ಕಾಲಿವುಡ್
ಯೂಟ್ಯೂಬ್ನಲ್ಲಿ ಟ್ರೆಂಡ್ ಆದ ಪೊನ್ನಿಯನ್ ಸೆಲ್ವನ್ ಟೀಸರ್, ನಟಿ ಐಶ್ವರ್ಯಾ ರೈ ಲುಕ್‌ಗೆ ಜನ ಫಿದಾ
ಐತಿಹಾಸಿಕ ಕಥಾಹಂದರ ಹೊಂದಿರುವ ಪೊನ್ನಿಯನ್ ಸೆಲ್ವನ್ ಭಾಗ 1 ರ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು, ಟೀಸರ್ ನೋಡಿದ ಅಭಿಮಾನಿಗಳು ಐಶ್ವರ್ಯಾ ಲುಕ್‌ಗೆ ಫಿದಾ ಆಗಿದ್ದಾರೆ.
ಚೆನ್ನೈ : ಮಣಿರತ್ನಂ ನಿರ್ದೇಶನದ ಐತಿಹಾಸಿಕ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ 1 ರ ಬಗ್ಗೆ ಚಿತ್ರತಂಡ ದಿನಕ್ಕೊಂದು ಹೊಸ ಹೊಸ ಆಪ್ಡೇಟ್ಗಳನ್ನು ನೀಡುತ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗಿನಿಂದಲೇ ಪ್ರಚಾರವನ್ನು ಆರಂಭಿಸಿದೆ. ಸದ್ಯಕ್ಕೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಸುಮಾರು ಮೂರು ವರ್ಷಗಳ ಕಾಲ ನಡೆದ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದ್ದು, ಸಿನಿಮಾ ಪ್ರೇಕ್ಷಕರ ಎದುರು ಬರಲು ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಚಿತ್ರತಂಡ ಕೂಡ ಪ್ರತಿದಿನ ಒಬ್ಬೊಬ್ಬರ ಪಾತ್ರದ ಪರಿಚಯ ಮಾಡಿಸಿರುವ ಚಿತ್ರತಂಡ ಈಗ ಅದ್ಧೂರಿಯಾಗಿ ಸಿನಿಮಾ ಟೀಸರ್ ರಿಲೀಸ್ ಮಾಡಿದ್ದು, ಪ್ರತಿಯೊಂದು ಪಾತ್ರವನ್ನು ಬಹಳ ಅದ್ಬುತವಾಗಿ ಪರದೆ ಮೇಲೆ ತೋರಿಸಿದ್ದಾರೆ.
ಇದನ್ನು ಓದಿ| ತ್ರಿಷಾ ಈಗ ರಾಜಕುಮಾರಿ ಕುಂದವೈ: ಪೊನ್ನಿಯನ್ ಸೆಲ್ವಂ ಚಿತ್ರದಲ್ಲಿ ಫುಲ್ ಮಿಂಚಿಂಗ್
ಪೊನ್ನಿಯನ್ ಸೆಲ್ವನ್ ಭಾಗ 1ರಲ್ಲಿ ಸೌತ್ ಸ್ಟಾರ್‌ಗಳು ಹಾಗೂ ಬಾಲಿವುಡ್ನ ದೊಡ್ಡ ತಾರಾಬಳಗವೇ ಇದೆ. ಶುಕ್ರವಾರ (ಜು.8) ಸಂಜೆ 6 ಗಂಟೆಗೆ ಚೆನ್ನೈನಲ್ಲಿ ಅದ್ಧೂರಿಯಾಗಿ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಒಂದು ನಿಮಿಷ ಮತ್ತು 20 ಸೆಕೆಂಡುಗಳ ಟೀಸರ್ನಲ್ಲಿ ಎಲ್ಲಾ ತಾರೆಯರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಐಶ್ವರ್ಯಾ ಮತ್ತು ತ್ರಿಷಾ ರಾಣಿಯರ ಲುಕ್ನಲ್ಲಿ ಮಿಂಚಿದ್ದು, ಟೀಸರ್ನ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಈ ಸಿನಿಮಾದ ಟೀಸರ್ ಅನ್ನು ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಬಿಡುಗಡೆ ಮಾಡಿದ್ದರೆ, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬ್ನಲ್ಲಿ ರಿಲೀಸ್ ಆಗಿ ಇಲ್ಲಿಯವೆರಗೂ 6,464,081 ಮಂದಿ ವೀಕ್ಷಣೆ ಮಾಡಿದ್ದಾರೆ.
ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ. ಇನ್ನು ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ. ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 30ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನು ಓದಿ| ಪಳುವೂರಿನ ರಾಣಿ ನಂದಿನಿಯಾದ ನಟಿ ಐಶ್ವರ್ಯಾ ರೈ ಬಚ್ಚನ್, ಮಹಾರಾಣಿ ಲುಕ್‌ಗೆ ಅಭಿಮಾನಿಗಳು ಫಿದಾ
South Cinema
Keerthy Suresh: ಹೊಂಬಾಳೆ ಫಿಲ್ಮ್ಸ್ ಮೊದಲ ತಮಿಳು ಚಿತ್ರದ ಶೂಟಿಂಗ್ ಮುಕ್ತಾಯ!
Keerthy Suresh: ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಮೊದಲ ತಮಿಳು ಚಿತ್ರ ‘ರಘುತಾತʼ ಚಿತ್ರೀಕರಣ ಪೂರ್ಣಗೊಂಡಿದೆ. ಕೀರ್ತಿ ಸುರೇಶ್ (Keerthy Suresh) ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆಯ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಶ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಈ ಸಿನಿಮಾಗಿದೆ. ‘ರಘುತಾತʼ’ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಹೇಳಿಕೊಂಡಿದೆ.
ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದನ್ನೂ ಓದಿ: Keerthy Suresh: ಮಲ್ಟಿ ಕಲರ್ ಉಡುಗೆಯಲ್ಲಿ ಕೀರ್ತಿ ಸುರೇಶ್ ಹೊಸ ಫೋಟೊಶೂಟ್!
ಹೊಂಬಾಳೆ ಫಿಲ್ಮ್ಸ್ ಟ್ವೀಟ್
🎬 That’s a wrap, folks! 🎉🎥 Raghuthatha, where the revolution finds its home, has completed its fiery shoot! Stay tuned for a revolution that’ll make your heart race! #Raghuthatha@KeerthyOfficial @hombalefilms #VijayKiragandur @sumank #MSBhaskar @yaminiyag @RSeanRoldan… pic.twitter.com/rk4oSw7FyO
— Hombale Films (@hombalefilms) May 26, 2023
ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದೆ ಹೊಂಬಾಳೆ
ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಇದೀಗ ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ತೆಲುಗಿನಲ್ಲಿ ‘ಸಲಾರ್’, ಮಲಯಾಳಂನಲ್ಲಿ ‘ಟೈಸನ್’ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಕೈಗೆತ್ತಿಕೊಂಡಿದೆ. ಕನ್ನಡದಲ್ಲಿ ‘ಕಾಂತಾರ’- 2, ‘ರಿಚರ್ಡ್ ಆಂಟನಿ’, ‘ಯುವ’, ‘ಧೂಮಂ’, ‘ಬಘೀರ’ ಸಿನಿಮಾಗಳು ಶುರುವಾಗಿದ್ದರೆ ಮತ್ತೊಂದಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಮುಂದೆ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲೂ ಸಿನಿಮಾಗಳು ಮೂಡಿ ಬರಲಿವೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ‘ಧೂಮಂ’ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ‘ಸಲಾರ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ.
South Cinema
Actor Ashok Kumar: 10ನೇ ತರಗತಿಯಲ್ಲೇ ನಟಿ ರಂಜಿತಾ ಮೇಲೆ ಪ್ರೀತಿ; ನಿತ್ಯಾನಂದ ಮನಸೋತಿದ್ದು ಯಾತಕ್ಕೆ?
