OTT releases:‌ ಈ ವಾರ ಒಟಿಟಿಯಲ್ಲಿ ಈ ಸಿನಿಮಾ, ಶೋಗಳನ್ನು ನೋಡಿ… Vistara News

ಒಟಿಟಿ

OTT releases:‌ ಈ ವಾರ ಒಟಿಟಿಯಲ್ಲಿ ಈ ಸಿನಿಮಾ, ಶೋಗಳನ್ನು ನೋಡಿ…

OTT releases:‌ ಈ ವಾರ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಸಿನಿಮಾ, ಶೋಗಳ ಪರಿಚಯ ಇಲ್ಲಿದೆ.

VISTARANEWS.COM


on

ott
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಒಟಿಟಿ ಫ್ಲಾಟ್‌ ಫಾರ್ಮ್‌ ಎಂದಿಗೂ ತನ್ನ ಗ್ರಾಹಕರಿಗೆ ನಿರಾಸೆ ಮಾಡುವುದೇ ಇಲ್ಲ. ಹೊಸ ಹೊಸ ಸಿನಿಮಾ, ಶೋ, ಸಿರೀಸ್‌ಗಳ ಮೂಲಕ ವೀಕ್ಷಕರ ಮನ ತಣಿಸುತ್ತಲೇ ಬಂದಿದೆ. ಈ ವಾರ ಕೂಡ ನೀವು ಬಹು ನಿರೀಕ್ಷಿತ ಶೋ, ಚಲನಚಿತ್ರಗಳನ್ನು ಒಟಿಟಿಯಲ್ಲಿ ನೋಡಬಹುದು (OTT releases). ಆ ಕುರಿತಾದ ವಿವರ ಇಲ್ಲಿದೆ.

ಅಪೂರ್ವ (Apurva), ಡಿಸ್ನಿ+ಹಾಟ್‌ಸ್ಟಾರ್‌

ಟ್ರೇಲರ್‌ನಿಂದಲೇ ಕುತೂಹಲ ಕೆರಳಿಸಿರುವ ಹಿಂದಿ ಚಿತ್ರ ʼಅಪೂರ್ವʼ ನವೆಂಬರ್‌ 15ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗಿದೆ. ಈ ಥ್ರಿಲ್ಲರ್‌ಗೆ ನಿಖಿಲ್‌ ನಾಗೇಶ್‌ ಭಟ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಭಿಷೇಕ್‌ ಬ್ಯಾನರ್ಜಿ, ತಾರಾ ಸುತಾರಿಯಾ, ಧೈರ್ಯ ಕರ್ವಾ ಮತ್ತು ರಾಜ್‌ಪಾಲ್‌ ಯಾದವ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿದ್ದಾರೆ. ಚಂಬಲ್‌ ಕಣಿವೆಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ತಾರಾ ಸುತಾರಿಯಾ ಮೊದಲ ಬಾರಿ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಸ್ಟ್‌. ಕ್ರಿಸ್‌ಮಸ್‌. ಎವರ್‌! (Best. Christmas. Ever!), ನೆಟ್‌ಫ್ಲಿಕ್ಸ್‌

ಈ ಇಂಗ್ಲಿಷ್‌ ಚಿತ್ರ ನವೆಂಬರ್‌ 16ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಜಾಕಿಯ ಜೀವನದ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಹೀದರ್ ಗ್ರಹಾಂ, ಜೇಸನ್ ಬಿಗ್ಸ್, ಮ್ಯಾಟ್ ಸೆಡೆನೊ ಮತ್ತು ಬ್ರಾಂಡಿ ನಾರ್‌ವುಡ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾಮಿಡಿ ಡ್ರಾಮ ಚಿತ್ರವನ್ನು ಮೇರಿ ಲ್ಯಾಂಬರ್ಟ್ ನಿರ್ದೇಶಿಸಿದ್ದಾರೆ.

