Oscars 2023: ಆಸ್ಕರ್‌ ಪ್ರಶಸ್ತಿಗೆ ಕೌಂಟ್‌ ಡೌನ್‌: ಮೂರು ವಿಭಾಗದಲ್ಲಿ ಭಾರತದ ಚಿತ್ರಗಳು - Vistara News

ಟಾಲಿವುಡ್

Oscars 2023: ಆಸ್ಕರ್‌ ಪ್ರಶಸ್ತಿಗೆ ಕೌಂಟ್‌ ಡೌನ್‌: ಮೂರು ವಿಭಾಗದಲ್ಲಿ ಭಾರತದ ಚಿತ್ರಗಳು

ಈ ಬಾರಿ ಅತಿ ಹೆಚ್ಚು ಭಾರತೀಯ ಚಿತ್ರಗಳು ಸ್ಪರ್ಧೆಗೆ ನಾಮನಿರ್ದೇಶಗೊಂಡಿರುವ ಕಾರಣ, ಪ್ರಶಸ್ತಿ ಬಗ್ಗೆ ಭಾರತೀಯರ ಕುತೂಹಲ ಹೆಚ್ಚಿದೆ. ಆಸ್ಕರ್‌ ಪ್ರಶಸ್ತಿ (Oscars 2023) ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

VISTARANEWS.COM


on

Countdown to Oscars Indian films in three categories
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಸ್ಕರ್‌ ಪ್ರಶಸ್ತಿ (Oscars 2023) ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಆಸ್ಕರ್‌ ಪ್ರಶಸ್ತಿ ಪ್ರದಾನ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದವರಿಗೆ ಬಹುನಿರೀಕ್ಷಿತ ಕಾರ್ಯಕ್ರಮ ಎನ್ನಬಹುದು. ದಕ್ಷಿಣ ಭಾರತದ ಹೆಮ್ಮೆಯಾದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ರೇಸ್‌ನ (RRR in Oscar 2023) ಕೊನೆಯ ಹಂತದಲ್ಲಿದೆ. ಈ ಬಾರಿ ಅತಿ ಹೆಚ್ಚು ಭಾರತೀಯ ಚಿತ್ರಗಳು ಸ್ಪರ್ಧೆಗೆ ನಾಮನಿರ್ದೇಶಗೊಂಡಿರುವ ಕಾರಣ, ಪ್ರಶಸ್ತಿ ಬಗ್ಗೆ ಭಾರತೀಯರ ಕುತೂಹಲ ಹೆಚ್ಚಿದೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಗೀತೆ, ಸಾಕ್ಷ್ಯಚಿತ್ರಗಳಾದ ‘ಆಲ್‌ ದಟ್‌ ಬ್ರೀದ್ಸ್‌’ (All That Breathes Documentary Feature) ಮತ್ತು ‘ಎಲಿಫೆಂಟ್‌ ವಿಸ್ಪರ್ಸ್‌’ (The Elephant Whisperers for Documentary Short) ಈ ಬಾರಿ ಆಸ್ಕರ್‌ ರೇಸ್‌ನಲ್ಲಿವೆ.

95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ಕಾಲಮಾನ ಮಾರ್ಚ್‌ 13ರಂದು ಮುಂಜಾನೆ 5.30ರಿಂದ ಆರಂಭವಾಗಲಿದೆ. ಈ ಕಾರ್ಯಕ್ರಮ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ನಾಟು ನಾಟು ಸಂಯೋಜಕ ಎಂಎಂ ಕೀರವಾಣಿ ಮತ್ತು ಗಾಯಕರಾದ ರಾಹುಲ್ ಸಿಪ್ಲಿಗುಂಜ್-ಕಾಲಾ ಭೈರವ ಅವರು ಅಕಾಡೆಮಿ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಶೌನಕ್‌ ಸೇನ್‌ ಅವರ ‘ಆಲ್‌ ದಟ್‌ ಬ್ರೀದ್ಸ್‌ʼ ,ಕಾರ್ತಿಕಿ ಗೋನ್ಸಾಲ್ವೇಸ್‌ ಅವರ ‘ದ ಎಲಿಫೆಂಟ್‌ ವಿಸ್ಪ​ರ್ಸ್‌’ ಸಹ ಕಿರು ಅವಧಿಯ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ.

