Puneeth Rajkumar: ಅಪ್ಪು ದರ್ಶನಕ್ಕೆ ತಿಂಡಿ ತಿನ್ನದೆ ಬಂದ ಕಾಫಿ ನಾಡು ಚಂದು; ಪೂಜೆ ಸಲ್ಲಿಸಿದ ಕುಟುಂಬಸ್ಥರು! Vistara News

South Cinema

Puneeth Rajkumar: ಅಪ್ಪು ದರ್ಶನಕ್ಕೆ ತಿಂಡಿ ತಿನ್ನದೆ ಬಂದ ಕಾಫಿ ನಾಡು ಚಂದು; ಪೂಜೆ ಸಲ್ಲಿಸಿದ ಕುಟುಂಬಸ್ಥರು!

Puneeth Rajkumar: ಅಪ್ಪು(Appu) ಸ್ಮಾರಕಕ್ಕೆ ಅಭಿಮಾನಿಗಳು ಕೂಡ ಭೇಟಿ ನೀಡಿದ್ದಾರೆ. ಕಾಫಿ ನಾಡು ಚಂದು ಕೂಡ ಅಪ್ಪು – ಶಿವಣ್ಣ ಒಟ್ಟಿಗೆ ಇರುವ ಭಾವ ಚಿತ್ರವನ್ನು ಹಿಡಿದುಕೊಂಡು ಬಂದಿದ್ದಾರೆ.

VISTARANEWS.COM


on

Puneeth Rajkumar death anniversary Pooja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸರಳ ವ್ಯಕ್ತಿತ್ವದಿಂದಲೇ ರಾಜ್ಯದ ಮನೆಮಾತಾಗಿದ್ದ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರು ಅಗಲಿ ಭಾನುವಾರಕ್ಕೆ (ಅಕ್ಟೋಬರ್‌ 29) ಎರಡು ವರ್ಷ ತುಂಬಿದೆ. ಅವರ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ತಿಥಿ ಕಾರ್ಯಕ್ಕೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು(Appu) ಸ್ಮಾರಕಕ್ಕೆ ಅಭಿಮಾನಿಗಳು ಕೂಡ ಭೇಟಿ ನೀಡಿದ್ದಾರೆ. ಕಾಫಿ ನಾಡು ಚಂದು ಕೂಡ ಅಪ್ಪು – ಶಿವಣ್ಣ ಒಟ್ಟಿಗೆ ಇರುವ ಭಾವ ಚಿತ್ರವನ್ನು ಹಿಡಿದುಕೊಂಡು ಬಂದಿದ್ದಾರೆ.

ಪುನೀತ್‌ ದರ್ಶನಕ್ಕೆ ಕಾಲಿ ಹೊಟ್ಟೆಯಲ್ಲಿ ಬಂದ ಚಂದು

ಈ ಬಗ್ಗೆ ಕಾಫಿ ನಾಡು ಚಂದು ಮಾತನಾಡಿ ʻʻದೇವಸ್ಥಾನದಲ್ಲಿ ನನ್ನ ದೇವರು (ಅಪ್ಪು) ಆಶೀರ್ವಾದ ತೆಗೆದುಕೊಂಡರೆ ನಮಗೆ ಒಳ್ಳೆದಾಗತ್ತೆ. ನಾನು ರಾತ್ರಿಯೇ ಮನೆಯಿಂದ ಹೊರಟೆ. ಇಲ್ಲಿಗೆ ಬರಬೇಕಾದರೆ 9 ಗಂಟೆ ಆಯ್ತು. ಆದರೂ ಕೂಡ ನಾನು ಒಂದು ಗ್ಲಾಸ್‌ ನೀರು ಅಷ್ಟೇ ಕುಡಿದು ಬಂದಿದ್ದೀನಿʼʼ ಎಂದರು.

ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ತಿಥಿ ಕಾರ್ಯಕ್ಕೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು(Appu) ಸ್ಮಾರಕಕ್ಕೆ ಅಭಿಮಾನಿಗಳು ಕೂಡ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Puneeth Rajkumar: ಅಪ್ಪು ಅಗಲಿ ಇಂದಿಗೆ 2 ವರ್ಷ; ರಾಜ್ಯಾದ್ಯಂತ ಪುನೀತ್‌ ಪುಣ್ಯಸ್ಮರಣೆ

ಪೂಜೆ ಸಲ್ಲಿಸಲಿರುವ ಅಶ್ವಿನಿ

ಅಶ್ವಿನಿ ಪುನೀತ್ ರಾಜ್​​ಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಲಿದ್ದಾರೆ. ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿ ಹಲವು ಕುಟಂಬಸ್ಥರು ಪುಣ್ಯಸ್ಮರಣೆಯಲ್ಲಿ ಭಾಗಿಯಾದರು. ನೆನಪಿರಲಿ ಪ್ರೇಮ್‌ ಕುಟುಂಬಸ್ಥರು ಸೇರಿ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಕೂಡ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಲಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಶಿಬಿರ ಆಯೋಜನೆ ಸೇರಿ ಹಲವು ಸೇವಾ ಕಾರ್ಯಕ್ರಮಗಳ ಮೂಲಕ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಗಲ್ಲಿ ಗಲ್ಲಿಗಳಲ್ಲಿ ಅಪ್ಪು ಪುಣ್ಯಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪುನೀತ್ ರಾಜ್‌ಕುಮಾರ್‌ ಅವರು 2021ರ ಅಕ್ಟೋಬರ್‌ 29ರಂದು ಹೃದಯಾಘಾತದಿಂದ ನಿಧನರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

South Cinema

Prashanth Neel: ʼಸಲಾರ್‌ʼ ಬಿಗ್‌ ಅಪ್‌ಡೇಟ್‌; ಕಥೆಯ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್‌ ನೀಲ್‌!

Prashanth Neel: ಬಹು ನಿರೀಕ್ಷಿತ ʼಸಲಾರ್‌ʼ ಚಿತ್ರದ ಕಥೆಯ ಗುಟ್ಟನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ಬಿಚ್ಚಿಟ್ಟಿದ್ದಾರೆ.

VISTARANEWS.COM


on

neel
Koo

ಮುಂಬೈ: ಕೆಜಿಎಫ್‌ (KGF) ಸರಣಿ ಚಿತ್ರಗಳ ಮೂಲಕ ಇಡೀ ದೇಶದ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದವರು ಪ್ರಶಾಂತ್‌ ನೀಲ್‌ (Prashanth Neel). ಇದೀಗ ಅವರು ‘ಸಲಾರ್‌’ (Salaar) ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಮುಂದಾಗುತ್ತಿದ್ದಾರೆ. ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ (Prabhas) ಅಭಿನಯದ ‘ಸಲಾರ್‌’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಸಲಾರ್: ಭಾಗ 1’ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದ್ದು, ಈ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಚಿತ್ರದ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ʼʼಸಲಾರ್‌ʼ ಚಿತ್ರದ ಕಥೆ ದೀರ್ಘವಾಗಿದೆ. ಈ ಕಥೆಯನ್ನು ಹೇಳಲು ಎರಡು ಭಾಗ ಬೇಕೇ ಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಆದರೆ ʼಕೆಜಿಎಫ್‌ʼ ಆರಂಭಿಸುವಾಗ ಎರಡು ಪಾರ್ಟ್‌ಗಳಲ್ಲಿ ತೆರೆಗೆ ತರುವ ಉದ್ದೇಶವಿರಲಿಲ್ಲ. ಆದರೆ ʼಸಲಾರ್‌ʼ ವಿಚಾರದಲ್ಲಿ ಎರಡು ಭಾಗ ಎನ್ನುವುದು ಪೂರ್ವ ನಿರ್ಧರಿತವಾಗಿತ್ತುʼʼ ಎಂದು ಅವರು ಹೇಳಿದ್ದಾರೆ.

ʼಕೆಜಿಎಫ್ʼ-ʼಸಲಾರ್‌ʼ ಬೇರೆ ಬೇರೆ

“ಸಲಾರ್‌ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್ʼ ಹೇಳುವ ಬೇರೆಯದೇ ಕಥೆಗಾಗಿ ಜನರು ಅದನ್ನು ನೋಡುತ್ತಾರೆ ಎಂದು ಭಾವಿಸುತ್ತೇನೆ. ʼಸಲಾರ್‌ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆ. ಭಾರತದಲ್ಲಿ ಕಥೆ ಹೇಳಲಿರುವ ಅತ್ಯುತ್ತಮ ಮಾಧ್ಯಮ ಚಲನಚಿತ್ರವಾಗಿರುವುದರಿಂದ ಅದನ್ನು ʼಸಲಾರ್‌ʼ ಮೂಲಕ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲಿದ್ದೇನೆ ಎನ್ನುವ ನಿರೀಕ್ಷೆ ಇದೆʼʼ ಎಂದು ಪ್ರಶಾಂತ್‌ ತಿಳಿಸಿದ್ದಾರೆ.