ಇನ್‌ ಲವ್‌ ಆ್ಯಂಡ್‌ ಡೀಪ್‌ ವಾಟರ್‌ (In Love and Deep Water), ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 16ರಿಂದ ಪ್ರಸಾರವಾಗುತ್ತಿರುವ ಇನ್ನೊಂದು ಚಿತ್ರ ಇದು. ಜಪಾನಿನ ಪ್ರಸಿದ್ಧ ಬರಹಗಾರ ಯುಜಿ ಸಕಾಮೊಟೊ ರಚಿಸಿದ ಪ್ರಣಯ ಮತ್ತು ರಹಸ್ಯದ ಮಿಶ್ರಣವನ್ನೊಳಗೊಂಡ ಕಥೆಯ ಸಿನಿಮಾ ರೂಪ ಇದು. ಹಡಗೊಂದರಲ್ಲಿ ಈ ಚಿತ್ರದ ಕಥೆ ಸಾಗುತ್ತದೆ. ತಾರಾಗಣದಲ್ಲಿ ಯೋಹ್ ಯೋಶಿಡಾ, ರಿಂಕೊ ಕಿಕುಚಿ, ಕೆಂಟೊ ನಾಗಯಾಮಾ, ಯೂಕಿ ಇಜುಮಿಸಾವಾ, ಅಜು ಮಕಿಟಾ, ಅಮಾನೆ ಒಕಾಯಾಮಾ, ಯೋಶಿಮಾಸಾ ಕೊಂಡೋ, ಟೊಮು ಮಿಯಾಝಾಕಿ, ತಕಾಶಿ ಒಕಾಬೆ, ಯುನ್ಹೋ, ನಹಾನಾ, ರುಮಿಕಾ ಒಗೈ ಮತ್ತಿತರರಿದ್ದಾರೆ.

ದಿ ಕ್ರೌನ್‌ ಸೀಸನ್‌ 6 ಪಾರ್ಟ್‌ 1(The Crown Season 6 Part 1), ನೆಟ್‌ಫ್ಲಿಕ್ಸ್‌

ಇಂಗ್ಲೆಂಡ್‌ನ ಜನಪ್ರಿಯ ರಾಜಕುಮಾರಿ ದಿ. ಡಯಾನಾ ಜೀವನದ ಮೇಲೆ ಬೆಳಕು ಚೆಲ್ಲುವ ʼದಿ ಕ್ರೌನ್‌ ಸೀಸನ್‌ 6ʼರ ಮೊದಲ ಪಾರ್ಟ್‌ ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 16ರಂದು ತೆರೆ ಕಂಡಿದೆ. ರಾಜಕುಮಾರಿ ಡಯಾನಾ ಮತ್ತು ದೋಡಿ ಫಯೇದ್ ನಡುವಿನ ಪ್ರಣಯವನ್ನು ಇದು ನಿರೂಪಿಸುತ್ತದೆ. ಎಲಿಜಬೆತ್ ಡೆಬಿಕಿ, ಇಮೆಲ್ಡಾ ಸ್ಟಾಂಟನ್, ಜೊನಾಥನ್ ಪ್ರೈಸ್, ಲೆಸ್ಲಿ ಮ್ಯಾನ್ವಿಲ್ಲೆ, ಡೊಮಿನಿಕ್ ವೆಸ್ಟ್ ಮತ್ತಿತರರು ನಟಿಸಿದ್ದಾರೆ.

ಬಿಲೀವರ್‌ 2 (Believer 2), ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 17ರಂದು ತೆರೆ ಕಾಣಲಿರುವ ಚಿತ್ರ ʼಬಿಲೀವರ್‌ 2ʼ. ದಕ್ಷಿಣ ಕೊರಿಯಾದ ಆ್ಯಕ್ಷನ್ ಕ್ರೈಮ್ ಚಿತ್ರವಾದ ಇದನ್ನು ಬೇಕ್ ಜಾಂಗ್-ಯುಲ್ ನಿರ್ದೇಶಿಸಿದ್ದಾರೆ. ಚೋ ಜಿನ್-ವೂಂಗ್, ಚಾ ಸೆಯುಂಗ್-ವೊನ್, ಹಾನ್ ಹ್ಯೋ-ಜೂ, ಓಹ್ ಸೆಯುಂಗ್-ಹೂನ್ ಮತ್ತಿತರರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.

ಮೊನಾರ್ಕ್‌: ಲೆಗಸ್ಸಿ ಆಫ್‌ ಮಾನ್‌ಸ್ಟರ್ಸ್‌ (Monarch: Legacy of Monsters), ಆ್ಯಪಲ್‌ ಟಿವಿ+

ಆ್ಯಪಲ್‌ ಟಿವಿ+ನಲ್ಲಿ ನವೆಂಬರ್‌ 17ರಿಂದ ಪ್ರಸಾರವಾಗಲಿರುವ ಅಮೇರಿಕನ್‌ ಟಿವಿ ಸಿರೀಸ್‌ ಇದು. ಈ ಆ್ಯಕ್ಷನ್‌, ಸೈನ್ಸ್‌ ಫಿಕ್ಷನ್‌ನಲ್ಲಿ ಅಣ್ಣಾ ಸವಾಯಿ, ಕೀರ್ಸಿ ಕ್ಲೆಮನ್ಸ್, ರೆನ್ ವಟಾಬೆ, ಮಾರಿ ಯಮಮೊಟೊ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ರುಸ್ಟಿನ್‌ (Rustin), ನೆಟ್‌ಫ್ಲಿಕ್‌

