Loose Mada Yogi: ಲೂಸ್ ಮಾದ ಯೋಗಿ ತಮಿಳು ಭಾಷಣ; ಏನಪ್ಪ ನಿನ್ನ ಸಂದೇಶ ಎಂದ ಕನ್ನಡಿಗರು! - Vistara News

South Cinema

Loose Mada Yogi: ಲೂಸ್ ಮಾದ ಯೋಗಿ ತಮಿಳು ಭಾಷಣ; ಏನಪ್ಪ ನಿನ್ನ ಸಂದೇಶ ಎಂದ ಕನ್ನಡಿಗರು!

Loosemada Yogi: ಇದೀಗ ನೆಟ್ಟಿಗರು ಯೋಗಿ ಅವರಿಗೆ ʻʻತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿತಿವಿ ಅನ್ನೋ ಸಂದೇಶ ನೀಡಲು ಹೊರಟ್ರಾ ನೀವು.?ʼʼಎಂದು ಪ್ರಶ್ನೆ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

VISTARANEWS.COM


on

Loose mada yogi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೂಸ್ ಮಾದ ಯೋಗಿ ನಟನೆಯ (Loose Mada Yogi) ‘ರೋಜಿ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬೆಂಗಳೂರಿನ ವಿವೇಕ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಿ ಭಾಗವಹಿಸಿದ್ದರು. ಈ ವೇಳೆ ತಮಿಳಿನಲ್ಲೇ ತಮ್ಮ ‘ರೋಜಿ’ ಸಿನಿಮಾ ಬಗ್ಗೆ ಹೇಳಿದ್ದಾರೆ. ಕನ್ನಡಿಗರು ಕನ್ನಡದಲ್ಲೇ ಮಾತನಾಡಲು ಹೇಳಿದರೂ ಯೋಗಿ ಕೇಳಲಿಲ್ಲ ಎನ್ನಲಾಗುತ್ತಿದೆ. ಇದೀಗ ನೆಟ್ಟಿಗರು ಯೋಗಿ ಅವರಿಗೆ ʻʻತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿತಿವಿ ಅನ್ನೋ ಸಂದೇಶ ನೀಡಲು ಹೊರಟ್ರಾ ನೀವು.?ʼʼಎಂದು ಪ್ರಶ್ನೆ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಆಗಿದ್ದೇನು?

ಲೂಸ್ ಮಾದ ಯೋಗಿ ನಟನೆಯ 50ನೇ ಸಿನಿಮಾ ರೋಜಿ. ಈ ಚಿತ್ರದಲ್ಲಿ ತಮಿಳು ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಿ ಫಸ್ಟ್ ಲುಕ್ ರಿವೀಲ್ ಆಗಿತ್ತು. ‘ಹೆಡ್‌ಬುಷ್’ ಸಿನಿಮಾ ಮಾಡಿದ್ದ ಶೂನ್ಯ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಾಜಾಜಿನಗರದ ನವರಂಗ್ ಥಿಯೇಟರ್ ಆವರಣದಲ್ಲಿ ಚಿತ್ರದ ಮುಹೂರ್ತ ನೆರವೇರಿಸಿ ಪೋಸ್ಟರ್ ಅನಾವರಣ ಮಾಡಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ರೋಜಿ ಭಾಯ್ ಆಗಿ ಚಿತ್ರದಲ್ಲಿ ಯೋಗಿ ಅಬ್ಬರಿಸಲಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿತ್ತು. ಮುಂದಿನ ವರ್ಷ ‘ರೋಜಿ’ ಸಿನಿಮಾ ಬಿಡುಗಡೆಯಾಗುತ್ತದೆ ಎಂತಲೂ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಆದರೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಯೋಗಿ ಅವರು ತಮಿಳಿನಲ್ಲಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