6 ಗಂಟೆಗಳ ಸಿನಿಮಾ!

ʼʼಸಲಾರ್‌ʼನ ಕಥೆಯನ್ನು ಸುಮಾರು 6 ಗಂಟೆಗಳ ಚಲನಚಿತ್ರವನ್ನಾಗಿಸಬಹುದು. ಅದಕ್ಕಾಗಿ ಎರಡು ಪಾರ್ಟ್‌ ಮಾಡಿದ್ದೇನೆ ಎಂದು ಹೇಳಿರುವ ಪ್ರಶಾಂತ್‌ ನೀಲ್‌ ಇನ್ನೊಂದು ಅಚ್ಚರಿಯ ಸಂಗತಿಯನ್ನೂ ರಿವೀಲ್‌ ಮಾಡಿದ್ದಾರೆ. ʼಕೆಜಿಎಫ್‌ʼಗಿಂತ ಮೊದಲೇ ʼಸಲಾರ್‌ʼ ಕಥೆ ಬರೆದಿದ್ದರಂತೆ. ʼʼಸಲಾರ್‌ʼ ಮೊದಲ ಪಾರ್ಟ್‌ನಲ್ಲಿ ಅರ್ಧ ಕಥೆ ಹೇಳುತ್ತೇವೆ. ಉಳಿದರ್ಧ ಕಥೆ ಎರಡನೇ ಪಾರ್ಟ್‌ನಲ್ಲಿ ಬರಲಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Salaar Movie: ಯೂಟ್ಯೂಬ್‌ನಿಂದ ʻಉಗ್ರಂʼ ಮಾಯ; ರಿಮೇಕ್‌ ಆಯ್ತಾ ʻಸಲಾರ್‌ʼ?

ಕಥೆ ಏನು?

ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್‌ʼನ ಪ್ರಮುಖ ಭಾವನೆ. ಡಿಸೆಂಬರ್‌ 1ರಂದು ಟ್ರೈಲರ್‌ ಬಿಡುಗಡೆಯಾಗಲಿದ್ದು, ಇದರಲ್ಲಿ ʼಸಲಾರ್‌ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಹೇಳಿ ಪ್ರಶಾಂತ್‌ ಕುತೂಹಲ ಹುಟ್ಟು ಹಾಕಿದ್ದಾರೆ.

ʼಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಮೊದಲ ಬಾರಿ ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಒಂದಾಗುತ್ತಿದ್ದು, ಸಿನಿಮಾದ ಇತರ ಮುಖ್ಯ ಪಾತ್ರಗಳಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಕಾಣಿಸಿಕೊಂಡಿದ್ದಾರೆ. ಸದ್ಯ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

South Cinema

Aadujeevitham Movie: ವಲಸೆ ಕಥೆ ಹೊತ್ತ ಆಡುಜೀವಿತಂ ರಿಲೀಸ್‌ ಡೇಟ್‌ ನ. 30ಕ್ಕೆ ಅನೌನ್ಸ್‌

Aadujeevitham Movie : ವಲಸೆ ಕಥೆಯನ್ನು ಹೊತ್ತಿರುವ ಆಡುಜೀವಿತಂ ಸಿನಿಮಾ ಭಾರಿ ನಿರೀಕ್ಷೆಯನ್ನು ಹುಟ್ಟಿಸಿದೆ. ನಿರ್ದೇಶಕ ಬ್ಲೆಸ್ಸಿ, ನಟ ಪ್ರಥ್ವಿರಾಜ್‌ ಸುಕುಮಾರನ್‌ ಅವರ ಕಾಂಬಿನೇಷನ್‌ನ ಚಿತ್ರ ಇದು.

VISTARANEWS.COM


on

Aadujeevitham film
Koo

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ (Aadujeevitham Movie) ರಿಲೀಸ್‌ ಡೇಟ್‌ ಅನೌನ್ಸ್‌ ಆಗೋ ಕಾಲ ಸನ್ನಿಹಿತವಾಗಿದೆ. ಎ.ಆರ್‌.ರಹಮಾನ್‌ (AR Rehman) ಸಂಗೀತ ಸಂಯೋಜನೆಯ ಆಡು ಜೀವಿತಂ ಚಿತ್ರದ ಬಿಡುಗಡೆ ದಿನಾಂಕ (Release Date)ವನ್ನು ನವೆಂಬರ್‌ 30ರಂದು ಚಿತ್ರ ತಂಡ ಪ್ರಕಟಿಸಲಿದೆ.