ಅಮೇರಿಕದ ನಾಗರಿಕ ಹಕ್ಕುಗಳ ಕಾರ್ಯಕರ್ತ ಬೇಯಾರ್ಡ್ ರುಸ್ಟಿನ್ ಅವರ ಬಯೋಪಿಕ್‌ ʼರುಸ್ಟಿನ್‌ʼ. ಜಾರ್ಜ್ ಸಿ. ವೋಲ್ಫ್ ನಿರ್ದೇಶನದ ಈ ಚಿತ್ರದಲ್ಲಿ ಕೋಲ್ಮನ್ ಡೊಮಿಂಗೊ, ಕ್ರಿಸ್ ರಾಕ್, ಜೆಫ್ರಿ ರೈಟ್, ಆಡ್ರಾ ಮೆಕ್ಡೊನಾಲ್ಡ್ ಅಭಿನಯಿಸಿದ್ದಾರೆ. ಈ ಇಂಗ್ಲಿಷ್‌ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 17ರಿಂದ ವೀಕ್ಷಣೆಗೆ ಲಭ್ಯ.

ಸ್ಕಾಟ್‌ ಪಿಲ್‌ಗ್ರಿಮ್‌ ಟೇಕ್ಸ್‌ ಆಫ್‌ (Scott Pilgrim Takes Off), ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 17ರಿಂದ ವೀಕ್ಷಣೆಗೆ ಲಭ್ಯವಿರುವ ಇನ್ನೊಂದು ಟಿವಿ ಸೀರಿಸ್‌ ಇದು. ಆ್ಯನಿಮೇಷನ್‌ ಆಧಾರಿತ ಈ ಶೋ ಮಕ್ಕಳ ಗಮನ ಸೆಳೆಯಲಿದೆ. ಈ ಸರಣಿಯು ಓ’ಮ್ಯಾಲೆ ಬರೆದು ಚಿತ್ರಿಸಿದ ಸ್ಕಾಟ್ ಪಿಲ್ಗ್ರಿಮ್ ಗ್ರಾಫಿಕ್ ಕಾದಂಬರಿಗಳನ್ನು ಆಧರಿಸಿದೆ.

ಸುಖೀ (Sukhee), ನೆಟ್‌ಫ್ಲಿಕ್ಸ್‌

ಬಹುದಿನಗಳ ಬಳಿಕ ಬಾಲಿವುಡ್‌ ತಾರೆ ಶಿಲ್ಪಾ ಶೆಟ್ಟಿ ತೆರೆ ಮೇಲೆ ಕಾಣಿಕೊಂಡ ಹಿಂದಿ ಚಿತ್ರ ʼಸುಖೀʼ ನವೆಂಬರ್‌ 17ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ. ಪಂಜಾಬಿ ಗೃಹಿಣಿ ಸುಖ್‌ಪ್ರೀತ್‌ (ಸುಖೀ) ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದಾರೆ. ಸೋನಲ್‌ ಜೋಷಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತ್ ಸಾಧ್, ದಿಲ್ನಾಜ್ ಇರಾನಿ, ಕುಶ ಕಪಿಲ, ಪಾವ್ಲೀನ್ ಗುಜ್ರಾಲ್ ಮತ್ತಿತರರು ನಟಿಸಿದ್ದಾರೆ.

ದಿ ರೈಲ್ವೇ ಮೆನ್‌ (The Railway Men), ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 18ರಿಂದ ʼದಿ ರೈಲ್ವೇ ಮೆನ್‌ʼ ಟಿವಿ ಶೋ ಪ್ರಸಾರವಾಗಲಿದೆ. ಆರ್‌.ಮಾಧವನ್‌, ಕೆ.ಕೆ.ಮೆನನ್‌, ದಿವ್ಯೇಂದು, ಬಬಿಲ್‌ ಖಾನ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದು, 1984ರ ಭೋಪಾಲ್ ಅನಿಲ ದುರಂತದ ಚಿತ್ರಣ ತೆರೆದಿಡಲಿದೆ. ಕೈಗಾರಿಕಾ ದುರಂತದ ಸಮಯದಲ್ಲಿ ಹಲವಾರು ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೈಲ್ವೆ ಉದ್ಯೋಗಿಗಳ ವೀರೋಚಿತ ಸಾಹಸವನ್ನು ಇದು ತಿಳಿಸುತ್ತದೆ.

