South Cinema
Rashmika Mandanna: ಸಹಾಯಕಿಯ ಮೇಲೆ ರಶ್ಮಿಕಾ ಗರಂ; ಸಿಬ್ಬಂದಿ ತಡೆದರೂ ಕೂಲ್ ಆಗಲಿಲ್ಲ ನ್ಯಾಷನಲ್ ಕ್ರಶ್!
Rashmika Mandanna: ವೈರಲ್ ಆಗಿರುವ ವಿಡಿಯೊದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಸಿಬ್ಬಂದಿ ತಡೆದದ್ದು ಕಾಣಬಹುದು. ಇದೀಗ ರಶ್ಮಿಕಾ ಅಭಿಮಾನಿಗಳನ್ನು ಈ ವಿಡಿಯೊ ಗೊಂದಲಕ್ಕೀಡುಮಾಡಿದೆ.
ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮೇಕಪ್ ಮಾಡಲು ಬಂದ ಸಹಾಯಕಿಯ ಮೇಲೆ ನಟಿ ಗರಂ ಆಗಿ, “ಟ್ಯಾಲೆಂಟ್ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಎದ್ದು ಹೋಗಿರುವ ವಿಡಿಯೊ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಸಿಬ್ಬಂದಿ ತಡೆದದ್ದು ಕಾಣಬಹುದು. ಇದೀಗ ರಶ್ಮಿಕಾ ಅಭಿಮಾನಿಗಳನ್ನು ಈ ವಿಡಿಯೊ ಗೊಂದಲಕ್ಕೀಡುಮಾಡಿದೆ. ಈ ಘಟನೆ ನಿಜವಾಗಿಯೂ ನಡೆದಿದೆಯೇ ಅಥವಾ ಸಿನಿಮಾ ಅಥವಾ ಪ್ರಚಾರದ ಭಾಗವೇ ಎಂದು ಚರ್ಚೆಗಳು ಆಗುತ್ತಿವೆ.
ರಶ್ಮಿಕಾ ಮಂದಣ್ಣ ಅವರ ಒಂದು ವಿಡಿಯೊ ವೈರಲ್ ಆಗಿದೆ. ತಮಗೆ ಮೇಕಪ್ ಮಾಡಲು ಬಂದ ಸಹಾಯಕಿಯ ಮೇಲೆ ಅವರು ರೇಗಾಡಿದ್ದಾರೆ. ‘ಏನ್ ನಡೀತಾ ಇದೆ? ಟ್ಯಾಲೆಂಟ್ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಅವರು ಸಿಟ್ಟಾಗಿ ಎದ್ದದು ಹೋಗುತ್ತಾರೆ. ದೃಶ್ಯವನ್ನು ಮೊಬೈಲ್ನಲ್ಲಿ ಶೂಟ್ ಮಾಡಲಾಗುತ್ತಿತ್ತು. ರೆಕಾರ್ಡಿಂಗ್ ನಿಲ್ಲಿಸುವಂತೆ ರಶ್ಮಿಕಾ ಅವರ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಆದರೆ ಇದೆಲ್ಲವೂ ಡ್ರಾಮಾ ಎಂಬುದು ಈಗ ಬಯಲಾಗಿದೆ. ರಶ್ಮಿಕಾ ಮಂದಣ್ಣ ಅವರು ಈ ರೀತಿ ಮಾಡಿದ್ದು ಒಂದು ಖಾಸಗಿ ಕಂಪನಿಯ ಜಾಹೀರಾತಿನ ಸಲುವಾಗಿ. ಕ್ಲಿಪ್ ಪ್ಲೇಯರ್‌ಜರ್‌ಪಾಟ್, ಕ್ಯಾಶುಯಲ್ ಗೇಮ್‌ನ (Playerzrpot, a casual game) ಪ್ರಚಾರದ ಒಂದು ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದೀಗ ನೆಟ್ಟಿಗರು ʻʻಏನು ಡ್ರಾಮʼʼಎಂದು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Rashmika Mandanna: ನಟಿ ಐಶ್ವರ್ಯಾ ರಾಜೇಶ್ ಜತೆಗಿನ ವಿವಾದಕ್ಕೆ ಅಂತ್ಯ ಹಾಡಿದ ರಶ್ಮಿಕಾ ಮಂದಣ್ಣ
ವೈರಲ್ ವಿಡಿಯೊ
Wt happened after this ??? @iamRashmika mam 🥺🥺😁#RashmikaMandanna pic.twitter.com/5DGQO6L0VK
— Rashmika Mandanna BLR Fc (@Rashmikamandan6) May 26, 2023
ಜಾಹಿರಾತುಗಳಿಂದ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ ರಶ್ಮಿಕಾ
ನಟಿ ರಶ್ಮಿಕಾ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಕೆಲವು ಜಾಹೀರಾತುಗಳು ವಿವಾದಕ್ಕೂ ಎಡೆಮಾಡಿ ಕೊಟ್ಟಿವೆ. ವಿಕ್ಕಿ ಕೌಶಲ್ ಜತೆ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ರಶ್ಮಿಕಾ ಸಖತ್ ಟ್ರೋಲ್ ಆಗಿದ್ದರು. ರಶ್ಮಿಕಾ ಜಂಕ್ ಫುಡ್ ಬ್ರ್ಯಾಂಡ್‌ಗಳನ್ನು, ಚಿಕನ್ ಬರ್ಗರ್ ಹೀಗೆ ಹಲವು ಜಾಹಿರಾತುಗಳನ್ನು ನೀಡುತ್ತಲೇ ಇರುತ್ತಾರೆ. ಈ ಮೊದಲು ನಟಿ ತಾನು ಸಸ್ಯಹಾರಿ ಎಂದು ಹೇಳಿಕೊಂಡಿದ್ದರು. ಆದರೆ ಜಾಹಿರಾತಿಗಾಗಿ ನಟಿ ಮಾಂಸವನ್ನು ತಿಂದಿರುವ ಬಗ್ಗೆ ಟ್ರೋಲ್‌ಗೆ ಗುರಿಯಾಗಿದ್ದರು.