Countdown to Oscars: Indian films in three categories
Countdown to Oscars: Indian films in three categories

ಇದನ್ನೂ ಓದಿ: Oscars 2023: ಆಸ್ಕರ್‌ಗೆ ನಾಮನಿರ್ದೇಶನ, ಭಾರತಕ್ಕೆ ಒಲಿಂಪಿಕ್ ಪಡೆದಷ್ಟೇ ಹೆಮ್ಮೆ: ರಾಮ್‌ ಚರಣ್‌

Countdown to Oscars: Indian films in three categories
Countdown to Oscars: Indian films in three categories

ಸಂಪ್ರದಾಯದಲ್ಲಿ ಹಾಡನ್ನು ಲೈವ್ ಆಗಿ ಪ್ರದರ್ಶಿಸುತ್ತಾರೆ. ನಾಟು ನಾಟು ಹಾಡು, ʻಟೆಲ್ ಇಟ್ ಲೈಕ್ ಎ ವುಮನ್‌ʼ (Tell It Like a Woman), ʻಹೋಲ್ಡ್‌ ಮೈ ಹ್ಯಾಂಡ್‌ ಪ್ರಾಮ್‌ ಟಾಪ್‌ ಗನ್‌: ಮಾವೆರಿಕ್ʼ (Hold My Hand from Top Gun: Maverick), ʻಬ್ಲ್ಯಾಕ್ ಪ್ಯಾಂಥರ್‌: ವಕಾಂಡ ಫಾರೆವರ್ʼ (Black Panther: Wakanda Forever) ಮತ್ತು ʻದಿಸ್ ಈಸ್ ಎ ಲೈಫ್ ಫ್ರಮ್ ಎವೆರಿವೇರ್ ಆಲ್ ಅಟ್‌ ಒನ್ಸ್ʼ (his Is a Life from Everything Everywhere All at Once.) ಜತೆ ಸ್ಪರ್ಧಿಸಲಿದೆ.

ಪ್ರಶಸ್ತಿ ಪ್ರದಾನ ಮಾಡಲಿರುವ ದೀಪಿಕಾ ಪಡುಕೋಣೆ

ಸಮಾರಂಭದಲ್ಲಿ ನೇರ ಪ್ರದರ್ಶನಗಳ ಜತೆಗೆ, ನಟಿ ದೀಪಿಕಾ ಪಡುಕೋಣೆ ಪ್ರಶಸ್ತಿಯನ್ನು ನೀಡಲಿದ್ದಾರೆ. ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಅಕಾಡೆಮಿ ಅವಾರ್ಡ್ ಸಮಾರಂಭ ನಡೆಯಲಿದೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಭಾರತೀಯರಿಗೂ ವಿಶೇಷವಾಗಿದೆ. ದೀಪಿಕಾ ಪಡುಕೋಣೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಲಿಸ್ಟ್‌ ಹಂಚಿಕೊಂಡಿದ್ದಾರೆ. ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರಂತಹವರ ಜತೆಗೆ ಇವರ ಹೆಸರು ಸೇರಿದೆ.

ಇದನ್ನೂ ಓದಿ; Oscars 2023: ಆಸ್ಕರ್‌ ಮುಂಚಿತವಾಗಿ ದೀಪಿಕಾ ಹಳೆಯ ಫೋಟೊ ಶೇರ್‌ ಮಾಡಿ ಹೊಗಳಿದ ಅನುಪಮ್ ಖೇರ್

