಲ ಬಾರಿ ನಾನಿ ಮತ್ತು ಮೃಣಾಲ್​ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮೃಣಾಲ್​ ಠಾಕೂರ್ ಅಭಿನಯದ ʼಸೀತಾ ರಾಮಂʼ ತೆಲುಗು ಚಿತ್ರ ಕಳೆದ ವರ್ಷ ತೆರೆಕಂಡು ಸೂಪರ್‌ ಹಿಟ್‌ ಆಗಿತ್ತು. ಈ ವರ್ಷ ಬಿಡುಗಡೆಯಾದ ನಾನಿ-ಕೀರ್ತಿ ಸುರೇಶ್‌ ಅಭಿನಯದ ʼದಸರಾʼ ಚಿತ್ರ ಹಿಟ್‌ ಆಗಿತ್ತು. ಹೀಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

South Cinema

Shiva Rajkumar: ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ತೆಲುಗು ನಟ ನಾನಿ

Shiva Rajkumar: ತಮ್ಮ ಮುಂಬರುವ ‘ಹಾಯ್ ನಾನ್ನ’ ಚಿತ್ರದ ಪ್ರಚಾರ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ತೆಲುಗು ನಟ ನಾನಿ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾದರು.

VISTARANEWS.COM


on

shivvanna naani
Koo

ಬೆಂಗಳೂರು: ಟಾಲಿವುಡ್‌ನ ‘ನ್ಯಾಚುರಲ್‌ ಸ್ಟಾರ್‌’ ನಾನಿ (Actor Nani) ತಮ್ಮ ಮುಂಬರುವ ‘ಹಾಯ್ ನಾನ್ನ’ (Hi Nanna)  ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ ಕುಮಾರ್‌ (Shiva Rajkumar) ಅವರ ನಾಗವರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದರು.

ಬಳಿಕ ಇಬ್ಬರು ಸ್ಟಾರ್‌ಗಳು ಮಾತುತೆ ನಡೆಸಿದ್ದಾರೆ. ಸದ್ಯ ಈ ಫೋಟೊಗಳು ವೈರಲ್‌ ಆಗುತ್ತಿದೆ. ನಾನಿ ಅವರನ್ನು ಶಿವಣ್ಣ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಳಿಕ ಇಬ್ಬರು ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

‘ಹಾಯ್ ನಾನ್ನ’ ಚಿತ್ರಕ್ಕೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಡಿಸೆಂಬರ್‌ 7ರಂದು ತೆರೆಗೆ ಬರಲಿದೆ. ʼಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ನಾಯಕಿಯಾಗಿ ಮೊದಲ ಬಾರಿ ನಾನಿ ಜತೆ ತೆರೆ ಹಂಚಿಕೊಳ್ಳುತ್ತಿದ್ದರೆ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.

ಚಿತ್ರ ಪ್ರಚಾರ ನಿಮಿತ್ತ ನಾನಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಶಿವರಾಜ್‌ ಕುಮಾರ್‌ ಮತ್ತು ಗೀತಾ ಶಿವರಾಜ್‌ ಕುಮಾರ್‌ ನಾನಿ ಅವರಿಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳಿತಾಗಲಿ ಎಂದು ಹಾರೈಸಿದ್ದಾರೆ.

ತಂದೆ ಮತ್ತು ಮಗಳ ಬಾಂಧವ್ಯದ ಜತೆಗೆ ಪ್ರೀತಿ ಕಥಾಹಂದರವೇ ‘ಹಾಯ್ ನಾನ್ನ’ ಚಿತ್ರದ ಹೈಲೆಟ್. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಎನ್ನುವುದೇ ಒನ್‌ ಲೈನ್‌ ಸ್ಟೋರಿ.

ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ‘ವೈರ ಎಂಟರ್‌ಟೈನ್‌ಮೆಂಟ್‌’ ಬ್ಯಾನರ್ ಮೂಲಕ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: Actor Nani: ಮೃಣಾಲ್ ಠಾಕೂರ್ ಜತೆ ನಾನಿ ಲಿಪ್‌ ಲಾಕ್‌; ಅಭಿಪ್ರಾಯ ಹಂಚಿಕೊಂಡ ನಟ!

Continue Reading
Advertisement
lidkar ambassador dolly dhananjay Officially
South Cinema6 mins ago

Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

Government Job Vistara Exclusive and CM Siddaramaiah
ಉದ್ಯೋಗ11 mins ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

kim
ವಿದೇಶ28 mins ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ41 mins ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್41 mins ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

murder case in Bengaluru
ಕರ್ನಾಟಕ56 mins ago

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Government Job Vistara Exclusive
ಉದ್ಯೋಗ1 hour ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

danish
ಕ್ರಿಕೆಟ್1 hour ago

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Snehith Gowda Became Villain In Bigg Boss Kannada in rakshasa task
ಬಿಗ್ ಬಾಸ್1 hour ago

BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

pranab mukherjee and rahul gandhi
ದೇಶ1 hour ago

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Government Job Vistara Exclusive and CM Siddaramaiah
ಉದ್ಯೋಗ11 mins ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 hour ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ8 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ16 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ17 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ17 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

ಟ್ರೆಂಡಿಂಗ್‌