ರಶ್ಮಿಕಾ ಕೊನೆಯದಾಗಿ ವಿಜಯ್ ಅಭಿನಯದ ʻವಾರಿಸುʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂದೀಪ್ ರೆಡ್ಡಿ ವಂಗಾ ಅವರ ಹಿಂದಿ ಚಲನಚಿತ್ರ ʻಅನಿಮಲ್ʼ ಸಿನಿಮಾದಲ್ಲೂ ನಟಿಸಿದ್ದಾರೆ. ರಣಬೀರ್ ಕಪೂರ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್ ಬೆಲ್ಲಂಕೊಂಡ ʻಛತ್ರಪತಿʼ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸಿದ್ದಾರೆ ಮತ್ತು ಎಸ್ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಬರಹಗಾರ ವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ. ಛತ್ರಪತಿ ಟ್ರೈಲರ್ ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ನುಶ್ರತ್ ಭರುಚ್ಚ ಕೂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ, ಪುಷ್ಪ 2, ಅನಿಮಲ್, ʻರೈನ್ಬೋʼ , ನಿತಿನ್ ಜತೆಗಿನ ಹೊಸ ಸಿನಿಮಾ, ವಿಕ್ಕಿ ಕೌಶಲ್ ಜತೆ ‘ಛವಾ’ ಸಿನಿಮಾಗಳಿವೆ.
South Cinema
Kiccha Sudeep: ಅಭಿಷೇಕ್ ಅಂಬರೀಷ್ಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!
Kiccha Sudeep: ಕರ್ಕಾಟಕ ಲಗ್ನದಲ್ಲಿ (9:30-10:30)ಜೋಡಿ ಹಸೆಮಣೆ ಏರಿತು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು
ಬೆಂಗಳೂರು; ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Abhishek Ambareesh Wedding) ) ಹಾಗೂ ಅವಿವ ಬಿಡಪ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿಚ್ಚ ಸುದೀಪ್ (Kiccha Sudeep) ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಸುದೀಪ್ ಅವರ ಆಗಮನದಿಂದ ಮದುವೆಯ ಕಳೆ ಹೆಚ್ಚಿತ್ತು. ಮಂಟಪದಲ್ಲಿ ಅಕ್ಷತೆ ಹಾಕಿ ನವ ಜೋಡಿಗೆ ಶುಭಕೋರಿದ ಸುದೀಪ್ ದಂಪತಿ, ಅಭಿಷೇಕ್-ಅವಿವಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿನ್ನದ ಸರವನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ.
ಕರ್ಕಾಟಕ ಲಗ್ನದಲ್ಲಿ (9:30-10:30)ಜೋಡಿ ಹಸೆಮಣೆ ಏರಿತು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿಷೇಕ್ ಮದುವೆಗೆ ಸುದೀಪ್ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಟ್ಟರು. ಸುದೀಪ್ ಜತೆ ಪತ್ನಿ ಪ್ರಿಯಾ ಸುದೀಪ್ ಹಾಗೂ ಸಾನ್ವಿ ಸುದೀಪ್ ಕೂಡ ಆಗಮಿಸಿ ಅಭಿ-ಅವಿವಾಗೆ ಶುಭಕೋರಿದರು. ಮಂಟಪದಲ್ಲಿ ಅಕ್ಷತೆ ಹಾಕಿ ನವ ಜೋಡಿಗೆ ಶುಭಕೋರಿದ ಸುದೀಪ್ ದಂಪತಿ, ಅಭಿಷೇಕ್-ಅವಿವಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿನ್ನದ ಸರವನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: Kiccha Sudeep: ಕನ್ನಡಿಗರ ಹೃದಯ ಗೆದ್ದ ʻ2018ʼ ಚಿತ್ರ; ಮಲಯಾಳಂ ಸಿನಿಮಾಗೆ ಕಿಚ್ಚ ಸುದೀಪ್ ಫುಲ್ ಫಿದಾ
ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
South Cinema
Actor Yash: ಅಭಿಷೇಕ್ ದಂಪತಿಗೆ ವಿಶ್ ಮಾಡಿದ ಯಶ್ -ರಾಧಿಕಾ; ಸೈಲಿಶ್ ಆಗಿ ಕಂಡ ರಾಕಿ ಭಾಯ್!