Actor Ashok Kumar: ಈ ಹಿಂದೆ ನಿತ್ಯಾನಂದ ಹಾಗೂ ರಂಜಿತಾ ಸ್ಟೋರಿ ಸುದ್ದಿಯಲ್ಲಿತ್ತು. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಲೇ ರಂಜಿತಾಗೆ ಮನಸೋತಿರುವ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಬೆಂಗಳೂರು: ನಟ ಅಶೋಕ್ ಕುಮಾರ್ (Actor Ashok Kumar) ಸಂದರ್ಶನವೊಂದರಲ್ಲಿ, ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ರಂಜಿತಾ ಹಾಗೂ ನಿತ್ಯಾನಂದ ಲವ್ ಸ್ಟೋರಿ ಸಖತ್ ಚರ್ಚೆಯಾಗುತ್ತಿದೆ. ಈ ಹಿಂದೆ ನಿತ್ಯಾನಂದ ಹಾಗೂ ರಂಜಿತಾ ಸ್ಟೋರಿ ಸುದ್ದಯಲ್ಲಿತ್ತು. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಲೇ ರಂಜಿತಾಗೆ ಮನಸೋತಿರುವ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಅಶೋಕ್ ಕುಮಾರ್ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ನಟ, ವಿಲನ್ ಆಗಿ ಅಭಿನಯಿಸಿದ್ದಾರೆ. ಅಷ್ಟಾಗಿ ಅವಕಾಶ ಸಿಗದ ಕಾರಣದಿಂದ ಚಿತ್ರರಂಗದಿಂದ ದೂರ ಸರಿದ್ದರು. ಆದರೆ ಅಶೋಕ್ ಕುಮಾರ್ ಅವರ ಎರಡನೇ ಪುತ್ರಿ ರಂಜಿತಾ ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ ‘ನಾಡೋಡಿ ತೆಂಡ್ರಲ್’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಸಿನಿಮಾ ನಿತ್ಯಾನಂದನನ್ನು ಹುಚ್ಚನನ್ನಾಗಿ ಮಾಡಿದ್ದಂತೆ.
10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್
ನಿತ್ಯಾನಂದ 10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್ ಆಗಿದ್ದಂತೆ. ನಿತ್ಯಾನಂದ 10ನೇ ತರಗತಿ ಓದುವಾಗ ‘ನಾಡೋಡಿ ತೆಂಡ್ರಲ್’ (nadodi thendral) ರಿಲೀಸ್ ಆಗಿತ್ತು. ಈ ಸಿನಿಮಾ ನೋಡಿದ್ದಾಗಿನಿಂದ ನಿತ್ಯಾನಂದ ರಂಜಿತಾ ಜಪಾ ಮಾಡಲು ಶುರು ಮಾಡಿದ್ದಲ್ಲದೇ ಬ್ಯಾಗ್‌ನಲ್ಲಿ ರಂಜಿತಾ ಫೋಟೊಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ: Actor Ashok Kumar: ನನ್ನ ಮಕ್ಕಳಿಬ್ಬರೂ ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ; ನಟ ಅಶೋಕ್ ಕುಮಾರ್ ಭಾವುಕ!
ಆಧ್ಯಾತ್ಮದ ಬಗ್ಗೆ ನಂಬಿಕೆನೇ ಇರದ ರಂಜಿತಾಗೆ ಒಲವು ಮೂಡಿತ್ತಂತೆ
ನಿತ್ಯಾನಂದ 6ನೇ ತರಗತಿಯಲ್ಲಿರುವಾಗಲೇ ಸನ್ಯಾಸಿ ಆಗಬೇಕೆಂದು ನಿರ್ಧಾರ ಮಾಡಿದ್ದ. ಇತ್ತ ರಂಜಿತಾ ಮಿಲಿಟಿರಿ ಆಫೀಸರ್ ಪ್ರೀತಿಸಿ ಮದುವೆ ಆಗಿದ್ದರು. ರಂಜಿತಾ ಅಕ್ಕ ಮದುವೆ ಬಳಿಕ ಅಮೆರಿಕಾದಲ್ಲಿ ಇದ್ದರು. ಅಕ್ಕ ನಿತ್ಯಾನಂದನ ಭಕ್ತೆಯಾಗಿದ್ದರು. ಅಕ್ಕನೊಂದಿಗೆ ನಿತ್ಯಾನಂದನ ಆಶ್ರಮಕ್ಕೆ ಹೋಗಿದ್ದರು. ಅಲ್ಲಿವರೆಗೂ ಆಧ್ಯಾತ್ಮದ ಬಗ್ಗೆ ನಂಬಿಕೆನೇ ಇರದ ರಂಜಿತಾಗೆ ಒಲವು ಮೂಡುವುದಕ್ಕೆ ಶುರುವಾಗಿತ್ತು. ರಂಜಿತಾ ಹಾಗೂ ಅವರ ಅಕ್ಕ ನಿರ್ಮಲಾ ಇಬ್ಬರೂ ವಿಚ್ಛೇದನ ಪಡೆದು ನಿತ್ಯಾನಂದನ ಭಕ್ತೆಯಾದರು. ಇದನ್ನು ಸ್ವತಃ ಅಶೋಕ್ ಕುಮಾರ್ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.