ಇದನ್ನೂ ಓದಿ: Katrina Kaif: ʻಮೆರ‍್ರಿ ಕ್ರಿಸ್‌ಮಸ್‌ʼ ಸಿನಿಮಾ ಮತ್ತೆ ಮಂದೂಡಿಕೆ; ರಿಲೀಸ್‌ ಡೇಟ್‌ ರಿವೀಲ್‌!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಒಟಿಟಿ

BBK SEASON 10: ಬಿಗ್ ಬಾಸ್ ಮನೆಗೆ ಮಾಡೆಲ್‌ ಪವಿ ಪೂವಪ್ಪ, ಕ್ರಿಕೆಟಿಗ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ!

BBK SEASON 10: ವೈಲ್ಡ್ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವವರು ಯಾರೆಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿತ್ತು. ಇದೀಗ ಮಾಡೆಲ್ ಪವಿ ಪೂವಪ್ಪ, ಕ್ರಿಕೆಟಿಗ, ಮಾಡೆಲ್ ಅವಿನಾಶ್ ಶೆಟ್ಟಿ ಆಗಮಿಸಿರುವುದು ಖಚಿತವಾಗಿದೆ.

VISTARANEWS.COM


on

Model Pavi Poovappa and cricketer Avinash Shetty
Koo

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 (BBK SEASON 10) ಶೋ ಶುರುವಾದ 50 ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಸ್ಪರ್ಧಿಗಳು ಎಂಟ್ರಿ ಪಡೆದಿದ್ದಾರೆ. ಹೊಸ ಪ್ರೋಮೋದಲ್ಲಿ ಇಬ್ಬರು ವೈಲ್ಡ್ ಕಾರ್ಡ್‌ನೊಂದಿಗೆ ದೊಡ್ಮನೆಗೆ ಪ್ರವೇಶಿಸುವುದು ಕಂಡುಬಂದಿತ್ತು, ಆದರೆ ಅವರು ಯಾರೆಂದು ಸ್ಪಷ್ಟತೆ ಇರಲಿಲ್ಲ. ಇದೀಗ ಮಾಡೆಲ್ ಪವಿ ಪೂವಪ್ಪ, ಕ್ರಿಕೆಟಿಗ, ಮಾಡೆಲ್ ಅವಿನಾಶ್ ಶೆಟ್ಟಿ ಅವರೇ ಬಿಗ್‌ ಬಾಸ್‌ ಮನೆಗೆ ಆಗಮಿಸಿರುವ ಸ್ಪರ್ಧಿಗಳೆಂದು ಖಚಿತವಾಗಿದೆ.

ಪವಿ ಪೂವಪ್ಪ ಅವರು ಕೊಡಗು ಮೂಲದ ರೂಪದರ್ಶಿ ಆಗಿದ್ದು, ಬೋಲ್ಡ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾರೆ. ಇವರು ಬಿಗ್‌ ಬಾಸ್‌ಗೆ ಎಂಟ್ರಿ ನೀಡುತ್ತಲೇ ಅವರ ಬೋಲ್ಡ್‌ ಫೋಟೊಗಲು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಪಾನಿಕುಟ್ಟೀರ ಪವಿತ್ರ ಪೂವಪ್ಪ ಇವರ ಪೂರ್ತಿ ಹೆಸರು ಆಗಿದ್ದು, ಕಳೆದ 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ.

ಉನ್ನತ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿರುವ ಇವರು, ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ “ಸೊಪ್ಪನ ಸುಂದರಿ” ಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಯಾರಿದು ಅವಿನಾಶ್ ಶೆಟ್ಟಿ?

ಅವಿನಾಶ್ ಶೆಟ್ಟಿ ಅವರು ತುಳು ನಟ, ಮಾಡೆಲ್ ಹಾಗೂ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಸುರತ್ಕಲ್ ಮೂಲದ ಅವಿನಾಶ್ ಅವರು ಸುಕನ್ಯಾ ಮತ್ತು ಶ್ರೀಧರ್ ಶೆಟ್ಟಿ ದಂಪತಿಯ ಪುತ್ರ. ಇವರು ಕೋಕ್‌ ಮತ್ತು ಎಂಆರ್‌ಎಫ್‌ ಟಯರ್‌ ಜಾಹೀರಾತಿನ ಮೂಲಕ ಗ್ಲಾಮರ್ ಲೋಕಕ್ಕೆ ಪ್ರವೇಶಿಸಿದರು. 2007ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿ ಗೆದ್ದ ಇವರು, 2012ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಅದೇ ರೀತಿ ಚೆನ್ನೈನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ಸುದೇಶ್ ಶೆಟ್ಟಿ ನಿರ್ಮಾಣದ, ಸಾಯಿಕೃಷ್ಣ ನಿರ್ದೇಶನದ ಕನ್ನಡ ಚಲನಚಿತ್ರ ʼಚೆಲ್ಲ ಪಿಲ್ಲಿ’ ಮತ್ತು ಬದ್ಮಾಶ್ ಚಿತ್ರದಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ | BBK SEASON 10: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ʻಪವಿ ಪೂವಪ್ಪʼ ಬೋಲ್ಡ್‌ ಪೋಟೊಸ್‌ ವೈರಲ್‌!