Actor Yash : ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು
South Cinema
Abhishek Ambareesh Wedding: ಅಭಿಷೇಕ್ ಅಂಬರೀಶ್- ಅವಿವ ಜೋಡಿಗೆ ಆಶೀರ್ವದಿಸಿದ ರಜನಿಕಾಂತ್!
Abhishek Ambareesh Wedding: ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಭಿಷೇಕ್ ಅಂಬರೀಶ್ ಹಾಗೂ ಅವಿವ ಮದುವೆಗೆ ಹಾಜರಿದ್ದರು. ಸೆಲೆಬ್ರಿಟಿಗಳ ದಂಡು ಈ ಮದುವೆಗೆ ಹಾಜರಿ ಹಾಕಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಭಿಷೇಕ್ ಅಂಬರೀಶ್ (Abhishek Ambareesh Wedding) ಹಾಗೂ ಅವಿವ ಮದುವೆಗೆ ಹಾಜರಿದ್ದರು. ಸೆಲೆಬ್ರಿಟಿಗಳ ದಂಡು ಈ ಮದುವೆಗೆ ಹಾಜರಿ ಹಾಕಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು.
ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ.
South Cinema
Kannada New Movie: ಮೊದಲ ಬಾರಿಗೆ ಗುಜರಾತಿ ಸಿನಿಮಾ ಕನ್ನಡದಲ್ಲಿ!
Kannada New Movie: ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದನ್ನು ಕನ್ನಡದಲ್ಲಿಯೂ ರಿಲೀಸ್ ಮಾಡುವ ಪ್ರಯತ್ನಕ್ಕೆ ಕೈ ಹಾಕಿರೋದು ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿದ್ದ ಜಾಕ್ ಮಂಜು.
ಬೆಂಗಳೂರು: ‘ರಾಯರು ಬಂದರು ಮಾವನ ಮನೆಗೆ’..ಇದು ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು. ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ಮೈಸೂರು ಮಲ್ಲಿಗೆ ಸಿನಿಮಾದ ಅತ್ಯುತ್ತಮ ಗೀತೆ. ಇದೇ ರಾಯರು ಬಂದರು ಮಾವನ ಮನೆಗೆ ಎಂಬ ಶೀರ್ಷಿಕೆಯಡಿ (Kannada New Movie) ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ವಿಶೇಷ ಏನಂದರೆ ಇದು ಗುಜರಾತಿ ಸಿನಿಮಾ.
`ವರ ಪಧಾರವೋ ಸಾವಧಾನ; ಎಂಬ ಟೈಟಲ್ ನಡಿ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡದಲ್ಲಿಯೂ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದನ್ನು ಕನ್ನಡದಲ್ಲಿಯೂ ರಿಲೀಸ್ ಮಾಡುವ ಪ್ರಯತ್ನಕ್ಕೆ ಕೈ ಹಾಕಿರೋದು ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿದ್ದ ಜಾಕ್ ಮಂಜು. ಸುದೀಪ್ ಆಪ್ತರಾಗಿರುವ ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಕನ್ನಡ ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ.
ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದೆ. ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧುತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: Kannada New Movie: ‘ಹಿರಣ್ಯ’ನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ
ಜುಲೈ 7ಕ್ಕೆ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ನಿಟ್ಟಿಯಲ್ಲಿ ಇಡೀ ಚಿತ್ರತಂಡ ಬೆಂಗಳೂರಿನಲ್ಲಿಯೂ ಪ್ರಚಾರ ಕಾರ್ಯ ನಡೆಸಲಿದೆ. ಇದೇ 9ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಇಡೀ ತಂಡ ಭಾಗಿಯಾಗಲಿದೆ. ಅಂದಹಾಗೇ ರಾಯರು ಬಂದರು ಮಾವನ ಮನೆಗೆ ಸಿನಿಮಾ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ. ಕುಟುಂಬ, ಸಂಬಂಧಗಳ ಸುತ್ತಾ ಇಡೀ ಸಿನಿಮಾ ಸಾಗಲಿದೆ.
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ7 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