ಆಸ್ಕರ್ ಪ್ರಶಸ್ತಿಗಾಗಿ ಎದುರು ನೋಡುತ್ತಿರುವ ಭಾರತೀಯರು

ಭಾರತವು ಈ ಹಿಂದೆ ತಿಳಿದಿರುವಂತೆ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಅಥವಾ ಅತ್ಯುತ್ತಮ ವಿದೇಶಿ ಚಲನಚಿತ್ರದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಈವೆರೆಗೆ ಗೆದ್ದಿಲ್ಲ. ಆಸ್ಕರ್‌ನಲ್ಲಿ ಅಂತಿಮ ಐದು ನಾಮನಿರ್ದೇಶನಗಳಲ್ಲಿ ಸ್ಥಾನ ಪಡೆದ ಕೊನೆಯ ಭಾರತೀಯ ಚಲನಚಿತ್ರವೆಂದರೆ ಅಶುತೋಷ್ ಗೋವಾರಿಕರ್ ಅವರ ʻಲಗಾನ್ʼ. ಇದು 2001ರಲ್ಲಿ ನೋ ಮ್ಯಾನ್ಸ್ ಲ್ಯಾಂಡ್‌ ಸಿನಿಮಾ ವಿರುದ್ಧ ಸೋತಿತು. ಭಾರತೀಯ ಸಾಕ್ಷ್ಯಚಿತ್ರಗಳಲ್ಲಿ ಹಿಂದೆ ಆಸ್ಕರ್‌ನಲ್ಲಿ ಸ್ಮೈಲ್ ಪಿಂಕಿ (Smile Pinki) ಮತ್ತು ಪಿರಿಯಡ್‌ (Period) ಪ್ರಶಸ್ತಿ ಪಡೆದುಕೊಂಡಿದೆ.ಈ ಬಾರಿ 9,000 ಕ್ಕೂ ಹೆಚ್ಚು ಸದಸ್ಯರು ಆಸ್ಕರ್‌ಗಾಗಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Actor Dhanush: ಧನುಷ್‌ ಬರ್ತ್‌ಡೇ ಸ್ಪೆಷಲ್‌; ‘ಕುಬೇರ’ ಸಿನಿಮಾದಿಂದ ಲುಕ್‌ ಪೋಸ್ಟರ್‌ ಔಟ್‌!

Actor Dhanush: ‘ಕುಬೇರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ನಾಗಾರ್ಜುನ, ಸಂದೀಪ್ ಕಿಶನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಧನುಷ್ ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

VISTARANEWS.COM


on

Actor Dhanush new poster from Kubera unveiled on his birthday
Koo

ಬೆಂಗಳೂರು: ಕಾಲಿವುಡ್‌ ನಟ ಧನುಷ್ (Actor Dhanush) ಅವರ ಮುಂಬರುವ ಚಿತ್ರ ‘ಕುಬೇರ’ ಸಿನಿಮಾ ಬಿಗ್‌ ಅಪ್‌ಡೇಟ್‌ ಕೊಟ್ಟಿದೆ. ಇಂದು ಧನುಷ್‌ ಅವರ ಜನುಮದಿನ. 41ನೇ ಹುಟ್ಟುಹಬ್ಬದಂದು ನಟನ ಹೊಸ ಪೋಸ್ಟರ್ ಔಟ್‌ ಆಗಿದೆ. ಧನುಷ್‌ ಅವರ ಹೊಸ ಲುಕ್‌ ಕಂಡು ಸಿನಿರಸಿಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಧನುಷ್ ಅವರು ತಮ್ಮ ಮುಂಬರುವ ಚಿತ್ರ ‘ಕುಬೇರ’ ಹೊಸ ಪೋಸ್ಟರ್‌ನಲ್ಲಿ ಸ್ವಲ್ಪ ಡಲ್‌ ಆಗಿ ಕಂಡಿದ್ದಾರೆ. ʻಕುಬೇರ’ ಧನುಷ್ ಅವರ 51 ನೇ ಚಿತ್ರವಾಗಿದೆ. , ‘ಕುಬೇರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ನಾಗಾರ್ಜುನ, ಸಂದೀಪ್ ಕಿಶನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಧನುಷ್ ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕುರ್ ರಾಮ್ ಮೋಹನ್ ರಾವ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ‘ಶೇಖರ್ ಕಮ್ಮುಲ ಅವರ ಕುಬೇರ’ ಒಂದು ಪ್ಯಾನ್-ಇಂಡಿಯಾ ಬಹುಭಾಷಾ ಚಿತ್ರವಾಗಿದ್ದು, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

ಈಗಾಗಲೇ ಧನುಷ್ ಅವರ ರಾಯನ್‌ ಸಿನಿಮಾ ತೆರೆ ಕಂಡಿದೆ. ಧನುಷ್‌ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಜುಲೈ 26ಕ್ಕೆ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: Actor Dhanush: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆ ಹೋದ ನಟ ಧನುಷ್

ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ರಾಯನ್‌’ (Raayan). ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದರು. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ. ಧನುಷ್‌ ಕೊನೆಯದಾಗಿ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿದ್ದರು.

Continue Reading

ಸ್ಯಾಂಡಲ್ ವುಡ್

Shiva Rajkumar: ಸಾಯಿಕುಮಾರ್‌ಗೆ ಶಿವಣ್ಣ ಡ್ಯೂಪ್ ಆಗಿದ್ದ ಸಿನಿಮಾ ಯಾವುದು? ಆ ದೃಶ್ಯಕ್ಕೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ!

