Sandalwood Update: 'ಝೀಬ್ರಾ' ಕಂಪ್ಲೀಟ್‌; ಶೀಘ್ರದಲ್ಲೇ ತೆರೆಗೆ ಬರಲಿದೆ ಡಾಲಿ-ಸತ್ಯದೇವ್ ಚಿತ್ರ - Vistara News

South Cinema

Sandalwood Update: ‘ಝೀಬ್ರಾ’ ಕಂಪ್ಲೀಟ್‌; ಶೀಘ್ರದಲ್ಲೇ ತೆರೆಗೆ ಬರಲಿದೆ ಡಾಲಿ-ಸತ್ಯದೇವ್ ಚಿತ್ರ

Sandalwood Update: ಡಾಲಿ ಧನಂಜಯ್ ಹಾಗೂ ಸತ್ಯದೇವ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಝೀಬ್ರಾ’ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರ ತೆರೆಗೆ ಬರಲಿದೆ.

VISTARANEWS.COM


on

zeebra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಡಾಲಿ ಧನಂಜಯ್ (Dhananjaya) ಹಾಗೂ ಸತ್ಯದೇವ್ (Satyadev) ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ (Pan India movie) ‘ಝೀಬ್ರಾ’ (Zebra). ಆರಂಭ ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ (Sandalwood Update).

26ನೇ ಸಿನಿಮಾ

ʼಝೀಬ್ರಾʼ ಮಾಸ್ ಎಂಟರ್‌ಟೇನರ್ ಚಿತ್ರವಾಗಿದ್ದು, ಡಾಲಿ ಜತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸತ್ಯದೇವ್ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇಬ್ಬರದ್ದೂ 26ನೇ ಸಿನಿಮಾ ಇದು ಎಂಬುದು ವಿಶೇಷ.

ʼಝೀಬ್ರಾʼ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌ , ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ʼಝೀಬ್ರಾʼ ಚಿತ್ರಕ್ಕೆ ʼಕೆಜಿಎಫ್ʼ​ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

Kannada New Movie: ‘ಅನಾವರಣ’ ಟ್ರೈಲರ್‌ ಔಟ್‌; ಕಿಚ್ಚ ಸುದೀಪ್ ಬೆಂಬಲ!

ಸದ್ಯ ಧನಂಜಯ್‌ ʼಉತ್ತರಕಾಂಡʼ, ʼಪುಷ್ಪ 2: ದಿ ರೂಲ್‌ʼ, ʼಅಣ್ಣ ಫ್ರಮ್‌ ಮೆಕ್ಸಿಕೊʼ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹು ದಿನಗಳ ಬಳಿಕ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಈ ಚಿತ್ರದ ಮೂಲಕ ತೆರೆಗೆ ಮರಳಿ ಬರುತ್ತಿದ್ದು, ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಧನಂಜಯ್‌ ಜತೆ ʼರತ್ನನ್‌ ಪ್ರಪಂಚʼ ಚಿತ್ರ ಮಾಡಿದ್ದ ರೋಹಿತ್‌ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ತೆಲುಗಿನ ʼಪುಷ್ಪʼ ಚಿತ್ರದ ಎರಡನೇ ಭಾಗದಲ್ಲಿಯೂ ಧನಂಜಯ್‌ ನಟಿಸುತ್ತಿದ್ದಾರೆ. ದೇಶಿಯ ಮಟ್ಟದಲ್ಲಿ ಈ ಚಿತ್ರ ಕುತೂಹಲ ಮೂಡಿಸಿದೆ.