ಸದ್ಯ ಮನೆಯಲ್ಲಿ ಮೈಕಲ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಶಿಪ್‌ನಲ್ಲಿ ಇದ್ದು, ಎಲಿಮಿನೇಟ್‌ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಗೆ ಹೋಗಿದ್ದಾರೆ. ಹೊರಹೋಗುವ ಮುನ್ನ ಅವರು ಅವರ ಕ್ಯಾಪ್ಟನ್‌ನ ಜವಾಬ್ದಾರಿಯನ್ನು ಒಬ್ಬರನ್ನು ನೇಮಿಸುವಂತೆ ಬಿಗ್‌ಬಾಸ್ ಆದೇಶಿಸಿದ್ದಾರೆ. ಅದಕ್ಕೆ ನೀತು ಮೈಕಲ್ ಅವರನ್ನು ನಾಯಕನನ್ನಾಗಿ ನೇಮಿಸಿ ಹೊರಬಿದ್ದಿದ್ದಾರೆ.

Continue Reading

South Cinema

Ghost Movie: 10 ಸಾವಿರ ಅಡಿ ʻಘೋಸ್ಟ್ʼ ಪೋಸ್ಟರ್ ಲಾಂಚ್; ಜೀ5 ಒಟಿಟಿಗೆ ಶಿವಣ್ಣನ ಸಿನಿಮಾ!

Ghost Movie: ಸದ್ಯ ಜೀ5 ಒಟಿಟಿಯಲ್ಲಿ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

10,000 feet ʻGhostʼ poster launch
Koo

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಜೀ ಕನ್ನಡ ಈಗಾಗಲೇ ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಕನ್ನಡದ ನಂಬರ್ 1 ಮನರಂಜನಾ ಚಾನೆಲ್ ಎಂಬ ಖ್ಯಾತಿಯನ್ನು ಗಳಿಸಿದ ಜೀ ಕನ್ನಡ ಜತೆಗೆ ಜೀ5 ಒಟಿಟಿ ಮೂಲಕ ಒಳ್ಳೆಯ ಸಿನಿಮಾಗಳನ್ನು (Ghost Movie) ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ-ವಿಶೇಷ ಯೋಜನೆಗಳನ್ನು ಈ ಒಟಿಟಿ ಹಾಕಿಕೊಂಡಿದೆ. ಸದ್ಯ ಜೀ5 ಒಟಿಟಿಯಲ್ಲಿ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಾಹಸ ಥ್ರಿಲ್ಲರ್‌ ಸಿನಿಮಾ ಘೋಸ್ಟ್‌ ಇದೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಶಿವಣ್ಣನ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೇ ಇರುವವರು ಜೀ5 ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಈಗಾಗಲೇ ನೋಡಿರುವವರು ಇನ್ನೊಮ್ಮೆ ಒಟಿಟಿಯಲ್ಲೂ ನೋಡಬಹುದು.

ಸಿನಿಮಾ ಜೀ5ನಲ್ಲಿ ರಿಲೀಸ್ ಆಗಿರುವುದಕ್ಕೆ ಅದ್ಧೂರಿಯಾಗಿ ಪ್ರಚಾರ ಮಾಡಿದೆ. ಈ ಚಿತ್ರದ ಪ್ರಮೋಶನ್‌ಗೆ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್‌ಅನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.

ಇದನ್ನೂ ಓದಿ: Ghost Trailer: ನಾನ್ ಹೋದ್ರೆ ಯುದ್ಧಭೂಮಿ ರುದ್ರಭೂಮಿ ಆಗುತ್ತೆ ಎಂದು ಅಬ್ಬರಿಸಿದ ಶಿವಣ್ಣ; ʻಘೋಸ್ಟ್‌ʼ ಟ್ರೈಲರ್‌ ಔಟ್‌!