Shiva Rajkumar: ಕನ್ನಡದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘AK-47’ ಸಿನಿಮಾ ಹಿಟ್ ಆಗಿತ್ತು. ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಚಿತ್ರಕ್ಕೆ ಕೋಟಿ ರಾಮು ಬಂಡವಾಳ ಹೂಡಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ತರಲಾಗಿತ್ತು. ‘AK-47’ ಕನ್ನಡ ಚಿತ್ರದಲ್ಲಿ ಶಿವಣ್ಣ ಹೀರೊ ಆಗಿ ನಟಿಸಿದರೆ ತೆಲುಗಿನಲ್ಲಿ ಸಾಯಿಕುಮಾರ್ ಮಿಂಚಿದ್ದರು.

VISTARANEWS.COM


on

Shiva Rajkumar played the dupe for saikumar in film
Koo

ಬೆಂಗಳೂರು: ಸಿನಿಮಾಗಳಲ್ಲಿ ಡ್ಯೂಪ್ ಹಾಕುವುದು ಸರ್ವೇ ಸಾಮಾನ್ಯ. ತೆಲುಗು ನಟ ಸಾಯಿಕುಮಾರ್‌ಗೆ (Shiva Rajkumar) ಕನ್ನಡ ನಟ ಶಿವರಾಜ್‌ಕುಮಾರ್ ಒಂದು ಸಿನಿಮಾದಲ್ಲಿ ಡ್ಯೂಪ್ ಹಾಕಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ : ಸಾಯಿಕುಮಾರ್‌ ಈ ವಿಚಾರವನ್ನು ಬಹಿರಂಗಪಡಿಸಿದ್ದರು.ಕನ್ನಡದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘AK-47’ ಸಿನಿಮಾ ಹಿಟ್ ಆಗಿತ್ತು. ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಚಿತ್ರಕ್ಕೆ ಕೋಟಿ ರಾಮು ಬಂಡವಾಳ ಹೂಡಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ತರಲಾಗಿತ್ತು. ‘AK-47’ ಕನ್ನಡ ಚಿತ್ರದಲ್ಲಿ ಶಿವಣ್ಣ ಹೀರೊ ಆಗಿ ನಟಿಸಿದರೆ ತೆಲುಗಿನಲ್ಲಿ ಸಾಯಿಕುಮಾರ್ ಮಿಂಚಿದ್ದರು.