ತಮಿಳು, ತೆಲುಗು ಚಿತ್ರಗಳ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿರುವ ಪ್ರಿಯಾ ಭವಾನಿ ಶಂಕರ್‌ ಪ್ರಸ್ತುತ ʼಡೆಮೊಂಟೆ ಕಾಲನಿ 2ʼ, ʼಇಂಡಿಯನ್‌ 2ʼ, ʼಭೀಮಾʼ, ಟೈಟಲ್‌ ಅಂತಿಮವಾಗದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೈಕಿ ಕಮಲ್‌ ಹಾಸನ್‌ ನಟನೆಯ ʼಇಂಡಿಯನ್‌ 2ʼ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಎಸ್.ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳು, ತೆಲುಗು, ಹಿಂದಿ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದಿರುವ ಸತ್ಯದೇವ್‌ ಮತ್ತೊಮ್ಮೆ ಕನ್ನಡದತ್ತ ಮುಖ ಮಾಡಿದ್ದಾರೆ. 2017ರಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡಿದ್ದ ʼರೋಗ್‌ʼ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಸದ್ಯ ಅವರು ʼಕೃಷ್ಣಮ್ಮʼ, ʼಫುಲ್‌ ಬಾಟಲ್‌ʼ, ʼಗರುಡ: ಚಾಪ್ಟರ್‌ 1ʼ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ʼಝೀಬ್ರಾʼ ಚಿತ್ರದ ಮೇಲೆ ಈ ಮೂವರ ಗಮನ ನೆಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Yuva Rajkumar: ಸತ್ಯವಾಗಿಯೂ ʻಯುವʼ ಡಿವೋರ್ಸ್‌ ವಿಚಾರ ನಮಗೆ ಗೊತ್ತಿಲ್ಲ ಎಂದ ಶಿವಣ್ಣ!

Yuva Rajkumar: ಸದ್ಯ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇತ್ತು ಎಂದು ಮೂಲ ತಿಳಿಸಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇದ್ದರೂ, ಪುನೀತ್‌ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. 2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು.

VISTARANEWS.COM


on

Yuva Rajkumar divorce reaction by shiva Rajkumar
Koo

ಶಿವಮೊಗ್ಗ: ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದ ಬೆನ್ನಲ್ಲೇ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಜೋಡಿ ಡಿವೋರ್ಸ್ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದೆ. ರಾಜ್​ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ (Yuva Rajkumar) ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಇದೀಗ ನಟ ಶಿವರಾಜ್‌ಕುಮಾರ್‌ ಈ ವಿಷಯದ ಬಗ್ಗೆ ʻʻಸತ್ಯವಾಗಿಯೂ ನನಗೆ ಈ ಬಗ್ಗೆ ಗೊತ್ತಿಲ್ಲ. ಅದು ಅವರ ಬದುಕು, ಪೂರ್ತಿ ವಿಚಾರ ಏನು ಎಂದು ಗೊತ್ತಾದ ಮೇಲೆ ಮಾತನಾಡುತ್ತೇವೆʼʼಎಂದಿದ್ದಾರೆ.

ಶಿವಣ್ಣ ಮಾತನಾಡಿ ʻಯುವ ಡಿವೋರ್ಸ್‌ ಕುರಿತಾಗಿ ನಮಗೆ ಗೊತ್ತಿಲ್ಲ, ಸತ್ಯವಾಗಿಯೂ ಗೊತ್ತಿಲ್ಲ. ಬೇಸರ ಇದೆ, ಗೊತ್ತಿದ್ದು ಮಾತಾನಾಡಬೇಕು. ನೀವು ಹೇಳಿದ ಮೇಲೆ ಈ ವಿಚಾರ ಗೊತ್ತಾಗಿದ್ದು. ಗೊತ್ತಿಲ್ಲದೇ ಏನೂ ಮಾತಾನಾಡಬಾರದು. ಅದು ಅವರ ಬದುಕು. ಮನೆಗೆ ಹೋಗಿ ಈ ಬಗ್ಗೆ ಯುವ ಜತೆ ಮಾತನಾಡುತ್ತೇವೆʼʼಎಂದು ಹೇಳಿಕೆ ನೀಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಮಾತನಾಡಿ ʻʻಇದು ನಮ್ಮ ಮನೆಯ ವಿಚಾರ. ಇಲ್ಲಿವರೆಗೂ ಅದರ ಬಗ್ಗೆ ಗೊತ್ತಿಲ್ಲ ಅದರ ಬಗ್ಗೆ ವಿಚಾರ ಮಾಡುತ್ತೇವೆ. ಈ ವಿಚಾರದಲ್ಲಿ ನಾವು ಇಬ್ಬರು ಮಾತಾನಾಡಬಾರದುʼʼಎಂದರು.