ಆಡು ಜೀವಿತಂ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.

ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ದುಡಿದಿದೆ. ಚಿತ್ರದ ಔಟ್ಪುಟ್ ಗಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಹೀಗೆ ಅತ್ಯಂತ ಜತನದಿಂದ ತಯಾರಿಸಿರುವ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುತೂಹಲ ಎಲ್ಲ ಕಡೆಯಲ್ಲಿದೆ. ಅದನ್ನು ತಣಿಸುವುದಕ್ಕಾಗಿ ಚಿತ್ರ ತಂಡ ನವೆಂಬರ್‌ 30ರಂದು ರಿಲೀಸ್‌ ಡೇಟ್‌ ಪ್ರಕಟಿಸಲಿದೆ.

ಇದನ್ನೂ ಓದಿ : BBK SEASON 10: ಕನ್ನಡ ಪತ್ರವನ್ನು ಓದಿದ ಮೈಕಲ್‌; ದಂಗಾದ ಸ್ಪರ್ಧಿಗಳು

ಏನಿದೆ ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

Continue Reading

South Cinema

Rishab Shetty: ವಿಶೇಷ ಜ್ಯೂರಿ ಅವಾರ್ಡ್ ತಮ್ಮ ನೆಚ್ಚಿನ ನಟನಿಗೆ ಅರ್ಪಿಸಿದ ರಿಷಬ್‌ ಶೆಟ್ಟಿ, ಯಾರವರು?

Rishab Shetty: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ʼಸಿಲ್ವರ್ ಪಿಕಾಕ್​ ಅವಾರ್ಡ್’​​ ಪಡೆದ ರಿಷಬ್‌ ಶೆಟ್ಟಿ ಈ ಪ್ರಶಸ್ತಿಯನ್ನು ಹಿರಿಯ ನಟ ಶಂಕರ್‌ ನಾಗ್‌ ಅವರಿಗೆ ಅರ್ಪಿಸಿದ್ದಾರೆ.

VISTARANEWS.COM


on

rishab letter
Koo

ಬೆಂಗಳೂರು: ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರ ‘ಕಾಂತಾರ’ (Kantara). ರಿಷಬ್‌ ಶೆಟ್ಟಿ (Rishab Shetty) ಈ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿದ್ದರು. ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ ಬರೋಬ್ಬರಿ 400 ಕೋಟಿ ರೂ. ಗಳಿಸಿತ್ತು. ಈ ಎಲ್ಲ ಹೆಗ್ಗಳಿಕೆ ನಡುವೆ ‘ಕಾಂತಾರ’ ಮುಡಿಗೆ ಇನ್ನೊಂದು ಗರಿ ಸಿಕ್ಕಿದೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ʼಕಾಂತಾರʼ ಸಿನಿಮಾ ಚೊಚ್ಚಲ ಆವೃತ್ತಿಯ ʼಸಿಲ್ವರ್ ಪಿಕಾಕ್​ ಅವಾರ್ಡ್’​​ ತನ್ನದಾಗಿಸಿಕೊಂಡಿದೆ. ರಿಷಬ್‌ ಶೆಟ್ಟಿ ಅವರಿಗೆ ವಿಶೇಷ ಜ್ಯೂರಿ ಅವಾರ್ಡ್ (Special Jury Award) ಲಭಿಸಿದ್ದು, ಅದನ್ನು ಅವರು ಹಿರಿಯ ನಟ ಶಂಕರ್‌ ನಾಗ್‌ (Shankar Nag) ಅವರಿಗೆ ಅರ್ಪಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ರಿಷಬ್‌ ಶೆಟ್ಟಿ ಈ ಪ್ರಶಸ್ತಿಯನ್ನು ಶಂಕರ್‌ ನಾಗ್‌ ಅವರಿಗೆ ಅರ್ಪಿಸಿದ್ದಾರೆ. ʼ54ನೇ ಗೋವಾ ಇಂಟರ್‌ ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾ ಸ್ಪೆಷಲ್‌ ಜ್ಯೂರಿ ಅವಾರ್ಡ್‌ ಹೊರಕಿದ್ದು ಎಂದೂ ಮರೆಯಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ ಎಂದು ರಿಷಬ್‌ ಪತ್ರ ಆರಂಭಿಸಿದ್ದಾರೆ.