ಈ ಬಗ್ಗೆ ನಟ ಸಾಯಿ ಕುಮಾರ್‌ ಮಾತನಾಡಿ ʻʻAK 47 ಸಿನಿಮಾದ ಮಾಡುವಾಗ ಡಬಲ್‌ ವರ್ಷನ್‌ ಮಾಡಬೇಕು ಎಂದು ರಾಮು ಅವರ ಪ್ಲ್ಯಾನ್‌ ಆಗಿತ್ತು. ಲಾಕ್‌ಅಪ್‌ಡೆತ್‌ ಸಿನಿಮಾ ಕೊಟ್ಟಿದ್ದು ಓಂ ಪ್ರಕಾಶ್‌. ರಾಮು ಅವರೇ ಪ್ರೊಡ್ಯೂಸರ್‌ ಆಗಿದ್ದರು. ಆ ಸಿನಿಮಾ ಕನ್ನಡವನ್ನು ಶಿವಣ್ಣ ಮಾಡ್ತಾರೆ, ತೆಲುಗು ನೀವು ಮಾಡಿ ಅಂದರು. ಖಂಡಿತ ಮಾಡ್ತೀನಿ ಎಂದೆ. ಬಾಂಬೆಯಲ್ಲಿ ಮೇಜರ್‌ ಎಪಿಸೋಡ್‌ ಇತ್ತು. ಅವರದ್ದು ನಂದೂ ಸೇಮ್‌ ಕಾಸ್ಟ್ಯೂಮ್‌ ಇತ್ತು. ಆದರೆ ನಾನು ಶೂಟ್‌ ಮಾಡುವಾಗ ಗಾಯಕ್ಕೆ ಒಳಗಾದೆ. ನನಗೆ ಏಟು ಬಿತ್ತು. ಆಸ್ಪತ್ರೆಗೆ ಕರೆದುಕೊಂಡರು. ತಿರಗಾ ಬಂದು ಮತ್ತೆ ಶೂಟಿಂಗ್‌ ಬಂದೆವು. ಟೆಲಿ ಶಾಟ್‌ ಒಂದು ಇತ್ತು. ಬಳಿಕ ನನ್ನ ಶಾಟ್‌ ಎಲ್ಲ ಅವರೇ ಮಾಡಿದ್ರು. ಇನ್ನು ಫೈಟ್ ಮಾಡುವಾಗ ಅಪ್ ಶಾಟ್ ಹೊಡೆಯಬೇಕಿತ್ತು. ಶಿವಣ್ಣ ತುಂಬಾ ಚೆನ್ನಾಗಿ ಮಾಡಿದರು. ನನಗೂ ಮಾಡೋಕೆ ಹೇಳ್ತಾರೆ ಅಂತ ನನಗೆ ಭಯವಾಗಿತ್ತು. ನನ್ನನ್ನು ಕರೆದು ಮಾಡಿ ಎಂದಾಗ ಆಗಲ್ಲ ಎಂದೆ. ಇಲ್ಲ ಮಾಡಲೇಬೇಕು ಎಂದ್ರು. ಶಿವಣ್ಣ ಬಂದ್ರು. ಸೇಮ್ ಡ್ರೆಸ್‌ನಲ್ಲಿ ಇದ್ರು. ಸ್ವಲ್ಪ ಆಂಗಲ್ ಚೇಂಜ್ ಮಾಡ್ಕೊಳ್ಳಿ ಸಾಯಿಗೆ ನಾನೇ ಡ್ಯೂಪ್ ಮಾಡ್ತೀನಿ ಅಂತ ಶಿವಣ್ಣ ಮಾಡಿಬಿಟ್ರು. ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ನಾನು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದೆ. ಸಿನಿಮಾ ಎಲ್ಲಾ ಚೆನ್ನಾಗಿತ್ತು. ಆ ಶಾಟ್‌ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು. ಆದರೆ ಜನ ಅಂದುಕೊಂಡಿದ್ದು ನಾನು ಅಂತ. ಆ ಕ್ಕ್ರೆಡಿಟ್‌ ಶಿವಣ್ಣ ಅವರಿಗೆ ಸೇರಬೇಕು ಎಂದರು.

ಇದನ್ನೂ ಓದಿ: Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

ನಟ ಸಾಯಿಕುಮಾರ್ ಅವರನ್ನು ಕನ್ನಡ ಸಿನಿರಸಿಕರು ಡೈಲಾಗ್ ಕಿಂಗ್ ಎಂದೇ ಹೇಳುತ್ತಾರೆ. ಕನ್ನಡದ ‘ಲಾಕಪ್‌ ಡೆತ್’ ಸಿನಿಮಾ ಮೂಲಕ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ‘ಪೊಲೀಸ್ ಸ್ಟೋರಿ’ ಸಿನಿಮಾ ದಾಖಲೆ ಬರೆದಿತ್ತು. ಮುಂದೆ ‘ಮುದ್ದಿನ ಕಣ್ಮಣಿ’, ‘ಅಗ್ನಿ ಐಪಿಎಸ್’, ‘ಪೊಲೀಸ್ ಸ್ಟೋರಿ-2’, ‘ಕಲ್ಪನಾ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಇದೀಗ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎನ್ನುವ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆ ನಟಿಸುತ್ತಿದ್ದಾರೆ.

Continue Reading

South Cinema

Rashmika Mandanna: ದೇವರ ನಾಡಲ್ಲಿ ರಶ್ಮಿಕಾ ಬೋಲ್ಡ್‌ ಡ್ಯಾನ್ಸ್‌; ನಟಿಯನ್ನು ನೋಡಲು ಮುಗಿಬಿದ್ದ ಫ್ಯಾನ್ಸ್!

Rashmika Mandanna: ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ  ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ,  ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್‌ ಒಂದೆಡೆ ಸೇರಿದ್ದರು. 

VISTARANEWS.COM


on

Rashmika Mandanna attends an event in Kerala receives love
Koo

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. 2000 ಕ್ಕೂ ಹೆಚ್ಚು ಜನ ನಟಿಯನ್ನು ನೋಡಲು ಮುಗಿ ಬಿದ್ದಿದ್ದರು. ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ  ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ,  ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್‌ ಒಂದೆಡೆ ಸೇರಿದ್ದರು. 