ಇದನ್ನೂ ಓದಿ: Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

ಸದ್ಯ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇತ್ತು ಎಂದು ಮೂಲ ತಿಳಿಸಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇದ್ದರೂ, ಪುನೀತ್‌ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. 2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್‌ ಪುನೀತ್‌ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿದ್ದರು ಶ್ರೀದೇವಿ ಭೈರಪ್ಪ.

ವರ್ಷದಿಂದ ದಂಪತಿ ದೂರವೇ ಇದ್ದರು

ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ. ಯುವ ಡಿವೋರ್ಸ್ ನೋಟಿಸ್​ಗೆ ಶ್ರೀದೇವಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ʻಯುವ ವಿಚ್ಚೇದನಕ್ಕೆ ಅರ್ಜಿ ಹಾಕಿರೋದು ನಿಜ. ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಸದ್ಯಕ್ಕೆ ಶ್ರೀದೇವಿ ಅಮೆರಿಕಾದಲ್ಲಿದ್ದಾರೆʼʼಎಂದು ರಾಜ್ ಕುಟುಂಬದ ಆಪ್ತ ಮೂಲ ಮಾಹಿತಿ ನೀಡಿದೆ.

ಮಾನಸಿಕವಾಗಿ ಟಾರ್ಚರ್

ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ ಯುವ. 2019 ಮೇ 26ರಂದು ಅದ್ಧೂರಿಯಾಗಿ ಯುವ ಕಲ್ಯಾಣೋತ್ಸವ ನಡೆದಿತ್ತು. ತೆಲುಗು, ತಮಿಳು ಸಿನಿಮಾ ತಾರೆಯರು ಭಾಗಿ ಆಗಿ ಶುಭ ಕೋರಿದ್ದರು. ಸದ್ಯ ಯುವ ಡಿವೋರ್ಸ್ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳು ಶಾಕ್ ಆಗಿದ್ದಾರೆ.

ʻಯುವʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ (Yuva Rajkumar) ಎಂಟ್ರಿ ಕೊಟ್ಟಿದ್ದರು. ವರನಟ ಡಾ. ರಾಜ್‌ ಕುಮಾರ್‌ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗದಲ್ಲಿ ಮಿಂಚಿದ್ದರು. ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ʼಯುವʼ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್​ರಾಮ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಯುವ ರಾಜ್​ಕುಮಾರ್ ಜತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಮೊದಲಾದವರು ನಟಿಸಿದ್ದರು. . ಎಲೆಕ್ಷನ್ ಅಬ್ಬರದ ಮಧ್ಯೆಯೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿತ್ತು. ಸದ್ಯ ʼಯುವʼ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ..

Continue Reading

ಸ್ಯಾಂಡಲ್ ವುಡ್

Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

Yuva Rajkumar: ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ. ಯುವ ಡಿವೋರ್ಸ್ ನೋಟಿಸ್​ಗೆ ಶ್ರೀದೇವಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ʻಯುವ ವಿಚ್ಚೇದನಕ್ಕೆ ಅರ್ಜಿ ಹಾಕಿರೋದು ನಿಜ. ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಸದ್ಯಕ್ಕೆ ಶ್ರೀದೇವಿ ಅಮೆರಿಕಾದಲ್ಲಿದ್ದಾರೆʼʼಎಂದು ರಾಜ್ ಕುಟುಂಬದ ಆಪ್ತ ಮೂಲ ಮಾಹಿತಿ ನೀಡಿದೆ.

VISTARANEWS.COM


on

Yuva Rajkumar Allegation of cruelty against wife
Koo

ಬೆಂಗಳೂರು: ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದ ಬೆನ್ನಲ್ಲೇ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಜೋಡಿ ಡಿವೋರ್ಸ್ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದೆ. ರಾಜ್​ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ (Yuva Rajkumar) ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಸಮನ್ಸ್ ಜಾರಿ ಮಾಡಿ ಜುಲೈ 4ಕ್ಕೆ ಪ್ರಕರಣ ಮುಂದೂಡಲಾಗಿದೆ. ಸದ್ಯ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇತ್ತು ಎಂದು ಮೂಲ ತಿಳಿಸಿದೆ.