1979ರಲ್ಲಿ ನನ್ನ ಸ್ಫೂರ್ತಿಯಾದ ಶಂಕರ್‌ ನಾಗ್‌ ಸರ್‌ ಅವರಿಗೆ ʼಒಂದಾನೊಂದು ಕಾಲದಲ್ಲಿʼ ಚಿತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿದ್ದು, ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್‌ ದೊರೆತಿದ್ದು ಅತ್ಯಂತ ಸಂತಸ ನೀಡಿದೆ ಎಂದು ರಿಷಬ್‌ ಬರೆದಿದ್ದಾರೆ.

ಮುಂದುವರಿದು, ʼಕಾಂತಾರʼವನ್ನು ನೋಡಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು, ಇದೀಗ ʼಕಾಂತಾರ ಅಧ್ಯಾಯ 1ʼಕ್ಕೂ ನೀಡುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಮತ್ತೊಮ್ಮೆ ಉತ್ತಮ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣವಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಅಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್‌ ನಾಗ್‌ ಅವರಿಗೆ ಅರ್ಪಿಸುತ್ತೇನೆʼ ಎಂದು ರಿಷಬ್‌ ಶೆಟ್ಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kantara Movie: ಯೂಟ್ಯೂಬ್​ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?

ಪ್ರಿಕ್ವೆಲ್‌ಗೆ ಮುಹೂರ್ತ

ಸದ್ಯ ರಿಷಬ್‌ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಕೈಗೆತ್ತಿಕೊಂಡಿದ್ದಾರೆ. ಇದು ಕಾಂತಾರ ಚಿತ್ರದ ಪ್ರಿಕ್ವೆಲ್‌. ಅಂದರೆ ʼಕಾಂತಾರʼದ ಕಥೆ ನಡೆಯುವುದಕ್ಕೂ ಮೊದಲು ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಅಧ್ಯಾಯ 1ರಲ್ಲಿ ಹೇಳಲಿದ್ದಾರೆ. ನವೆಂಬರ್‌ 27ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ. ಜತೆಗೆ ಅಂದೇ ಫಸ್ಟ್ ಲುಕ್ ಟೀಸರ್ ರಿಲೀಸ್‌ ಆಗಿ ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆ ಕಂಡಿದೆ. ಏಳು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಟೀಸರ್ 24 ಗಂಟೆಗಳಲ್ಲಿ ಬರೋಬ್ಬರಿ 12 ಮಿಲಿಯನ್ (1.2 ಕೋಟಿ) ಬಾರಿ ವೀಕ್ಷಣೆ ಕಂಡು ಹಲವು ದಾಖಲೆಗಳನ್ನು ಸರಿಗಟ್ಟಿದೆ. ರಿಷಬ್ ಶೆಟ್ಟಿ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿರುವ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಅಲ್ಲದೆ ವಿಶ್ವದ ಅತಿ ದೊಡ್ಡ ಸರ್ಚ್ ಎಂಜಿನ್​ ಗೂಗಲ್​ ಕೂಡ ‘ಕಾಂತಾರ ಚಾಪ್ಟರ್ 1’ರ ಫಸ್ಟ್​ ಲುಕ್ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ʼವಾಹ್​ʼ ಎಂದು ಉದ್ಗಾರ ತೆಗೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

South Cinema

Actress Leelavathi: ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟಿಸಿದ ಡಿಕೆಶಿ, ಆದರೆ ನಟಿ ಪ್ರಜ್ಞಾಶೂನ್ಯ

Actress Leelavathi : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ, ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ, ನೆಲಮಂಗಲ ಶಾಸಕ ಶ್ರೀನಿವಾಸ್ ಜತೆಗಿದ್ದರು.