ಇದೀಗ ರಶ್ಮಿಕಾ ಫೋಟೊ ಶೇರ್‌ ಮಾಡಿ “ನಾನು ನಿಮ್ಮೆಲ್ಲರನ್ನು ಭೇಟಿಯಾದಾಗ ನನ್ನ ಹೃದಯ ತುಂಬಿ ಬಂತು. ಧನ್ಯವಾದಗಳು ಕರುನಾಗಪಲ್ಲಿ. ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಹೀಗಾಗಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ನಿನ್ನೆ (ಜು. 25) ಕೇರಳದ ಕೊಲ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು, ಆದರೆ ನಟಿಯನ್ನು ವೀಕ್ಷಿಸಲು 2000 ಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದರು. ನಟಿಯನ್ನು ಸ್ವಾಗತಿಸಲು ಕಾರ್ಯಕ್ರಮದ ಸಮಯದಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾಗಳ ಹಲವಾರು ಹಾಡುಗಳನ್ನು ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡರು ರಶ್ಮಿಕಾ.

ಇದನ್ನೂ ಓದಿ: Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

ʻರಂಜಿತಮೆ’ ಹಾಡು ಪ್ಲೇ ಆಗುತ್ತಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸಿದರು ನಟಿ. ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ತಮ್ಮ ಎಂದಿನ ಸ್ಟೈಲ್‌ನಲ್ಲಿ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ನಟಿ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್‌ ಖಾನ್‌ ಅವರ ಸಿಕಂದರ್‌ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದೇ ರೀತಿ ಛಾವಾ ಸಿನಿಮಾಗೆ ರಶ್ನಿಕಾ ನಾಯಕಿ. ಪುಷ್ಪ ಸಿನಿಮಾಗೂ ರಶ್ಮಿಕಾ ನಾಯಕಿ.  ಈಗ ಒಂದೇ ದಿನ ರಶ್ಮಿಕಾ ಅವರ ಈ ಎರಡು ಸಿನಿಮಾಗಳು ರಿಲೀಸ್ ಆಗೋ ಸಾಧ್ಯತೆ ಇದೆ ಎಂದು ವರದಿಯಾಗಿದೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಮಾಡೋದಾಗಿ ತಂಡದವರು ಘೋಷಣೆ ಮಾಡಿದ್ದಾರೆ. ಅದೇ ರೀತಿ ರಶ್ಮಿಕಾ ನಟನೆಯ ‘ಛವಾ’ ಕೂಡ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ‘ಪುಷ್ಪ 2’ ಘೋಷಣೆ ಆದ ಬಳಿಕ ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಈ ಚಿತ್ರ ಕೂಡ ಅಂದುಕೊಂಡಂತೆ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

Continue Reading

ಸಿನಿಮಾ

Sai Pallavi: ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್‌?

Sai Pallavi: ಇತ್ತೀಚೆಗೆ, ಸಾಯಿ ಪಲ್ಲವಿ ಮದುವೆಯಾಗಿರುವ ಪ್ರಸಿದ್ಧ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿವೆ. ಈ ಸುದ್ದಿ ವಿಶೇಷವಾಗಿ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ನಟಿಯ ಫಾಲೋವರ್ಸ್‌ಗಳು ಈ ವದಂತಿಗಳನ್ನು ತಳ್ಳಿಹಾಕುತ್ತಿದ್ದಾರೆ.

VISTARANEWS.COM


on

Sai Pallavi Dating a Married Actor Who Has Two Kids
Koo

ಬೆಂಗಳೂರು: ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. 2015 ರ ಮಲಯಾಳಂ ಚಲನಚಿತ್ರ ‘ಪ್ರೇಮಂ’ನಲ್ಲಿನ ಅಭಿನಯದೊಂದಿಗೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ಕಲಿ, ಮಾರಿ 2, ಗಾರ್ಗಿ ಮತ್ತು ಇತರ ಅನೇಕ ಚಲನಚಿತ್ರಗಳ ಮೂಲಕ ಹೆಸರು ಗಳಿಸಿದ್ದಾರೆ. ಸಿನಿಮಾ ಜತೆಗೆ ನಟಿ ಆಗಾಗ ವೈಯಕ್ತಿಕ ವಿಚಾರಗಳಿಗಾಗಿ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ನಟಿ ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್‌ ಆಗಿದೆ.