ಪುನೀತ್‌ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು

ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇದ್ದರೂ, ಪುನೀತ್‌ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. 2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್‌ ಪುನೀತ್‌ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿದ್ದರು ಶ್ರೀದೇವಿ ಭೈರಪ್ಪ.

ಇದನ್ನೂ ಓದಿ: Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

ವರ್ಷದಿಂದ ದಂಪತಿ ದೂರವೇ ಇದ್ದರು

ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ. ಯುವ ಡಿವೋರ್ಸ್ ನೋಟಿಸ್​ಗೆ ಶ್ರೀದೇವಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ʻಯುವ ವಿಚ್ಚೇದನಕ್ಕೆ ಅರ್ಜಿ ಹಾಕಿರೋದು ನಿಜ. ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಸದ್ಯಕ್ಕೆ ಶ್ರೀದೇವಿ ಅಮೆರಿಕಾದಲ್ಲಿದ್ದಾರೆʼʼಎಂದು ರಾಜ್ ಕುಟುಂಬದ ಆಪ್ತ ಮೂಲ ಮಾಹಿತಿ ನೀಡಿದೆ.

ಮಾನಸಿಕವಾಗಿ ಟಾರ್ಚರ್

ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ ಯುವ. 2019 ಮೇ 26ರಂದು ಅದ್ಧೂರಿಯಾಗಿ ಯುವ ಕಲ್ಯಾಣೋತ್ಸವ ನಡೆದಿತ್ತು. ತೆಲುಗು, ತಮಿಳು ಸಿನಿಮಾ ತಾರೆಯರು ಭಾಗಿ ಆಗಿ ಶುಭ ಕೋರಿದ್ದರು. ಸದ್ಯ ಯುವ ಡಿವೋರ್ಸ್ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳು ಶಾಕ್ ಆಗಿದ್ದಾರೆ.

ʻಯುವʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ (Yuva Rajkumar) ಎಂಟ್ರಿ ಕೊಟ್ಟಿದ್ದರು. ವರನಟ ಡಾ. ರಾಜ್‌ ಕುಮಾರ್‌ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗದಲ್ಲಿ ಮಿಂಚಿದ್ದರು. ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ʼಯುವʼ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್​ರಾಮ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಯುವ ರಾಜ್​ಕುಮಾರ್ ಜತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಮೊದಲಾದವರು ನಟಿಸಿದ್ದರು. . ಎಲೆಕ್ಷನ್ ಅಬ್ಬರದ ಮಧ್ಯೆಯೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿತ್ತು. ಸದ್ಯ ʼಯುವʼ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ..

Continue Reading

ಸ್ಯಾಂಡಲ್ ವುಡ್

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Yuva Rajkumar: ಯುವ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್‌ ಕೊಟ್ಟಿದ್ದಾರೆ.

VISTARANEWS.COM


on

Yuva Rajkumar son of raghavendra Rajkumar yuva divorce
Koo

ಬೆಂಗಳೂರು: ವರನಟ ಡಾ. ರಾಜ್‌ ಕುಮಾರ್‌ (Yuva Rajkumar) ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್‌ ಭಾರತೀಯ ವಿವಾಹ ಕಾಯ್ದೆ 13(1)ಅಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್​ 6ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಹೆಂಡತಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎದುರಿಸುತ್ತಿದ್ದೆ ಎಂದು ಯುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಯುವ ಕೇಸ್ ಕೂಡ ದಾಖಲು ಮಾಡಿದ್ದಾರೆ.

ಯುವರಾಜ್​ ಕುಮಾರ್​ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್‌ ಕೊಟ್ಟಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿ ಶ್ರೀದೇವಿ ನೆಲೆಸಿದ್ದಾರೆ. ಶಾಂತಿನಗರ ಫ್ಯಾಮಿಲಿ ಕೋರ್ಟ್‌ನಲ್ಲಿ ಇದೇ ತಿಂಗಳು 6ನೇ ತಾರೀಕು ವಿಚ್ಛೇದನ ಅರ್ಜಿ ಸಲ್ಲಿಸಿದ್ದರು ಯುವರಾಜ್.