VISTARANEWS.COM


on

DK Shivakumar Inaugurate of veterinary hospital
ಗೋವುಗಳಿಗೆ ಪೂಜೆ ಮಾಡುವ ಮೂಲಕ ಲೀಲಾವತಿ ಕಟ್ಟಿಸಿದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ‌ ಡಿಸಿಎಂ ಡಿ.ಕೆ. ಶಿವಕುಮಾರ್
Koo

ಬೆಂಗಳೂರು: ಹಿರಿಯ ನಟಿ ಲೀಲಾವತಿ (Actress Leelavathi) ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಸೋಲದೇವನಹಳ್ಳಿಯ ನಿವಾಸಕ್ಕೆ ನಟ ಶಿವರಾಜಕುಮಾರ್‌ ಮತ್ತು ಗೀತಾ ದಂಪತಿ (Shivarajkumar and Geetha) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಮಂಗಳವಾರ (ನ. 28) ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು. ಇದೇ ವೇಳೆ ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಇದು ಲೀಲಾವತಿ ಅವರ ಕನಸಿನ ಆಸ್ಪತ್ರೆಯಾಗಿತ್ತು. ಆದರೆ ತೀವ್ರ ಅನಾರೋಗ್ಯದಿಂದ ಬಹುತೇಕ ಪ್ರಜ್ಞಾಶೂನ್ಯರಾಗಿರುವ ಲೀಲಾವತಿ ಅವರಿಗೆ ಈ ಆಸ್ಪತ್ರೆ ಉದ್ಘಾಟನೆಯ ಅರಿವು ಆಗದೇ ಹೋಗಿರುವುದು ಭಾವುಕ ಸಂಗತಿ.

ಶಿವರಾಜಕುಮಾರ್‌ ಮತ್ತು ಗೀತಾ ದಂಪತಿ ಅವರು ಬಂದು ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ವೇಳೆ ಲೀಲಾವತಿ ಅವರು ಶಿವರಾಜಕುಮಾರ್‌ ಅವರ ಧ್ವನಿಯನ್ನು ಕಂಡು ಹಿಡಿದು ಮಾತನಾಡಿಸಿದ್ದಾರೆ. ಅಲ್ಲದೆ, ಇವರ ಭೇಟಿಯಿಂದ ಖುಷಿ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ವಿನೋದ್ ರಾಜ್ ಅವರಿಗೆ ಶಿವರಾಜಕುಮಾರ್ ಧೈರ್ಯ ತುಂಬಿದ್ದಾರೆ.

Shivarajkumar and DK shivakumar enquire Actress Leelavathi health and Inauguration of veterinary hospital

ಬಳಿಕ ಮಾತನಾಡಿದ ಶಿವರಾಜಕುಮಾರ್‌, ಲೀಲಮ್ಮ ನನ್ನ ವಾಯ್ಸ್ ಅನ್ನು ಕಂಡು ಹಿಡಿದರು. ಈ ವಯಸ್ಸಲ್ಲಿ ತಾಳೋ ಶಕ್ತಿ ಇದೆಯಲ್ಲವಾ? ಅದು ನಿಜಕ್ಕೂ ಗ್ರೇಟ್.‌ ಯುಗಪುರುಷರು ಅಂತಾರೆ. ಲೀಲಾವತಿ ಅವರು ಒಳ್ಳೇ ಮನಸ್ಸು ಇರುವವರು. ಅಂದಿನಿಂದ ನನಗೆ ಅವರ ಮೇಲೆ ಅದೇ ಪ್ರೀತಿ ಇದೆ. ಚಿಕ್ಕ ವಯಸ್ಸಿನಿಂದಲೂ ಅದೇ ಆತ್ಮೀಯತೆ ಇದೆ. ನನಗೂ ವಿನೋದ್ ನೋಡಿದಾಗೆಲ್ಲ ತಾಯಿ ನೋಡಿದ ಹಾಗೆ ಹಾಗುತ್ತದೆ. ದೇವರ ಆಶೀರ್ವಾದ ಇದೆ. ಅವರು ಚೆನ್ನಾಗಿರುತ್ತಾರೆ ಎಂದು ಹೇಳಿದರು.

Shivarajkumar and DK shivakumar enquire Actress Leelavathi health and Inauguration of veterinary hospital

ಆರೋಗ್ಯ ವಿಚಾರಿಸಿದ ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ, ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ, ನೆಲಮಂಗಲ ಶಾಸಕ ಶ್ರೀನಿವಾಸ್ ಜತೆಗಿದ್ದರು.