ಘೋಸ್ಟ್ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಶ್ರೀನಿ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್‌ ಅವರ ಹೊಸ ಲುಕ್‌ ದರ್ಶನ ಮಾಡಿದ್ದಾರೆ. ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತವಿದೆ. ಶಿವಣ್ಣನ ಜತೆ ಮಲಯಾಳಂ ನಟ ಜಯರಾಮ್‌, ಹಿಂದಿ ನಟ ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

Continue Reading

South Cinema

Unstoppable with NBK: ವಿಜಯ್‌ ದೇವರಕೊಂಡ ಧ್ವನಿ ಕೇಳಿದ್ದೇ ತಡ ನಾಚಿ ನೀರಾದ ರಶ್ಮಿಕಾ ಮಂದಣ್ಣ

Unstoppable with NBK: ʻಅನಿಮಲ್ʼ ಸಿನಿಮಾ ಪ್ರಚಾರ ಮಾಡಲು ಅನ್‌ಸ್ಟಾಪಬಲ್ ಶೋ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಬಾಲಯ್ಯ ಅವರ ಕ್ರಶ್‌ ರಶ್ಮಿಕಾ ಅವರನ್ನು ಸಖತ್‌ ಆಗಿಯೇ ಕಾಲೆಳೆದಿದ್ದಾರೆ.

VISTARANEWS.COM


on

Unstoppable with NBK: Ranbir Kapoor, Rashmika
Koo

ಬೆಂಗಳೂರು: ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ಶೋ (Unstoppable with NBK) ಕಳೆದ 1 ಮತ್ತು 2 ಸೀಸನ್‌ಗಳಲ್ಲಿ ಎಸ್‌ಎಸ್ ರಾಜಮೌಳಿ, ಎಂಎಂ ಕೀರವಾಣಿ, ಪ್ರಭಾಸ್, ವಿಜಯ್ ದೇವರಕೊಂಡ ಮತ್ತು ಇನ್ನೂ ಅನೇಕ ಪ್ರಮುಖ ವ್ಯಕ್ತಿಗಳು ಬಂದಿದ್ದರು. ʻದಿ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಲಿಮಿಟೆಡ್ ಎಡಿಷನ್ ಶೋʼ ಅಕ್ಟೋಬರ್ 17ರಂದು ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಬಾಲಯ್ಯ ಅವರ ಇತ್ತೀಚಿನ ಚಿತ್ರ ಭಗವಂತ ಕೇಸರಿಯ ಪಾತ್ರವರ್ಗ ಮತ್ತು ಸಿಬ್ಬಂದಿ ಇದ್ದರು. ನವೆಂಬರ್ 24ರಂದು ಪ್ರಸಾರವಾಗಲಿರುವ ಇತ್ತೀಚಿನ ಮುಂಬರುವ ಸಂಚಿಕೆಯಲ್ಲಿ, ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಸಂದೀಪ್ ರೆಡ್ಡಿ ವಂಗಾ ತಮ್ಮ ಮುಂಬರುವ ಚಲನಚಿತ್ರ ʻಅನಿಮಲ್ʼ ಸಿನಿಮಾ ಪ್ರಚಾರ ಮಾಡಲು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಬಾಲಯ್ಯ ಅವರ ಕ್ರಶ್‌ ರಶ್ಮಿಕಾ ಅವರನ್ನು ಸಖತ್‌ ಆಗಿಯೇ ಕಾಲೆಳೆದಿದ್ದಾರೆ.

ಈ ಶೋನಲ್ಲಿ ಮೊದಲ ಸಂಚಿಕೆಯಲ್ಲಿ ತೆಲುಗು ನಟ ವಿಶ್ವಕ್‌ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ಕಾಣಿಸಿಕೊಂಡಿದ್ದರು. ವಿಶ್ವಕ್ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ನಂದಮೂರಿ ಬಾಲಕೃಷ್ಣರಿಗೆ ನಿಮ್ಮ ಕ್ರಶ್‌ ಯಾರೆಂದು ಕೇಳಿದ್ದರು. ಉತ್ತರಿಸಿದ ನಂದಮೂರಿ ಬಾಲಕೃಷ್ಣ ಅವರು ರಶ್ಮಿಕಾ ಎಂದು ಹೇಳಿದ್ದರು. ಟಾಲಿವುಡ್‌, ಕಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಮಂದಣ್ಣ ಸ್ವತಃ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟವಾಗಿದ್ದರು. ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗುತ್ತಿದೆ.