ಇದನ್ನೂ ಓದಿ: Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು.ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್‌ ಪುನೀತ್‌ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಇನ್ನೂ ಅಚ್ಚರಿ ಅಂದರೆ ನಿವೇದಿತಾ ಹಾಗೂ ಚಂದನ್‌ ಕೂಡ ಇದೇ ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೊಂದು ಜೋಡಿ ಕೂಡ ವೈವಾಹಿಕ ಜೀವನಕ್ಕೆ ಫುಲ್‌ಸ್ಟಾಪ್‌ ಇಡಲು ಮುಂದಾಗಿದೆ.

ʻಯುವʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ (Yuva Rajkumar) ಎಂಟ್ರಿ ಕೊಟ್ಟಿದ್ದರು. ವರನಟ ಡಾ. ರಾಜ್‌ ಕುಮಾರ್‌ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗದಲ್ಲಿ ಮಿಂಚಿದ್ದರು. ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ʼಯುವʼ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್​ರಾಮ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಯುವ ರಾಜ್​ಕುಮಾರ್ ಜತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಮೊದಲಾದವರು ನಟಿಸಿದ್ದರು. . ಎಲೆಕ್ಷನ್ ಅಬ್ಬರದ ಮಧ್ಯೆಯೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿತ್ತು. ಸದ್ಯ ʼಯುವʼ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Continue Reading

ಟಾಲಿವುಡ್

Nandamuri Balakrishna: ಇಂದು ತೆಲುಗು ಸೂಪರ್‌ಸ್ಟಾರ್ ಬಾಲಯ್ಯ ಬರ್ತ್‌ಡೇ; ಹೊಸ ಸಿನಿಮಾ ಅನೌನ್ಸ್‌!

Nandamuri Balakrishna: ನಂದಮೂರಿ ಬಾಲಕೃಷ್ಣ ಅವರ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದು ಒಂದಾಗಲಿದೆ ಎಂದು ಹೇಳಲಾಗಿದೆ. ಬಾಲಕೃಷ್ಣ ಅವರು ‘ಭಗವಂತ ಕೇಸರಿ’ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಸಹ-ನಟಿಯಾಗಿ ನಟಿಸಿದ್ದರು.ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತಾ ಅವರು 14 ರೀಲ್ಸ್ ಪ್ಲಸ್‌ ಬ್ಯಾನರ್‌ ಅಡಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

VISTARANEWS.COM


on

Nandamuri Balakrishna BB4 new film announced
Koo

ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಇಂದು ಜನುಮದಿನದ ಸಂಭ್ರಮ. ಹೀಗಾಗಿ ಅನೇಕ ಸಿನಿ ಗಣ್ಯರು ಸೇರಿದಂತೆ ಅವರ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ಇದೀಗ ಬೊಯಾಪಾಟಿ ಶ್ರೀನು ಅವರ ನಾಲ್ಕನೇ ಚಿತ್ರಕ್ಕಾಗಿ ಮತ್ತೆ ನಂದಮೂರಿ ಬಾಲಕೃಷ್ಣ ಒಂದಾಗಿದ್ದಾರೆ. 64ನೇ ವಸಂತಕ್ಕೆ ಕಾಲಿಟ್ಟ ಬಾಲಯ್ಯ ಇದೀಗ ‘BB4’ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. BB4ಎಂದು ತಾತ್ಕಲಿಕವಾಗಿ ಶಿರ್ಷಿಕೆ ಇಡಲಾಗಿದೆ.