“‘ರೋಜಿ ಸಿನಿಮಾ ಎಲ್ಲರಿಗೂ ಒಳ್ಳೆಯ ಟ್ರೀಟ್. ವಿಷ್ಯುವಲ್ ಟ್ರೀಟ್. ಸ್ಯಾಂಡಿ ಮಾಸ್ಟರ್ ಡ್ಯಾನ್ಸ್ ಸೂಪರ್. ನಾನು ಅವರ ದೊಡ್ಡ ಅಭಿಮಾನಿ” ಎಂದು ತಮಿಳಿನಲ್ಲಿ ಯೋಗಿ ಹೇಳಿದ್ದಾರೆ. ಬಳಿಕ ಕನ್ನಡದಲ್ಲಿ ಮಾತು ಮುಂದುವರಿಸಿದ್ದಾರೆ. ಅಲ್ಲಿ ಇದ್ದವರು ಯೋಗಿ ಅವರಿಗೆ ಕನ್ನಡದಲ್ಲಿ ಮಾತನಾಡಿ ಅಂದರೂ ಸಹ ನಟ ಕನ್ನಡದಲ್ಲಿ ಮಾತನಾಡಲಿಲ್ಲ ಎಂಬುದು ಹಲವರ ವಾದ.

ಸೋಷಿಯಲ್‌ ಮೀಡಿಯಾದಲ್ಲಿ ನಟನ ವಿರುದ್ಧ ಆಕ್ರೋಶ

ʻʻಈ ನಟ ಬೆಳೆಯಲು ಕನ್ನಡ ಸಿನಿಮಾ ಬೇಕು. ಬೆಂಗಳೂರಿನ ವಿವೇಕನಗರದಲ್ಲಿ ಈ ನಟ ತಮಿಳಿನಲ್ಲಿ ಮಾತಾಡಿದ್ದಾರೆ.
ಸ್ಥಳೀಯ ಕನ್ನಡಿಗರು ಕನ್ನಡ ಮಾತಾಡಿ ಎಂದರು ಇಲ್ಲಿ ತಮಿಳರು ಜಾಸ್ತಿ ಇದ್ದಾರೆ ಎಂದು ತಮಿಳು ಮಾತಾಡಿದ್ದಾರಂತೆ.. ಈ ಮೂಲಕ ಇಲ್ಲಿನ ತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿತಿವಿ ಅನ್ನೋ ಸಂದೇಶ ನೀಡಲು ಹೊರಟ್ರಾ ನೀವು.?ʼʼ ಎಂದು ಒಬ್ಬರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: OTT releases:‌ ಈ ವಾರ ಒಟಿಟಿಯಲ್ಲಿ ಈ ಸಿನಿಮಾ, ಶೋಗಳನ್ನು ನೋಡಿ…

ಟೈಟಲ್‌ ವಿವಾದ

ಲೂಸ್ ಮಾದ ಯೋಗಿ ಅಭಿನಯದ ರೋಜಿ ಸಿನಿಮಾದ ಪೋಸ್ಟರ್ ವೈರಲ್ ಆಗಿತ್ತು. ಟೈಟಲ್ ಕೂಡ ಇಂಟರೆಸ್ಟಿಂಗ್ ಆಗಿಯೇ ಇತ್ತು. ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರಕ್ಕೂ ರೋಜಿ ಅಂತಲೇ ಟೈಟಲ್ ಇತ್ತು. ಆದರೆ ರೋಜಿ ಶೀರ್ಷಿಕೆಯ ಈ ಕಿತ್ತಾಟಕ್ಕೆ ಶಿವಣ್ಣ ಮಧ್ಯೆ ಬಂದು ಸರಿ ಮಾಡಿದರು. ಇದರಿಂದ ರೋಜಿ ಟೈಟಲ್ ಯೋಗಿ ಚಿತ್ರಕ್ಕೆ ಉಳಿಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Meghana Raj: ಅಮ್ಮನಿಗೆ ಚಿನ್ನದ ಓಲೆ ಗಿಫ್ಟ್‌ ಕೊಟ್ಟ ಮೇಘನಾ ರಾಜ್‌; ಕಣ್ಣೀರಿಟ್ಟ ಪ್ರಮೀಳಾ

Meghana Raj: ಮೇಘನಾ (Meghana Raj) ಅಮ್ಮ ಪ್ರಮೀಳಾ ಜೋಶಾಯ್ ಅವರಿಗೆ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಅಮ್ಮಂದಿರ ದಿನ ಹಾಗೂ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಚಿನ್ನದ ಓಲೆ ಗಿಫ್ಟ್‌ ಮಾಡಿದ್ದಾರೆ. ಓಲೆ ಕಂಡೊಡನೆ ಭಾವುಕರಾಗಿದ್ದಾರೆ ಪ್ರಮೀಳಾ.