ಇದನ್ನೂ ಓದಿ: Pawan Kalyan: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಪವನ್ ಕಲ್ಯಾಣ್‌! ಬದುಕು ನೀಡಿದ್ದು ಚಿರಂಜೀವಿ

ರಣಬೀರ್ ಕಪೂರ್ ಹೊಗಳಿದ ಬಾಲಯ್ಯ

ರಣಬೀರ್ ಕಪೂರ್ ಜತೆಗಿನ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ಶೋನ ಪ್ರೋಮೊವನ್ನು ಟ್ವೀಟರ್‌ನಲ್ಲಿ ಪ್ರಸಾರ ಮಾಡಲಾಗಿದೆ. ಪ್ರೋಮೊದಲ್ಲಿ ನಂದಮೂರಿ ಬಾಲಕೃಷ್ಣ ಅವರು ರಣಬೀರ್ ಕಪೂರ್ ಅವರನ್ನು ಕಾರ್ಯಕ್ರಮಕ್ಕೆ ಪರಿಚಯಿಸಿದರು, ಅವರನ್ನು “ರಕ್ತ ಚಂದ್ರನಂತೆ ಸುಂದರ, ಗೋಸುಂಬೆಯಂತೆ ಅತ್ಯಂತ ಪ್ರತಿಭಾವಂತ ಮತ್ತು ಕಪೂರ್ ಕುಟುಂಬದ ಅತ್ಯಂತ ಪ್ರತಿಭಾನ್ವಿತ ಮೊಮ್ಮಗ” ಎಂದು ವಿವರಿಸಿದರು. ನಂತರ ರಣಬೀರ್ ಕಪೂರ್ ಬಾಲಕೃಷ್ಣ ಅವರ ಫೇಮಸ್ ಡೈಲಾಗ್ ಹೇಳುವ ಮೂಲಕ ವೇದಿಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರೋಮೊದಲ್ಲಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಶೋನಲ್ಲಿ ವಿಜಯ್‌ ದೇವರಕೊಂಡ ಬಗ್ಗೆ ಸಖತ್‌ ಆಗಿ ಕಾಲೆಳೆದಿದ್ದಾರೆ ಬಾಲಯ್ಯ. ಮಾತ್ರವಲ್ಲ ವಿಜಯ್‌ ದೇವರಕೊಂಡಗೆ ರಶ್ಮಿಕಾರಿಂದ ಕಾಲ್‌ ಕೂಡ ಮಾಡಿಸಿದ್ದಾರೆ. ವಿಜಯ್‌ ದೇವರಕೊಂಡ ಕೂಡ ಕಾಲ್‌ ರಿಸೀವ್‌ ಮಾಡಿ ʻʻವಾಟ್ಸ್‌ ಅಪ್‌ ಕ್ರಶ್‌? ʻʻWhat’s up, KRUSH?ಎಂದು ಕೇಳಿದ್ದಾರೆ. ಪ್ರೋಮೊದಲ್ಲಿ ರಶ್ಮಿಕಾ ಈ ವೇಳೆ ನಾಚಿ ನೀರಾಗಿದ್ದು, ಡಿಯರ್ ಕಾಮ್ರೇಡ್ ಚಿತ್ರದ ಕಡಲಲ್ಲೇ ಜನಪ್ರಿಯ ಹಾಡು ಹಿನ್ನಲೆಯಲ್ಲಿ ಮೂಡಿಬಂತು. ಹಾಗೇಯೇ ಸ್ಕ್ರೀನ್‌ನಲ್ಲಿ ವಿಜಯ್‌ ದೇವರಕೊಂಡ ಹಾಗೂ ರಣಬೀರ್‌ ಫೋಟೊ ಬಂದಾಗ, ರಣಬೀರ್‌ ಅವರು ಬಾಲಯ್ಯ ಅವರಿಗೆ ʻʻರಶ್ಮಿಕಾ ಅವರನ್ನು ಕೇಳಿ, ಅವರಿಬ್ಬರಲ್ಲಿ ಯಾರು ಬೆಟರ್‌ ಹೀರೊ?ʼʼ ಎಂದು ಮತ್ತೆ ನಟಿಯ ಕಾಲೆಳೆದಿದ್ದಾರೆ. ಪ್ರೇಕ್ಷಕರು ಕೂಡ ಪ್ರೋಮೊ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್‌: ನಟ ನಂದಮೂರಿ ಬಾಲಕೃಷ್ಣ

ರಣಬೀರ್ ಕಪೂರ್ ಕ್ಯಾಶುಯಲ್ ಬ್ರೌನ್ ಚೆಕ್ಡ್ ಶರ್ಟ್ ಮತ್ತು ಬಾಲಕೃಷ್ಣ ಅವರು ಫ್ಯಾಶನ್ ಬ್ಲೇಜರ್ ಧರಿಸಿದ್ದರು. ರಶ್ಮಿಕಾ ಮಂದಣ್ಣ ಕಪ್ಪು ಸೀರೆಯಲ್ಲಿ ಮಿಂಚಿದ್ದರು.