ಅಶೋಕ್ ಕುಮಾರ್ ಹೇಳಿದ್ದೇನು?
ʻʻನನ್ನ ಮಕ್ಕಳಿಬ್ಬರು ಇವತ್ತಿಗೂ ನಿತ್ಯಾನಂದ ಸ್ವಾಮಿಜಿ ಅವರ ಬಳಿ ಇದ್ದಾರೆ. ಹುಡುಗಿ ಹೇಗಿದ್ದಾಳೆ ಎಂದು ನೋಡದೇ ನಾನು ಮದುವೆ ಆಗಿದ್ದೆ. ಮದುವೆ ಮಂಟಪದಲ್ಲಿ ಆಕೆಯನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಮದುವೆ ಆಗುವಂತಾಯಿತು. ಇಷ್ಟವಿಲ್ಲದ ಮದುವೆ ಗೊಂದಲದ ನಡುವೆ ಪೊಲೀಸ್ ಕೆಲಸ ಬಿಟ್ಟೆ. ನಂತರ ನನ್ನ ತಪ್ಪಿನ ಅರಿವಾಗಿ ಆಕೆಯನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು. ಅವರನ್ನು ಚೆನ್ನಾಗಿ ಓದಿಸಿದೆ. ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾದಲ್ಲಿ ಇದ್ದಳು. 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜತೆ ಇದ್ದಾಳೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್ ಏನು ಎನ್ನುವುದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ” ಎಂದಿದ್ದರು.
ಮಕ್ಕಳ ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು
“ಮೊದಲ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆ ಅಮೆರಿಕಾದಲ್ಲಿ ಇದ್ದಳು. ಆಗಲೇ ಆಕೆ ಅಲ್ಲಿ ನಿತ್ಯಾನಂದ ಸ್ವಾಮೀಜಿ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋಗುತ್ತಿದ್ದ ರಂಜಿತಾ ಕೂಡ ಆಕೆಯ ಜತೆ ಆಶ್ರಮಕ್ಕೆ ಹೋಗಲು ಆರಂಭಿದಳು. ಮುಂದೆ ಅವರಿಬ್ಬರೂ ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದರು. ಇವತ್ತಿಗೂ ನನ್ನ ಮಕ್ಕಳು ಆಶ್ರಮದಲ್ಲಿಯೇ ಇದ್ದಾರೆ. ಇಂದಿಗೂ ನನ್ನ ಇಬ್ಬರೂ ಮಕ್ಕಳು ನನಗೆ ಕರೆ ಮಾಡುವುದಿಲ್ಲ. ನಮ್ಮ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಇಬ್ಬರು ಮಕ್ಕಳ ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರುʼʼ ಎಂದು ಅಶೋಕ್ ಕುಮಾರ್ ಭಾವುಕರಾಗಿದ್ದರು.
South Cinema
Actor Ashok Kumar: ನನ್ನ ಮಕ್ಕಳಿಬ್ಬರೂ ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ; ನಟ ಅಶೋಕ್ ಕುಮಾರ್ ಭಾವುಕ!
Actor Ashok Kumar: ದಕ್ಷಿಣ ಭಾರತದ ಖ್ಯಾತ ನಟ ಅಶೋಕ್ ಕುಮಾರ್ ಸಂದರ್ಶನವೊಂದರಲ್ಲಿ ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ಭಯನಾಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅಶೋಕ್ ಕುಮಾರ್ ಸಂದರ್ಶನವೊಂದರಲ್ಲಿ, ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಿ ಅವರು ಭಾವುಕರಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಆಪ್ತರೂ ಆಗಿರುವ ಅಶೋಕ್ ಕುಮಾರ್ (Actor Ashok Kumar) ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ನಟ, ವಿಲನ್ ಆಗಿ ಅಭಿನಯಿಸಿದ್ದಾರೆ. ಅಷ್ಟಾಗಿ ಅವಕಾಶ ಸಿಗದ ಕಾರಣದಿಂದ ಚಿತ್ರರಂಗದಿಂದ ದೂರ ಸರಿದ್ದರು.