DK Shivakumar Inaugurate of veterinary hospital

ಲೀಲಾವತಿ ಅವರ ಕನಸಿನ ಕೂಸಾಗಿದ್ದ ಪಶು ಆಸ್ಪತ್ರೆಗೆ ಹಸುವಿನ ಪೂಜೆ ಮಾಡುವ ಮೂಲಕ ಡಿ.ಕೆ.‌ ಶಿವಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ಒಂದು ವಾರದ ಹಿಂದೆ ನಟಿ ಲೀಲಾವತಿ, ವಿನೋದ್ ರಾಜ್ ನಮ್ಮ ಮನೆಗೆ ಬಂದು ಪಶು ಆಸ್ಪತ್ರೆ ಉದ್ಘಾಟನೆಗೆ ಕರೆದಿದ್ದರು. ಈ ಪಶು ಆಸ್ಪತ್ರೆ ಮೂಲಕ ದೊಡ್ಡ ಸಂದೇಶ ನೀಡಿದ್ದಾರೆ. ಅವರು ಅಂತಹ ಶ್ರೀಮಂತರಲ್ಲ. ಅಂಥದ್ದರಲ್ಲಿ ಪ್ರಾಣಿಗಳಿಗೆ ಸಹಾಯ ಮಾಡಲು ಹೊರಟಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

DK Shivakumar Inaugurate of veterinary hospital

ಬೆಂಗಳೂರಿಗೆ ಹತ್ತಿರದ ಸ್ಥಳದಲ್ಲಿ ಪಶು ವೈದ್ಯ ಆಸ್ಪತ್ರೆಯನ್ನು ಕಟ್ಟಿದ್ದಾರೆ. ನಮ್ಮ ಸ್ಥಳೀಯ ಶಾಸಕರೂ ಸಹಕಾರ ನೀಡಿದ್ದಾರೆ. ದೊಡ್ಡವರು ದೊಡ್ಡ ಕೆಲಸ ಮಾಡ್ತಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಉಸಿರಿದ್ದರೂ, ಇಲ್ಲದಿದ್ದರೂ ಹೆಸರು ಶಾಶ್ವತವಾಗಿರಲಿದೆ. ಪವಿತ್ರವಾದ ಕೆಲಸ ಮಾಡಲೇಬೇಕು ಎಂದು ಬಂದಿದ್ದೇನೆ. ಶುಭವಾಗಲಿ ಎಂದು ಹಾರೈಸುವೆ. ಕಲಾವಿದರಿಗೆ ಪಿಂಚಣಿ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಚರ್ಚೆ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: DK Shivakumar : ಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ: ಯತ್ನಾಳ್‌ಗೆ ಸಿದ್ದರಾಮಯ್ಯ ತಿರುಗೇಟು

ವಿನೋದ್ ರಾಜ್ ನಮ್ಮ ಸಹೋದರ ಇದ್ದಹಾಗೆ. ಅವರ ಪರವಾಗಿ ಸರ್ಕಾರ ಇದೆ. ಬರೀ ಡಿ.ಕೆ. ಶಿವಕುಮಾರ್ ಇಲ್ಲಿಗೆ ಬಂದಿಲ್ಲ. ಇಡೀ ಸರ್ಕಾರ ಬಂದಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಈಚೆಗೆ ನಟ ದರ್ಶನ್‌, ಅರ್ಜುನ್ ಸರ್ಜಾ ಅವರು ಭೇಟಿ ನೀಡಿ ನಟಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದರು.

Continue Reading
Advertisement
peace accord between Manipur oldest armed group UNLF and Government
ದೇಶ6 mins ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ21 mins ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ23 mins ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ34 mins ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

life certificate
ಉದ್ಯೋಗ46 mins ago

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

pain
ಆರೋಗ್ಯ57 mins ago

Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

BPO Employee Bangalore Nude Photos
ಕರ್ನಾಟಕ1 hour ago

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

Finger Ring
ಫ್ಯಾಷನ್1 hour ago

Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

siri bbk
ಕಿರುತೆರೆ1 hour ago

BBK SEASON 10: ಸ್ಪರ್ಧಿಗಳ ಕಾಲಿಗೆ ಹಗ್ಗ; ಕಣ್ಣೀರಿಟ್ಟ ಸಿರಿ

Mandya Ramesh
ಕಿರುತೆರೆ2 hours ago

Mandya Ramesh: ಶೂಟಿಂಗ್ ವೇಳೆ ಮಂಡ್ಯ ರಮೇಶ್‌ಗೆ ಗಾಯ; ಆಸ್ಪತ್ರೆಗೆ ದಾಖಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