ಡಿಸೆಂಬರ್ 1ರಂದು ಅನಿಮಲ್‌ ರಿಲೀಸ್‌

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಡಿಸೆಂಬರ್ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಕೂಡ ಅದೇ ದಿನ ಬಿಡುಗಡೆಯಾಗುತ್ತಿದ್ದು, ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗುತ್ತಿವೆ. ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರದ ಟ್ರೈಲರ್‌ ಐಕಾನಿಕ್ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲು ನಿರ್ಮಾಪಕ ಭೂಷಣ್ ಕುಮಾರ್ ಜತೆಗೆ ಬಾಬಿ ಡಿಯೋಲ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಚಿತ್ರದ ತಾರಾಗಣವು ದುಬೈಗೆ ಹಾರಿತ್ತು. ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು.

ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ.

Continue Reading

South Cinema

Leo OTT Release: ದಳಪತಿ ವಿಜಯ್‌-ಲೋಕೇಶ್ ಕನಕರಾಜ್ ಕಾಂಬೋ ʻಲಿಯೋʼಒಟಿಟಿಗೆ ಬರಲು ರೆಡಿ!

Leo OTT Release: ‘ಲಿಯೋ’ ರಿಲೀಸ್ ಆಗಿ ನಾಲ್ಕು ವಾರಗಳಲ್ಲಿ ಈ ಚಿತ್ರ ಒಟಿಟಿಗೆ ಬರುತ್ತಿದೆ. ವಿಶ್ವಾದ್ಯಂತ ಈ ಚಿತ್ರ 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

VISTARANEWS.COM


on

Leo cinema
Koo

ಬೆಂಗಳೂರು: ಲೋಕೇಶ್ ಕನಕರಾಜ್ ನಿರ್ದೇಶನ ಹಾಗೂ ದಳಪತಿ ವಿಜಯ್‌ ಅಭಿನಯದ ಲಿಯೋ ಒಟಿಟಿ (Leo OTT Release) ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಅಕ್ಟೋಬರ್ 19ರಂದು ಬಿಡುಗಡೆಯಾದ ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಡೀ ಪ್ರಪಂಚದ ಲೆಕ್ಕಾಚಾರ ನೋಡಿದರೆ ಲಿಯೋ ಮೊದಲ ದಿನವೇ 140 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ‘ಲಿಯೋ’ ರಿಲೀಸ್ ಆಗಿ ನಾಲ್ಕು ವಾರಗಳಲ್ಲಿ ಈ ಚಿತ್ರ ಒಟಿಟಿಗೆ ಬರುತ್ತಿದೆ. ಈ ಸಿನಿಮಾ ನವೆಂಬರ್ 16ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ನವೆಂಬರ್ 21ರಿಂದ ಚಿತ್ರ ಸ್ಟ್ರೀಮ್ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ಮೊದಲ ದಿನ ಲಿಯೋ ಭಾರತದಲ್ಲಿ 64.8 ಕೋಟಿ ಗಳಿಸಿತ್ತು. ತಮಿಳು ಭಾಷೆಯಲ್ಲಿ 48.96 ಕೋಟಿ ರೂ, ತೆಲುಗಿನಲ್ಲಿ 12.9 ಕೋಟಿ ರೂ.; ಹಿಂದಿಯಲ್ಲಿ 2.8 ಕೋಟಿ ರೂ; ಕನ್ನಡ: 1.4 ಕೋಟಿ ರೂ ಸಂಗ್ರಹಿಸಿದೆ. ಆರಂಭಿಕ ಅಂದಾಜಿನ ಪ್ರಕಾರ, ಶುಕ್ರವಾರ, ಲಿಯೋ ತನ್ನ ಎರಡನೇ ದಿನದಲ್ಲಿ ಭಾರತದಲ್ಲಿ 36 ಕೋಟಿ ರೂ. ಗಳಿಸಿದೆ.

ಲಿಯೋ’ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ.

ಇದನ್ನೂ ಓದಿ: Shiva Rajkumar: ನಾಳೆ ಶಿವಣ್ಣ ʻಘೋಸ್ಟ್‌ʼ ಅದ್ಧೂರಿ ತೆರೆಗೆ; ಲಿಯೋ ಸಿನಿಮಾಗೆ ಹೆಚ್ಚು ಸ್ಕ್ರೀನ್‌!

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Continue Reading
Advertisement
Kenda teaser kannada
South Cinema18 mins ago

Kannada New Movie: ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’!

CP Yogeshwar brother in law Mahadevaiah
ಕರ್ನಾಟಕ29 mins ago

Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

Foeticide case and pair of pink bunny figurines
ಕರ್ನಾಟಕ50 mins ago

Belagavi Winter Session: ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

Narendra Modi With Women
EXPLAINER52 mins ago

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

Foeticide arrest
ಕರ್ನಾಟಕ1 hour ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್1 hour ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ2 hours ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ2 hours ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ2 hours ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema2 hours ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ11 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