VISTARANEWS.COM


on

Meghana Raj Mother Day Gift Shopping to mother
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ (Actress Meghana Raj) ಹೊಸ ಯುಟ್ಯೂಬ್‌ ಚಾನೆಲ್ ಶುರು ಮಾಡಿರುವುದು ಗೊತ್ತೇ ಇದೆ. ಪುತ್ರ ರಾಯನ್ ರಾಜ್ ಸರ್ಜಾ, ಪ್ರಮೀಳಾ ಜೋಶಾಯ್ ಹಾಗೂ ಸುಂದರ್ ರಾಜ್ ಜತೆ ಹಲವಾರು ವಿಡಿಯೊಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದೀಗ ಮೇಘನಾ (Meghana Raj) ಅಮ್ಮ ಪ್ರಮೀಳಾ ಜೋಶಾಯ್ ಅವರಿಗೆ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಅಮ್ಮಂದಿರ ದಿನ ಹಾಗೂ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಚಿನ್ನದ ಓಲೆ ಗಿಫ್ಟ್‌ ಮಾಡಿದ್ದಾರೆ. ಓಲೆ ಕಂಡೊಡನೆ ಭಾವುಕರಾಗಿದ್ದಾರೆ ಪ್ರಮೀಳಾ.

ಯುಟ್ಯೂಬ್‌ನಲ್ಲಿ ಮೇಘನಾ ರಾಜ್‌ ಅವರು ಈ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ನನ್ನ ತಾಯಿ ಹೆಚ್ಚಾಗಿ ಬಂಗಾರದ ಉಂಗರವನ್ನು ಹಾಕಿಕೊಳ್ಳುತ್ತಾರೆ. ಆದರೆ ಈ ಬಾರಿ ನಾನು ಚಿನ್ನದ ಓಲೆ ಅವರಿಗೆ ಗಿಫ್ಟ್‌ ನೀಡಬೇಕು ಅಂದುಕೊಂಡಿದ್ದೆ. ಮದರ್ಸ್‌ ಡೇಗೆ ಗಿಫ್ಟ್‌ ಕೊಡುವಾಗ ಹೆಣ್ಣು ಮಕ್ಕಳು ಹೇಗೆ ಲೆಕ್ಕಾ ಮಾಡುತ್ತಾರೆ ಅಂದ್ರೆ ಅಮ್ಮನಿಗೆ ಅದು ಕೊಟ್ಟರೆ ನಾವೂ ಬಳಸಬಹುದು ಅನ್ನೋ ಮಲ್ಟಿಪರ್ಪಸ್‌ ಆಲೋಚನೆಯಲ್ಲಿ ಕೊಡಿಸುತ್ತಿರುವೆʼʼಎಂದು ಗಿಫ್ಟ್‌ ಬಾಕ್ಸ್‌ ಅಮ್ಮನ ಕೈಗೆ ಕೊಟ್ಟರು ಮೇಘನಾ. ಬಾಕ್ಸ್‌ ನೋಡಿ ಗೆಸ್‌ ಮಾಡಲು ಶುರು ಮಾಡುವ ಪ್ರಮೀಳಾ ಜೋಷಾಯಿ ಇದು ಲಿಪ್‌ಸ್ಟಿಕ್‌ ಇದು ರಿಂಗ್ ಇದು ಕಾಲಿ ಡಬ್ಬ ಎಂದು ಗೆಸ್‌ ಮಾಡುತ್ತಾರೆ. ಆಮೇಲೆ ಚಿನ್ನದ ಅಂಗಡಿ ಹೆಸರು ಓದಿ ಮೌನಿಯಾಗಿ ಬಿಡುತ್ತಾರೆ.

ಇದನ್ನೂ ಓದಿ: Meghana Raj: ಚಿರು ಕೊನೆ ಚಿತ್ರ ಅಲ್ಲ ಎಂದ ಮೇಘನಾ ರಾಜ್‌; ಧ್ರುವ ಸರ್ಜಾ ಭಾವುಕ ಮಾತು!