ಅಶೋಕ್ ಕುಮಾರ್ ಈ ಬಗ್ಗೆ ಮಾತನಾಡಿ ʻʻನನ್ನ ಮಕ್ಕಳಿಬ್ಬರು ಇವತ್ತಿಗೂ ನಿತ್ಯಾನಂದ ಸ್ವಾಮಿಜಿ ಅವರ ಬಳಿ ಇದ್ದಾರೆ. ಹುಡುಗಿ ಹೇಗಿದ್ದಾಳೆ ಎಂದು ನೋಡದೇ ನಾನು ಮದುವೆ ಆಗಿದ್ದೆ. ಮದುವೆ ಮಂಟಪದಲ್ಲಿ ಆಕೆಯನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಮದುವೆ ಆಗುವಂತಾಯಿತು. ಇಷ್ಟವಿಲ್ಲದ ಮದುವೆ ಗೊಂದಲದ ನಡುವೆ ಪೊಲೀಸ್ ಕೆಲಸ ಬಿಟ್ಟೆ. ನಂತರ ನನ್ನ ತಪ್ಪಿನ ಅರಿವಾಗಿ ಆಕೆಯನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು. ಅವರನ್ನು ಚೆನ್ನಾಗಿ ಓದಿಸಿದೆ. ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾದಲ್ಲಿ ಇದ್ದಳು. 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜತೆ ಇದ್ದಾಳೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್ ಏನು ಎನ್ನುವುದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ” ಎಂದರು.
“ಮೊದಲ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆ ಅಮೆರಿಕಾದಲ್ಲಿ ಇದ್ದಳು. ಆಗಲೇ ಆಕೆ ಅಲ್ಲಿ ನಿತ್ಯಾನಂದ ಸ್ವಾಮೀಜಿ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋಗುತ್ತಿದ್ದ ರಂಜಿತಾ ಕೂಡ ಆಕೆಯ ಜತೆ ಆಶ್ರಮಕ್ಕೆ ಹೋಗಲು ಆರಂಭಿದಳು. ಮುಂದೆ ಅವರಿಬ್ಬರೂ ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದರು. ಇವತ್ತಿಗೂ ನನ್ನ ಮಕ್ಕಳು ಆಶ್ರಮದಲ್ಲಿಯೇ ಇದ್ದಾರೆ. ಇಂದಿಗೂ ನನ್ನ ಇಬ್ಬರೂ ಮಕ್ಕಳು ನನಗೆ ಕರೆ ಮಾಡುವುದಿಲ್ಲ. ನಮ್ಮ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಇಬ್ಬರು ಮಕ್ಕಳ ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರುʼʼ ಎಂದು ಅಶೋಕ್ ಕುಮಾರ್ ಭಾವುಕರಾಗಿದ್ದಾರೆ.
ಇದನ್ನೂ ಓದಿ: Swami Nityananda: ನಮ್ಮದು ಗಡಿಯೇ ಇಲ್ಲದ ದೇಶ, ನಾನು ಹಿಂದು ಧರ್ಮದ ಗುರು; ನಿತ್ಯಾನಂದ ಘೋಷಣೆ
ʻʻಒಮ್ಮೆ ನಾನು ಆಶ್ರಮಕ್ಕೆ ಹೋಗಿ ನನ್ನ ಮಕ್ಕಳು ಇಲ್ಲಿ ಯಾಕೆ ಇದ್ದಾರೆ? ಅವರನ್ನು ಕಳುಹಿಸಿ ಕೊಡು ಎಂದು ಕೇಳಿದ್ದೆ. ಅದಕ್ಕೆ ಆತ, ಅವರು ಬಂದರೆ ಕರೆದುಕೊಂಡು ಹೋಗು ಎಂದ. ಆದರೆ ನನ್ನ ಮಕ್ಕಳಿಬ್ಬರು ನನ್ನ ಜತೆ ಬರಲೇ ಇಲ್ಲ. ಇವತ್ತಿಗೂ ಆತನೊಟ್ಟಿಗೇ ಇದ್ದಾರೆʼʼ ಎಂದರು.