ಇತ್ತೀಚೆಗೆ, ಸಾಯಿ ಪಲ್ಲವಿ ಮದುವೆಯಾಗಿರುವ ಪ್ರಸಿದ್ಧ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿವೆ. ಈ ಸುದ್ದಿ ವಿಶೇಷವಾಗಿ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ನಟಿಯ ಫಾಲೋವರ್ಸ್‌ಗಳು ಈ ವದಂತಿಗಳನ್ನು ತಳ್ಳಿಹಾಕುತ್ತಿದ್ದಾರೆ. ಸದ್ಯ ಈ ಸುದ್ದಿ ನ್ಯಾಷನಲ್ ಲೆವೆಲ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಈ ನಟ ಯಾರು ಎನ್ನೋದನ್ನು ಮಾತ್ರ ವರದಿಗಳಲ್ಲಿ ತಿಳಿಸಲಾಗಿಲ್ಲ. ಸದ್ಯಕ್ಕೆ ಈ ವದಂತಿಗಳಿಗೆ ಸಾಯಿ ಪಲ್ಲವಿ ಉತ್ತರ ನೀಡಿಲ್ಲ.

ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ತಮಿಳು ಚಿತ್ರ ಶಿವಕಾರ್ತಿಕೇಯನ್ ಜೊತೆ ನಟಿಸುತ್ತಿರುವ ಅಮರನ್, ನಾಗಚೈತನ್ಯ ಸಿನಿಮಾ ‘ತಾಂಡೇಲ್’ ಹಾಗೂ ಬಾಲಿವುಡ್‌ನ ‘ರಾಮಾಯಣ’ ಕೈಯಲ್ಲಿದೆ. ಟ್ರೆಡಿಷನಲ್ ಲುಕ್‌ನಲ್ಲಿ ನಟಿಸಿ ಜನರ ಮನಗೆದ್ದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು. ‘ಪ್ರೇಮಂ’, ಮಿಡಲ್ ಕ್ಲಾಸ್ ಅಬ್ಬಾಯ್, ಲವ್ ಸ್ಟೋರಿ, ಎನ್‌ಜಿಕೆ, ಗಾರ್ಗಿ, ಫಿದಾ, ಮಾರಿ 2 ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಒಂದಿಷ್ಟು ದಿನ ಸಿನಿಮಾದಿಂದ ದೂರ ಉಳಿದಿದ್ದರೂ, ಅವರ ಕೈಯಲ್ಲೀಗ ಮೆಗಾ ಪ್ರಾಜೆಕ್ಟ್‌ಗಳು ಇವೆ.

ಇದನ್ನೂ ಓದಿ” Sai Pallavi Mass Dance: ಆಮೀರ್​ ಖಾನ್​ ಪುತ್ರನ ಜತೆ ಪಬ್‌ನಲ್ಲಿ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ!

ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ‘ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿ’ ಪುಸ್ತಕವನ್ನು ಆಧರಿಸಿದ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್, ಭುವನ್ ಅರೋರಾ, ಲಲ್ಲು, ಶ್ರೀಕುಮಾರ್ ಮತ್ತು ಶ್ಯಾಮ್ ಮೋಹನ್ ಸಹ ನಟಿಸಿದ್ದಾರೆ. ಇದು ಅಕ್ಟೋಬರ್ 31, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಾಮಾಯಣದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ ನಟಿ. ಈ ಚಿತ್ರದಲ್ಲಿ ಅವರು ಸೀತಾ ದೇವಿಯ ಪಾತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಜೋಡಿ ಈಗಾಗಲೇ ಮುಂಬೈನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದೆ ಮತ್ತು ಚಿತ್ರವು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Continue Reading
Advertisement
BJP-JDS Padayatra
ಕರ್ನಾಟಕ3 mins ago

BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

Manu Bhaker
ಪ್ರಮುಖ ಸುದ್ದಿ11 mins ago

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Women's Asia Cup
ಪ್ರಮುಖ ಸುದ್ದಿ35 mins ago

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

karnataka weather Forecast
ಮಳೆ1 hour ago

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

HD Kumaraswamy
ಪ್ರಮುಖ ಸುದ್ದಿ1 hour ago

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Decline of Vultures
ಆರೋಗ್ಯ2 hours ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ2 hours ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sugar Vs Jaggery In Tea
ಆರೋಗ್ಯ2 hours ago

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Manu Bhaker
ಪ್ರಮುಖ ಸುದ್ದಿ2 hours ago

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ6 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ7 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