ಕಿವಿ ಓಲೆ ನೋಡಿದ ಕೂಡಲೇ ಭಾವುಕರಾದರು ಪ್ರಮೀಳಾ. ಜತೆಗೆ ಮಗಳಿಗೆ ನಾನೇ ಈ ವರ್ಷ ಏನು ಗಿಫ್ಟ್‌ ಕೊಟ್ಟಿಲ್ಲ ಎಂದು ಭಾವುಕರಾದರು. ಕೆಲವು ದಿನಗಳ ಹಿಂದೆ ಮೇಘನಾ ರಾಜ್‌ ವಕೇಶನ್‌ ಮೂಡ್‌ನಲ್ಲಿರುವ ವಿಡಿಯೊಗಳನ್ನು ಪೋಸ್ಟ್‌ ಮಾಡಿದ್ದರು ಮೇಘನಾ ರಾಜ್‌ ಯುಟ್ಯೂಬ್‌ನಲ್ಲಿ ಈಗೀಗ ಸಖತ್‌ ಬ್ಯುಸಿಯಾಗಿದ್ದಾರೆ.

ಮೇಘನಾ ರಾಜ್​ ಬದುಕಲ್ಲಿ 2020 ಕೆಟ್ಟವರ್ಷ. ಅವರು ಐದು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಪತಿ ಚಿರಂಜೀವಿ ಸರ್ಜಾರನ್ನು ಕಳೆದು ಕೊಂಡರು. 2020ರ ಜೂನ್​ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾದ ಬಳಿಕ ಮಗ ರಾಯನ್​ ಹುಟ್ಟಿದ. ಬಳಿಕ ʻತತ್ಸಮ ತದ್ಭವʼ ಸಿನಿಮಾ ಮೂಲಕ ತೆರೆಗೆ ಮತ್ತೆ ಬಂದರು ನಟಿ. ತತ್ಸಮ ತದ್ಭವ ಸಿನಿಮಾಕ್ಕೆ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್‌ ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್‌ ಆತ್ರೇಯ ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾಕ್ಕೆ ವಾಸುಕಿ ವೈಭವ್‌ ಅವರ ಸಂಗೀತ, ಶ್ರೀನಿವಾಸ್‌ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲನವಿದೆ.

Continue Reading

South Cinema

 L2 Empuraan: ಮೋಹನ್‌ಲಾಲ್ ಬರ್ತ್‌ಡೇ; L2E-ಎಂಪುರಾನ್‌ ಲುಕ್‌ ಔಟ್‌!

 L2 Empuraan: ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು.

VISTARANEWS.COM


on

L2 Empuraan first look poster shared by Prithviraj Sukumaran
Koo

ಬೆಂಗಳೂರು: ಇಂದು ಮಾಲಿವುಡ್‌ ಸ್ಟಾರ್‌ ಮೋಹನ್‌ಲಾಲ್ (Mohanlal as Khureshi Abraam ) ಅವರ 64ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಟ ಪೃಥ್ವಿರಾಜ್ ಸುಕುಮಾರನ್ ʻL2 ಎಂಪುರಾನ್‌ʼ (L2 Empuraan) ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೃಥ್ವಿರಾಜ್ ಅವರ ನಿರ್ದೇಶನದಲ್ಲಿ, ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ 2019ರ ಬ್ಲಾಕ್‌ಬಸ್ಟರ್ ಚಲನಚಿತ್ರ ʻಲೂಸಿಫರ್‌ʼನ ಮುಂದುವರಿದ ಭಾಗವಾಗಿದೆ.

ʻL2 ಎಂಪುರಾನ್‌ʼಗಾಗಿ ಮೋಹನ್‌ಲಾಲ್‌ನ ಜಾಕೆಟ್ ಮತ್ತು ಪ್ಯಾಂಟ್‌ ಧರಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ನಡುವೆ ಖಡಕ್‌ ಆಗಿ ನಡೆದುಕೊಂಡು ಹೋಗುತ್ತಿರುವ ಪೋಸ್ಟರ್‌ ಇದು. ಲೂಸಿಫರ್ ಪೃಥ್ವಿರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಅದಾದ ಬಳಿಕ ʻಬ್ರೋ ಡ್ಯಾಡಿʼ ಸಿನಿಮಾವನ್ನು ಒಟ್ಟಿಗೆ ಮಾಡಿದ್ದರು. ಮತ್ತೆ ಈ ಜೋಡಿ L2E-ಎಂಪುರಾನ್‌ ಮೂಲಕ ಒಂದಾಗಿದೆ.

ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು. ಮೋಹನ್‌ಲಾಲ್ ಅವರಲ್ಲದೆ, ಚಿತ್ರದಲ್ಲಿ ವಿವೇಕ್ ಒಬೆರಾಯ್, ಮಂಜು ವಾರಿಯರ್, ಟೊವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್, ಇಂದ್ರಜಿತ್ ಸುಕುಮಾರನ್, ಸಾನಿಯಾ ಐಯಪ್ಪನ್, ಸಾಯಿ ಕುಮಾರ್, ಜಾನ್ ವಿಜಯ್, ಸಚಿನ್ ಖೇಡೇಕರ್, ಬೈಜು ಸಂತೋಷ್, ಕಲಾಭವನ್ ಶಾಜೋನ್, ಫಾಜಿಲ್, ಸುರೇಶ್ ಚಂದ್ರ ಮೆನನ್ ಮತ್ತು ನೈಲಾ ಉಷಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮೋಹನ್ ಲಾಲ್ ಕೊನೆಯದಾಗಿ ಕಾಣಿಸಿಕೊಂಡದ್ದು ಫ್ಯಾಂಟಸಿ ನಾಟಕ ಮಲೈಕೊಟ್ಟೈ ವಾಲಿಬನ್ (2024), ಇದನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದಾರೆ.

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading

ಕಾಲಿವುಡ್

Actress Nayanthara: ನಯನತಾರಾ ಅವಳಿ ಮಕ್ಕಳ ಭರ್ಜರಿ ಆಟೋ ಸವಾರಿ!

Actress Nayanthara: ಅವಕಾಶ ಸಿಕ್ಕಾಗಲೆಲ್ಲಾ ಮಕ್ಕಳನ್ನು ಆಟೋ ರೈಡ್‌ಗೆ ಕರೆದೊಯ್ಯುತ್ತಲೇ ಇರುತ್ತಾರೆ ನಯನತಾರಾ. ದಂಪತಿ ಇತ್ತೀಚೆಗೆ ಚೆನ್ನೈನ ತಿರುಚೆಂದೂರ್ ಮತ್ತು ಕನ್ಯಾಕುಮಾರಿಗೆ ಪ್ರವಾಸಕ್ಕೆ ತೆರಳಿದ್ದರು. ವಿಘ್ನೇಶ್ ಶಿವನ್ ಪ್ರಸ್ತುತ ʻಲವ್ ಇನ್ಶುರೆನ್ಸ್ ಕಾರ್ಪೊರೇಶನ್‌ʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರದೀಪ್ ರಂಗನಾಥನ್, ಎಸ್.ಜೆ.ಸೂರ್ಯ ಮತ್ತು ಕೃತಿ ಶೆಟ್ಟಿ ಮನರಂಜನಾ ಪಾತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

VISTARANEWS.COM


on

Actress Nayanthara twin sons on auto ride
Koo

ಬೆಂಗಳೂರು: ನಯನತಾರಾ (Actress Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಳಗ್ ಅವರನ್ನು ಚೆನ್ನೈನಲ್ಲಿ ಆಟೋ ಸವಾರಿ ಮಾಡಿಸಿದ್ದಾರೆ. ಮೇ 20ರಂದು ‘ನಯನತಾರಾ’ ವೀಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಮಕ್ಕಳನ್ನು ಆಟೋ ರೈಡ್‌ಗೆ ಕರೆದೊಯ್ಯುತ್ತಲೇ ಇರುತ್ತಾರೆ. ದಂಪತಿ ಇತ್ತೀಚೆಗೆ ಚೆನ್ನೈನ ತಿರುಚೆಂದೂರ್ ಮತ್ತು ಕನ್ಯಾಕುಮಾರಿಗೆ ಪ್ರವಾಸಕ್ಕೆ ತೆರಳಿದ್ದರು.

ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ನಯನತಾರಾ ಈ ಅವಳಿ ಮಕ್ಕಳ ಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದರು. ಈವೆಂಟ್‌ನಲ್ಲಿ ʻʻನನ್ನ ಮೊದಲ ಮಗ ಉಯಿರ್ ರುದ್ರೋನಿಲ್ ಎನ್ ಶಿವನ್ ಮತ್ತು ನನ್ನ ಎರಡನೇ ಮಗ ಉಳಗ್ ದೈವಿಗ್ ಎನ್ ಶಿವನ್ʼʼ ಎಂದು ಹೇಳಿಕೊಂಡಿದ್ದರು. ನಯನತಾರಾ ಮಕ್ಕಳ ಆರೈಕೆಗಾಗಿ ನಟನೆಯಿಂದ ದೂರ ಸರಿಯಲಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡಿದ್ದವು. ನಟನೆ ಹಾಗೂ ಮಕ್ಕಳ ಜವಾಬ್ದಾರಿ ಎರಡನ್ನು ನಿಭಾಯಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯಲು ಕೆಲ ಕಾಲ ನಟಿ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಕೇಳಿ ಹರಿದಾಡಿತ್ತು. ಆದರೆ ನಟಿ ʻಜವಾನ್‌ʼ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆದರು.

ಇದನ್ನೂ ಓದಿ: Actress Nayanthara: ನಿವಿನ್ ಪೌಲ್‌-ನಯನತಾರಾ ಹೊಸ ಸಿನಿಮಾ ಅನೌನ್ಸ್‌!

ಇತ್ತೀಚೆಗೆ ಥಿಯೇಟರ್‌ಗಳಲ್ಲಿ ತೆರೆಕಂಡ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಅಭಿನಯದ ʼಅನ್ನಪೂರ್ಣಿʼ (Annapoorani) ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾವನ್ನು ಡಿಲೀಟ್ ಮಾಡಿತ್ತು. ಇನ್‌ಸ್ಟಾ ಮೂಲಕ ನಟಿ ಕ್ಷಮೆ ಕೂಡ ಕೇಳಿದ್ದರು.

ಏಪ್ರಿಲ್ 14ರಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ನಯನತಾರಾ. ಸಂದೀಪ್ ಕುಮಾರ್ ಮತ್ತು ಜಾರ್ಜ್ ಫಿಲಿಪ್ ಜೋಡಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ನಯನತಾರಾ ಮತ್ತು ನಿವಿನ್ ಪೌಲಿ ಅವರು ಚಿತ್ರದಲ್ಲಿ ನಟಿಸಿರುವುದಲ್ಲದೇ ತಮ್ಮ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಈ ಸಿನಿಮಾ ಮೊದಲು ನಯನತಾರಾ ಮತ್ತು ನಿವಿನ್ ಪೌಲ್‌ 2019 ರಲ್ಲಿ ‘ಲವ್ ಆ್ಯಕ್ಷನ್ ಡ್ರಾಮಾ’ ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾಗೆ ಧ್ಯಾನ್ ಶ್ರೀನಿವಾಸನ್ ನಿರ್ದೇಶನವಿತ್ತು. ಇದೀಗ ಮತ್ತೆ ತೆರೆ ಮೇಲೆ ಮಿಂಚಲು ಜೋಡಿ ರೆಡಿಯಾಗಿದೆ.

ವಿಘ್ನೇಶ್ ಶಿವನ್ ಪ್ರಸ್ತುತ ʻಲವ್ ಇನ್ಶುರೆನ್ಸ್ ಕಾರ್ಪೊರೇಶನ್‌ʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರದೀಪ್ ರಂಗನಾಥನ್, ಎಸ್.ಜೆ.ಸೂರ್ಯ ಮತ್ತು ಕೃತಿ ಶೆಟ್ಟಿ ಮನರಂಜನಾ ಪಾತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

Actor Upendra: ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

VISTARANEWS.COM


on

Actor Upendra Ajaneesh Visited Hangary To Record Music
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ ಚಿತ್ರೀಕರಣ ಮುಗಿದು ಇದೀಗ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷವಷ್ಟೇ ‘UI’ ಸಿನಿಮಾವನ್ನು ಅನೌನ್ಸ್ ಮಾಡುವುದಾಗಿ ಘೋಷಿಸಿದ್ದರು. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್‌ ಸಿನಿಮಾದಾಗಿದೆ. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಇದೀಗ ನಿರ್ದೇಶಕ ಉಪೇಂದ್ರ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಯೂರೋಪಿಯಾ ದೇಶವಾದ ಹಂಗೆರಿಗೆ ಹೋಗಿದ್ದಾರೆ.ಅಜನೀಶ್ ಲೋಕನಾಥ್ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಲು ಹಂಗೆರಿಯನ್ನು ಆರಿಸಿಕೊಂಡಿದ್ದಾರೆ.

ತಮ್ಮ ಸಿನಿಮಾದ ಹಾಡುಗಳಿಗೆ ಉಪೇಂದ್ರ ಅವರೇ ಸಾಹಿತ್ಯವನ್ನು ಬರೆಯುತ್ತಾರೆ. ಹಾಗಾಗಿ ಸಂಗೀತ ನಿರ್ದೇಶಕರ ಜೊತೆಗೆ ಉಪ್ಪಿ ಸಹ ಹಂಗೆರಿಗೆ ತೆರಳಿದ್ದಾರೆ. ಅಲ್ಲದೆ ಅಲ್ಲಿ ಸಿನಿಮಾದ ಇನ್ನಿತರೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಸಹ ಮಾಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ‘ಎ’ ಸಂಗೀತದೊಂದಿಗೆ ಆರಂಭವಾಗುವ ವಿಡಿಯೊನಲ್ಲಿ ಉಪ್ಪಿ ಹಾಗೂ ಅಜನೀಶ್ ಲೋಕನಾಥ್ ಹಂಗೆರಿಯ ನಗರವೊಂದರಲ್ಲಿ ನಿಂತು ಚರ್ಚೆ ಮಾಡುತ್ತಿರುವ ದೃಶ್ಯಗಳಿವೆ.

ಇದನ್ನೂ ಓದಿ: Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್‌ ಹಾಕಿ, ಮೈಕ್‌ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.

ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಎಡಿಟಿಂಗ್ ಹಂತದಲ್ಲಿದ್ದು, ಮುಂದಿನ ತಿಂಗಳಿಂದ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ.ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.

Continue Reading
Advertisement
Drown in pond
ಕರ್ನಾಟಕ2 mins ago

Drowns in Farm Pond: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Ebrahim Raisi
ವಿದೇಶ2 mins ago

Ebrahim Raisi: ಹೆಲಿಕಾಪ್ಟರ್‌ ಪತನದಲ್ಲಿ ಇರಾನ್‌ ಅಧ್ಯಕ್ಷ ದುರಂತ ಸಾವು; ಇಸ್ರೇಲ್ ಫಸ್ಟ್‌ ರಿಯಾಕ್ಷನ್‌ ಏನು?

2nd Puc Exam
ಬೆಂಗಳೂರು2 mins ago

2nd PUC Exam : ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟ; ನೋಂದಣಿಗೂ ಡೇಟ್‌ ಫಿಕ್ಸ್‌

RCB vs RR
ಕ್ರೀಡೆ15 mins ago

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

India Skills National Competition 2024 Grand Finale 58 Winners to Represent India at World Skills
ದೇಶ18 mins ago

India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

Cm Siddaramaiah hits out at BJP for Gaurantee Scheme
ರಾಜಕೀಯ20 mins ago

CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

Meghana Raj Mother Day Gift Shopping to mother
ಸ್ಯಾಂಡಲ್ ವುಡ್21 mins ago

Meghana Raj: ಅಮ್ಮನಿಗೆ ಚಿನ್ನದ ಓಲೆ ಗಿಫ್ಟ್‌ ಕೊಟ್ಟ ಮೇಘನಾ ರಾಜ್‌; ಕಣ್ಣೀರಿಟ್ಟ ಪ್ರಮೀಳಾ

Prashant Kishor
ದೇಶ30 mins ago

Prashant Kishor: ಮೋದಿ ಮೇಲೆ ಜನರಿಗೆ ಎಳ್ಳಷ್ಟೂ ಸಿಟ್ಟಿಲ್ಲ ಎಂದ ಪ್ರಶಾಂತ್‌ ಕಿಶೋರ್;‌ ಕೊಟ್ಟ ಕಾರಣ ಹೀಗಿದೆ

Ujjivan Small Finance Bank
ವಾಣಿಜ್ಯ30 mins ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಲಾಭಾಂಶ ಹೆಚ್ಚಳ

Kempegowda International Airport parking
ಬೆಂಗಳೂರು46 mins ago

Kempegowda International Airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೂ ಹಣ ಕೊಡಬೇಕು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