‘ಬುದ್ಧಿಮಂತಲು’, ‘ಅಂದಾಲ ರಾಮುಡು’ ಹಾಗೂ ‘ಗುರುವಿನ ಮಿಂಚಿನ ಶಿಷ್ಯಲು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.
South Cinema
Actor Karthi : ಜನುಮದಿನದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ತಮಿಳು ನಟ ಕಾರ್ತಿ!
Actor Karthi: ಜನುಮದಿನದಂದು ಫ್ಯಾನ್ಸ್‌ಗೆ ತಮಿಳು ನಟ ಕಾರ್ತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಾರ್ತಿ ಡಬ್ಬಲ್ ಶೇಡ್‌ನಲ್ಲಿ ನಟಿಸಿದ್ದಾರೆ.
ಬೆಂಗಳೂರು: ಮೇ 25 ತಮಿಳು ನಟ ಕಾರ್ತಿ (Actor Karthi) ಅವರ ಜನುಮದಿನ. ನಟ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಿನದಂದು ʻಜಪಾನ್ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ಒಬ್ಬರಿಗೆ ಹೀರೊ, ಮತ್ತೊಬ್ಬರಿಗೆ ಕಾಮಿಡಿಯನ್ ಆಗಿ, ಇನ್ನೊಬ್ಬರಿಗೆ ವಿಲನ್ ಆಗಿ ಕಾಣಿಸಿಕೊಳ್ಳುವ ಕಾರ್ತಿ ಡಬ್ಬಲ್ ಶೇಡ್‌ನಲ್ಲಿ ನಟಿಸಿದ್ದಾರೆ.
ಸ್ಟೈಲಿಶ್ ಲುಕ್, ಗುಂಗರು ಕೂದಲಿನಲ್ಲಿ ಎಂಟ್ರಿ ಕೊಟ್ಟಿರುವ ಕಾರ್ತಿ ಪಾತ್ರದ ಹೆಸರು ಜಪಾನ್. ಆದರೆ ಮೇಡ್ ಇನ್ ಇಂಡಿಯಾ. ಕನ್ನಡದಲ್ಲಿಯೂ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್‌ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕರಾದ ಎಸ್ ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್ ಪ್ರಭು ʻಜಪಾನ್ʼ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ.
ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಾರ್ತಿ ನಟನೆಯ 25ನೇ ಸಿನಿಮಾವಾಗಿರುವ ಜಪಾನ್, ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Ayalaan Movie: ತಮಿಳು ನಟ ಶಿವಕಾರ್ತಿಕೇಯನ್ ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್
Wishing the dynamic & versatile actor our hero @Karthi_Offl, a very Happy Birthday 💐
— JapanTheMovie (@JapanTheMovie) May 24, 2023
On this special day, Excited to announce that our #Japan movie is all set to light up this Diwali 💥#JapanFromDiwali #HappyBirthdayKarthi pic.twitter.com/ADVY1xWGwY
” ಜಪಾನ್” ಪ್ರೀತಿಯ ಸ್ನೇಹಿತ ಕಾರ್ತಿ ೨೫ನೆ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು . ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ #HBDKarthi #JapanTheMovie #Karthi25 @Karthi_Offl
— Rishab Shetty (@shetty_rishab) May 25, 2023
“Japan” Dear friend Karthi’s 25th film teaser is here. A small glimpse of a beautiful world. Happy birthday Karthi… pic.twitter.com/gqFEsRYw3u
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ಹಿಡಿದಿದ್ದಾರೆ. ಶೂಟಿಂಗ್ ಹಂತದಲ್ಲಿರುವ ಜಪಾನ್ ಸಿನಿಮಾವನ್ನು ದೀಪಾವಳಿಗೆ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.
-
ಕರ್ನಾಟಕ15 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ18 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ15 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ14 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ9 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ16 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್18 hours ago
IPL 2023: ಶತಕ ಬಾರಿಸಿ ಸೆಹವಾಗ್ ದಾಖಲೆ ಮುರಿದ ಶುಭಮನ್ ಗಿಲ್
-
ಕರ್ನಾಟಕ13 hours ago
Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