‘ಸಿಂಹ’, ‘ಲೆಜೆಂಡ್’ ಮತ್ತು ‘ಅಖಂಡ’ ನಂತರ ನಾಲ್ಕನೇ ಬಾರಿಗೆ ಬಾಲಕೃಷ್ಣ ಮತ್ತು ಬೊಯಾಪಾಟಿ ಶ್ರೀನು ಕೈ ಜೋಡಿಸಿದ್ದಾರೆ. ʻʻ’ಗಾಡ್ ಆಫ್ ಮಾಸಸ್’ ನಂದಮೂರಿ ಬಾಲಕೃಷ್ಣ ಮತ್ತು ಬೊಯಾಪಾಟಿ ಶ್ರೀನು BB4ಗಾಗಿ ಮತ್ತೆ ಒಂದಾಗುತ್ತಾರೆ. ಜನ್ಮದಿನದ ಶುಭಾಶಯಗಳು, ಬಾಲಯ್ಯ ಬಾಬುʼʼಎಂದು ಪೋಸ್ಟರ್‌ ಹಂಚಿಕೊಂಡಿದೆ. ನಂದಮೂರಿ ಬಾಲಕೃಷ್ಣ ಅವರ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದು ಒಂದಾಗಲಿದೆ ಎಂದು ಹೇಳಲಾಗಿದೆ. ಬಾಲಕೃಷ್ಣ ಅವರು ‘ಭಗವಂತ ಕೇಸರಿ’ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಸಹ-ನಟಿಯಾಗಿ ನಟಿಸಿದ್ದರು.

ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತಾ ಅವರು 14 ರೀಲ್ಸ್ ಪ್ಲಸ್‌ ಬ್ಯಾನರ್‌ ಅಡಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದರು. ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಿದ್ದಾರೆ. ತಂದೆ ಎನ್‌ಟಿಆರ್ ಹಾದಿಯಲ್ಲೇ ನಟ ಬಾಲಯ್ಯ ಚಿತ್ರರಂಗಕ್ಕೆ ಬಂದರು. ತಂದೆ ರಾಜಕೀಯರಂಗ ಪ್ರವೇಶಿಸಿ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಬಾಲಯ್ಯ- ಚಂದ್ರಬಾಬು ಬೀಗರು ಸಹ ಆಗಿದ್ದಾರೆ. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Continue Reading
Advertisement
Noor Malabika Das
ಸಿನಿಮಾ5 mins ago

Noor Malabika Das: ಕಾಜೋಲ್‌ ಜತೆ ನಟಿಸಿದ್ದ, ದಿ ಟ್ರಯಲ್‌ ಖ್ಯಾತಿಯ ಬಾಲಿವುಡ್‌ ನಟಿ ದಾಸ್‌ ಆತ್ಮಹತ್ಯೆ

Yuva Rajkumar divorce reaction by shiva Rajkumar
ಸ್ಯಾಂಡಲ್ ವುಡ್14 mins ago

Yuva Rajkumar: ಸತ್ಯವಾಗಿಯೂ ʻಯುವʼ ಡಿವೋರ್ಸ್‌ ವಿಚಾರ ನಮಗೆ ಗೊತ್ತಿಲ್ಲ ಎಂದ ಶಿವಣ್ಣ!

Self Harming
ರಾಯಚೂರು19 mins ago

Self Harming : ಮಾನಸಿಕ ಖಿನ್ನತೆ; ಮಗಳ ಜತೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

Narendra Modi 3.20
ಪ್ರಮುಖ ಸುದ್ದಿ1 hour ago

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Election Results 2024
ಕರ್ನಾಟಕ1 hour ago

Election Results 2024: ಟಾರ್ಗೆಟ್ 20 ರೀಚ್ ಆಗಲು ವಿಫಲ; ಎಐಸಿಸಿಯಿಂದ ಪರಾಮರ್ಶೆ ಸಮಿತಿ, ಸಚಿವರ ಮೇಲೆ ತೂಗುಗತ್ತಿ!

Yuva Rajkumar Allegation of cruelty against wife
ಸ್ಯಾಂಡಲ್ ವುಡ್1 hour ago

Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

UGCET 2024
ಬೆಂಗಳೂರು1 hour ago

UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

Reasi Terror Attack
ಪ್ರಮುಖ ಸುದ್ದಿ1 hour ago

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

murder case
ಮೈಸೂರು2 hours ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ2 hours ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